Tag: ಸಂಜಯ್

  • ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡ ‘ಜಮಾನ’ ಸಿನಿಮಾದ ಜೆಪಿ

    ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡ ‘ಜಮಾನ’ ಸಿನಿಮಾದ ಜೆಪಿ

    ಚೇತನ್ ರಮೇಶ್ ನಿರ್ಮಾಣದ, ಬಿ.ಎಸ್ ಸಂಜಯ್ (Sanjay) ನಿರ್ದೇಶನದ, ವಿಭಿನ್ನ ಕಥಾಹಂದರ ಹೊಂದಿರುವ  ‘ದಿಗ್ದರ್ಶಕ’  (Digdarshaka) ಚಿತ್ರದ ಟೀಸರ್ (Teaser) ಇತ್ತೀಚಿಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.

    ಇದೊಂದು ನೈಜಘಟನೆ ಆಧಾರಿತ ಚಿತ್ರ. ಚಿತ್ರದ ನಾಯಕನಾಗಿ ಜೆ.ಪಿ(ಜಯಪ್ರಕಾಶ್) (Jayaprakash) ಅಭಿನಯಿಸಿದ್ದಾರೆ. ಈ ಹಿಂದೆ ನನ್ನ ನಿರ್ದೇಶನದ ‘ಜಮಾನ’ ಚಿತ್ರದಲ್ಲೂ ಜೆ‌.ಪಿ ಅವರೆ ನಾಯಕನಾಗಿ ಅಭಿನಯಿಸಿದ್ದರು. ಚೇತನ್ ರಮೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ‌. ನಾನೇ ಕಥೆ ಬರೆದು ಸಂಕಲನ ಕೂಡ ಮಾಡಿದ್ದೇನೆ. ದಿಗ್ದರ್ಶಕ ಎಂದರೆ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಮಾರ್ಗದರ್ಶನ ನೀಡುವಾತ. ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ‌.‌ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ.   ಆಕ್ಷನ್ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಜೆ‌.ಪಿ, ಪವನ್ ಶೆಟ್ಟಿ, ಅನನ್ಯ ಶುಭ ರಕ್ಷ, ಬಲ ರಾಜವಾಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ನಾನು ಕೂಡ ಪತ್ರಕರ್ತ. ಈ ಹಿಂದೆ ‘ಜಮಾನ’ ಚಿತ್ರದಲ್ಲಿ ನಟಿಸಿದ್ದೆ. ನಿರ್ದೇಶಕ ಸಂಜಯ್ ಅವರು ‘ದಿಗ್ದರ್ಶಕ’ ಚಿತ್ರದ ಕಥೆ ಹೇಳಿ, ಈ ಪಾತ್ರ ನೀವೇ ಮಾಡಬೇಕು ಎಂದರು. ‘ದಿಗ್ದರ್ಶಕ’ ಅಂದರೆ ದಿಕ್ಕುಗಳನ್ನು ತೋರಿಸುವವನು ಎಂದು. ನಿರ್ದೇಶಕರು ಈ ಚಿತ್ರದ ಕೊನೆಯಲ್ಲಿ ಉತ್ತಮ ಸಂದೇಶ ಸಹ ನೀಡಲಿದ್ದಾರೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ನಾಯಕ ಜೆ.ಪಿ ತಿಳಿಸಿದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    ನಾನು ರಾಜಕುಮಾರ್ ಅವರ ಮನೆಯಲ್ಲಿ ಬೆಳೆದವನು. ಶಿವರಾಜಕುಮಾರ್ ಅವರ ಜೊತೆ ಹತ್ತಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇ‌ನೆ. ನಿರ್ದೇಶಕ ಸಂಜಯ್ ಅವರು ಈ ಚಿತ್ರದ ಕಥೆ ಹೇಳಿದರು. ಇಷ್ಟವಾಯಿತು.‌ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಚೇತನ್ ರಮೇಶ್. ಚಿತ್ರದಲ್ಲಿ ಅಭಿನಯಿಸಿರುವ ಪವನ್ ಶೆಟ್ಟಿ, ಅನನ್ಯ ದೇ,‌ ಕಾರ್ಯಕಾರಿ ನಿರ್ಮಾಪಕ ರಮೇಶ್ ಗೌಡ, ಮಹೇಶ್ ತಲಕಾಡು, ರಾಜೀವ್,  ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೆನಪಿರಲಿ ಪ್ರೇಮ್ ನಟನೆಯ ಹೊಸ ಸಿನಿಮಾಗೆ ಮುಹೂರ್ತ

    ನೆನಪಿರಲಿ ಪ್ರೇಮ್ ನಟನೆಯ ಹೊಸ ಸಿನಿಮಾಗೆ ಮುಹೂರ್ತ

    ಜೂಟಾಟ, ಗುಬ್ಬಚ್ಚಿ ಸಿನಿಮಾ ನಿರ್ದೇಶಿಸಿರುವ ಅಥರ್ವ ಆರ್ಯ (Atharva Arya) ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಚಿತ್ರಕ್ಕೆ ನಿನ್ನೆಯಷ್ಟೇ ಮುಹೂರ್ತವಾಗಿದೆ. ಚಿತ್ರದಲ್ಲಿ ಸಂಜಯ್ (Sanjay) ಹಾಗೂ ಜೀವಿತ ವಸಿಷ್ಠ (Jivita Vasistha) ನಾಯಕ ನಾಯಕಿಯಾಗಿ ನಟಿಸುತ್ತಿದ್ದು, ನೆನಪಿರಲಿ ಪ್ರೇಮ್ (Nenapirali Prem) ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ಮುಹೂರ್ತ ಆಚರಿಸಿಕೊಂಡ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

    ತಬಲ ನಾಣಿ ಮಾತನಾಡಿ ಮೊದಲ ಬಾರಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಸಮಾನ ಮನಸ್ಕ ಸ್ನೇಹಿತರೆಲ್ಲರೂ ಸೇರಿ ಕೆ ಆರ್ ಎಸ್ ಪ್ರೊಡಕ್ಷನ್ಸ್ ಎಂಬ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ನೆನಪಿರಲಿ ಪ್ರೇಮ್ ಚಿತ್ರದ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ ಜೊತೆಗೆ ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಚಿತ್ರದ ಕಥೆ ಮತ್ತು ನಿರ್ದೇಶನವನ್ನು ಅಥರ್ವ ಆರ್ಯ ಮಾಡುತ್ತಿದ್ದು, ಸಂಭಾಷಣೆಯನ್ನು ನಾನು ಹಾಗೂ ಅಥರ್ವ ಆರ್ಯ ಬರೆದಿದ್ದೇವೆ. ಚಿತ್ರದಲ್ಲಿ ತಂದೆ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ 45ರಿಂದ 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ಸಿನಿಮಾ ಬಗ್ಗೆ ತಬಲ ನಾಣಿ ಮಾಹಿತಿ ಹಂಚಿಕೊಂಡ್ರು. ಇದನ್ನೂ ಓದಿ: ಸಾನ್ಯ ಅಯ್ಯರ್‌ ಬೆರಳಲ್ಲಿ ಶೆಟ್ಟಿ ವಧು ಧರಿಸುವ ರಿಂಗ್ ನೋಡಿ ಶಾಕ್‌ ಆದ ನೆಟ್ಟಿಗರು

    ನಟ ನೆನಪಿರಲಿ ಪ್ರೇಮ್ ಮಾತನಾಡಿ ತಬಲ ನಾಣಿ ಮತ್ತು ಸ್ನೇಹಿತರು ಕೆ ಆರ್ ಎಸ್ ಪ್ರೊಡಕ್ಷನ್ಸ್ ಮೂಲಕ ಮೊದಲ ಬಾರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ರೊಡಕ್ಷನ್ ಮೊದಲ ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಎನ್ನೋದು ಅವರ ಆಸೆ ಅದರಂತೆ ಹೊಸ ನಿರ್ದೇಶಕ, ನಟ, ನಟಿಗೆ ಅವಕಾಶ ನೀಡಿದ್ದಾರೆ. ನಾನೂ ಕೂಡ ಈ ಚಿತ್ರದಲ್ಲಿ ಒಂದು ಪಾತ್ರ ಮಾಡುತ್ತಿದ್ದೇನೆ. ಚಿತ್ರದ ಕಥೆ ಕೇಳಿ ತುಂಬಾ ಇಷ್ಟ ಆಯ್ತು. ಸಿನಿಮಾದಲ್ಲಿ ತುಂಬಾ ಚೆನ್ನಾಗಿರೋ ಟ್ವಿಸ್ಟ್ ಇದೆ. ನನ್ನ ಪಾತ್ರ ತುಂಬಾ ಇಂಟ್ರಸ್ಟಿಂಗ್ ಆಗಿದೆ ಯಾರಿಗೂ ಈ ಪಾತ್ರ ಬಿಟ್ಟುಕೊಡಬಾರದು ನಾನೇ ಮಾಡಬೇಕು ಎಂದು ಇಷ್ಟಪಟ್ಟು ಮಾಡುತ್ತಿರುವ ಪಾತ್ರವಿದು. ಹೊಸ ಕಲಾವಿದರು, ನಿರ್ದೇಶಕರಿಗೆ ಪ್ರೋತ್ಸಾಹ ನೀಡಿ ಎಂದು ನೆನಪಿರಲಿ ಪ್ರೇಮ್ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.

    ನಿರ್ದೇಶಕ ಅಥರ್ವ ಆರ್ಯ ಮಾತನಾಡಿ ತಬಲ ನಾಣಿ ಸರ್ ಜೊತೆ 12 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ತುಂಬಾ ದಿನಗಳಿಂದ ಸಿನಿಮಾ ಮಾಡಬೇಕು ಎಂದು ಇಬ್ಬರು ಪ್ಲ್ಯಾನ್ ಮಾಡುತ್ತಿದ್ವಿ. ಈಗ ಕಾಲ ಕೂಡಿ ಬಂದಿದೆ. ಇದು ಕಂಟೆಂಟ್ ಬೇಸ್ಡ್ ಸಿನಿಮಾ. ತಂದೆಯ ಮಹತ್ವ ಸಾರುವ ಸಿನಿಮಾ. ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ತಂದೆಗೆ ಬೆಲೆ ಸಿಗದೇ ಇದ್ದಾಗ, ಆತ ಕಡೆಗಣನೆಗೆ ಒಳಗಾದಾಗ ಆತ ಯಾವ ರೀತಿ ಸಫರ್ ಮಾಡುತ್ತಾನೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ. ತಬಲ ನಾಣಿ ತಂದೆ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಡಾನ್ಸರ್ ಆಗಿರುವ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ನೆನಪಿರಲಿ ಪ್ರೇಮ್ ಕೂಡ ಚಿತ್ರದ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ಸಿನಿಮಾದ ಟೈಟಲ್ ಬಗ್ಗೆ ಸದ್ಯದಲ್ಲೇ ಅಪ್ಡೇಟ್ ನೀಡಲಾಗುವುದು ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    ನಾಯಕ ನಟ ಸಂಜಯ್ ಮಾತನಾಡಿ ಈ ಚಿತ್ರದ ಪಾತ್ರ ಸಿಕ್ಕಿರೋದು ಲವ್ಲಿ ಸ್ಟಾರ್ ಪ್ರೇಮ್ ಅವರಿಂದ ಅವರಿಗೂ ಹಾಗೂ ತಬಲ ನಾಣಿ ಸರ್ ಗೆ ಧ್ಯನ್ಯವಾದಗಳು. ಒಂದು ಅದ್ಭುತ ಸಿನಿಮಾ. ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್. ಹೊಸಬರಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿ ಎಂದು ತಿಳಿಸಿದ್ರು. ಚಿತ್ರದ ನಾಯಕಿ ಜೀವಿತ ವಸಿಷ್ಠ ಮಾತನಾಡಿ ಕೆ ಆರ್ ಎಸ್ ಪ್ರೊಡಕ್ಷನ್ಸ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಒಂದೊಳ್ಳೆ ಕಾನ್ಸೆಪ್ಟ್ ಚಿತ್ರದಲ್ಲಿದೆ. ನನ್ನ ಪಾತ್ರ ತುಂಬಾ ಚೆನ್ನಾಗಿದೆ. ನಟನೆಗೆ ತುಂಬಾ ಅವಕಾಶವಿದೆ. ಅವಕಾಶ ನೀಡಿದ್ದಕ್ಕಾಗಿ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಧನ್ಯವಾದಗಳು ಎಂದು ತಿಳಿಸಿದ್ರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕನ್ನಡದ ನಟ ಪ್ರತಾಪ್ ನಾರಾಯಣ ಇದೀಗ ಪ್ರಗ್ನೆಂಟ್: ಹೊಸ ದುನಿಯಾದ ವಿಚಿತ್ರ ಸುದ್ದಿ

    ಕನ್ನಡದ ನಟ ಪ್ರತಾಪ್ ನಾರಾಯಣ ಇದೀಗ ಪ್ರಗ್ನೆಂಟ್: ಹೊಸ ದುನಿಯಾದ ವಿಚಿತ್ರ ಸುದ್ದಿ

    ಡೆಡ್ಲಿ 2 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ನಟ ಪ್ರತಾಪ್ ನಾರಾಯಣ್ ( Pratap Narayan) ಇದೀಗ ಅಚ್ಚರಿಯ ಸುದ್ದಿಯನ್ನು ನೀಡಿದ್ದಾರೆ. ಐ ಆ್ಯಮ್ ಪ್ರೆಗ್ನೆಂಟ್ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಪ್ರಗ್ನೆಂಟ್ ಎಂದು ಹೇಳಿರುವುದನ್ನು ಕೇಳಿದ್ದೇವೆ. ಆದರೆ, ಇದು ಗಂಡು ಮಕ್ಕಳ ಪ್ರಗ್ನೆಂಟ್ ವಿಷಯ ಎಂದು ಹೇಳುವ ಮೂಲಕ ಪ್ರತಾಪ್ ನಾರಾಯಣ್ ಅಚ್ಚರಿ ಮೂಡಿಸಿದ್ದಾರೆ.

    ಇದೇನಪ್ಪಾ ಪ್ರಗ್ನೆಂಟ್ (Pregnant) ವಿಷಯ ಎನ್ನುವುದಕ್ಕೆ ಅವರೇ ಉತ್ತರವನ್ನೂ ಕೊಟ್ಟಿದ್ದು, ಇದೀಗ ‘ಐ ಆ್ಯಮ್ ಪ್ರಗ್ನೆಂಟ್’ ಹೆಸರಿನ ಸಿನಿಮಾದಲ್ಲಿ ಅವರು ನಟಿಸಿದ್ದು, ಈ ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಗರ್ಭಿಣಿ ಆಗುತ್ತಾರೆ. ಹುಡುಗನಾದರೆ ಹೇಗಿರುತ್ತದೆ ಎನ್ನುವುದೇ ಸಿನಿಮಾದ ಕಥೆಯಂತೆ. ಹಾಗಾಗಿ ಇದೊಂದು ವಿಭಿನ್ನ ಪಾತ್ರ ಮತ್ತು ಸಿನಿಮಾವಾಗಿದ್ದರಿಂದ ಪಾತ್ರ ಒಪ್ಪಿಕೊಂಡೆ ಎನ್ನುತ್ತಾರೆ ಪ್ರತಾಪ್. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಈ ರೀತಿಯ ಸಿನಿಮಾ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು. ಹಾಗಾಗಿ ಹೆಸರು ಕೇಳಿದಾಕ್ಷಣ ಕುತೂಹಲ ಮೂಡುವುದಂತೂ ಸಹಜ. ಇವರು ಮೊದಲ ಬಾರಿಗೆ ಈ ಸಿನಿಮಾದ ಕಥೆ ಕೇಳಿದಾಗ, ಹಾಗೆಯೇ ಥ್ರಿಲ್ ಆದರಂತೆ. ಹಾಗಾಗಿಯೇ ಪಾತ್ರವನ್ನೂ ಒಪ್ಪಿಕೊಂಡಿದ್ದಾರೆ. ಸಂಜಯ್ (Sanjay) ಎನ್ನುವವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಅರ್ಪಿತಾ ಗೌಡ (Arpita Gowda), ಪ್ರಿಯಾಂಕಾ ಸುರೇಶ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಸಿನಿಮಾದ ಬಗ್ಗೆ ಹೇಳೋಕೆ ಸಾಕಿಷ್ಟಿದೆ. ಅದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುವುದು ಪ್ರತಾಪ್ ಮಾತು.

    Live Tv
    [brid partner=56869869 player=32851 video=960834 autoplay=true]

  • ಕಾಲಿವುಡ್‌ಗೆ ದಳಪತಿ ವಿಜಯ್ ಪುತ್ರನ ಎಂಟ್ರಿ!

    ಕಾಲಿವುಡ್‌ಗೆ ದಳಪತಿ ವಿಜಯ್ ಪುತ್ರನ ಎಂಟ್ರಿ!

    ಕಾಲಿವುಡ್‌ನ ಸೂಪರ್ ಸ್ಟಾರ್ ಆಗಿ ಮಿರ ಮಿರ ಅಂತಾ ಮಿಂಚ್ತಿರೋ ಖ್ಯಾತ ನಟ ದಳಪತಿ ವಿಜಯ್ ನಟನೆಯ `ಬೀಸ್ಟ್’ ಚಿತ್ರ ರಿಲೀಸ್ ಆಗಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ತಿದೆ. ಇದರ ಮಧ್ಯೆ ಹೊಸ ವಿಚಾರವೊಂದು ಸಿನಿಗಲ್ಲಿಯಲ್ಲಿ ಸೌಂಡ್ ಮಾಡ್ತಿದೆ. ಸೂಪರ್‌ಸ್ಟಾರ್ ದಳಪತಿ ವಿಜಯ್ ಪುತ್ರ ಸಂಜಯ್ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

    ತಮಿಳು ಚಿತ್ರರಂಗದಲ್ಲಿ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ನಾನಾ ಪಾತ್ರಗಳ ರಂಜಿಸಿ ಸೈ ಎನಿಸಿಕೊಂಡಿದ್ದಾರೆ. `ಬೀಸ್ಟ್’ ಚಿತ್ರದ ಕುರಿತು ಸಿಕ್ಕಾಪಟ್ಟೆ ಸುದ್ದಿಯಲ್ಲಿರಬೇಕಾದ್ರೆ, ದಳಪತಿ ವಿಜಯ್ ಮಗ ಸಂಜಯ್, ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದರ ಕುರಿತು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಈ ವಿಷ್ಯವಾಗಿ ದಳಪತಿ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಇಂಡಸ್ಟ್ರಿಗೆ ವಿಜಯ್ ಮಗನ ಎಂಟ್ರಿಯಾಗುತ್ತೆ ಅಂತಾ ಭಾರೀ ಚರ್ಚೆ ಆಗ್ತಿತ್ತು. ಅದಕ್ಕೆ ಪೂರಕವೆನ್ನುವಂತೆ ಸಾಕಷ್ಟು ಕಥೆಗಳು ವಿಜಯ್ ಪುತ್ರ ಸಂಜಯ್‌ರನ್ನ ಅರಸಿ ಬಂದಿತ್ತು. `ಪ್ರೇಮಂ’ ನಿರ್ದೇಶಕ ಅಲ್ಫೋನ್ಸ್ ಪುತ್ರೇನ್ ಒಮ್ಮೆ ವಿಜಯ್‌ರನ್ನ ಸಂಪರ್ಕಿಸಿ ಕಥೆ ಹೇಳಾಗಿತ್ತಂತೆ, ಕಥೆ ಕೇಳಿ ಇಷ್ಟಪಟ್ಟಿದ್ರಂತೆ ವಿಜಯ್, ಆದರೆ ಆ ಕಥೆಯನ್ನ ಸಂಜಯ್‌ಗಾಗಿ ಸಿದ್ಧಪಡಿಸಿದ್ರಂತೆ.

    ನಂತರ ಸಂಜಯ್ ಚಿತ್ರರಂಗಕ್ಕೆ ಬರೋದಕ್ಕೆ ಸ್ವಲ್ವ ಸಮಯ ಬೇಕು ಅಂತಾ ನಿರ್ದೇಶಕ ಅಲ್ಫೋನ್ಸ್ಗೆ ತಿಳಿಸಿದ್ರಂತೆ. ಚಿತ್ರರಂಗಕ್ಕೆ ಬರೋದು ಸಂಜಯ್‌ಗೆ ಬಿಟ್ಟಿದ್ದು, ಪುತ್ರ ಸಂಜಯ್‌ಗೆ ಯಾವ ಕ್ಷೇತ್ರದಲ್ಲಿ ಬೆಳೆಯಲು ಇಷ್ಟವೋ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ `ಪ್ರೇಮಂ’ ನಿರ್ದೇಶಕ ಅಲ್ಫೋನ್ಸ್ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಕೆಜಿಎಫ್ 2 ಚಿತ್ರಕ್ಕೆ ಪೈರಸಿ ಶಾಕ್

    ಇನ್ನು ಪುತ್ರ ವಿಜಯ್ ಕೂಡ ಒಂದೊಳ್ಳೆ ಗಟ್ಟಿ ಕಥೆಯ ಮೂಲಕ ಕಾಲಿವುಡ್ ರಂಗಕ್ಕೆ ಬರಲು ತೆರೆಮರೆಯಲ್ಲಿ ಸಿಧ್ಧತೆ ನಡೆಸುತ್ತಿದ್ದಾರೆ. ಒಂದೊಳ್ಳೆ ಪಾತ್ರದ ಮೂಲಕ ಸಂಜಯ್ ಸ್ಕ್ರೀನ್‌ಗೆ ಶೇರ್ ಮಾಡೋದು ಗ್ಯಾರೆಂಟಿ. ಒಟ್ನಲ್ಲಿ ಈ ಶುಭ ಸುದ್ದಿ ಕೇಳಿ ದಳಪತಿ ವಿಜಯ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

