Tag: ಸಂಗೀತ ನಿರ್ದೇಶಕ

  • ಸಂಗೀತ ನಿರ್ದೇಶಕ ಗುರುಕಿರಣ್, ಸಮಾಜ ಸೇವಕ ರಾಜಣ್ಣಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

    ಸಂಗೀತ ನಿರ್ದೇಶಕ ಗುರುಕಿರಣ್, ಸಮಾಜ ಸೇವಕ ರಾಜಣ್ಣಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

    ಬೆಂಗಳೂರು: ತನ್ನ 59ನೇ ಘಟಿಕೋತ್ಸವದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಮತ್ತು ಸಮಾಜಸೇವಕ ಕೆ.ಎಸ್ ರಾಜಣ್ಣನವರಿಗೆ ಬೆಂಗಳೂರು ವಿಶ್ವವಿದ್ಯಾಲಯವು (Bengaluru University) ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

    59ನೇ ವಾರ್ಷಿಕ ಘಟಿಕೋತ್ಸವದಲ್ಲಿ 31,382 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, 26,210 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 21,853 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದುಕೊಂಡಿದ್ದು, 5,861 ವಿದ್ಯಾರ್ಥಿಗಳು ಪ್ರಥಮ ದರ್ಜೆ, 1,289 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡು ತೇರ್ಗಡೆ ಹೊಂದಿದ್ದಾರೆ. ಒಟ್ಟು 308 ಚಿನ್ನದ ಪದಕಗಳನ್ನು (Gold Medal) ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡಿದ್ದು, 79 ನಗದು ಬಹುಮಾನವನ್ನು ಸ್ವೀಕರಿಸಿದ್ದಾರೆ. 140 ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಸ್ವೀಕರಿಸಿದರು.

    59ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಎಸ್.ಅನ್ನಪೂರ್ಣ 9 ಚಿನ್ನದ ಪದಕ ಮತ್ತು ಸ್ನಾತಕ ಪದವಿ ವಿಭಾಗದಲ್ಲಿ ಅನುರಾಧ 9 ಚಿನ್ನದ ಪದಕ ಸ್ವೀಕರಿಸಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ಪಟ್ಟಿಗೆ ಸೇರಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನವನ್ನು ಕೇಂದ್ರ ತಕ್ಷಣವೇ ಬಿಡುಗಡೆಗೊಳಿಸಲಿ : ಎಚ್.ಕೆ ಪಾಟೀಲ್

    ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಗಣ್ಯರಿಗೂ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಲಾಯಿತು. ಗೌರವ ಡಾಕ್ಟರೇಟ್ ಸ್ವೀಕರಿಸುವ ಸಂದರ್ಭದಲ್ಲಿ ಗುರುಕಿರಣ್ ಕುಟುಂಸ್ಥರು ಸೇರಿದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪ್ರಿಯಾಂಕಾ ಉಪೇಂದ್ರ ಉಪಸ್ಥಿತರಿದ್ದರು. ಇದನ್ನೂ ಓದಿ: Devara Trailer: ರಕ್ತದಿಂದ ಸಮುದ್ರವೇ ಕೆಂಪಾದ ಕಥೆ ಹೇಳೋಕೆ ಬರುತ್ತಿದ್ದಾರೆ ಜ್ಯೂ.ಎನ್‌ಟಿಆರ್‌, ಜಾನ್ವಿ ಕಪೂರ್‌

    ಇನ್ನೂ ಬೆಂಗಳೂರು ವಿಶ್ವವಿದ್ಯಾಲಯ 59ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಗೈರಾದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ಸಹ ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ಉಪಾಧ್ಯಕ್ಷರಾದ ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವದ ಭಾಷಣ ಮಾಡಿದರು.

    ಕುಲಪತಿ ಡಾ.ಎಸ್.ಎಂ ಜಯಕರ, ಕುಲಸಚಿವ ಕೆ.ಎ.ಎಸ್ ಶೇಕ್ ಲತೀಫ್, ಪರೀಕ್ಷಾಂಗ ಕುಲಸಚಿವ ಸಿ.ಶ್ರೀನಿವಾಸ್ ಸೇರಿದಂತೆ ಸಿಂಡಿಕೇಟ್ ಸದಸ್ಯರು, ಡೀನರ್ ಉಪಸ್ಥಿತರಿದ್ದರು.  ಇದನ್ನೂ ಓದಿ: ಅಭಿವೃದ್ಧಿ ವಿಷಯದಲ್ಲಿ ಸಂಘರ್ಷ ಬೇಡ – ಸಚಿವ ಎಂ.ಬಿ ಪಾಟೀಲ್‌ಗೆ ಕೇಂದ್ರ ಸಚಿವ ಹೆಚ್‌ಡಿಕೆ HD ಕುಮಾರಸ್ವಾಮಿ ಭರವಸೆ 

  • ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ನಿಧನ

    ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ನಿಧನ

    ಹೆಸರಾಂತ ಸಂಗೀತ ನಿರ್ದೇಶಕರ (Music director) ಮೆಚ್ಚುಗೆಗೆ ಪಾತ್ರವಾಗಿದ್ದ, ಹೊಸ ಹೊಸ ಆಲೋಚನೆಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ್ದ ತಮಿಳಿನ ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್  (Praveen Kumar) ನಿಧನರಾಗಿದ್ದಾರೆ. (Passed away) ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.

    ಮೇಡಗು, ರಾಕಥಾನ್ ನಂತಹ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಸೈ ಅನಿಸಿಕೊಂಡಿದ್ದರು ಪ್ರವೀಣ್. ಇವರ ಪ್ರತಿಭೆಗೆ ಕೈ ತುಂಬಾ ಅವಕಾಶಗಳು ಇದ್ದವು. ಆದರೆ, ಆರೋಗ್ಯ ಕೈ ಕೊಟ್ಟ ಹಿನ್ನೆಲೆಯಲ್ಲಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

     

    ಖಾಸಗಿ ಆಸ್ಪತ್ರೆಯ ನಂತರ ಅವರನ್ನು ಓಮಂದೂರರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಚಿಕಿತ್ಸೆ ಫಲಕಾರಿಯಾಗಿ ಬೆಳಗ್ಗೆ ಅವರು ಇಹಲೋಕ ತ್ಯಜಿಸಿದ್ದಾರೆ. ಮೃತರ ಆತ್ಮಕ್ಕೆ ಅವರ ಅಭಿಮಾನಿಗಳು ಮತ್ತು ಚಿತ್ರೋದ್ಯಮ ಕಂಬನಿ ಮಿಡಿದೆ.

  • ಹೆಸರಾಂತ ಸಂಗೀತ ನಿರ್ದೇಶಕ ವಿಜಯ್ ನಿಧನ

    ಹೆಸರಾಂತ ಸಂಗೀತ ನಿರ್ದೇಶಕ ವಿಜಯ್ ನಿಧನ

    ನಾರೋಗ್ಯದಿಂದ ಬಳಲುತ್ತಿದ್ದ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ 9music director) ವಿಜಯ್ ಆನಂದ್ (Vijay Anand) ನಿಧನರಾಗಿದ್ದಾರೆ. ಹಲವು ದಿನಗಳಿಂದ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಇಹಲೋಕ ತ್ಯಜಿಸಿದ್ದಾರೆ (Passed away). ವಿಜಯ್ ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.

    ರಜನಿಕಾಂತ್ ನಟನೆಯ ನಾನ್ ಆದಿಮೈ ಇಲೈ ಸೇರಿದಂತೆ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿರುವ ವಿಜಯ್, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅನೇಕ ಸ್ಟಾರ್ ನಟರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರು ಹೆಗ್ಗಳಿಕೆ ಇವರದ್ದು.

    1982ರಲ್ಲಿ ವೃತ್ತಿ ಜೀವನ ಆರಂಭವಿಸಿದ್ದ ವಿಜಯ್, ನಾಲ್ಕು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಇಳಯರಾಜರಂಥ ದಿಗ್ಗಜರ ಮಧ್ಯೆಯೂ ತಮ್ಮ ತನವನ್ನು ವಿಜಯ್ ಉಳಿಸಿಕೊಂಡು ಬಂದಿದ್ದರು. ವಿಜಯ್ ನಿಧನಕ್ಕೆ ಸಂಗೀತ ಕ್ಷೇತ್ರ ಕೂಡ ಕಂಬನಿ ಮಿಡಿದಿದೆ.

  • ನಾದಬ್ರಹ್ಮ ಹಂಸಲೇಖಗೆ ಪದ್ಮಶ್ರೀ ಕೊಡಿ : ನಿರ್ದೇಶಕ ಶಶಾಂಕ್ ಮನವಿ

    ನಾದಬ್ರಹ್ಮ ಹಂಸಲೇಖಗೆ ಪದ್ಮಶ್ರೀ ಕೊಡಿ : ನಿರ್ದೇಶಕ ಶಶಾಂಕ್ ಮನವಿ

    ಭಾರತೀಯ ಸಿನಿಮಾ ರಂಗದ ದಂತಕಥೆ, ನಾದಬ್ರಹ್ಮ ಹಂಸಲೇಖ (Hamsalekha) ಅವರು ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರೋದ್ಯಮದ ಅನೇಕರು ಹಂಸಲೇಖ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಹಂಸಲೇಖ ಗರಡಿಯಲ್ಲಿ ಪಳಗಿರುವ ಕನ್ನಡದ ಹೆಸರಾಂತ ನಿರ್ದೇಶಕ ಶಶಾಂಕ್ (Shashank) ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

    ಹಂಸಲೇಖ ಅವರಿಗೆ ಈಗಾಗಲೇ ಭಾರತೀಯ ನಾಗರೀಕ ಅತ್ಯುನ್ನತ ಪ್ರಶಸ್ತಿಗಳು ಸಿಗಬೇಕಿತ್ತು. ಅವರ ಸಾಧನೆ ಏನೂ ಕಡಿಮೆ ಇಲ್ಲ. ಸಂಗೀತ ನಿರ್ದೇಶಕರಾಗಿ (Music Director), ಚಿತ್ರ ಸಾಹಿತಿಯಾಗಿ, ರಂಗಭೂಮಿ ಹಾಗೂ ಜನಪದ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ಸಿನಿಮಾ ಸಂಗೀತದ ಗತಿಯನ್ನೇ ಬದಲಿಸಿದ ಮಹಾನ್ ಸಂಗೀತ ನಿರ್ದೇಶಕ. ಸಾವಿರಾರು ಗಾಯಕರನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದ ಪಂಡಿತ. ಆದರೂ, ಈವರೆಗೂ ಅವರಿಗೆ ಪದ್ಮಶ್ರೀ (Padma Shri) ಪ್ರಶಸ್ತಿ ದೊರೆತಿಲ್ಲ. ಇದನ್ನೂ ಓದಿ:‘ಕಾಂತಾರ’ 2ಗಾಗಿ ಕುದುರೆ ಸವಾರಿ, ಕಳರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಶೆಟ್ಟಿ ಬ್ಯುಸಿ

    ಬಾಲಿವುಡ್ ಮತ್ತು ಇತರ ಚಿತ್ರೋದ್ಯಮಕ್ಕೆ ಹೋಲಿಸಿದರೆ ನಾಗರೀಕ ಪ್ರಶಸ್ತಿಗಳು ಇತರ ಚಿತ್ರೋದ್ಯಮಕ್ಕೆ ಸಂದಿದ್ದು ಕಡಿಮೆ. ಹಂಸಲೇಖ ಅವರು ಮಾಡಿದ ಕೆಲಸಕ್ಕೆ ಈಗಾಗಲೇ ಪದ್ಮಶ್ರೀ, ಪದ್ಮಭೂಷಣ ಕೂಡ ಸಿಗಬೇಕಿತ್ತು. ಸಿಕ್ಕಿಲ್ಲ ಎನ್ನುವುದು ಕನ್ನಡಿಗರ ನೋವು. ಆ ನೋವನ್ನು ಶಶಾಂಕ್ ಇಂದು ಹಂಚಿಕೊಂಡಿದ್ದಾರೆ.

    ಹಂಸಲೇಖ ಅವರು ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಎನ್ನುವುದು ಎಲ್ಲರ ಒತ್ತಾಸೆ. ಅದನ್ನು ಶಶಾಂಕ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿಗೆ ಇರುವವರು ಶೇರ್ ಮಾಡಿ ಎಂದು ಕೇಳಿದ್ದಾರೆ. ಹೌದು, ಹಂಸಲೇಖ ಅವರು ಎಲ್ಲ ರೀತಿಯಿಂದಲೂ ಪ್ರಶಸ್ತಿಗೆ ಅರ್ಹರು. ಅವರಿಗೆ ಪದ್ಮಶ್ರೀ ಈ ಬಾರಿ ಸಿಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.

  • 27 ವರ್ಷಗಳ ಬಳಿಕ ಮಲಯಾಳಂ ಸಿನಿಮಾ ರಂಗಕ್ಕೆ ಕೀರವಾಣಿ ಎಂಟ್ರಿ

    27 ವರ್ಷಗಳ ಬಳಿಕ ಮಲಯಾಳಂ ಸಿನಿಮಾ ರಂಗಕ್ಕೆ ಕೀರವಾಣಿ ಎಂಟ್ರಿ

    ಬಾಹುಬಲಿ, ಆರ್.ಆರ್.ಆರ್ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಂಗೀತ ಸಂಯೋಜನೆ (Music Director) ಮಾಡಿರುವ ಎಂ.ಎಂ.ಕೀರವಾಣಿ (MM Keeravani) ಬರೋಬ್ಬರಿ 27 ವರ್ಷಗಳ ನಂತರ ಮಲಯಾಳಂ ಸಿನಿಮಾ ರಂಗಕ್ಕೆ ಮರು ಪ್ರವೇಶ ಮಾಡುತ್ತಿದ್ದಾರೆ. ಎರಡೂವರೆ ದಶಕದ ನಂತರ ಮಲಯಾಳಂ (Malayalam) ಸಿನಿಮಾ ರಂಗಕ್ಕೆ ಕೀರವಾಣಿ ಬರುತ್ತಿರುವುದು ಸಹಜವಾಗಿಯೇ ಆ ಚಿತ್ರೋದ್ಯಮಕ್ಕೆ ಸಂಭ್ರಮ ತಂದಿದೆ.

    1996ರಲ್ಲಿ ಬಿಡುಗಡೆಯಾದ ದೇವರಾಗಂ ಹೆಸರಿನ ಮಲಯಾಳಂ ಸಿನಿಮಾಗೆ ಕೊನೆಯದಾಗಿ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ಹಾಡುಗಳು ಸಖತ್ ಹಿಟ್ ಕೂಡ ಆಗಿದ್ದವು. ಆದರೂ, ನಂತರ ಅವರು ಮಲಯಾಳಂ ಸಿನಿಮಾಗಳಿಗೆ ಸಂಗೀತ ಮಾಡಲು ಒಪ್ಪಿಕೊಳ್ಳಲಿಲ್ಲ. 27 ವರ್ಷಗಳ ನಂತರ ಮತ್ತೆ ಅವರು ಮಲಯಾಳಂ ಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದಾರೆ.

    ಸದ್ಯ ಅವರು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ಮ್ಯಾಜಿಷಿಯನ್ (Magician) ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಭಾನುವಾರವಷ್ಟೇ ಈ ಸಿನಿಮಾದ ಮುಹೂರ್ತ ನಡೆದಿದೆ. ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದ ಕೀರಾವಣಿ, ತುಂಬಾ ವರ್ಷಗಳ ನಂತರ ಮತ್ತೆ ಈ ಚಿತ್ರೋದ್ಯಮಕ್ಕೆ ಬರುತ್ತಿರುವದು ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ.

    ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದ ನಂತರ ಕೀರವಾಣಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ, ಇವರು ದುಬಾರಿ ಸಂಗೀತ ನಿರ್ದೇಶಕರಾಗಿದ್ದಾರೆ. ಹೀಗಿದ್ದಾಗಲೂ ಮಲಯಾಳಂ ಚಿತ್ರವನ್ನು ಒಪ್ಪಿಕೊಂಡಿದ್ದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.

  • ರಾಜನ್ ನಾಗೇಂದ್ರ ಗೀತೆಗಳಿಗೆ ಹೊಸ ರೂಪ : ರಾಜನ್ ಪುತ್ರ ಘೋಷಣೆ

    ರಾಜನ್ ನಾಗೇಂದ್ರ ಗೀತೆಗಳಿಗೆ ಹೊಸ ರೂಪ : ರಾಜನ್ ಪುತ್ರ ಘೋಷಣೆ

    ನ್ನಡ ಚಿತ್ರರಂಗದ ಹಿರಿಯ ಜನಪ್ರಿಯ ಸಂಗೀತ ನಿರ್ದೇಶಕ (Music Director) ರಾಜನ್ (ರಾಜನ್ ನಾಗೇಂದ್ರ) (Rajan Nagendra) ಸಂಗೀತ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು  ಸಂಗೀತಗಾರರನ್ನಾಗಿ ಪರಿಚಯಿಸುವುದಕ್ಕಾಗಿ ‘ಸಪ್ತ ಸ್ವರಾಂಜಲಿ ಇನ್ಸ್ ಟಿಟ್ಯೂಟ್ ಆಫ್ ಮ್ಯೂಸಿಕ್’ ಎಂಬ ಸಂಸ್ಥೆಯನ್ನು ಆರಂಭಿಸಿದ್ದರು. ಈ ಸಂಸ್ಥೆಯಲ್ಲಿ ಕಲಿತಿರುವ ಅನೇಕರು ಇಂದು ಸಂಗೀತ ಕ್ಷೇತ್ರದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.  ಈಗ ರಾಜನ್ ಅವರ ಪುತ್ರ ಅನಂತ ರಾಜನ್ (Anantha Rajan), ‘ರಾಜನ್ ನಾಗೇಂದ್ರ ಟ್ರಸ್ಟ್‌ ವತಿಯಿಂದ ರಾಜನ್ ನಾಗೇಂದ್ರ ಅವರ ಗೀತೆಗಳಿಗೆ ಹೊಸರೂಪ ನೀಡಿ ಕೇಳುಗರ ಮುಂದೆ ತರುವ ಪ್ರಯತ್ನದಲ್ಲಿದ್ದಾರೆ. ಅಂದಹಾಗೆ, ರಾಜನ್ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಪುತ್ರ ಅನಂತ ರಾಜನ್, ‘ರಾಜನ್ ನಾಗೇಂದ್ರ ಗಾನಯಾನ’ ಎಂಬ ಹೆಸರಿನಲ್ಲಿ ತಮ್ಮ ಯೋಜನೆಯನ್ನು ಘೋಷಿಸಿದ್ದಾರೆ.

    ‘ಕನ್ನಡದಿಂದ ಸಂಗೀತ ಲೋಕಕ್ಕೆ ಹೊಸ ಪ್ರತಿಭೆಗಳು ಬರಬೇಕು ಎಂಬ ಆಶಯದಿಂದ ನಮ್ಮ ತಂದೆ ರಾಜನ್ ಬದುಕಿರುವಾಗಲೇ ‘ಸಪ್ತ ಸ್ವರಾಂಜಲಿ’ ಎಂಬ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯಿಂದ ಈಗಾಗಲೇ ಅನೇಕ ಪ್ರತಿಭೆಗಳು ಕಲಾವಿದರಾಗಿ ಸಂಗೀತ ಲೋಕಕ್ಕೆ ಪರಿಚಯವಾಗಿದ್ದಾರೆ. ಇನ್ನು ಕನ್ನಡ ಸಿನಿಮಾ ಸಂಗೀತದಲ್ಲಿ ರಾಜನ್- ನಾಗೇಂದ್ರ ಅವರ ಹಾಡುಗಳು ಚಿನ್ನ ಇದ್ದಂತೆ. ಹಳೆಯದಾದರೂ ಚಿನ್ನಕ್ಕೆ ಇರುವ ಬೆಲೆ ಇದ್ದೇ ಇರುತ್ತದೆ. ಹಳೆಯ ಚಿನ್ನವನ್ನು ಪಾಲಿಶ್ ಮಾಡಿ ಮತ್ತೆ ಬಳಸುವಂತೆ, ರಾಜನ್ ನಾಗೇಂದ್ರ ಅವರ ಈ ಗೋಲ್ಡನ್ ಹಾಡುಗಳನ್ನು ಇಂದಿನ ಕೇಳುಗರಿಗೆ ಇಷ್ಟವಾಗುವಂತೆ, ಹೊಸ ರೂಪದಲ್ಲಿ ಮತ್ತೆ ತರುತ್ತಿದ್ದೇವೆ’. ‘ನಾನು ನನ್ನ ಶಾಲಾ ದಿನಗಳಿಂದಲೇ ತಂದೆ (ರಾಜನ್) ಅವರ ಬಹುತೇಕ  ಮ್ಯೂಸಿಕ್ ರೆಕಾರ್ಡಿಂಗ್‌ಗಳನ್ನು ಹತ್ತಿರ ದಿಂದ ನೋಡಿದ್ದೆ. ಶಾಲೆಯಿಂದ ನೇರವಾಗಿ ರೆಕಾರ್ಡಿಂಗ್ ಸ್ಟುಡಿಯೋಗೆ ಹೋಗುತ್ತಿದ್ದೆ. ಹಾಗಾಗಿ ಅವರು ಮಾಡಿರುವ ಬಹುತೇಕ ಹಾಡುಗಳ ರೆಕಾರ್ಡಿಂಗ್ ಬಗ್ಗೆ ನನಗೆ ಅರಿವಿದೆ. ತುಂಬ ವೃತ್ತಿಪರವಾಗಿ ರೆಕಾರ್ಡಿಂಗ್ ಕೆಲಸ ಮಾಡುತ್ತಿದ್ದರು ಎಂದರು. ಇದನ್ನೂ ಓದಿ:ಭಾವಿ ಪತ್ನಿ ಜೊತೆಗಿನ ಅಭಿಷೇಕ್ ಅಂಬರೀಶ್ ವೀಡಿಯೋ ವೈರಲ್

    ‘ತಂದೆ (ರಾಜನ್)ಅವರ ನಿಧನದ ನಂತರ ಅವರ ಕೆಲಸವನ್ನು ಟ್ರಸ್ಟ್‌ ಮೂಲಕ ನಾವು ಮಾಡಲು ಮುಂದಾದೆವು. ಈಗಾಗಲೇ ರಾಜನ್ ನಾಗೇಂದ್ರ ಅವರ ಒಂದಷ್ಟು ಹಳೆಯ ಹಾಡುಗಳಿಗೆ ಹೊಸರೂಪ ಕೊಟ್ಟಿದ್ದೇವೆ. ರಾಜನ್ ಬದುಕಿದ್ದಾಗ ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ಪ್ರತಿಭೆಗಳಿಗೆ ವರ್ಷಕ್ಕೆ ಮೂರು ನಾಲ್ಕು ಕಾರ್ಯಕ್ರಮಗಳ ಮೂಲಕ ಅವರನ್ನು ಸಂಗೀತ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದರು. ಅದನ್ನು ಮುಂದುವರೆಸುವ ಕೆಲಸ ಟ್ರಸ್ಟ್‌ ಮೂಲಕ ನಾವು ಮಾಡುತ್ತಿದ್ದೇವೆ’ ಎಂದು ರಾಜನ್ ಅವರ ಮಗ ಅನಂತ ರಾಜನ್ ತಿಳಿಸಿದರು.

    ಹಿರಿಯ ಚಿತ್ರ ನಿರ್ದೇಶಕ ಭಾರ್ಗವ ಮಾತನಾಡಿ, ‘ರಾಜನ್ ನಾಗೇಂದ್ರ ನನ್ನ ನಿರ್ದೇಶನದ 26 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸುಮಾರು 38 ಸಿನಿಮಾಗಳಿಗೆ ಅವರೊಂದಿಗೆ ಕೆಲಸ ಮಾಡಿದ್ದೇನೆ. ಕನ್ನಡ ಚಿತ್ರರಂಗದ ತುಂಬಾ ಅಪರೂಪದ ಸದಭಿರುಚಿ ಸಂಗೀತ ನಿರ್ದೇಶಕರಲ್ಲಿ ರಾಜನ್ ನಾಗೇಂದ್ರ ಜೋಡಿ ಕೂಡ ಒಂದು.  ಕೆಲಸದಲ್ಲಿ ದೊಡ್ಡ ಮಟ್ಟಕ್ಕೆ ಏರಿದವರು ರಾಜನ್. ಇಂದಿಗೂ ಪ್ರತಿದಿನ ಅವರ ಹಾಡುಗಳನ್ನು ಕೇಳುಗರು ಗುನುಗುತ್ತಿರುವುದೇ ಅವರ ಹಾಡುಗಳ ಜನಪ್ರಿಯತೆಗೆ ದೊಡ್ಡ ಸಾಕ್ಷಿ ಎಂದರು. ಗುರುದತ್, ಲಹರಿ ವೇಲು (Lahari Velu) ಮೊದಲಾದವರು ರಾಜನ್ ನಾಗೇಂದ್ರ ಹಾಡುಗಳ ಕುರಿತು ಮಾತನಾಡಿದರು. ಸಿಂಚನಾ, ಭೂಮಿಕಾ, ಸ್ಮಿತಾ, ಕೀರ್ತನಾ, ವಿಷ್ಣು ಮೊದಲಾದ ಕಲಾವಿದರು ರಾಜನ್ ನಾಗೇಂದ್ರ ಅವರ ಕೆಲ ಹಾಡುಗಳನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸಿದರು.

  • ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ವಿಧಿವಶ

    ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ವಿಧಿವಶ

    ನ್ನಡ ಸಿನಿಮಾ ಮತ್ತು ಕಿರುತೆರೆ ಜಗತ್ತಿನ ಹೆಸರಾಂತ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಬುಧವಾರ ನಿಧನ ಹೊಂದಿದ್ದಾರೆ. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಪತ್ನಿ, ಒಬ್ಬ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಸಂಗೀತ ಕುಟುಂಬದಿಂದಲೇ ಬೆಳೆದು ಬಂದಿದ್ದ ಮನೋರಂಜನ್ ತಂದೆ ಪಂಡಿತ್ ಬಿ.ಎನ್.ಪಾರ್ಥಸಾರಥಿ ನಾಯ್ಡು ಕೂಡ ಸಂಗೀತದಲ್ಲಿ ಪಾಂಡಿತ್ಯ ಹೊಂದಿದ್ದರು. ಮಗನೂ ಇದೇ ಕ್ಷೇತ್ರದಲ್ಲೇ ಮುಂದುವರೆಯಬೇಕು ಎಂದು ಅಪೇಕ್ಷೆ ಪಟ್ಟಿದ್ದರು. ಅದರಂತೆ ಮನೋರಂಜನ್ 70ರ ದಶಕದಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು. ಎಂಟು ನೂರಕ್ಕೂ ಹೆಚ್ಚು ಸಂಗೀತದ ಆಲ್ಬಂ ಹೊರ ತಂದಿರುವ ಇವರು, ಮನೋರಂಜನ್ ಹೆಸರಿನ ತಂಡವನ್ನು ಕಟ್ಟಿಕೊಂಡು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಜಗ್ಗೇಶ್ ನಟನೆ `ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಬಗ್ಗೆ ಸ್ಪಷ್ಟನೆ ನೀಡಿದ ಸಂತೋಷ್‌ ಆನಂದ್‌ರಾಮ್

    ಕಾರ್ತಿಕ ದೀಪ ಸೇರಿದಂತೆ ಅನೇಕ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗೆ ಸಂಗೀತ ಅಳವಡಿಸಿದ ಹೆಗ್ಗಳಿಕೆ ಇವರದ್ದು. ಕೆಲಕಾಲ ಇವರು ಆದರ್ಶ ಫಿಲ್ಮ್ ಇನ್ ಸ್ಟಿಟ್ಯೂಟ್ ನಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಗೀತಾಸಕ್ತರಿಗಾಗಿ ತಮ್ಮದೇ ಆದ ಶ್ರುತಿಲಯ ಕಲ್ಚರಲ್ ಅಕಾಡೆಮಿ ಪ್ರಾರಂಭಿಸಿ ಸಂಗೀತ ಕ್ಷೇತ್ರಕ್ಕೆ ಹೊಸ ಹೊಸ ಪ್ರತಿಭೆಗಳನ್ನು ನೀಡಿದ್ದಾರೆ. ಅಗಲಿದೆ ಹಿರಿಯ ಸಂಗೀತ ಜೀವಕ್ಕೆ ಕನ್ನಡ ಕಿರುತೆರೆ ಕಲಾವಿದರು ಮತ್ತು ಸಂಗೀತ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಲಯಾಳಂ ಸ್ಟಾರ್ ನಟನ ಚಿತ್ರಕ್ಕೆ ಕನ್ನಡಿಗ ರವಿ ಬಸ್ರೂರು ಸಂಗೀತ

    ಮಲಯಾಳಂ ಸ್ಟಾರ್ ನಟನ ಚಿತ್ರಕ್ಕೆ ಕನ್ನಡಿಗ ರವಿ ಬಸ್ರೂರು ಸಂಗೀತ

    ಕೆಜಿಎಫ್ 2 ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರವಿ ಬಸ್ರೂರು ಅವರಿಗೆ ಸೌತ್ ಸಿನಿಮಾ ರಂಗದಲ್ಲಿ ಮತ್ತು ಬಾಲಿವುಡ್ ಸಿನಿಮಾ ರಂಗದಲ್ಲೂ ಬೇಡಿಕೆ ಹೆಚ್ಚಾಗಿದೆ. ಮೊನ್ನೆಯಷ್ಟೇ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಸುದ್ದಿ ಆಗಿತ್ತು. ಇದೀಗ ಮಲಯಾಳಂ ಸ್ಟಾರ್ ನಟನ ಚಿತ್ರಕ್ಕೂ ಇವರೇ ಸಂಗೀತ ಸಂಯೋಜನೆ ಮಾಡಲಿದ್ದಾರಂತೆ.

    ಮಲಯಾಳಂ ಸಿನಿಮಾ ರಂಗಕ್ಕೆ ಇವರ ಮೊದಲ ಎಂಟ್ರಿ ಏನಲ್ಲವಾದರೂ, ಇದೇ ಮೊದಲ ಬಾರಿಗೆ ಸ್ಟಾರ್ ನಟನ ಚಿತ್ರಕ್ಕೆ ಸಂಗೀತ ಮಾಡುತ್ತಿರುವುದು ವಿಶೇಷ. ಈ ಹಿಂದೆ ಮಡ್ಡಿ ಎಂಬ ಮಲಯಾಳಂ ಸಿನಿಮಾಗೆ ರವಿ ಸಂಗೀತ ನೀಡಿದ್ದರು. ಇದೀಗ ಪೃಥ್ವಿ ಸುಕುಮಾರನ್ ನಟಿಸುತ್ತಿರುವ, ಪೌರಾಣಿಕ ಚಿತ್ರ ಕಾಲಿಯನ್ ಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇದೊಂದು ಹೊಸ ಬಗೆಯ ಸಿನಿಮಾವಾಗಿದ್ದರಿಂದ ಇವರನ್ನು ಅವಕಾಶ ಹುಡುಕಿಕೊಂಡು ಬಂದಿದೆಯಂತೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

    ಕೆಜಿಎಫ್ 2 ವಿಶ್ವ ಮಟ್ಟದಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಈ ಸಿನಿಮಾದ ಬಹುತೇಕ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಎಡಿಟರ್, ಸಿನಿಮಾಟೋಗ್ರಾಫರ್, ಕಲಾ ನಿರ್ದೇಶಕರು ಸೇರಿದಂತೆ ಅನೇಕರಿಗೆ ಭಾರೀ ಬಜೆಟ್ ಸಿನಿಮಾಗಳಿಂದ ಆಫರ್ ಬರುತ್ತಿವೆ. ಅದರಲ್ಲೂ ರವಿ ಬಸ್ರೂರು ಭಾರೀ ವೇಗದಲ್ಲಿ ಬೇಡಿಕೆಯನ್ನು ಗಳಿಸುತ್ತಿದ್ದಾರೆ. ಇದೀಗ ಮಲಯಾಳಂ ಸಿನಿಮಾ ರಂಗದಲ್ಲೂ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 6.75 ಲಕ್ಷಕ್ಕೆ ಹರಾಜಾಯಿತು ಸಂಗೀತ ಮಾಂತ್ರಿಕ ರೆಹಮಾನ್ ಡ್ರೆಸ್ಸು

    6.75 ಲಕ್ಷಕ್ಕೆ ಹರಾಜಾಯಿತು ಸಂಗೀತ ಮಾಂತ್ರಿಕ ರೆಹಮಾನ್ ಡ್ರೆಸ್ಸು

    ಸಿನಿಮಾ ಕಲಾವಿದರು, ಸೆಲೆಬ್ರಿಟಿ, ಸ್ಟಾರ್‌ಗಳು ಧರಿಸಿದ ಬಟ್ಟೆಯನ್ನು ಅಭಿಮಾನಿಗಳು ಹಾಗೂ ಆಸಕ್ತರು ದುಬಾರಿ ಹಣಕ್ಕೆ ಖರೀದಿ ಮಾಡುತ್ತಾರೆ. ಬಟ್ಟೆ ಸಂಗ್ರಹ ಮಾಡುವುದು ಹಲವರಿಗೆ ಕ್ರೇಜ್ ಆಗಿದೆ. ಆದರೆ ಈ ಬಟ್ಟೆಯನ್ನು ಸೆಲ್ ಮಾಡುವುದರ ಹಿಂದಿನ ಉದ್ದೇಶವೇ ಬೇರೆ ಇರುತ್ತದೆ. ಹೌದು ಇತ್ತೀಚೆಗಷ್ಟೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ತಮ್ಮ ಬಟ್ಟೆಯನ್ನು ಲಕ್ಷ, ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.

    ಎ.ಆರ್.ರೆಹಮಾನ್ ತೊಟ್ಟಿದ್ದ ಉಡುಪು 6.75 ಲಕ್ಷಕ್ಕೆ ಹರಾಜಾಗಿದೆ. ಪ್ರಮೋದ್ ಸುರಾಡಿಯಾ ಅವರು ಹರಾಜಿನಲ್ಲಿ ಬಟ್ಟೆಯನ್ನು ಖರೀದಿ ಮಾಡಿದ್ದಾರೆ. ಬಳಕೆ ಮಾಡಿ ಬಿಟ್ಟಿರುವ ಬಟ್ಟೆಯನ್ನು ಹರಾಜು ಮಾಡಿ ಎ.ಆರ್.ರೆಹಮಾನ್ ಆ ಹಣವನ್ನು ಏನು ಮಾಡಿದರು ಎನ್ನುವುದರ ಹಿಂದೆ ಅಚ್ಚರಿಯ ಸ್ಟೋರಿ ಕೂಡ ಇದೆ.

    MONEY

    ರಾಜಸ್ಥಾನ ಕಾಸ್ಮೋ ಕ್ಲಬ್ ಫೌಂಡೇಶನ್‌ನ 28ನೇ ಸಂಸ್ಥಾಪಕರ ದಿನಾಚರಣೆಯನ್ನು ಇತ್ತೀಚೆಗೆ ಆಳ್ವಾರ್ಪೇಟೆ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಮಿಳುನಾಡು ಕೈಮಗ್ಗ ಸಚಿವ ಆರ್.ಗಾಂಧಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಟ್ಟೆಯನ್ನು ಖರೀದಿಸಲು ಅಶಕ್ತರಾದವರಿಗೆ ಸಹಾಯ ಮಾಡುವ ಯೋಜನೆಯಡಿ, ಸಹಾಯವಾಗಲಿ ಎಂದು ಎ.ಆರ್. ರೆಹಮಾನ್ ಧರಿಸಿದ್ದ ಉಡುಪನ್ನು ಹರಾಜು ಹಾಕುವುದಾಗಿ ಹೇಳಿದ್ದರು.

    ಆರ್ಥಿಕವಾಗಿ ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ಹರಾಜಿಗೆ ಹಾಕಲಾಗಿದ್ದ ಎಆರ್ ರೆಹಮಾನ್ ಧರಿಸಿದ್ದ ಉಡುಗೆ 6.75 ಲಕ್ಷ ರೂ.ಗೆ ಮಾರಾಟವಾಗಿದೆ. ಪ್ರಮೋದ್ ಸುರಾಡಿಯಾ ಅವರು ಈ ಉಡುಪನ್ನು ಹರಾಜಿನಲ್ಲಿ ಖರೀದಿಸಿದ್ದಾರೆ. ಹರಾಜಿನ ಉದ್ದೇಶಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ಪಂಚರ್ ಹಾಕಿಲ್ಲ ಅಂದ್ರೆ ಗಾಡಿ ಓಡ್ಸೋದಾದ್ರೂ ಹೇಗೆ : ಡಿಕೆಶಿ ಪ್ರಶ್ನೆ

    ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಎ.ಆರ್.ರೆಹಮಾನ್ ಭಾರತೀಯ ಚಿತ್ರ ಸಂಗೀತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದವರು. 2009ರಲ್ಲಿ ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಎರಡೆರಡು ಆಸ್ಕರ್ ಪ್ರಶಸ್ತಿ ಪಡೆದ ಪ್ರತಿಭಾವಂತ ಸಂಗೀತ ಸಂಯೋಜಕರು. ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ಕೊಟ್ಟ ಇವರು ಸಾಮಾಜಿಕ ಕಾರ್ಯಕ್ಕೂ ಮುನ್ನೆಲೆಗೆ ಬಂದಿರುವುದು ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್

  • ಅರ್ಜುನ್ ಜನ್ಯ ಸಹೋದರ ಕೊರೊನಾಗೆ ಬಲಿ

    ಅರ್ಜುನ್ ಜನ್ಯ ಸಹೋದರ ಕೊರೊನಾಗೆ ಬಲಿ

    ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಹೋದರ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ.

    ಕಿರಣ್ (49) ಅವರು ಕೋವಿಡ್ ಸೊಂಕಿಗೆ ತುತ್ತಾಗಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಿರಣ್ ಇಂದು ನಿಧನರಾಗಿರುವ ವಿಚಾರವನ್ನ ಅರ್ಜುನ್ ಜನ್ಯ ತಮ್ಮ ಸೋಶಿಯಲ್ ಮಿಡಿಯಾ ಮೂಲಕ ತಿಳಿಸಿದ್ದಾರೆ.

    ಕೊರೊನಾದಿಂದ ನಾನು ನನ್ನ ಅಣ್ಣನನ್ನು ಕಳೆದುಕೊಂಡಿದ್ದೇನೆ. ನನ್ನ ನೋವನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದು ಗೊತ್ತಾಗುತ್ತಿಲ್ಲ. ನನ್ನ ಉಸಿರು ಇರುವವರೆಗೂ ನೀನೇ ನನ್ನ ಉಸಿರು ಎಮದು ಅರ್ಜುನ್ ಜನ್ಯ ಅವರು ಇನ್ ಸ್ಟಾದಲ್ಲಿ ಸಹೋದರನ ಜೊತೆಗಿರುವ ಫೋಟೋಗೆ ಕಂಬನಿ ಮಿಡಿದಿದ್ದಾರೆ.

    ಹದಿನೈದು ದಿನಗಳ ಹಿಂದೆ ಅರ್ಜುನ್ ಜನ್ಯಗೂ ಕೋವಿಡ್ ಸೋಂಕು ತಗುಲಿತ್ತು. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

     

    View this post on Instagram

     

    A post shared by Arjun Janya (@arjun_janya_musician)