Tag: ಸಂಗೀತ ನಿರ್ದೇಶಕ

  • ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರಾಜನ್ ವಿಧಿವಶ

    ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರಾಜನ್ ವಿಧಿವಶ

    ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಸಾವನ್ನಪ್ಪಿದ್ದಾರೆ.

    ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರಾಜನ್ ಕಳೆದ ರಾತ್ರಿ 10.30ಕ್ಕೆ ಹೃದಯಾಘಾತದಿಂದ ನಿಧನರಾದ್ರು. ಮೂಲತಃ ಮೈಸೂರಿನವರಾದ ರಾಜನ್ ಸಹೋದರ ನಾಗೇಂದ್ರ ಜೊತೆಗೂಡಿ ಕನ್ನಡದ ಸುಮಾರು 375ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

    1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಜೋಡಿ, ಸುಮಾರು 5 ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿತ್ತು. 1952ರಿಂದ 1999ರವರೆಗೆ 375ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇದರಲ್ಲಿ ಕನ್ನಡದ 200ಕ್ಕೂ ಅಧಿಕ ಸಿನಿಮಾಗಳಿವೆ. ಕನ್ನಡದ ಜೊತೆ ತೆಲುಗಿನಲ್ಲಿಯೂ ಈ ಜೋಡಿ ದೊಡ್ಡ ಯಶಸ್ಸು ಕಂಡಿತ್ತು. ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದಾರೆ.

    ‘ಮಂತ್ರಾಲಯ ಮಹಾತ್ಮೆ’, ‘ಗಂಧದ ಗುಡಿ’, ‘ನಾ ನಿನ್ನ ಬಿಡಲಾರೆ’, ‘ಎರಡು ಕನಸು’, ‘ಕಳ್ಳ ಕುಳ್ಳ’, ‘ಬಯಲು ದಾರಿ’, ‘ನಾ ನಿನ್ನ ಮರೆಯಲಾರೆ’, ‘ಹೊಂಬಿಸಿಲು’, ‘ಆಟೋ ರಾಜ’, ‘ಗಾಳಿಮಾತು’, ‘ಚಲಿಸುವ ಮೋಡಗಳು’, ‘ಬೆಟ್ಟದ ಹೂವು’, ‘ಸುಪ್ರಭಾತ’, ‘ಮತ್ತೆ ಹಾಡಿತು ಕೋಗಿಲೆ’, ‘ಕರುಳಿನ ಕುಡಿ’, ‘ಪರಸಂಗದ ಗೆಂಡೆತಿಮ್ಮ’, ‘ಶ್ರೀನಿವಾಸ ಕಲ್ಯಾಣ’ ಇವುಗಳು ರಾಜನ್ ಸಂಗೀತ ನೀಡಿದ ಜನಪ್ರಿಯ ಸಿನಿಮಾಗಳಾಗಿವೆ. ಅದರಲ್ಲಿ ಡಾ. ರಾಜ್‍ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳೇ ಜಾಸ್ತಿ ಇವೆ.

    ಸದ್ಯ ರಾಜನ್ ನಿಧನಕ್ಕೆ ಚಿತ್ರ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಇಂದು ಹೆಬ್ಬಾಳ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

  • ಸೋದರ ಸಾಜಿದ್‍ಗಾಗಿ ಕೊನೆ ಹಾಡು ಹೇಳಿದ್ದ ವಾಜಿದ್

    ಸೋದರ ಸಾಜಿದ್‍ಗಾಗಿ ಕೊನೆ ಹಾಡು ಹೇಳಿದ್ದ ವಾಜಿದ್

    -ಆಸ್ಪತ್ರೆಯ ಬೆಡ್ ಮೇಲೆ ಕುಳಿತು ಹಾಡು

    ಮುಂಬೈ: ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್ ಖಾನ್ ಇಂದು ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದು, ಸೋದರ ವಾಜಿದ್ ಗಾಗಿ ಆಸ್ಪತ್ರೆಯಲ್ಲಿ ಹಾಡು ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಬಾಲಿವುಡ್ ಸಂಗೀತ ಸಂಯೋಜನೆಯ ಪ್ರಸಿದ್ಧ ಜೋಡಿಗಳಲ್ಲಿ ಸಾಜಿದ್-ವಾಜಿದ್ ಸಹ ಒಬ್ಬರು. 43 ವರ್ಷದ ವಾಜಿದ್ ಇಂದು ಸಾವನ್ನಪ್ಪಿದ್ದು, ಬಾಲಿವುಡ್ ಅಂಗಳದಲ್ಲಿ ಸೂತಕ ಛಾಯೆ ಮೂಡಿದೆ. ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ವರುಣ್ ಧವನ್ ಸೇರಿದಂತೆ ಬಹುತೇಕರು ಸಂತಾಪ ಸೂಚಿಸಿದ್ದಾರೆ.

    https://www.instagram.com/p/CA4egx5Hmgk/

    ವೈರಲ್ ಆಗಿರೋ ವಿಡಿಯೋದಲ್ಲಿ, ನಾನು ಸಾಜಿದ್ ಆಗಿ ಸಲ್ಮಾನ್ ಖಾನ್ ಅಭಿನಯದ ದಬಂಗ್ ಚಿತ್ರದ ಶೀರ್ಷಿಕೆ ಹಾಡು ಹೇಳಲು ಇಷ್ಟಪಡುತ್ತೇನೆ ಎಂದು ಹಾಡಿದ್ದರು. ಸಾಜಿದ್-ವಾಜಿದ್ ಸಂಗೀತ ಇದ್ರೆ ಸಾಕು ಸಿನಿಮಾ ಹಿಟ್ ಅಗುತ್ತೆ ಅನ್ನೋ ಭರವಸೆಯನ್ನು ಸೋದರಿಬ್ಬರು ಮೂಡಿಸಿದ್ದರು. 1998ರಲ್ಲಿ ಸಲ್ಮಾನ್ ಖಾನ್ ಅಭಿನಯದ ‘ಪ್ಯಾರ್ ಕಿಯಾ ತೋ ಡರನಾ ಕ್ಯಾ’ ಚಿತ್ರಕ್ಕೆ ಸಂಗೀತ ನೀಡಿದ್ದರು. 1999ರಲ್ಲಿ ಸೋನು ನಿಗಮ್ ಅಲ್ಬಂ ‘ದಿವಾನ್’ಗೂ ಸಂಗೀತ ಸಂಯೋಜನೆ ಮಾಡಿದ್ದರು. ಅದೇ ವರ್ಷ ಸಾಜಿದ್-ವಾಜಿದ್ ಸಂಗೀತ ಸಂಯೋಜನೆ ಹೆಲೋ ಬ್ರದರ್ ಸಿನಿಮಾದ ಎಲ್ಲ ಹಾಡುಗಳು ಇಂದಿಗೂ ಎವರ್ ಗ್ರೀನ್.

    https://www.instagram.com/p/BYSWkghg89L/

    ಸಂಗೀತ ನಿರ್ದೇಶಕ ಸಲೀಂ ಮರ್ಚೆಂಟ್ ಈ ಬಗ್ಗೆ ಪ್ರತಿಕ್ರಿಯಿಸಿ, ವಾಜೀದ್ ಖಾನ್ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕಸಿ ಮಾಡಿದ ಬಳಿಕ ಕಿಡ್ನಿ ಸಮಸ್ಯೆ ಕಾಡುತ್ತಿತ್ತು. ಕೆಲ ದಿನಗಳ ಹಿಂದೆ ಕಿಡ್ನಿ ಸೋಂಕು ಕಾಣಿಸಿಕೊಂಡಿತ್ತು. ಕಳೆದ 4 ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣುತ್ತಿರಲಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಾ ಹೋಗಿತ್ತು ಎಂದು ತಿಳಿಸಿದರು.

    https://www.instagram.com/p/CA4oOmSnEnj/

  • 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು: ಜನ್ಯ ಆರೋಗ್ಯದ ಬಗ್ಗೆ ವೈದ್ಯರ ಪ್ರತಿಕ್ರಿಯೆ

    2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು: ಜನ್ಯ ಆರೋಗ್ಯದ ಬಗ್ಗೆ ವೈದ್ಯರ ಪ್ರತಿಕ್ರಿಯೆ

    ಮೈಸೂರು: ಮ್ಯಾಜಿಕಲ್ ಮ್ಯೂಸಿಕ ಕಂಪೋಸರ್ ಅರ್ಜುನ್ ಜನ್ಯ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು ಎಂದು ಹೇಳಿದರು.

    ಅರ್ಜುನ್ ಅವರ ಆರೋಗ್ಯದ ಬಗ್ಗೆ ಅಪೋಲೋ ಹೃದ್ರೋಗ ತಜ್ಞ ಆದಿತ್ಯ ಉಡುಪ ಪ್ರತಿಕ್ರಿಯಿಸಿ, ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ಅವರು ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ನಾವು ಅವರಿಗೆ ಚಿಕಿತ್ಸೆ ನೀಡಿದಾಗ ಅವರ ಗ್ಯಾಸ್ಟ್ರಿಕ್ ಸಮಸ್ಯೆ ಸರಿ ಹೋಯಿತು. ಮಂಗಳವಾರ ರಾತ್ರಿ ಮತ್ತೆ ಅವರಿಗೆ ಇಸಿಜಿ ಮಾಡಿಸಿದಾಗ ವರದಿಯಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬಂತು. ಅಲ್ಲದೆ ಅರ್ಜುನ್ ಅವರಿಗೆ ಬೆನ್ನು, ಎದೆ ಹಾಗೂ ತಲೆ ನೋವು ಜಾಸ್ತಿಯಾಗಿತ್ತು. ಹಾಗಾಗಿ ಮತ್ತೆ ಇಸಿಜಿ ಮಾಡಿಸಿದ್ದೇವು ಎಂದರು. ಇದನ್ನೂ ಓದಿ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ

    ಇಸಿಜಿ ವರದಿ ಬಂದಾಗ ಅರ್ಜುನ್ ಅವರ ಬಳಿ ಹೋಗಿ ಆರೋಗ್ಯ ಹೇಗಿದೆ ಎಂದು ಕೇಳಿದ್ದೇವು. ಆಗ ಅವರು ಹೊಟ್ಟೆ ನೋವು ಕಡಿಮೆ ಆಗಿದೆ. ಆದರೆ ತುಂಬಾ ಬೆನ್ನು ಹಾಗೂ ತಲೆ ನೋವು ಇದೆ, ಸ್ವಲ್ಪ ಎದೆ ನೋವಾಗುತ್ತಿದೆ ಎಂದರು. ಇಸಿಜಿಯಲ್ಲಿ ಬಹಳ ವ್ಯತ್ಯಾಸ ಕಂಡಿದ್ದರಿಂದ ತಕ್ಷಣ ಆಂಜಿಯೋಗ್ರಾಂ ಪರೀಕ್ಷೆ ಮಾಡಿದ್ವಿ. ಆಗಲೇ ಶೇ. 99% ಹಾರ್ಟ್ ಬ್ಲಾಕೇಜ್ ಆಗಿದೆ ಎಂಬುದು ತಿಳಿಯಿತು. ತಕ್ಷಣ ಅವರ ಕುಟುಂಬಸ್ಥರು ಜೊತೆ ಮಾತನಾಡಿ ಆಂಜಿಯೋಪ್ಲ್ಯಾಸ್ಟಿ ಮಾಡಲಾಯಿತು. ಚಿಕಿತ್ಸೆ ನಡೆದ ಅವರು ಸಂಪೂರ್ಣ ನಿರಾಳರಾದರು ಎಂದು ಮಾಹಿತಿ ನೀಡಿದರು.

    ಮಂಗಳವಾರ ಬೆಳಗ್ಗೆ 2.30ಕ್ಕೆ ಅರ್ಜುನ್ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ನಿಜವಾಗಿಯೂ 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವು ಸರಿಯಾಗಿದೆ. ಚಿಕಿತ್ಸೆ ಪಡೆದು ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ. ಸದ್ಯಕ್ಕೆ ಅರ್ಜುನ್ ಜನ್ಯ ಕ್ಷೇಮವಾಗಿದ್ದಾರೆ ಎಂದು ಹೃದ್ರೋಗ ತಜ್ಞ ಆದಿತ್ಯ ಉಡುಪ ಹೇಳಿದ್ದಾರೆ.

  • ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ

    ಮೈಸೂರು: ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮಧ್ಯರಾತ್ರಿ ಮನೆಯಲ್ಲಿರುವಾಗ ಅರ್ಜುನ್ ಜನ್ಯ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸ್ಟಾರ್ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯ ಹಲವು ಚಿತ್ರಗಳಿಗೆ ಮ್ಯೂಸಿಕ್ ನೀಡಿದ್ದಾರೆ. ಪ್ರತಿ ಸಿನಿಮಾಗಳಿಗೂ ಅರ್ಜುನ್ ಜನ್ಯಯವರ ಸಂಗೀತಕ್ಕಾಗಿ ನಿರ್ದೇಶಕರು ಕಾಯುತ್ತಾರೆ. ಸಂಗೀತ ನಿರ್ದೇಶನದ ಜೊತೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ.

    ಮ್ಯೂಸಿಕಲ್ ಪೈಲ್ವಾನ್ ಆಗಿರುವ ಅರ್ಜುನ್ ಜನ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಸಿನಿಮಾಗಳಿಗೆ ಸಂಗೀತ ನೀಡುವ ಜೊತೆಗೆ ಲೈವ್ ಕಾರ್ಯಕ್ರಮಗಳ ಮೂಲಕ ಕರುನಾಡಿನ ಜನತೆಗೆ ಹತ್ತಿರವಾಗಿರುವ ಅರ್ಜುನ್ ಜನ್ಯ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

  • ಸೆಕ್ಸ್‌ಗೆ ಸಹಕರಿಸಿದರೆ ಚಾನ್ಸ್ ಕೊಡಿಸುತ್ತೇನೆ ಎಂದ ಸಂಗೀತ ನಿರ್ದೇಶಕ ಅರೆಸ್ಟ್

    ಸೆಕ್ಸ್‌ಗೆ ಸಹಕರಿಸಿದರೆ ಚಾನ್ಸ್ ಕೊಡಿಸುತ್ತೇನೆ ಎಂದ ಸಂಗೀತ ನಿರ್ದೇಶಕ ಅರೆಸ್ಟ್

    – ನಗ್ನ ಚಿತ್ರ ಕಳಿಸಿ ಕಮೆಂಟ್ ಮಾಡು ಎಂದು ವಿಕೃತಿ
    – ಚಿಟ್ಟೆ ಆಲ್ಬಂನಿಂದ ಫೇಮಸ್

    ಬೆಂಗಳೂರು: ಸೆಕ್ಸ್‌ಗೆ ಸಹಕರಿಸಿದರೆ ಅವಕಾಶ ಕೊಡಿಸುತ್ತೇನೆ ಎಂದು ಮಹಿಳೆಗೆ ಮೆಸೇಜ್ ಕಳುಹಿಸಿದ್ದ ಸಂಗೀತ ನಿರ್ದೇಶಕನನ್ನು ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಮುರುಳೀಧರ್ ರಾವ್ ಬಂಧಿತ ಸಂಗೀತ ನಿರ್ದೇಶಕ(35). ರೇಖಾ(ಹೆಸರು ಬದಲಾಯಿಸಲಾಗಿದೆ) ಕುಮಾರಸ್ವಾಮಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ಮುರುಳೀಧರ್ ರಾವ್ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 354(ಲೈಂಗಿಕ ಕಿರುಕುಳ) ಅಡಿ ಪ್ರಕರಣ ದಾಖಲಿಸಿದ ಪೊಲೀಸರು ಈಗ ಸಂಗೀತ ನಿರ್ದೇಶಕನನ್ನು ಬಂಧಿಸಿದ್ದಾರೆ.

    ಸಿನಿಮಾಗಳು ಸೇರಿ ಹಲವು ಆಲ್ಬಂಗಳಿಗೆ ಮುರುಳೀಧರ್ ಸಂಗೀತ ನೀಡಿದ್ದಾನೆ. ಸಾಹಿತ್ಯದ ಜೊತೆಗೆ ಈತ ಮ್ಯೂಸಿಕ್ ಕಂಪೋಸಿಂಗ್ ಮಾಡುತ್ತಾನೆ. ಚಿಟ್ಟೆ ಆಲ್ಬಂನಿಂದಾಗಿ ಈತ ಫೇಮಸ್ ಆಗಿದ್ದು, ಹಲವು ಖ್ಯಾತ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾನೆ. ಇತ್ತೀಚೆಗೆ ಕುಮಾರಸ್ವಾಮಿ ಲೇಔಟ್ ಬಳಿಯ ತನ್ನ ಮನೆಯಲ್ಲೇ ಮುರುಳೀಧರ್ ತನ್ನದೆ ಮ್ಯೂಸಿಕ್ ಸ್ಟುಡಿಯೋ ತೆರೆದಿದ್ದ.

    ಫೇಸ್ ಬುಕ್ ಮೂಲಕ ಯುವತಿಯರ ನಂಬರ್ ಪಡೆದು ಮುರುಳೀಧರ್ ಧಾರಾವಾಹಿ ಹಾಗೂ ಸೀರೆಯ ಜಾಹೀರಾತಿನಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸಿ ಸ್ಟುಡಿಯೋಗೆ ಕರೆಸಿಕೊಂಡು ಕಿರುಕುಳ ನೀಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.

    ದೂರಿನಲ್ಲಿ ಏನಿದೆ?
    2017ರಲ್ಲಿ ಫೇಸ್‍ಬುಕ್ ಮೂಲಕ ಮುರಳೀಧರ್ ನನಗೆ ಪರಿಚಯವಾಗಿದ್ದ. ಈ ವರ್ಷದ ಜೂನ್ 14 ರಂದು ಮೆಸೆಂಜರ್‍ನಲ್ಲಿ ಸಂಪರ್ಕಿಸಿ, ಸೀರಿಯಲ್‍ನಲ್ಲಿ ನಟಿಸುವ ಆಸೆ ಇದೆಯೇ ಹಾಗೂ ಜಾಹೀರಾತಿನಲ್ಲಿ ನಟಿಸಲು ಇಷ್ಟ ಇದೆಯೇ ಎಂದು ಕೇಳಿದ್ದ ಅದಕ್ಕೆ ನಾನು ಒಪ್ಪಿಕೊಂಡಿದ್ದು, ನಂತರ ಆತನ ಮೊಬೈಲ್ ನಂಬರ್ ನೀಡಿದ್ದ. ಮುರಳೀಧರ್ ರಾವ್ ಜೊತೆ ವಾಟ್ಸಪ್‍ನಲ್ಲಿ ನಾನು ಚಾಟ್ ಮಾಡುತ್ತಿದ್ದೆ. ಮೆಸೇಜ್ ಮೂಲಕ ಪರಿಚಯವಾಗಿ ನಿಮ್ಮ ಜೊತೆ ಮಾತನಾಡಬೇಕಿದೆ. ಹೀಗಾಗಿ ಕುಮಾರಸ್ವಾಮಿ ಲೇಔಟ್‍ನಲ್ಲಿ ದಯಾನಂದ ಸಾಗರ ಕಾಲೇಜ್ ಬಳಿ ಇರುವ ನನ್ನ ಸ್ಟುಡಿಯೋಗೆ ಬನ್ನಿ ಎಂದು ಹೇಳಿದ್ದ.

    ಭೇಟಿಯಾಗಲು ನಾನು ವಿಳಾಸ ಕೇಳಿದಾಗ ದಯಾನಂದ ಸಾಗರ ಕಾಲೇಜ್ ಹತ್ತಿರ ಬಂದು ಕರೆ ಮಾಡಿದಲ್ಲಿ ನಾನು ಬರುತ್ತೇನೆ ಎಂದು ತಿಳಿಸಿದ್ದ. ಮುರಳಿಧರ್ ರಾವ್ ಮೆಸೇಜ್ ಮಾಡುವ ಸಂದರ್ಭದಲ್ಲಿ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ. ಅಲ್ಲದೇ ಆತ ಬೆತ್ತಲಾಗಿರುವ ಫೋಟೋಗಳನ್ನು ತನ್ನ ವಾಟ್ಸಪ್ ಸ್ಟೇಟಸ್‍ಗೆ ಹಾಕುತ್ತಿದ್ದ. ಇದರಿಂದ ನನಗೆ ಕಿರಿಕಿರಿಯಾಗಿ ನಾನು ಪ್ರಶ್ನೆ ಮಾಡಿದ್ದಕ್ಕೆ ಸೀರಿಯಲ್‍ನಲ್ಲಿ ನಟಿಸಬೇಕಾದರೆ ಕಿಸ್ ಮತ್ತು ಹಗ್ ಮಾಡಬೇಕು. ಅಷ್ಟೇ ಅಲ್ಲದೇ ಸೆಕ್ಸ್ ಮಾಡಬೇಕು ಎಂದು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ. ಅಷ್ಟೇ ಅಲ್ಲದೇ ಬೆತ್ತಲಾಗಿರುವ ಸುಮಾರು 7,8 ಫೋಟೋಗಳನ್ನು ನನ್ನ ವಾಟ್ಸಪ್‍ಗೆ ಕಳುಹಿಸಿ ಕಮೆಂಟ್ ಮಾಡು ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೀಗಾಗಿ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು.

  • ಸ್ಯಾಂಡಲ್‍ವುಡ್ ನಟನಿಗೆ ಗಾಡ್ ಫಾದರ್ ಎಂದ್ರು ಅರ್ಜುನ್ ಜನ್ಯ

    ಸ್ಯಾಂಡಲ್‍ವುಡ್ ನಟನಿಗೆ ಗಾಡ್ ಫಾದರ್ ಎಂದ್ರು ಅರ್ಜುನ್ ಜನ್ಯ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು 99 ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಶತಕದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಕಿಚ್ಚ ಸುದೀಪ್ ಅವರು ಶುಭಾಶಯನ್ನು ತಿಳಿಸಿದ್ದಾರೆ. ಅದಕ್ಕೆ ಉತ್ತರವಾಗಿ ಅರ್ಜುನ್ ಜನ್ಯ ಅವರು ನೀವು ನನ್ನ ಗಾಡ್ ಫಾದರ್ ಎಂದು ಸುದೀಪ್ ಅವರನ್ನು ಕರೆದಿದ್ದಾರೆ.

    ತಮಿಳಿನ ’96’ ಸಿನಿಮಾ ’99’ ಹೆಸರಿನಲ್ಲೇ ಕನ್ನಡಕ್ಕೆ ಬರುತ್ತಿದ್ದು ಈ ಚಿತ್ರದಲ್ಲಿ ಗಣೇಶ್ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿತ್ತು. ’99’ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡುತ್ತಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡುತ್ತಿರುವ ನೂರನೇ ಸಿನಿಮಾವಾಗಿದೆ.

    ಶತಕದ ಸಂಭ್ರಮದಲ್ಲಿರುವ ಕಾರಣ ನಟ ಸುದೀಪ್ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದರು. ಸುದೀಪ್ ಅವರು, “ನಿಮ್ಮ ಈ ಯಶಸ್ಸಿಗೆ ನೀವು ಅರ್ಹವಾದ ವ್ಯಕ್ತಿಯಾಗಿದ್ದು, ಅದ್ಭುತ ಜರ್ನಿಯ ಸಾಧನೆ ಮಾಡಿದ್ದೀರಿ. ನನ್ನ ಸಿನಿಮಾ ಜೀವನದ ಪಯಣದಲ್ಲೂ ನೀವು ಒಂದು ಭಾಗವಾಗಿದ್ದು, ನನಗೆ ತುಂಬಾ ಖುಷಿಯಾಗಿದೆ. ನೀವು ಒಬ್ಬ ಸಂಗೀತ ನಿರ್ದೇಶಕರಲ್ಲದೇ ಒಬ್ಬ ಮನುಷ್ಯನಾಗಿಯೂ ಪ್ರಬುದ್ಧರಾಗಿದ್ದೀರಿ. ಇದೇ ರೀತಿ ಸದಾ ನಮಗೆ ಮನರಂಜನೆ ನೀಡುತ್ತಿರಿ. ನಿಮ್ಮ ನೂರನೇ ಸಿನಿಮಾಗೆ ಶುಭಾಶಯಗಳು” ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

    ಸುದೀಪ್ ಟ್ವೀಟ್ ಗೆ ಅರ್ಜುನ್ ಜನ್ಯ ಅವರು, ”ನಿಮ್ಮ ಪ್ರೋತ್ಸಾಹ ಇಲ್ಲದಿದ್ದರೆ ನಾನು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನೀವು ಯಾವಾಗಲೂ ನನ್ನ ಗಾಡ್ ಫಾದರ್ ಮತ್ತು ಮಾರ್ಗದರ್ಶಿಯಾಗಿದ್ದೀರಿ. ನನ್ನ ಈ ಸಣ್ಣ ಸಾಧನೆಯನ್ನು ಸಂಪೂರ್ಣವಾಗಿ ನಿಮಗೆ ಅರ್ಪಿಸುತ್ತೇನೆ” ಎಂದು ಕೃತಜ್ಞತೆ ತಿಳಿಸಿದ್ದಾರೆ.

    ಸುದೀಪ್ ಅಭಿನಯದ ‘ಕೆಂಪೇಗೌಡ’ ಸಿನಿಮಾದಿಂದ ಅರ್ಜುನ್ ಜನ್ಯ ಸಂಗೀತ ಶುರುವಾಗಿದ್ದು, ಸುದೀಪ್ ಕಾಂಬಿನೇಶನ್ ನಲ್ಲಿ ‘ಮಾಣಿಕ್ಯ’, ‘ಮುಕುಂದ ಮುರಾರಿ’ ‘ಹೆಬ್ಬುಲಿ’, ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ದಿ ವಿಲನ್’ ಚಿತ್ರಗಳಲ್ಲಿ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಷ್ಟೆ ಅಲ್ಲದೇ ಈಗ ‘ಪೈಲ್ವಾನ್’ ಮತ್ತು ‘ಕೋಟಿಗೊಬ್ಬ 3’ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುದ್ದು ಮಗಳ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ದುರ್ಮರಣ

    ಮುದ್ದು ಮಗಳ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ದುರ್ಮರಣ

    ತಿರುವನಂತಪುರಂ: ಕಳೆದ ವಾರ ಕಾರ್ ಅಪಘಾತದಲ್ಲಿ ಗಾಯಗೊಂಡಿದ್ದ ಮಲಯಾಳಂ ಸಂಗೀತ ನಿರ್ದೇಶಕ ಹಾಗೂ ವಯೋಲಿನ್ ವಾದಕ ಬಾಲಭಾಸ್ಕರ್(40) ಇಂದು ಮುಂಜಾನೆ ಮೃತಪಟ್ಟಿದ್ದಾರೆ.

    ಸೆಪ್ಟೆಂಬರ್ 25 ರಂದು ತಿರುವನಂತಪುರದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಭಾಸ್ಕರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಮವಾರ ತಡರಾತ್ರಿ 1 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊಲೆಯುಸಿರೆಳೆದಿದ್ದಾರೆ.

    ಅಪಘಾತದಲ್ಲಿ 2 ವರ್ಷದ ಮಗಳು ಮೃತಪಟ್ಟಿದ್ದಳು. ಪತ್ನಿ ಲಕ್ಷ್ಮಿ ಮತ್ತು ಚಾಲಕ ಅರ್ಜುನ್ ಅವರಿಗೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಅಪಘಾತದ ವಿವರ:
    15 ವರ್ಷಗಳ ಬಳಿಕ ಜನಿಸಿದ್ದ ಮಗಳಿಗಾಗಿ ಸೆಪ್ಟೆಂಬರ್ 25 ರಂದು ತ್ರಿಸೂರ್ ದೇವಾಯಲಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದರು. ಈ ವೇಳೆ ತಿರುವನಂತಪುರದ ಪಲ್ಲಿಪ್ಪುರಂ ಹೆದ್ದಾರಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ವೇಗವಾಗಿ ಹೋಗಿ ಮರಕ್ಕೆ ಹೊಡೆದಿದೆ. ತಕ್ಷಣ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಪಘಾತದ ತೀವ್ರತೆಗೆ ಎರಡು ವರ್ಷದ ಮಗಳು ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದರು.

    ಅಪಘಾತದಲ್ಲಿ ಬಾಲಭಾಸ್ಕರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಸತತ ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡಿ ಸೋಮವಾರ ತಡರಾತ್ರಿ ಮೃತಪಟ್ಟಿದ್ದಾರೆ. ಸದ್ಯಕ್ಕೆ ಅವರ ಮೃತದೇಹವನ್ನು ಅಭಿಮಾನಿಗಳ ಅಂತಿಮ ದರ್ಶನಕ್ಕಾಗಿ ತಿರುವನಂತಪುರಂ ಕಾಲೇಜಿನಲ್ಲಿ ಇರಿಸಲಾಗಿದೆ.

    ಮೃತ ಬಾಲಭಾಸ್ಕರ್ ಅವರು ತಮ್ಮ 12 ವರ್ಷ ವಯಸ್ಸಿನಿಂದಲೇ ಮಲೆಯಾಳಂ ಸಿನಿಮಾಗೆ ಸಂಗೀತವನ್ನು ಸಂಯೋಜಿಸಿದ್ದರು. ಬಳಿಕ ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜಿಸುವುದರ ಮೂಲಕ ಸಂಗೀತ ಕ್ಷೇತ್ರದಲ್ಲಿ ಮಿಂಚಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗ್ಳೂರಲ್ಲಿ ಅಪಾಯದಿಂದ ಪಾರಾದ ಅರ್ಜುನ್ ಜನ್ಯ!

    ಮಂಗ್ಳೂರಲ್ಲಿ ಅಪಾಯದಿಂದ ಪಾರಾದ ಅರ್ಜುನ್ ಜನ್ಯ!

    ಮಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಂಗಳೂರಿನ ಕಾರ್ಯಕ್ರಮವೊಂದರ ವೇಳೆ ಅಪಾಯದಿಂದ ಪಾರಾಗಿದ್ದಾರೆ.

    ನಗರದ ಮಾಲ್‍ವೊಂದರಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಬೈಕ್ ಕ್ರ್ಯಾಕರ್ಸ್ ಬೆಂಕಿ ಹೊತ್ತಿಕೊಂಡಿದ್ದು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮಂಗಳೂರಿನ ಫೋರಂ ಮಾಲ್ ನಲ್ಲಿ ಮೆಕ್ ಡಾವೆಲ್ ಕಂಪನಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಪಾಲ್ಗೊಂಡಿದ್ದರು. ವೇದಿಕೆಗೆ ಬೈಕ್ ಏರಿ ಬರುವ ವೇಳೆ ಕ್ರ್ಯಾಕರ್ಸ್ ಉರಿಸಲಾಗಿತ್ತು. ಅರ್ಜುನ್ ಬೈಕಿನಿಂದ ಇಳಿಯುವ ವೇಳೆ ಕ್ರ್ಯಾಕರ್ಸ್ ಉರಿ ಭುಜಕ್ಕೆ ಮತ್ತು ಕೈಗೆ ತಾಗಿದ್ದು ಸುಟ್ಟ ಗಾಯಗಳಾಗಿವೆ.

    ಬೈಕ್ ನಿಂದ ಇಳಿದ ಅರ್ಜುನ್ ಜನ್ಯ ನೇರವಾಗಿ ವೇದಿಕೆಗೆ ಹತ್ತಿ ಹಾಡು ಹಾಡಿ ಸಂಗೀತಪ್ರಿಯರನ್ನು ರಂಜಿಸಿದರು.

     

     

  • ನಾನು ಕಂಪೋಸ್ ಮಾಡಿದ ಹಾಡನ್ನು ಹಾಡದಂತೆ ಎಸ್‍ಪಿಬಿಗೆ ಇಳಯರಾಜ ನೋಟಿಸ್

    ನಾನು ಕಂಪೋಸ್ ಮಾಡಿದ ಹಾಡನ್ನು ಹಾಡದಂತೆ ಎಸ್‍ಪಿಬಿಗೆ ಇಳಯರಾಜ ನೋಟಿಸ್

    ಚೆನ್ನೈ: ಭಾರತ ಸಂಗೀತ ಪ್ರಿಯರ ಮನಗೆದ್ದಿರೋ ಇಬ್ಬರು ದಿಗ್ಗಜರ ನಡುವೆ ಕಾಪಿ ರೈಟ್ಸ್ ವಿಚಾರದ ಬಗ್ಗೆ ಜಟಾಪಟಿ ಶುರುವಾಗಿದೆ. 40 ಸಾವಿರಕ್ಕೂ ಹೆಚ್ಚಿನ ಹಾಡುಗಳಿಗೆ ಕಂಠದಾನ ಮಾಡಿರೋ ಎಸ್.ಪಿ ಬಾಲಸುಬ್ರಮಣ್ಯಂ, ಗಾಯಕಿ ಚಿತ್ರಾ ಹಾಗು ಎಸ್‍ಪಿಬಿ ಪುತ್ರ ಚರಣ್‍ಗೆ ಸಂಗೀತ ನಿರ್ದೇಶಕ ಇಳಯರಾಜ ನೋಟಿಸ್ ಕೊಟ್ಟಿದ್ದಾರೆ.

    ನಾನು ಟ್ಯೂನ್ ಕಂಪೋಸ್ ಮಾಡಿರೋ ಹಾಡುಗಳನ್ನ ನನ್ನ ಒಪ್ಪಿಗೆ ಇಲ್ಲದೇ ಹಾಡಬೇಡಿ. ಒಂದು ವೇಳೆ ಹಾಡಿದ್ರೆ ಕಾನೂನು ಮೊರೆ ಹೋಗಿ ದಂಡ ವಿಧಿಸೋದಾಗಿ ಇಳಯರಾಜ ನೋಟಿಸ್ ಕಳುಹಿಸಿದ್ದಾರೆ. ಇಳಯರಾಜ ಅವರ ಈ ನೋಟಿಸ್ ರಷ್ಯಾ, ಮಲೇಶಿಯಾ, ಶ್ರೀಲಂಕಾ, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ಮಾಡಲು ಸಜ್ಜಾಗಿರೋ ಎಸ್‍ಪಿಬಿ ಅಂಡ್ ಟೀಮ್‍ಗೆ ಶಾಕ್ ಕೊಟ್ಟಿದೆ.

    ನೋಟಿಸ್ ನೀಡಿರುವ ವಿಚಾರವನ್ನು ಎಸ್‍ಪಿ ಬಾಲಸುಬ್ರಮಣ್ಯಂ ಅವರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಮುಂದಿನ ಕಾರ್ಯಕ್ರಮದಲ್ಲಿ ಇಳಯರಾಜ ಅವರು ಸಂಗೀತ ನೀಡಿರುವ ಹಾಡನ್ನು ಹಾಡುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರದ ಬಗ್ಗೆ ಹೆಚ್ಚಿನ ಚರ್ಚೆ ಮಾಡಬೇಡಿ. ಭಾರತಕ್ಕೆ ಬಂದ ಬಳಿಕ ಮಾತನಾಡುವುದಾಗಿ ಬರೆದುಕೊಂಡಿದ್ದಾರೆ.

    ಸಂಗೀತ ನಿರ್ದೇಶಕ ಒಂದು ಹಾಡನ್ನ ಸೃಷ್ಠಿ ಮಾಡಿದ್ರೆ ಸಿಗೋದು ಒಂದೇ ಸಂಭಾವನೆ. ಆದರೆ ಗಾಯಕ ಈ ಹಾಡನ್ನು ಕಾರ್ಯಕ್ರಮಗಳಲ್ಲಿ ಪದೇ ಪದೇ ಹಾಡಿ ದುಡ್ಡು ಮಾಡ್ತಾರೆ. ಹಾಗಾಗಿ ಗಾಯಕರು ಹಾಡೋ ಹಾಡನ್ನು ಸೃಷ್ಠಿ ಮಾಡಿದ ಸಂಗೀತ ನಿರ್ದೇಶಕನಿಗೂ ಗೌರವ ಧನ ಸಿಗ್ಬೇಕು ಎನ್ನುವುದು ಇಳಯರಾಜ ವಾದ.

    ಎಸ್‍ಪಿಬಿ ಮತ್ತು ಇಳಯರಾಜ ಸ್ನೇಹಿತರಾಗಿದ್ದು, ಕಾರ್ಯಕ್ರಮದಲ್ಲಿ ಇಳಯರಾಜರಿಂದ ನಾನು ಮೇಲೆ ಬಂದಿದ್ದೇನೆ ಎಂದು ಎಸ್‍ಪಿಬಿ ಹೇಳಿಕೊಂಡಿದ್ದರು.

    ಇದು ಮೊದಲಲ್ಲ: 2015ರಲ್ಲಿ ಐದು ಸಂಗೀತ ಕಂಪೆನಿ ಮತ್ತು ರೇಡಿಯೋಗಳ ವಿರುದ್ಧ ಇದೇ ರೀತಿಯಲ್ಲಿ ಇಳಯರಾಜ ಮನವಿ ಮಾಡಿಕೊಂಡಿದ್ದರು. ಮದ್ರಾಸ್ ಹೈ ಕೋರ್ಟ್ ಇಳಯರಾಜ ಅನುಮತಿ ಇಲ್ಲದೆ ಅವರ ರಾಗ ಸಂಯೋಜನೆ ಮಾಡಿದ ಹಾಡುಗಳನ್ನು ಮಾರಾಟ ಮಾಡದಂತೆ ಐದು ಕಂಪೆನಿಗಳಿಗೆ ಸೂಚಿಸಿತ್ತು.