Tag: ಸಂಗೀತಾ ಫೋಗಟ್

  • ಸಮಸ್ಯೆ ಬಗೆಹರಿದರೆ ಮಾತ್ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತೇನೆ: ಪಟ್ಟು ಬಿಡದ ಸಾಕ್ಷಿ ಮಲಿಕ್

    ಸಮಸ್ಯೆ ಬಗೆಹರಿದರೆ ಮಾತ್ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತೇನೆ: ಪಟ್ಟು ಬಿಡದ ಸಾಕ್ಷಿ ಮಲಿಕ್

    ನವದೆಹಲಿ: ಸಮಸ್ಯೆ ಬಗೆಹರಿದರೆ ಮಾತ್ರ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾಗವಹಿಸುತ್ತೇನೆ ಎಂದು ಲೈಂಗಿಕ ಪ್ರಕರಣದ ಆರೋಪ ಹೊತ್ತಿರುವ ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಸಿಂಗ್ (Brij Bhushan Sharan Singh) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಲ್ಲಿ (Wrestlers) ಒಬ್ಬರಾದ ಸಾಕ್ಷಿ ಮಲಿಕ್ (Sakshi Malik) ಸ್ಪಷ್ಟಪಡಿಸಿದ್ದಾರೆ.

    ಪ್ರಕರಣದಲ್ಲಿ ಪ್ರತಿದಿನ ಆಗುತ್ತಿರುವ ಬೆಳವಣಿಗೆಯಿಂದ ಮಾನಸಿಕವಾಗಿ ಅನುಭವಿಸುತ್ತಿರುವ ಹಿಂಸೆಯನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪೊಲೀಸರೊಂದಿಗೆ ಪ್ರತಿದಿನ ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದೇವೆ. ಈ ವಿಚಾರ ಬಗೆಹರಿಯುವ ವರೆಗೂ ಏಷ್ಯನ್ ಗೇಮ್ಸ್‌ನಲ್ಲಿ ಯಾವ ತಯಾರಿಯನ್ನೂ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ದೇಶದ ಕೋಟ್ಯಂತರ ಜನ ಗಡ್ಡ ಬಿಟ್ಟಿದ್ದಾರೆ, ಅವರೆಲ್ಲ ಲಾಡೆನ್ ಆಗುತ್ತಾರಾ? – ಬಿಜೆಪಿಗೆ ಮನೋಜ್ ಝಾ ಪ್ರಶ್ನೆ

    ಕುಸ್ತಿಪಟು ಸಂಗೀತಾ ಫೋಗಟ್ ಅವರನ್ನು ಘಟನೆಯ ಮರುಸೃಷ್ಟಿಗಾಗಿ ಪೊಲೀಸರು ಶುಕ್ರವಾರ ಬ್ರಿಜ್ ಭೂಷಣ್ ನಿವಾಸಕ್ಕೂ ಕರೆದೊಯ್ದಿದ್ದರು. ಈ ವೇಳೆ ಲೈಂಗಿಕ ದೌರ್ಜನ್ಯ ನಡೆದ ಘಟನೆಯನ್ನು ನೆನಪಿಸಿಕೊಳ್ಳುವಂತೆ ಪೊಲೀಸರು ತಿಳಿಸಿದ್ದರು. ಅಲ್ಲದೇ ಅರ್ಧ ಗಂಟೆಗಳ ಕಾಲ ಕಿರುಕುಳ ಕುರಿತಾದ ಘಟನೆಯ ಮರುಸೃಷ್ಟಿ ಮಾಡಿ ವಾಪಾಸ್ ಆಗಿದ್ದರು. ಇದನ್ನೂ ಓದಿ: ಬೆಂಗ್ಳೂರಲ್ಲೂ ದೆಹಲಿ ಮಾದರಿಯ ಮರ್ಡರ್ – ಮಹಿಳೆಯನ್ನ ಕೊಂದು, ದೇಹ ಪೀಸ್ ಪೀಸ್ ಮಾಡಿದ ಹಂತಕರು

  • ಬ್ರಿಜ್ ಭೂಷಣ್ ಮನೆಗೆ ಸಂಗೀತಾ ಫೋಗಟ್ – ಪೊಲೀಸರಿಂದ ಘಟನೆಯ ಮರುಸೃಷ್ಟಿ

    ಬ್ರಿಜ್ ಭೂಷಣ್ ಮನೆಗೆ ಸಂಗೀತಾ ಫೋಗಟ್ – ಪೊಲೀಸರಿಂದ ಘಟನೆಯ ಮರುಸೃಷ್ಟಿ

    ನವದೆಹಲಿ: ದೆಹಲಿ ಪೊಲೀಸರು (Delhi Police) ಕುಸ್ತಿಪಟು (Wrestler) ಸಂಗೀತಾ ಫೋಗಟ್ (Sangeeta Phogat) ಅವರನ್ನು ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳಕ್ಕೆ ಕಾರಣವಾದ ಘಟನೆಗಳನ್ನು ಮರುಸೃಷ್ಟಿಸಿದ್ದಾರೆ.

    ಶುಕ್ರವಾರ ಮಧ್ಯಾಹ್ನ 1:30ಕ್ಕೆ ಮಹಿಳಾ ಅಧಿಕಾರಿಗಳು ಸಂಗೀತಾ ಫೋಗಟ್ ಅವರನ್ನು ದೆಹಲಿಯಲ್ಲಿರುವ ಬ್ರಿಜ್ ಭೂಷಣ್ ಅವರ ಅಧಿಕೃತ ನಿವಾಸಕ್ಕೆ ಕರೆದೊಯ್ದಿದ್ದಾರೆ. 30 ನಿಮಿಷಗಳ ಕಾಲ ಅವರ ಮನೆಯಲ್ಲಿ ದೃಶ್ಯವನ್ನು ಮರುಸೃಷ್ಟಿಸಲಾಯಿತು. ಅಲ್ಲದೇ ಕಿರುಕುಳವನ್ನು ಎದುರಿಸಿದ ಸ್ಥಳಗಳನ್ನು ನೆನಪಿಸಿಕೊಳ್ಳುವಂತೆ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಇಟಿ: 30,000 ಮಂದಿಯ ಆರ್‌ಡಿ ಸಂಖ್ಯೆ ಹೊಂದಾಣಿಕೆ ಆಗುತ್ತಿಲ್ಲ, ಇಂದೇ ಸರಿ ಮಾಡಿಕೊಳ್ಳಿ

    ಇಲ್ಲಿಯವರೆಗೂ ಎಸ್‍ಐಟಿ ಈ ಪ್ರಕರಣದಲ್ಲಿ 180 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದೆ. ಸಂಸದನ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳ ತನಿಖಾ ವರದಿಯನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ.

    ಸಿಂಗ್ ವಿರುದ್ಧ ಅಪ್ರಾಪ್ತ ವಯಸ್ಕರು ಸೇರಿದಂತೆ ಏಳು ಮಹಿಳಾ ಗ್ರಾಪ್ಲರ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊರಿಸಲಾಗಿದೆ. ಅವರನ್ನು ಬಂಧಿಸುವಂತೆ ಒತ್ತಾಯಿಸಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್, ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದರು.

    ಪ್ರತಿಭಟನಾನಿರತ ಕುಸ್ತಿಪಟುಗಳು ಬುಧವಾರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಸಚಿವ ಜೂನ್ ಅಂತ್ಯದ ಒಳಗಾಗಿ ಸಿಂಗ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ಭರವಸೆ ನೀಡಿದ್ದರು. ಅಲ್ಲದೇ ತಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ರದ್ದು ಗೊಳಿಸುವಂತೆ ಕುಸ್ತಿಪಟುಗಳು ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದಕ್ಕೆ ಶಾಲೆಗೆ ಬರಲು ಮಕ್ಕಳು ಹಿಂದೇಟು – ಶಾಲೆ ನೆಲಸಮ