Tag: ಸಂಗಮೇಶ್

  • ಸಂಗಮೇಶ್ ಮೇಲೆ 307 ಕೇಸ್ ಹಾಕಿಸ್ಬುಟ್ಟಿದ್ದೀಯಾ ನೀನು – ಸಿದ್ದು, ರೇಣುಕಾಚಾರ್ಯ ಕಾಮಿಡಿ

    ಸಂಗಮೇಶ್ ಮೇಲೆ 307 ಕೇಸ್ ಹಾಕಿಸ್ಬುಟ್ಟಿದ್ದೀಯಾ ನೀನು – ಸಿದ್ದು, ರೇಣುಕಾಚಾರ್ಯ ಕಾಮಿಡಿ

    ಬೆಂಗಳೂರು: ರಾಜಕೀಯ ನಾಯಕರು ಎಷ್ಟೇ ಕಿತ್ತಾಡಿಕೊಂಡರೂ ಪರಸ್ಪರ ಭೇಟಿಯಾದಾಗ ನಾವೆಲ್ಲ ಒಂದೇ ಎಂಬಂತೆ ನಡೆದುಕೊಳ್ಳುತ್ತಾರೆ. ಅಂತೆಯೇ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಎಂ.ಪಿ ರೇಣುಕಾಚಾರ್ಯ ಇಬ್ಬರು ಹಾಸ್ಯ ಮಾತುಗಳನ್ನಾಡಿದರು.

    ರೇಣುಕಾಚಾರ್ಯ ಅವರು ಇಂದು ವಿಧಾನಸೌಧದ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಅದೇ ವೇಳೆ ತಮ್ಮ ಬಳಗದೊಂದಿಗೆ ಸಿದ್ದರಾಮಯ್ಯ ಬಂದಿದ್ದಾರೆ. ಅಲ್ಲದೆ ರೇಣುಕಾಚಾರ್ಯರನ್ನು ನೋಡಿ ಏನಪ್ಪಾ ಅಂತ ಹೇಳಿದ್ದಾರೆ. ಇದೇ ವೇಳೆ ಜಮೀರ್ ಅವರು, ರೇಣುಕಚಾರ್ಯ ಅವರೇ ಸಾಹೆಬ್ರು ಕರೀತಿದ್ದಾರೆ. ಬೇಗ ಮುಗಿಸ್ಬೇಕಂತೆ ಅಂತ ಹೇಳುತ್ತಾ ತಮಾಷೆ ಮಾಡಿಕೊಂಡು ಮುಂದೆ ಹೋಗಿದ್ದಾರೆ. ಇದನ್ನೂ ಓದಿ: ಸದನದ ಬಾವಿಯಲ್ಲಿ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ – ಸಂಗಮೇಶ್ 1 ವಾರ ಅಮಾನತು

    ಸಿದ್ದರಾಮಯ್ಯರನ್ನು ಕಂಡ ರೇಣುಕಾಚಾರ್ಯ ನನ್ನ ಮಾತು ಮುಗೀತು ಬನ್ನಿ ಬನ್ನಿ ಎಂದು ಕರೆದಿದ್ದಾರೆ. ತಮ್ಮದುರು ಸಿದ್ದರಾಮಯ್ಯ ಹಾಗೂ ಬಳಗ ಬರುತ್ತಿದ್ದಂತೆಯೇ ಸಂಗಣ್ಣನ ಕರೆದುಕೊಂಡು ಬಂದಿದ್ದೀರಿ ಸಾರ್ ಅಂತ ನಕ್ಕಿದ್ದಾರೆ. ಆಗ ಸಿದ್ದರಾಮಯ್ಯ ಅವರು, ಅವರ ಮೇಲೆ 307 ಕೇಸ್ ಹಾಕಿಸಿ ಬಿಟ್ಟಿದ್ದಿಯಾ ನೀನು ಅಂದಾಗ ಅವನು ಬಾರಿ ಬುದ್ಧಿವಂತ ಸಾರ್. ಅವನಷ್ಟು ಕಿಲಾಡಿ, ಬುದ್ಧಿವಂತ ಯಾರಿಲ್ಲ ಎಂದು ಹೇಳುತ್ತಾ ಕೈ ಮುಗಿದು ಮುಂದೆ ಸಾಗಿದ ಪ್ರಸಂಗ ನಡೆಯಿತು.

  • ಬಿಎಸ್‍ವೈ ಅಡ್ಡಾದಲ್ಲಿ ಅಖಾಡಕ್ಕೆ ಇಳಿದ ದಿನವೇ ಡಿಕೆಶಿಯಿಂದ ಟ್ರಬಲ್ ಶೂಟ್!

    ಬಿಎಸ್‍ವೈ ಅಡ್ಡಾದಲ್ಲಿ ಅಖಾಡಕ್ಕೆ ಇಳಿದ ದಿನವೇ ಡಿಕೆಶಿಯಿಂದ ಟ್ರಬಲ್ ಶೂಟ್!

    ಶಿವಮೊಗ್ಗ: ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ಕುಮಾರಸ್ವಾಮಿ ಮತ್ತು ಡಿಕೆ ಬ್ರದರ್ಸ್ ತಂತ್ರಗಾರಿಕೆ ರೂಪಿಸಿದ್ದು, ಭದ್ರಾವತಿಯಲ್ಲಿ ಮೊದಲ ಯತ್ನದಲ್ಲೇ ಯಶಸ್ವಿಯಾಗಿದ್ದಾರೆ.

    ಶಿವಮೊಗ್ಗದ ಭದ್ರಾವತಿಯಲ್ಲಿ ಬಂಡಾಯ ಶಮನವಾಗಿದೆ. ಹಾವು ಮುಂಗುಸಿಯಂತಿದ್ದ ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್, ಜೆಡಿಎಸ್‍ನ ಅಪ್ಪಾಜಿ ಗೌಡ ದಶಕಗಳ ಬಳಿಕ ಒಂದಾಗಿದ್ದಾರೆ. ಇಬ್ಬರ ಮಧ್ಯೆ ಇದ್ದ ಮುನಿಸಿಗೆ ಟ್ರಬಲ್ ಶೂಟರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಇತಿಶ್ರೀ ಹಾಡಿದ್ದಾರೆ.

    ಇವರಿಬ್ಬರನ್ನೂ ಡಿ.ಕೆ ಶಿವಕುಮಾರ್ ಒಂದು ಮಾಡಿದ್ದು, ಇನ್ಮುಂದೆ ಇವರಿಬ್ಬರೂ ಒಟ್ಟಿಗೆ ಜಂಟಿ ಪ್ರಚಾರ ಮಾಡಲಿದ್ದಾರೆ. ಇಬ್ಬರೂ ಜೊತೆಗೆ ಚುನಾವಣೆ ನಡೆಸಲಿದ್ದಾರೆ. ಕಾರ್ಯಕರ್ತರು, ನಾಯಕರ ನಡುವೆ ಒಟ್ಟಿಗೆ ಸಾಗಲು ತೀರ್ಮಾನಿಸಿದ್ದಾರೆ ಎಂದು ಡಿಕೆಶಿ ಘೋಷಿಸಿದ್ದಾರೆ.

    ಶುಕ್ರವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ಕರೆದ ಡಿಕೆಶಿ ಇಬ್ಬರನ್ನು ಅಕ್ಕ ಪಕ್ಕ ಕೂರಿಸಿಕೊಂಡು, ಇಬ್ಬರು ನಾಯಕರು ಒಂದಾಗಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಕಾರಣಕ್ಕೆ ಮಾಜಿ ಹಾಲಿ ಶಾಸಕರು ಒಟ್ಟಿಗೆ ಪ್ರಚಾರ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಜಂಟಿ ಪ್ರಚಾರ ಮಾಡಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

    ಶಿವಮೊಗ್ಗವನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಮೈತ್ರಿ ಸರ್ಕಾರದ ಪ್ಲಾನ್‍ಗೆ ಯಡಿಯೂರಪ್ಪ ಹೆದರಿ ಬಿಟ್ಟರಾ ಎಂಬ ಪ್ರಶ್ನೆ ಎದುರಾಗಿದೆ. ಶುಕ್ರವಾರದಿಂದ ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪ ಇನ್ನೂ ಮೂರು ದಿನ ಶಿವಮೊಗ್ಗದಲ್ಲಿ ಉಳಿದು ಜೋಡೆತ್ತುಗಳಿಗೆ ತಂತ್ರಗಳಿಗೆ ಪ್ರತಿತಂತ್ರ ರೂಪಿಸಲಿದ್ದಾರೆ. ಶಿವಮೊಗ್ಗ, ಭದ್ರಾವತಿಯಲ್ಲಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಘವೇಂದ್ರ ಪರವಾಗಿ ಪ್ರಚಾರ ನಡೆಸಲಿದ್ದಾರೆ.

  • ಪೂಜೆ ಆಗಿದೆ, ಇನ್ನು ಅಡ್ಡ ಬಂದ್ರೆ ಕೈ-ಕಾಲು ಕಡೀತಿನಿ- ಅಧಿಕಾರಿಗೆ ಶಾಸಕ ಅವಾಜ್

    ಪೂಜೆ ಆಗಿದೆ, ಇನ್ನು ಅಡ್ಡ ಬಂದ್ರೆ ಕೈ-ಕಾಲು ಕಡೀತಿನಿ- ಅಧಿಕಾರಿಗೆ ಶಾಸಕ ಅವಾಜ್

    ಶಿವಮೊಗ್ಗ: ಅರಣ್ಯಧಿಕಾರಿಗೆ ಕಾಂಗ್ರೆಸ್ ಶಾಸಕರೊಬ್ಬರು ಅವಾಜ್ ಹಾಕಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಫೋನ್ ಮೂಲಕ ಅರಣ್ಯಾಧಿಕಾರಿ ಸೀನಪ್ಪ ಶೆಟ್ಟಿಗೆ ಭದ್ರಾವತಿ ಕ್ಷೇತ್ರದ ಶಾಸಕ ಸಂಗಮೇಶ್ ಅವಾಜ್ ಹಾಕಿದ್ದಾರೆ.

    ಶಿವಮೊಗ್ಗ ಭದ್ರಾವತಿ ತಾಲೂಕು ಕೊಡ್ಲಿಗೇರೆ ಸಮೀಪ ಅರಣ್ಯದಲ್ಲಿ ದೇವಾಸ್ಥಾನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಹಾಕಲಾಗಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಅರಣ್ಯ ಸ್ಥಳವನ್ನು ಆಕ್ರಮಿಸಿ ದೇವಾಸ್ಥಾನ ನಿರ್ಮಾಣ ಮಾಡದಂತೆ ಅರಣ್ಯಾಧಿಕಾರಿ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದಾರೆ. ಹೀಗಾಗಿ ದೇವಾಸ್ಥಾನ ವಿಚಾರಕ್ಕೆ ಬರದಂತೆ ಸಂಗಮೇಶ್ ಬೆದರಿಕೆ ಹಾಕಿದ್ದಾರೆ.

    ಅವಾಜ್ ಏನು..?
    ಡಿಎಫ್‍ಈ ಓಕೆ ಅಂತಿದ್ದಾರೆ. ನೀನು ಓಕೆ ಅಂತೀದ್ದಿಯಾ. ಮತ್ಯಾಕೇ ನೋಟಿಸ್ ಕೊಟ್ಟೆ..? ಒಂದು ಚದರ ಜಾಗವನ್ನಷ್ಟೇ ಬಳಕೆ ಮಾಡುತ್ತಾರೆ. ಅರ್ಜಿ ಸಹ ಕೊಟ್ಟಿದ್ದಾರೆ. ಅಯಿತು ಇವತ್ತು ಪೂಜೆ ಮಾಡಿದ್ದೇವೆ. ಇನ್ಮೇಲೆ ಇಲ್ಲಿ ಯಾರು ಅಡ್ಡಪಡಿಸಬಾರದು. ಅಡ್ಡಬಂದರೆ ಕೈ-ಕಾಲು ಕಡೀತಿನಿ. ನೀವು ಹಂಗ್ ಹೇಳಿದರೆ ಕೇಳುವುದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv