Tag: ಸಂಜನಾ ಗಲ್ರಾಣಿ

  • ತಟ್ಟೆಯಲ್ಲಿ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜಿ ಕೊಕೇನ್ ಸೇವಿಸಿದ್ದ ರಾಗಿಣಿ

    ತಟ್ಟೆಯಲ್ಲಿ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜಿ ಕೊಕೇನ್ ಸೇವಿಸಿದ್ದ ರಾಗಿಣಿ

    ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾಣಿ ಡ್ರಗ್ಸ್ ಸೇವನೆ ಮಾಡುತ್ತಿರುವುದು ದೃಢಪಟ್ಟಿದ್ದು, ಇದೀಗ ಇಬ್ಬರಿಗೂ ಮತ್ತೆ ಸಂಕಷ್ಟ ಎದುರಾಗಿದೆ.

    ತಲೆ ಕೂದಲು ಮಾದರಿ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದಿದ್ದು ದೃಢಪಟ್ಟಿದೆ. ಬರೋಬ್ಬರಿ 10 ತಿಂಗಳ ಬಳಿಕ ಎಫ್‍ಎಸ್‍ಎಲ್ ವರದಿ ಸಿಸಿಬಿ ಕೈ ಸೇರಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜೈಲುವಾಸ ಅನುಭವಿಸಿರುವ ನಟಿಯರು ಮತ್ತೆ ಲಾಕ್ ಆಗುವ ಸಾಧ್ಯತೆಗಳು ದಟ್ಟವಾಗಿವೆ.

    ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್‍ಗೆ ಸಿಸಿಬಿ ಪೊಲೀಸರು 145 ಪುಟಗಳ ಆರೋಪಪಟ್ಟಿಯನ್ನು ಈಗಾಗಲೇ ಸಲ್ಲಿಕೆ ಮಾಡಿದ್ದಾರೆ. ರಾಗಿಣಿ ಮೂಗಿನಲ್ಲಿ ಕೋಕೇನ್ ಸೇವಿಸುತ್ತಿದ್ದರು. ಇಂತಹ ಮಾದಕ ಪಾರ್ಟಿಗಳು ಫ್ಯಾಷನ್ ಶೋನಲ್ಲೂ ನಡೆಯುತ್ತಿತ್ತು. ರಾಗಿಣಿ ಎಟಿಎಂ ಕಾರ್ಡ್, ನೋಟ್ ಮೂಲಕ ನಶೆ ಏರಿಸಿಕೊಳ್ಳುತ್ತಿದ್ದರು ಎಂಬುದು ಆರೋಪಪಟ್ಟಿಯಲ್ಲಿ ಅನಾವರಣವಾಗಿದೆ.

    ರಾಗಿಣಿಯವರು ತಟ್ಟೆಯಲ್ಲಿ ಕೊಕೇನ್ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜುತ್ತಿದ್ದರು. ಬಳಿಕ ಆ ಕೊಕೇನ್ ಪೌಡರ್ ಅನ್ನು 2 ಲೇನ್ ಆಗಿ ಮಾಡಿ ನಂತರ ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ನೋಟಿನ ಮೂಲಕ ಮೂಗಿಗೆ ಕೊಕೇನ್ ಪೌಡರ್ ಇಳಿಸಿಕೊಳ್ಳುತ್ತಿದ್ದರು ಎಂಬುದಾಗಿ ಕೋರ್ಟ್‍ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಸಿಬಿ ದೋಷಾರೋಪಣೆ ಮಾಡಿದೆ. ಇದನ್ನೂ ಓದಿ: ರಾಜೀನಾಮೆ ಸಂದೇಶ ರವಾನಿಸಿದ ಸಚಿವ ಆನಂದ್ ಸಿಂಗ್?

    ಹೈದರಾಬಾದ್ ಎಫ್‍ಎಸ್‍ಎಲ್ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ

  • ಕಳೆದ ಲಾಕ್‍ಡೌನ್‍ನಲ್ಲಿ ನನ್ನ ಮದುವೆಯಾಯ್ತು: ಸಂಜನಾ ಗಲ್ರಾಣಿ

    ಕಳೆದ ಲಾಕ್‍ಡೌನ್‍ನಲ್ಲಿ ನನ್ನ ಮದುವೆಯಾಯ್ತು: ಸಂಜನಾ ಗಲ್ರಾಣಿ

    – ಭಗವಂತ ಶಕ್ತಿ ಕೊಟ್ರೆ ಕನ್ನಡ ಇಂಡಸ್ಟ್ರಿಯೇ ಮೊದಲ ಆದ್ಯತೆ

    ಬೆಂಗಳೂರು: ಡ್ರಗ್ಸ್ ಆರೋಪದ ಮೇಲೆ ಬಂಧಿತರಾಗಿದ್ದ ಸಂದರ್ಭದಲ್ಲಿ ನಟಿ ಗಲ್ರಾಣಿ ಮದುವೆ ವಿಚಾರ ಭಾರೀ ಸುದ್ದಿ ಮಾಡಿತ್ತು. ಆದರೆ ನಟಿ ಮಾತ್ರ ತಮ್ಮ ಮದುವೆ ವಿಚಾರವನ್ನು ಅಲ್ಲಗೆಳೆದಿದ್ದರು. ಇದೀಗ ತಾನು ಮದುವೆಯಾಗಿದ್ದೇನೆ ಎಂಬ ಸತ್ಯ ಬಾಯ್ಬಿಟ್ಟಿದ್ದಾರೆ.

    ಹೌದು. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ನಟಿ ಲೈಟ್ ಮೆನ್ ಸಂಘ ಮತ್ತು ಪ್ರೊಡಕ್ಷನ್ ಯೂನಿಟ್ ನ ಸದಸ್ಯರಿಗೆ ರೇಶನ್ ಕಿಟ್ ವಿತರಣೆ ಮಾಡಿದರು. ಈ ವೇಳೆ ಮಾತನಾಡುತ್ತಾ ತಮ್ಮ ಮದುವೆ ವಿಚಾರ ಬಿಚ್ಚಿಟ್ಟರು. ಕಳೆದ ಲಾಕ್ ಡೌನ್ ನಲ್ಲಿ ನನ್ನ ಮದುವೆಯಾಯ್ತು. ನಾನಾ ಕಾರಣಗಳಿಂದ ಮದುವೆ ಸಂಭ್ರಮವನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಕೆ ಆಗಲಿಲ್ಲ. ದೊಡ್ಡದಾಗಿ ಸೆಲೆಬ್ರೇಷನ್ ಮಾಡಬೇಕು ಅನ್ಕೊಂಡಿದ್ದೆ ಎಂದರು.

    ಚಿತ್ರರಂಗದ ಅಣ್ಣ-ತಮ್ಮಂದಿರಿಗೆ ಊಟ ಹಾಕಿಸೋಕೆ ಆಗಲಿಲ್ಲ ಅನ್ನೋ ಕೊರಗಿದೆ. ಆದರೆ ಪ್ಯಾಂಡಮಿಕ್ ಕಾಲದಲ್ಲಿ ಕುಟುಂಬದ ಜೊತೆ ಚರ್ಚಿಸಿ ಕೈಲಾದ ಸಹಾಯ ಮಾಡೋಕೆ ನಿರ್ಧರಿಸಿದ್ದೇವೆ. ಸಂಜನಾ ಗಲ್ರಾಣಿ ಫೌಂಡೇಷನ್ ವತಿಯಿಂದ ಕೈಲಾದ ಸಹಾಯ ಮಾಡ್ತಿದ್ದೀವಿ. ಎಲ್ಲರಿಗೂ ಕಿಟ್ ಕೊಡಲು ಆಗಲಿಲ್ಲ. ಭಗವಂತ ಶಕ್ತಿ ಕೊಟ್ರೆ ಕನ್ನಡ ಇಂಡಸ್ಟ್ರಿಯೇ ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

    ಬಯಲಾಗಿದ್ದ ಮದುವೆ ವಿಚಾರ:
    ನಟಿ ಸಂಜನಾರನ್ನು ಪೊಲೀಸರು ಬಂಧಿಸಿದ್ದ ಸಂದರ್ಭದಲ್ಲಿ ಅವರ ಡ್ರಗ್ಸ್ ನಂಟಿನ ಜೊತೆ ಮದುವೆ ವಿಚಾರವೂ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಂಧನವಾಗುವ ಒಂದು ದಿನಕ್ಕೂ ಮೊದಲು ಬಾರಿ ನನಗಿನ್ನೂ ಮದುವೆಯಾಗಿಲ್ಲ. ನಾನು ಹುಡುಗಿ. ನನ್ನ ಬಗ್ಗೆ ಸುಳ್ಳು ವರದಿ ಮಾಡಬೇಡಿ ಎಂದು ಹೇಳಿ ಮದುವೆ ಸುದ್ದಿಗೆ ಬ್ರೇಕ್ ಹಾಕಿ ನುಣುಚಿಕೊಳ್ಳಲು ಸಂಜನಾ ಪ್ರಯತ್ನಿಸಿದ್ದರು.  ಇದನ್ನೂ ಓದಿ: ಇಬ್ಬರ ಜೊತೆ ಬಂದು ಸಂಜನಾ ಮತಾಂತರ: ಮೌಲ್ವಿ ಮಹಮ್ಮದ್ ಜಲಾಲುದ್ದಿನ್

    ಮಾಧ್ಯಮಗಳ ಎದುರು ತನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಬೇಡಿ ಎಂದು ಕಣ್ಣೀರಿಟ್ಟಿದ್ದರು. ಆದರೆ ಒಂದು ವರ್ಷದ ಹಿಂದೆಯೇ ನಟಿ ಸಂಜನಾಗೆ ಮದುವೆ ಆಗಿದೆ ಎಂಬ ಸುದ್ದಿ ಈಗ ಹರಿದಾಡಲು ಆರಂಭವಾಗಿತ್ತು. ನಟಿ ಸಂಜನಾ ಒಂದು ವರ್ಷದ ಹಿಂದೆಯೇ ಮುಸ್ಲಿಂ ಸಂಪ್ರದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪೂರಕ ಎಂಬಂತೆ ಮದುವೆಯ ಫೋಟೋ ಕೂಡ ವೈರಲ್ ಆಗಿತ್ತು. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಆಗಾಗ ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಬರುತ್ತಿದ್ದರು. ಮದುವೆಯ ಬಳಿಕ ಒಂದು ವರ್ಷದಿಂದ ಗಂಡನ ಜೊತೆಗೆ ಸಂಜನಾ ಇದ್ದರು. ಅಲ್ಲದೇ ಸಂಜನಾ ಮಾಡುತ್ತಿದ್ದ ಪಾರ್ಟಿಗಳಲ್ಲಿ ಅಜೀಜ್ ಪಾಷ ಭಾಗಿಯಾಗುತ್ತಿದ್ದರು ಎನ್ನಲಾಗಿತ್ತು.  ಇದನ್ನೂ ಓದಿ: ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?

    ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಸೆ.8 ರಂದು ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ದಾಳಿದ್ದರು. ಈ ವೇಳೆ ಸಂಜನಾ ನಟಿ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಅದೇ ಅಪಾರ್ಟ್ ಮೆಂಟ್ ಅಲ್ಲಿ ಡಾಕ್ಟರ್ ವಾಸಿಸುತ್ತಿದ್ದು, ಆತನ ಜೊತೆ ಸಂಜನಾ ಸ್ನೇಹ ಇಟ್ಟುಕೊಂಡಿದ್ದಾರೆ ಎಂದು ತಿಳಿದಿತ್ತು. ಅಲ್ಲದೇ ಅವರಿಬ್ಬರು ಅಮೆರಿಕಾಗೆ ಹೋಗಿ ಮದುವೆ ಆಗಿದ್ದಾರೆ ಎಂದು ಗುಮಾನಿ ಸಹ ಕೇಳಿ ಬಂದಿತ್ತು.

  • ಡ್ರಗ್ಸ್ ಕೇಸ್‍ನಲ್ಲಿ ಕನ್ನಡದ ಮೊದಲ ನಟಿ ಜೈಲಿಗೆ – ಕೋರ್ಟಿನಲ್ಲಿ ಇಂದು ಏನೇನಾಯ್ತು?

    ಡ್ರಗ್ಸ್ ಕೇಸ್‍ನಲ್ಲಿ ಕನ್ನಡದ ಮೊದಲ ನಟಿ ಜೈಲಿಗೆ – ಕೋರ್ಟಿನಲ್ಲಿ ಇಂದು ಏನೇನಾಯ್ತು?

    ಬೆಂಗಳೂರು: ಸ್ಯಾಂಡಲ್‍ವುಡ್ ಪಾಲಿಗೆ ಇಂದು ಬ್ಲಾಕ್ ಮಂಡೇ ಅಂತಾನೇ ಹೇಳಬಹುದು. ಡ್ರಗ್ಸ್ ಕೇಸ್‍ನಲ್ಲಿ ಇದೇ ಮೊದಲ ಬಾರಿಗೆ ನಟಿಯೊಬ್ಬರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನಟಿ ರಾಗಿಣಿ ಸೇರಿ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

    ಕಳೆದ 12 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿ ಇದ್ದ ನಟಿ ರಾಗಿಣಿ ಮುಂದಿನ 14ದಿನ ಅಂದ್ರೆ ಸೆಪ್ಟೆಂಬರ್ 28ರವರೆಗೆ ಪರಪ್ಪನ ಅಗ್ರಹಾರ ಜೈಲಲ್ಲಿ ಇರಲಿದ್ದಾರೆ. ಸಿಸಿಬಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ಕೇಳದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ರಾಗಿಣಿ ಸೇರಿ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ರು. ಸಂಜೆ 7 ಗಂಟೆ ಹೊತ್ತಿಗೆ ನಟಿ ರಾಗಿಣಿ ಸೇರಿ ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

    ಈಗ ಜೈಲಿನಲ್ಲಿರುವ ಮಹಿಳಾ ಕ್ವಾರಂಟೇನ್ ಸೆಲ್‍ನಲ್ಲಿ ರಾಗಿಣಿಯನ್ನು ಇರಿಸಲಾಗಿದ್ದು, ಪಲ್ಯ, ಚಪಾತಿ, ಅನ್ನ ಸಾಂಬರ್ ಊಟ ನೀಡಲಾಗಿದೆ. 6604 ವಿಚಾರಣಾಧೀನ ಕೈದಿ ನಂಬರನ್ನು ರಾಗಿಣಿಗೆ ನೀಡಲಾಗಿದೆ. ಆರ್‍ಟಿ-ಪಿಸಿಆರ್ ಟೆಸ್ಟ್ ಫಲಿತಾಂಶ ಬಂದ ಬಳಿಕ ಬ್ಯಾರಕ್‍ಗೆ ಕಳಿಸಲಾಗುತ್ತದೆ. ಇದಕ್ಕೂ ಮುನ್ನ ಎಫ್‍ಎಸ್‍ಎಲ್ ಕೇಂದ್ರದ ಬಳಿ ಪೊಲೀಸ್ ವಾಹನ ಹತ್ತುವ ಮುನ್ನ ನಟಿ ರಾಗಿಣಿ ಕಣ್ಣೀರು ಇಟ್ಟರು. ಅಲ್ಲದೆ ಮಾಧ್ಯಮಗಳನ್ನು ಕಂಡು ಕೈಮುಗಿದ್ರು.

    ಜೈಲಿಗೆ ಹೊರಟಿದ್ದ ರಾಗಿಣಿಗೆ ನಟಿ ಸಂಜನಾ ಧೈರ್ಯ ತುಂಬಿ ಕಳಿಸಿಕೊಟ್ರು. ನಟಿ ಸಂಜನಾ ಸೇರಿ ಮೂವರು ಆರೋಪಿಗಳನ್ನು ಮತ್ತೆರಡು ದಿನ ಸಿಸಿಬಿ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಹೆಚ್ಚಿನ ವಿಚಾರಣೆ ಅಗತ್ಯದ ಇದೆ ಎಂದು ಸಿಸಿಬಿ ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ನಟಿ ಸಂಜನಾ ಸೇರಿ ಮೂವರನ್ನು ಸೆಪ್ಟೆಂಬರ್ 16ರವರೆಗೆ ಸಿಸಿಬಿ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ.

    ರಾಗಿಣಿ ಪರಪ್ಪನ ಅಗ್ರಹಾರ ಸೇರಿದ್ರೆ, ನಟಿ ಸಂಜನಾ ಮತ್ತೆ ಸಾಂತ್ವನ ಕೇಂದ್ರ ಸೇರಿದ್ದಾರೆ. ಇನ್ನು ರಾಗಿಣಿ ಸೇರಿ ಐವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಬುಧವಾರಕ್ಕೆ ಹೋಗಿದೆ. ನಾಳೆ ಅಥವಾ ನಾಡಿದ್ದರಲ್ಲಿ ಇಡಿ ಅಧಿಕಾರಿಗಳು ಸಹ ವಿಚಾರಣೆಗೆ ಮುಂದಾಗುವ ಸಾಧ್ಯತೆ ಇದೆ.

    ಡ್ರಗ್ಸ್ ಕೇಸಿನ ಎ2 ಆರೋಪಿ ನಟಿ ರಾಗಿಣಿ ದ್ವಿವೇದಿ, ಎ4 ಆರೋಪಿ ಡ್ರಗ್ ಪೆಡ್ಲರ್ ಪ್ರಶಾಂತ್ ರಾಂಕಾ, ಎ7 ಆರೋಪಿ ಲೂಮ್ ಪೆಪ್ಪರ್, ಎ11 ಆರೋಪಿ ರಾಹುಲ್ ಶೆಟ್ಟಿ, ಎ13 ಆರೋಪಿ ನಿಯಾಜ್ ಜೈಲು ಪಾಲಾದವರು. ಇನ್ನು ಎ14 ಆರೋಪಿ ನಟಿ ಸಂಜನಾ ಗಲ್ರಾಣಿ, ಎ3 ಆರೋಪಿ ಡ್ರಗ್ ಪೆಡ್ಲರ್ ಶಂಕೆಯಿರುವ ವೀರೇನ್ ಖನ್ನಾ ಹಾಗೂ ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ಕಸ್ಟಡಿಯಲ್ಲಿದ್ದಾರೆ.

    ನಟಿ ರಾಗಿಣಿ ಪರ ವಕೀಲರು ಅವರು ಜಡ್ಜ್ ಮುಂದೆ ನನಗೆ ಅಸ್ತಮಾ, ಬಿಪಿ ಇದೆ. ಆಪರೇಷನ್ ಕೂಡ ಆಗಿದೆ. ಪ್ರೈವೇಟ್ ಹಾಸ್ಪಿಟಲ್‍ನಲ್ಲಿ ಚೆಕಪ್ ಮಾಡಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು. ಈ ವೇಳೆ ಆರೋಪಿಗೆ ಜೈಲು ಹಾಸ್ಪಿಟಲ್‍ನಲ್ಲಿ ಟ್ರೀಟ್‍ಮೆಂಟ್ ಕೊಡಿಸಿ ಎಂದು ಜಡ್ಜ್ ಹೇಳಿದ್ದಾರೆ.

    ಸಂಜನಾ ಮತ್ತು ಇತರೆ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿದಾಗ ನಟಿ ಸಂಜನಾ ವಿಚಾರಣೆಗೆ ಸಹಕರಿಸುತ್ತಿಲ್ಲ. ಮೊಬೈಲ್ ಸಿಮ್ ಕೊಡದೇ ಆಟವಾಡ್ತಿದ್ದಾರೆ. ಸಾಕಷ್ಟು ತನಿಖೆ ಅಗತ್ಯತೆ ಇದೆ ಎಂದು ಸಿಸಿಬಿ ವಾದ ಮಾಡಿದೆ. ಅಲ್ಲದೆ ರವಿಶಂಕರ್ ಮತ್ತಷ್ಟು ವಿಚಾರಣೆ ಅಗತ್ಯವಿದೆ. ವೀರೇನ್ ಖನ್ನಾ ವಿಚಾರಣೆಗೆ ಸ್ಪಂದಿಸ್ತಿಲ್ಲ. ಆರು ಮೇಲ್ ಐಡಿ, ಪಾಸ್‍ವರ್ಡ್‍ಗಳ ಮಾಹಿತಿ ನೀಡುತ್ತಿಲ್ಲ. ವೀರೇನ್ ಖನ್ನಾ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಸಿಸಿಬಿ ಹೇಳಿದೆ. ಈ ಹಿನ್ನೆಲೆಯಲ್ಲಿ ಮೂವರನ್ನು ಸೆ.16ರವರೆಗೆ ಸಿಸಿಬಿ ಕಸ್ಟಡಿಗೆ ಕೋರ್ಟ್ ನೀಡಿದೆ.

  • ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

    ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

    ಬೆಂಗಳೂರು: ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಆಪ್ತ ರವಿ ಶಂಕರ್ ಬಳಿಕ ಮತ್ತೊಬ್ಬ ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿಡಿಯೋ ಸಾಕ್ಷ್ಯ ಸೇರಿ ಹಲವು ಪ್ರಮುಖ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

    ಈ ಮೂಲಕ ಸಿಸಿಬಿ ಪೊಲೀಸರು ನಟಿ ರಾಗಿಣಿ ಆಪ್ತ ರವಿಶಂಕರ್ ಹಾಗೂ ಸಂಜನಾ ಗಲ್ರಾನಿ ಆಪ್ತ ರಾಹುಲ್‍ನನ್ನು ವಶಕ್ಕೆ ಪಡೆದಂತಾಗಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಮಧ್ಯಾಹ್ನದ ವೇಳೆಗೆ ಹೆಚ್ಚಿನ ಬೆಳವಣಿಗೆಯಾಗುವ ಸಾಧ್ಯತೆ ಇದೆ. ಕಾರಿನ ಸಮೇತ ರಾತ್ರಿ ರಾಹುಲ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಮೂಲಕ ಸೆಲೆಬ್ರಿಟಿಗಳ ಪಾರ್ಟಿಗೆ ಡ್ರಗ್ ಸಪ್ಲೈ ಮಾಡುತಿದ್ದನಾ ರಾಹುಲ್ ಎಂಬ ಪ್ರಶ್ನೆ ಇದೀಗ ಮೂಡಿದೆ. ರಾಹುಲ್ ಡ್ರಗ್ ಪೆಡ್ಲರ್ ಆಗಿರುವ ಶಂಕೆ ಹಿನ್ನೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿಯೇ ರಾಹುಲ್ ನನ್ನು ಸಿಸಿಬಿ ಕಚೇರಿಗೆ ಕರೆತರಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ರವಿ ಶಂಕರ್‍ನನ್ನು ವಶಕ್ಕೆ ಪಡೆಯುತ್ತಿದ್ದಂತೆ ನಟಿ ರಾಗಿಣಿ ವಕೀಲರ ಮೊರೆ ಹೋಗಿದ್ದು, ವಿಚಾರಣೆ ಎದುರಿಸುವ ಕುರಿತು ಸಲಹೆಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತ ರಾಹುಲ್ ಪೊಲೀಸರ ಬಲೆಗೆ ಬೀಳುತ್ತಿದ್ದಂತೆ ಸಂಜನಾ ಗಲ್ರಾನಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈವರೆಗೆ ಅವರು ಎಲ್ಲಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆಯಬಹುದು ಎಂಬ ಉದ್ದೇಶದಿಂದ ಸಂಜನಾ ಅಜ್ಞಾತ ಸ್ಥಳದಲ್ಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

  • ಗಲಾಟೆಯಾಗಿಲ್ಲ, ಸಾಕ್ಷಿಗೆ ನನ್ನ ಬಳಿ ವಿಡಿಯೋ ಇದೆ: ಸಂಜನಾ ಸ್ಪಷ್ಟನೆ

    ಗಲಾಟೆಯಾಗಿಲ್ಲ, ಸಾಕ್ಷಿಗೆ ನನ್ನ ಬಳಿ ವಿಡಿಯೋ ಇದೆ: ಸಂಜನಾ ಸ್ಪಷ್ಟನೆ

    – ನನಗೆ ಇಂತಹ ಕೆಟ್ಟ ಪಬ್ಲಿಸಿಟಿ ಬೇಡ

    ಬೆಂಗಳೂರು: ನಗರದ ಸ್ಟಾರ್ ಹೋಟೆಲ್‍ನಲ್ಲಿ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಜೊತೆಗೆ ನಡೆದ ಗಲಾಟೆಯ ವಿಚಾರವನ್ನು ನಟಿ ಸಂಜನಾ ಗಲ್ರಾನಿ ತಳ್ಳಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ನನ್ನ ಹೆಸರು ಹಾಳು ಮಾಡಲು ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ಸ್ಪಷ್ಟನೆ ನೀಡಿರುವ ನಟಿ ಸಂಜನಾ, ಈಗ ರೂಮರ್ಸ್ ಆಗಿರುವುದು ಸುಳ್ಳು. ನಾನು ಹಾಗೂ ನನ್ನ ಗೆಳತಿ ವಂದನಾ ಜೈನ್ ಮಧ್ಯೆ ಏನೋ ಸಣ್ಣ ಪುಟ್ಟ ಗಲಾಟೆ, ವಾದ ಆಯ್ತು. ಅವರೇನೋ ಜೋಷ್‍ನಲ್ಲಿ ಪೊಲೀಸ್ ಸ್ಟೇಷನ್‍ಗೆ ಹೋದರು. ನಡೆದಿದ್ದು ಅಷ್ಟೇ. ಈ ವೇಳೆ ನನ್ನ ಅಣ್ಣ ಅಲ್ಲೇ ಇದ್ದರು. ಅವರು ಎಲ್ಲವನ್ನೂ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದರು.

    ನನ್ನ ವಿರುದ್ಧ ಯಾರದರು ಏನಾದ್ರೂ ಮಾತನಾಡಿದರೆ ಆ ವಿಡಿಯೋ ಸೇಫ್ಟಿಗೆ ಅಂತ ಇದೆ. ಸುಮ್ಮನೆ ಆ ವಿಡಿಯೋವನ್ನು ತೆಗೆದು ಬಿಟ್ಟು, ಈ ಕಥೆಯಲ್ಲಿ ಮಸಾಲ ಹಾಕುವ ಅವಶ್ಯಕತೆ ನನಗಿಲ್ಲ. ಇಂತಹ ಪಬ್ಲಿಸಿಟಿ ನನಗೆ ಬೇಕಾಗಿಲ್ಲ. ನಾನು ನನ್ನ ಮನೆಯಲ್ಲಿ ಆರಾಮಾಗಿ ಇದ್ದೇನೆ ಎಂದು ಹೇಳಿದ್ದಾರೆ.

    ನನ್ನ ಗೆಳತಿ ಹಾಗೂ ನಾನು ಯಾರ ಜೊತೆ ಜಗಳವಾಡಿದ್ದೆವೋ ಅವರು ತಮ್ಮ ಮನೆಯಲ್ಲಿ ಆರಾಮಾಗಿದ್ದಾರೆ. ಕಥೆ ಮುಗಿದು ಹೋಯಿತು. ಈ ಕಥೆಯನ್ನ ಮುಂದುವರಿಸುವುದು ಬೇಡ. ಏನಾಯಿತು, ಯಾಕಾಯ್ತು ಎನ್ನುವ ವಿಚಾರ ಬೇಡ. ನಾವು ಇಬ್ಬರೂ ಸ್ನೇಹಿತೆಯರು, ಸಣ್ಣ-ಪುಟ್ಟ ವಾದ ಮಾಡುತ್ತೇವೆ ಅಷ್ಟೇ. ಅದು ನಮ್ಮ ಮಧ್ಯದಲ್ಲೇ ನಡೆದಿದ್ದು ಅಲ್ವಾ? ಎಲ್ಲವನ್ನೂ ಪಬ್ಲಿಕ್‍ನಲ್ಲಿ ತಂದು ಕೊಡುವುದು, ಬಂದು ಹೇಳುವಂತದ್ದು ಏನಿದೆ ಎಂದು ಪ್ರಶ್ನಿಸಿದರು.

    ನಾವು ಕಲಾವಿದರಾಗಿರುವುದರಿಂದ ನಮಗೆ ವೈಯಕ್ತಿಕ ಜೀವನ ಇಲ್ವಾ? ಸಮಾಜ ಕಾಳಜಿ ನಮಗೂ ಇದೆ. ಹೀಗಾಗಿ ನಾವು ಈ ವಿಷಯದಲ್ಲಿ ಇಲ್ಲ. ನಾವಿಬ್ಬರು ಆರಾಮಾಗಿ, ಖುಷಿಯಿಂದಲೇ ಇದ್ದೇವೆ. ನನಗೆ ಇಂತಹ ಕೆಟ್ಟ ಪಬ್ಲಿಸಿಟಿ ಬೇಡ. ದಯವಿಟ್ಟು ಇದರಿಂದ ನನ್ನನ್ನು ಆಚೆ ಇಡಿ ಎಂದು ಸಂಜನಾ ಹೇಳಿದರು.

    ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟಿ ಸಂಜನಾ, ದೂರು ದಾಖಲಾಗಿರುವ ಪ್ರತಿಯನ್ನು ನನಗೆ ಕೊಡಿ. ನನ್ನ ಹೆಸರು ಕೆಡಿಸಲು ಹೀಗೆ ಮಾಡುತ್ತಿದ್ದಾರೆ. ರೂಮರ್ಸ್ ಹರಬೇಡಿ, ನನ್ನ ಹಾಗೂ ವಂದನಾ ಜೈನ್ ಮಧ್ಯೆ ವಾದ ಆಗಿದೆ. ಆದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೆ. ಎಫ್‍ಐಆರ್ ಪ್ರತಿ ತೋರಿಸಲಿ ಎಂದು ಅಸಮಾಧಾನ ಹೊರ ಹಾಕಿದರು.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಚೇತನ್ ಸಿಂಗ್ ಅವರು, ಸಂಜನಾ ಅವರು ಸ್ನೇಹಿತೆ ವಂದನಾ ಜೈನ್ ಜೊತೆಗೆ ಡಿಸೆಂಬರ್ 24ರಂದು ರಾತ್ರಿ ಹಳೇ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಸಂಜನಾ ಅಸಭ್ಯವಾಗಿ ವರ್ತಿಸಿದ್ದಾರೆ ಹಾಗೂ ಗಲಾಟೆ ಮಾಡಿ ಮಾಡಿದ್ದಾರೆ ಎಂದು ವಂದನಾ ಜೈನ್ ಹೇಳಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ. ಕೋರ್ಟ್ ನಿಂದ   ತನಿಖೆಗೆ ಆದೇಶ ಬಂದರೆ ತನಿಖೆ ಮುಂದುವರಿಸುತ್ತೇವೆ ಎಂದರು.

