Tag: ಸಂಜಿತ್ ಹೆಗ್ಡೆ

  • ‘ನಂಗೆ ಅಲ್ಲವಾ’ ಎಂದು ಹಾಡಿ ಕುಣಿದ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ

    ‘ನಂಗೆ ಅಲ್ಲವಾ’ ಎಂದು ಹಾಡಿ ಕುಣಿದ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ

    ನ್ನಡದ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ (Sanjith Hegde) ಬರೀ ಕನ್ನಡಕ್ಕೆ ಸೀಮಿತವಾಗದೇ ತಮಿಳು, ತೆಲುಗು ಹಾಗೂ ಹಿಂದಿರಂಗದಲ್ಲಿಯೂ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರನ್ನು ರಂಜಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಸಂಜಿತ್ ಅತಿ ಕಡಿಮೆ ಅವಧಿಯಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡರು. ಬರೀ ಗಾಯನಕ್ಕೆ ಸೀಮಿತವಾಗದೇ ನಟನೆಯಲ್ಲಿಯೂ ತೊಡಗಿಸಿಕೊಂಡಿರುವ ಸಂಜಿತ್ ಈಗ ಮತ್ತೊಂದು ಹೊಸ ಹಾಡಿನ ಮೂಲಕ ಪ್ರತ್ಯಕ್ಷರಾಗಿದ್ದಾರೆ.

    ನಂಗೆ ಅಲ್ಲವಾ (Nange Allava) ಅಂತಾ ಸಂಚಿತ್ ಹೆಗ್ಡೆ ಯುವ ನಟಿ ಸಂಜನಾ ದಾಸ್ (Sanjana Das) ಜೊತೆಗೂಡಿ ಹಾಡಿ ಕುಣಿದಿದ್ದಾರೆ. ಹಾಗಂತ ಇದು ಸಿನಿಮಾ ಗೀತೆಯಲ್ಲ. ಬದಲಾಗಿ ಸಂಚಿತ್ ತಮ್ಮ ತಂಡದೊಂದಿಗೆ ಸೇರಿ ಸ್ವತಂತ್ರವಾಗಿ ರಚಿಸಿರುವ ಗಾನಬಜಾನ. ನಾಗಾರ್ಜುನ್ ಶರ್ಮಾ ಪದಪೊಣಿಸಿರುವ ಹಾಡಿಗೆ ಸಂಜಿತ್ ಹೆಗ್ಡೆ ಕಂಠ ಕುಣಿಸಿದ್ದಾರೆ. ಜೊತೆಗೆ ಸಂಗೀತ ಕೂಡ ಸಂಯೋಜಿಸಿದ್ದು, ಬಿಜೋಯ್ ಶೆಟ್ಟಿ ನಿರ್ದೇಶನದಲ್ಲಿ ‘ನಂಗೆ ಅಲ್ಲವ’ ಹಾಡು ಮೂಡಿಬಂದಿದೆ. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ಸಲ್ಮಾನ್ ಖಾನ್, ರಶ್ಮಿಕಾ ನಟನೆಯ ಸಿನಿಮಾ ಮುಹೂರ್ತ

     

    View this post on Instagram

     

    A post shared by Sanjith Hegde (@sanjithhegde)

    ಯುವ ಪ್ರೇಮಿಗಳ ಆಂಥೆಮ್ ನಂತಿರುವ ನಂಗೆ ಅಲ್ಲವ ಗೀತೆ ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತದೆ. ಈ ಹಾಡಿನ ಬಗ್ಗೆ ಮನಬಿಚ್ಚಿರುವ ಸಂಚಿತ್, ಈ ಹಾಡು ನನ್ನ ಜೀವನವನ್ನು ಬದಲಾಯಿಸಿತು. ನಾನು ತುಂಬಾ ಆತಂಕಗೊಂಡಿದ್ದೇನೆ ಮತ್ತು ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ‘ನಂಗೆ ಅಲ್ಲವಾ’ ನನ್ನ ಪ್ರೀತಿಯ ಜೀವನದ ಪ್ರಯಣವನ್ನು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು. ಈ ಪ್ರಯಾಣದಲ್ಲಿ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಹಾಡು ಬಿಡುಗಡೆಯೊಂದಿಗೆ ಹೃದಯ ತುಂಬಾ ಹಗುರ ಎನಿಸುತ್ತದೆ ಎಂದಿದ್ದಾರೆ.

    ಸಂಜಿತ್ ಹಿಂದಿಯಲ್ಲಿ ಬಾದಲ್ ಮತ್ತು ಗುಲಾಬೋ ಹಾಡುಗಳೊಂದಿಗೆ ಈಗಾಗಲೇ ಹೊಸ ಅಲೆ ಸೃಷ್ಟಿಸಿದ್ದಾರೆ. ಈಗ ಅದೇ ಸಾಲಿಗೆ ನಂಗೆ ಅಲ್ಲವ ಗಾನಬಜಾನ ಸೇರ್ಪಡೆಯಾಗಿದೆ. ಸಂಜಿತ್ ಹೆಗ್ಡೆ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಗೂ ಎಲ್ಲಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಡು ಲಭ್ಯವಿದೆ. ವಾರ್ನರ್ ಮ್ಯೂಸಿಕ್ ಇಂಡಿಯಾ ಈ ಹಾಡನ್ನು ಬಿಡುಗಡೆ ಮಾಡಿದೆ.

  • ಫ್ಯಾಷನ್‌ ರೂಲ್ಸ್‌ ಬ್ರೇಕ್‌ ಮಾಡಿ, ನೆಕ್ಲೇಸ್‌ ಧರಿಸಿ ಹಾಡಿದ ಸಂಜಿತ್‌ ಹೆಗ್ಡೆ

    ಫ್ಯಾಷನ್‌ ರೂಲ್ಸ್‌ ಬ್ರೇಕ್‌ ಮಾಡಿ, ನೆಕ್ಲೇಸ್‌ ಧರಿಸಿ ಹಾಡಿದ ಸಂಜಿತ್‌ ಹೆಗ್ಡೆ

    ಸ್ಯಾಂಡಲ್‌ವುಡ್‌ನ (Sandalwood) ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ (Sanjith Hegde) ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೇ ಚಿತ್ರರಂಗದಲ್ಲೂ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಹೀಗಿರುವಾಗ ಇತ್ತೀಚಿಗೆ ‘ಗೀಜಗ ಹಕ್ಕಿ’ (Gijaga Hakki Song) ಹಾಡು ಹಿಟ್ ಆಗಿರೋ ಬೆನ್ನಲ್ಲೇ ಸಂಜಿತ್ ಹೆಗ್ಡೆ ಸ್ಟೈಲ್ ಸ್ಟೇಟ್‌ಮೆಂಟ್ ಕೂಡ ಸದ್ದು ಮಾಡುತ್ತಿದೆ. ಜೆಂಡರ್ ರೂಲ್ಸ್ ಬ್ರೇಕ್ ಮಾಡಿ, ಅವರು ಧರಿಸಿರುವ ನೆಕ್ಲೇಸ್ ಲುಕ್ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ.

    ಸಂಜಿತ್ ಹೆಗ್ಡೆ ಅವರು ಹಾಡಿರುವ ‘ಗೀಜಗ ಹಕ್ಕಿ’ ಆಲ್ಬಂ ಟ್ರೆಂಡ್‌ನಲ್ಲಿದೆ. ಅದಷ್ಟೇ ಅಲ್ಲ, ಸಂಜಿತ್ ಧರಿಸಿದ್ದ ಔಟ್ ಫಿಟ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಗೋಲ್ಡನ್ ಪ್ಯಾಚ್ ವರ್ಕ್‌ ಪ್ಯಾಂಟ್, ಕೋಟ್ ಸ್ಟೈಲ್ ಶರ್ಟ್ ಧರಿಸಿ ಸಂಜಿತ್ ಮಿಂಚಿದ್ದಾರೆ. ವೀಂಜೇಜ್ ಕ್ರಿಸ್ಟಲ್ ಫಿಂಝ್ ನೆಕ್ಲೇಸ್ ಧರಿಸಿ ನ್ಯೂ ಲುಕ್‌ನಲ್ಲಿ ಸಂಜಿತ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

    ಸದ್ಯ ಸಂಜಿತ್ ಹೆಗ್ಡೆ ಅವರು ಜೆಂಡರ್ ರೂಲ್ಸ್ ಬ್ರೇಕ್ ಮಾಡಿ ನೆಕ್ಲೇಸ್ ಧರಿಸಿರೋದು ಯುವಕ- ಯುವತಿಯರ ಗಮನ ಸೆಳೆಯುತ್ತಿದೆ. ಸಂಜಿತ್ ನಯಾ ಲುಕ್‌ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.

    ಜೀ ವಾಹಿನಿಯ ಸರಿಗಮಪ ಶೋನಲ್ಲಿ ಮೊದಲ ಸ್ಪರ್ಧಿಯಾಗಿದ್ರು. ಬಳಿಕ ಸಂಜಿತ್ ಅದ್ಭುತ ವಾಯ್ಸ್ಗೆ ಸಿನಿಮಾಗಳಿಂದ ಆಫರ್‌ಗಳು ಬಂತು. ಅದನ್ನ ಸದುಪಯೋಗಪಡಿಸಿಕೊಂಡು ಸಂಜಿತ್ ಪಂಚ ಭಾಷಾ ಗಾಯಕನಾಗಿ ಗುರುತಿಸಿಕೊಳ್ತಿದ್ದಾರೆ. ಅದಷ್ಟೇ ಅಲ್ಲ, ಖ್ಯಾತ ನಟಿ ಶ್ರುತಿ ಹಾಸನ್ ಜೊತೆ ತೆಲುಗು ಸಿನಿಮಾವೊಂದರಲ್ಲಿ ನಟಿಸಿ ಸೈ ಎನಿಸಿಕೊಂಡರು.

  • ‘ಖಾಕಿ’ ಖದರ್‌ಗೂ ರೋಮಾಂಚನ ಮೂಡಿಸಿದ ವೀಡಿಯೋ ಸಾಂಗ್!

    ‘ಖಾಕಿ’ ಖದರ್‌ಗೂ ರೋಮಾಂಚನ ಮೂಡಿಸಿದ ವೀಡಿಯೋ ಸಾಂಗ್!

    ಬೆಂಗಳೂರು: ಚಿರಂಜೀವಿ ಸರ್ಜಾ ಇತ್ತೀಚೆಗೆ ಒಂದರ ಹಿಂದೊಂದರಂತೆ ಮಾಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾನಾ ರೀತಿಯ ಪಾತ್ರಗಳನ್ನು ನಿರ್ವಹಿಸಿ ಮಾಸ್ ಲುಕ್ಕಿನತ್ತ ಹೊರಳಿಕೊಂಡಿರೋ ಅವರು ಸದ್ಯಕ್ಕೆ ಸದ್ದು ಮಾಡುತ್ತಿರೋದು `ಖಾಕಿ’ ಚಿತ್ರದ ಮೂಲಕ. ಕನ್ನಡ ಚಿತ್ರರಂಗದಲ್ಲಿ ಅದ್ಧೂರಿ ಸಿನಿಮಾಗಳ ನಿರ್ಮಾಪಕರೆಂದೇ ಹೆಸರು ಮಾಡಿರುವ ತರುಣ್ ಶಿವಪ್ಪ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರವಿದು. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಟೀಸರ್ ಮೂಲಕ ಖಾಕಿ ಖದರ್‍ನ ಸಣ್ಣ ಝಲಕ್ ಜಾಹೀರಾಗಿತ್ತು. ಆ ಥ್ರಿಲ್ ಇನ್ನೂ ಹಬೆಯಾಡುತ್ತಿರುವಾಗಲೇ `ಖಾಕಿ’ಯ ಕಡೆಯಿಂದ ರೋಮಾಂಚನದ ಕಾವೇರಿಸುವಂಥಾ ಚೆಂದದ ವೀಡಿಯೋ ಸಾಂಗೊಂದು ಬಿಡುಗಡೆಯಾಗಿದೆ.

    ಸಂಜಿತ್ ಹೆಗ್ಡೆ ಮತ್ತು ಇಶಾ ಸುಚಿ ಹಾಡಿರೋ ಈ ಹಾಡು ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಒಂದೇ ಗುಕ್ಕಿಗೆ ಎಲ್ಲರನ್ನೂ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಯಾರೇ ನೀನು, ಯಾರೇ ನೀನು ಎಂಬ ಈ ವೀಡಿಯೋ ಸಾಂಗ್ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆಯೊಂದಿಗೆ ಮೂಡಿ ಬಂದಿದೆ. ಕವಿರತ್ನ ಡಾ ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಲವಲವಿಕೆಯ ಸಾಲುಗಳಂತೂ ಒಂದೇ ಸಲಕ್ಕೆ ಎಲ್ಲರಿಗೂ ನಾಟುವಂತಿವೆ. ಆಹ್ಲಾದದ ಬುಗ್ಗೆಗಳನ್ನು ಎದೆಯ ಮಿದುವಿಗೆ ಸೋಕಿಸುವಂತಿರೋ ಸಾಹಿತ್ಯ, ಅದಕ್ಕೆ ತಕ್ಕುದಾದ ಸಂಗೀತ ಮತ್ತು ಸಂಜಿತ್ ಹೆಗ್ಡೆ, ಇಶಾ ಸುಚಿಯ ಗಾನ ಮಾಧುರ್ಯದೊಂದಿಗೆ ಈ ಹಾಡು ಖಾಕಿ ಖದರ್‍ಗೂ ರೋಮಾಂಚನ ಮೂಡಿಸುವಂತಿದೆ.

    ಈ ಹಾಡಿನಲ್ಲಿ ಚಿರಂಜೀವಿ ಸರ್ಜಾ ಮತ್ತು ತಾನ್ಯಾ ಹೋಪ್ ಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಖಾಕಿ ಚಿತ್ರದ ಅಸಲಿ ಕಥೆ ಏನೆಂಬುದರ ಸುತ್ತಾ ಥರ ಥರದ ಚರ್ಚೆಗಳು ನಡೆಯುತ್ತಿವೆ. ಇದೊಂದು ಪಕ್ಕಾ ಮಾಸ್ ಚಿತ್ರ. ಖಾಕಿ ಅಂದೇಟಿಗೆ ಪೊಲೀಸ್ ನೆನಪಾಗೋದರಿಂದ ಇಲ್ಲಿ ಚಿರು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆಂದೇ ಆರಂಭದಲ್ಲಿ ಅಂದುಕೊಳ್ಳಲಾಗಿತ್ತು. ಆದರೆ ಅವರಿಲ್ಲಿ ಕೇಬಲ್ ಆಪರೇಟರ್ ಆಗಿ ನಟಿಸಿದ್ದಾರೆಂಬ ವಿಚಾರ ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು. ಕಥೆಯ ವಿಚಾರ ಏನೋ ಗೊತ್ತಿಲ್ಲ, ಆದರೆ ಆ ಕಥೆಯೊಳಗೊಂದು ಮುದ್ದಾದ ಲವ್ ಸ್ಟೋರಿ ಇದೆ ಎಂಬುದನ್ನು ಈ ವೀಡಿಯೋ ಸಾಂಗ್ ಖಚಿತ ಪಡಿಸಿದೆ. ಇದರೊಂದಿಗೆ ಖಾಕಿ ಖದರ್ ಮೋಹಕ ರೂಪ ಪಡೆದುಕೊಂಡಿದೆ!

  • ಸೆಪ್ಟೆಂಬರ್ 7ಕ್ಕೆ ದರ್ಶನ್‍ರಿಂದ ‘ಟಕ್ಕರ್’ ಆಡಿಯೋ ಬಿಡುಗಡೆ

    ಸೆಪ್ಟೆಂಬರ್ 7ಕ್ಕೆ ದರ್ಶನ್‍ರಿಂದ ‘ಟಕ್ಕರ್’ ಆಡಿಯೋ ಬಿಡುಗಡೆ

    ಕೆ.ಎನ್. ನಾಗೇಶ್ ಕೋಗಿಲು ಎಸ್.ಎಲ್.ಎನ್. ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಎರಡನೇ ಚಿತ್ರ ಟಕ್ಕರ್ ಚಿತ್ರದ ಹಾಡುಗಳು ಸೆಪ್ಟೆಂಬರ್ 7ರಂದು ರಿಲೀಸ್ ಆಗಲಿದೆ. ನಾಯಕ ನಟ ಮನೋಜ್ ಅವರ ಸೋದರ ಮಾವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದ್ಧೂರಿ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.


    ‘ಟಕ್ಕರ್’ ನಲ್ಲಿ ಮೂರು ಹಾಡುಗಳಿವೆ. ಡಾ.ವಿ.ನಾಗೇಂದ್ರ ಪ್ರಸಾದ್ ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಡ್ಯುಯೆಟ್ ಹಾಡನ್ನು ವಿಜಯಪ್ರಕಾಶ್ ಮತ್ತು ಅನುರಾಧಾ ಭಟ್ ಹಾಡಿದರೆ, ಹೀರೋ ಇಂಟ್ರಡಕ್ಷನ್ ಸಾಂಗ್ ಅನ್ನು ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಸ್ಫೂರ್ತಿದಾಯಕ ಗೀತೆಯನ್ನು ಯುವ ಹಾಡುಗಾರ ಸಂಜಿತ್ ಹೆಗ್ಡೆ ಹಾಡಿದ್ದಾರೆ. ವಿಜಯ ಪ್ರಕಾಶ್ ಹಾಡಿರುವ ಹಾಡನ್ನು ಮಲೇಶಿಯಾದಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವೆಂದರೆ ಈ ಚಿತ್ರದ ಆರಂಭದಲ್ಲಿ ಬರುವ ನಾಯಕನ ಇಂಟ್ರಡಕ್ಷನ್ ಹಾಡಿನಲ್ಲೇ ಫೈಟ್ ಅನ್ನೂ ಅಳವಡಿಸಲಾಗಿದೆ.


    ‘ಆನೆ ನಡೆದಿದ್ದೆ ದಾರಿ ಅಲ್ವೇನ್ರಿ ಯಾರು ಕೊಡಬೇಡಿ ಟಕ್ಕರ್’ ಎನ್ನುವ ಸಾಲಿನಿಂದ ಆರಂಭವಾಗುವ ಹಾಡಿನಲ್ಲಿ ಮೋಹನ್ ಅವರ ಕೊರಿಯೋಗ್ರಫಿ ಮತ್ತು ಡಿಫರೆಂಟ್ ಡ್ಯಾನಿ ಅವರ ಸಾಹಸ ಸಮ್ಮಿಲನಗೊಂಡಿದೆ. ಥ್ರಿಲ್ಲರ್ ಮತ್ತು ಸಾಹಸಪ್ರಧಾನ ಅಂಶಗಳನ್ನು ಒಳಗೊಂಡಿದೆ.


    ವಿ. ರಘುಶಾಸ್ತ್ರಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ, ಡಾ.ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಗುರುರಾಜ್ ದೇಸಾಯಿ ಸಂಭಾಷಣೆ ಈ ಚಿತ್ರಕ್ಕಿದೆ. ಮನೋಜ್ ಕುಮಾರ್ ಮತ್ತು ರಂಜನಿರಾಘವನ್, ಕೆ.ಎಸ್. ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಖ್ಯಾತಿಯ ಸೌರವ್ ಲೋಕಿ, ಸಾಧು ಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ಕುರಿ ಸುನಿಲ್, ಜೈಜಗದೀಶ್ ಮುಂತಾದವರ ತಾರಾಬಳಗವಿದೆ.

  • ಸ್ಯಾಂಡಲ್‍ವುಡ್ ಸ್ಟಾರ್ ನಟನಿಗೆ ಧ್ವನಿಯಾದ ಸಂಜಿತ್ ಹೆಗ್ಡೆ

    ಸ್ಯಾಂಡಲ್‍ವುಡ್ ಸ್ಟಾರ್ ನಟನಿಗೆ ಧ್ವನಿಯಾದ ಸಂಜಿತ್ ಹೆಗ್ಡೆ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ’ ಶೋ ಮೂಲಕ ಖ್ಯಾತರಾಗಿರುವ ಗಾಯಕ ಸಂಜಿತ್ ಹೆಗ್ಡೆ ಈಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಧ್ವನಿಯಾಗಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಸಂಜಿತ್ ಹೆಗ್ಡೆ ಒಂದರ ಹಿಂದೆ ಒಂದು ಸೂಪರ್ ಹಿಟ್ ಹಾಡುಗಳನ್ನು ನೀಡುತ್ತಿದ್ದಾರೆ. ಸದ್ಯ ಈಗ ಸಂಜಿತ್, ಪುನೀತ್ ರಾಜ್‍ಕುಮಾರ್ ನಟನೆಯ ‘ನಟಸಾರ್ವಭಮ’ ಚಿತ್ರದ ಇಂಟ್ರೋಡಕ್ಷನ್ ಹಾಡನ್ನು ಹಾಡಿದ್ದಾರೆ.

    ಇತ್ತೀಚೆಗೆ ಸಂಜಿತ್ ಹೆಗ್ಡೆ ಲೂಸ್ ಮಾದ ಯೋಗೀಶ್ ಅಭಿನಯಿಸಿದ ‘ಲಂಬೋದರ’ ಚಿತ್ರಕ್ಕೆ ಹಾಡನ್ನು ಹಾಡಿದ್ದರು. ಈ ಚಿತ್ರದ ಆಡಿಯೋವನ್ನು ಪುನೀತ್ ರಾಜ್‍ಕುಮಾರ್ ರಿಲೀಸ್ ಮಾಡಿದ್ದರು. ಸದ್ಯ ಸಂಜಿತ್ ಹಾಡಿಗೆ ಶಿವಣ್ಣ ಹಾಗೂ ಪುನೀತ್ ಇಬ್ಬರು ಫಿದಾ ಆಗಿದ್ದಾರೆ.

    ನಟಸಾರ್ವಭೌಮ ಚಿತ್ರದ ಇಂಟ್ರೊಡಕ್ಷನ್ ಹಾಡಿಗೆ ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದು, ಜೊತೆಗೆ ‘ಟಗರು’ ಖ್ಯಾತಿಯ ಆಂಟೋನಿ ದಾಸ್ ಅವರು ಕೂಡ ಈ ಚಿತ್ರಕ್ಕೆ ಹಾಡನ್ನು ಹಾಡಿದ್ದಾರೆ. ಈ ಚಿತ್ರಕ್ಕೆ ಡಿ. ಇಮ್ರಾನ್ ಸಂಗೀತಾ ನೀಡಿದ್ದಾರೆ.

    ಈ ಚಿತ್ರದ ಹಾಡಿಗಾಗಿ ಅದ್ಧೂರಿ ಸೆಟ್ ನಿರ್ಮಿಸಿ ಅಲ್ಲಿ ಶೂಟಿಂಗ್ ನಡೆಸುತ್ತಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು, ಪವನ್ ಒಡೆಯರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಪುನೀತ್‍ಗೆ ನಾಯಕಿಯರಾಗಿ ಡಿಂಪಲ್ ಬೆಡಗಿ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews