Tag: ಸಂಜಯ್ ದತ್ತ

  • ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಶ್ ನಟನೆಯ ಕೆಜಿಎಫ್ 2 ಸಿನಿಮಾದ ಟ್ರೈಲರ್ ಕೊನೆಗೂ ಬಿಡುಗಡೆ ಆಗುತ್ತಿದೆ. ಕಳೆದ ಒಂದು ವರ್ಷದಿಂದ ಯಶ್ ಅಭಿಮಾನಿಗಳು ಸಿನಿಮಾದ ಬಗ್ಗೆ ಅಪ್ ಡೇಟ್ ಕೇಳುತ್ತಲೇ ಬಂದಿದ್ದರು. ಫ್ಯಾನ್ ಮೇಡ್ ಪೋಸ್ಟರ್ ಹಾಕಿ, ಪ್ರಶ್ನೆಗಳ ಸುರಿಮಳೆಗೈದಿದ್ದರು. ಕೊನೆಗೂ ಹೊಂಬಾಳೆ ಫಿಲ್ಮಸ್‍ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. ಇದೇ ಮಾರ್ಚ್ 27 ರಂದು ಸಂಜೆ 6.40ಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಕೊರೋನಾ ಕಾರಣದಿಂದಾಗಿ ಅನೇಕ ಚಿತ್ರಗಳ ಕೆಲಸಗಳು ಆಮೆಗತಿಯಲ್ಲಿ ಸಾಗಿದವು. ಕೆಜಿಎಫ್ 2 ದ ಕೆಲಸಗಳು ಕೂಡ ಹಿಂದೆ ಬಿದ್ದವು. ಹಾಗಾಗಿ ಸಿನಿಮಾದ ಯಾವ ಅಪ್ ಡೇಟ್ ಅನ್ನೂ ಚಿತ್ರತಂಡ ನೀಡಿರಲಿಲ್ಲ. ಟ್ರೈಲರ್ ಬಿಡುಗಡೆಯ ಮೂಲಕ ಚಿತ್ರದ ಪ್ರಮೋಷನ್ ಗೆ ಸಿನಿಮಾ ತಂಡ ಸಜ್ಜಾಗಿದೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಕೆಜಿಎಫ್ 1 ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿದೆ. ಹಾಗಾಗಿ ಭಾಗ 2 ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಭಾಗ 2ರಲ್ಲಿ ಏನೆಲ್ಲ ವಿಷಯಗಳು ಇರಲಿವೆ ಎನ್ನುವುದನ್ನು ಟ್ರೈಲರ್ ಮೂಲಕ ಸಂಕ್ಷಿಪ್ತವಾಗಿ ತೋರಿಸುವ ಪ್ರಯತ್ನ ಮಾಡುತ್ತಾರಂತೆ ನಿರ್ದೇಶಕ ಪ್ರಶಾಂತ್ ನೀಲ್.

  • ಕೆಜಿಎಫ್ 2 ನಿರ್ಮಾಪಕರಿಗೇ ಚಮಕ್ ಕೊಟ್ಟ ಫ್ಯಾನ್ಸ್ : ಮೋದಿ ಪತ್ರದ ಅಸಲಿಯತ್ತೇನು?

    ಕೆಜಿಎಫ್ 2 ನಿರ್ಮಾಪಕರಿಗೇ ಚಮಕ್ ಕೊಟ್ಟ ಫ್ಯಾನ್ಸ್ : ಮೋದಿ ಪತ್ರದ ಅಸಲಿಯತ್ತೇನು?

    ಕೆಜಿಎಫ್ 2 ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಪತ್ರ ಬರೆದು, ಸಿನಿಮಾದ ಅಪ್ ಡೇಟ್ ಕೇಳಿ ಬೆಚ್ಚಿ ಬೀಳಿಸಿದ್ದಾರೆ. ಹೌದು, “ಕೆಜಿಎಫ್ 2 ಸಿನಿಮಾದ ಅಪ್ ಡೇಟ್ ಏನು? ಮಿಲಿಯನ್ ಗಟ್ಟಲೇ ಅಭಿಮಾನಿಗಳು ಈ ಸಿನಿಮಾದ ಕುರಿತು ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಕೂಡಲೇ ಅಪ್ ಡೇಟ್ ನೀಡಬೇಕು” ಎಂದು ಪ್ರಧಾನ ಮಂತ್ರಿಗಳ ಲೆಟರ್ ಹೆಡ್ ನಲ್ಲಿಯ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಸುಮ್ಮನೆ ಇದ್ದರೆ ಈ ಪತ್ರಕ್ಕೆ ಅಷ್ಟೊಂದು ಮಹತ್ವ ಬರುತ್ತಿತ್ತೋ ಇಲ್ಲವೋ? ಆದರೆ, ಹೊಂಬಾಳೆ ಫಿಲ್ಮ್ಸ್ ಟಿಟ್ವರ್ ಖಾತೆಯಿಂದ ಅದಕ್ಕೆ ಪ್ರತಿಕ್ರಿಯೆ ಕೂಡ ಬಂತು. ಹಾಗಾಗಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಯಿತು. ಅರೇ, ಪ್ರಧಾನಿ ಅವರೇ ಅಪ್ ಡೇಟ್ ಕೇಳಿದ್ರಾ ಎನ್ನುವ ಅಚ್ಚರಿ ಬೇರೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..

    ಪ್ರಧಾನಿ ಅವರ ಲೆಟರ್ ಹೆಡ್ ಬಳಿಸಿಕೊಂಡು ವೈರಲ್ ಆದ ಪತ್ರದ ಅಸಲಿಯತ್ತೇ ಬೇರೆಯಿದೆ. ಯಾರೋ ಫ್ಯಾನ್ಸ್ ಈ ಕಿರಿಕ್ ಕೆಲಸ ಮಾಡಿದ್ದು, ಈಗಲಾದರೂ ನಿರ್ಮಾಪಕರು ಉತ್ತರಿಸುತ್ತಾರಾ ಎನ್ನುವುದು ಅದರ ಹಿಂದಿನ ಉದ್ದೇಶವಾಗಿತ್ತು. ಸಿನಿಮಾ ಟೀಮ್ ಕೂಡ ಅದನ್ನು ಫನ್ನಿಯಾಗಿ ತಗೆದುಕೊಂಡಿದ್ದರು.  ಇದನ್ನೂ ಓದಿ : ಜೈಲಿನಲ್ಲಿ ಚೇತನ್ ಕೂಲ್ ಆಗಿದ್ದಾರೆ : ಪತ್ನಿ ಮೇಘಾ

    ಕೆಜಿಎಫ್ 2 ಸಿನಿಮಾದ ಬಿಡುಗಡೆ ದಿನಾಂಕ ಹೊರತಾಗಿ ಬೇರೆ ಯಾವ ಸುದ್ದಿಯನ್ನೂ ಈವರೆಗೂ ಚಿತ್ರತಂಡದಿಂದ ಬಂದಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಬೇಸರವಾಗಿ ಈ ಮಾರ್ಗದ ಮೂಲಕ ಅಪ್ ಡೇಟ್ ಕೇಳುವ ಪ್ರಯತ್ನ ಮಾಡಿದ್ದಾರೆ.