Tag: ಸಂಜಯ್‌ ಶಿರ್ಸಾತ್‌

  • ಮಹಾರಾಷ್ಟ್ರ ಸಚಿವನ ಕೊಠಡಿಯಲ್ಲಿ ಕಂತೆ ಕಂತೆ ನೋಟು ಪತ್ತೆ!

    ಮಹಾರಾಷ್ಟ್ರ ಸಚಿವನ ಕೊಠಡಿಯಲ್ಲಿ ಕಂತೆ ಕಂತೆ ನೋಟು ಪತ್ತೆ!

    ಮುಂಬೈ: ಮಹಾರಾಷ್ಟ್ರ (Maharashtra) ಸರ್ಕಾರದ ಸಾಮಾಜಿಕ ನ್ಯಾಯ ಸಚಿವ ಮತ್ತು ಶಿವಸೇನಾ ನಾಯಕ ಸಂಜಯ್ ಶಿರ್ಸಾತ್ (Sanjay Shirsat) ಕೊಠಡಿಯಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ.

    2019 ಮತ್ತು 2024 ರ ನಡುವೆ ಸಂಜಯ್ ಶಿರ್ಸಾತ್ ಆಸ್ತಿ ಹೆಚ್ಚಳದ ಬಗ್ಗೆ ಶಿರ್ಸಾತ್ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ (Income Tax) ನೋಟಿಸ್ ಬಂದಿದೆ. ನೋಟಿಸ್‌ ಬಂದ ಒಂದು ದಿನದ ನಂತರ ವಿಡಿಯೋ ಹರಿದಾಡಲು ಆರಂಭಿಸಿದೆ. ಇದನ್ನೂ ಓದಿ: ಮತಾಂತರ ಮಾಸ್ಟರ್‌ಮೈಂಡ್‌ ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್‌ ಬುಲ್ಡೋಜರ್‌ನಿಂದ ನೆಲಸಮ

    ವಿಡಿಯೋದಲ್ಲಿ ಏನಿದೆ?
    ಕೊಠಡಿಯಲ್ಲಿ ಶಾಸಕರು ಬನಿಯನ್‌ ಮತ್ತು ಶಾರ್ಟ್ಸ್ ಧರಿಸಿ ಹಾಸಿಗೆಯ ಮೇಲೆ ಕುಳಿತು ಸಿಗರೇಟ್ ಸೇದುತ್ತಿದ್ದಾರೆ. ಪಕ್ಕದಲ್ಲಿ ಸಾಕು ನಾಯಿಯನ್ನು ಸಹ ಕಾಣಬಹುದು. ಕೋಣೆಯಲ್ಲಿ ಇರಿಸಲಾಗಿರುವ ಚೀಲದಲ್ಲಿ ನೋಟುಗಳ ಬಂಡಲ್ ಪತ್ತೆಯಾಗಿದೆ.  ಇದನ್ನೂ ಓದಿ: ಕಾರಲ್ಲಿ ದನ ಕದ್ದೊಯ್ತಿದ್ದಾಗ ದಾಳಿ ಪೊಲೀಸ್ರ ಮೇಲೆ ರಾಡ್ ಬೀಸಿದ ದನಗಳ್ಳರು

    ತನ್ನ ಮೇಲೆ ಬಂದ ಆರೋಪಕ್ಕೆ ಪ್ರತಿಕ್ರಿಯಿಸಿ, ಕೆಲವರು ನನ್ನೊಂದಿಗೆ ಸಮಸ್ಯೆ ಹೊಂದಿದ್ದರು, ಆದರೆ ನಾನು ಅವರಿಗೆ ಉತ್ತರಿಸುತ್ತೇನೆ. ನಾನು ಯಾವುದೇ ಒತ್ತಡದಲ್ಲಿಲ್ಲ ಎಂದು ಹೇಳಿದ್ದಾರೆ.

  • 2.5 ವರ್ಷಗಳಿಂದ ನಿಮ್ಮ ಮನೆಗೆ ನಮಗೆ ಪ್ರವೇಶವೇ ಇರಲಿಲ್ಲ, ಗೇಟ್‌ ಬಳಿ ಕಾಯಬೇಕಿತ್ತು: ಠಾಕ್ರೆಗೆ ಬಂಡಾಯ ಶಾಸಕನ ಪತ್ರ

    2.5 ವರ್ಷಗಳಿಂದ ನಿಮ್ಮ ಮನೆಗೆ ನಮಗೆ ಪ್ರವೇಶವೇ ಇರಲಿಲ್ಲ, ಗೇಟ್‌ ಬಳಿ ಕಾಯಬೇಕಿತ್ತು: ಠಾಕ್ರೆಗೆ ಬಂಡಾಯ ಶಾಸಕನ ಪತ್ರ

    ಮುಂಬೈ: ಕಳೆದ ಎರಡೂವರೆ ವರ್ಷಗಳಿಂದ ನಿಮ್ಮ ಮನೆಗೆ ನಮಗೆ ಪ್ರವೇಶವೇ ಇರಲಿಲ್ಲ ಎಂದು ಉದ್ಧವ್‌ ಠಾಕ್ರೆಗೆ ಬಂಡಾಯ ಶಾಸಕರೊಬ್ಬರು ಪತ್ರ ಬರೆದು ಕಿಡಿಕಾರಿದ್ದಾರೆ.

    ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ ನಂತರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಪಕ್ಷದ ಶಾಸಕರನ್ನುದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ್ದರು. ನಮ್ಮ ಶಾಸಕರು ಬಯಸಿದರೆ ರಾಜೀನಾಮೆ ಕೊಡಲು ಸಿದ್ಧ. ಏನೇ ಇದ್ದರೂ ನನ್ನ ಎದುರಿಗೆ ಬಂದು ಹೇಳಲಿ ಕೇಳುತ್ತೇನೆ ಠಾಕ್ರೆ ಮಾತನಾಡಿದ್ದರು. ಇದನ್ನೂ ಓದಿ: ಶಾಸಕರು ಆಯ್ತು ಈಗ ಶಿವಸೇನೆ ಸಂಸದರಿಂದಲೂ ಬಂಡಾಯ

    ಇದಕ್ಕೆ ಬಂಡಾಯ ಶಾಸಕ ಸಂಜಯ್‌ ಶಿರ್ಸಾತ್‌, ನಿನ್ನೆ ʻವರ್ಷಾʼದಲ್ಲಿ (ಸಿಎಂ ಅಧಿಕೃತ ನಿವಾಸ) ಜನರನ್ನು ನೋಡಿ ಸಂತೋಷಪಟ್ಟೆವು. ಎರಡೂವರೆ ವರ್ಷಗಳಿಂದ ನಮಗೆ ಮುಖ್ಯಮಂತ್ರಿ ಮನೆಗೆ ಪ್ರವೇಶ ನಿರಾಕರಿಸಲಾಗಿತ್ತು. ನಾವು ಅವರ ಗೇಟ್‌ಗಳ ಹೊರಗೆ ಗಂಟೆಗಟ್ಟಲೆ ಕಾಯುವಂತೆ ಮಾಡಲಾಗಿತ್ತು ಎಂದು ಪತ್ರದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಏಕನಾಥ್‌ ಶಿಂಧೆ ಅವರ ಮನೆ ಬಾಗಿಲು ನಮಗಾಗಿ ಯಾವಾಗಲೂ ತೆರೆದಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೇಸ್ ದಾಖಲು

    ಕಷ್ಟದ ಸಂದರ್ಭದಲ್ಲೂ ಸದಾ ತೆರೆದಿರುವ ಶಿಂಧೆಯ ಮನೆ ಹಾಗೆಯೇ ಇರುತ್ತದೆ ಎಂಬ ನಂಬಿಕೆಯೊಂದಿಗೆ ಇಂದು ನಾವಿದ್ದೇವೆ. ನಿನ್ನೆ ನೀವು ಹೇಳಿದ ಮಾತುಗಳು ನಮ್ಮನ್ನು ಭಾವುಕರನ್ನಾಗಿಸಿದೆ. ಆದರೆ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ನನ್ನ ಭಾವನೆಗಳನ್ನು ನಿಮಗೆ ತಿಳಿಸಲು ನಾನು ಈ ಭಾವನಾತ್ಮಕ ಪತ್ರವನ್ನು ಬರೆಯಬೇಕಾಯಿತು ಎಂದು ಶಿರ್ಸಾತ್‌ ಹೇಳಿದ್ದಾರೆ.

    Live Tv