Tag: ಸಂಗೀತಾ ಶೃಂಗೇರಿ

  • ಸ್ವಾತಂತ್ರ್ಯ ದಿನಾಚರಣೆ: ಸ್ಯಾಂಡಲ್‌ವುಡ್ ತಾರೆಯರ ಸಂಭ್ರಮ

    ಸ್ವಾತಂತ್ರ್ಯ ದಿನಾಚರಣೆ: ಸ್ಯಾಂಡಲ್‌ವುಡ್ ತಾರೆಯರ ಸಂಭ್ರಮ

    ದೇಶದೆಲ್ಲೆಡೆ 78ನೇ ಸ್ವಾತಂತ್ರ‍್ಯೋತ್ಸವದ (78th Independence Day) ಸಂಭ್ರಮ ಮನೆಮಾಡಿದೆ. ಸಮಸ್ತ ಭಾರತೀಯರು ದೇಶಭಕ್ತಿ ಭಾವ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ದೇಶದ ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಅಸಂಖ್ಯಾತ ಹೋರಾಟಗಾರರ ತ್ಯಾಗಬಲಿದಾನಗಳನ್ನ ಸ್ಮರಿಸುತ್ತಿದ್ದಾರೆ. ಹಾಗೆಯೇ ಸ್ಯಾಂಡಲ್‌ವುಡ್ ನಟ, ನಟಿಯರು ಕೂಡ ಸ್ವಾತಂತ್ರ್ಯ ದಿನವನ್ನು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.

    ಹುಟ್ಟೂರು ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ‘ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ರಾಷ್ಟ್ರ ಧ್ವಜ ಹಾರಿಸಿ ದೇಶಭಕ್ತಿ ಮೆರೆದಿದ್ದಾರೆ. ಸಮಾರಂಭದ ಫೋಟೋಗಳನ್ನು ಶೇರ್ ಮಾಡಿ, ನಾಡಿನ ಸಮಸ್ತ ಜನತೆಗೆ 78 ನೇ ಸ್ವಾತಂತ್ರ‍್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

    ನಟಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ಅವರು ತ್ರಿವರ್ಣ ಧ್ವಜ ಹಾರಿಸಿ, ಈ ಸ್ವಾತಂತ್ರ‍್ಯ ದಿನದಂದು ನಾವೆಲ್ಲರೂ ಸದಾ ನಮ್ಮ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡೋಣ. ಸರ್ವರಿಗೂ ಸ್ವಾತಂತ್ರ‍್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಲಿಪ್‌ಲಾಕ್ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ ದಂಪತಿ

    ಸಾವಿರಬಗೆಯಲಿ ಸಾರುತಿದೆ ಸ್ವಾತಂತ್ರ‍್ಯದ ಲಾಸ್ಯ. ಬಾನು ಭುವಿಯು ಬರೆಯುತಿದೆ ಸಿರಿಬೆಳಕಿನ ಭಾಷ್ಯ. 78ನೇ ಸ್ವಾತಂತ್ಯೋತ್ಸವದ ಶುಭಾಶಯಗಳು ಎಂದು ನಟಿ ರಂಜನಿ ರಾಘವನ್ (Ranjani Raghavan) ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Deepika Das (@deepika__das)

    ಸ್ವಾತಂತ್ರ‍್ಯ ದಿನಾಚರಣೆಯ ಶುಭಾಶಯಗಳು. ನಮ್ಮ ರಾಷ್ಟ್ರಕ್ಕೆ ಉಜ್ವಲ ಮತ್ತು ಹೆಚ್ಚು ಸಮೃದ್ಧ ಭವಿಷ್ಯಕ್ಕಾಗಿ ಕೆಲಸ ಮಾಡಲು ಪ್ರತಿಜ್ಞೆ ಮಾಡೋಣ ಎಂದು ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್ (Deepika Das) ಎಂದಿದ್ದಾರೆ.

    ಶಾಲೆಯೊಂದರಲ್ಲಿ ನಟಿ ಅತಿಥಿಯಾಗಿ ಭಾಗವಹಿಸಿದ್ದು, ರಾಷ್ಟ್ರ ಧ್ವಜ ಹಾರಿಸಿ ದೇಶಭಕ್ತಿ ಮೆರೆದಿದ್ದಾರೆ. ಬಳಿಕ ಸ್ವಾತಂತ್ರ‍್ಯದ ಚೈತನ್ಯವು ಇತರರಿಂದ ಸ್ವಾತಂತ್ರ‍್ಯವಲ್ಲ ಆದರೆ ನಮ್ಮದೇ ಭವಿಷ್ಯವನ್ನು ರೂಪಿಸುವ ಸ್ವಾತಂತ್ರ‍್ಯದ ಬಗ್ಗೆ. ಕಷ್ಟಪಟ್ಟು ಕೆಲಸ ಮಾಡುವ ಮೂಲಕ, ದಯೆಯಿಂದ ಮತ್ತು ನಮ್ಮ ಮೌಲ್ಯಗಳಿಗೆ ನಿಷ್ಠರಾಗಿ, ನಮ್ಮ ಸ್ವಾತಂತ್ರ‍್ಯವನ್ನು ಸಾಧ್ಯವಾಗಿಸಿದವರ ತ್ಯಾಗವನ್ನು ನಾವು ಗೌರವಿಸುತ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಂಗೀತಾ ಶೃಂಗೇರಿ ಬರೆದುಕೊಂಡಿದ್ದಾರೆ.

  • ಸಂಗೀತಾ ಬರ್ತ್‌ಡೇಗೆ ವಿಶೇಷ ಉಡುಗೊರೆ ನೀಡಿದ ಡ್ರೋನ್‌ ಪ್ರತಾಪ್

    ಸಂಗೀತಾ ಬರ್ತ್‌ಡೇಗೆ ವಿಶೇಷ ಉಡುಗೊರೆ ನೀಡಿದ ಡ್ರೋನ್‌ ಪ್ರತಾಪ್

    ‘ಬಿಗ್ ಬಾಸ್’ ಖ್ಯಾತಿಯ (Bigg Boss Kannada 10) ಸಂಗೀತಾ ಶೃಂಗೇರಿ (Sangeetha Sringeri) ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.  ಬರ್ತ್‌ಡೇ ಸಂಭ್ರಮದಲ್ಲಿ ಡ್ರೋನ್ ಪ್ರತಾಪ್, ನೀತು ಸೇರಿದಂತೆ ಅನೇಕರು ಭಾಗಿಯಾಗಿ ಸಂಗೀತಾಗೆ ವಿಶ್ ಮಾಡಿದ್ದಾರೆ.‌ ಅಕ್ಕ ಸಂಗೀತಾಗೆ ಪ್ರತಾಪ್‌ ವಿಶೇಷ ಉಡುಗೊರೆ ಕೂಡ ನೀಡಿದ್ದಾರೆ. ಸದ್ಯ ನಟಿಯ ಬರ್ತ್‌ಡೇ ಸೆಲೆಬ್ರೇಶನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ದುನಿಯಾ ಸೂರಿ ನಿರ್ದೇಶನದ ‘ಕಾಗೆ ಬಂಗಾರ’ ಚಿತ್ರಕ್ಕೆ ಮುಹೂರ್ತ ಫಿಕ್ಸ್

    ಇದೀಗ ಡ್ರೋನ್ ಪ್ರತಾಪ್ (Drone Prathap) ಪ್ರೀತಿಯ ಅಕ್ಕ ಸಂಗೀತಾ ಶೃಂಗೇರಿ ಮನೆಗೆ ಭೇಟಿ ಕೊಟ್ಟಿದ್ದಾರೆ. ಇವರ ಜೊತೆಗೆ ನೀತು (Neethu Vanajakshi) ಕೂಡ ಭಾಗಿಯಾಗಿದ್ದರು. ಹುಟ್ಟುಹಬ್ಬದ ನಿಮಿತ್ತ ಪ್ರತಾಪ್ ಮತ್ತು ನೀತು ಅವರು ಕೇಕ್ ತೆಗೆದುಕೊಂಡು ಸಂಗೀತಾ ಶೃಂಗೇರಿ ಅವರ ಮನೆಗೆ ಆಗಮಿಸಿದ್ದಾರೆ.

    ಸಂಗೀತಾ ಮನೆಗೆ ಭೇಟಿ ಕೊಟ್ಟ ವೇಳೆ, ಡ್ರೋನ್ ಪ್ರತಾಪ್ ಅವರಿಗಾಗಿಯೇ ವಿಶೇಷವಾದ ಗಿಫ್ಟ್ ನೀಡಿದ್ದಾರೆ. ಡ್ರೋನ್ ಪ್ರತಾಪ್ ಪ್ರೀತಿಯ ಅಕ್ಕ ಸಂಗೀತಾಗೆ ತಿಳಿ ಹಸಿರು ಬಣ್ಣದ ಚೂಡಿದಾರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ವೇಳೆ, ಪ್ರತಾಪ್‌ಗೆ ನಟಿ ರಾಕಿ ಕಟ್ಟಿ ಸಂಭ್ರಮಿಸಿದ್ದಾರೆ. ಈ ಸಂದರ್ಭದ ವಿಡಿಯೋ ಶೇರ್‌ ಮಾಡಿ ಪ್ರೀತಿಯ ಅಕ್ಕ ಜೊತೆಗಿರುವೆ ಸದಾ ಅಂತಾ ಪ್ರತಾಪ್ ಬರೆದುಕೊಂಡಿದ್ದಾರೆ. ಅದಷ್ಟೇ ಅಲ್ಲ, ರಕ್ಷಕ್‌ ಕೂಡ ಸಂಗೀತಾರನ್ನು ಭೇಟಿಯಾಗಿದ್ದಾರೆ.  ಇದನ್ನೂ ಓದಿ:‘ಶಿವಶರಣ ಮೋಳಿಗೆ ಮಾರಯ್ಯ’ ಚಿತ್ರಕ್ಕೆ ಚಾಲನೆ ನೀಡಿದ ಗವಿಶ್ರೀ

    ಅಂದಹಾಗೆ, ಸಂಗೀತಾ ದೊಡ್ಮನೆಯಿಂದ ಬಂದ್ಮೇಲೆ ‘ಮಾರಿಗೋಲ್ಡ್’ ಎಂಬ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಹೊಸ ಬಗೆಯ ಕಥೆಗಳನ್ನು ನಟಿ ಕೇಳ್ತಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾ ಅನೌನ್ಸ್ ಆಗಲಿದೆ.

  • ಸಿಂಹಿಣಿ ಸಂಗೀತಾ ಕ್ಯಾಮೆರಾದಲ್ಲಿ ಸೆರೆಯಾದ ಹುಲಿ

    ಸಿಂಹಿಣಿ ಸಂಗೀತಾ ಕ್ಯಾಮೆರಾದಲ್ಲಿ ಸೆರೆಯಾದ ಹುಲಿ

    ಬಿಗ್ ಬಾಸ್ ಕನ್ನಡ 10ರ (Bigg Boss Kannada 10) ಸ್ಪರ್ಧಿ ಸಂಗೀತಾ ಅವರು ಬಂಡೀಪುರ ಅರಣ್ಯಕ್ಕೆ ಸಫಾರಿಗಾಗಿ ಹೋಗಿದ್ದಾರೆ. ಹುಲಿ ನಡೆದು ಬರುತ್ತಿರೋದನ್ನು ಸಂಗೀತಾ (Sangeetha Sringeri) ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.  ಸಿಂಹಿಣಿ ಹುಲಿಯನ್ನು ಭೇಟಿಯಾಗಲು ಬಂದಿದೆ ಎಂದು ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.

    ರಾಜ್ಯದಲ್ಲೇ ಅತಿ ಹೆಚ್ಚು ಹುಲಿಯನ್ನು ಹೊಂದಿರುವ ಕಾಡು ಎಂಬ ಹೆಗ್ಗಳಿಕೆ ಬಂಡೀಪುರಕ್ಕಿದೆ. ಹೀಗಾಗಿಯೇ ಬಂಡೀಪುರಕ್ಕೆ ಕ್ಯಾಮೆರಾ ಸಮೇತ ಹೋಗಿದ್ದ ಸಂಗೀತಾ ಶೃಂಗೇರಿ, ಹುಲಿಯನ್ನ ತೀರಾ ಹತ್ತಿರದಿಂದ ಕಣ್ತುಂಬಿಕೊಂಡಿದ್ದಾರೆ. ಒಂದು ಗಂಟೆ ಹುಲಿಯ ದರ್ಶನವನ್ನು ಮಾಡಿರೋದಾಗಿ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

    ಅಂದಹಾಗೆ, ಸಂಗೀತಾ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ರಕ್ಷಿತ್ ಶೆಟ್ಟಿ- ಸಂಗೀತಾ ನಟನೆಯ 777 ಚಾರ್ಲಿ ಜಪಾನ್‌ನಲ್ಲಿ ರಿಲೀಸ್ ಆಗುತ್ತಿದೆ. ಇದನ್ನೂ ಓದಿ:ಮದುವೆ ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾ

    ಇದೇ ಜೂನ್ 28ರಂದು ರಕ್ಷಿತ್‌ ಸಿನಿಮಾ ಸಿನಿಮಾ ಜಪಾನ್‌ನ ಹಲವು ನಗರಗಳಲ್ಲಿ ರಿಲೀಸ್ ಆಗುತ್ತಿದೆ. 2 ವರ್ಷಗಳ ನಂತರವೂ ಈ ಸಿನಿಮಾ ಕ್ರೇಜ್ ಉಳಿಸಿಕೊಂಡಿದೆ. ಜಪಾನ್ ಪ್ರತಿಷ್ಠಿತ ಸಂಸ್ಥೆಯಾದ ‘ಶೋಚಿಕೋ ಮೂವಿ’ ರಕ್ಷಿತ್ ಸಿನಿಮಾವನ್ನು ವಿತರಣೆ ಮಾಡಲು ಮುಂದಾಗಿದೆ.

    2023ರಲ್ಲಿ ‘777 ಚಾರ್ಲಿ’ ಥೈಲ್ಯಾಂಡ್‌ನಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಈ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

    2022ರಲ್ಲಿ ‘777 ಚಾರ್ಲಿ’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ರಕ್ಷಿತ್ ಜೊತೆ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ನಟಿಸಿದ್ದರು. ಚಾರ್ಲಿ ಸುತ್ತನೇ ಸುತ್ತುವ ಕಥೆಯಾಗಿದ್ರಿಂದ ಪ್ರಾಣಿ ಪ್ರಿಯರಿಗೆ ಈ ಸಿನಿಮಾ ಹೆಚ್ಚು ಇಷ್ಟವಾಗಿತ್ತು. ಇದೀಗ ಜಪಾನ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ರೆಡಿಯಾಗಿದ್ದಾರೆ.

  • ಇಶಾನಿ ಮನೆ ಕಾರ್ಯಕ್ರಮದಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ಮಸ್ತ್ ಡ್ಯಾನ್ಸ್

    ಇಶಾನಿ ಮನೆ ಕಾರ್ಯಕ್ರಮದಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ಮಸ್ತ್ ಡ್ಯಾನ್ಸ್

    ‘ಬಿಗ್ ಬಾಸ್’ ಖ್ಯಾತಿಯ ಇಶಾನಿ (Eshani) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಇದೀಗ ಬಿಗ್‌ ಬಾಸ್‌ ಬೆಡಗಿ ಇಶಾನಿ ಸಹೋದರ ಕಾರ್ತಿಕ್ ಮದುವೆ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ಆರತಕ್ಷತೆ ಕಾರ್ಯಕ್ರಮದಲ್ಲಿ ಇಶಾನಿ ಜೊತೆ ಬಿಗ್ ಬಾಸ್  ಸ್ಪರ್ಧಿಗಳು ಆಗಮಿಸಿ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯನ್ನು ಹೊಗಳಿದ ಮಾನುಷಿ ಚಿಲ್ಲರ್

    ಏ.19ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಇಶಾನಿ ಸಹೋದರನ ಮದುವೆ ಸಮಾರಂಭ ನಡೆದಿದ್ದು, ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ ಆಗಿದೆ. ಆರತಕ್ಷತೆ ವೇದಿಕೆಯಲ್ಲಿ ಇಶಾನಿ ಜೊತೆ ಸಂಗೀತಾ ಶೃಂಗೇರಿ (Sangeetha Sringeri), ನೀತು, ಪವಿ ಪೂವಪ್ಪ ಡ್ಯಾನ್ಸ್ ಮಾಡಿದ್ದಾರೆ. ಶೇಕ್ ಇಟ್ ಪುಷ್ಪವತಿ ಎಂದು ಕಲರ್‌ಫುಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಈ ಡ್ಯಾನ್ಸ್ ನೋಡಿ ನೀತು ಡ್ಯಾನ್ಸಿಂಗ್ ಸ್ಕಿಲ್‌ಗೆ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇದನ್ನೂ ಓದಿ:‘ವೀರ ಮದಕರಿ’ ಬಾಲನಟಿ ಈಗ ನಾಯಕಿ- ಮಹೇಶ್ ಬಾಬು, ರಕ್ಷಿತ್ ಸಿನಿಮಾದಲ್ಲಿ ಜೆರುಶಾ

    ಇಶಾನಿ ಸದ್ಯ ಹೊಸ ಆಲ್ಬ ಸಾಂಗ್‌ಗೆ ತಯಾರಿ ಮಾಡಿಕೊಳ್ತಿದ್ದಾರೆ. ಸಿನಿಮಾ, ರ್ಯಾಪ್‌ ಸಾಂಗ್ ಅಂತ ನಟಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದಲ್ಲಿಯೇ ಗುರುತಿಸಿಕೊಳ್ಳಬೇಕು ಎಂಬ ಇಶಾನಿಗೆ ಹಂಬಲವಿದೆ.

  • ನಟನೆಯ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ ‘ಸಿಂಹಿಣಿ’ ಸಂಗೀತಾ

    ನಟನೆಯ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ ‘ಸಿಂಹಿಣಿ’ ಸಂಗೀತಾ

    ‘777 ಚಾರ್ಲಿ’ ಚೆಲುವೆ ಸಂಗೀತಾ ಶೃಂಗೇರಿ (Sangeetha Sringeri) ಇದೀಗ ಸಿನಿಮಾ ಜೊತೆಗೆ ಉದ್ಯಮಿಯಾಗಿ ಗುರುತಿಸಿಕೊಳ್ಳಲು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಹೊಸ ಯೋಜನೆಗೆ ವಿಶೇಷವಾದ ಹೆಸರನ್ನು ನಟಿ ಆಯ್ಕೆ ಮಾಡಿದ್ದಾರೆ.

    ‘ಬಿಗ್ ಬಾಸ್’ ಕನ್ನಡ ಸೀಸನ್ 10 (Bigg Boss Kannada 10) ಮೂಲಕ ಟಿವಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಈ ಚೆಲುವೆ ಈಗ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಉಡುಪು, ಆಭರಣಗಳು, ಸ್ಪೆಕ್ಸ್‌ಗಳನ್ನು ತಮ್ಮ ಹೊಸ ಯೋಜನೆಯ ಮೂಲಕ ಜನರಿಗೆ ತಲುಪಿಸುವ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ:ಅಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಬಗ್ಗೆ ಸುಳಿವು ಕೊಟ್ಟ ಸುನೀಲ್ ಶೆಟ್ಟಿ

    ದೊಡ್ಮನೆಯ ಗಟ್ಟಿಗಿತ್ತಿಯಾಗಿ ಗುರುತಿಸಿಕೊಂಡಿದ್ದ ನಟಿಗೆ, ಸಿಂಹಿಣಿ ಎಂದು ಫ್ಯಾನ್ಸ್ ಬಿರುದು ನೀಡಿದ್ದರು. ಹಾಗಾಗಿ ‘ಸಿಂಹಿಣಿ’ (Simhini) ಎಂದೇ ನಟಿ ತಮ್ಮ ಬ್ರ್ಯಾಂಡ್‌ಗೆ (Brand) ಹೆಸರನ್ನು ಫೈನಲ್ ಮಾಡಿದ್ದಾರೆ. ಈ ಮೂಲಕ ಮೈಕಲ್ ಅಜಯ್, ತನಿಷಾರಂತೆಯೇ (Tanisha Kuppanda) ಉದ್ಯಮಿಯಾಗಿ ಸಂಗೀತಾ ಹೊಸ ಹೆಜ್ಜೆ ಇಡುತ್ತಿದ್ದಾರೆ.

    ಹರಹರ ಮಹಾದೇವ ಸೀರಿಯಲ್, 777 ಚಾರ್ಲಿ, ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ 2 ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಸಂಗೀತಾ ನಟಿಸಿದ್ದಾರೆ. ಆದರೆ ‘ಬಿಗ್ ಬಾಸ್ ಕನ್ನಡ 10’ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು.

  • ಪಕ್ಕದಲ್ಲಿ ಕೂರಿಸಿಕೊಂಡು ಚೈಲ್ಡ್ ವುಡ್ ಕ್ರಶ್ ಪರಿಚಯಿಸಿದ ಸಂಗೀತಾ

    ಪಕ್ಕದಲ್ಲಿ ಕೂರಿಸಿಕೊಂಡು ಚೈಲ್ಡ್ ವುಡ್ ಕ್ರಶ್ ಪರಿಚಯಿಸಿದ ಸಂಗೀತಾ

    ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆಯೇ ಸಂಗೀತಾ ನಟನೆಯ ಸಿನಿಮಾವೊಂದು ಬಿಡುಗಡೆಗೆ ರೆಡಿಯಾಗುತ್ತಿದೆ. ನಿನ್ನೆಯಷ್ಟೇ ಆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಈ ಸಮಯದಲ್ಲಿ ತಮ್ಮ ಚೈಲ್ಡ್ ವುಡ್ ಕ್ರಶ್ (Child Wood Crush) ಬಗ್ಗೆ ಮಾತನಾಡಿದ್ದಾರೆ ಸಂಗೀತಾ. ಅದು ಆ ಕ್ರಶ್ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಪರಿಚಯಿಸಿದ್ದಾರೆ. ಸಂಗೀತಾ ಚೈಲ್ಡ್ ವುಡ್ ಕ್ರಶ್ ಬೇರೆ ಯಾರೂ ಅಲ್ಲ ದೂದ್ ಪೇಡಾ ದಿಗಂತ್ ಎನ್ನುವುದು ವಿಶೇಷ.

    ಕ್ರಶ್ ಜೊತೆ ಸಂಗೀತಾ ಸಿನಿಮಾ

    ರಘುವರ್ಧನ್ ನಿರ್ಮಾಣ ಮಾಡಿ  ರಾಘವೇಂದ್ರ ಎಂ. ನಾಯ್ಕ. ಆಕ್ಷನ್ ಕಟ್ ಹೇಳಿರುವ ‘ಮಾರಿ ಗೋಲ್ಡ್‘ (Marigold) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬಳಿಕ ಮಾತಿಗಿಳಿದ ನಿರ್ಮಾಪಕ ರಘುವರ್ಧನ್, ಗುಣವಂತ ಸೇರಿ ಹಲವು ಚಿತ್ರ ನಿರ್ದೇಶನ ಮಾಡಿದ್ದೇನೆ. ರಾಘವೇಂದ್ರ ನಾಯ್ಕ್ ಹೇಳಿದ ಕಥೆ ಇಷ್ಟವಾಯಿತು. ನಾನು ನಿರ್ಮಾಣ ಮಾಡುತ್ತೇನೆ. ನೀವೇ ನಿರ್ದೇಶನ ಮಾಡಿ ಎಂದು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಚಿತ್ರ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ನಾಯಕ ದಿಗಂತ್ (Diganth), ನಾಯಕಿ ಸಂಗೀತಾ (Sangeetha Sringeri) ಸಹಕಾರ ಅದ್ಬುವಾಗಿತ್ತು. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರ ಚಿತ್ರ ತೆರೆಗೆ ತರುವ ಉದ್ದೇಶವಿದೆ ಸಹಕಾರವಿರಲಿ ಎಂದರು.

    ನಿರ್ದೇಶಕ  ರಾಘವೇಂದ್ರ ಎಂ, ನಾಯ್ಕ್  ಮಾತನಾಡಿ,  ಮಾರಿ ಗೋಲ್ಡ್ ಗೋಲ್ಡ್ ಬಿಸ್ಕಟ್ ಮಾರಲು ಹೋದ 4 ಜನ ಹುಡುಗರ ಕಥೆ, ಚಿತ್ರದುರ್ಗ, ಬೆಂಗಳೂರು ಸಕಲೇಶಪುರ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ಕೋವಿಡ್ ಆದ ಮೇಲೆ ಆ ನಂತರದ ಬೆಳವಣಿಗೆಗಳು ಚಿತ್ರ ವಿಳಂಬಕ್ಕೆ ಕಾರಣವಾಯಿತು. ಈಗ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ಮೂಲಕ ಪ್ರಚಾರ ಆರಂಬಿಸಿದ್ದೇವೆ ಎಂದು ಹೇಳಿದರು. ಶುದ್ದ ಮನರಂಜನೆಗೆ ಒತ್ತು ನೀಡಿ ಚಿತ್ರ ಮಾಡಲಾಗಿದೆ. ಚಿತ್ರದ ಮೂಲಕ  ದಿಗಂತ್ ಅವರನ್ನು ಬೇರೆ ರೀತಿ ತೋರಿಸುವ ಪ್ರಯತ್ನ ಮಾಡಲಾಗಿದೆ‌. ಚಿತ್ರೀಕರಣಕ್ಕೂ ಮುನ್ನ ದಿಗಂತ್ ಅವರಿಗೆ ರಿಹಸರ್ಲ್ ಮಾಡಲಾಗಿದೆ. ಮನರಂಜನೆ ಡ್ರಾಮ ಮತ್ತು ಥ್ರಿಲ್ಲರ್ ಕಥೆ ಹೊಂದಿದೆ ಎಂದು ಮಾಹಿತಿ ನೀಡಿದರು.

    ನಟ ದಿಗಂತ್ ಮಾತನಾಡಿ, ಹೆಸರಾಂತ ನಿರ್ಮಾಪಕ ಹಣ ನೀಡಿದ್ದು, ಆದರೆ ಅದು ಅಲ್ಲಿಯೇ ನಿಂತಿದೆ. ಮಾರಿಗೋಲ್ಡ್ ಮೇಲೆ ನಿರ್ದೇಶಕರ ಜೊತೆ ಸಿನಿಮಾ ಮಾಡಬಹುದು. ಕಥೆ ಇಷ್ಡವಾಯಿತು, ಯಶ್ ಶೆಟ್ಟಿ, ಸಂಗೀತ ಶೆಟ್ಟಿ, ಸಂಪತ್, ಕಾಕ್ರೋಚ್ ಸುಧಿ, ಟ್ರೈಲರ್ ಇಷ್ಟವಾದರೆ ಎಲ್ಲರಿಗೂ ಹೇಳಿ, ಸಿನಿಮಾ ಗೆದ್ದರೆ ಮತ್ತಷ್ಟು ಮಾಡೋಣ ಎಂದಿದ್ದಾರೆ. ಚಿತ್ರದಲ್ಲಿ  ಬುದ್ದಿವಂತ ಸ್ಕಾಮರ್ ಪಾತ್ರ ಎಂದಿದ್ದಾರೆ. ನಟಿ ಸಂಗೀತಾ ಶೃಂಗೇರಿ ಮಾತನಾಡಿ, ನಟ ದಿಗಂತ್ ನನ್ನ ‌ ಚೈಲ್ಡ್ ವುಡ್ ಕ್ರಷ್. ಅದನ್ನು ಅವರಿಗೂ ಹೇಳಿದ್ದೇನೆ. ಎಲ್ಲವೂ ಊಹೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಛಾಯಾಗ್ರಾಹಕ ಚಂದ್ರಶೇಖರ್ ಉತ್ತಮವಾಗಿ ತೋರಿಸಿದ್ದಾರೆ‌. ಚಿತ್ರದಿಂದ ಸುಮಾರು‌ ವರ್ಷದ ಕನಸು ನನಸಾಗಿದೆ ಎಂದರು

    ಕಲಾವಿದ ಭಜರಂಗ ಶೆಟ್ಟಿ ಮಾತನಾಡಿ,  ಮಾರಿಗೋಲ್ಡ್‌ನಲ್ಲಿ ನಟಿಸಲು ಗೆಳೆಯ ಯಶ್ ಶೆಟ್ಟಿ ಕಾರಣ ಕೋವಿಡ್ ಸಮಯದಲ್ಲಿ ಊರಲ್ಲಿ‌ ಮೀನು ಹಿಡಿಯುತ್ತಿದ್ದೆ. ಬಳಿಕ ಕಾಕ್ರೋಚ್‌ ಸುಧಿ ಮಾತನಾಡಿದರು. ನಂತರ ನಿರ್ದೇಶಕರು ಮಾತನಾಡಿದ ಮಾಹಿತಿ ಹಂಚಿಕೊಂಡರು. ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ವಿಭಿನ್ನ ಸಂಭಾಷಣೆ ಇದೆ ಎಂದರೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ , ಚಿತ್ರದಲ್ಲಿ ಎರಡೆ ಹಾಡು ಇವೆ. ಇದೊಂದು ಥ್ರಿಲ್ಲರ್ ಸಿನಿಮಾ ಆಕ್ಷನ್ ಸಿನಿಮಾ, ಸಿನಿಮಾ‌ ಹಿಟ್ ಆದರೆ ದಿಗಂತ್ ಆಕ್ಷನ್ ಹೀರೋ ಆಗಲಿದ್ದಾರೆ. ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಹಾಡು ಬರೆದಿದ್ದಾರೆ. ಗೆಲವಿನ ಆಶಾಕಿರಣ ಇದೆ ಎಂದರು.

     

    ಛಾಯಾಗ್ರಾಹಕ ಚಂದ್ರಶೇಖರ್ ಹೊಸ ಜಾನರ್ ಸಿನಿಮಾ, ಥ್ರಿಲ್ಲರ್ ಸಿನಿಮಾ ಮಾಡಿರಲಿಲ್ಲ. ನಿರ್ಮಾಪಕ ರಘುವರ್ಧನ್ ಜೊತೆ ಗುಣವಂತದಲ್ಲಿ ಕೆಲಸ ಮಾಡಿದ್ದೆ. ಈಗ ಅವರ ನಿರ್ಮಾಣದಲ್ಲಿ ಕೆಲಸ ಮಾಡಿದ್ದೇವೆ ಎಂದರು. ಚಿತ್ರದಲ್ಲಿ ದಿಗಂತ್ ಮಂಚಾಲೆ, ಸಂಗೀತ ಶ್ರಂಗೇರಿ, ಸಂಪತ್ ಮೈತ್ರೇಯ, ಯಶ್ ಶೆಟ್ಟಿ, ಕಾಕ್ರೋಚ್ ಸುಧೀ, ವಜ್ರಾಂಗ್ ಶೆಟ್ಟಿ, ಬಾಲಾ ರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ‘ಮಾರಿಗೋಲ್ಡ್’ ಹಿಂದೆ ಬಿದ್ದ ಸಂಗೀತಾ ಶೃಂಗೇರಿ: ಮಜವಾಗಿದೆ ಟೀಸರ್

    ‘ಮಾರಿಗೋಲ್ಡ್’ ಹಿಂದೆ ಬಿದ್ದ ಸಂಗೀತಾ ಶೃಂಗೇರಿ: ಮಜವಾಗಿದೆ ಟೀಸರ್

    ಘುವರ್ಧನ್ ನಿರ್ಮಾಣ ಮಾಡಿ  ರಾಘವೇಂದ್ರ ಎಂ. ನಾಯ್ಕ. ಆಕ್ಷನ್ ಕಟ್ ಹೇಳಿರುವ ‘ಮಾರಿ ಗೋಲ್ಡ್‘ (Marigold) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬಳಿಕ ಮಾತಿಗಿಳಿದ ನಿರ್ಮಾಪಕ ರಘುವರ್ಧನ್, ಗುಣವಂತ ಸೇರಿ ಹಲವು ಚಿತ್ರ ನಿರ್ದೇಶನ ಮಾಡಿದ್ದೇನೆ. ರಾಘವೇಂದ್ರ ನಾಯ್ಕ್ ಹೇಳಿದ ಕಥೆ ಇಷ್ಟವಾಯಿತು. ನಾನು ನಿರ್ಮಾಣ ಮಾಡುತ್ತೇನೆ. ನೀವೇ ನಿರ್ದೇಶನ ಮಾಡಿ ಎಂದು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಚಿತ್ರ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ನಾಯಕ ದಿಗಂತ್ (Diganth), ನಾಯಕಿ ಸಂಗೀತಾ (Sangeetha Sringeri) ಸಹಕಾರ ಅದ್ಬುವಾಗಿತ್ತು. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರ ಚಿತ್ರ ತೆರೆಗೆ ತರುವ ಉದ್ದೇಶವಿದೆ ಸಹಕಾರವಿರಲಿ ಎಂದರು.

    ನಿರ್ದೇಶಕ  ರಾಘವೇಂದ್ರ ಎಂ, ನಾಯ್ಕ್  ಮಾತನಾಡಿ,  ಮಾರಿ ಗೋಲ್ಡ್ ಗೋಲ್ಡ್ ಬಿಸ್ಕಟ್ ಮಾರಲು ಹೋದ 4 ಜನ ಹುಡುಗರ ಕಥೆ, ಚಿತ್ರದುರ್ಗ, ಬೆಂಗಳೂರು ಸಕಲೇಶಪುರ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ಕೋವಿಡ್ ಆದ ಮೇಲೆ ಆ ನಂತರದ ಬೆಳವಣಿಗೆಗಳು ಚಿತ್ರ ವಿಳಂಬಕ್ಕೆ ಕಾರಣವಾಯಿತು. ಈಗ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ಮೂಲಕ ಪ್ರಚಾರ ಆರಂಬಿಸಿದ್ದೇವೆ ಎಂದು ಹೇಳಿದರು. ಶುದ್ದ ಮನರಂಜನೆಗೆ ಒತ್ತು ನೀಡಿ ಚಿತ್ರ ಮಾಡಲಾಗಿದೆ. ಚಿತ್ರದ ಮೂಲಕ  ದಿಗಂತ್ ಅವರನ್ನು ಬೇರೆ ರೀತಿ ತೋರಿಸುವ ಪ್ರಯತ್ನ ಮಾಡಲಾಗಿದೆ‌. ಚಿತ್ರೀಕರಣಕ್ಕೂ ಮುನ್ನ ದಿಗಂತ್ ಅವರಿಗೆ ರಿಹಸರ್ಲ್ ಮಾಡಲಾಗಿದೆ. ಮನರಂಜನೆ ಡ್ರಾಮ ಮತ್ತು ಥ್ರಿಲ್ಲರ್ ಕಥೆ ಹೊಂದಿದೆ ಎಂದು ಮಾಹಿತಿ ನೀಡಿದರು.

    ನಟ ದಿಗಂತ್ ಮಾತನಾಡಿ, ಹೆಸರಾಂತ ನಿರ್ಮಾಪಕ ಹಣ ನೀಡಿದ್ದು, ಆದರೆ ಅದು ಅಲ್ಲಿಯೇ ನಿಂತಿದೆ. ಮಾರಿಗೋಲ್ಡ್ ಮೇಲೆ ನಿರ್ದೇಶಕರ ಜೊತೆ ಸಿನಿಮಾ ಮಾಡಬಹುದು. ಕಥೆ ಇಷ್ಡವಾಯಿತು, ಯಶ್ ಶೆಟ್ಟಿ, ಸಂಗೀತ ಶೆಟ್ಟಿ, ಸಂಪತ್, ಕಾಕ್ರೋಚ್ ಸುಧಿ, ಟ್ರೈಲರ್ ಇಷ್ಟವಾದರೆ ಎಲ್ಲರಿಗೂ ಹೇಳಿ, ಸಿನಿಮಾ ಗೆದ್ದರೆ ಮತ್ತಷ್ಟು ಮಾಡೋಣ ಎಂದಿದ್ದಾರೆ. ಚಿತ್ರದಲ್ಲಿ  ಬುದ್ದಿವಂತ ಸ್ಕಾಮರ್ ಪಾತ್ರ ಎಂದಿದ್ದಾರೆ. ನಟಿ ಸಂಗೀತಾ ಶೃಂಗೇರಿ ಮಾತನಾಡಿ, ನಟ ದಿಗಂತ್ ನನ್ನ ‌ ಚೈಲ್ಡ್ ವುಡ್ ಕ್ರಷ್. ಅದನ್ನು ಅವರಿಗೂ ಹೇಳಿದ್ದೇನೆ. ಎಲ್ಲವೂ ಊಹೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಛಾಯಾಗ್ರಾಹಕ ಚಂದ್ರಶೇಖರ್ ಉತ್ತಮವಾಗಿ ತೋರಿಸಿದ್ದಾರೆ‌. ಚಿತ್ರದಿಂದ ಸುಮಾರು‌ ವರ್ಷದ ಕನಸು ನನಸಾಗಿದೆ ಎಂದರು

    ಕಲಾವಿದ ಭಜರಂಗ ಶೆಟ್ಟಿ ಮಾತನಾಡಿ,  ಮಾರಿಗೋಲ್ಡ್‌ನಲ್ಲಿ ನಟಿಸಲು ಗೆಳೆಯ ಯಶ್ ಶೆಟ್ಟಿ ಕಾರಣ ಕೋವಿಡ್ ಸಮಯದಲ್ಲಿ ಊರಲ್ಲಿ‌ ಮೀನು ಹಿಡಿಯುತ್ತಿದ್ದೆ. ಬಳಿಕ ಕಾಕ್ರೋಚ್‌ ಸುಧಿ ಮಾತನಾಡಿದರು. ನಂತರ ನಿರ್ದೇಶಕರು ಮಾತನಾಡಿದ ಮಾಹಿತಿ ಹಂಚಿಕೊಂಡರು. ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ವಿಭಿನ್ನ ಸಂಭಾಷಣೆ ಇದೆ ಎಂದರೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ , ಚಿತ್ರದಲ್ಲಿ ಎರಡೆ ಹಾಡು ಇವೆ. ಇದೊಂದು ಥ್ರಿಲ್ಲರ್ ಸಿನಿಮಾ ಆಕ್ಷನ್ ಸಿನಿಮಾ, ಸಿನಿಮಾ‌ ಹಿಟ್ ಆದರೆ ದಿಗಂತ್ ಆಕ್ಷನ್ ಹೀರೋ ಆಗಲಿದ್ದಾರೆ. ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಹಾಡು ಬರೆದಿದ್ದಾರೆ. ಗೆಲವಿನ ಆಶಾಕಿರಣ ಇದೆ ಎಂದರು.

    ಛಾಯಾಗ್ರಾಹಕ ಚಂದ್ರಶೇಖರ್ ಹೊಸ ಜಾನರ್ ಸಿನಿಮಾ, ಥ್ರಿಲ್ಲರ್ ಸಿನಿಮಾ ಮಾಡಿರಲಿಲ್ಲ. ನಿರ್ಮಾಪಕ ರಘುವರ್ಧನ್ ಜೊತೆ ಗುಣವಂತದಲ್ಲಿ ಕೆಲಸ ಮಾಡಿದ್ದೆ. ಈಗ ಅವರ ನಿರ್ಮಾಣದಲ್ಲಿ ಕೆಲಸ ಮಾಡಿದ್ದೇವೆ ಎಂದರು. ಚಿತ್ರದಲ್ಲಿ ದಿಗಂತ್ ಮಂಚಾಲೆ, ಸಂಗೀತ ಶ್ರಂಗೇರಿ, ಸಂಪತ್ ಮೈತ್ರೇಯ, ಯಶ್ ಶೆಟ್ಟಿ, ಕಾಕ್ರೋಚ್ ಸುಧೀ, ವಜ್ರಾಂಗ್ ಶೆಟ್ಟಿ, ಬಾಲಾ ರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

     

    ಚಿತ್ರಕ್ಕೆ  ವೀ‌ರ್ ಸಮರ್ಥ್ ಸಂಗೀತ,  ರಘು ನಿಡುವಳ್ಳಿ  ಸಂಭಾಷಣೆಣ , ಕೆ.ಎಸ್. ಚಂದ್ರಶೇಖರ್  ಛಾಯಾಗ್ರಹಣ, ಕೆ.ಎಂ. ಪ್ರಕಾಶ್  ಸಂಕಲನ, ಪ್ರಶಾಂತ್ ಗೌಡ ಕಲೆ, ನೃತ್ಯ ಕಲೈ, ಸಾಹಸ ಅರ್ಜುನ್ ರಾಜ್ ಹಾಗೂ ನಿರ್ಮಾಣ ನಿರ್ವಹಣೆ: ಜೇವಿಯ‌ರ್ ಫರ್ನಾಂಡಿಸ್‌ ಚಿತ್ರಕ್ಕಿದೆ.

  • ನಮ್ಮ ಬಿಗ್ ಬಾಸ್ ನೀವೇ- ಕಿಚ್ಚನಿಗೆ ಸೆಲ್ಯೂಟ್ ಹೊಡೆದ ಸಂಗೀತಾ

    ನಮ್ಮ ಬಿಗ್ ಬಾಸ್ ನೀವೇ- ಕಿಚ್ಚನಿಗೆ ಸೆಲ್ಯೂಟ್ ಹೊಡೆದ ಸಂಗೀತಾ

    ಬಿಗ್ ಬಾಸ್ ಮನೆಯ (Bigg Boss Kannada 10) ಆಟಕ್ಕೆ ತೆರೆಬಿದ್ದಿದೆ. ಈ ಬೆನ್ನಲ್ಲೇ ಕಿಚ್ಚನ ಜೊತೆಗಿ ಸಂಗೀತಾ ಶೃಂಗೇರಿ ಸ್ಪೆಷಲ್ ಫೋಟೋ ಶೇರ್ ಮಾಡಿ ವಿಶೇಷ ಸಾಲುಗಳನ್ನು ಬರೆದಿದ್ದಾರೆ. ‘ನಮ್ಮ ಬಿಗ್ ಬಾಸ್ ನೀವೇ’ ಎಂದು ಸಂಗೀತಾ(Sangeetha Sringeri) ಹಾಡಿಹೊಗಳಿದ್ದಾರೆ. ಇದನ್ನೂ ಓದಿ:‘ಡೊಳ್ಳು’ ನಂತರ ಮತ್ತೆ ಒಂದಾಯಿತು ರಾಷ್ಟ್ರ ಪ್ರಶಸ್ತಿ ವಿಜೇತ ಜೋಡಿ

    ಬಿಗ್ ಬಾಸ್ ಕನ್ನಡ ಸೀಸನ್ 10ರ (Bigg Boss Kannada 10) ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. 2ನೇ ರನ್ನರ್ ಅಪ್ ಆಗಿ ಸಂಗೀತಾ ಸ್ಥಾನ ಪಡೆದಿದ್ದಾರೆ. ಇದೀಗ ಕಿಚ್ಚನ ಬಗ್ಗೆ ವಿಶೇಷವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. ನಮ್ಮ ಕರುನಾಡ ‘ಅಭಿನಯ ಚಕ್ರವರ್ತಿ’, ನಮ್ಮೆಲ್ಲರ ಪ್ರೀತಿಯಾ ಕಿಚ್ಚನಿಗೆ ನಾನು ಎಂದೆಂದೂ ಆಭಾರಿ. ಮೊದಲನೇ ವಾರದಿಂದ ಕೊನೆಯ ದಿನದವರೆಗೂ ಬಹಳ ಸೂಕ್ಷ್ಮತೆಯಿಂದ, ಕಾಳಜಿಯಿಂದ ಕಂಡಿರಿ, ತಿದ್ದಿ ಸರಿ ದಾರಿ ತೋರಿದಿರಿ. ನಮ್ಮ ಬಿಗ್ ಬಾಸ್ ನೀವೇ ಎಂದು ನಟಿ ಬರೆದಿದ್ದಾರೆ.

    ಕಷ್ಟಕರವಾದ ಬಿಗ್ ಬಾಸ್ ಜರ್ನಿಯನ್ನು ಅಡ್ವೆಂಚರ್ ಆಗಿ ಬದಲಾಯಿಸಿದ ಕಿಚ್ಚ ಅವರಿಗೆ ಧನ್ಯವಾದ. ನಿಮ್ಮ ನಿರೂಪಣೆ ಈ ಶೋವನ್ನು ಅದ್ಭುತವಾಗಿಸಿದೆ ಎಂದು ನಟಿ ಬರೆದಿದ್ದಾರೆ. ಫಿನಾಲೆ ದಿನ ಕಿಚ್ಚನ ಜೊತೆ ನಿಂತಿದ್ದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    ಕೋಟಿ ಕೊಟ್ರು ಬಿಗ್‌ ಬಾಸ್‌ಗೆ ಹೋಗಲ್ಲ ಎಂದಿದ್ದ ನಟಿ ಆನಂತರ ಬಿಗ್‌ ಬಾಸ್‌ ಕನ್ನಡ 10ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಂಗೀತಾ ಅಚ್ಚರಿ ಮೂಡಿಸಿದ್ದರು. ‘777 ಚಾರ್ಲಿ’ (777 Charlie Film) ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿರುವ  ಸಂಗೀತಾ ಬಿಗ್‌ ಬಾಸ್‌ನಿಂದ ಟಿವಿ ಪ್ರೇಕ್ಷಕರ ಮನಗೆದ್ದರು.

  • ‘ಬಿಗ್‌ ಬಾಸ್‌’ ಶೋ ಮುಗಿದ ಬಳಿಕ ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸ್ಪರ್ಧಿಗಳು

    ‘ಬಿಗ್‌ ಬಾಸ್‌’ ಶೋ ಮುಗಿದ ಬಳಿಕ ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸ್ಪರ್ಧಿಗಳು

    ‘ಬಿಗ್ ಬಾಸ್’ ಕನ್ನಡ ಸೀಸನ್ 10ರ (Bigg Boss Kannada 10) ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ತೆರೆಬಿದ್ದಿದೆ. ದೊಡ್ಮನೆಯ ಆಟ ಮುಗಿದ ಮೇಲೆ ಮತ್ತೆ ಬಿಗ್‌ ಬಾಸ್‌ ಸ್ಪರ್ಧಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಜ.28ರಂದು ಬಿಗ್ ಬಾಸ್ ಫಿನಾಲೆಗೆ ಬ್ರೇಕ್ ಬಿದ್ದಿತ್ತು. ಇದಾದ 3 ದಿನಗಳ ಬಳಿಕ ಇಂದು (ಜ.31) ಭೇಟಿಯಾಗಿದ್ದಾರೆ. ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಜೊತೆ ವಿನಯ್, ಸಂಗೀತಾ (Sangeetha), ನಮ್ರತಾ ಕೂಡ ಹೈಲೆಟ್ ಆಗಿದ್ದರು. ಇದೀಗ ಅವರ ಜೊತೆ ಕ್ಯಾಮೆರಾಗೆ ನಮ್ರತಾ ಪೋಸ್ ನೀಡಿದ್ದಾರೆ. ಭೇಟಿಯಾಗಿರುವ ಫೋಟೋಗಳನ್ನು ನಮ್ರತಾ (Namratha Gowda) ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮಲೇಷಿಯಾದಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

    ಕಪ್ಪು ಬಣ್ಣದ ಸೂಟ್‌ನಲ್ಲಿ ವಿನಯ್ ಹೈಲೆಟ್ ಆಗಿದ್ದರೆ, ಹಸಿರು ಮತ್ತು ಪಿಂಕ್ ಬಣ್ಣದ ಸೀರೆಯಲ್ಲಿ ನಮ್ರತಾ ಮಿಂಚಿದ್ದಾರೆ. ಸಂಗೀತಾ ಮತ್ತು ಕಾರ್ತಿಕ್ ಕೂಡ ಫೋಟೋಗೆ ನಮ್ರತಾ ಜೊತೆ ಪೋಸ್ ನೀಡಿದ್ದಾರೆ. ಇದು ವಾಹಿನಿಯ ಸ್ಪೆಷಲ್ ಶೂಟ್‌ವೊಂದಕ್ಕಾಗಿ ‘ಬಿಗ್ ಬಾಸ್’ ಸ್ಪರ್ಧಿಗಳು ಭಾಗಿಯಾಗಿದ್ದಾರೆ.

    ಈ ಬಾರಿ ‘ಬಿಗ್ ಬಾಸ್’ ಸೀಸನ್ 10 ರಿಯಾಲಿಟಿ ಶೋ ಕಿರುತೆರೆಯಲ್ಲಿ ಸೆನ್ಸೇಷನ್ ಮೂಡಿಸಿತ್ತು. ಈ ಸೀಸನ್‌ನಲ್ಲಿ ಪ್ರತಿಯೊಂದರು ಕೂಡ ಹೈಲೆಟ್ ಆಗಿದ್ದರು. ಅದರಲ್ಲೂ ಕಾರ್ತಿಕ್, ಸಂಗೀತಾ, ವಿನಯ್ ಜಗಳ ಇಡೀ ಸೀಸನ್‌ನಲ್ಲಿ ಹವಾ ಕ್ರಿಯೇಟ್ ಮಾಡಿತ್ತು.

  • Bigg Boss Kannada: ಟ್ರೋಫಿ ಸಿಗದೇ ಇರಬಹುದು, ನಿಮ್ಮ ಪ್ರೀತಿ ಸಿಕ್ಕಿದೆ: ಸಂಗೀತಾ

    Bigg Boss Kannada: ಟ್ರೋಫಿ ಸಿಗದೇ ಇರಬಹುದು, ನಿಮ್ಮ ಪ್ರೀತಿ ಸಿಕ್ಕಿದೆ: ಸಂಗೀತಾ

    ಬಾರಿ ಬಿಗ್ ಬಾಸ್ (Bigg Boss Kannada) ಟ್ರೋಫಿ ನಟಿ ಸಂಗೀತಾ ಶೃಂಗೇರಿ (Sangeetha Sringeri) ಸಿಗಲಿದೆ ಎಂದೇ ನಂಬಲಾಗಿತ್ತು. ಮೊದಲ ದಿನದಂದು ಕೊನೆಯ ವಾರದವರೆಗೂ ಸಂಗೀತಾ ಉತ್ತಮ ರೀತಿಯಲ್ಲೇ ಸ್ಪರ್ಧೆ ನೀಡಿದ್ದರು. ಲೇಡಿ ರೆಬಲ್ ಅಂತಾನೇ ಫೇಮಸ್ ಆಗಿದ್ದರು. ಜೊತೆಗೆ ಫಿನಾಲೆಗೆ ಆಯ್ಕೆಯಾದ ಮೊದಲ ಕಂಟೆಸ್ಟ್ ಅವರಾಗಿದ್ದರು. ಹಾಗಾಗಿ ಸಂಗೀತಾನೇ ಈ ಬಾರಿಯ ವಿನ್ನರ್ ಎಂದು ಹೇಳಲಾಗಿತ್ತು. ಕೊನೆಯ ಕ್ಷಣದಲ್ಲಿ ಚಿತ್ರವಣೇ ಬದಲಾಗಿದೆ.

    ಈ ಕುರಿತಂತೆ ಸಂಗೀತಾ ಶೃಂಗೇರಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಟ್ರೋಫಿ ಗೆಲ್ಲದೇ ಇರುವ ಕುರಿತಂತೆಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್ ಬಾಸ್ ಜರ್ನಿ, ಜನರ ಪ್ರೀತಿ ಹಾಗೂ ತಮ್ಮ ಮೇಲೆ ಇಟ್ಟಂತೆ ನಂಬಿಕೆಯ ಬಗ್ಗೆ ಅವರು ವಿವರವಾಗಿ ಬರೆದುಕೊಂಡಿದ್ದಾರೆ.

    ನನ್ನ ಪ್ರೀತಿಯ ಅಭಿಮಾನಿಗಳಿಗೆ, ಪ್ರೋತ್ಸಾಹಕರಿಗೆ, ಕನ್ನಡದ ಜನೆತೆಗೆ ನಿಮ್ಮ ಸಂಗೀತಾ ಮಾಡುವ ನಮಸ್ಕಾರಗಳು. ಎಲ್ಲಾ ಹೇಗಿದ್ದೀರಿ? ನಮ್ಮ ಬಿಗ್ ಬಾಸ್ ಹೇಗಿತ್ತು? ನನ್ನ ಬಿಗ್ ಬಾಸ್ ಜರ್ನಿ ಅಂತೂ ನಿಮಗೆ ಗೊತ್ತೇ ಇದೆ. ಆದರೆ, ನೀವು ಇಲ್ಲಿ ನನಗೆ ಕೊಟ್ಟ ಪ್ರೀತಿ ಸಹಕಾರ ಈಗ ತಿಳಿಯುತ್ತಿರುವ ನನಗೆ, ನಿಮಗೆ ಹೇಗೆ ನನ್ನ ಧನ್ಯವಾದ ಅರ್ಪಿಸಲಿ ತಿಳಿಯದಾಗಿದೆ. ನನ್ನ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ನಾನು ಎಂದಿಗೂ ಆಭಾರಿ. ಬಿಗ್ ಬಾಸ್ ಟ್ರೋಫಿ ನನಗೆ ಸಿಗದಿರಬಹುದು, ನಿಮ್ಮ ಪ್ರೀತಿ ನನಗೆ ನಿಜವಾದ ಗೆಲುವನ್ನೇ ತಂದುಕೊಟ್ಟಿದೆ ಎಂದು ಅವರು ಬರೆದುಕೊಂಡಿದ್ದಾರೆ.

     

    ಈ ಬಾರಿ ಪ್ರಬಲ ಕಂಟೆಸ್ಟೆಂಟ್ ಆಗಿದ್ದ ವಿನಯ್ ಅವರಿಗೆ ಸರಿಯಾದ ರೀತಿಯಲ್ಲಿ ಠಕ್ಕರ್ ಕೊಟ್ಟಿದ್ದು ಸಂಗೀತಾ. ವಾರದಿಂದ ವಾರಕ್ಕೆ ಅನೇಕ ರೀತಿಯಲ್ಲಿ ಬದಲಾದ ಮೊದಲ ಕಂಟೆಸ್ಟೆಂಟ್ ಕೂಡ ಇವರಾಗಿದ್ದಾರೆ. ಆದರೆ, ಮೂರನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.