Tag: ಸಂಗ್ರಹ

  • ವಿಶ್ವನಾಥ್ ಆನಂದ್‍ಗೆ ಟಫ್ ಫೈಟ್ ಕೊಟ್ಟ ಕಿಚ್ಚ- 6.65 ಲಕ್ಷ ದೇಣಿಗೆ ಸಂಗ್ರಹ

    ವಿಶ್ವನಾಥ್ ಆನಂದ್‍ಗೆ ಟಫ್ ಫೈಟ್ ಕೊಟ್ಟ ಕಿಚ್ಚ- 6.65 ಲಕ್ಷ ದೇಣಿಗೆ ಸಂಗ್ರಹ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರು ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರಿಗೆ ಚೆಸ್ ಸ್ಪರ್ಧೆಯಲ್ಲಿ ಕಠಿಣ ಸ್ಪರ್ಧೆಯನ್ನೇ ನೀಡಿದ್ದಾರೆ.

    ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ನಟನೆಯಲ್ಲಿ ತಮ್ಮದೇ ಅಗಿರುವ ಚಾಪನ್ನು ಮೂಡಿಸಿದ್ದಾರೆ. ಕ್ರಿಕೆಟ್‍ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಚೆಸ್‍ನಲ್ಲೂ ಘಟಾನುಘಟಿಗೆ ಪೈಪೋಟಿ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಕೋವಿಡ್ ಪರಿಹಾರ ನಿಧಿ ಸಂಗ್ರಹಕ್ಕಾಗಿ ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್.ಕಾಮ್ ಭಾನುವಾರ ಆಯೋಜಿಸಿದ್ದ ಚೆಕ್‍ಮೇಟ್ ಕೋವಿಡ್ ಸೆಲೆಬ್ರಿಟಿ ಆವೃತ್ತಿಯಲ್ಲಿ, ನಟ ಸುದೀಪ್, ರಿತೇಷ್ ದೇಶ್‍ಮುಖ್, ಕ್ರಿಕೆಟಿಗ ಯಜುವೇಂದ್ರ ಚಾಹಲ್ ಸೇರಿದಂತೆ ಕೆಲ ಗಣ್ಯರೊಂದಿಗೆ 30 ನಿಮಿಷಗಳ ಟೈಂಔಟ್‍ನಲ್ಲಿ ಏಕಕಾಲದಲ್ಲಿ ವಿಶ್ವನಾಥನ್ ಆನಂದ್ ಚೆಸ್ ಅಡಿದ್ದಾರೆ. ಇದನ್ನೂ ಓದಿ: ವರ್ಲ್ಡ್​ ಚೆಸ್ ಚಾಂಪಿಯನ್ ಜೊತೆಗೆ ಕಿಚ್ಚನ ಆಟ

    ಟೈಂಔಟ್‍ನಲ್ಲಿ ಸುದೀಪ್ ಅವರು ವಿಶ್ವನಾಥನ್ ಆನಂದ್ ಅವರೆದುರು ಸೋತರು. ವಿಶ್ವನಾಥನ್ ಆನಂದ್ ಅವರ ಟೈಮರ್‍ನಲ್ಲಿ 46 ಸೆಕೆಂಡ್‍ಗಳಷ್ಟೇ ಉಳಿದಿತ್ತು. ಆಟದ ಬಳಿಕ ಸ್ಪರ್ಧಿಗಳ ಜೊತೆ ವಿಶ್ವನಾಥನ್ ಆನಂದ್ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಸುದೀಪ್, ನನ್ನ ಹಂತದ ಸ್ಪರ್ಧಿಗಳೊಂದಿಗೆ ಚೆನ್ನಾಗಿ ಆಡುತ್ತೇನೆ. ಇಂತಹ ದಿಗ್ಗಜರ ಜೊತೆ ಆಡುವುದೇ ನಮಗೆ ಸಿಕ್ಕ ದೊಡ್ಡ ಅವಕಾಶ. ಇಲ್ಲಿ ಯಾರು ಗೆಲ್ಲುತ್ತಾರೆ ಸೋಲುತ್ತಾರೆ ಎನ್ನುವುದು ಮುಖ್ಯವಲ್ಲ ಎಂದಿದ್ದಾರೆ.

    ಯಾರು ಹೆಚ್ಚು ಹೊತ್ತು ವಿಶ್ವನಾಥನ್ ಅವರ ವಿರುದ್ಧ ಕಣದಲ್ಲಿ ಇರುತ್ತಾರೆ ಎನ್ನುವುದು ಮುಖ್ಯ. ಆನ್‍ಲೈನ್ ಚೆಸ್ ಬಗ್ಗೆ ನನಗೇ ಯಾವುದೇ ಮಾಹಿತಿ ಇರಲಿಲ್ಲ. ನಮಗೆ ಸೋಲುವ ಭಯವಿರಲಿಲ್ಲ, ಏಕೆಂದರೆ ನಾವು ಆಡುತ್ತಿರುವುದು ವಿಶ್ವನಾಥನ್ ಆನಂದ್ ಅವರ ವಿರುದ್ಧ. ಈ ಅನುಭವ ಜೀವನಪೂರ್ತಿ ಇರಲಿದೆ. ಈ ಆಟ ಕೇವಲ ಮನರಂಜನೆಗಾಗಿ ಆಗಿರಲಿಲ್ಲ. ಒಂದು ಉದ್ದೇಶ ಇದರ ಹಿಂದೆ ಇತ್ತು ಎಂದು ಸುದೀಪ್ ಹೇಳಿದ್ದಾರೆ.

    ಎರಡನೇ ಹಂತದಲ್ಲಿ ವಿಶ್ವನಾಥನ್ ಆನಂದ್ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧವೂ ಆಡಿದರು. ವಿಶ್ವನಾಥನ್ ಆನಂದ್ ಅವರ ಜೀವನದ ಬಗ್ಗೆ ಸಿನಿಮಾ ಆದರೆ ಅದರಲ್ಲಿ ನಟಿಸುತ್ತೀರಾ? ಎನ್ನುವ ಜನರ ಪ್ರಶ್ನೆಗೆ ಉತ್ತರಿಸಿದ ಅಮೀರ್ ಖಾನ್, ಖಂಡಿತವಾಗಿಯೂ..ಇದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದರು. ಆನ್‍ಲೈನ್‍ನಲ್ಲಿ ನಡೆದ ಈ ಸ್ಪರ್ಧೆಯನ್ನು 20 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, 6.65 ಲಕ್ಷ ದೇಣಿಗೆ ಸಂಗ್ರಹವಾಗಿದೆ.

    ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಚೆಸ್ ಗ್ರ್ಯಾಂಡ್‍ಮಾಸ್ಟರ್ ವಿಶ್ವನಾಥನ್ ಅವರ ನಡುವೆ ನಡೆದಿರುವ ರೋಚಕ ಆಟವನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಪರದೆ ಮೇಲೆ, ಮೈದಾನದಲ್ಲಿ ಕಿಚ್ಚನ ಖದರ್ ನೋಡಿದ ಅಭಿಮಾನಿಗಳು ಚಿಸ್‍ನಲ್ಲಿ ಕಿಚ್ಚನ ಆಟವನ್ನು ನೋಡಿ ಫಿದಾ ಆಗಿರುವುದು ಖಂಡಿತಾ ಹೌದು.

  • ರಾಮಮಂದಿರ ದೇಣಿಗೆಯಲ್ಲಿ 15 ಸಾವಿರ ಚೆಕ್ ಬೌನ್ಸ್

    ರಾಮಮಂದಿರ ದೇಣಿಗೆಯಲ್ಲಿ 15 ಸಾವಿರ ಚೆಕ್ ಬೌನ್ಸ್

    ನವದೆಹಲಿ: ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಲಾಗಿದ್ದ 22 ಕೋಟಿ ಮೌಲ್ಯದ 15 ಸಾವಿರ ಚೆಕ್ ಬೌನ್ಸ್ ಆಗಿದೆ ಎನ್ನಲಾಗುತ್ತಿದೆ.

    ವಿಶ್ವ ಹಿಂದೂ ಪರಿಷತ್ ಸಂಗ್ರಹಿಸಿದ್ದ ಹಣದಲ್ಲಿ 33 ಕೋಟಿ ರೂಪಾಯಿ ಮೌಲ್ಯದ ಚೆಕ್ ಬೌನ್ಸ್ ಆಗಿದೆ. ಶ್ರಿರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಲೆಕ್ಕಪರಿಶೋಧನಾ ವರದಿ ಪ್ರಕಾರ, ಬ್ಯಾಂಕ್ ಖಾತೆಯಲ್ಲಿ ಹಣದ ಕೊರತೆ ಅಥವಾ ಕೆಲವು ತಾಂತ್ರಿಕ ದೋಷದಿಂದಾಗಿ ಚೆಕ್ ಬೌನ್ಸ್ ಆಗಿದೆ ಎಂದು ಹೇಳಲಾಗುತ್ತಿದೆ.

    ತಾಂತ್ರಿಕ ದೋಷಗಳ ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅವರು ಮತ್ತೆ ದೇಣಿಗೆ ನೀಡುವಂತೆ ಜನರನ್ನು ಕೇಳುತ್ತಿದ್ದಾರೆ ಎಂದು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ಹೇಳಿದರು. ಜನವರಿ 15 ರಿಂದ ಆರಂಭವಾದ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ವಿಶ್ವ ಹಿಂದೂ ಪರಿಷತ್ ಅಪಾರ ಪ್ರಮಾಣದ ದೇಣಿಗೆಯನ್ನು ಸಂಗ್ರಹಿಸಿತ್ತು. ಈ ಕುರಿತಾಗಿ ಟ್ರಸ್ಟ್ ನಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

  • ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಡಾಲಿ ಧನಂಜಯ್!

    ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಡಾಲಿ ಧನಂಜಯ್!

    ಬೆಂಗಳೂರು: ಇಂದು ಟಗುರು ಡಾಲಿಯ ಹುಟ್ಟುಹಬ್ಬವಾಗಿದ್ದು, ಧನಂಜಯ್ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    ನಿನ್ನೆ ರಾತ್ರಿಯೇ ನೂರಾರು ಅಭಿಮಾನಿಗಳು ಸೇರಿ ಡಾಲಿ ಹುಟ್ಟುಹಬ್ಬವನ್ನು ಆಚರಿಸೋ ಪ್ಲಾನ್ ಕೂಡ ಮಾಡಿದರು. ಆದರೆ ಧನಂಜಯ್ ಮಾತ್ರ ಹುಟ್ಟುಹಬ್ಬದ ಅಡಂಭರಕ್ಕೆ ಬ್ರೇಕ್ ಹಾಕಿ ಹುಟ್ಟುಹಬ್ಬವನ್ನು ನೆರೆಪೀಡಿತ ಕೊಡಗು ಜನರ ನೆರವಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

    ಜಯನಗರ ಬಳಿ ಇರುವ ಶಾಲಿನಿ ಮೈದಾನದಲ್ಲಿ ಧನಂಜಯ್ ಅವರ ನೂರಾರು ಅಭಿಮಾನಿಗಳು ಧಾವಿಸಿ ಶುಭ ಕೋರಿದಲ್ಲದೆ, ಕೈಲಾದ ದೇಣಿಗೆಯನ್ನು ನೀಡಿದರು. ಸೆಲ್ಫೀಗೊಂದಕ್ಕೆ ಕಾಣಿಕೆ ಎಂಬಂತೆ ಧನ ಸಂಗ್ರಹಣೆ ಕಾರ್ಯ ಮಾಡಿದ ನಟ ಧನಂಜಯ್ ಅಲ್ಲಿನ ಜನ ಸಂಕಷ್ಟದಲ್ಲಿದ್ದಾರೆ ಅವರಿಗೆ ನಾನು ಸಹ ಸಹಾಯ ಮಾಡುತ್ತೇನೆ ಎಂದು ಹೇಳಿದರು.

    ಇತ್ತೀಚಿಗೆ ರವಿಚಂದ್ರನ್, ಕೊಡಗು ಪ್ರವಾಹ ಸಂತ್ರಸ್ತರಿಗೆ ನಾಡಿನ ಜನರು ನೆರವಾಗುತ್ತಿದ್ದಾರೆ ನಿಜ. ಊಟ, ತಿಂಡಿ ಕೊಟ್ಟು ತಾತ್ಕಾಲಿಕವಾಗಿ ನೆರವಾಗೋದಷ್ಟೇ ಅಲ್ಲದೇ ಕೊಡಗನ್ನು ಮರು ನಿರ್ಮಾಣ ಮಾಡೋದು ಹೇಗೆ ಅಂತ ಸ್ವಲ್ಪ ಯೋಚನೆ ಮಾಡಬೇಕಾಗುತ್ತೆ. ಸರ್ಕಾರ ನೆರವಾಗುತ್ತೆ ಅಂತ ಕಾಯುತ್ತಾ ಕುಳಿತುಕೊಳ್ಳುವುದು ಬೇಡ. ನಾವೇ ಸರ್ಕಾರದ ರೀತಿ ಕೆಲಸ ಮಾಡೋಣ ಎಂದು ಹೇಳಿದರು.

    ಈ ವೇಳೆ ನಟ ಧನಂಜಯ್ ಮಾಧ್ಯಮಗಳೊಂದಿಗೆ ಮಾತನಾಡಿ, ನಟ ರವಿಚಂದ್ರನ್ ಅವರು ಹೇಳಿರುವ ಕೊಡಗು ಮರು ನಿರ್ಮಾಣದ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಕಾರ್ಯಕ್ಕೆ ನಾವು ಕೂಡ ಸಾಥ್ ಕೊಡುತ್ತೀವಿ ಎಂದು ಹೇಳಿದರು.

    ತಮ್ಮ ಹುಟ್ಟುಹಬ್ಬದ ಕುರಿತು ಧನಂಜಯ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಒಂದು ವಿಡಿಯೋವನ್ನು ಹಾಕಿದ್ದರು. ಅದರಲ್ಲಿ `ಎಲ್ಲರಿಗೂ ನಮಸ್ಕಾರ, ನಾನು ಸುಮಾರು ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ನೋಡಿತ್ತಿದ್ದೇನೆ. ಅಭಿಮಾನಿಗಳು 22 ರಾತ್ರಿ ಹಾಗೂ 23ರಂದು ಡಾಲಿ ಡೇ ಎಂದು ಆಚರಿಸಲು ರೆಡಿ ಆಗುತ್ತಿದ್ದೀರಾ. ಆದರೆ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ. ನನ್ನ ಹುಟ್ಟುಹಬ್ಬ ಆಚರಿಸಲು ನೀವು ಕಾತುರರಾಗಿದ್ದೀರಾ ಹಾಗೂ ಖುಷಿಯಾಗಿದ್ದೀರಾ ಎಂದು ಗೊತ್ತಾಗುತ್ತದೆ. ನಿಮ್ಮ ಅಭಿಮಾನ ನನಗೆ ದೊಡ್ಡದ್ದು. ಆದರೆ ಈ ದಿನ ಕೇರಳ ಹಾಗೂ ಕೊಡಗಿನಲ್ಲಿ ಆಗುತ್ತಿರುವುದು ನೋಡುತ್ತಿದ್ದೀರಾ. ಇತಂಹ ಪರಿಸ್ಥಿತಿಯಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ. ಅಲ್ಲದೇ ನಾನು ಹುಟ್ಟುಹಬ್ಬ ಆಚರಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಇದು ಸಂಭ್ರಮಾಚರಣೆಯ ಸಮಯವಲ್ಲ, ಸಹಾಯ ಮಾಡುವಂತಹ ಸಮಯ’ ಎಂದು ತಿಳಿಸಿದ್ದರು.

    `ಡಾಲಿ ಡೇ ದಿನಕ್ಕೆ ನೀವು ಅರ್ಥ ಕೊಡಬೇಕಾದರೆ ನನ್ನನ್ನು ಭೇಟಿ ಮಾಡಬಹುದು. ಆದರೆ ಆ ದಿನ ನಿಮ್ಮ ಕೈಲಾದಷ್ಟು ಅಂದರೆ 5 ರೂ., 10 ರೂ. ನೀಡಬಹುದು. ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹೂವಿನ ಹಾರ, ಪಟಾಕಿಯಲ್ಲಿ ಹಣ ವ್ಯರ್ಥ ಆಗುವುದರ ಬದಲು ಇತಂಹ ಕೆಲಸಕ್ಕೆ ಉಪಯೋಗಿಸಿಕೊಳ್ಳಿ. ನಿಮ್ಮ ಕೈಲಾದಷ್ಟು ನೀವು ದಾನ ಮಾಡಿ, ನನ್ನ ಕೈಲಾದಷ್ಟು ನಾನು ದಾನ ಮಾಡುತ್ತೇನೆ. ಒಂದು ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಿಸೋಣ’ ಎಂದು ಧನಂಜಯ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂತ್ರಸ್ತರಿಗೆ ವಿಕಲ ಚೇತನ ವ್ಯಕ್ತಿಯಿಂದ ಆಹಾರ ಸಂಗ್ರಹ

    ಸಂತ್ರಸ್ತರಿಗೆ ವಿಕಲ ಚೇತನ ವ್ಯಕ್ತಿಯಿಂದ ಆಹಾರ ಸಂಗ್ರಹ

    ಚಿಕ್ಕೋಡಿ: ಕೊಡಗು ಸಂತ್ರಸ್ತರಿಗೆ ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನತೆ ಸಹಾಯ ಹಸ್ತ ಚಾಚಿದ್ದಾರೆ. ಅಲ್ಲದೇ ಸಂತ್ರಸ್ತರಿಗೆ ವಿಕಲ ಚೇತನ ವ್ಯಕ್ತಿಯೊಬ್ಬರು ಆಹಾರವನ್ನು ಸಂಗ್ರಹಿಸಿದ್ದಾರೆ.

    ವಿಶೇಷ ಅಂದರೆ ಬಿಸ್ಕಟ್, ಬ್ರೆಡ್ ಸೇರಿದಂತೆ ಆಹಾರ ಪದಾರ್ಥವನ್ನು ವಿಕಲ ಚೇತನ ವ್ಯಕ್ತಿಯೊಬ್ಬರು ಜನರಿಂದ ಸಂಗ್ರಹಿಸಿ ಅಥಣಿ ತಹಶಿಲ್ದಾರರ ಮೂಲಕ ಕೊಡಗು ಮತ್ತು ಮಡಿಕೇರಿಯ ಪ್ರವಾಹ ಸಂತ್ರಸ್ತರಿಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಅಥಣಿ ತಾಲೂಕಿನ ಐನಾಪೂರದ ನಿವಾಸಿ ರಮೇಶ್ ನಾಯಕ ವಿಕಲ ಚೇತನ ಸದ್ಯ ಮಾನವೀಯತೆ ಮೆರೆದಿದ್ದು, ನಾಲ್ಕು ಬಾಕ್ಸ್‍ನಷ್ಟು ಆಹಾರ ಪದಾರ್ಥಗಳನ್ನು ತಹಶಿಲ್ದಾರ ಕಚೇರಿ ಮೂಲಕ ತಲುಪಿಸಲು ಮುಂದಾಗಿದ್ದು ಸಹಾಯದ ಹಸ್ತ ಚಾಚಿದ್ದಾರೆ.

    ಸದ್ಯ ರಮೇಶ್ ನಾಯಕ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಕೊಡುಗು ಸಂತ್ರಸ್ಥರಿಗೆ ತಲುಪಿಸಲಾಗುವುದು ಎಂದು ಅಥಣಿ ತಹಶಿಲ್ದಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv