Tag: ಸಂಚಾರಿ ನಿಯಮ

  • ನನ್ನಿಷ್ಟ ನನ್ನ ಗಾಡಿ, ದಂಡ ಕಟ್ಟಲ್ಲ, ನೀವ್ಯಾರು ಕೇಳೋಕೆ – ಟ್ರಾಫಿಕ್ ಪೊಲೀಸರೊಂದಿಗೆ ಮಹಿಳೆಯ ಹೆಲ್ಮೆಟ್ ಕಿರಿಕ್

    ನನ್ನಿಷ್ಟ ನನ್ನ ಗಾಡಿ, ದಂಡ ಕಟ್ಟಲ್ಲ, ನೀವ್ಯಾರು ಕೇಳೋಕೆ – ಟ್ರಾಫಿಕ್ ಪೊಲೀಸರೊಂದಿಗೆ ಮಹಿಳೆಯ ಹೆಲ್ಮೆಟ್ ಕಿರಿಕ್

    ಬೆಂಗಳೂರು: ಹೆಲ್ಮೆಟ್ ಧರಿಸದಕ್ಕೆ ಸ್ಕೂಟಿ ತಡೆದ ಟ್ರಾಫಿಕ್ ಪೊಲೀಸರಿಗೆ ಮಹಿಳೆಯೊಬ್ಬರು ಅವಾಜ್ ಹಾಕಿರುವ ಘಟನೆ ಬೆಂಗಳೂರಿನ (Bengaluru) ಮಾಗಡಿ ರಸ್ತೆ ಸಂಚಾರಿ ಠಾಣೆಯ ಮುಂಭಾಗ ನಡೆದಿದೆ.

    ಮಾಗಡಿ ರೋಡ್‌ನಲ್ಲಿ (Magadi Road) ಸ್ಕೂಟಿ ಸವಾರೆ, ತನ್ನ ಸ್ನೇಹಿತೆ ಜೊತೆ ಬರುತ್ತಿದ್ದರು. ಈ ವೇಳೆ ಸ್ಕೂಟಿ ಸವಾರೆ ಹೆಲ್ಮೆಟ್ ಹಾಕಿದ್ರೆ, ಹಿಂದೆ ಕುಳಿತಿದ್ದ ಸ್ನೇಹಿತೆ ಹೆಲ್ಮೆಟ್ ಹಾಕಿರಲಿಲ್ಲ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಸ್ಕೂಟಿ ಅಡ್ಡಗಟ್ಟಿ, ದಂಡ ಕಟ್ಟುವಂತೆ ಹೇಳಿದ್ದಾರೆ. ಇದನ್ನೂ ಓದಿ: ಮದ್ವೆಗೆ ಹುಡ್ಗಿ ನೋಡಲು ಹೋಗಿದ್ದ ಯುವಕ – ಇಷ್ಟವಿಲ್ಲ ಅಂದಿದ್ದಕ್ಕೆ ಹುಡುಗಿ ತಲೆಗೆ ಗುಂಡಿಟ್ಟ..!

    ಆಗ ನಾನು ಫೈನ್ ಕಟ್ಟಲ್ಲ. ನನ್ನಿಷ್ಟ ನನ್ನ ಗಾಡಿ, ನೀವ್ಯಾರು ಕೇಳೋಕೆ ಎಂದು ಟ್ರಾಫಿಕ್ ಪೊಲೀಸರೊಂದಿಗೆ (Traffic Police) ಮಹಿಳೆ ಗಲಾಟೆ ಮಾಡಿದ್ದಾರೆ. ಫೈನ್ ಚೆಕ್ ಮಾಡಿದ ಪೊಲೀಸರಿಗೆ 15,000 ರೂ. ದಂಡ ಇದೆ ಎಂದು ಗೊತ್ತಾಗಿದೆ. ಇದನ್ನೂ ಓದಿ: ಪಾಕ್‌ ಪರ ಬೇಹುಗಾರಿಕೆ – 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜಸ್ಥಾನದ ಸರ್ಕಾರಿ ನೌಕರ ಅರೆಸ್ಟ್‌

    ಈ ವೇಳೆ 500 ರೂ. ದಂಡ ಕಟ್ಟುವಂತೆ ಪೊಲೀಸರು ಗಾಡಿ ಹಿಡಿದು ನಿಲ್ಲಿಸಿದ್ದರು. ಆದರೆ ಮಹಿಳೆ ಗಲಾಟೆ ಮಾಡಿ, ಗಾಡಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ಸದ್ಯ ಮಹಿಳೆ ವಿರುದ್ಧ ಮಾಗಡಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ರಹಿತ ಚಾಲನೆ ದಂಡ ವಿಧಿಸಿರುವ ಬಗ್ಗೆ ಮಾಹಿತಿ ದೊರೆತಿದೆ.

  • ಟ್ರಾಫಿಕ್ಸ್ ರೂಲ್ಸ್ ಬ್ರೇಕ್; 311 ಕೇಸ್, 1.61 ಲಕ್ಷ ಫೈನ್ – ಸ್ಕೂಟಿ ಬೆಲೆಗಿಂತ ದುಪ್ಪಟ್ಟು ದಂಡ ಕಟ್ಟಲು ನೋಟಿಸ್

    ಟ್ರಾಫಿಕ್ಸ್ ರೂಲ್ಸ್ ಬ್ರೇಕ್; 311 ಕೇಸ್, 1.61 ಲಕ್ಷ ಫೈನ್ – ಸ್ಕೂಟಿ ಬೆಲೆಗಿಂತ ದುಪ್ಪಟ್ಟು ದಂಡ ಕಟ್ಟಲು ನೋಟಿಸ್

    ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಬೈಕ್ ಸೀಜ್ ಮಾಡಿ, ಲಕ್ಷಾಂತರ ರೂ. ದಂಡ ಕಟ್ಟುವಂತೆ ಸಿಟಿ ಮಾರ್ಕೆಟ್ ಪೊಲೀಸರು (City Market Police) ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

    KA05 ZX1344 ನಂಬರ್‌ನ ಸ್ಕೂಟರ್‌ನಿಂದ ಹೆಲ್ಮೆಟ್, ಸಿಗ್ನಲ್ ಜಂಪ್ ಹೀಗೆ ಹಲವು ರೀತಿಯಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾಗಿತ್ತು. ಕಳೆದ ವರ್ಷ 1,05,500 ರೂ. ದಂಡ ಹಾಕಲಾಗಿತ್ತು. ಈ ವರ್ಷ 1,61,000 ರೂ. ದಂಡ ಏರಿಕೆಯಾಗಿದೆ.ಇದನ್ನೂ ಓದಿ: ಚಳಿಗಾಲದಲ್ಲೂ ಸುಡುತ್ತಿದೆ ಬಿಸಿಲು – ರಾಜ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ಉಷ್ಣಾಂಶ

    ಆದರೂ, ಪೊಲೀಸರ ಭಯವಿಲ್ಲದೇ ರಾಜಾರೋಷವಾಗಿ ವ್ಯಕ್ತಿ ಸ್ಕೂಟರ್ ಚಲಾಯಿಸುತ್ತಿದ್ದ. ಈ ಕುರಿತು ವ್ಯಕ್ತಿಯೊಬ್ಬರು ಸ್ಕೂಟರ್ ಪೋಟೋ ತೆಗೆದು, ಬೆಂಗಳೂರಿನಲ್ಲಿ ಸ್ಕೂಟರ್ ಬೆಲೆಗಿಂತ ದುಪ್ಪಟ್ಟು ಟ್ರಾಫಿಕ್ ಫೈನ್ ವಿಧಿಸಿಕೊಂಡಿದ್ದ ವ್ಯಕ್ತಿ ಎಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿದ್ದರು.

    ಇದಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಯಾಕೆ ಇನ್ನೂ ಸವಾರನ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೊಲೀಸರು ವೈರಲ್ ಆಗುತ್ತಿದ್ದ ಸ್ಕೂಟರ್ ಪತ್ತೆ ಹಚ್ಚಿ ಸೀಜ್ ಮಾಡಿದ್ದಾರೆ.

    ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿ, ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿಗೆ ದಂಡದ ಮೊತ್ತ ಕಟ್ಟುವಂತೆ ನೋಟಿಸ್ ನೀಡಿ, ಸ್ಕೂಟರ್ ಸೀಜ್ ಮಾಡಿದ್ದಾರೆ. ಸ್ಕೂಟರ್ ಮೇಲೆ 2023ರಿಂದ ಈವರೆಗೆ ಒಟ್ಟು 311 ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿವೆ.ಇದನ್ನೂ ಓದಿ: ಹೆಚ್ಚಾಯ್ತು ಬೇಡಿಕೆ- ಸಿನಿಮಾ ಆಫರ್‌ಗೆ ಡೋಂಟ್ ಕೇರ್ ಎಂದ Bigg Boss ವಿನ್ನರ್ ಹನುಮಂತ

  • ಮಕ್ಕಳು ಬೈಕ್‌ ಓಡಿಸಿದ್ದಕ್ಕೆ ಪೋಷಕರಿಗೆ ಬಿತ್ತು ದಂಡ; 23 ಕಾಲೇಜುಗಳ 800 ವಾಹನಗಳಿಗೆ ಫೈನ್‌

    ಮಕ್ಕಳು ಬೈಕ್‌ ಓಡಿಸಿದ್ದಕ್ಕೆ ಪೋಷಕರಿಗೆ ಬಿತ್ತು ದಂಡ; 23 ಕಾಲೇಜುಗಳ 800 ವಾಹನಗಳಿಗೆ ಫೈನ್‌

    ಬೆಂಗಳೂರು: ಇದೇ ಮೊದಲ ಬಾರಿಗೆ ಕಾಲೇಜು ಆವರಣದಲ್ಲಿ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, 23 ಕಾಲೇಜುಗಳ 800 ವಾಹನಗಳ ಮಾಲೀಕರಿಗೆ ದಂಡ ಹಾಕಿದ್ದಾರೆ.

    ಅಪ್ರಾಪ್ತ ಮಕ್ಕಳಿಗೆ ಬೈಕ್‌ ಕೊಟ್ಟು ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪದಡಿ ಪೋಷಕರಿಗೆ ದಂಡ ವಿಧಿಸಲಾಗಿದೆ. ಮಕ್ಕಳಿಗೆ ಬೈಕ್‌ ಕೊಡುವ ಮುನ್ನ ಎಚ್ಚರ ವಹಿಸಬೇಕು ಎಂದು ಅವರ ಪೋಷಕರಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: 25 ಲಕ್ಷ ಜನರಿಂದ ಬಾಲಕ ರಾಮನ ದರ್ಶನ – 11 ಕೋಟಿ ರೂ. ಕಾಣಿಕೆ ಸಂಗ್ರಹ

    ವಿದ್ಯಾರ್ಥಿಗಳು ಮಾಡುವ ತಪ್ಪಿಗೆ ಪೋಷಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಲೈಸೆನ್ಸ್ ಇಲ್ಲದೆ ವಿದ್ಯಾರ್ಥಿಗಳು ವಾಹನಗಳನ್ನ ಚಲಾಯಿಸುತ್ತಿದ್ದರು. ಇದನ್ನು ಗಮನಿಸಿರುವ ಪೊಲೀಸರು ಕಾರ್ಯಾಚರಣೆ ನಡೆಸಿ, 23 ಕಾಲೇಜು 800 ವಾಹನಗಳ ಮಾಲೀಕರಿಗೆ ದಂಡ ಹಾಕಿದ್ದಾರೆ.

    ಶಾಲಾ ಕಾಲೇಜುಗಳಲ್ಲಿ ಸರ್ಕ್ಯೂಲರ್ ಹೊರಡಿಸಲು ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಅಪ್ರಾಪ್ತರು ವಾಹನ ತರದಂತೆ ಸರ್ಕ್ಯೂಲರ್ ಹೊರಡಿಸಬೇಕು ಎಂದು ತಿಳಿಸಿದ್ದಾರೆ. ತಪ್ಪಿದರೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಸೌಂಡ್ ಜಾಸ್ತಿ ಮಾಡಿದ್ರೆ, ಜೋರಾಗಿ ಮಾತಾಡಿದ್ರೆ ಬೀಳುತ್ತೆ ಕೇಸ್

    ಕಾಲೇಜು ಆವರಣದಲ್ಲಿದ್ದ ಸುಮಾರು 800 ವಾಹನಗಳಿಗೆ ಈಗಾಗಲೇ ದಂಡ ಬಿದ್ದಿದೆ. ಪರೀಕ್ಷೆ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಈ ಬಾರಿ ದಂಡ ಮಾತ್ರ ವಿಧಿಸಲಾಗಿದೆ. ಮತ್ತೊಮ್ಮೆ ಇದೇ ರೀತಿ ನಡೆದರೆ ಐಪಿಸಿ ಸೆಕ್ಷನ್ ನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಕುಡಿದ ಮತ್ತಿನಲ್ಲಿ ಪ್ರಸಾದ್ ಬಿದ್ದಪ್ಪನ ಪುತ್ರನಿಂದ ಪೊಲೀಸರಿಗೆ ಅವಾಜ್

    ಕುಡಿದ ಮತ್ತಿನಲ್ಲಿ ಪ್ರಸಾದ್ ಬಿದ್ದಪ್ಪನ ಪುತ್ರನಿಂದ ಪೊಲೀಸರಿಗೆ ಅವಾಜ್

    ಬೆಂಗಳೂರು: ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪನ ಪುತ್ರ ಆಡಂ ಬಿದ್ದಪ್ಪ (Adam Bidapa) ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದು, ಹಾರ್ನ್ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಯಲಹಂಕದಲ್ಲಿ (Yelahanka) ನಡೆದಿದೆ.

    ಈ ವೇಳೆ ಸ್ಥಳಕ್ಕೆ ಬಂದ ಯಲಹಂಕ ಸಂಚಾರಿ ಪೊಲೀಸರ (Police) ಜೊತೆಗೂ ಆಡಂ ವಾಗ್ವಾದ ಮಾಡಿದ್ದಾನೆ. ಬಳಿಕ ಅವಿವಾ ಬಿದ್ದಪ್ಪಗೆ ಕರೆ ಮಾಡಿ ಪೊಲೀಸರೊಂದಿಗೆ ಮಾತಾಡುವಂತೆ ಹೇಳಿದ್ದಾನೆ. ಈ ವೇಳೆ ಪೊಲೀಸರು ನೀನು ಯಾರಿಗಾದರೂ ಕರೆ ಮಾಡು ಎಂದು ಹೇಳಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪೋಕ್ಸೋ ಪ್ರಕರಣ – ಪೊಲೀಸರಿಂದ ಸಂತ್ರಸ್ತೆಗೆ ಮಾನಸಿಕ ಕಿರುಕುಳ ಆರೋಪ

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್, ಆಡಂ ಕುಡಿದ ಮತ್ತಿನಲ್ಲಿ ಪೊಲೀಸರು ಹಾಗೂ ವ್ಯಕ್ತಿಯೊಬ್ಬರ ಜೊತೆ ಗಲಾಟೆ ಮಾಡಿದ್ದಾನೆ. ನಾನು ಪ್ರಭಾವಿ ಆಗಿದ್ದೇನೆ ನನ್ನನ್ನೇ ಪ್ರಶ್ನೆ ಮಾಡುತ್ತೀರಾ ಎಂದು ಬೆದರಿಕೆ ಹಾಕಿದ್ದಾನೆ. ಯಲಹಂಕ ಸಂಚಾರಿ ಪೊಲೀಸರು ಆತನ ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮೆಡಿಕಲ್ ಟೆಸ್ಟ್ ಮಾಡಿಸಿ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಈ ವಿಚಾರವಾಗಿ ರಾಹುಲ್ ಎಂಬವರು ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಸಂಬಂಧ ಕಾರು ಚಾಲಕ ರಾಹುಲ್, ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ಆಸಿಡ್ – ಮುಖ್ಯಶಿಕ್ಷಕ ಅಮಾನತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸವಾರರಿಗೆ ಗುಡ್ ನ್ಯೂಸ್ – ಟ್ರಾಫಿಕ್ ಫೈನ್ ಡಿಸ್ಕೌಂಟ್ ಸಮಯ ವಿಸ್ತರಣೆ

    ಸವಾರರಿಗೆ ಗುಡ್ ನ್ಯೂಸ್ – ಟ್ರಾಫಿಕ್ ಫೈನ್ ಡಿಸ್ಕೌಂಟ್ ಸಮಯ ವಿಸ್ತರಣೆ

    ಬೆಂಗಳೂರು: ಟ್ರಾಫಿಕ್ ಫೈನ್  (Traffic Fine)  50% ರಿಯಾಯಿತಿಯ (Discount) ಸಮಯವನ್ನು ವಿಸ್ತರಿಸುವುದಾಗಿ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ವಿರಪ್ಪ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಯಾಯಿತಿ ದಂಡ ಸಂಗ್ರಹವನ್ನು ಮತ್ತೆ ವಿಸ್ತರಿಸಲಾಗಿದ್ದು, ಫೆ.14 ರಿಂದ 24ರವರೆಗೂ ಕಾಲಾವಕಾಶವಿದೆ. ಈ ಕುರಿತು ನಾಳೆ (ಮಂಗಳವಾರ) ಅಧಿಕೃತ ಆದೇಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಈ ಹಿಂದೆ ದಂಡ ಪಾವತಿಸಲು ಫೆ.11 ಕೊನೆಯ ದಿನಾಂಕವಾಗಿತ್ತು. ಕೊನೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಜನರಿಂದ ಮನವಿ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ದಂಡ ವಿನಾಯಿತಿಯ ಮುಂದುವರಿಕೆಗೆ ಸಂಚಾರ ವಿಶೇಷ ಆಯುಕ್ತ ಮನವಿ ಮಾಡಿದ್ದರು. 2 ವಾರಗಳ ಕಾಲ ವಿನಾಯಿತಿ ವಿಸ್ತರಣೆಗೆ ಮನವಿ ಮಾಡಲಾಗಿದೆ. ನಾಳೆ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ. ಫೆ. 14 ರಿಂದ ಫೆ. 28ರವರೆಗೆ ಮುಂದುವರಿಸುವ ಚಿಂತನೆ ಇದೆ. ಈ ಬಗ್ಗೆ ನಾಳೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಚರ್ಚ್‌ಗೆ ಬೆಂಕಿ ಹಾಕಿ, ಗೋಡೆ ಮೇಲೆ ರಾಮ ಎಂದು ಬರೆದ ಕಿಡಿಗೇಡಿಗಳು

    ರಿಯಾಯಿತಿಯ ಕುರಿತು ಸರ್ಕಾರವನ್ನು ಒಪ್ಪಿಸಲು ನಮಗೆ ಮೂರು ತಿಂಗಳು ಕಾಲಾವಕಾಶ ಹಿಡಿಯಿತು. ಇದೀಗ ದಂಡ ಪಾವತಿ ಮಾಡುವ ಅವಧಿ ವಿಸ್ತರಣೆಗೆ ಕಾಲಾವಕಾಶ ಕೇಳಿದರು. ಈ ಕುರಿತು ವಿಶೇಷ ಆಯುಕ್ತರು ಪತ್ರ ಸಹ ಬರೆದಿದ್ದರು. ಜೊತೆಗೆ ಹಲವರು ಸಮಯ ವಿಸ್ತರಿಸಲು ಕಾಲಾವಕಾಶ ಕೇಳಿದ್ದರು. ಹೀಗಾಗಿ ದಂಡ ಕಟ್ಟಲು ಮತ್ತೆ ಕಾಲಾವಕಾಶ ನೀಡುವ ಚಿಂತನೆ ನಡೆಸಲಾಗಿದೆ. ಇನ್ನೂ ಎರಡು ಕೋಟಿಯಷ್ಟು ಟ್ರಾಫಿಕ್ ಕೇಸ್‍ಗಳು ಬಾಕಿಯಿವೆ. 800 ಕೋಟಿ ರೂ.ಗೂ ಹೆಚ್ಚು ಫೈನ್ ಹಣ ಸಂಗ್ರಹವಾಗಬೇಕಿದೆ ಎಂದರು. ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ರಷ್ಯಾದಿಂದ 13 ಶತಕೋಟಿ ಡಾಲರ್ ಮೌಲ್ಯದ ಶಸ್ತಾಸ್ತ್ರ ಪೂರೈಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶೇ.50 ಫೈನ್ ಡಿಸ್ಕೌಂಟ್‍ಗೆ ಫುಲ್ ರೆಸ್ಪಾನ್ಸ್ – 5 ದಿನದಲ್ಲಿ 50 ಕೋಟಿ ರೂ. ದಂಡ ವಸೂಲಿ

    ಶೇ.50 ಫೈನ್ ಡಿಸ್ಕೌಂಟ್‍ಗೆ ಫುಲ್ ರೆಸ್ಪಾನ್ಸ್ – 5 ದಿನದಲ್ಲಿ 50 ಕೋಟಿ ರೂ. ದಂಡ ವಸೂಲಿ

    ಬೆಂಗಳೂರು: ಸಾರಿಗೆ ನಿಯಮ ಉಲ್ಲಂಘನೆ  (Traffic Rules) ದಂಡ (Fine) ಪಾವತಿಸಲು ನೀಡಿದ್ದ ಶೇ. 50 ರಿಯಾಯಿತಿ ವಿನಾಯತಿಗೆ ಭರ್ಜರಿ ಪ್ರತಿಕ್ರಿಯೆ ಬರುತ್ತಿದೆ. ಕೇವಲ 5 ದಿನಕ್ಕೆ 50 ಕೋಟಿ ದಂಡ ವಸೂಲಿ ಆಗಿದೆ.

    ಅರ್ಧ ಫೈನ್ ಕಟ್ಟಲು ತಾ ಮುಂದು ನಾ ಮುಂದು ಎಂದು ಜನರು ಮುಗಿಬೀಳುತ್ತಿದ್ದಾರೆ. ಅತ್ತ ಫೈನ್ ಕಟ್ಟುವುದಕ್ಕೆ ಹೆಚ್ಚಾಗ್ತಾ ಇದ್ರೆ ಇನ್ನೊಂದು ಜನ ಫೈನ್ ಕಟ್ಟೋಕೆ ಟೈಂ ಜಾಸ್ತಿ ಮಾಡಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕಾನೂನು ಸೇವಾಪ್ರಾಧಿಕಾರದ ಮನವಿ ಮೇರೆಗೆ ರಾಜ್ಯ ಸರ್ಕಾರವು ಕೂಡ ಒಪ್ಪಿಗೆ ಸೂಚಿಸಿ ಶೇ. 50 ದಂಡ ಕಟ್ಟಿ ಇದರ ಸದುಪಯೋಗ ಮಾಡಿಕೊಳ್ಳುವುದಕ್ಕೆ ಆಫರ್ ಕೊಟ್ಟಿದೆ.

    ಇದನ್ನು ಸರಿಯಾಗಿ ಬಳಕೆ ಮಾಡಿಕೊಂಡ ಸಾರ್ವಜನಿಕರು ಕೋಟಿ ಕೋಟಿ ದಂಡವನ್ನು ಕಟ್ಟಿ ತಮ್ಮ ಕೇಸ್‌ಗಳನ್ನು ಕ್ಲಿಯರ್ ಮಾಡಿಕೊಳ್ಳುತ್ತಿದ್ದಾರೆ. 5 ದಿನದಲ್ಲಿ 50 ಕೋಟಿ ದಂಡ ವಸೂಲಿ ಮಾಡಿದ್ದಾರೆ.‌ ಆನ್‌ ಲೈನ್ ಅಲ್ಲಿಯೇ ಅತಿ ಹೆಚ್ಚು ದಂಡ ಪಾವತಿ ಮಾಡಿದ್ದು, 1 ಕೋಟಿ 80 ಲಕ್ಷ ಪ್ರಕರಣಗಳಲ್ಲಿ 15 ಲಕ್ಷ ಕೇಸ್ ಗಳು ಮಾತ್ರ ವಿಲೇವಾರಿಯಾಗಿದೆ.‌ ಇನ್ನೂ 4 ದಿನ ಕಾಲಾವಕಾಶ ಇರೋದ್ರಿಂದ ಜನ ದಂಡ ಪಾವತಿ ಮಾಡೋಕೆ ಬರ್ತಾ ಇದ್ದಾರೆ. ಇದನ್ನೂ ಓದಿ: ಡಿಕೆಶಿ ಪುತ್ರಿ ಐಶ್ವರ್ಯಗೆ CBI ನೋಟಿಸ್; 10 ದಿನದಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ

    ದಿನವಾರು ಕೇಸ್‌ಗಳು ದಂಡ ವಸೂಲಿ: ಫೆ. 3ರಂದು 7 ಕೋಟಿ 41 ಸಾವಿರ ರೂ. ದಂಡ ವಸೂಲಿಯಾಗಿದ್ದರೇ, ಫೆ. 4ಕ್ಕೆ 9 ಕೋಟಿ 27 ಸಾವಿರ ರೂ. ವಸೂಲಿಯಾಗಿದೆ. ಫೆ. 5ರಂದು 7 ಕೋಟಿ 50 ಲಕ್ಷ ರೂ., ಫೆ. 6ರಂದು 9 ಕೋಟಿ 57 ಲಕ್ಷ ರೂ. ದಂಡ ವಸೂಲಿಯಾಗಿದೆ. ಫೆ. 7ರಂದು 8 ಕೋಟಿ 13 ಲಕ್ಷ ರೂ. ಹಾಗೂ ಫೆ. 8 (12 ಗಂಟೆ) ರಂದು 3 ಕೋಟಿ ರೂ. ದಂಡ ವಸೂಲಿಯಾಗಿದ್ದು, ಒಟ್ಟು 46 ಕೋಟಿ 45 ಲಕ್ಷ (ಸಂಜೆಯ ಒಳಗೆ 50 ಕೋಟಿ) ರೂ. ವಸೂಲಿಯಾಗಿದೆ.

    ಇನ್ನು ಇದೇ ಶನಿವಾರ ಅಂದ್ರೆ ಫೆಬ್ರವರಿ 11 ರ ತನಕ ಈ ರೀತಿ ವಿನಾಯಿತಿ ಅವಕಾಶ ಇದ್ದು, ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಇನ್ನು ಸರ್ಕಾರ ನೀಡಿಋುವ ಕಾಲಾವಧಿಯಲ್ಲಿ ದಂಡ ಪಾವತಿ ಮಾಡೋದು ಕಷ್ಟ.‌ ಇನ್ನೂ ಹೆಚ್ಚು ದಿನಗಳ ಕಾಲಾವಕಾಶವನ್ನು ನೀಡಬೇಕು ಎಂದು ಜನ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣರನ್ನು ಉದ್ದೇಶ ಪೂರ್ವಕವಾಗಿ ತುಳಿಯುತ್ತಿದ್ದಾರೆ: ಸುಬ್ಬರಾಯ ಹೆಗ್ಗಡೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ

    ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ

    ಛತ್ತೀಸಗಢ: ಸರ್ಕಾರಗಳು ಹಾಗೂ ಪೊಲೀಸ್‌ ಇಲಾಖೆ ಎಷ್ಟೇ ಕಠಿಣ ನಿಯಮಗಳನ್ನು ಜಾರಿಗೊಳಿಸಿದರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರು ಇದ್ದೇ ಇರುತ್ತಾರೆ. ನಿಯಮಗಳನ್ನು ಗಾಳಿಗೆ ತೂರಿ ಸಂಚಾರ ಮಾಡುವವರೇ ಹೆಚ್ಚು. ಇದಕ್ಕೆ ಬ್ರೇಕ್‌ ಹಾಕಲು ಪಂಜಾಬ್‌ ಪೊಲೀಸ್‌ ಇಲಾಖೆ ಮುಂದಾಗಿದೆ.

    ಅತಿ ವೇಗವಾಗಿ ವಾಹನ ಚಲಾಯಿಸುವುದು, ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುವವರಿಗೆ ಕಡ್ಡಾಯ ರಕ್ತದಾನ ಮಾಡುವ ಶಿಕ್ಷೆಯನ್ನು ವಿಧಿಸುವ ನಿಯಮ ರೂಪಿಸಲು ಮುಂದಾಗಿದೆ. ದಂಡ ಹಾಕುವುದು, ತಾತ್ಕಾಲಿಕವಾಗಿ ಲೈಸೆನ್ಸ್‌ ರದ್ದು ಮಾಡುವ ಶಿಕ್ಷೆಯ ಜೊತೆಗೆ ರಕ್ತದಾನ ಮಾಡುವ ಶಿಕ್ಷೆ ವಿಧಿಸುವ ಹೊಸ ನಿಯಮ ಜಾರಿ ಮಾಡಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪೈಸ್‌ಜೆಟ್ ವಿಮಾನ ಹಾರಾಟ ನಿಲ್ಲಿಸಿ – ದೆಹಲಿ ಹೈಕೋರ್ಟ್‌ನಲ್ಲಿ ಮನವಿ

    ಅತಿ ವೇಗವಾಗಿ ವಾಹನ ಚಲಾಯಿಸಿದರೆ 1,000 ರೂ. ದಂಡ ಮತ್ತು ಮೂರು ತಿಂಗಳವರೆಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು. ಕುಡಿದು ವಾಹನ ಚಲಾಯಿಸಿದರೆ ಅದೇ ಅವಧಿಗೆ ಪರವಾನಗಿ ಅಮಾನತುಗೊಳಿಸುವುದರ ಜೊತೆಗೆ 5,000 ರೂ. ದಂಡ ವಿಧಿಸಲಾಗುತ್ತದೆ.

    ಮತ್ತೆ ಅದೇ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡರೆ ಅತಿ ವೇಗದ ಚಾಲನೆಗೆ 2,000 ರೂ. ಮತ್ತು ಮೂರು ತಿಂಗಳ ಅವಧಿಗೆ ಪರವಾನಗಿ ಅಮಾನತು. ಕುಡಿದು ವಾಹನ ಚಲಾಯಿಸಿದರೆ 10,000 ರೂ. ದಂಡ ಹಾಗೂ 3 ತಿಂಗಳ ಅವಧಿಗೆ ಲೈಸೆನ್ಸ್‌ ರದ್ದು ಮಾಡಲಾಗುವುದು.

    ನಿಯಮ ಉಲ್ಲಂಘಿಸುವವರು ಸಾರಿಗೆ ಪ್ರಾಧಿಕಾರದಿಂದ ಸಂಚಾರಿ ನಿಯಮ ಕುರಿತು ತಿಳಿದುಕೊಳ್ಳಬೇಕು. ನಂತರ ಹತ್ತಿರದ ಶಾಲೆಯಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ 9 ರಿಂದ 12 ನೇ ತರಗತಿಯ ಕನಿಷ್ಠ 20 ವಿದ್ಯಾರ್ಥಿಗಳಿಗೆ ಅದನ್ನು ಕಲಿಸಬೇಕು. ನಂತರ ಅವರಿಗೆ ನೋಡಲ್ ಅಧಿಕಾರಿಯಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಮಾರ್ಗರೇಟ್ ಆಳ್ವಾ ಆಯ್ಕೆ

    ಇದರ ಜೊತೆಗೆ ತಪ್ಪಿತಸ್ಥರು ಹತ್ತಿರದ ಆಸ್ಪತ್ರೆಯಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ ಸಮಾಜ ಸೇವೆ ಮಾಡಬೇಕು ಅಥವಾ ಹತ್ತಿರದ ರಕ್ತನಿಧಿಯಲ್ಲಿ ಕನಿಷ್ಠ ಒಂದು ಯೂನಿಟ್ ರಕ್ತವನ್ನು ದಾನ ಮಾಡಬೇಕು.

    ರೆಡ್‌ ಸಿಗ್ನಲ್‌ ಜಂಪ್‌ ಮಾಡಿದರೆ ಮೊದಲ ಅಪರಾಧಕ್ಕೆ 1,000 ರೂ. ಮತ್ತು ನಂತರದ ಅಪರಾಧಗಳಿಗೆ 2,000 ರೂ., ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳನ್ನು ಬಳಸಿದರೆ 5,000 ರೂ. ನಂತರ 10,000 ರೂ., ಓವರ್‌ಲೋಡ್ ಅಥವಾ ಗೂಡ್ಸ್ ಕ್ಯಾರೇಜ್‌ನಲ್ಲಿರುವ ವ್ಯಕ್ತಿಗಳಿಗೆ 20,000 ರೂ. ನಂತರ 2,000 ಹೆಚ್ಚುವರಿ ದಂಡ, ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಇದ್ದರೆ 1,000 ರೂ. ನಂತರ 2,000 ರೂ. ದಂಡ ವಿಧಿಸಲಾಗುವುದು.

    Live Tv
    [brid partner=56869869 player=32851 video=960834 autoplay=true]

  • ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸನ್ಮಾನಿಸಿದ ಪೊಲೀಸರು

    ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸನ್ಮಾನಿಸಿದ ಪೊಲೀಸರು

    ಯಾದಗಿರಿ: ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಯಾದಗಿರಿ ಪೊಲೀಸರು ವಿಭಿನ್ನ ಪ್ರಯತ್ನ ಮಾಡಿದ್ದು, ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಈ ಮೂಲಕ ವಿಭಿನ್ನವಾಗಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ.

    ಇಷ್ಟು ದಿನ ಆಟೋಚಾಲಕರನ್ನು ಠಾಣೆಗೆ ಕರೆದು ಎಚ್ಚರಿಗೆ ನೀಡುತ್ತಿದ್ದ ಪೊಲೀಸರು, ಇಂದು ಠಾಣೆಗೆ ಕರೆದು ಸನ್ಮಾನಿಸಿ ರಸ್ತೆ ಮತ್ತು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವಂತೆ ಮನವಿ ಮಾಡಿದ್ದಾರೆ. ಯಾದಗಿರಿ ಡಿವೈಎಸ್ಪಿ ಸಂತೋಷ ಬನ್ನಹಟ್ಟಿ ಮತ್ತು ಟ್ರಾಫಿಕ್ ಪಿಎಸ್‍ಐ ಪ್ರದೀಪ್ ಬಿಸೆ, ಚಂದ್ರನಾಥ್ ನಗರದಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಹೊಸ ಸಂಪ್ರದಾಯಕ್ಕೆ ಮುಂದಾಗಿದ್ದಾರೆ.

    ಆಟೋ ಚಾಲಕರು, ವಾಹನ ಸವಾರರನ್ನು ಠಾಣೆಗೆ ಕರೆದು, ಸನ್ಮಾನ ಮಾಡಿ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಆಟೋ ಚಾಲಕರು ಸೇರಿದಂತೆ, ನಗರದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಸಂಚಾರಿ ಠಾಣಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಆಟೋಚಾಲಕರು ಮತ್ತು ಸಂಚಾರಿ ಠಾಣೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

  • ಸಂಚಾರ ನಿಯಮ ಉಲ್ಲಂಘನೆ- ಕಾರು ತಡೆದ ಪೊಲೀಸರನ್ನೇ ಬಾನೆಟ್ ಮೇಲೆ ಹೊತ್ತೊಯ್ದ ಚಾಲಕ

    ಸಂಚಾರ ನಿಯಮ ಉಲ್ಲಂಘನೆ- ಕಾರು ತಡೆದ ಪೊಲೀಸರನ್ನೇ ಬಾನೆಟ್ ಮೇಲೆ ಹೊತ್ತೊಯ್ದ ಚಾಲಕ

    – ಅದೃಷ್ಟವಶಾತ್ ಪೊಲೀಸ್ ಬಚಾವ್

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಯಾನಕ ಘಟನೆ ನಡೆದಿದ್ದು, ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಕಾರ್ ತಡೆದಿದ್ದಾರೆ. ಚಾಲಕ ಕಾರ್ ನಿಲ್ಲಿಸಿದೇ ಪೊಲೀಸ್ ಅಧಿಕಾರಿಯನ್ನೇ ಕಾರ್ ಬಾನೆಟ್ ಮೇಲೆ ಕೆಲ ಮೀಟರ್ ಗಳ ದೂರ ಕೊಂಡೊಯ್ದು ಕೆಳಗೆ ಕೆಡವಿದ್ದಾನೆ. ಈ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.

    ದೆಹಲಿಯ ಧೌಲಾ ಕುವಾನ್ ಬಳಿ ಈ ಭಯಾನಕ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಕಾರ್ ತಡೆದಿದ್ದಾರೆ. ಈ ವೇಳೆ ಪೊಲೀಸರು ಕಾರ್‍ಗೆ ಅಡ್ಡಲಾಗಿ ನಿಂತಿದ್ದಾರೆ. ತಕ್ಷಣವೇ ಚಾಲಕ ಕಾರ್ ನಿಲ್ಲಿಸದೇ ಪೊಲೀಸ್ ಅಧಿಕಾರಿಯನ್ನು ಕಲ ಮೀಟರ್ ಗಳ ವರೆಗೆ ಬಾನೆಟ್ ಮೇಲೆಯೇ ಕರೆದೊಯ್ದಿದ್ದಾನೆ. ಈ ಘಟನೆ ದಕ್ಷಿಣ ದೆಹಲಿಯ ವಾಹನ ದಟ್ಟಣೆಯ ಪ್ರದೇಶಲ್ಲಿ ನಡೆದಿದೆ.

    ಪೊಲೀಸ್ ಅಧಿಕಾರಿ ಕಳಗೆ ಬಿದ್ದರೆ ಅಪಾಯ ಎಂಬುದನ್ನು ಅರಿತು ಕೆಲ ಹೊತ್ತು ಬಾನಟ್ ಮೇಲೆಯೇ ನಿಂತಿದ್ದಾರೆ. ಚಾಲಕ ಅವರನ್ನು ಬೀಳಿಸಲು ಮನಬಂದಂತೆ ಕಾರ್ ತಿರುಗಿಸಿದ್ದಾನೆ. ಆದರೂ ಪೊಲೀಸ್ ಪಟ್ಟು ಬಿಡದೆ ಗಟ್ಟಿಯಾಗಿ ಹಿಡಿದು ನಿಂತಿದ್ದಾರೆ. ಚಾಲಕನ ವರ್ತನೆ ಅತೀರೇಕಕ್ಕೆ ಹೋಗುತ್ತಿದ್ದಂತೆ ಪ್ಲಾನ್ ಮಾಡಿ ಕಾರ್ ಅಂಚಿಗೆ ಬಂದು ಬಾನೆಟ್ ಬಿಟ್ಟು ಜಿಗಿದ್ದಿದ್ದಾರೆ. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಸವಾರರು ವಾಹನಗಳನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಪೊಲೀಸ್ ಅಧಿಕಾರಿ ಬಚಾವ್ ಆಗಿದ್ದಾರೆ.

    ನಂತರ ಕಾರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

  • ಬುಲೆಟ್ ಮೇಲಿತ್ತು 103 ಪ್ರಕರಣಗಳು – ಫೈನ್ ಕಂಡು ಬೆಚ್ಚಿಬಿದ್ದ ಮಾಲೀಕ

    ಬುಲೆಟ್ ಮೇಲಿತ್ತು 103 ಪ್ರಕರಣಗಳು – ಫೈನ್ ಕಂಡು ಬೆಚ್ಚಿಬಿದ್ದ ಮಾಲೀಕ

    ಬೆಂಗಳೂರು: ಬುಲೆಟ್ ಬೈಕ್ ಮಾಲೀಕನೊಬ್ಬ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡ ಕಟ್ಟಿರುವ ಘಟನೆ ಸಿಲಿಕಾನ್ ಸಿಟಿಯ ಆಡುಗೊಡಿಯಲ್ಲಿ ನಡೆದಿದೆ.

    ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರೋ ರಾಜೇಶ್ ಎಂಬುವವರಿಗೆ ಸೇರಿರುವ ಬುಲೆಟ್ ಬೈಕ್ ಮೇಲೆ ಬರೋಬ್ಬರಿ 103 ಕೇಸ್ ಇರುವುದನ್ನು ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಸಂಚಾರಿ ನಿಮಯ ಉಲ್ಲಂಘನೆ ಕೇಸ್‍ಗಳು ಸೆಂಚುರಿ ದಾಟಿದ ಪರಿಣಾಮ ಸಂಚಾರಿ ಪೊಲೀಸರು 58 ಸಾವಿರದ 200 ರೂಪಾಯಿಯನ್ನು ದಂಡ ಹಾಕಿದ್ದಾರೆ.

    ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೇ ಸಂಚಾರ, ಒನ್ ವೇ ಹೀಗೆ ಸುಮಾರು 103 ಬಾರಿ ಬೈಕ್ ಸವಾರ ರಾಜೇಶ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಈ ಕಾರಣದಿಂದ ಸಂಚಾರಿ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದರು. ಪರಿಣಾಮ ಇಂದು ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಗೆ ಬಂದ ರಾಜೇಶ್ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡ ಕಟ್ಟಿದ್ದಾರೆ.