Tag: ಸಂಜನಾ ಗಣೇಶನ್

  • ಬುಮ್ರಾ, ಸಂಜನಾ ದಂಪತಿಗೆ ಗಂಡು ಮಗು- ಮಗನ ಹೆಸರು ರಿವೀಲ್ ಮಾಡಿದ ವೇಗಿ

    ಬುಮ್ರಾ, ಸಂಜನಾ ದಂಪತಿಗೆ ಗಂಡು ಮಗು- ಮಗನ ಹೆಸರು ರಿವೀಲ್ ಮಾಡಿದ ವೇಗಿ

    ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಸಂಜನಾ ಗಣೇಶನ್ (Sanjana Ganesan) ದಂಪತಿಗೆ ಗಂಡು ಮಗು (Baby Boy)  ಜನಿಸಿದೆ.

    ಈ ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾದಲ್ಲಿ (Instagram) ಫೋಟೋ ಸಮೇತ ಬುಮ್ರಾ ಹಂಚಿಕೊಂಡಿದ್ದಾರೆ. ಅಲ್ಲದೆ ಮಗುವಿನ ಹೆಸರನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. ಅಂಗದ್ ಎಂದು ಮಗನಿಗೆ ನಾಮಕರಣ ಮಾಡಿರುವುದಾಗಿ ಬುಮ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಮೆಹ್ದಿ, ನಜ್ಮಲ್‌ ಶತಕದ ಆಟ- ಬಾಂಗ್ಲಾಗೆ 89 ರನ್‌ಗಳ ಭರ್ಜರಿ ಜಯ

     

    View this post on Instagram

     

    A post shared by jasprit bumrah (@jaspritb1)

     

    ಫೋಟೋದೊಂದಿಗೆ ಬುಮ್ರಾ ಅವರು, ಮಗನ ಆಗಮನದೊಂದಿಗೆ ನಮ್ಮ ಪುಟ್ಟ ಕುಟುಂಬವು ಇಂದು ಬೆಳೆದಿದೆ. ಇಂದು ಬೆಳಗ್ಗೆ ಮಗ ಹುಟ್ಟಿದ್ದಾನೆ. ಅಂಗದ್ ಜಸ್ಪ್ರೀತ್ ಬುಮ್ರಾನನ್ನು ಇಂದು ನಾವು ಜಗತ್ತಿಗೆ ಪರಿಚಯಿಸಿದ್ದೇವೆ. ನಾವು ಚಂದ್ರನ ಮೇಲಿದ್ದೇವೆ ಮತ್ತು ನಮ್ಮ ಜೀವನದಲ್ಲಿ ಇದೀಗ ಹೊಸ ಅಧ್ಯಾಯವೊಂದು ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.

    ಜಸ್ಪ್ರೀತ್ ಬುಮ್ರಾ ಹಾಗೂ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರು 2021ರ ಮಾರ್ಚ್ 15ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ತನ್ನ ಪತ್ನಿಯ ಜೊತೆಗಿರಲು ಬುಮ್ರಾ ಏಷ್ಯಾ ಕಪ್ 2023 ನಿಂದ ದೂರ ಉಳಿದಿದ್ದರು. ಭಾರತೀಯ ಕ್ರಿಕೆಟ್ ತಂಡದ ಬುಮ್ರಾ ಪ್ರಮುಖ ಆಟಗಾರರಾಗಿದ್ದು, ಬೆನ್ನುನೋವಿನಿಂದಾಗಿ ಸುಮಾರು ಒಂದು ವರ್ಷದ ವಿರಾಮದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮರಳಿದರು.

    ಪಾಕಿಸ್ತಾನ ವಿರುದ್ಧದ ಭಾರತದ ಆರಂಭಿಕ ಪಂದ್ಯದಲ್ಲಿ ಬುಮ್ರಾ ಕಾಣಿಸಿಕೊಂಡಿದ್ದರೂ, ದ್ವಿತೀಯಾರ್ಧದಲ್ಲಿ ನಿರಂತರ ಮಳೆಯಿಂದಾಗಿ ಪಂದ್ಯವು ವಾಶ್ ಔಟ್ ಆಗಿದ್ದರಿಂದ ಅವರು ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತಿ ದಿನ ನನ್ನ ಹೃದಯ ಗೆಲ್ಲುವ ನಿಮಗೆ ಹ್ಯಾಪಿ ಬರ್ತ್ ಡೇ: ಬುಮ್ರಾ

    ಪ್ರತಿ ದಿನ ನನ್ನ ಹೃದಯ ಗೆಲ್ಲುವ ನಿಮಗೆ ಹ್ಯಾಪಿ ಬರ್ತ್ ಡೇ: ಬುಮ್ರಾ

    ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಪ್ರತಿ ದಿನ ತಮ್ಮ ಹೃದಯ ಗೆಲ್ಲುವ ಮಡದಿಗೆ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಪ್ಪು-ಬಿಳುಪಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದಾರೆ.

    ಮದುವೆ ಬಳಿಕ ಪತ್ನಿ ಸಂಜನಾ ಗಣೇಶನ್ ಅವರ ಮೊದಲ ಹುಟ್ಟುಹಬ್ಬ ಇದಾಗಿದೆ. ಫೋಟೋ ಹಂಚಿಕೊಂಡಿರುವ ಬುಮ್ರಾ, ಪ್ರತಿ ದಿನ ನನ್ನ ಹೃದಯ ಗೆಲ್ಲುವ ವ್ಯಕ್ತಿಗೆ ಶುಭಾಶಗಳು. ನಾನು ನಿಮ್ಮನ್ನ ಸದಾ ಪ್ರೀತಿಸುತ್ತೇನೆ ಎಂದು ಬರೆದು ಕೊನೆಗೆ ಹಾರ್ಟ್ ಎಮೋಜಿ ಸಹ ಹಾಕಿಕೊಂಡಿದ್ದಾರೆ.

    ಐಪಿಎಲ್ ಪಂದ್ಯದ ಹಿನ್ನೆಲೆ ಬುಮ್ರಾ ತಮ್ಮ ತಂಡದ ಜೊತೆಯಲ್ಲಿದ್ದರು. ಇತ್ತ ಸಂಜನಾ ಮುಂಬೈನಲ್ಲಿ ಐಪಿಎಲ್ ನಿರೂಪಣೆ ಮಾಡುತ್ತಿದ್ದರು. ಕೊರೊನಾದಿಂದ ಪಂದ್ಯ ಸ್ಥಗಿತಗೊಂಡ ಬೆನ್ನಲ್ಲೇ ಬುಮ್ರಾ ಮನೆಗೆ ತೆರಳಿದ್ದಾರೆ. ಪತಿ ಬುಮ್ರಾ ಮನೆಗೆ ಹಿಂದಿರುಗಿದ ಕ್ಷಣಗಳನ್ನ ಸಂಜನಾ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು.

    ಮಾರ್ಚ್ 15, 2021ರಂದು ಬುಮ್ರಾ ಮತ್ತು ಸಂಜನಾ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಗೋವಾದ ಖಾಸಗಿ ರೆಸಾರ್ಟ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿತ್ತು.

  • ಸಂಜನಾ ಗಣೇಶನ್‍ಗೆ ಮೊದಲ ತಿಂಗಳ ಶುಭಕೋರಿದ ಜಸ್ಪ್ರೀತ್ ಬುಮ್ರಾ

    ಸಂಜನಾ ಗಣೇಶನ್‍ಗೆ ಮೊದಲ ತಿಂಗಳ ಶುಭಕೋರಿದ ಜಸ್ಪ್ರೀತ್ ಬುಮ್ರಾ

    ಮುಂಬೈ: ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಮದುವೆಯಾಗಿ ಇಂದಿಗೆ ಒಂದು ತಿಂಗಳಾಗಿದೆ. ಬುಮ್ರಾ ಮದುವೆಯಾಗಿ ಒಂದು ತಿಂಗಳಾಗುತ್ತಿದ್ದಂತೆ ಹೆಂಡತಿ ಸಂಜನಾ ಗಣೇಶನ್ ಅವರಿಗೆ ಮೊದಲ ತಿಂಗಳ  ಶುಭಕೋರಿದ್ದಾರೆ.

    ಮೇ 15 ರಂದು ಬುಮ್ರಾ ಕ್ರಿಕೆಟ್ ನಿರೂಪಕಿಯಾಗಿರುವ ಸಂಜನಾ ಗಣೇಶನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದಿಗೆ ಮದುವೆಯಾಗಿ ಒಂದು ತಿಂಗಳಾಗಿದೆ. ಇದೀಗ ಐಪಿಎಲ್‍ನಲ್ಲಿ ಬ್ಯುಸಿಯಾಗಿರುವ ಬುಮ್ರಾ ಸಾಮಾಜಿಕ ಜಾಲತಾಣದಲ್ಲಿ, ಹಲವು ದಿನಗಳ ಪ್ರೀತಿ, ಆ ನಗು, ಹಾಸ್ಯ, ಸಂಭಾಷಣೆಯೊಂದಿಗೆ ಕಳೆದ ದಿನಗಳು. ಇಂದಿಗೆ ನನ್ನ ಆತ್ಮೀಯ ಸ್ನೇಹಿತೆಯೊಂದಿಗೆ ಮದುವೆಯಾಗಿ ಒಂದು ತಿಂಗಳು ಕಳೆದಿದೆ ಎಂದು ಬರೆದುಕೊಂಡು ಇಬ್ಬರು ಜೊತೆಗಿರುವ ಫೋಟೋ ಒಂದನ್ನು ಹಾಕಿಕೊಂಡಿದ್ದಾರೆ.

    ಬುಮ್ರಾ ಮತ್ತು ಸಂಜನಾ ಗಣೇಶನ್ ಅವರು ಗೋವಾದಲ್ಲಿ ಮದುವೆಯಾಗಿದ್ದರು. ಬಳಿಕ ಬುಮ್ರಾ ಇನ್‍ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಶೇರ್ ಮಾಡಿಕೊಂಡ ನಂತರ ಎಲ್ಲರಿಗೂ ಇವರಿಬ್ಬರು ಮದುವೆಯಾಗಿರುವ ವಿಷಯ ತಿಳಿದಿತ್ತು.

    ಇದೀಗ ಬುಮ್ರಾ 14ನೇ ಅವೃತ್ತಿಯ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

  • ಜಸ್ಪ್ರೀತ್ ಬುಮ್ರಾ ದಂಪತಿಗೆ ಅಮುಲ್ ಮದುವೆ ಶುಭಾಶಯ ಪೋಸ್ಟ್ ವೈರಲ್

    ಜಸ್ಪ್ರೀತ್ ಬುಮ್ರಾ ದಂಪತಿಗೆ ಅಮುಲ್ ಮದುವೆ ಶುಭಾಶಯ ಪೋಸ್ಟ್ ವೈರಲ್

    ನವದೆಹಲಿ: ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕ್ರಿಕೆಟ್ ನಿರೂಪಕಿ ಸಂಜನಾ ಗಣೇಶನ್ ಜೋಡಿ ನಿನ್ನೆ ಗೋವಾದಲ್ಲಿ ವೈವಾಹಿಕ ಬಂಧನಕ್ಕೆ ಕಾಲಿಟ್ಟಿದ್ದರು. ಅವರಿಗೆ ಭಾರತದ ಸಿಹಿತಿಂಡಿ ಕಂಪನಿ ಅಮುಲ್ ವಿಶಿಷ್ಟ ಪೋಸ್ಟ್ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಶುಭಾಶಯ ಕೋರಿತ್ತು ಈ ಪೋಸ್ಟ್ ವೈರಲ್ ಆಗಿದೆ.

    ಬುಮ್ರಾ ಮತ್ತು ಸಂಜನಾ ಗಣೇಶನ್ ಮದುವೆ ಸಮಾರಂಭವು ಗೋವಾದಲ್ಲಿ ಸರಳವಾಗಿ ಎರಡೂ ಕುಟುಂಬದ ಆಪ್ತರ ಸಮ್ಮುಖದಲ್ಲಿ ನಡೆದಿತ್ತು. ಬೂಮ್ರಾ ಇಂದಿನಿಂದ ಹೊಸ ಜೀವನ ಆರಂಭವಾಗಿದೆ. ಇಂದು ಅತ್ಯಂತ ಸಂಭ್ರಮದ ದಿನವಾಗಿದೆ ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಂಭ್ರಮ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಬೂಮ್ರಾ ದಂಪತಿಗೆ ಶುಭಹಾರೈಕೆ ಮಾಡಿದ್ದರು.

    ಅಮೂಲ್ ಕಂಪನಿ ಕೂಡ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಬೂಮ್ರಾ ದಂಪತಿಗೆ ಶುಭಹಾರೈಸಿ ವಿಶೇಷ ಪೋಸ್ಟ್ ಹಾಕಿತ್ತು ಅದರಲ್ಲಿ ಅಮುಲ್ ಜಾಸ್ ಕೋ ಪ್ರೀತ್ ಮಿಲ್ ಗಾಯಿ ಅಂತ ಪೋಸ್ಟ್ ನ ಮೇಲ್ಬಾಗದಲ್ಲಿ ಬರೆದಿದ್ದು, ಬೂಮ್ರಾ ಪಕ್ಕದಲ್ಲಿ ಕುಳಿತಿರುವ ಸಂಜನಾ ಗಣೇಶನ್ ಒಂದು ಕೈಯಲ್ಲಿ ಸಿಹಿತಿಂಡಿಯನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಮೈಕ್ ಇಡಿದು ಬೂಮ್ರಾ ಅವರನ್ನು ಮಾತನಾಡಿಸುತ್ತಿದ್ದಾರೆ. ಬೂಮ್ರಾ ಒಂದು ಕೈನಲ್ಲಿ ಸಿಹಿತಿಂಡಿ ಹಿಡಿದುಕೊಂಡಿದ್ದರೆ ಇನ್ನೊಂದು ಕೈಯಲ್ಲಿ ಕ್ರಿಕೆಟ್ ಬಾಲ್ ಮೇಲಕ್ಕೆ ಎಸೆಯುತ್ತಿದ್ದಾರೆ. ನಂತರ ಕೆಳಭಾಗದಲ್ಲಿ ಬೌಲ್ ಯೂ ಒವರ್ ಎಂದು ಬರೆದುಕೊಂಡಿದೆ.

    ಅಮುಲ್ ಈ ರೀತಿಯ ಪೋಸ್ಟ್ ಹಾಕುತ್ತಿದ್ದಂತೆ ಹಲವು ಲೈಕ್ ಗಳು ಮತ್ತು ಕಮೆಂಟ್‍ಗಳನ್ನು ಹಾಕುವ ಮೂಲಕ ಅಭಿಮಾನಿಗಳು ಪೋಸ್ಟ್ ನೋಡಿ ಖುಷಿ ಪಟ್ಟಿದ್ದಾರೆ.

    ಬೂಮ್ರಾ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾದ ಅತಿಥಿಗಳಿಗೆ ಮೊಬೈಲ್ ಬಳಸದಂತೆ ನಿಷೇಧಿಸಲಾಗಿತ್ತು. ಕೊರೊನಾದಿಂದಾಗಿ ಮದುವೆ ಸಮಾರಂಭದಲ್ಲಿ ಕೇವಲ 20 ಜನರು ಮಾತ್ರ ಭಾಗಿಯಾಗಿದ್ದರು.

  • ಮದ್ವೆ ಬಂಧನದಲ್ಲಿ ಬಂಧಿಯಾದ ಜಸ್ಪ್ರೀತ್ ಬುಮ್ರಾ

    ಮದ್ವೆ ಬಂಧನದಲ್ಲಿ ಬಂಧಿಯಾದ ಜಸ್ಪ್ರೀತ್ ಬುಮ್ರಾ

    ಪಣಜಿ: ಕ್ರಿಕೆಟ್ ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಮದುವೆಯ ಬಂಧನದಲ್ಲಿ ಬಂಧಿಯಾಗಿದ್ದಾರೆ. ಕ್ರಿಕೆಟ್ ನಿರೂಪಕಿಯಾಗಿರುವ ಸಂಜನಾ ಗಣೇಶನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ಮದುವೆ ನಡೆದಿದ್ದು, ಎರಡೂ ಕುಟುಂಬಗಳ ಆಪ್ತರು ಮಾತ್ರ ಭಾಗಿಯಾಗಿದ್ದರು. ಮದುವೆಗೆ ಆಗಮಿಸುವ ಅತಿಥಿಗಳಿಗೆ ಮೊಬೈಲ್ ಬಳಸದಂತೆ ನಿಷೇಧಿಸಲಾಗಿತ್ತು.

    ಇನ್‍ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಶೇರ್ ಮಾಡಿಕೊಂಡಿರುವ ಬುಮ್ರಾ, ಇಂದಿನಿಂದ ಹೊಸ ಜೀವನ ಆರಂಭವಾಗಿದೆ. ಇವತ್ತು ಅತ್ಯಂತ ಸಂಭ್ರಮದ ದಿನವಾಗಿದೆ ಎಂದು ಬರೆದುಕೊಂಡಿದ್ದಾರೆ. ಮದುವೆ ಫೋಟೋಗಳು ರಿವೀಲ್ ಆಗುತ್ತಿದ್ದಂತೆ ಸೆಲೆಬ್ರಿಟಿಗಳು ಸೇರಿದಂತೆ ಫ್ಯಾನ್ಸ್ ಬುಮ್ರಾ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆ ಮದುವೆಯಲ್ಲಿ ಕೇವಲ 20 ಜನರು ಭಾಗಿಯಾಗಿದ್ದರು ಎಂದು ವರದಿಯಾಗಿದೆ.

    ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಪಂದ್ಯದಿಂದ ರಜೆ ಪಡೆದು ಹೊರ ಬಂದಿದ್ದರು. ಬುಮ್ರಾ ವೈಯಕ್ತಿಕ ಕಾರಣಗಳಿಂದಾಗಿ ಪಂದ್ಯದಿಂದ ಹೊರ ಬಂದಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ವಿಷಯ ಚರ್ಚೆ ಆಗುತ್ತಿದ್ದರೂ, ಬುಮ್ರಾ ಮಾತ್ರ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.

    ಯಾರು ಸಂಜನಾ ಗಣೇಶನ್?:
    ಸಂಜನಾ ಗಣೇಶನ್ 2019ರ ಐಸಿಸಿ ವರ್ಲ್ಡ್ ಕಪ್ ನಿಂದ ಐಪಿಎಲ್ ಪಂದ್ಯಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿರೂಪಕಿ ಸಹ ಆಗಿದ್ದರು. 2013ರ ಫೆಮಿನಾ ಗಾರ್ಜಿಯಸ್ ನ ವಿಜೇತೆಯಾಗಿರುವ ಸಂಜನಾ, ಖಾಸಗಿ ವಾಹಿನಿಯ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಜನಪ್ರಿಯ ಪಡೆದುಕೊಂಡಿದ್ದಾರೆ. ಪುಣೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಸಂಜನಾ, ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಚಿರಪರಿಚಿತರು. 2014ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್ ವರೆಗೂ ಸಂಜನಾ ತಲುಪಿದ್ದರು.

     

    View this post on Instagram

     

    A post shared by Sanjana Ganesan (@sanjanaganesan)