Tag: ಸಂಚಾರಿ ಪೊಲೀಸ್ ಠಾಣೆ

  • ಎಎಸ್‍ಐಗಳಿಂದ ಕಿರಿಯ ಸಹೋದ್ಯೋಗಿಗಳ ಮೇಲೆ ನಡೆಯುತ್ತಿದ್ಯಾ ದಬ್ಬಾಳಿಕೆ?

    ಎಎಸ್‍ಐಗಳಿಂದ ಕಿರಿಯ ಸಹೋದ್ಯೋಗಿಗಳ ಮೇಲೆ ನಡೆಯುತ್ತಿದ್ಯಾ ದಬ್ಬಾಳಿಕೆ?

    ಬೆಂಗಳೂರು: ನಗರದ ಸಂಚಾರಿ ಪೊಲೀಸರ (Traffic Police) ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸಂಚಾರಿ ಪೊಲೀಸರ ಗ್ರೂಪ್‍ನಲ್ಲಿ ಚರ್ಚೆ ಆಗಿರುವ ಮೇಸೆಜ್‍ಗಳಿಂದ ರಿವೀಲ್ ಆಗಿದೆ. ಹಿರಿಯ ಅಧಿಕಾರಿಗಳ ದಬ್ಬಾಳಿಕೆ ಬಗ್ಗೆ ಕಿರಿಯ ಅಧಿಕಾರಿಗಳು ಅಸಮಾಧಾನ ಹೊರ ಹಾಕಿದ್ದಾರೆ.

    ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ (Cubban Park Police Station) ಸಂಚಾರಿ ಪೊಲೀಸರ ವಾಟ್ಸಾಪ್ ಗ್ರೂಪ್‍ನಲ್ಲಿ (Whatsapp Group) ಎಎಸ್‍ಐಗಳ ದಬ್ಬಾಳಿಕೆ ಬಗ್ಗೆ ಕಿರಿಯ ಸಹೋದ್ಯೋಗಿಗಳು ಅಸಮಾಧಾನ ಹೊರಹಾಕಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಎಎಸ್‍ಐಗಳಿಗೆ ಲಂಗು ಲಗಾಮು ಇಲ್ಲ. ಎಸ್‍ಐಗಳು ಠಾಣೆಗಳನ್ನು ತಾವೇ ಬರೆಸಿಕೊಂಡವಂತೆ ನಡೆದುಕೊಳುತ್ತಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸ್ವಾರ್ಥಕ್ಕೆ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದೇವೆ: ಬೊಮ್ಮಾಯಿ

    ನಾವುಗಳು ಸ್ವಲ್ಪ ತಡವಾಗಿ ಠಾಣೆಗೆ ಬಂದರೆ ಡೈರಿ ಬರೆಸಿಕೊಳ್ಳುತ್ತಾರೆ. ಅವರು ಮಾತ್ರ ಬೇಕಾಬಿಟ್ಟಿಯಾಗಿ ಬರುತ್ತಾರೆ. ಕೆಲಸದ ಸಮಯದಲ್ಲಿ ನಾವು ಒಂದು ಕೇಸ್ ಹಾಕುವುದಕ್ಕೆ ಹೋದರೆ ಸೈಡಿಗೆ ಕಳಿಸಿಕೊಡುತ್ತಾರೆ. ಎಎಸ್‍ಐಗಳು ಸತ್ಯ ಹರಿಶ್ಚಂದ್ರರ ತುಂಡುಗಳ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಇದು ಇಲ್ಲಿಗೆ ನಿಲ್ಲಬೇಕೆಂದು ಕಿರಿಯ ಸಹೋದ್ಯೋಗಿಗಳು ವಾಟ್ಸಾಪ್ ಗ್ರೂಪ್‍ನಲ್ಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: 8 ವರ್ಷದ ಸುದೀರ್ಘ ಪಯಣ ಕೊನೆಗೊಳಿಸಿದ ಮಂಗಳಯಾನ

    Live Tv
    [brid partner=56869869 player=32851 video=960834 autoplay=true]

  • ನವೀಕರಣಗೊಂಡಿದ್ದ ಸಂಚಾರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ಕಮಿಷನರ್

    ನವೀಕರಣಗೊಂಡಿದ್ದ ಸಂಚಾರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ಕಮಿಷನರ್

    ಬೆಂಗಳೂರು: ನೂತನವಾಗಿ ನವೀಕರಣಗೊಂಡಿದ್ದ ಸಂಚಾರ ಪೊಲೀಸ್ ಠಾಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಉದ್ಘಾಟಿಸಿದರು.

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಳೆಯದಾಗಿದ್ದ ಸಂಚಾರ ಪೊಲೀಸ್ ಠಾಣೆಯನ್ನು ಟೈಟಾನ್ ಕಂಪನಿಯ ಸಹಭಾಗಿತ್ವದಲ್ಲಿ ಕಾರ್ಪೋರೆಟ್ ಫಂಡ್ ನಿಂದ ಅನುಮತಿ ಪಡೆದು ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡಿದ್ದು ಸುಮಾರು 35 ಲಕ್ಷಗಳ ವೆಚ್ಚದಲ್ಲಿ ನೂತನನವಾಗಿ ಈ ಠಾಣೆಯನ್ನು ನಿರ್ಮಿಸಲಾಗಿದೆ.

    ಈ ವೇಳೆ ಮಾತನಾಡಿದ ಅವರು, ಸಂಚಾರ ಪೊಲೀಸ್ ಆಯುಕ್ತ ರವಿಕಾಂತೇಗೌಡರ ನೇತೃತ್ವದಲ್ಲಿ ಬಹಳ ಚೆನ್ನಾಗಿ ನಿರ್ಮಾಣ ಮಾಡಿ ಭವ್ಯವಾದ ಕಟ್ಟಡದಲ್ಲಿ ನವೀಕರಣಗೊಂಡಿದೆ. ಹೆದ್ದಾರಿಯಲ್ಲಿ ಅಪಘಾತಗಳು ನಡೆದ ಸಂದರ್ಭದಲ್ಲಿ ಪೊಲೀಸ್ ಠಾಣೆ ಎಲ್ಲಿದೆ ಎನ್ನುವುದು ಗೊತ್ತಾಗಬೇಕು ಆ ದೃಷ್ಟಿಯಿಂದ ಠಾಣೆಯನ್ನು ಚೆನ್ನಾಗಿ ನವೀಕರಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆದ್ದಾರಿ ಪಕ್ಕದಲ್ಲಿಯೇ ಇರುವಂತಹ ಜಾಗವನ್ನು ನೋಡಿ ಅಲ್ಲಿ ಠಾಣೆಯನ್ನು ಮಾಡಿದಾಗ, ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಇದೊಂದು ಒಳ್ಳೆಯ ಕೆಲಸವನ್ನು ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಮಾಡಿದ್ದಾರೆ ಎಂದು ಹೇಳಿದರು.

    ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯನ್ನು ಸ್ಪೆಷಲ್ ಸ್ಟೇಷನ್ ಆಗಿ ಬೆಂಗಳೂರು ಸಿಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾವನೆ ಹೋಗಿದೆ. ಈ ಹಿಂದೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯೂ ಸಹ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಇತ್ತು ಬಳಿಕ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಸ್ಪೆಷಲ್ ಸ್ಟೇಷನ್ ಆಯ್ತು. ಮುಂದಿನ ದಿನಗಳಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆಯು ಸಹ ಸ್ಪೆಷಲ್ ಸ್ಟೇಷನ್ ಆಗಿ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿಯ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣವಾಗುತ್ತದೆ ಎಂದು ತಿಳಿಸಿದರು.