  • ಕಸದಿಂದ ರಸ-ಮೊಟ್ಟೆ ಮೇಲೆ ವರ್ಣರಂಜಿತ ಚಿತ್ರ ಬಿಡಿಸಿದ ಬಾಲಕ

    ಕಸದಿಂದ ರಸ-ಮೊಟ್ಟೆ ಮೇಲೆ ವರ್ಣರಂಜಿತ ಚಿತ್ರ ಬಿಡಿಸಿದ ಬಾಲಕ

    ಚೆನ್ನೈ: ಲಾಕ್‍ಡೌನ್‍ನಲ್ಲಿ ಮನೆಯಲ್ಲಿ ಕೂತು ಬೇಸರವಾಗಿರುವ ಬಾಲಕನೊಬ್ಬ ತನ್ನದೇ ಅಗಿರುವ ವಿಶಿಷ್ಟ ಶೈಲಿಯಲ್ಲಿ ಕಲೆಯನ್ನು ಪ್ರದರ್ಶನ ಮಾಡುವ ಮೂಲಕವಾಗಿ ಎಲ್ಲರ ಗಮನ ಸೆಳೆದಿದ್ದಾನೆ. ಇದನ್ನೂ ಓದಿ: ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಬ್ರೆಸ್ಲೆಟ್‍ಗಳು

    ಸಂಜಯ್ ಭಿತ್ತಿ ಚಿತ್ರದಂತೆ ಈತ ಮೊಟ್ಟೆಯ ಮೇಲೆ ವರ್ಣರಂಜಿತವಾದ ಬಣ್ಣಗಳನ್ನು ಬಳಸಿಕೊಂಡು ಚಿತ್ರವನ್ನು ಬಿಡಿಸುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾನೆ. ತಮಿಳುನಾಡಿನ ಕೊಯಮತ್ತೂರಿನ ಸಂಜಯ್ ಕಲೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

    ಮೊಟ್ಟೆಯನ್ನು ಬಳಸಿದ ಬಳಿಕ ಅದರ ಚಿಪ್ಪನ್ನು ಎಸೆಯದೇ ಸಂಗ್ರಹಿಸಿಟ್ಟು ಅದರ ಮೇಲೆ ಕಾರ್ಟೂನ್ ಮತ್ತಿತರ ಕಲಾಕೃತಿಗಳನ್ನು ಬಿಡಿಸಿದ್ದಾನೆ. ತಮಿಳುನಾಡಿನ ಕೊಯಮತ್ತೂರಿನ ಬಾಲಕನ ಈ ಕಾಲಕೃತಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಂಜಯ್ ಲಾಕ್‍ಡೌನ್ ಸಂದರ್ಭದಲ್ಲಿ ಬಿಡುವಿನ ಸಮಯವನ್ನು ಹೀಗೆ ಚಿತ್ರವನ್ನು ಬಿಡಿಸುತ್ತ ಕಾಲಕಳೆದಿದ್ದಾನೆ. ಇದನ್ನೂ ಓದಿ: ನರ್ಸ್ ಬದಲು ತಾನೇ ಲಸಿಕೆ ಕೊಟ್ಟ ಕೌನ್ಸಿಲರ್

    ನೂರಾರು ಮೊಟ್ಟೆಗಳನ್ನು ಬಳಸಿಕೊಂಡು ಚಿತ್ರವನ್ನು ಬಿಡಿಸಿದ್ದೇನೆ. ಕೊರೊನ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಕುಳಿತು ಬೇಸರವಾಗುತ್ತಿತ್ತು. ಅದನ್ನು ಹೋಗಲಡಿಸಲೇಂದು ಇವನ್ನೆಲ್ಲ ಮಾಡಿದೆ. ನಾನು ಮೊಟ್ಟೆಯನ್ನು ತಿನ್ನುತ್ತಿದ್ದೇನು. ಆದರೆ ಅದ ಚಿಪ್ಪನ್ನು ಎಸೆಯುತ್ತಿರಲಿಲ್ಲ. ಅವುಗಳನ್ನು ಸಂಗ್ರಹಿಸಿಟ್ಟು ಚಿತ್ರವನ್ನು ಬಿಡಿಸಿದ್ದೇನೆ. ಹೀಗೆ ನೂರಕ್ಕೂ ಅಧಿಕ ಮೊಟ್ಟೆ ಚಿಪ್ಪುಗಳ ಮೇಲೆ ಚಿತ್ರ ಬಿಡಿಸಿದ್ದೇನೆ ಎಂದು ಸಂಜಯ್ ಹೇಳಿದ್ದಾನೆ.