Tag: ಸಂಗೀತಾ ಶೃಂಗೇರಿ

  • Bigg Boss Kannada: ಬ್ಯಾಂಗಲ್ ಕ್ವೀನ್ ಸಂಗೀತಾ ಜರ್ನಿ ಅಷ್ಟು ಸಲೀಸಾಗಿರಲಿಲ್ಲ

    Bigg Boss Kannada: ಬ್ಯಾಂಗಲ್ ಕ್ವೀನ್ ಸಂಗೀತಾ ಜರ್ನಿ ಅಷ್ಟು ಸಲೀಸಾಗಿರಲಿಲ್ಲ

    ಬಿಗ್‌ಬಾಸ್‌ ಕನ್ನಡ 10ನೇ (Bigg Boss Kannada) ಸೀಸನ್‌ ಎರಡನೇ ರನ್ನರ್ ಅಪ್ (Second Runner up) ಆಗಿ ಸಂಗೀತಾ ಶೃಂಗೇರಿ (Sangeeta Sringeri) ಅವರು ಹೊರಹೊಮ್ಮಿದ್ದಾರೆ. ಬಿಗ್‌ಬಾಸ್ ಸೀಸನ್‌ನ ‘ಸಿಂಹಿಣಿ’ ಎಂದೇ ಪ್ರಸಿದ್ಧರಾಗಿದ್ದ ಸಂಗೀತಾ, ತಮ್ಮ ನೇರ ಮಾತು, ದಿಟ್ಟ ನಿಲುವಿನಿಂದ ಜನರ ಮೆಚ್ಚುಗೆ ಗಳಿಸಿದ್ದರು. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್‌ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.

    ಮುಖ್ಯವೇದಿಕೆಯಲ್ಲಿ ನಿಂತಿದ್ದ ಮೂವರು ಸ್ಪರ್ಧಿಗಳ ಮುಖದಲ್ಲಿ ಆತಂಕ ಎದ್ದು ಕಾಣಿಸುತ್ತಿತ್ತು. ಸ್ಪರ್ಧಿಗಳ ಮುಖದಲ್ಲಿಯಷ್ಟೇ ಅಲ್ಲ, ವೇದಿಕೆಯ ಪಕ್ಕ ಕೂತ ಹಿಂದಿನ ಸ್ಪರ್ಧಿಗಳು, ಎದುರಿನಲ್ಲಿನ ಪ್ರೇಕ್ಷರು ಎಲ್ಲರ ಮುಖದಲ್ಲಿಯೂ ಆತಂಕ ಎದ್ದು ಕಾಣಿಸುತ್ತಿತ್ತು. ಫಿನಾಲೆ ವೀಕ್‌ನಲ್ಲಿ ಇದ್ದ ಒಬ್ಬರೇ ಒಬ್ಬರು ಮಹಿಳಾ ಸ್ಪರ್ಧಿ ಸಂಗೀತಾ ಗಟ್ಟಿ ವ್ಯಕ್ತಿತ್ವದಿಂದಲೇ ತನ್ನ ದಾರಿ ನಿರ್ಮಿನಿಸಿಕೊಂಡವರು. ಅವರ ಜರ್ನಿಯ ಏಳುಬೀಳುಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

    ಬಿಗ್‌ಬಾಸ್‌ ಸೀಸನ್‌ 10 ಪ್ರಾರಂಭವಾಗುವುದಕ್ಕೂ ಹಿಂದೆ ಈ ಹೆಸರು ಕೇಳಿದಾಗ ಮನಸಲ್ಲಿ ಎರಡು ಬಗೆಯ ಚಿತ್ರಗಳು ಮೂಡುತ್ತಿತ್ತು. ಒಂದು, ಪೌರಾಣಿಕ ಧಾರಾವಾಹಿಯೊಂದರ ದೇವಿ ಪಾತ್ರದ ಸೌಮ್ಯಮುಖ. ಇನ್ನೊಂದು ‘ಚಾರ್ಲಿ 777’ ಸಿನಿಮಾದ ನಾಯಕಿಯ ಮುಗ್ಧ ಮುಖ. ಮೆಲುವಾಗಿ ಮಾತಾಡುವ, ಮಿತವಾಗಿ ನಗುವ ಈ ಹುಡುಗಿ ಬಿಗ್‌ಬಾಸ್‌ ಮನೆಗೆ ಬಂದಾಗ ಪ್ರೇಕ್ಷಕರ ಹುಬ್ಬುಗಳು ಮೇಲೇರಿದ್ದವು. ಆದರೆ ಬಿಗ್‌ಬಾಸ್‌ ಸೀಸನ್‌ 10 ಮುಗಿದ ಈ ಕ್ಷಣದಲ್ಲಿ ಅದೇ ‘ಸಂಗೀತಾ ಶೃಂಗೇರಿ’ ಎಂಬ ಹೆಸರು ಕೇಳಿದರೆ ಮನಸಲ್ಲಿ ಮೂಡುವ ಚಿತ್ರಗಳು ಒಂದೆರಡಲ್ಲ; ನೂರಾರು! ಅದರಲ್ಲಿಯೂ ಮೇಲೆ ಹೇಳಿದ ಎರಡು ಬಗೆಯ ಚಿತ್ರಗಳಂತೂ ಕಾಣಿಸುವುದೇ ಇಲ್ಲ. ಅಸಮರ್ಥೆಯಾಗಿ ಚಿಂತಿತ ಮುಖದಲ್ಲಿ ಕೂತಿದ್ದ ಹುಡುಗಿ ಆತ್ಮವಿಶ್ವಾಸದ ಗಟ್ಟಿ ವ್ಯಕ್ತಿತ್ವದ ಹುಡುಗಿ, ಕೋಪದಲ್ಲಿ ಕಿಡಿಕಾರುತ್ತ ನಿಂತಿರುವ ಹುಡುಗಿ, ದುಃಖದಲ್ಲಿ ಒಬ್ಬಂಟಿಯಾಗಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಿರುವ ಹುಡುಗಿ, ಆಟದಲ್ಲಿ ಜೀವಕೊಟ್ಟು ಆಡುವ ಜಿದ್ದಿನ ಹುಡುಗಿ, ಮುಖದ ಎದುರೇ ಮಾತಾಡಿ ಜಗಳಕ್ಕೆ ನಿಲ್ಲುವ ಜಗಳಗಂಟಿ ಹುಡುಗಿ, ಸ್ನೇಹದ ಹೆಗಲಿಗೆ ಒರಗುವ ಮುಗುಳುನಗೆಯ ಹುಡುಗಿ, ತಂತ್ರಗಾರಿಕೆಯ ಜಾಣ ಹುಡುಗಿ, ತನ್ನ ಸ್ನೇಹಿತರಿಂದಾದ ಸಣ್ಣ ನೋವನ್ನೂ ಸಹಿಸಿಕೊಳ್ಳದ ಹಟಮಾರಿ ಹುಡುಗಿ… ಟಿಕೆಟ್‌ ಟು ಫಿನಾಲೆ ವಾರದಲ್ಲಿ ಗೆದ್ದು ಮೊದಲು ಫಿನಾಲೆ ವಾರಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿ ಅಬ್ಬಾ! ನೂರು ದಿನಗಳನ್ನು ದಾಟಿದ ಈ ಬಿಗ್‌ಬಾಸ್‌ ಮನೆಯಲ್ಲಿ ನೂರಾರು ನೆನಪುಗಳ ಚಿತ್ರವನ್ನು ಮೂಡಿಸಿದ ಹುಡುಗಿ ಈ ಸಂಗೀತಾ ಶೃಂಗೇರಿ.

    ಸಂಗೀತಾ ಅವರ ಬಿಗ್‌ಬಾಸ್‌ ಜರ್ನಿಯನ್ನು ಕೆಲವೇ ಸಾಲುಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ. ಅಷ್ಟೊಂದು ಏರಿಳಿತಗಳು, ಅಷ್ಟೊಂದು ತಿರುವುಗಳು, ಅಷ್ಟೊಂದು ಅಚ್ಚರಿಗಳು ಅವರ ಈ ಪ್ರಯಾಣದಲ್ಲಿ ತುಂಬಿಕೊಂಡಿವೆ. ಹಲವು ಸಲ ಅವರು ಈ ಪ್ರಯಾಣವನ್ನು ಮೊಟಕುಗೊಳಿಸಿ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಹೇಳಿದ್ದರು. ಒಮ್ಮೆಯಂತೂ ಅವರಿಗಾದ ಗಾಯದಿಂದಾಗಿ ಅನಿವಾರ್ಯವಾಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಿ ಆಸ್ಪತ್ರೆಗೆ ದಾಖಲಾಗಬೇಕಾಯ್ತು. ಆದರೆ ಇಂದು ಅವನ್ನೆಲ್ಲ ನೆನಪಿಸಿಕೊಂಡರೆ ಸಂಗೀತಾ, ‘ನಾನೆಂಥ ಅನುಭವವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ’ ಎಂದು ಉದ್ಘರಿಸಿದ್ದಾರೆ. ‘ಕೋಟಿ ಕೊಟ್ಟರೂ ನಾನು ಬಿಗ್‌ಬಾಸ್‌ಗೆ ಹೋಗಲ್ಲ’ ಎಂದು ಹಿಂದೊಮ್ಮೆ ಹೇಳಿದ್ದ ಸಂಗೀತಾ, ಈಗ ಕೋಟಿ ಕೊಟ್ಟರೂ ಸಿಗದ ಅನುಭವದ ಮೂಟೆಯನ್ನು ಹೊತ್ತುಕೊಂಡು ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಅವರ ಜರ್ನಿಯ ಕೆಲವು ಮುಖ್ಯ ಸಂಗತಿಗಳನ್ನು ಕಟ್ಟಿಕೊಡುವ ಪ್ರಯತ್ನ.

    ಅಸಮರ್ಥಳಾಗಿ ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟ ಸಂಗೀತಾ ಮೊದಲ ವಾರದಲ್ಲಿಯೇ ಸಾಕಷ್ಟು ವಿರೋಧ ಎದುಸಿರಬೇಕಾಯ್ತು. ಮನೆಯ ನಿಯಮವನ್ನು ಉಲ್ಲಂಘನೆ ಮಾಡಿ ಸೋಪಾದ ಮೇಲೆ ಕೂತಿದ್ದು ವಿನಯ್ ಅವರ ಜೊತೆಗೆ ಘರ್ಷಣೆಗೆ ಮೂಲವಾಯ್ತು. ಇದೇ ವಿಷಯ ವಾರದ ಕೊನೆಯ ಎಲಿಮಿನೇಷನ್‌ನಲ್ಲಿಯೂ ಪ್ರತಿಧ್ವನಿಸಿತು. ಅದೇ ವಾರದಲ್ಲಿ ಸಂಗೀತಾ ಅವರಿಗೆ ಸಗಣಿನೀರಿಸ ಸ್ನಾನವೂ ಆಯಿತು. ಆ ಘಟನೆ ಅವರನ್ನು ಕುಗ್ಗಿಸಲಿಲ್ಲ. ಬದಲಿಗೆ ಸಿಡಿದು ಪುಟಿದೇಳುವಂತೆ ಮಾಡಿತು. ಅಲ್ಲಿಂದ ಮುಂದೆ ಸಂಗೀತಾ ಹಿಂತಿರುಗಿ ನೋಡಿದ್ದೇ ಇಲ್ಲ. ಮೊದಲ ದಿನ ಸಂಗೀತಾ ಕಿಚ್ಚನ ಜೊತೆ ವೇದಿಕೆ ಹಂಚಿಕೊಂಡಾಗ, ‘ನಾನು ತುಂಬ ಕಾಮ್ ಕೂಲ್ಕ ಹುಡುಗಿಯ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದೀನಿ. ಆದರೆ ನಾನೆಷ್ಟು ಬೋಲ್ಡ್ ಅನ್ನುವುದನ್ನು ಜನರು ಬಿಗ್‌ಬಾಸ್ ಮನೆಯಲ್ಲಿ ನೋಡುತ್ತಾರೆ’ ಎಂದು ಹೇಳಿಕೊಂಡಿದ್ದರು. ಅದನ್ನು ಅಕ್ಷರಶಃ ಸಾಧಿಸಿದ್ದಾರೆ ಸಂಗೀತಾ. ಹಾಗಾಗಿ ಸಗಣಿನೀರಿನಲ್ಲಿ ಸ್ನಾನ ಮಾಡಿದ್ದು ಅವರ ಬಿಗ್‌ಬಾಸ್ ಜರ್ನಿಗೆ ಒಳ್ಳೆಯ ಆರಂಭವನ್ನೇ ಒದಗಿಸಿತು ಎನ್ನಬಹುದು.

    ಪ್ರತಿ ಶುಕ್ರವಾರ ಬರುತ್ತಿದ್ದ ಫನ್‌ಪ್ರೈಡೆ ಟಾಸ್ಕ್‌ಗಳಲ್ಲಿ ಸಂಗೀತಾ ಹಲವು ಬಾರಿ ಮಿಂಚಿದ್ದಾರೆ. ಅದರಲ್ಲಿಯೂ ‘ಚಂಡ ಮಾರುತ’ ಟಾಸ್ಕ್‌ನಲ್ಲಿ ಸಂಗೀತಾ ಮತ್ತು ಕಾರ್ತಿಕ್ ಸೇರಿ ಗೆಲುವಿನ ನಗೆ ಬೀರಿದ್ದೊಂದು ಗಮನಾರ್ಹ ಗಳಿಗೆ. ಅಂತಿಮ ಘಟ್ಟದಲ್ಲಿ ವಿನಯ್ ಮತ್ತು ತುಕಾಲಿ ಸಂತೋಷ್ ಅವರು ಎದುರಾದಾಗ, ಸಂಗೀತಾ, ಕಾರ್ತಿಕ್ ಜೊತೆಗೂಡಿ ತುಂಬ ಚೆನ್ನಾಗಿ ಆಡಿ ಗೆಲುವು ದಾಖಲಿಸಿದ್ದರು. ಸಂಗೀತಾ- ಕಾರ್ತೀಕ್ ಜೊತೆಗೂಡಿ ಗೆಲುವು ದಾಖಲಿಸಿದ ಮತ್ತೊಂದು ಫನ್‌ಫ್ರೈಡೆ ಟಾಸ್ಕ್‌ ‘ಬ್ರೇಕ್‌ ದ ಬಲೂನ್‌’ ಈ ಸಲ ಅವರಿಗೆ ಎದುರಾಗಿದ್ದು ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್‌ ಜೋಡಿ. ಅವರನ್ನು ಯಶಸ್ವಿಯಾಗಿ ಹಿಂದಿಕ್ಕಿದ ಸಂಗೀತಾ ಜೋಡಿ ಟಾಸ್ಕ್‌ನಲ್ಲಿ ಗೆಲುವು ದಾಖಲಿಸಿತ್ತು.

    ಎರಡನೇ ವಾರದಲ್ಲಿ ಸಂಗೀತಾ ಇದ್ದ ರಣಶಕ್ತಿ ತಂಡ, ವಿನಯ್ ಅವರಿದ್ದ ಮಾಣಿಕ್ಯ ತಂಡದ ವಿರುದ್ಧ ಸೋತಿತ್ತು. ಆ ಸಮಯದಲ್ಲಿ ವಿನಯ್ ಮತ್ತು ಸಂಗೀತಾ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ಬಿರುಕು ಹಲವು ವಾರಗಳ ಕಾಲ ಉರಿಯುತ್ತಲೇ ಹೋಗಿತ್ತು.

  • Bigg Boss: 5 ಫೈನಲಿಸ್ಟ್‌ಗಳ ನಡುವೆ ಟಫ್ ಫೈಟ್- ಯಾರಿಗೆ ಸಿಗಲಿದೆ ಗೆಲುವು?

    Bigg Boss: 5 ಫೈನಲಿಸ್ಟ್‌ಗಳ ನಡುವೆ ಟಫ್ ಫೈಟ್- ಯಾರಿಗೆ ಸಿಗಲಿದೆ ಗೆಲುವು?

    ಅಂತೂ ಇಂತೂ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ (Bigg Boss Kannada 10) ತೆರೆ ಬೀಳುವ ಸಮಯ ಬಂದಿದೆ. ದೊಡ್ಮನೆಯ ವಿನ್ನರ್ ಯಾರಾಗಬಹುದು ಎಂದು ಕನ್ನಡಿಗರು ಎದುರು ನೋಡ್ತಿದ್ದಾರೆ. ಅದಕ್ಕೆ ಉತ್ತರ, ಇಂದು (ಜ.28) ರಾತ್ರಿ ಬಿಗ್ ಬಾಸ್ ಫಿನಾಲೆ ಎಪಿಸೋಡ್‌ನಲ್ಲಿ ಸಿಗಲಿದೆ. ತುಕಾಲಿ ಸಂತು ನಂತರ ಇನ್ನೂಳಿದ 5 ಫೈನಲಿಸ್ಟ್‌ಗಳ ನಡುವೆ ಗೆಲುವಿಗಾಗಿ ಟಫ್ ಫೈಟ್ ಶುರುವಾಗಿದೆ.

    ಈ ಬಾರಿ 6 ಜನ ಸ್ಪರ್ಧಿಗಳು ಫೈನಲಿಸ್ಟ್‌ಗಳಾಗಿ ಫಿನಾಲೆಗೆ ಎಂಟ್ರಿ ಪಡೆದುಕೊಂಡಿದ್ದರು. ಇದು ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದ ಉಡುಗೊರೆಯಾಗಿತ್ತು. ನಿನ್ನೆ ಎಪಿಸೋಡ್‌ನಲ್ಲಿ (ಜ.27) 6ನೇ ರನ್ನರ್ ಅಪ್ ಆಗಿ ತುಕಾಲಿ ಸಂತೋಷ್ ಹೊರಬಂದಿದ್ದಾರೆ. ಇದನ್ನೂ ಓದಿ:ಇಂದು ಹಾಸ್ಯನಟ ನಾಗಭೂಷಣ್ ಮದುವೆ

    ಸದ್ಯ ಫಿನಾಲೆ ಹಣಾಹಣಿಯಲ್ಲಿ ಕಾರ್ತಿಕ್ ಮಹೇಶ್ (Karthik Mahesh), ಸಂಗೀತಾ (Sangeetha), ಡ್ರೋನ್ ಪ್ರತಾಪ್, ವಿನಯ್, ವರ್ತೂರು ಸಂತೋಷ್ ಇದ್ದಾರೆ. ಈ 5 ಸ್ಪರ್ಧಿಗಳಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.‌ ಇದನ್ನೂ ಓದಿ:ಹನುಮಾನ್ ಶಕ್ತಿಗೆ ಬಾಕ್ಸ್ ಆಫೀಸ್ ಉಡೀಸ್: 14 ದಿನಕ್ಕೆ 250 ಕೋಟಿ ಲೆಕ್ಕ

    5 ಜನ ಸ್ಪರ್ಧಿಗಳು ಸ್ಟ್ರಾಂಗ್ ಇದ್ದಾರೆ. ಮೈಂಡ್ ಗೇಮ್, ಜನ ಬಲ, ಟಾಸ್ಕ್ ಅಂತ ಬಂದಾಗ ಠಕ್ಕರ್ ಕೊಡುವ ಗುಣ ಎಲ್ಲವೂ ಇದೆ. ಹೀಗಿರುವಾಗ ಯಾರಿಗೆ ಗೆಲುವಿನ ಲಕ್ಷ್ಮಿ ಒಲಿಯುತ್ತಾಳೆ ಎಂಬುದು ಅಭಿಮಾನಿಗಳ ಯಕ್ಷ ಪ್ರಶ್ನೆಯಾಗಿದೆ.

    ಈ ಸೀಸನ್‌ನಲ್ಲಿರೋ ಎಕೈಕ ಮಹಿಳಾ ಸ್ಪರ್ಧಿ ಎಂದರೆ ಅದು ಸಂಗೀತಾ ಶೃಂಗೇರಿ. ಮೊದಲ ದಿನದಿಂದಲೂ ಟಫ್ ಫೈಟ್ ನೀಡುತ್ತಲೇ ಬಂದಿದ್ದಾರೆ. ವಿನಯ್, ಕಾರ್ತಿಕ್ ಏನು ಕಮ್ಮಿಯಿಲ್ಲ. ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬರುವ ಸ್ಪರ್ಧಿಗಳು. ವರ್ತೂರು ಸಂತೋಷ್, ಪ್ರತಾಪ್ ಸೈಲೆಂಟ್ ಆಗಿದ್ರು ಕೂಡ ಸಮಯ ಬಂದಾಗ ವೈಲೆಂಟ್ ಆಗಿ ಆಟ ಆಡಿದ್ದು ಇದೆ. ಹಾಗಾಗಿ ವಿನ್ನರ್ ಘೋಷಣೆಗೆ ಬಿಗ್ ಬಾಸ್ ಫಿನಾಲೆ ಎಪಿಸೋಡ್ ಪ್ರಸಾರ ಆಗುವವರೆಗೂ ಕಾಯಬೇಕಿದೆ.

  • Bigg Boss Kannada 10: ಫಿನಾಲೆಗೆ ಕೌಂಟ್‌ಡೌನ್, ಯಾರಾಗ್ತಾರೆ ‘ಬಿಗ್ ಬಾಸ್’ ವಿನ್ನರ್?

    Bigg Boss Kannada 10: ಫಿನಾಲೆಗೆ ಕೌಂಟ್‌ಡೌನ್, ಯಾರಾಗ್ತಾರೆ ‘ಬಿಗ್ ಬಾಸ್’ ವಿನ್ನರ್?

    ‘ಬಿಗ್ ಬಾಸ್ ಸೀಸನ್ 10′ (Bigg Boss Kannada 10) ರಿಯಾಲಿಟಿ ಶೋ ಮುಗಿಯಲು ದಿನಗಣನೆ ಶುರುವಾಗಿದೆ. ಸ್ಪರ್ಧಿಗಳೆಲ್ಲರೂ ಎಲಿಮಿನೇಟ್ ಆಗಿ ಈಗ 6 ಸ್ಪರ್ಧಿಗಳು ಫಿನಾಲೆ ವೇದಿಕೆಗೆ ತಲುಪಿದ್ದಾರೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

    ಫಿನಾಲೆ ದಿನ ಅಂತಿಮವಾಗಿ ಇಬ್ಬರು ಸ್ಪರ್ಧಿಗಳು ಸುದೀಪ್ ಜೊತೆ ಇರಲಿದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ. ಇದೀಗ ಅಂತಿಮವಾಗಿ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ (Drone Prathap), ವಿನಯ್, ಕಾರ್ತಿಕ್, ತುಕಾಲಿ ಸಂತೂ, ವರ್ತೂರು ಸಂತೋಷ್ (Varthur Santhosh) ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ.

    ಇದರ ಮಧ್ಯೆ ಒಬ್ಬರ ಎಲಿಮಿನೇಷನ್ ಈ ವಾರದ ಮಧ್ಯೆ ನಡೆಯಲಿದೆ ಎಂದು ಹೇಳಲಾಗಿತ್ತು. ಅದು ಫಿನಾಲೆ ದಿನವೇ ತಿಳಿಯಲಿದೆ ಎನ್ನಲಾಗುತ್ತಿದೆ. ಸದ್ಯ ಉಳಿದುಕೊಂಡಿರುವ 6 ಜನ ಸ್ಪರ್ಧಿಗಳಲ್ಲಿ ಸಖತ್ ಪೈಪೋಟಿ ಇದೆ. ಇದನ್ನೂ ಓದಿ:ಸ್ನೇಹಿತ್ ಜೊತೆ ಫ್ರೆಂಡ್‌ಶಿಪ್ ಕಂಟಿನ್ಯೂ ಮಾಡ್ತಾರಾ? ನಮ್ರತಾ ಸ್ಪಷ್ಟನೆ

    ಈ ಹಿಂದಿನ ಸೀಸನ್‌ನಲ್ಲಿ ಹಿರಿಯ ನಟಿ ಶೃತಿ ವಿನ್ನರ್ ಆಗಿದ್ದರು. ಈ ಸೀಸನ್‌ನಲ್ಲಿ ಮಹಿಳಾ ಸ್ಪರ್ಧಿ ಸಂಗೀತಾ ಶೃಂಗೇರಿ (Sangeetha Sringeri) ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಅವರೇ ವಿನ್ನರ್ ಆಗುವ ಸಾಧ್ಯತೆಯಿದೆ ಎಂದು ಅಭಿಮಾನಿಗಳು ಲೆಕ್ಕಾಚಾರವಾಗಿದೆ. ಉಳಿದುಕೊಂಡಿರುವ ಪ್ರತಿ ಸ್ಪರ್ಧಿಗಳು ಕೂಡ ಟಫ್ ಫೈಟ್ ಕೊಡುತ್ತಿದ್ದಾರೆ.

    ಬಿಗ್ ಬಾಸ್ ಕನ್ನಡ 10 ಫಿನಾಲೆ ಇದೇ ಜನವರಿ 27, 28ರಂದು ನಡೆಯಲಿದೆ. ಅಂದು ಬಿಗ್ ಬಾಸ್ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

  • ಇಂಟರ್‌ನೆಟ್‌ನಲ್ಲಿ ಸಂಗೀತಾ ಟ್ರೆಂಡಿಂಗ್- ರೂಪೇಶ್ ಶೆಟ್ಟಿ ದಾಖಲೆ ಉಡೀಸ್

    ಇಂಟರ್‌ನೆಟ್‌ನಲ್ಲಿ ಸಂಗೀತಾ ಟ್ರೆಂಡಿಂಗ್- ರೂಪೇಶ್ ಶೆಟ್ಟಿ ದಾಖಲೆ ಉಡೀಸ್

    ಸಂಗೀತಾ ಶೃಂಗೇರಿ (Sangeetha Sringeri) ಅವರು ಈ ಹೆಸರು ಕೇಳಿದರೆ ಸಾಕು ಬಿಗ್‌ ಬಾಸ್ (Bigg Boss Kannada 10) ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಾರೆ. ಮಾಡಿದ್ದೆ ಕೆಲವೇ ಸಿನಿಮಾ. ಆದರೆ ಬಿಗ್ ಬಾಸ್‌ಗೆ ಈ ಹುಡುಗಿ ಬಂದ ಮೇಲೆ ಮಾಡಿದ ಮೋಡಿ ಇದೆಯಲ್ಲ. ಅದನ್ನ ಮಾತ್ರ ಯಾರೂ ತಡೆಯಲು ಸಾಧ್ಯ ಇಲ್ಲ. ಹಾಗಿದ್ದರೆ ಸಂಗೀತಾಗೆ ಎಷ್ಟು ಲಕ್ಷ ಜನರು ಮೆಚ್ಚಿಕೊಂಡಿದ್ದಾರೆ? ಯಾಕೆ ಇದೇ ಹುಡುಗಿಯನ್ನು ಕರುನಾಡು ಆಯ್ಕೆ ಮಾಡಿಕೊಂಡಿದೆ? ಏನಿದರ ಹಿಂದಿನ ರಹಸ್ಯ? ಇಲ್ಲಿದೆ ಮಾಹಿತಿ.

    ಇನ್ನೇನು ಬಿಗ್‌ ಬಾಸ್ ಕಾರ್ಯಕ್ರಮ ಮುಗಿಯುತ್ತಿದೆ. ಕೆಲವೇ ದಿನಗಳಲ್ಲಿ ಅಂತಿಮ ಪರದೆ ಬೀಳಲಿದೆ. ಈ ಹೊತ್ತಲ್ಲಿ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಒಂದೇ. ಯಾರು ವಿನ್ನರ್? ಉತ್ತರಕ್ಕಾಗಿ ಇನ್ನು ಕೆಲವು ದಿನ ಕಾಯಬೇಕು. ಈ ಸಮಯದಲ್ಲಿಯೇ ಸಂಗೀತಾ ಹೆಸರು ಕೇಳಿ ಬರುತ್ತಿದೆ. ಮಾಡಿದ್ದು ಕೆಲವೇ ಸಿನಿಮಾ. ಅದರಲ್ಲೂ ‘777 ಚಾರ್ಲಿ’ ಸಿನಿಮಾ ಮಾಡಿದ ಮೇಲೆ ಇವರಿಗೆ ಹೆಸರು ಬಂತು. ಈಗ ಬಿಗ್ ಬಾಸ್‌ನಲ್ಲಿ ವಿನ್ನರ್ ಆಗುವ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾಗೆ ಠಕ್ಕರ್- ತೆಲುಗಿನಲ್ಲಿ ರುಕ್ಮಿಣಿ ವಸಂತ್‌ಗೆ ಬಂಪರ್ ಆಫರ್

    ಯಾರು ಏನೇ ಹೇಳಲಿ, ಸಂಗೀತಾ (Sangeetha Sringeri) ಮಾತ್ರ ಬಿಗ್ ಬಾಸ್‌ನನಲ್ಲಿ ಅದ್ಭುತ ಆಟ ಆಡಿದ್ದಾರೆ. ಎಲ್ಲರನ್ನೂ ಹಿಂದಿಕ್ಕಿ ಕೆಲಸ ಮಾಡಿದ್ದಾರೆ. ನಾನುಂಟು ನನ್ನ ಲೋಕ ಉಂಟು ಎನ್ನುವಂತೆ ಬದುಕಿದ್ದಾರೆ. ಕೆಲವರಿಗೆ ಇವರ ವರ್ತನೆ ಇಷ್ಟ ಆಗಿಲ್ಲ. ಆದರೆ ಎಷ್ಟು ದಿನ ಇವರನ್ನು ಅವಾಯ್ಡ್ ಮಾಡುತ್ತಾರೆ. ಅದು ಸಾಧ್ಯ ಇಲ್ಲ. ಹೀಗಾಗಿಯೇ ಈಗ ಬಿಗ್ ಬಾಸ್‌ನಲ್ಲಿ ಸಂಗೀತಾ ಹವಾ ಎದ್ದಿದೆ. ಲಕ್ಷ ಲಕ್ಷ ಬೆಂಬಲವನ್ನ ಸೋಷಿಯಲ್ ಮೀಡಿಯಾದಲ್ಲಿ ಪಡೆದಿದ್ದಾರೆ.

    ಬಿಗ್‌ ಬಾಸ್ ಫೈನಲ್ ತಲುಪುವ ಹೊತ್ತಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಒಂದು ಶುರುವಾಗುತ್ತೆ. ಕಳೆದ ಸೀಸನ್‌ನಲ್ಲಿ ರೂಪೇಶ್ ಶೆಟ್ಟಿ ಈ ಟ್ರೆಂಡ್‌ಗೆ ಸಾಕ್ಷಿಯಾಗಿದ್ದರು. ಈಗ ಸಂಗೀತ ಶೃಂಗೇರಿ ಸೇರಿಕೊಂಡಿದ್ದಾರೆ. ರೂಪೇಶ್ ಶೆಟ್ಟಿ (Roopesh Shetty) ಮಾಡಿರೋ ಹಳೆಯ ದಾಖಲೆಯನ್ನು ನಟಿ ಬ್ರೇಕ್ ಮಾಡಿದ್ದಾರೆ. ವಿಜಯಿಭವ ಸಂಗೀತ ಎನ್ನುವ ಹೆಸರಿನಲ್ಲಿ ಹ್ಯಾಷ್‌ಟ್ಯಾಗ್ ಜೊತೆಗೆ ಶೇರ್ ಮಾಡಲಾಗಿದೆ. ಈ ಹ್ಯಾಷ್‌ಟ್ಯಾಗ್ ವಿಜಯಿಭವ ಸಂಗೀತ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷ ಲಕ್ಷ ನಂಬರ್ಸ್ ತಲುಪಿದೆ.

    ಸೋಷಿಯಲ್ ಮೀಡಿಯಾದಲ್ಲಿ ಭಾರತದ 5ನೇ ಟ್ರೆಂಡಿಂಗ್ ಕಂಟೆಂಟ್ ಜಾಗಕ್ಕೆ ತಲುಪಿದೆ. ಸುಮಾರು 7 ಲಕ್ಷಕ್ಕೂ ಹೆಚ್ಚಿನ ಜನ ಟ್ವಿಟರ್‌ನಲ್ಲಿ ವಿಜಯಿಭವ ಸಂಗೀತ ಎನ್ನುವ ಹ್ಯಾಷ್‌ಟ್ಯಾಗ್ ಶೇರ್ ಮಾಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ವಿನಯ್ (Vinay Gowda) ಹೆಸರಿನಲ್ಲಿ ಕೂಡ ಹ್ಯಾಷ್‌ಟ್ಯಾಗ್ ಬಳಸಿ ಟ್ರೆಂಡ್ ಮಾಡಲಾಯ್ತು. ವಿನಯ್ ಹೆಸರಿನಲ್ಲಿ ಇದ್ದ ದಾಖಲೆ ಮುರಿದು ಸಂಗೀತ ಫ್ಯಾನ್ಸ್ ಹೊಸ ದಾಖಲೆ ಬರೆದಿದ್ದಾರೆ. ಫಿನಾಲೆ ಟೈಮ್‌ನಲ್ಲಿ ಈ ಹ್ಯಾಷ್‌ಟ್ಯಾಗ್ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

    ಬಿಗ್ ಬಾಸ್ (Bigg Boss) ಇನ್ನೇನು ಮುಗಿಯಲು ಬರುತ್ತಿದೆ. ಸಂಗೀತಾಗೆ ಹೆಚ್ಚು ಹೆಚ್ಚು ಜನರ ಸಪೋರ್ಟ್ ಸಿಗುತ್ತಿದೆ. ಈ ನಂಬರ್ಸ್‌ ಇವರೇನಾ ವಿನ್ನರ್ ಎನ್ನುವ ಪ್ರಶ್ನೆ ಹುಟ್ಟುಹಾಕ್ತಿದೆ. ಆದರೆ ಇವರ ನಡುವೆ ಉಳಿದ ಸದಸ್ಯರು ಕೂಡ ಸ್ಪರ್ಧೆಗೆ ಸೆಡ್ಡು ಹೊಡೆಯುತ್ತಿದ್ದಾರೆ. ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎನ್ನುವುದು ಕೊನೇ ಹಂತ. ಎಲ್ಲದರ ನಡುವೆ ಸಂಗೀತಾ ಮಾತ್ರ ಬಾವುಟ ಹಾರಿಸಲು ಸಜ್ಜಾಗಿದ್ದಾರೆ. ಸಂಗೀತಾ ವಿನ್ನರ್ ಆಗುತ್ತಾರೆ? ಇಲ್ಲವಾ? ಉತ್ತರ ಕೆಲವೇ ದಿನಗಳಲ್ಲಿ ಸಿಗಲಿದೆ.

  • ನಿಮ್ಮ ಲೈಫ್‌ಗೆ ನಾನೇ ಶನಿ ಆಗ್ತೀನಿ- ಗುಡುಗಿದ ಸಂಗೀತಾ

    ನಿಮ್ಮ ಲೈಫ್‌ಗೆ ನಾನೇ ಶನಿ ಆಗ್ತೀನಿ- ಗುಡುಗಿದ ಸಂಗೀತಾ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರೇಮಿಗಳಾಗಿದ್ದ ಸಂಗೀತಾ ಮತ್ತು ಕಾರ್ತಿಕ್ ಬದ್ಧ ವೈರಿಗಳಾಗಿದ್ದಾರೆ. ಸಾಕಷ್ಟು ಬಾರಿ ಕಾರ್ತಿಕ್ ನನ್ನ ಸ್ನೇಹ ಬಳಸಿಕೊಂಡರು ಎಂದು ಸಂಗೀತಾ ಆರೋಪಿಸಿದ್ದರು. ಈಗ ಕಾರ್ತಿಕ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಿಮ್ಮ ಲೈಫ್‌ಗೆ ನಾನೇ ಶನಿ ಆಗ್ತೀನಿ ಎಂದು ಕಾರ್ತಿಕ್‌ಗೆ ನೇರವಾಗಿ ಸಂಗೀತಾ (Sangeetha Sringeri) ಮಾತನಾಡಿದ್ದಾರೆ.

    ದೊಡ್ಮನೆ ಆಟ ಮುಗಿಯಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಇದರ ನಡುವೆ ‘ಬಿಗ್ ಬಾಸ್’ ಮನೆಮಂದಿಗೆ ಪ್ರಕ್ರಿಯೆಯೊಂದನ್ನು ಮಾಡಿಸಿದ್ದಾರೆ. ಸ್ಪರ್ಧಿಗಳು ಫೋಟೋ ಹಾಕಿ ಬಾಕ್ಸಿಂಗ್ ಮಾಡೋದು. ತಮ್ಮ ಅನಿಸಿಕೆಗಳನ್ನು ಹೇಳಿ ಸ್ಪರ್ಧಿಗಳ ಫೋಟೋಗೆ ಪಂಚ್ ಕೊಡುವ ಅವಕಾಶ ‘ಬಿಗ್ ಬಾಸ್’ ನೀಡಿದ್ದಾರೆ. ಇದನ್ನೂ ಓದಿ:‘ಲವ್ ರೀಸೆಟ್’ ಅಂತಿದ್ದಾರೆ ನಟಿ ಸಂಜನಾ ಬುರ್ಲಿ

    ಇನ್ನೂ ಈ ಹಿಂದೆ ಸಂಗೀತಾರನ್ನು ಶನಿ ಎಂದು ಕರೆದು ಕಾರ್ತಿಕ್ ನೇರವಾಗಿ ಸಂಗೀತಾ ಕೆಂಗಣ್ಣಿಗೆ ಗುರಿಯಾಗಿದ್ದರು. ಇದನ್ನು ಕೇಳಿ ಸಂಗೀತಾ ಸಿಟ್ಟಾಗಿದ್ದರು. ಈಗ ಅವರು ಕಾರ್ತಿಕ್ ಮೇಲಿರುವ ಕೋಪವನ್ನು ತೀರಿಸಿಕೊಂಡಿದ್ದಾರೆ. ಬಾಕ್ಸಿಂಗ್ ಗ್ಲೌಸ್ ಹಾಕಿ ಸ್ಪರ್ಧಿಗಳ ಭಾವಚಿತ್ರಕ್ಕೆ ಗುದ್ದೋಕೆ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾರೆ. ಆಗ ಸಂಗೀತಾ ಅವರು ಕಾರ್ತಿಕ್ ಬಗ್ಗೆ ಇರೋ ಕೋಪ ತೀರಿಸಿಕೊಂಡರು. ಕಾರ್ತಿಕ್ ಎಲ್ಲರನ್ನೂ ಬಳಸಿಕೊಳ್ಳುತ್ತಾರೆ ಎಂಬ ಆರೋಪವನ್ನು ಮಾಡಿದರು. ಜೊತೆಗೆ ನಾನು ನಿಮ್ಮ ಬಾಳಲ್ಲಿ ಶನಿ ಆಗಿದ್ದೀನಿ, ಮುಂದೆಯೂ ಆಗಿರುತ್ತೇನೆ ಎಂದು ತಿರುಗೇಟು ನೀಡಿದ್ದರು.

    ಮುಂದಿನ ಸರದಿ ಕಾರ್ತಿಕ್‌ಗೆ (Karthik Mahesh) ಕೂಡ ಬಂದಿದೆ. ಆಗ ಸಂಗೀತಾ ಫೋಟೋ ಹಾಕಿ ಬಾಕ್ಸಿಂಗ್ ಮಾಡಿದ್ದಾರೆ. ಸಂಗೀತಾ ಮೇಡಂ ಇಲ್ಲಿಗೆ ನಾನು ಫ್ರೆಂಡ್‌ಶಿಪ್ ಮಾಡುವುದಕ್ಕೆ ಬಂದಿಲ್ಲ. ಟ್ರೋಫಿ ಗೆದ್ದು ತೆಗೆದುಕೊಂಡು ಹೋಗುವುದಕ್ಕೆ ಬಂದಿರುವುದು ಅಂತ ಹೇಳಿ ಸಂಗೀತಾ ಫೋಟೋಗೆ ಅಷ್ಟೇ ಆಕ್ರೋಶದಿಂದ ಗುದ್ದಿದ್ದಾರೆ.

  • ನಮ್ರತಾ ‘ಬಿಗ್ ಬಾಸ್’ ಜರ್ನಿ ಬಲು ರೋಚಕ

    ನಮ್ರತಾ ‘ಬಿಗ್ ಬಾಸ್’ ಜರ್ನಿ ಬಲು ರೋಚಕ

    ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ನಮ್ರತಾ ಗೌಡ (Namrata), ಬಿಗ್‌ ಬಾಸ್‌ (Bigg Boss Kannada) ವೇದಿಕೆಗೆ ಕಾಲಿಟ್ಟಿದ್ದು ‘ಡೊಂಟ್ ಯು ನೋ… ಐ ಆಮ್ ವೆರಿ ಸೆಕ್ಸಿ’ ಎಂದು ಹಾಡುತ್ತ… ಸೌಂದರ್ಯ, ಆತ್ಮವಿಶ್ವಾಸ ಮತ್ತು ಸ್ಪಷ್ಟತೆಯ ಹದವಾದ ಮಿಶ್ರಣದಂತೆ ಕಾಣಿಸಿದ್ದ ನಮ್ರತಾ ಅವರಿಗೆ ಪ್ರೀಮಿಯರ್ ವೇದಿಕೆಯಲ್ಲಿ ಶೇಕಡಾ ಮತಗಳು ಬಂದಿದ್ದವು. ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಅವರು ಬಿಗ್‌ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದರು. ‘ಹ್ಯಾಪಿ ಬಿಗ್‌ಬಾಸ್‌’ ಎಂಬ ಟ್ಯಾಗ್‌ಲೈನ್‌ ಅನ್ನು ತಮ್ಮ ವ್ಯಕ್ತಿತ್ವಕ್ಕೂ ನೇತುಹಾಕಿಕೊಂಡಂತಿದ್ದ ನಮ್ರತಾ ಅವರು ಸದಾ ನಗುನಗುತ್ತಲೇ ಎಲ್ಲರ ಗಮನ ಸೆಳೆದಿದ್ದರು.

    ಬಿಗ್‌ಬಾಸ್ ಮನೆಯೊಳಗೆ ದಿನಗಳನ್ನು ಕಳೆಯಲಾರಂಭಿಸಿದಂತೆ, ವಿನಯ್, ತುಕಾಲಿ ಸಂತೋಷ್, ಇಶಾನಿ, ಮೈಕಲ್, ಸ್ನೇಹಿತ್‌, ಗೌರಿಶ್ ಮತ್ತು ಸಿರಿ ಅವರ ಜೊತೆಗೆ ಆಪ್ತರಾಗಿದ್ದರು. ‘ಶಾಡೋ’, ‘ಚಮಚ’ ‘ಇನ್‌ಪ್ಲ್ಯೂಯೆನ್ಸ್‌ ಆಗುವವರು’ ಪದೇ ಪದೇ ಇಂಥ ಮಾತುಗಳನ್ನು ಕೇಳುತ್ತಲೇ ಬಂದ ನಮ್ರತಾ, ಬಿಗ್‌ಬಾಸ್‌ ಮನೆಯಲ್ಲಿ ಹದಿನೈದು ವಾರಗಳನ್ನು ಉಳಿದುಕೊಂಡಿರುವುದೇ ಈ ಎಲ್ಲವಕ್ಕೂ ಉತ್ತರದಂತಿತ್ತು.

    ಈ ಸೀಸನ್‌ನಲ್ಲಿ ಹಲವು ಏಳುಬೀಳುಗಳನ್ನು ಹಾದು ಅಂತಿಮ ಹಂತಕ್ಕೆ ಒಂದೇ ಹೆಜ್ಜೆ ಉಳಿದಿರುವಾಗ ನಮ್ರತಾ ಮನೆಯಿಂದ ಹೊರಬಿದ್ದಿದ್ದಾರೆ. ಕೊನೆಕೊನೆಯ ದಿನಗಳಲ್ಲಿ ಅವರ ಆಟದ ವೈಖರಿಯನ್ನು ಕಂಡು ಹಿಂದೆ ಜರಿದವರೇ ಅವರನ್ನು ಹೊಗಳಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಅವರ ಜರ್ನಿಯ JioCinemaದಲ್ಲಿ ಕಂಡ ಒಂದು ಕಿರುನೋಟ ಇಲ್ಲಿದೆ. ಜಿಯೊ ಸಿನಿಮಾ ಫನ್‌ ಫ್ರೈಡೆ ಟಾಸ್ಕ್‌ಗಳಲ್ಲಿ ನಮ್ರತಾ ಅವರ ಕಾಂಟ್ರಿಬ್ಯೂಷನ್ ದೊಡ್ಡದಿದೆ. ‘ಹೂಂ ಅಂತಿಯಾ ಊಹೂಂ’ ಅಂತಿಯಾ ಟಾಸ್ಕ್‌ನಲ್ಲಿ ಆನೆಗೆ ನಿಖರವಾಗಿ ಬಾಲ ಬಿಡಿಸುವುದರ ಮೂಲಕ ಅವರು ಗಮನಸೆಳೆದಿದ್ದರು. ಗೇಮ್‌ ಆಡುವುದು, ಜೊತೆಗೆ ಆಡುವ ಆಟಗಾರರಿಗೆ ಪ್ರೋತ್ಸಾಹಿಸುವುದು ಈ ಎರಡರಲ್ಲಿಯೂ ನಮ್ರತಾ ಅವರದ್ದು ಎತ್ತಿದ ಕೈ. ‘ಹುಡುಕಿ ತಂದವರೇ ಮಹಾಶೂರ’ ಟಾಸ್ಕ್‌ನಲ್ಲಿ ಅವರು ತೋರಿದ ಚಾಕಚಕ್ಯತೆ ಅವರ ತಂಡಕ್ಕೆ ದೊಡ್ಡ ಬಲ ತಂದಿತ್ತಿತ್ತು.

    ತನಿಷಾ ಜೊತೆಗೆ ಕ್ಲಾಶ್‌

    ಈ ಸೀಸನ್‌ನ ಆರಂಭದ ದಿನಗಳಲ್ಲಿ ನಮ್ರತಾ ವಿನಯ್ ಮತ್ತು ಇಶಾನಿ ಅವರನ್ನು ಸಾಕಷ್ಟು ಹಚ್ಚಿಕೊಂಡಿದ್ದರು. ಅದರಲ್ಲಿಯೂ ವಿನಯ್‌ ಅವರ ಜೊತೆಗಿನ ಅವರ ಬಾಂಧವ್ಯ ಕೊನೆಯ ದಿನದವರೆಗೂ ಕಿಂಚಿತ್ ಊನಗೊಳ್ಳದೆ ಬೆಳೆದುಕೊಂಡು ಬಂದಿತ್ತು. ಕ್ರಿಕೆಟ್‌ ಟಾಸ್ಕ್‌ನಲ್ಲಿ ತನಿಷಾ ಜೊತೆಗೆ ನಡೆದ ಮಾತಿನ ಚಕಮಕಿ ನಮ್ರತಾ ಅವರ ವ್ಯಕ್ತಿತ್ವದ ಮತ್ತೊಂದು ಸ್ಟ್ರಾಂಗ್ ಆಯಾಮವನ್ನು ಜನರೆದುರು ತೆರೆದಿಟ್ಟಿತ್ತು. ಹಾಗೆಯೇ ‘ಹಳ್ಳಿಮನೆ’ ಟಾಸ್ಕ್‌ನಲ್ಲಿಯೂ ತನಿಷಾ ಜೊತೆಗೆ ನಮ್ರತಾ ಮಾತಿನ ಚಕಮಕಿ ಜೋರಾಗಿಯೇ ನಡೆದಿತ್ತು. ಈ ಚಕಮಕಿ ಬೆಂಕಿಯಾಗಿ ಹೊತ್ತಿಕೊಂಡು ಮನೆಯ ನೆಮ್ಮದಿಯನ್ನೇ ಕೆಡಿಸಿದ್ದು, ಬಿಗ್‌ಬಾಸ್ ಮನೆಯ ಆಚೆಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಸಂಗೀತಾ ಮತ್ತು ತನಿಷಾ ಜೊತೆಗೆ ಅಂದು ಹುಟ್ಟಿಕೊಂಡಿದ್ದ ಭಿನ್ನಾಭಿಪ್ರಾಯದ ಕಿಡಿ ಆರಲು ಸಾಕಷ್ಟು ದಿನಗಳನ್ನೇ ತೆಗೆದುಕೊಂಡಿತು. ತನಿಷಾ ಮನೆಯಿಂದ ಹೊರಗೆ ಹೋಗುವ ಹೊತ್ತಿನಲ್ಲಿಯೂ ನಮ್ರತಾ ಅವರನ್ನೇ ನಾಮಿನೇಟ್ ಮಾಡಿದ್ದು ಇದಕ್ಕೊಂದು ಉದಾಹರಣೆ. ಆದರೆ ಸಂಗಿತಾ ಜೊತೆಗಿನ ಅವರ ಹಳಸಿದ್ದ ಸಂಬಂಧ ಕೊನೆದಿನಗಳಲ್ಲಿ ಸರಿಹೋಗಿತ್ತು. ನಮ್ರತಾ ಹಲವು ಸಲ ಕುಗ್ಗಿದಾಗ ಸಂಗೀತಾ ಹೆಗಲೆಣೆಯಾಗಿ ನಿಂತು ಸಂತೈಸಿದ್ದರು.

    ಸ್ನೇಹಿತ್ ಜೊತೆಗಿನ ಮಧುರ ಬಾಂಧವ್ಯ

    ಈ ಸೀಸನ್‌ನಲ್ಲಿ ನಮ್ರತಾ ನಂತರ ಮನೆಯೊಳಗೆ ಹೊಕ್ಕಿದ್ದು ಸ್ನೇಹಿತ್‌. ಮನೆಯೊಳಗೆ ಪರಸ್ಪರ ಎಲ್ಲರಿಗಿಂತ ಮೊದಲು ಮೀಟ್ ಆಗಿದ್ದ ಅವರ ನಡುವಿನ ಬಾಂಧವ್ಯ ನಂತರದ ದಿನಗಳಲ್ಲಿಯೂ ಮುಂದುವರಿದಿತ್ತು. ಅದರಲ್ಲಿಯೂ ಸ್ನೇಹಿತ್ ಅವರಂತೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ‘ನಿಮ್ಮ ಬಗ್ಗೆ ನನಗೆ ಸೀರಿಯಸ್‌ ಆಗಿ ಒಲವಿದೆ’ ಎಂಬರ್ಥದ ಮಾತುಗಳನ್ನು ಆಡಿಯೂ ಇದ್ದರು. ಸದಾ ಕಾಲ ನಮ್ರತಾ ಹಿಂದೆ ಸುತ್ತುತ್ತ, ಸಮಯ ಸಿಕ್ಕಾಗೆಲ್ಲ ಅವರನ್ನು ಹೊಗಳುತ್ತ, ಅವರಿಗೆ ಸಹಾಯ ಮಾಡುತ್ತ ಕೆಲವೊಮ್ಮೆ ಕಿರಿಕಿರಿಯಾಗುಷ್ಟು ಜೊತೆಗಿದ್ದರು ಸ್ನೇಹಿತ್. ನಮ್ರತಾ ಮಾತ್ರ ಅವರನ್ನು ತಮಾಷೆಯಾಗಿಯೇ ನೋಡುತ್ತ, ಅವರ ಮಾತಿಗೆಲ್ಲ ನಗುನಗುತ್ತಲೇ ಹಾರಿಕೆಯ ಉತ್ತರ ನೀಡುತ್ತಿದ್ದರು.

     

    ತಾವು ಎಲಿಮಿನೇಟ್ ಆಗುವ ವಾರದಲ್ಲಿ ಪಡೆದ ವಿಶೇಷ ಅಧಿಕಾರವನ್ನೂ ಸ್ನೇಹಿತ್, ನಮ್ರತಾ ಅವರನ್ನು ಇಂಪ್ರೆಸ್ ಮಾಡುವ ರೀತಿಯಲ್ಲಿಯೇ ಉಪಯೋಗಿಸಿದ್ದು ಮನೆಯ ಉಳಿದವರ ಅಸಮಧಾನಕ್ಕೂ ಕಾರಣವಾಗಿತ್ತು. ಆದರೆ ಸ್ನೇಹಿತ್ ಎಲಿಮಿನೇಟ್ ಆಗುವ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹೋಗುವಾಗ ‘ಇನ್ನು ಮೇಲೆ ನೀವು ನಿಮಗೊಬ್ಬರಿಗೆ ಮಾತ್ರವಲ್ಲ, ನನ್ನ ಪರವಾಗಿಯೂ ಆಡುತ್ತಿದ್ದೀರಿ. ಆಡಿ ಗೆದ್ದು ಬನ್ನಿ’ ಎಂದು ಹೇಳಿಯೇ ಸ್ನೇಹಿತ್ ಹೊರಗೆ ಹೋಗಿದ್ದರು. ಸ್ನೇಹಿತ್ ಅವರ ನೆನಪಿಗಾಗಿ ಅವರು ಕಾಫಿ ಕುಡಿಯುತ್ತಿದ್ದ ಕಪ್ ಅನ್ನು ನಮ್ರತಾ ಉಳಿಸಿಕೊಂಡಿದ್ದರು. ಅಲ್ಲದೆ, ಮನೆಯಲ್ಲಿದ್ದಾಗ ಅವರ ಜೊತೆಗೆ ನಡೆದುಕೊಂಡು ರೀತಿಯ ಬಗ್ಗೆ ಪಶ್ಚಾತ್ತಾಪದಿಂದ ಮಾತಾಡಿದ್ದರು. ತಾವು ಕ್ಯಾಪ್ಟನ್ ಆದಾಗಲೂ ಅದನ್ನು ಸ್ನೇಹಿತ್‌ ಅವರಿಗೆ ಅರ್ಪಿಸಿದ್ದರು.

  • Bigg Boss: ಟೀಕಿಸಿದ ನಮ್ರತಾ, ಸಂಗೀತಾಗೆ ತಿರುಗೇಟು ಕೊಟ್ಟ ಕಾರ್ತಿಕ್

    Bigg Boss: ಟೀಕಿಸಿದ ನಮ್ರತಾ, ಸಂಗೀತಾಗೆ ತಿರುಗೇಟು ಕೊಟ್ಟ ಕಾರ್ತಿಕ್

    ದೊಡ್ಮನೆಯಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಅವರು ಸ್ಟ್ರಾಂಗ್‌ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಕಾರ್ತಿಕ್ ಆಟದಲ್ಲಿ ಎಡವಿದ್ದಾರೆ. ಹಾಗಾಗಿಯೇ ವೀಕೆಂಡ್ ಪಂಚಾಯಿತಿಯಲ್ಲಿ ಕಾರ್ತಿಕ್ ಕುಗ್ಗಿದ್ದಾರಾ? ಎಂಬ ಪ್ರಶ್ನೆಯನ್ನು ಸುದೀಪ್ ಮನೆ ಮಂದಿಗೆ ಕೇಳಿದ್ದಾರೆ. ಕಾರ್ತಿಕ್‌ ಆಟಕ್ಕೆ ಸಂಗೀತಾ- ನಮ್ರತಾ (Namratha) ಹೌದು ಅವರು ಕುಗ್ಗಿದ್ದಾರೆ ಎಂದು ಟೀಕಿಸಿದ್ದಾರೆ. ಅದಕ್ಕೆ, ಕಾರ್ತಿಕ್ ಕೂಡ ಖಡಕ್ ಆಗಿ ಉತ್ತರಿಸಿದ್ದಾರೆ.

    ಬಿಗ್ ಬಾಸ್ (Bigg Boss Kannada 10) ಆಟ ಶುರುವಾದಾಗ ಸಂಗೀತಾ (Sangeetha Sringeri) ಜೊತೆ ಕಾರ್ತಿಕ್ ಅವರು ಆಪ್ತವಾಗಿದ್ದರು. ಅನೇಕ ಟಾಸ್ಕ್‌ಗಳಲ್ಲಿ ಸಂಗೀತಾ-ಕಾರ್ತಿಕ್ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಿದ್ದರು. ಇಬ್ಬರ ನಡುವೆ ಆದ ಮನಸ್ತಾಪದ ಬಳಿಕ ಕಾರ್ತಿಕ್ ಅವರು ನಮ್ರತಾ ಜೊತೆ ಸ್ನೇಹ ಬೆಳೆಸಿದರು. ಈಗ ಆ ಸ್ನೇಹ ಕೂಡ ಅಂತ್ಯವಾಗಿದೆ. ಈ ವಿಚಾರದಲ್ಲಿ ಕಾರ್ತಿಕ್ ಅವರನ್ನು ಸಂಗೀತಾ ಮತ್ತು ನಮ್ರತಾ ಟೀಕಿಸಿದ್ದಾರೆ. ಲಾಭಕ್ಕಾಗಿ ನನ್ನ ಸ್ನೇಹ ಬಳಸಿಕೊಂಡರು ಎಂದು ನಮ್ರತಾ ನೇರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

    ದೊಡ್ಮನೆಯಲ್ಲಿ ಒಬ್ಬರ ಜೊತೆ ಸ್ನೇಹ ಮೂಡುವುದು, ಬಳಿಕ ಆ ಸ್ನೇಹ ಅಂತ್ಯವಾಗುವುದು ಸಹಜ. ಆದರೂ ಅವರ ವರ್ತನೆಯನ್ನು ಸಂಗೀತಾ, ನಮ್ರತಾ ಮಾತಿನ ಮೂಲಕ ತಿವಿದಿದ್ದಾರೆ. ಕಾರ್ತಿಕ್‌ಗೆ ಒಂಟಿಯಾಗಿ ಇರಲು ಸಾಧ್ಯವಿಲ್ಲ ಎಂದು ಸಂಗೀತಾ ಮತ್ತು ನಮ್ರತಾ ಹೇಳಿದ್ದಾರೆ. ಒಂದು ವೇಳೆ ಒಂಟಿಯಾಗಿದ್ದರೆ ಯಾರ ಜೊತೆಯೂ ಸೇರುವುದಿಲ್ಲ ಎಂಬ ಕಾರಣ ನೀಡಿ ನಾಮಿನೇಟ್ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಜೊತೆಗೆ ಇದ್ದರೂ ಕಷ್ಟ, ಒಬ್ಬರೇ ಇದ್ದರೂ ಕಷ್ಟ ಎಂಬ ಪರಿಸ್ಥಿತಿ ಕಾರ್ತಿಕ್ ಅವರದ್ದಾಗಿದೆ ಎಂದಿದ್ದಾರೆ.

    ನಾನು ಕುಗ್ಗಿದ್ದು ನಿಜ. ಆದರೆ ದೈಹಿಕವಾಗಿ ಅಲ್ಲ, ಮಾನಸಿಕವಾಗಿ ಅಷ್ಟೇ. ಆಟದಿಂದ ನಾನು ಡೈವರ್ಟ್ ಆಗಿಲ್ಲ. ಆದರೆ ಅವರ ಆಟ ಕುಗ್ಗಿದಾಗ ನಾನು ನಾಮಿನೇಟ್ ಮಾಡೋದು ಸಹಜ ಎಂದು ಕಾರ್ತಿಕ್ ಖಡಕ್‌ ಆಗಿ ಮಾತನಾಡಿದ್ದಾರೆ. ಸಂಗೀತಾ, ನಮ್ರತಾ, ತನಿಷಾ ಜೊತೆಗಿನ ಸ್ನೇಹ ಅಂತ್ಯವಾದ ಬಳಿಕ ಕಾರ್ತಿಕ್ ಅವರು ತುಕಾಲಿ ಸಂತೋಷ್- ವರ್ತೂರು ಸಂತೋಷ್ ಜೊತೆ ಹೆಚ್ಚು ಕಾಲ ಕಳೆಯಲು ಆರಂಭಿಸಿದ್ದಾರೆ.

  • ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

    ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಕೊನೆಯ ಕಿಚ್ಚನ ಪಂಚಾಯಿತಿ ನಡೆದಿದೆ. ಈ ಬಾರಿ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್ ಸ್ಪರ್ಧಿಗಳ ಜೊತೆ ಚರ್ಚಿಸಿದ್ದಾರೆ. ಇಡೀ ಸೀಸನ್‌ನಲ್ಲಿ ಉತ್ತಮವಾಗಿ ಆಡಿದವರಿಗೆ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಸಂಗೀತಾ (Sangeetha) ಮತ್ತು ವಿನಯ್‌ಗೆ (Vinay) ಕಿಚ್ಚನ ಕೊನೆಯ ಚಪ್ಪಾಳೆ ಸಿಕ್ಕಿದೆ.

    ದೊಡ್ಮನೆ ಆಟದಲ್ಲಿ ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಫಿನಾಲೆಗೆ ಟಿಕೆಟ್ ಪಡೆದು ಫೈನಲಿಸ್ಟ್ ಆಗಿದ್ದಾರೆ. ಇನ್ನೂ ಇಬ್ಬರಿಗೆ ಮಾತ್ರ ಫಿನಾಲೆಗೆ ಬರಲು ಅವಕಾಶ ಸಿಗಲಿದೆ. ಇದರ ನಡುವೆ ಈ ಸೀಸನ್‌ನಲ್ಲಿ ವಿನಯ್- ಸಂಗೀತಾ ಇಲ್ಲ ಅಂದ್ರೆ ಸಂಪೂರ್ಣ ಅಂತ ಅನಿಸೋದಿಲ್ಲ ಎಂದು ಇಬ್ಬರಿಗೆ ಮೆಚ್ಚುಗೆ ಸಲ್ಲಿಸುತ್ತಾ ಕಿಚ್ಚನ ಚಪ್ಪಾಳೆ ನೀಡಿದ್ದಾರೆ ಸುದೀಪ್.

    ಈ ವಾರಾಂತ್ಯ ಸುದೀಪ್‌ ಮಾತನಾಡಿ,  ಕೆಲ ವಾರ ಕಿಚ್ಚನ ಚಪ್ಪಾಳೆ ಕೊಟ್ಟೆ, ಇನ್ನೂ ಕೆಲ ವಾರ ಚಪ್ಪಾಳೆ ಕೊಡಬೇಕು ಅಂತ ಅನಿಸಿರಲಿಲ್ಲ, ಕೊಡಲಿಲ್ಲ. ಈ ಜರ್ನಿಯಲ್ಲಿ ಬೈಸಿಕೊಂಡಿದ್ದಾರೆ, ತಪ್ಪು ಮಾಡಿದ್ದಾರೆ, ಅತ್ತಿದ್ದಾರೆ, ನಕ್ಕಿದ್ದಾರೆ. ಈ ಸೀಸನ್‌ನಲ್ಲಿ ವಿನಯ್, ಸಂಗೀತಾ ಇಲ್ಲ ಅಂದ್ರೆ ಸಂಪೂರ್ಣ ಅಂತ ಅನಿಸೋದಿಲ್ಲ. ಈ ಜರ್ನಿಯಲ್ಲಿ ಇಬ್ಬರಿಗೆ ಚಪ್ಪಾಳೆ ಕೊಡಲು ಇಷ್ಟಪಡ್ತಿದೀನಿ. ಅಭಿಪ್ರಾಯಗಳನ್ನು ಹೇಳಿದ್ರಿ, ಜಗಳ ಆಡಿದ್ರಿ, ತಪ್ಪು ಮಾಡಿದ್ರಿ, ಸರಿಯೂ ಮಾಡಿದ್ರಿ, ಕಿರುಚಾಡಿದ್ರಿ, ಕೆಟ್ಟವರಾಗಿದ್ರಿ. ಇಡೀ ಸೀಸನ್‌ನಲ್ಲಿ ಅದ್ಭುತವಾಗಿ ಕೊಡುಗೆ ಕೊಟ್ಟಿದ್ದೀರಿ. ಈ ಸೀಸನ್‌ನ ಕೊನೆಯ ಚಪ್ಪಾಳೆ ಸಂಗೀತಾ, ವಿನಯ್‌ಗೆ ಎಂದು ಸುದೀಪ್ ಹೇಳಿದ್ದಾರೆ.

    ಈ ಸೀಸನ್‌ನಲ್ಲಿ ಬಿದ್ದಿದ್ದೀರಿ, ಎದ್ದಿದ್ದೀರಿ. ಸೋತಿದ್ದಿರಿ, ಗೆದ್ದಿದ್ದೀರಿ ನಿಮ್ಮಿಬ್ಬರನ್ನು ಈ ಸೀಸನ್‌ನಿಂದ ತೆಗೆದು ಇಟ್ಟರೆ ಈ ಸೀಸನ್ ಅಪೂರ್ಣ. ಈ ಸೀಸನ್‌ನ್ನು ಅದ್ಭುತ ಮಾಡಿದ್ದಕ್ಕೆ ಅಭಿನಂದನೆಗಳು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ:ಜ.22 ರಂದು ಅಯೋಧ್ಯೆಗೆ ಹೋಗುತ್ತಿದ್ದು, ಬರ್ತ್‌ ಡೇ ಆಚರಿಸಿಕೊಳ್ತಿಲ್ಲ: ನಿಖಿಲ್‌

    ಕಿಚ್ಚನ ಚಪ್ಪಾಳೆ ಹೆಸರು ಬಂದಾಗ ನನಗೆ ಚಪ್ಪಾಳೆ ಸಿಗಬಹುದಾ ಅಂತ ಕಾಯುತ್ತಿದ್ದೆ. ಉತ್ತಮವೇ ಸಿಗೋದಿಲ್ಲ, ಅಂಥದರಲ್ಲಿ ಪ್ರತಿ ಸಲ ನನಗೆ ಯಾಕೆ ಚಪ್ಪಾಳೆ ಸಿಗತ್ತೆ ಅಂತ ಯೋಚನೆ ಮಾಡುತ್ತಿದ್ದೆ, ಅಮ್ಮನ ಫೋಟೋ ನೋಡಿ ದಿನಾ ಇದರ ಬಗ್ಗೆ ಹೇಳುತ್ತಿದ್ದೆ.ಈಗ ನನಗೆ ತುಂಬ ಖುಷಿಯಾಗುತ್ತಿದೆ. ಇದಕ್ಕೋಸ್ಕರ ನಾವು ಕೆಲಸ ಮಾಡಬೇಕಿಲ್ಲ, ನಾವು ನಾವಾಗಿದ್ದರೆ ಚಪ್ಪಾಳೆ ಸಿಗುತ್ತದೆ ಅಂತ ಅರ್ಥ ಆಗಿದೆ. ನನಗೂ, ವಿನಯ್‌ಗೂ ಒಟ್ಟಿಗೆ ಚಪ್ಪಾಳೆ ಸಿಕ್ಕಿರೋದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಸಂಗೀತಾ ಶೃಂಗೇರಿ ಅವರು ಹೇಳಿದ್ದಾರೆ. ಬಳಿಕ ವಿನಯ್ ಮಾತನಾಡಿ, ಎಲ್ಲಿ ಕಿಚ್ಚನ ಚಪ್ಪಾಳೆ ಕೊನೆವರೆಗೂ ಸಿಗೋದಿಲ್ವೋ ಎಂದು ಭಾವಿಸಿದ್ದೆ, ಕೊನೆಗೂ ಸಿಕ್ಕಿದೆ ಎಂದು ಸಂಭ್ರಮಿಸಿದ್ದರು.

  • Bigg Boss: ಟಿಕೆಟ್‌ ಟು ಫಿನಾಲೆ ವೇಳೆ ಅನ್ಯಾಯ ನಡೆದಿದ್ಯಾ? ಆರೋಪಕ್ಕೆ ಸುದೀಪ್‌ ಸ್ಪಷ್ಟನೆ

    Bigg Boss: ಟಿಕೆಟ್‌ ಟು ಫಿನಾಲೆ ವೇಳೆ ಅನ್ಯಾಯ ನಡೆದಿದ್ಯಾ? ಆರೋಪಕ್ಕೆ ಸುದೀಪ್‌ ಸ್ಪಷ್ಟನೆ

    ದೊಡ್ಮನೆಯ ಆಟ ಕೊನೆಯ ಹಂತ ತಲುಪಲು ಕೌಂಟ್‌ಡೌನ್‌ ಶುರುವಾಗಿದೆ. ಬಿಗ್‌ ಬಾಸ್‌ (Bigg Boss Kannada 10) ಆಟಕ್ಕೆ ಇನ್ನೇನು ಬ್ರೇಕ್ ಬೀಳಲು 2 ವಾರಗಳಿವೆ. ಬಿಗ್ ಬಾಸ್ ಫಿನಾಲೆಗೆ ಮೊದಲ ಫೈನಲಿಸ್ಟ್ ಆಗಿ ಸಂಗೀತಾ ಶೃಂಗೇರಿ (Sangeetha Sringeri) ಹೊರಹೊಮ್ಮಿದ್ದಾರೆ. ಇದರ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಡ್ರೋನ್ ಪ್ರತಾಪ್ (Drone Prathap) ಈ ವಾರ ಹೆಚ್ಚು ಅಂಕ ಗಳಿಸಿದ್ದರು. ಅವರು ಫಿನಾಲೆ ಫೈನಲಿಸ್ಟ್ ಆಗಬೇಕಿತ್ತು ಎಂಬ ಮಾತುಗಳಿಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ಮೇಲೆ ಬಂದಿರೋ ಆರೋಪಕ್ಕೆ ಉತ್ತರ ನೀಡಿದ್ದಾರೆ. ಸಂಗೀತಾ ಮತ್ತು ಪ್ರತಾಪ್‌ ನಡುವಿನ ಫಿನಾಲೆ ಟಿಕೆಟ್‌ ವಿಚಾರದಲ್ಲಿ ಮೋಸವಾಗಿದ್ಯಾ? ಎಂಬುದಕ್ಕೆ ಉತ್ತರ ನೀಡಿದ್ದಾರೆ.

    ಬಿಗ್ ಬಾಸ್, ಈ ವಾರ ಅಷ್ಟು ಟಾಸ್ಕ್‌ಗಳಲ್ಲಿ ಯಾರು ಹೆಚ್ಚು ಅಂಕ ಪಡೆಯುತ್ತಾರೋ ಅವರಿಗೆ ಫಿನಾಲೆ ಮೊದಲ ಟಿಕೆಟ್ ಸಿಗಲಿದೆ ಎಂದು ಘೋಷಿಸಿದ್ದರು. ಅದರಂತೆ ಪ್ರತಾಪ್ 420, ಸಂಗೀತಾ 300, ನಮ್ರತಾ 210 ಅಂಕಗಳನ್ನು ಪಡೆದಿರುತ್ತಾರೆ. ಈ ಮೂವರಲ್ಲಿ ಯಾರಿಗೆ ಹೆಚ್ಚಿನ ವೋಟ್ ಸಿಗಲಿದೆ ಅವರು ಫಿನಾಲೆ ಹೋಗುತ್ತಾರೆ ಎಂದು ಬಿಗ್‌ ಬಾಸ್‌ ತಿಳಿಸಿದ್ದರು. 100 ದಿನಗಳ ಆಟ ಗಮನಿಸಿ ಮನೆಮಂದಿ ಸಂಗೀತಾಗೆ ಹೆಚ್ಚಿನ ವೋಟ್ ನೀಡಿದ್ದರು. ಹಾಗಾಗಿ ಮನೆಯ ಕ್ಯಾಪ್ಟನ್ ಪಟ್ಟದ ಜೊತೆ ಮೊದಲ ಫೈನಲಿಸ್ಟ್ ಆದರು. ಇದನ್ನೂ ಓದಿ:ಆಮೀರ್ ಖಾನ್ ಮಗಳ ಆರತಕ್ಷತೆಯಲ್ಲಿ ಬಾಲಿವುಡ್ ಕಲಾವಿದರ ಸಮಾಗಮ

    ಈ ಬಗ್ಗೆ ಹೊರಗಡೆ ಹಲವರು ಪ್ರಶ್ನೆ ಮಾಡಿದರು. ವೋಟಿಂಗ್ ಮೂಲಕ ಟಿಕೆಟ್ ನೀಡುವುದಾದರೆ ಟಾಸ್ಕ್ ನಡೆಸಿದ್ದು ಏಕೆ ಹೆಚ್ಚು ಮತ ಗಳಿಸಿದ ಡ್ರೋನ್ ಪ್ರತಾಪ್‌ಗೆ ನೇರವಾಗಿ ಟಿಕೆಟ್ ನೀಡಲಿಲ್ಲ ಏಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಶನಿವಾರದ ಎಪಿಸೋಡ್‌ಗೆ ಬಂದ ಸುದೀಪ್, ಇದೇ ಪ್ರಶ್ನೆಯನ್ನಿಟ್ಟುಕೊಂಡೇ ಎಪಿಸೋಡ್‌ಗೆ ಚಾಲನೆ ನೀಡಿದ್ದರು.

    ಮೊದಲಿಗೆ ಮನೆಯ ಸದಸ್ಯರ ಅಭಿಪ್ರಾಯಗಳನ್ನು ಕೇಳಿದರು. ಆಗ ಪ್ರತಾಪ್ ಸೇರಿದಂತೆ ಎಲ್ಲರೂ ಬಿಗ್‌ಬಾಸ್ ನಿರ್ಣಯ ಸರಿಯಾಗಿಯೇ ಇತ್ತು ಎಂದರು. ಬಹುತೇಕರು, ಪ್ರತಾಪ್ ಇಷ್ಟು ದಿನ ಸರಿಯಾಗಿ ಆಡಲಿಲ್ಲ, ಆದರೆ ಈ ವಾರ ಮಾತ್ರವೇ ಚೆನ್ನಾಗಿ ಆಡಿದರು. ಅವರಿಗೆ ಟಿಕೆಟ್ ಕೊಟ್ಟಿದ್ದರೆ ಮೊದಲಿನಿಂದಲೂ ಚೆನ್ನಾಗಿ ಆಡಿಕೊಂಡು ಬಂದವರಿಗೆ ಅನ್ಯಾಯವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕೇವಲ ಒಂದು ವಾರದ ಪ್ರದರ್ಶನದಿಂದ ಫಿನಾಲೆಗೆ ಹೋಗುವುದು ನ್ಯಾಯವಲ್ಲ ಎಂದು ಇತರೆ ಸ್ಪರ್ಧಿಗಳು ತಿಳಿಸಿದ್ದರು.

    ಸುದೀಪ್ ಸಹ ಮಾತನಾಡುತ್ತಾ, ಬಿಗ್‌ಬಾಸ್ (Bigg Boss) ಎಂಬುದು ಒಂದು ವಾರದ ಆಟವಷ್ಟೇ ಅಲ್ಲ, ಅಲ್ಲದೇ ಕೇವಲ ಆಟ ಮಾತ್ರವೇ ಅಲ್ಲ ಮನೆಯಲ್ಲಿ ಇಷ್ಟು ದಿನಗಳ ಆಟಗಾರರ ವ್ಯಕ್ತಿತ್ವವೂ ಅದಕ್ಕೆ ಸೇರಿರುತ್ತದೆ. ವೀಕ್ಷಕರ ಅಭಿಪ್ರಾಯದ ಜೊತೆಗೆ, ಮನೆಯ ಒಳಗಿರುವವರ ಅಭಿಪ್ರಾಯವೂ ಮುಖ್ಯವಾಗುತ್ತದೆ. ಅದೆಲ್ಲದಕ್ಕಿಂತಲೂ ಮುಖ್ಯವಾಗಿ, ಬಿಗ್‌ಬಾಸ್ ಘೋಷಣೆ ಮಾಡಿದಾಗಲೇ ಹೆಚ್ಚು ಅಂಕ ಗಳಿಸಿದವರಲ್ಲಿ ಒಬ್ಬರು ಫಿನಾಲೆಗೆ ಟಿಕೆಟ್ ಪಡೆಯಲಿದ್ದಾರೆ ಎಂದೇ ಘೋಷಿಸಿದ್ದರು. ಮನೆಯಲ್ಲಿರುವವರಿಗೆ ಹಾಗೂ ಪ್ರೇಕ್ಷಕರಿಗೆ ಈ ಸ್ಪಷ್ಟನೆ ನನಗೆ ಕೊಡಬೇಕು ಅನ್ನಿಸುತ್ತಿದೆ ಹಾಗಾಗಿ ಕೊಡುತ್ತಿದ್ದೇನೆ ಎಂದು ಸುದೀಪ್‌ ಮಾತನಾಡಿದ್ದಾರೆ.

  • ‘ಶನಿ’ ಕಂಟಕ‌ ವರ್ತೂರು ಸಂತೋಷ್ ತಲೆಗೆ ಕಟ್ಟಿದ ಕಾರ್ತಿಕ್‌- ಚಳಿ ಬಿಡಿಸಿದ ಸುದೀಪ್

    ‘ಶನಿ’ ಕಂಟಕ‌ ವರ್ತೂರು ಸಂತೋಷ್ ತಲೆಗೆ ಕಟ್ಟಿದ ಕಾರ್ತಿಕ್‌- ಚಳಿ ಬಿಡಿಸಿದ ಸುದೀಪ್

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಶನಿ ಎಂದಿದ್ಯಾರು ಎಂಬ ಟಾಪಿಕ್‌ಗೆ ಇದೀಗ ತೆರೆಬಿದ್ದಿದೆ. ಆದರೆ ಕಾರ್ತಿಕ್‌ಗೆ ಮಾತ್ರ ಶನಿ ಕಾಟ ತಪ್ಪಿಲ್ಲ. ಅದ್ಯಾವ ಘಳಿಗೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ನವಗ್ರಹಗಳ ಬಗ್ಗೆ ಚರ್ಚೆ ಹಾಗೂ ಈ ಮನೆಯ ಶನಿ ಯಾರು? ಎಂಬ ಪ್ರಶ್ನೆಯನ್ನ ಕಾರ್ತಿಕ್ ಕೇಳಿದ್ರೋ ಆಗ್ಲಿಂದ ಅವರ ಮೇಲೆ ಶನಿಯ ವಕ್ರದೃಷ್ಟಿ ಬಿದ್ದುಬಿಟ್ಟಿದೆ. ಕಳೆದ ವಾರಾಂತ್ಯದಲ್ಲಿ ಶನಿ ಟಾಪಿಕ್ ಯೆಸ್/ ನೋ ರೌಂಡ್‌ನಲ್ಲಿ ಬಂದಿತ್ತು. ಈ ವೀಕೆಂಡ್‌ನಲ್ಲಿ ಅದೇ ಟಾಪಿಕ್ ಮತ್ತೆ ಚರ್ಚೆಯಾಗಿದೆ. ತನ್ನ ತಪ್ಪನ್ನು ವರ್ತೂರು ಸಂತೋಷ್‌ ತಲೆಗೆ ಕಟ್ಟಲು ಹೋದ ಕಾರ್ತಿಕ್‌ಗೆ ಕಿಚ್ಚ ಕಿವಿಹಿಂಡಿದ್ದಾರೆ.

    ಈ ಮನೆಯ ಶನಿ ಸಂಗೀತಾ (Sangeetha Sringeri) ಅಂತ ಹೇಳಿದ್ದು ವರ್ತೂರು ಸಂತೋಷ್. ನಾನಲ್ಲ ಎಂದು ಕಾರ್ತಿಕ್ (Karthik Mahesh) ವಾದಿಸಿದ್ದರು. ಸರಿಯಾಗಿ ನೆನಪಿಲ್ಲ ಅಂತಲೂ ಹೇಳಿದ್ದರು. ಹೀಗಿರುವಾಗಲೇ, ನೀವು ಹೇಳಿದ್ರಿ ಕಾರ್ತಿಕ್ ಅಂತ  ಸುದೀಪ್ ನೇರವಾಗಿ ಮಾತಿನ ಬಾಣ ಬೀಸಿದರು.ಇದನ್ನೂ ಓದಿ:Bigg Boss- ಅಭಿಮಾನಿಗಳಿಗೆ ಆಘಾತ; ವರ್ತೂರು ಔಟ್

    ಕಿಚ್ಚನ ಪಂಚಾಯಿತಿಯಲ್ಲಿ ಶನಿ ಟಾಪಿಕ್ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಸುದೀಪ್, ವರ್ತೂರು ಅವರೇ.. ಕಾರ್ತಿಕ್ ಅವರನ್ನ ನಾಮಿನೇಟ್ ಮಾಡ್ತೀರಿ. ಅದಕ್ಕೆ ನೀವು ಕೊಟ್ಟ ಕಾರಣ ಯಾರಿಗೂ ಅರ್ಥ ಆಗುತ್ತಿಲ್ಲ. ವಿವರಿಸಿ ಎಂದು ಸುದೀಪ್ ಕೇಳುತ್ತಾರೆ. ಆಗ ಕಾರ್ತಿಕ್, ಸಂಗೀತಾಗೆ ಶನಿ ಎಂದಿರುವ ಬಗ್ಗೆ ವರ್ತೂರು ಸಂತೋಷ್‌ (Varthur Santhosh) ಕ್ಲ್ಯಾರಿಟಿ ಕೊಡುತ್ತಾರೆ. ಆಗ ಕಾರ್ತಿಕ್ ತಾವು ಹೇಳಲೇ ಇಲ್ಲ ಅಂತ ವಾದಿಸುತ್ತಾರೆ.

    ನೀವು ಹೇಳಿದ್ರಿ ಕಾರ್ತಿಕ್. ಕೆಲವು ಬಾರಿ ಮರೆತಿರಬಹುದು. ವರ್ತೂರು ಸಂತೋಷ್ ಅವರಲ್ಲಿ ಒಳ್ಳೆಯ ಸ್ಪರ್ಧಿ ಕೂಡ ಇದ್ದಾರೆ. ಅವರ ಬಗ್ಗೆ ತಮಾಷೆ ಮಾಡಬಹುದು. ಆದರೆ, ಅವರಲ್ಲಿ ಮುಗ್ಧತೆ ಇದೆ. ಮಾಡಿದ್ದನ್ನ ಒಪ್ಪಿಕೊಳ್ಳುವ ಮುಗ್ಧತೆ ಅವರಲ್ಲಿದೆ. ಇವತ್ತು ಅವರ ಮೇಲೆ ಅಪವಾದ ಹಾಕುತ್ತಿದ್ದರೆ, ನಾನು ಸುಮ್ಮನೆ ಇರೋಕೆ ಆಗಲ್ಲ. ಸಾಮಾನ್ಯವಾಗಿ ನಾನು ಯಾವುದಕ್ಕೂ ಇಂಟರ್‌ಫಿಯರ್ ಆಗಲ್ಲ. ನೀವು ಹೇಳಿದ್ರಿ, ಹೇಳಿಲ್ಲ ಅಂತ ನಾನು ಮಾತಾಡಿಲ್ಲ. ಇವತ್ತು ಹೇಳ್ತಿದ್ದೀನಿ. ಯಾಕಂದ್ರೆ, ಆ ಮನುಷ್ಯನಲ್ಲಿ ಇನ್ನೊಸೆನ್ಸ್ ಇದೆ. ಅದನ್ನ ಅಪ್ರೀಷಿಯೇಟ್ ಮಾಡ್ತೀನಿ. ಕಿಚನ್‌ನಲ್ಲಿ ನೀವು ಆ ಮಾತನ್ನ ಹೇಳಿದ್ದು ಸತ್ಯ ಎಂದು ಸುದೀಪ್‌ ಸ್ಪಷ್ಟನೆ ನೀಡಿದ್ದಾರೆ.

    ಮನೆ ಎಂದ ಮೇಲೆ ತಮಾಷೆ ನಡೆಯಬಹುದು. ಅವತ್ತು ಅವರು ಬೇರೆ ಮಾತಾಡ್ತಾ ಇದ್ದರು. ಹೇಳಿದ್ದುಂಟು. ಆದರೆ, ಈ ಲೈನ್ ಹೇಳಿದ್ದು ನೀವು. ಅವರಲ್ಲ. ಇದನ್ನ ಬಹಿರಂಗವಾಗಿ ನಾನು ಹೇಳ್ತಿರೋದು ನಿಮ್ಮನ್ನ ಡಿಮೋಟಿವೇಟ್ ಮಾಡೋಕಲ್ಲ. ಹಾಗಂತ ಇನ್ನೊಬ್ಬ ವ್ಯಕ್ತಿ ವ್ಯಕ್ತಿತ್ವದಲ್ಲಿ ಕೆಳಗೆ ಹೋಗೋದನ್ನು ಬಿಡಲು ಸಾಧ್ಯವಿಲ್ಲ. ನನ್ನ ಉಪಸ್ಥಿತಿಯಲ್ಲಿ ಇನ್ನೊಬ್ಬ ವ್ಯಕ್ತಿ ಮೇಲೆ ಅಪವಾದ ಬಂದಾಗ ಇಟ್ ಮ್ಯಾಟರ್ಸ್. ನಿಮ್ಮನ್ನ ಅಪರಾಧಿ ಸ್ಥಾನಲ್ಲಿ ಕೂರಿಸಬೇಕು ಅಂತಲ್ಲ. ಇನ್ನೊಬ್ಬರ ಮೇಲೆ ಆರೋಪ ಮಾಡಿದಾಗ ನಾನು ಮಧ್ಯೆ ಬರಬೇಕಾಗುತ್ತದೆ ಎಂದು ಸುದೀಪ್ ಮಾತನಾಡಿದ್ದಾರೆ. ಬಳಿಕ ಕಾರ್ತಿಕ್‌ ಕ್ಷಮೆಯಾಚಿಸಿದ್ದಾರೆ.