Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]
Tag: ಸಂಗೀತ ಶೃಂಗೇರಿ
-

ದೈವಕ್ಕೆ ಕೋಲ ನೀಡಿದ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ
ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ( Charlie 777) ಮತ್ತು ಪುನೀತ್ ರಾಜ್ ಕುಮಾರ್ ನಟಿಸಿದ್ದ ಲಕ್ಕಿ ಮ್ಯಾನ್ ಸಿನಿಮಾಗಳ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ (Sangeetha Sringeri) ನಿನ್ನೆಯಷ್ಟೇ ದೈವಕ್ಕೆ (Koragajja) ಕೋಲ (Kola) ನೀಡಿ ಪೂಜೆ ಸಲ್ಲಿಸಿದ್ದಾರೆ. ಮೊನ್ನೆಯಷ್ಟೇ ನಟಿ ಶ್ರುತಿ ಇದೇ ಕೊರಗಜ್ಜನಿಗೆ ಕೋಲ ನೀಡಿದ್ದರು. ನಟಿ ಪ್ರೇಮಾ ಕೂಡ ದರ್ಶನ ಪಡೆದುಕೊಂಡಿದ್ದರು. ಈಗ ನಿರೂಪಕಿ ಅನುಶ್ರೀ (Anushree) ಜೊತೆ ಕೊರಗಜ್ಜನಿಗೆ ಕೋಲ ಸೇವೆ ಮಾಡಿದ್ದಾರೆ ಸಂಗೀತಾ.

ಈ ಕುರಿತಂತೆ ತಮ್ಮ ಅನುಭವಗಳನ್ನು ಬರೆದುಕೊಂಡಿರುವ ಸಂಗೀತಾ ‘ನನಗೆ ಕಳೆದೆರಡು ದಿನಗಳಿಂದ ದಿವ್ಯ ಅನುಭವದಲ್ಲಿ ಇದ್ದೇನೆ. ಆ ಭಾವನೆಗಳನ್ನು ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ತುಳುನಾಡು ದೈವ ಕೋಲಕ್ಕೆ ನಾನು ಸಾಕ್ಷಿಯಾಗಿದ್ದೇನೆ ಎನ್ನುವುದು ನನ್ನ ಪುಣ್ಯ. ಇಂಥದ್ದೊಂದು ಸಾನಿಧ್ಯ ಸಿಕ್ಕಿರುವುದಕ್ಕೆ ಕಾರಣ ನಿರ್ದೇಶಕರಾದ ಕಿರಣ್ ರಾಜ್ ಮತ್ತು ಭರತ್ ರಾಜ್ ಕೆ ಯಾದವ್. ಇವರ ಕುಟುಂಬಕ್ಕೆ ಕೃತಜ್ಞೆತೆಗಳು’ ಎಂದು ಬರೆದುಕೊಂಡಿದ್ದಾರೆ.

ಕನ್ನಡ ಕಿರುತೆರೆ ಜಗತ್ತಿನಿಂದ ಬಣ್ಣದ ಪ್ರಪಂಚಕ್ಕೆ ಪರಿಚಯವಾದ ಸಂಗೀತಾ ಶೃಂಗೇರಿ, ಆನಂತರ ಎರಡು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ರಕ್ಷಿತ್ ಜೊತೆಗಿನ 777 ಚಾರ್ಲಿ ಹಾಗೂ ಡಾರ್ಲಿಂಗ್ ಕೃಷ್ಣ ಮತ್ತು ಪುನೀತ್ ನಟನೆಯ ಲಕ್ಕಿಮ್ಯಾನ್ ಸಿನಿಮಾ ಇವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತು. ಈಗ ನಾನಾ ಸಿನಿಮಾಗಳಲ್ಲಿ ಸಂಗೀತಾ ನಟಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]Join our Whatsapp group by clicking the below link
https://chat.whatsapp.com/E6YVEDajTzH06LOh77r25k -

ಅಭಿಮಾನಿಗಳಿಗೆ ರಕ್ಷಿತ್ ಶೆಟ್ಟಿ ಗುಡ್ ನ್ಯೂಸ್: ‘777 ಚಾರ್ಲಿ’ ರಿಲೀಸ್ ಡೇಟ್ ಫಿಕ್ಸ್
ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಕ್ಷಿತ್ ಅಭಿನಯದ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಇದೇ ಜೂನ್ 10ಕ್ಕೆ ವಿಶ್ವದೆಲ್ಲೆಡೆ ‘777 ಚಾರ್ಲಿ’ ಚಿತ್ರ ತೆರೆ ಕಾಣುತ್ತಿದೆ.

ಪ್ರತಿ ಸಿನಿಮಾದಲ್ಲೂ ಡಿಫರೆಂಟ್ ಕಂಟೆಂಟ್‌ನಿಂದ ಎಂಟ್ರಿ ಕೊಡುವ ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಎಂದೂ ಮಾಡಿರದ ಡಿಫರೆಂಟ್ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ತಂಡ ಈಗ ‘777 ಚಾರ್ಲಿ’ ಚಿತ್ರದ ದಿನಾಂಕ ಅನೌನ್ಸ್ ಮಾಡಿದ್ದಾರೆ. ರಕ್ಷಿತ್ ಹೊಸ ಸಿನಿಮಾ ಇದೇ ಜೂನ್ 10ಕ್ಕೆ ದೇಶಾದ್ಯಂತ ತೆರೆ ಕಾಣಲಿದೆ.

ಕಿರಣ್ ರಾಜ್ ನಿರ್ದೇಶನ ಚಿತ್ರಕ್ಕಿದ್ದು, ಶ್ವಾನ ಮತ್ತು ಮನುಷ್ಯನ ಸಂಬಂಧದ ಮೇಲೆ ಹೆಣೆಯಲಾದ ಕಥೆಯೇ `777′ ಚಾರ್ಲಿ ಸ್ಟೋರಿಯಾಗಿದೆ. ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದಾರೆ. ಮೂರು ವರ್ಷಗಳ ನಂತರ ಈಗ ತೆರೆ ಕಾಣ್ತಿರೋ ರಕ್ಷಿತ್ ಅಭಿನಯದ `777 ಚಾರ್ಲಿʼ ಚಿತ್ರದ ಮೇಲೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಇದನ್ನು ಓದಿ: ʻಕೆಜಿಎಫ್ 2ʼ ರಿಲೀಸ್ ಬೆನ್ನಲ್ಲೇ ಯಶ್ ಟೆಂಪಲ್ ರನ್: ಧರ್ಮಸ್ಥಳದಲ್ಲಿ ಯಶ್

‘777’ ಚಾರ್ಲಿ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ದಾನಿಷ್ ಶೇಠ್, ಬಾಬಿ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘777 ಚಾರ್ಲಿʼ ಚಿತ್ರ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ಮಲಯಾಳಂನಲ್ಲಿ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್‌ನಿಂದ ಸಿನಿಪ್ರಿಯರ ಗಮನ ಸೆಳೆದಿರೋ ರಕ್ಷಿತ್ ನಟನೆಯ `777 ಚಾರ್ಲಿ’ ಚಿತ್ರಕ್ಕಾಗಿ ಕಾಯ್ತಿದ್ದಾರೆ.
-

ದಿಗಂತ್ ಹುಟ್ಟುಹಬ್ಬಕ್ಕೆ ‘ಮಾರಿಗೋಲ್ಡ್’ ಫಸ್ಟ್ ಲುಕ್ ಗಿಫ್ಟ್
ಸ್ಯಾಂಡಲ್‍ವುಡ್ ದೂದ್ ಪೇಡಾ ನಟ ದಿಗಂತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 36ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದಿಗಂತ್‍ಗೆ ಚಿತ್ರರಂಗದ ಸ್ನೇಹಿತರು ಅಭಿಮಾನಿಗಳು ಶುಭ ಕೋರಿದ್ದಾರೆ. ದಿಗ್ಗಿ ಹುಟ್ಟು ಹಬ್ಬಕ್ಕೆ ‘ಮಾರಿಗೋಲ್ಡ್’ ಚಿತ್ರತಂಡ ಫಸ್ಟ್ ಲುಕ್ ಗಿಫ್ಟ್ ನೀಡುವ ಮೂಲಕ ಹುಟ್ಟು ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.
‘ಮಾರಿಗೋಲ್ಡ್’ ದಿಗಂತ್ ಅಭಿನಯದ ಬಹು ನಿರೀಕ್ಷಿತ ಸಿನಿಮಾವಾಗಿದ್ದು, ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಫಸ್ಟ್ ಲುಕ್ ಸಖತ್ ಇಂಟರೆಸ್ಟಿಂಗ್ ಆಗಿದ್ದು, ದಿಗಂತ್ ಲುಕ್ ಗಮನ ಸೆಳೆಯುತ್ತಿದೆ. ‘ಮಾರಿಗೋಲ್ಡ್’ ಚಿತ್ರಕ್ಕೆ ರಾಘವೇಂದ್ರ ಎಂ.ನಾಯಕ್ ಆಕ್ಷನ್ ಕಟ್ ಹೇಳಿದ್ದು, ಕಥೆ, ಚಿತ್ರಕಥೆ ಕೂಡ ಇವರದ್ದೆ. ಇದೊಂದು ಕಾಮಿಡಿ, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರವಾಗಿದ್ದು, ಸಡನ್ನಾಗಿ ಗೋಲ್ಡ್ ಬಿಸ್ಕಟ್ ಸಿಕ್ಕಿದ್ರೆ ಏನಾಗುತ್ತೆ ಎಂಬ ಎಳೆಯ ಸುತ್ತಾ ಸಿನಿಮಾ ಹೆಣೆಯಲಾಗಿದೆ.

ದೂದ್ ಪೇಡಾಗೆ ಇಲ್ಲಿ ಜೋಡಿಯಾಗಿ ಸಂಗೀತ ಶೃಂಗೇರಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಆರ್.ವಿ.ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ‘ಮಾರಿಗೋಲ್ಡ್’ ಚಿತ್ರ ನಿರ್ಮಾಣವಾಗಿದ್ದು, ರಘುವರ್ಧನ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ. ಚಿತ್ರಕ್ಕೆ ಕೆ.ಎಸ್ ಚಂದ್ರಶೇಖರ್ ಕ್ಯಾಮೆರಾ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಸಂಪತ್ ಕುಮಾರ್, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಸೇರಿದಂತೆ ಹಲವು ಕಲಾವಿದರು ಮಾರಿಗೋಲ್ಡ್ ತಾರಾಬಳಗದಲ್ಲಿದ್ದಾರೆ.
View this post on Instagram
