Tag: ಸಂಜಯ್ ದತ್ತ್

  • ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಗೆ ಸಂಜಯ್ ದತ್

    ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಗೆ ಸಂಜಯ್ ದತ್

    ಜೋಗಿ ಪ್ರೇಮ್ (Prem) ಮತ್ತು ಧ್ರುವ ಸರ್ಜಾ (Dhruv Sarja) ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದ್ದು, ಈ ಸಿನಿಮಾದ ಟೈಟಲ್ ಟೀಸರ್ ಅನ್ನು ವಿಶೇಷ ರೀತಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಈ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯುತ್ತಿದ್ದು, ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಇದಕ್ಕೆ ಸಾಕ್ಷಿ ಆಗಲಿದ್ದಾರೆ. ಇದೇ  ಅಕ್ಟೋಬರ್ 20 ರಂದು ಕಾರ್ಯಕ್ರಮವು ಬೆಂಗಳೂರಿನಲ್ಲೇ ನಡೆಯುತ್ತಿದೆ.


    ಈಗಾಗಲೇ ಈ ಟೀಸರ್ (Title Teaser) ಲಾಂಚ್ ಮಾಡಲು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ (Mohanlal) ಆಗಮಿಸಲಿದ್ದಾರೆ ಎಂದು ಪ್ರೇಮ್ ತಿಳಿಸಿದ್ದರು. ಮೋಹನ್ ಲಾಲ್ ಅವರನ್ನು ಭೇಟಿ ಮಾಡಿದ ಫೋಟೋವನ್ನೂ ಅವರು ಹಂಚಿಕೊಂಡಿದ್ದರು. ಇದೀಗ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ತ (Sanjay Dutt) ಕೂಡ ಆಗಮಿಸಲಿದ್ದಾರೆ ಅಂದಿದ್ದಾರೆ. ಇಂದು ಮುಂಬೈನಲ್ಲಿ ಸಂಜಯ್ ದತ್ ಅವರನ್ನು ಪ್ರೇಮ್ ಭೇಟಿ ಮಾಡಿ ಆಹ್ವಾನಿಸಿದ್ದಾರೆ. ಇದನ್ನೂ ಓದಿ:ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಪ್ಪು ಕಪ್ ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್

    ಭಾರತೀಯ ಸಿನಿಮಾ ರಂಗದ ಮೇರು ನಟರು ಮಾತ್ರವಲ್ಲ, ನಿನ್ನೆಯಷ್ಟೇ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರನ್ನೂ ಪ್ರೇಮ್ ಭೇಟಿ ಮಾಡಿದ್ದರು. ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿಗಳು ಕೂಡ ಈ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು, ಈ ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಅವರೂ ಸಾಕ್ಷಿಯಾಗಲಿದ್ದಾರೆ.

    ಈಗಾಗಲೇ ಸಿನಿಮಾದ ಮುಹೂರ್ತ ಮೈಸೂರಿನಲ್ಲಿ ನಡೆದಿದೆ. ಇನ್ನಷ್ಟೇ ಚಿತ್ರೀಕರಣ ಶುರುವಾಗಬೇಕು. ಅದಕ್ಕಾಗಿ ಎಲ್ಲ ಸಿದ್ಧತೆಯನ್ನೂ ಚಿತ್ರತಂಡ ಮಾಡಿಕೊಂಡಿದೆ. ಅದಕ್ಕೂ ಮುನ್ನ ಟೈಟಲ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಲ್ಲಿಂದ ಸಿನಿಮಾದ ಇತರ ಕೆಲಸಗಳು ಶುರುವಾಗಲಿವೆಯಂತೆ. ಪ್ರೇಮ್ ಸಿನಿಮಾಗಳು ಅಂದರೆ, ಅಲ್ಲೊಂದು ಅಬ್ಬರ ಇರಲೇಬೇಕು. ಆ ಅಬ್ಬರವೂ ಮೊದಲ ದಿನದಿಂದಲೇ ಶುರುವಾಗಿರುವುದು ಮತ್ತೊಂದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

    ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

    ಕೆಜಿಎಫ್ 2 ಸಿನಿಮಾದ ಮೊದಲ ಲಿರಿಕಲ್ ಹಾಡು ‘ತೂಫಾನ್’ ಇಂದು ಬಿಡುಗಡೆ ಆಗಿದೆ. ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಲಕ್ಷ ಲಕ್ಷ ವಿವ್ಯ್ಸು ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ತೂಫಾನ್ ಟ್ರೆಂಡ್ ಆಗಿದೆ. ‘ತೂಫಾನ್’ ಕ್ಯಾಚಿ ಶಬ್ದವೂ ಆಗಿರುವುದರಿಂದ ತಾಂತ್ರಿಕವಾಗಿ ಹುಡುಕಲು ಅದು ವರವೂ ಆಗಿದೆ.

    ತೂಫಾನ್ ಹಾಡು ಬಿಡುಗಡೆ ಆಗುತ್ತಿದ್ದಂತೆಯೇ ಯಶ್ ಅಭಿಮಾನಿಗಳು ಕೆಜಿಎಫ್ 2 ಸಿನಿಮಾ ಹಿಟ್ ಆಗಲಿ ಎಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲಿ ಸಿಹಿ ಕೂಡ ಹಂಚಿದ್ದಾರೆ ಯಶ್ ಅವರ ಮಹಿಳಾ ಅಭಿಮಾನಿಗಳು.  ಇದನ್ನೂ ಓದಿ : ಅಮೆರಿಕಾದಲ್ಲಿ ಅಪ್ಪು ಬರ್ತಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

    ಇದೊಂದು ನಾಯಕನ ಬಿಲ್ಡ್ ಅಪ್ ರೀತಿಯ ಗೀತೆಯಾಗಿದ್ದು, ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ರವಿ ಅವರೇ ಸಾಹಿತ್ಯ ಬರೆದದ್ದು ಮತ್ತೊಂದು ವಿಶೇಷ. ಮತ್ತೊಂದು ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಇಷ್ಟೊಂದು ಗಾಯಕರು ಒಟ್ಟಿಗೆ ಸೇರಿ ಸಿನಿಮಾ ಹಾಡೊಂದನ್ನು ಹಾಡಿದ್ದಾರೆ. ಇದನ್ನೂ ಓದಿ : ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ಪುನೀರ್ ರುದ್ರನಾಗ್, ವರ್ಷ ಆಚಾರ್ಯ ಜತೆ ಬಾಲ ಗಾಯಕರಾದ ಗಿರಿಧರ್ ಕಾಮತ್, ಸಚಿನ್ ಕಾಮತ್, ನಿಶಾಂತ್ ಕಿಣಿ, ಭರತ್ ಭಟ್, ಅನಘ ನಾಯಕ್, ಅವಿನಿ ಭಟ್, ಸ್ವಾತಿ ಕಾಮತ್, ಶಿವಾನಂದ್ ನಾಯಕ್, ಕೀರ್ತನ್ ಬಸ್ರೂರು ಈ ಹಾಡಿಗೆ ಧ್ವನಿಯಾಗಿದ್ದಾರೆ.

  • ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

    ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

    ಶ್ ನಟನೆಯ ಕೆಜಿಎಫ್ 2 ಸಿನಿಮಾದ ‘ತೂಫಾನ್’ ಹಾಡಿಗೆ ಅಭಿಮಾನಿಗಳು ಕಾದಿದ್ದರು. ಕೊನೆಗೂ ಅಂದುಕೊಂಡ ವೇಳೆಗೆ ಹಾಡನ್ನು ರಿಲೀಸ್ ಮಾಡಿದೆ ಹೊಂಬಾಳೆ ಫಿಲ್ಮಸ್. ಇದು ಕೆಜಿಎಫ್ 2 ಸಿನಿಮಾದ ಬಿಡುಗಡೆ ಆಗುತ್ತಿರುವ ಮೊದಲ ಹಾಡಾಗಿದ್ದರಿಂದ, ಯಾವ ರೀತಿಯ ಸಾಂಗ್ ಇರಬಹುದು ಎನ್ನುವ ಕುತೂಹಲ ಇದ್ದೇ ಇತ್ತು. ಅದಕ್ಕೀಗ ತೆರೆ ಬಿದ್ದಿದೆ.

    ಇದೊಂದು ನಾಯಕನ ಬಿಲ್ಡ್ ಅಪ್ ರೀತಿಯ ಗೀತೆಯಾಗಿದ್ದು, ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ರವಿ ಅವರೇ ಸಾಹಿತ್ಯ ಬರೆದದ್ದು ಮತ್ತೊಂದು ವಿಶೇಷ. ಮತ್ತೊಂದು ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಇಷ್ಟೊಂದು ಗಾಯಕರು ಒಟ್ಟಿಗೆ ಸೇರಿ ಸಿನಿಮಾ ಹಾಡೊಂದನ್ನು ಹಾಡಿದ್ದಾರೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ಪುನೀರ್ ರುದ್ರನಾಗ್, ವರ್ಷ ಆಚಾರ್ಯ ಜತೆ ಬಾಲ ಗಾಯಕರಾದ ಗಿರಿಧರ್ ಕಾಮತ್, ಸಚಿನ್ ಕಾಮತ್, ನಿಶಾಂತ್ ಕಿಣಿ, ಭರತ್ ಭಟ್, ಅನಘ ನಾಯಕ್, ಅವಿನಿ ಭಟ್, ಸ್ವಾತಿ ಕಾಮತ್, ಶಿವಾನಂದ್ ನಾಯಕ್, ಕೀರ್ತನ್ ಬಸ್ರೂರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

    ಸರ್ರಂತ ಸುಡುವ ಜ್ವಾಲಾಗ್ನಿ ಎಂದು ಶುರುವಾಗುವ ಈ ಗೀತೆಯು ನಾಯಕನ ಹೀರೋಯಿಸಂ ಅನ್ನು ಬಿಂಬಿಸುತ್ತಾ ಹೋಗುತ್ತದೆ. ಕಥಾ ನಾಯಕನ ಒಂದು ರೀತಿಯ ಚರಿತ್ರೆಯಾಗಿಯೂ ಈ ಹಾಡಿನಲ್ಲಿ ಕಟ್ಟಿ ಕೊಡುತ್ತಾ ಹೋಗಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.  ಲಹರಿ ಮ್ಯೂಸಿಕ್ ನಲ್ಲಿ ಈ ಹಾಡು ಬಿಡುಗಡೆ ಆಗಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲೇ ಟ್ರೆಂಡ್ ಕ್ರಿಯೇಟ್ ಮಾಡಿದೆ. ಕನ್ನಡದಲ್ಲಿ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲೂ ಈ ಹಾಡು ರಿಲೀಸ್ ಆಗಿದೆ.

  • ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಕೆಜಿಎಫ್ 2 ಸಿನಿಮಾ ತಂಡ ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್  ಸಿನಿಮಾದಲ್ಲಿ ಕೆಲಸ ಮಾಡಿದ ಪ್ರಮುಖ ಮಹಿಳೆಯರನ್ನು ಹೊಂದಿದೆ. ಯಶ್ ನಟನೆಯ ಕೆಜಿಎಫ್ 2 ಚಿತ್ರದಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್, ಹಿರಿಯ ನಟಿ ಮಾಳ್ವಿಕಾ ಅವಿನಾಶ್, ಶ್ರೀನಿಧಿ ಶೆಟ್ಟಿ, ಈಶ್ವರಿ ರಾವ್, ರಚನಾ ಜೋಯಿಸ್ ಮತ್ತು ರೂಪಾ ರಾಯಪ್ಪ ನಟಿಸಿದ್ದಾರೆ. ಇಷ್ಟೂ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೂ ಕಲಾವಿದರ ಫೋಟೋ ಇರುವಂತಹ ಪೋಸ್ಟರ್ ಅನ್ನು ಇಂದು ರಿಲೀಸ್ ಮಾಡಿದೆ ಚಿತ್ರತಂಡ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಕೆಜಿಎಫ್ 2 ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಹಲವು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಸದ್ಯದಲ್ಲೇ ಟ್ರೇಲರ್ ಕೂಡ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಅಲ್ಲಿಂದ ತಮ್ಮ ಸಿನಿಮಾದ ಪ್ರಮೋಷನ್ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಇದನ್ನೂ ಓದಿ : ಸೋನಾಕ್ಷಿ ಸಿನ್ಹಾ ಮೋಸ ಮಾಡಿದ್ರಾ? ಅಸಲಿ ಕಥೆ ಏನು?

    ಕೆಜಿಎಫ್ ಮೊದಲ ಭಾಗ ಭಾರತೀಯ ಸಿನಿಮಾ ರಂಗದಲ್ಲೇ ಹೊಸ ದಾಖಲೆ ನಿರ್ಮಾಣ ಮಾಡಿತ್ತು. ಕೆಜಿಎಫ್ 2 ಬಗ್ಗೆಯೂ ಅಷ್ಟೇ ನಿರೀಕ್ಷೆಯಿದೆ. ಹಾಗಾಗಿ ಒಂದೊಂದೆ ಪೋಸ್ಟರ್ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಐದು ಕಾಂಟ್ರವರ್ಸಿಗಳು

    ಕೆಜಿಎಫ್ 2 ಸಿನಿಮಾದಲ್ಲಿ ಹೊಸ ಹೊಸ ಕಲಾವಿದರ ಸಂಗಮವೇ ಇದೆ. ಬಾಲಿವುಡ್ ಖ್ಯಾತ ನಟ ಸಂಜಯ್ ದತ್ತ ಮತ್ತು ದಕ್ಷಿಣದ ಹೆಸರಾಂತ ನಟ ಪ್ರಕಾಶ್ ರೈ ಕೂಡ ಇದರಲ್ಲಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲೂ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ.