Tag: ಸಂಚಾರಿ ನಿಯಮ ಉಲ್ಲಂಘನೆ

  • ಟ್ರಾಫಿಕ್ಸ್ ರೂಲ್ಸ್ ಬ್ರೇಕ್; 311 ಕೇಸ್, 1.61 ಲಕ್ಷ ಫೈನ್ – ಸ್ಕೂಟಿ ಬೆಲೆಗಿಂತ ದುಪ್ಪಟ್ಟು ದಂಡ ಕಟ್ಟಲು ನೋಟಿಸ್

    ಟ್ರಾಫಿಕ್ಸ್ ರೂಲ್ಸ್ ಬ್ರೇಕ್; 311 ಕೇಸ್, 1.61 ಲಕ್ಷ ಫೈನ್ – ಸ್ಕೂಟಿ ಬೆಲೆಗಿಂತ ದುಪ್ಪಟ್ಟು ದಂಡ ಕಟ್ಟಲು ನೋಟಿಸ್

    ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಬೈಕ್ ಸೀಜ್ ಮಾಡಿ, ಲಕ್ಷಾಂತರ ರೂ. ದಂಡ ಕಟ್ಟುವಂತೆ ಸಿಟಿ ಮಾರ್ಕೆಟ್ ಪೊಲೀಸರು (City Market Police) ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

    KA05 ZX1344 ನಂಬರ್‌ನ ಸ್ಕೂಟರ್‌ನಿಂದ ಹೆಲ್ಮೆಟ್, ಸಿಗ್ನಲ್ ಜಂಪ್ ಹೀಗೆ ಹಲವು ರೀತಿಯಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾಗಿತ್ತು. ಕಳೆದ ವರ್ಷ 1,05,500 ರೂ. ದಂಡ ಹಾಕಲಾಗಿತ್ತು. ಈ ವರ್ಷ 1,61,000 ರೂ. ದಂಡ ಏರಿಕೆಯಾಗಿದೆ.ಇದನ್ನೂ ಓದಿ: ಚಳಿಗಾಲದಲ್ಲೂ ಸುಡುತ್ತಿದೆ ಬಿಸಿಲು – ರಾಜ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ಉಷ್ಣಾಂಶ

    ಆದರೂ, ಪೊಲೀಸರ ಭಯವಿಲ್ಲದೇ ರಾಜಾರೋಷವಾಗಿ ವ್ಯಕ್ತಿ ಸ್ಕೂಟರ್ ಚಲಾಯಿಸುತ್ತಿದ್ದ. ಈ ಕುರಿತು ವ್ಯಕ್ತಿಯೊಬ್ಬರು ಸ್ಕೂಟರ್ ಪೋಟೋ ತೆಗೆದು, ಬೆಂಗಳೂರಿನಲ್ಲಿ ಸ್ಕೂಟರ್ ಬೆಲೆಗಿಂತ ದುಪ್ಪಟ್ಟು ಟ್ರಾಫಿಕ್ ಫೈನ್ ವಿಧಿಸಿಕೊಂಡಿದ್ದ ವ್ಯಕ್ತಿ ಎಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿದ್ದರು.

    ಇದಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಯಾಕೆ ಇನ್ನೂ ಸವಾರನ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೊಲೀಸರು ವೈರಲ್ ಆಗುತ್ತಿದ್ದ ಸ್ಕೂಟರ್ ಪತ್ತೆ ಹಚ್ಚಿ ಸೀಜ್ ಮಾಡಿದ್ದಾರೆ.

    ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿ, ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿಗೆ ದಂಡದ ಮೊತ್ತ ಕಟ್ಟುವಂತೆ ನೋಟಿಸ್ ನೀಡಿ, ಸ್ಕೂಟರ್ ಸೀಜ್ ಮಾಡಿದ್ದಾರೆ. ಸ್ಕೂಟರ್ ಮೇಲೆ 2023ರಿಂದ ಈವರೆಗೆ ಒಟ್ಟು 311 ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿವೆ.ಇದನ್ನೂ ಓದಿ: ಹೆಚ್ಚಾಯ್ತು ಬೇಡಿಕೆ- ಸಿನಿಮಾ ಆಫರ್‌ಗೆ ಡೋಂಟ್ ಕೇರ್ ಎಂದ Bigg Boss ವಿನ್ನರ್ ಹನುಮಂತ

  • ಟ್ರಾಫಿಕ್ ರೂಲ್ಸ್ ಬ್ರೇಕ್ – ಸೆಂಚುರಿ ಬಾರಿಸಿದ್ದ ಸವಾರರು ತಪಾಸಣೆಯಲ್ಲಿ ಸಿಕ್ಕಿಬಿದ್ರು!

    ಟ್ರಾಫಿಕ್ ರೂಲ್ಸ್ ಬ್ರೇಕ್ – ಸೆಂಚುರಿ ಬಾರಿಸಿದ್ದ ಸವಾರರು ತಪಾಸಣೆಯಲ್ಲಿ ಸಿಕ್ಕಿಬಿದ್ರು!

    ಸಾಂದರ್ಭಿಕ ಚಿತ್ರ

    ಬೆಂಗಳೂರು: ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘನೇ ಮಾಡಿ, ದಂಡ ಕಟ್ಟದೆ ತಲೆ ಮರೆಸಿಕೊಂಡು ತಿರುಗುತ್ತಿದ್ದ ನಾಲ್ವರು ಬೈಕ್ ಸವಾರರನ್ನು ವಿವಿ ಪುರಂ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬುಧವಾರ ಎಂದಿನಂತೆ ವಿವಿ ಪುರಂ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅಕ್ತರ್ ಹಾಗೂ ಶಬ್ಬೀರ್ ಅಹಮ್ಮದ್ ಸೇರಿದಂತೆ ಒಟ್ಟು ನಾಲ್ವರ ಬೈಕ್‍ಗಳನ್ನು ತಪಾಸಣೆ ಮಾಡಿದ್ದಾಗ, ಸವಾರರ ಮೇಲೆ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ನಾಲ್ವರನ್ನು ಬೈಕಿನೊಂದಿಗೆ ವಶಕ್ಕೆ ಪಡೆದುಕೊಂಡಿದ್ದಾರೆ.

    ವರದಿಗಳ ಪ್ರಕಾರ ನಾಲ್ವರು ಬೈಕ್ ಸವಾರರ ಮೇಲೆ ವಿವಿಧ ಠಾಣೆಗಳಲ್ಲಿ ನೂರಕ್ಕು ಅಧಿಕ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಸವಾರರು ಸಿಗ್ನಲ್ ಜಂಪ್, ಒನ್ ವೇ ರೈಡ್, ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದರು. ಈ ಬಗ್ಗೆ ಸವಾರರಿಗೆ ಸಂಚಾರಿ ಪೊಲೀಸ್ ಠಾಣೆಯಿಂದ ಎಷ್ಟೇ ನೋಟಿಸ್ ಕಳುಹಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಅಲ್ಲದೇ ಪೊಲೀಸರ ಕೈಗೂ ಸಿಗದೇ, ತಪ್ಪಿಸಿಕೊಂಡು ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಸವಾರರಿಂದ ಬೈಕನ್ನು ಜಪ್ತಿಮಾಡಿಕೊಂಡಿರುವ ಪೊಲೀಸರು, ನ್ಯಾಯಾಲಯದಲ್ಲಿ ದಂಡ ಕಟ್ಟಿ ಬೈಕ್ ಬಿಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಘಟನೆ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv