Tag: ಸಂಗಕ್ಕಾರ

  • ನಾಟೌಟಲ್ಲೂ ಧೋನಿ ವಿಶ್ವ ದಾಖಲೆ!

    ನಾಟೌಟಲ್ಲೂ ಧೋನಿ ವಿಶ್ವ ದಾಖಲೆ!

    ಕೊಲಂಬೋ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯ ದಾಖಲೆಗಳ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಧೋನಿ ಈಗಾಗಲೇ 2 ದಾಖಲೆ ಮಾಡಿದ್ದಾರೆ.

    ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಾಟೌಟ್ ಆಗುವ ಮೂಲಕ 73 ಬಾರಿ ನಾಟೌಟ್ ಖ್ಯಾತಿಗೆ ಧೋನಿ ಭಾಜನರಾದರು. ಇದುವರೆಗೆ ಧೋನಿ ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ ಹಾಗೂ ಶ್ರೀಲಂಕಾದ ಚಾಮಿಂಡಾ ವಾಸ್ ಅವರ ಜೊತೆ 72 ಬಾರಿ ನೌಟಟ್ ಆದ ದಾಖಲೆಯಲ್ಲಿದ್ದರು. ಶ್ರೀಲಂಕಾ ವಿರುದ್ಧ ಸದ್ಯ ನಡೆಯುತ್ತಿರುವ ಸರಣಿಯ 2 ಹಾಗೂ 3ನೇ ಪಂದ್ಯದಲ್ಲೂ ಧೋನಿ ನಾಟೌಟ್ ಆಗಿ ಪಂದ್ಯ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಇಂದು ತನ್ನ 300ನೇ ಪಂದ್ಯವನ್ನಾಡುವ ಮೂಲಕ ಧೋನಿ 300ನೇ ಒನ್ ಡೇ ಆಡಿದ 6ನೇ ಭಾರತೀಯ ಎಂಬ ಖ್ಯಾತಿಗೆ ಭಾಜನರಾದರು. ಸಚಿನ್ 463, ರಾಹುಲ್ ದ್ರಾವಿಡ್ 344, ಅಜರುದ್ದೀನ್ 334, ಸೌರವ್ ಗಂಗೂಲಿ 311 ಹಾಗೂ ಯುವರಾಜ್ ಸಿಂಗ್ 304 ಪಂದ್ಯವನ್ನಾಡಿ 300 ಕ್ಲಬ್ ಸೇರ್ಪಡೆಯಾಗಿದ್ದರು.

    ಇನ್ನೂ ಕಾಯುತ್ತಿದೆ ದಾಖಲೆ: ಧೋನಿಗೆ ಏಕದಿನ ಪಂದ್ಯದಲ್ಲಿ ಸೆಂಚುರಿ ಸ್ಟಂಪಿಂಗ್ ವಿಶ್ವ ದಾಖಲೆಯೂ ಮುಂದಿದೆ. ಸದ್ಯ 99 ಸ್ಟಂಪ್ ಔಟ್ ಮಾಡಿ ಶ್ರೀಲಂಕಾದ ಕುಮಾರ ಸಂಗಕ್ಕಾರ ಜೊತೆ ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆ ಹಂಚಿಕೊಂಡಿದ್ದಾರೆ.

    ಇಂದಿನ ಪಂದ್ಯದಲ್ಲಿ ಧೋನಿ 42 ಎಸೆತ ಎದುರಿಸಿ 49 ರನ್ ಹೊಡೆದಿದ್ದಾರೆ. ಇದರಿಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸೇರಿವೆ.