Tag: ಸಂಗಮ

  • ಬ್ರೇಕ್ ಫೇಲ್ ಆಗಿ ತಡೆಗೋಡೆಗೆ ಗುದ್ದಿದ KSRTC ಬಸ್

    ಬ್ರೇಕ್ ಫೇಲ್ ಆಗಿ ತಡೆಗೋಡೆಗೆ ಗುದ್ದಿದ KSRTC ಬಸ್

    – ಸ್ವಲ್ಪ ಯಾಮಾರಿದ್ರೂ ಕಂದಕಕ್ಕೆ ಉರುಳುತಿದ್ದ ಬಸ್, ಪ್ರಯಾಣಿಕರು ಪಾರು

    ರಾಮನಗರ: ಬ್ರೇಕ್ ಫೇಲ್ (Brake Failure) ಆದ ಪರಿಣಾಮ ರಸ್ತೆ ತಡೆಗೋಡೆಗೆ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಡಿಕ್ಕಿಯಾಗಿ ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾದ ಘಟನೆ ಕನಕಪುರ (Kanakapura) ತಾಲೂಕಿನ ಸಂಗಮದ ರಸ್ತೆಯಲ್ಲಿ ನಡೆದಿದೆ.

    ಕನಕಪುರದಿಂದ ಸಂಗಮದ ಕಡೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್, ಸಂಗಮ ಸಮೀಪದ ತಿರುವಿನ ರಸ್ತೆಯಲ್ಲಿ ಬ್ರೇಕ್ ಫೇಲ್ ಆಗಿದೆ. ಬಸ್ ನಿಯಂತ್ರಣಕ್ಕೆ ತರಲು ಚಾಲಕ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆಸಿದ ಬಳಿಕ ಬಸ್ ನಿಂತಿದೆ. ಸ್ವಲ್ಪ ಯಾಮಾರಿದ್ದರೂ ಪ್ರಪಾತಕ್ಕೆ ಬಸ್ ಉರುಳಿ ಬಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಇದನ್ನೂ ಓದಿ: ಕೋಲಾರ ಗಡಿಯಲ್ಲಿ ಮುಂದುವರೆದ ಕಾಡಾನೆ ಉಪಟಳ – ಅಪಾರ ಪ್ರಮಾಣದ ಬೆಳೆಗಳು ನಾಶ

    ಬಸ್‌ನಲ್ಲಿ ಸುಮಾರು 70ಕ್ಕೂ ಅಧಿಕ ಪ್ರಯಾಣಿಕರು ಹೊಸ ವರ್ಷ ಹಿನ್ನೆಲೆ ಸಂಗಮದ ಶಿವನ ದೇವಾಲಯಕ್ಕೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಇನ್ನೂ ಸ್ಥಳಕ್ಕೆ ಸಾತನೂರು ಪೊಲೀಸರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: Tumakuru| ಹೊಸ ವರ್ಷಕ್ಕೆ ಕೇಕ್ ತರಲು ಹೋದ ಯುವಕ ಅಪಘಾತದಲ್ಲಿ ಸಾವು

  • ಹೊಸ ವರ್ಷಾಚರಣೆಗೆ ಕ್ಷಣಗಣನೆ – ಮೇಕೆದಾಟು, ಸಂಗಮಕ್ಕೆ ಪ್ರವಾಸಿಗರ ನಿರ್ಬಂಧ

    ಹೊಸ ವರ್ಷಾಚರಣೆಗೆ ಕ್ಷಣಗಣನೆ – ಮೇಕೆದಾಟು, ಸಂಗಮಕ್ಕೆ ಪ್ರವಾಸಿಗರ ನಿರ್ಬಂಧ

    ರಾಮನಗರ: ಹೊಸ ವರ್ಷ ಸಂಭ್ರಮಾಚರಣೆಗೆ (New Year 2025) ಕ್ಷಣಗಣನೆ ಆರಂಭವಾಗಿದ್ದು, ರಾಮನಗರದ (Ramanagara) ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

    ಕನಕಪುರ ತಾಲೂಕಿನ ಸಂಗಮ, ಮೇಕೆದಾಟು (Mekedatu) ಹಾಗೂ ಚುಂಚಿ ಫಾಲ್ಸ್‌ಗೆ (Chunchi Falls) ಸಾರ್ವಜನಿಕ ನಿಷೇಧ ವಿಧಿಸಲಾಗಿದೆ. ಡಿ.31ರಿಂದ ಜ.1ರ ಮಧ್ಯರಾತ್ರಿವರೆಗೂ ನಿರ್ಬಂಧ ಹೇರಿ ಕನಕಪುರ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ಅಲ್ಲದೇ ಕಾವೇರಿ ನದಿ ಪಾತ್ರ ಹಾಗೂ ಅರ್ಕಾವತಿ ನದಿ ಪಾತ್ರದಲ್ಲೂ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಇದನ್ನೂ ಓದಿ: Haveri| ನ್ಯೂ ಇಯರ್‌ ಪಾರ್ಟಿಗೆ ಗೋವಾಗೆ ತೆರಳುತ್ತಿದ್ದಾಗ ಅಪಘಾತ – 10 ಮಂದಿಗೆ ಗಾಯ

    ರಾತ್ರಿ ವೇಳೆ ಕುಡಿದು ವಾಹನ ಚಲಾವಣೆ ಮಾಡುವಂಥವರ ವಿರುದ್ಧವೂ ಪೊಲೀಸರು ನಿಗಾ ವಹಿಸಿದ್ದು, ಪ್ರಮುಖ ರಸ್ತೆಗಳಲ್ಲಿ ವಾಹನ ತಪಾಸಣೆ ನಡೆಸಲಿದ್ದಾರೆ. ಇದನ್ನೂ ಓದಿ: ಚಾಕುವಿನಿಂದ ಕುತ್ತಿಗೆ ಕೊಯ್ದು ವ್ಯಕ್ತಿಯ ಬರ್ಬರ ಹತ್ಯೆ

  • ಹಾಟ್ ಅವತಾರ ತಾಳಿದ ‘ಶಿವಲಿಂಗ’ ನಾಯಕಿ ವೇದಿಕಾ

    ಹಾಟ್ ಅವತಾರ ತಾಳಿದ ‘ಶಿವಲಿಂಗ’ ನಾಯಕಿ ವೇದಿಕಾ

    ಹುಭಾಷಾ ನಟಿ ವೇದಿಕಾ ಮತ್ತೆ ಹಾಟ್ ಅವತಾರವೆತ್ತಿದ್ದಾರೆ. ಕನ್ನಡದ ಸೇರಿದಂತೆ ಪರಭಾಷೆಗಳಲ್ಲಿ ಮಿಂಚ್ತಿರುವ ಸುಂದರಿ ವೇದಿಕಾ ಬೋಲ್ಡ್ ಫೋಟೋಶೂಟ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ.

     

    View this post on Instagram

     

    A post shared by Vedhika (@vedhika4u)

    ಕನ್ನಡದ ‘ಸಂಗಮ’ ಚಿತ್ರದಲ್ಲಿ ಗಣೇಶ್, ‘ಶಿವಲಿಂಗ’ ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಮಿಂಚಿದರು. ಕಳೆದ ವರ್ಷ ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗಿ ‘ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ ವೇದಿಕಾ ನಟಿಸಿದರು.

     

    View this post on Instagram

     

    A post shared by Vedhika (@vedhika4u)

    ಆಗಾಗ ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ನಟಿ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಬಿಳಿ ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಶೂಟ್ ಇಂಟರ್‌ನೆಟ್ ಸದ್ದು ಮಾಡ್ತಿದೆ. ನಟಿಯ ಹೊಸ ಅವತಾರಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಜ್ಯುವೆಲ್ಸ್‌ಗಾಗಿ ಬೆಂಗಳೂರಿಗೆ ಬಂದ ಜಾನ್ವಿ ಕಪೂರ್

    ಬಾಲಿವುಡ್ ಮತ್ತು ಸೌತ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ವೇದಿಕಾ ಕನ್ನಡದ ಹೊಸ ಪ್ರಾಜೆಕ್ಟ್‌ಗೆ ಓಕೆ ಎಂದಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಗಣ ಚಿತ್ರಕ್ಕೆ ವೇದಿಕಾ ನಾಯಕಿಯಾಗಿದ್ದಾರೆ.