Tag: ಸಂಜೀವ್‌ ಗೋಯೆಂಕಾ

  • IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಿಷಬ್‌ ನೂತನ ಸಾರಥಿ

    IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಿಷಬ್‌ ನೂತನ ಸಾರಥಿ

    ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌-2025ರ ಆವೃತ್ತಿಗಾಗಿ ಟೀಂ ಇಂಡಿಯಾ ಆಟಗಾರ ರಿಷಬ್‌ ಪಂತ್‌ (Rishabh Pant) ಅವರನ್ನು ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.

    ಕೆ.ಎಲ್‌ ರಾಹುಲ್‌ (KL Rahul) ಅವರನ್ನು ತಂಡದಿಂದ ಕೈಬಿಟ್ಟ ಬಳಿಕ ವಿಂಡೀಸ್‌ನ ಸ್ಫೋಟಕ ಆಟಗಾರ ನಿಕೋಲಸ್‌ ಪೂರನ್‌ ಅವರಿಗೆ ನಾಯಕತ್ವದ ಹೊಣೆ ನೀಡಲಾಗುತ್ತದೆ ಎಂಬ ವದಂತಿ ಹರಿದಾಡಿತ್ತು. ಆದ್ರೆ ವದಂತಿಗಳಿಗೆ ಬ್ರೇಕ್‌ ಹಾಕಿರುವ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ಅವರು, ರಿಷಬ್‌ ಅವರಿಗೆ ನಾಯಕತ್ವದ ಹೊಣೆ ನೀಡಿದ್ದಾರೆ. ರಿಷಬ್‌ಗೆ ಜೆರ್ಸಿ ವಿತರಿಸಿದ ಫೋಟೋದೊಂದಿಗೆ ಮಾಹಿತಿಯನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯ್‌ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ

    ಇತಿಹಾಸದಲ್ಲೇ ದಾಖಲೆ ಬೆಲೆಗೆ ಹರಾಜು:
    2025ರ ಐಪಿಎಲ್‌ (IPL 2025) ಆವೃತ್ತಿಗೆ ನಡೆದ ಮೆಗಾ ಹರಾಜಿನಲ್ಲಿ ರಿಷಬ್‌ ಪಂತ್‌, ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಬೆಲೆಗೆ ಹರಾಜಾದರು. 20.50 ಕೋಟಿ ರೂ.ವರೆಗೆ ಲಕ್ನೋ ತಂಡ ಬಿಡ್‌ ಮಾಡಿತ್ತು. ಈ ವೇಳೆ ಡೆಲ್ಲಿ ತಂಡ ಆರ್‌ಟಿಎಂ ಆಯ್ಕೆಗೆ ಮುಂದಾಯಿತು. ಪಂತ್‌ ಬಿಟ್ಟುಕೊಡದಿರಲು ಪಟ್ಟು ಹಿಡಿದ ಸಂಜೀವ್‌ ಗೋಯೆಂಕಾ ಏಕಾಏಕಿ 27 ಕೋಟಿ ರೂ.ಗಳಿಗೆ ಬೆಲೆ ಏರಿಸಿದರು. ದುಬಾರಿ ಬೆಲೆಗೆ ಪಂತ್‌ರನ್ನ ಖರೀದಿಸಲು ಡೆಲ್ಲಿ ಫ್ರಾಂಚೈಸಿ ಹಿಂದೆ ಸರಿಯಿತು. ಹಾಗಾಗಿ ಪಂತ್‌ 27 ಕೋಟಿ ರೂ.ಗಳಿಗೆ ಲಕ್ನೋ ತಂಡದ ಪಾಲಾದರು.

    ಅತಿಹೆಚ್ಚು ರನ್‌ ಗಳಿಸಿದ 22ನೇ ಆಟಗಾರ:
    ಐಪಿಎಲ್‌ ವೃತ್ತಿ ಜೀವನದಲ್ಲಿ ಈವರೆಗೆ 111 ಪಂದ್ಯಗಳನ್ನಾಡಿರುವ ರಿಷಬ್‌‌ ಪಂತ್‌ 3,248 ರನ್‌ ಗಳಿಸಿದ್ದಾರೆ. ಇದರಲ್ಲಿ 18 ಅರ್ಧಶತಕ ಹಾಗೂ 1 ಶತಕವೂ ಸೇರಿದೆ. ಈ ಮೂಲಕ ಅತಿಹೆಚ್ಚು ರನ್‌ ಗಳಿಸಿದ 22ನೇ ಆಟಗಾರನಾಗಿದ್ದಾರೆ. ಇದನ್ನೂ ಓದಿ: Kho Kho World Cup | ಭಾರತಕ್ಕೆ ಡಬಲ್‌ ಧಮಾಕ – ಮಹಿಳೆಯರು, ಪುರುಷರ ತಂಡಕ್ಕೆ ಖೋ ಖೋ ವಿಶ್ವಕಪ್‌ ಕಿರೀಟ

    2022ರಲ್ಲಿ ಐಪಿಎಲ್‌ಗೆ ಫ್ರಾಂಚೈಸಿ ಪದಾರ್ಪಣೆ:
    ಇನ್ನೂ 2022ರ ಆವೃತ್ತಿಯಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ಫ್ರಾಂಚೈಸಿ ಆರಂಭದ 2 ಆವೃತ್ತಿಗಳಲ್ಲಿ (2022, 2023) ಕೆ.ಎಲ್‌ ರಾಹುಲ್‌ ನಾಯಕತ್ವದಲ್ಲಿ ಪ್ಲೇ ಆಫ್‌ ಪ್ರವೇಶಿಸಿತ್ತು. 2024ರ ಆವೃತ್ತಿಯಲ್ಲಿ ಲೀಗ್‌ ಸುತ್ತಿನಲ್ಲೇ ಲಕ್ನೊ ತಂಡ ಹೊರಬಿದ್ದಿತು. ಹೀಗಾಗಿ ನಾಯಕತ್ವ ಬದಲಿಸುವ ತೀರ್ಮಾನಕ್ಕೆ ಸಂಜೀವ್‌ ಗೋಯೆಂಕಾ ಮುಂದಾದರು. ಇದನ್ನೂ ಓದಿ: ಸದ್ದಿಲ್ಲದೇ ಸಪ್ತಪದಿ ತುಳಿದ ಒಲಿಂಪಿಕ್ಸ್‌ ಪದಕ ವಿಜೇತ ನೀರಜ್ ಚೋಪ್ರಾ

  • IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ನೂತನ ಮೆಂಟರ್‌ ಆಗಿ ಜಹೀರ್‌ ಖಾನ್‌ ನೇಮಕ

    IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ನೂತನ ಮೆಂಟರ್‌ ಆಗಿ ಜಹೀರ್‌ ಖಾನ್‌ ನೇಮಕ

    ಮುಂಬೈ: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಆವೃತ್ತಿಗೂ ಮುನ್ನವೇ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ನೂತನ ಮೆಂಟರ್‌ ಆಗಿ 2011ರ ಏಕದಿನ ವಿಶ್ವಕಪ್‌ ವಿನ್ನರ್‌ ಹಾಗೂ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್‌ ಖಾನ್‌ (Zaheer Khan) ಅವರನ್ನ ನೇಮಕ ಮಾಡಿದೆ.

    2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡಕ್ಕೆ ಮೊದಲ ಎರಡು ಆವೃತ್ತಿಗಳಲ್ಲಿ ಗೌತಮ್‌ ಗಂಭೀರ್‌ ಮೆಂಟರ್‌ (Mentor) ಆಗಿದ್ದರು. ಆದ್ರೆ 2024ರ ಐಪಿಎಲ್‌ನಲ್ಲಿ ಗಂಭೀರ್‌ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾದರು. ಅಂದಿನಿಂದ ಖಾಲಿ ಉಳಿದಿದ್ದ ಸ್ಥಾನಕ್ಕೆ ಈಗ ಫ್ರಾಂಚೈಸಿ ಜಹೀರ್‌ ಖಾನ್‌ ಅವರನ್ನ ನೇಮಕ ಮಾಡಿಕೊಂಡಿದೆ. ಇದನ್ನೂ  ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶಕೀಬ್‌ ಬ್ಯಾನ್‌ ಮಾಡಿ – ಬಾಂಗ್ಲಾ ಕ್ರಿಕೆಟ್ ‌ಮಂಡಳಿಗೆ ನೋಟಿಸ್‌

    ಈ ಮಾಹಿತಿಯನ್ನು ಲಕ್ನೋ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೇ ಲಕ್ನೋ ತಂಡದ ಮಾಲೀಕರಾದ ಸಂಜೀವ್‌ ಗೋಯೆಂಕಾ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಹೀರ್‌ ಖಾನ್‌ಗೆ ಎಲ್‌ಎಸ್‌ಜಿ ಮೆಂಟರ್‌ ಜರ್ಸಿ ಕೊಟ್ಟು ಸ್ವಾಗತಿಸಿದ್ದಾರೆ. ಇದನ್ನೂ  ಓದಿ: ಲಕ್ನೋದಲ್ಲೇ ರಾಹುಲ್‌ ಉಳಿಸಿಕೊಳ್ಳಲು ಗೋಯೆಂಕಾ ಪ್ರಯತ್ನ

    ಸತತ 2 ಬಾರಿ ಪ್ಲೇ ಆಫ್ಸ್‌ಗೆ:
    ಗೌತಮ್‌ ಗಂಭೀರ್‌ ಮಾರ್ಗದರ್ಶನದಲ್ಲಿ ಎಲ್‌ಎಸ್‌ಜಿ ತಂಡ ಐಪಿಎಲ್‌ 2022-2023ರ ಎರಡೂ ಆವೃತ್ತಿಗಳಲ್ಲಿ ಸತತವಾಗಿ ಪ್ಲೇ ಆಫ್ಸ್‌ ತಲುಪಿದ ಸಾಧನೆ ಮಾಡಿತ್ತು. ಬಳಿಕ ಗಂಭೀರ್‌ ಕೆಕೆಆರ್‌ ತಂಡ ಸೇರಿಕೊಂಡರು. 2024ರಲ್ಲಿ ಲಕ್ನೋ ತಂಡ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತು. ಇದೀಗ ಹಳಿ ತಪ್ಪಿರುವ ಎಲ್‌ಎಸ್‌ಜಿ ತಂಡವನ್ನು ಮೇಲೆತ್ತುವ ಜವಾಬ್ದಾರಿ ಜಹೀರ್‌ ಖಾನ್‌ ಮೇಲಿದೆ.

    ಜಹೀರ್‌ ಖಾನ್‌ 10 ಐಪಿಎಲ್‌ ಆವೃತ್ತಿಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಪರವಾಗಿ ಆಡಿದ್ದಾರೆ. ಅಲ್ಲದೇ ಮೆಂಟರ್‌ ಆಗಿ ನೇಮಕಗೊಂಡಿದ್ದಕ್ಕೆ ಜಹೀರ್‌ ಖಾನ್‌ ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ  ಓದಿ: ಐಸಿಸಿ ಮುಖ್ಯಸ್ಥರಾಗಿ ಜಯ್‌ ಶಾ ಅವಿರೋಧ ಆಯ್ಕೆ