    ಹೋಟೆಲಿನಲ್ಲಿ ಏನಾಯ್ತು? 
    ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಅವರಿಗೆ ಬೆಂಗಳೂರು ಅಂದರೆ ಬಹಳ ಇಷ್ಟ. ಹೀಗಾಗಿ ಬೆಂಗಳೂರಿನಲ್ಲಿಯೇ ಕಾಲ ಕಳೆಯುತ್ತಿದ್ದ ಅವರಿಗೆ ಸ್ಯಾಂಡಲ್‍ವುಡ್ ನಟಿ ಸಂಜನಾ ಜೊತೆ ಸ್ನೇಹವಾಗಿದೆ. ಹೀಗೆ ಇಬ್ಬರೂ ಸ್ಟಾರ್ ಹೋಟೆಲ್‍ನಲ್ಲಿ ಪಾರ್ಟಿ ಮಾಡುತ್ತಿದ್ದರು. ಒಂದೇ ಟೇಬಲ್‍ನಲ್ಲಿ ಕುಳಿತು ಕುಡಿಯುತ್ತಾ ಇದ್ದ ಇಬ್ಬರ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಮಾತು ಅತಿರೇಕಕ್ಕೆ ಹೋಗಿದ್ದೇ ತಡ, ಇಬ್ಬರೂ ಪರಸ್ಪರ ಕೆಟ್ಟ ಮಾತುಗಳಿಂದ ಬೈದುಕೊಂಡರು.

    ಈ ವೇಳೆ ಸಿಟ್ಟಿಗೆದ್ದ ಸಂಜನಾ ಅವರು ವಂದನಾರಿಗೆ ಹೊಡೆಯಲು ಮುಂದಾಗಿದ್ದು, ತನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ವಂದನಾ ಮೇಲೆ ಬಿಸಾಕಿದ್ದಾರೆ. ನಟಿ ಬಿಸಾಡಿದ ವೇಗಕ್ಕೆ ಗ್ಲಾಸ್ ನಿರ್ಮಾಪಕಿಯ ಹಣೆಗೆ ಬಂದು ಬಡಿದಿದೆ. ಇದಾದ ಬಳಿಕ ನಿರ್ಮಾಪಕಿಯು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ನಿರ್ಮಾಪಕಿ ಗರಂ ಆಗಿದ್ದನ್ನು ಕಂಡ ಸಂಜನಾ ಫುಲ್ ಸೈಲೆಂಟ್ ಆಗಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ರಾಜಿ ಪಂಚಾಯ್ತಿ ಮಾಡಿಸಿಕೊಂಡರು.

  • ಎಣ್ಣೆ ಕಿಕ್‍ನಲ್ಲಿ ಗಲಾಟೆ ಮಾಡ್ಕೊಂಡ್ರಾ ಸಂಜನಾ ಗಲ್ರಾನಿ?

    ಎಣ್ಣೆ ಕಿಕ್‍ನಲ್ಲಿ ಗಲಾಟೆ ಮಾಡ್ಕೊಂಡ್ರಾ ಸಂಜನಾ ಗಲ್ರಾನಿ?

    ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಗಲಾಟೆ ಮಾಡಿಕೊಂಡ್ರಾ ಎಂಬ ಪ್ರಶ್ನೆಯೊಂದು ಎದ್ದಿದೆ.

    ಹೌದು. ನಗರದ ಸ್ಟಾರ್ ಹೋಟೆಲ್‍ನಲ್ಲಿ ನಟಿ ಸಂಜನಾ ಗಲ್ರಾನಿ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಮಧ್ಯೆ ಜಗಳವಾಗಿದ್ದು, ಗಲಾಟೆ ತಾರಕಕ್ಕೇರಿ ಸಂಜನಾ ನಿರ್ಮಾಪಕಿ ಮೇಲೆ ಗ್ಲಾಸ್ ನಿಂದ ಹೊಡೆದಿದ್ದಾರೆ. ಈ ಸಂಬಂಧ ನಿರ್ಮಾಪಕಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಬಳಿಕ ರಾಜಿ ಪಂಚಾಯ್ತಿ ಮಾಡಿಕೊಂಡು ಕೇಸನ್ನು ಹಿಂಪಡೆದುಕೊಂಡಿದ್ದಾರೆ.

    ಹೋಟೆಲಿನಲ್ಲಿ ಏನಾಯ್ತು?
    ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಅವರಿಗೆ ಬೆಂಗಳೂರು ಅಂದರೆ ಬಹಳ ಇಷ್ಟ. ಹೀಗಾಗಿ ಬೆಂಗಳೂರಿನಲ್ಲಿಯೇ ಕಾಲ ಕಳೆಯುತ್ತಿದ್ದ ಅವರಿಗೆ ಸ್ಯಾಂಡಲ್‍ವುಡ್ ನಟಿ ಸಂಜನಾ ಜೊತೆ ಸ್ನೇಹವಾಗಿದೆ. ಹೀಗೆ ಇಬ್ಬರೂ ಸ್ಟಾರ್ ಹೋಟೆಲ್‍ನಲ್ಲಿ ಪಾರ್ಟಿ ಮಾಡುತ್ತಿದ್ದರು. ಒಂದೇ ಟೇಬಲ್‍ನಲ್ಲಿ ಕುಳಿತು ಕುಡಿಯುತ್ತಾ ಇದ್ದ ಇಬ್ಬರ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಮಾತು ಅತಿರೇಕಕ್ಕೆ ಹೋಗಿದ್ದೇ ತಡ, ಇಬ್ಬರೂ ಪರಸ್ಪರ ಕೆಟ್ಟ ಮಾತುಗಳಿಂದ ಬೈದುಕೊಂಡರು.

    ಈ ವೇಳೆ ಸಿಟ್ಟಿಗೆದ್ದ ಸಂಜನಾ ಅವರು ವಂದನಾರಿಗೆ ಹೊಡೆಯಲು ಮುಂದಾಗಿದ್ದು, ತನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ವಂದನಾ ಮೇಲೆ ಬಿಸಾಕಿದ್ದಾರೆ. ನಟಿ ಬಿಸಾಡಿದ ವೇಗಕ್ಕೆ ಗ್ಲಾಸ್ ನಿರ್ಮಾಪಕಿಯ ಹಣೆಗೆ ಬಂದು ಬಡಿದಿದೆ. ಇದಾದ ಬಳಿಕ ನಿರ್ಮಾಪಕಿಯು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ನಿರ್ಮಾಪಕಿ ಗರಂ ಆಗಿದ್ದನ್ನು ಕಂಡ ಸಂಜನಾ ಫುಲ್ ಸೈಲೆಂಟ್ ಆಗಿದ್ದು, ಪೊಲೀಸ್ ಠಾಣೆಗೆ ಹೋಗಿ ರಾಜಿ ಪಂಚಾಯ್ತಿ ಮಾಡಿಸಿಕೊಂಡಿದ್ದಾರೆ.

  • ಹೆಣ್ಮಕ್ಳು ಎಷ್ಟು ಹೊತ್ತಲ್ಲೂ, ಯಾವ ಬಟ್ಟೆಲಿ ಬೇಕಾದ್ರೂ ಬೆಂಗ್ಳೂರಲ್ಲಿ ಸುತ್ತಾಡ್ಬೋಡು- ಆರೋಪಗಳಿಗೆ ಸಂಜನಾ ಖಡಕ್ ಉತ್ತರ

    ಹೆಣ್ಮಕ್ಳು ಎಷ್ಟು ಹೊತ್ತಲ್ಲೂ, ಯಾವ ಬಟ್ಟೆಲಿ ಬೇಕಾದ್ರೂ ಬೆಂಗ್ಳೂರಲ್ಲಿ ಸುತ್ತಾಡ್ಬೋಡು- ಆರೋಪಗಳಿಗೆ ಸಂಜನಾ ಖಡಕ್ ಉತ್ತರ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿಯಲ್ಲಿ ಹೆಣ್ಣು ಮಕ್ಕಳು ಸಂಚರಿಸೋಕೆ ಆಗಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಆರೋಪಕ್ಕೆ ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾಣಿ ಧ್ವನಿ ಎತ್ತಿದ್ದಾರೆ.

    ರಾಜಧಾನಿ ಬೆಂಗಳೂರಿನ ಬಗ್ಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೆಣ್ಣು ಮಕ್ಕಳ ವಿರುದ್ಧ ಹಲವರು ಅಪವಾದ ಎತ್ತಿದ್ದಾಗ ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾಣಿ, ಸಿಲಿಕಾನ್ ಸಿಟಿ ಪರವಾಗಿ ಧ್ವನಿ ಎತ್ತಿದ್ದಾರೆ.

    ಎಷ್ಟು ಹೊತ್ತಲ್ಲೂ ಬೇಕಾದರೂ, ಯಾವ ಬಟ್ಟೆಯಲ್ಲಿ ಬೇಕಾದ್ರೂ ಸಿಲಿಕಾನ್ ಸಿಟಿಯಲ್ಲಿ ಸುತ್ತಾಡಬಹುದು. ನಾನೇ ಎಷ್ಟೋ ಸಲ ಮಧ್ಯರಾತ್ರಿ ಮನೆಯಿಂದ ಹೊರಗೆ ಹೋಗಿ ಸೇಫ್ ಆಗಿ ವಾಪಸ್ ಬಂದಿದ್ದೇನೆ. ದೆಹಲಿ ಹಾಗೂ ಕೋಲ್ಕತ್ತಾದಂತಹ ನಗರಗಳಿಗೆ ನಮ್ಮ ಬೆಂಗಳೂರನ್ನು ಹೋಲಿಸಿ ಮಾತನಾಡುವುದು ಸರಿಯಲ್ಲ ಸಂಜನಾ ಗುಡುಗಿದ್ದಾರೆ.