Tag: ಸಂಕ್ರಾಂತಿ ಹಬ್ಬ

  • ಜಾತ್ರೆಗೆ ಮುನ್ನವೇ ಮಲ್ಲಯ್ಯನ ದರ್ಶನ ಪಡೆದ ಲಕ್ಷಾಂತರ ಭಕ್ತರು

    ಜಾತ್ರೆಗೆ ಮುನ್ನವೇ ಮಲ್ಲಯ್ಯನ ದರ್ಶನ ಪಡೆದ ಲಕ್ಷಾಂತರ ಭಕ್ತರು

    ಯಾದಗಿರಿ: ಜಿಲ್ಲೆಯ ಮೈಲಾಪುರದ ಬೆಟ್ಟದ ಮೇಲೆ ನೆಲಸಿರಯವ ಮಲ್ಲಯ್ಯ ದೇವರನ್ನು ಜಾತ್ರೆಗೂ ಮುನ್ನವೇ ಲಕ್ಷಾಂತರ ಭಕ್ತರು ದರ್ಶನ ಪಡೆದಿದ್ದಾರೆ.

    ವರ್ಷಕ್ಕೊಮ್ಮೆ ಸಂಕ್ರಾಂತಿ ಹಬ್ಬದಂದು ಅದ್ದೂರಿಯಾಗಿ ಮಲ್ಲಯ್ಯ ದೇವರ ಜಾತ್ರೆ ನಡೆಯುತ್ತೆ. ಈ ಜಾತ್ರೆಗೆ ರಾಜ್ಯ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ. ಇಲ್ಲಿಗೆ ಬಂದು ಮಲ್ಲಯ್ಯನ ದರ್ಶನ ಪಡೆಯುತ್ತಾರೆ. ಮಂಗಳವಾರ ಮಲ್ಲಯ್ಯ ದೇವರ ಜಾತ್ರೆ ನಡೆಯಲಿದೆ. ಆದರೆ ಜಾತ್ರೆಗೂ ಮುನ್ನವೇ ಲಕ್ಷಾಂತರ ಭಕ್ತರು ಮೈಲಾಪುರಕ್ಕೆ ಆಗಮಿಸಿ, ದೇವರ ದರ್ಶನ ಮಾಡುತ್ತಿದ್ದಾರೆ.

    ದೇವಸ್ಥಾನಕ್ಕೆ ಬರುವ ಭಕ್ತರು ಬೆಟ್ಟದ ಕೆಳಗೆ ಮುಡಿಕೊಟ್ಟು, ಪಕ್ಕ ಕೆರೆಯಲ್ಲಿ ಸ್ನಾನ ಮಾಡಿದರೆ ಮಲ್ಲಯ್ಯ ಭಕ್ತರ ಪಾಪ ಕಳೆಯುತ್ತಾನೆ ಎಂಬ ನಂಬಿಕೆ ಸಹ ಇಲ್ಲಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಶೇಷವಾಗಿದೆ. ಭಕ್ತರ ಹಿತದೃಷ್ಟಿಯಿಂದ ಈ ಬಾರಿ ಪೊಲೀಸ್ ಇಲಾಖೆಯಿಂದ ಕೆರೆ ಸುತ್ತಲೂ ಮತ್ತು ದೇವಸ್ಥಾನದ ಆವರಣದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಅಲ್ಲದೆ ನೂರಾರು ಪೊಲೀಸರು ದೇವಸ್ಥಾನದಲ್ಲಿ ಗಸ್ತು ಕಾಯುತ್ತಿದ್ದಾರೆ.

  • ಸಂಕ್ರಾಂತಿ ಹಬ್ಬಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿದೆ 120 ಟನ್ ಕಬ್ಬು

    ಸಂಕ್ರಾಂತಿ ಹಬ್ಬಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿದೆ 120 ಟನ್ ಕಬ್ಬು

    – ಹೂ, ಹಣ್ಣುಗಳ ದರದಲ್ಲಿ ಏರಿಕೆ

    ಬೆಂಗಳೂರು: ಈ ವರ್ಷದ ಮೊದಲ ಸುಗ್ಗಿ ಸಂಕ್ರಾಂತಿ ಹಬ್ಬಕ್ಕೆ ಇನ್ನೆರಡೇ ದಿನ ಬಾಕಿ ಇರೋದು. ಹಬ್ಬದ ಸಿದ್ಧತೆ ಸಿಲಿಕಾನ್ ಸಿಟಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಕೆ.ಆರ್ ಮಾರುಕಟ್ಟೆಗೆ ಸಂಕ್ರಾಂತಿ ಹಬ್ಬದ ಆಕರ್ಷಣೆ ಕಬ್ಬು ಲಗ್ಗೆ ಇಟ್ಟಿದೆ.

    ಹೌದು. ಬುಧವಾರ ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಸಂಕ್ರಾಂತಿಯ ಸಂಭ್ರಮ ಸಡಗರಕ್ಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ಹಿಂದೂಗಳ ಯಾವುದೇ ಹಬ್ಬವಾಗಲಿ ಅದಕ್ಕೆ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಬೆಲ್ಲದ ಜೊತೆ ಕಬ್ಬು, ಕಡಲೇಕಾಯಿ ಗೆಣಸು ಮತ್ತು ಅವರೇಕಾಯಿ ಇರಲೇಬೇಕು. ಮುಂಚೆ ಮನೆಯಲ್ಲೇ ಎಳ್ಳು-ಬೆಲ್ಲ ಬೆರೆಸಿ ಹಂಚುವ ಪದ್ಧತಿ ಇತ್ತು. ಆದರೆ ಇಂದಿನ ಬ್ಯುಸಿ ಲೈಫ್ ನಲ್ಲಿ ಸಿಲಿಕಾನ್ ಸಿಟಿಯ ಮಂದಿಗೆ ರೆಡಿಮೆಡ್ ಎಳ್ಳು-ಬೆಲ್ಲದ ಪ್ಯಾಕೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ.

    ಸಂಕ್ರಾಂತಿ ಹಬ್ಬಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿದೆ 120 ಟನ್ ಕಬ್ಬು:
    ಕಬ್ಬು – ಜೊಡಿ ಜೊಲ್ಲೆಗೆ – 120 ರಿಂದ 140
    ಕಡಲೇಕಾಯಿ ಕೆಜಿಗೆ – 80 ರಿಂದ 100
    ಅವರೇಕಾಯಿ ಕೆಜೆಗೆ – 30 ರಿಂದ 60
    ಗೆಣಸು ಕೆಜಿಗೆ – 20 ರಿಂದ 40

    ಇವು ಸಂಕ್ರಾಂತಿಗೆ ಬೇಕೇಬೇಕಾದ ಪದಾರ್ಥಗಳ ಬೆಲೆ. ಹಬ್ಬ ಅಂದರೆ ಹೂವು ಬೇಕೇ ಬೇಕು. ಹೀಗಾಗಿ ಹೂವಿನ ಬೆಲೆಯೂ ಕೊಂಚ ಏರಿಕೆಯಾಗಿದೆ. ಇದನ್ನೂ ಓದಿ; ಉಚಿತ ಕಬ್ಬಿಗಾಗಿ ಕಾದಾಟ – ಮುಗಿಬಿದ್ದು ಕಿತ್ತಾಡಿಕೊಂಡ ಜನ

    ಹೂವುಗಳ ಬೆಲೆ ಇಂತಿದೆ:
    ಸೇವಂತಿಗೆ- ಮಾರಿಗೆ 80 ರಿಂದ 120 ರೂ.
    ಚೆಂಡೂವು- ಮಾರು- 60 ರಿಂದ 100 ರೂ.
    ಕನಕಾಂಬರ- ಕೆಜಿಗೆ 500.ರೂ.
    ಬಿಡಿ ರೋಜಾ ಹೂ- ಕೆಜಿಗೆ 150 ರೂ.
    ಮಲ್ಲಿಗೆ- ಕೆಜಿಗೆ 800 ರೂ.

    ಹಣ್ಣುಗಳ ದರ:
    ಸೇಬು- 120 ರೂ.
    ಮೂಸಂಬಿ- 100 ರೂ.
    ದಾಳಿಂಬೆ- 120 ರೂ.
    ಕಿತ್ತಳೆ ಹಣ್ಣು- 80 ರೂ.
    ದ್ರಾಕ್ಷಿ- 120 ರೂ.
    ಸಪೋಟ- 80 ರೂ.

    ಹಬ್ಬಕ್ಕಾಗಿ ಬೆಲೆ ಕೊಂಚ ಏರಿಕೆಯಾಗಿದೆ. ನಾಳೆ ಬೆಲೆ ಮತ್ತಷ್ಟು ಹೆಚ್ಚಾಗೋ ಸಾಧ್ಯತೆಗಳಿವೆ. ಹಬ್ಬ ಬುಧವಾರ ಇರೋದ್ರಿಂದ ಇವತ್ತೇ ಖರೀದಿ ಮಾಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯ ಕಡೆ ಬರುತ್ತಿದ್ದಾರೆ. ಈ ಬಗ್ಗೆ ಗ್ರಾಹಕರು ಮಾತನಾಡಿ, ಹಬ್ಬ ಅಂದ್ಮೇಲೆ ಬೆಲೆ ಜಾಸ್ತಿ ಆಗ್ತಿರುತ್ತದೆ. ಹಬ್ಬ ಮಾಡ್ಲೇಬೇಕು ಅಂದ್ಮೇಲೆ ಎಷ್ಟೇ ಬೆಲೆ ಆದರೂ ಕೊಂಡುಕೊಳ್ಳಲೇಬೇಕು ಎಂದು  ಹೇಳುತ್ತಾರೆ.

  • ಜನವರಿ 14, 15ರಂದು ಬೆಂಗಳೂರಿನಲ್ಲಿ ಜಾನಪದ ಜಾತ್ರೆ

    ಜನವರಿ 14, 15ರಂದು ಬೆಂಗಳೂರಿನಲ್ಲಿ ಜಾನಪದ ಜಾತ್ರೆ

    ಬೆಂಗಳೂರು: ಜನವರಿ 14 ಮತ್ತು 15ರಂದು ಬೆಂಗಳೂರಿನ ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಜಾನಪದ ಜಾತ್ರೆ ನಡೆಯಲಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ಜಾತ್ರೆ ನಡೆಯುತ್ತಿದ್ದ ಪೂರ್ವ ತಯಾರಿಯನ್ನು ಕಂದಾಯ ಸಚಿವ ಆರ್ ಅಶೋಕ್, ಮೇಯರ್ ಗೌತಮ್ ಕುಮಾರ್ ಮತ್ತು ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹಳ್ಳಿಗಾಡಿನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಜಾನಪದ ಜಾತ್ರೆ ಪ್ರಾರಂಭಿಸಲಾಗಿದೆ. 2 ದಿನಗಳ ಕಾಲ ಇಲ್ಲಿ ಹಳ್ಳಿಯ ಸೊಗಡಿನ ವಾತಾವರಣವಿರಲಿದೆ. ಸಂಕ್ರಾಂತಿಯು ಬಂದಿರುವುದರಿಂದ ಗೋ ಪೂಜೆ, ಎತ್ತಿನ ಗಾಡಿ ಓಟ, ಕಡಲೆಕಾಯಿ ಪರೀಷೆಯನ್ನೂ ನಡೆಸಲಾಗುತ್ತಿದೆ. ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳ 36 ತಂಡಗಳು ಆಗಮಿಸಲಿವೆ. ಸಿದ್ಧಿ ಜನಾಂಗ, ಹಾಲಕ್ಕಿ ಒಕ್ಕಲಿಗ ಸಮಾಜದ ಕಲಾವಿದರೂ ಸಹ ಆಗಮಿಸಲಿದ್ದಾರೆ.

    ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಜಾನಪದ ಜಾತ್ರೆ ಪ್ರಾರಂಭಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾನಪದ ಜಾತ್ರೆಯನ್ನು ರದ್ದುಗೊಳಿಸಿದ್ದರು. ಇದೀಗ ಪುನಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾರಂಭಿಸಲಾಗಿದೆ. ಜ. 14ರಂದು ಬೆಳಗ್ಗೆ ಜಾನಪದ ಜಾತ್ರೆಗೆ ಚಾಲನೆ ಸಿಕ್ಕಿದ್ದರೆ, 15ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

  • ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ‘ಎಳ್ಳು ಬೆಲ್ಲ ತಿಂದು, ಒಳ್ಳೆಯ ಮಾತನಾಡಿ’ ಎಂಬ ಗಾದೆ ಇದೆ. ಅದರಂತೆಯೇ ಸಂಕ್ರಾಂತಿ ಹಬ್ಬದಂದು ಎಲ್ಲರೂ ಎಳ್ಳು ಬೆಲ್ಲ ತಿಂದು ಹೊಸ ವರ್ಷದ ಮೊದಲ ಹಬ್ಬವನ್ನು ಸಿಹಿಯಾಗಿ ಬರಮಾಡಿಕೊಳ್ಳುತ್ತಾರೆ. ಆದ್ದರಿಂದ ಹಬ್ಬಕ್ಕಾಗಿ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಿ. ನಿಮಗಾಗಿ ಎಳ್ಳು-ಬೆಲ್ಲ ತಯಾರು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಬಿಳಿ ಎಳ್ಳು – 200 ಗ್ರಾಂ
    2. ಅಚ್ಚು ಬೆಲ್ಲ – 2
    3. ಕೊಬ್ಬರಿ – 2 ಓಳು
    4. ಹುರಿಗಡಲೆ – 1 ಕಪ್
    5. ಕಡ್ಲೆಕಾಯಿಬೀಜ – 1 ಕಪ್
    6. ಜೀರಿಗೆ ಪೆಪ್ಪರ್ ಮೆಂಟ್ – 100 ಗ್ರಾಂ
    7. ಬಿಳಿ ಬತಾಸು – 100 ಗ್ರಾಂ

    ಮಾಡುವ ವಿಧಾನ
    * ಕಡ್ಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ.
    * ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ.
    * ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿ.
    * ಕೊಬ್ಬರಿ ಕಪ್ಪು ಭಾಗವನ್ನು ತೆಗೆದು ಚಿಕ್ಕದಾಗಿ ಕಟ್ ಮಾಡಿ.
    * ಹುರಿಗಡಲೆಯನ್ನು ಬೆಚ್ಚಗಾಗುವಷ್ಟು ಹುರಿದುಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಎಳ್ಳು, ಕಡ್ಲೆಕಾಯಿಬೀಜ, ಹುರಿಗಡಲೆ, ಸಣ್ಣಗೆ ತುಂಡರಿಸಿದ ಬೆಲ್ಲ, ಕೊಬ್ಬರಿ, ಜೀರಿಗೆ ಪೆಪ್ಪರ್ ಮೆಂಟ್, ಬಿಳಿ ಬತಾಸು ಸೇರಿಸಿ ಮಿಕ್ಸ್ ಮಾಡಿ.
    * ಒಂದು ಏರ್ ಟೈಟ್ ಜಾರ್ ಗೆ  ಶೇಖರಿಸಿಟ್ಟರೆ ತಿಂಗಳುಗಳ ಕಾಲ ತಿನ್ನಲು ಯೋಗ್ಯವಾಗಿರುತ್ತದೆ.
    * ಅಂಗಡಿಯಲ್ಲಿ ಸಿಗುವ ರೆಡಿ ಮಿಕ್ಸ್ ಗಿಂತ ಮನೆಯಲ್ಲೇ ಮಾಡಿ ಪ್ರೆಶ್ ಆಗಿ ತಿನ್ನಿರಿ.

    ಇದನ್ನೂ ಓದಿ: ಸಂಕ್ರಾಂತಿ ಯಾಕೆ ಮಾಡ್ತಾರೆ? ಈ ದಿನ ಎಳ್ಳಿಗೆ ಮಹತ್ವ ಯಾಕೆ?

    ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?

    ಇದನ್ನೂ ಓದಿ:  ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

    ಇದನ್ನೂ ಓದಿ:  ಸಂಕ್ರಾಂತಿಗೆ ನಿಮ್ಮ ಮನೆಯಲ್ಲಿರಲಿ ಅವಲಕ್ಕಿ ಸಿಹಿ ಪೊಂಗಲ್

  • ಎಳ್ಳು ಬೆಲ್ಲದ ಜೊತೆ ಹಬ್ಬಕ್ಕಾಗಿ ಸಿಹಿ ಪೊಂಗಲ್ ಮಾಡುವ ವಿಧಾನ

    ಎಳ್ಳು ಬೆಲ್ಲದ ಜೊತೆ ಹಬ್ಬಕ್ಕಾಗಿ ಸಿಹಿ ಪೊಂಗಲ್ ಮಾಡುವ ವಿಧಾನ

    ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು:
    1. ಹೆಸರುಬೇಳೆ – 1 ಕಪ್
    2. ಅಕ್ಕಿ – 1 ಕಪ್
    3. ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
    4. ಏಲಕ್ಕಿ – 4
    5. ದ್ರಾಕ್ಷಿ ,ಗೋಡಂಬಿ- 50 ಗ್ರಾಂ
    6. ತುಪ್ಪ – 4 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಕುಕ್ಕರ್ ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.
    * ಮತ್ತೊಂದು ಪ್ಯಾನ್ ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ.(ಒಂದು ವೇಳೆ ಬೆಲ್ಲದಲ್ಲಿ ಕಲ್ಮಶವಿದ್ದರೆ ಒಮ್ಮೆ ಶೋಧಿಸಿಕೊಳ್ಳಿ)
    * ಈಗ ಬೆಂದ ಅಕ್ಕಿ ಮತ್ತು ಬೇಳೆಗೆ ಬೆಲ್ಲದ ಪಾಕ ಹಾಕಿ ಚೆನ್ನಾಗಿ ತಿರುವಿ.
    * ನಂತರ ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿ ಒಲೆಯಿಂದ ಇಳಿಸಿ.
    (ಇದಕ್ಕೆ ಬೇಕಿದ್ದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಮತ್ತು ಒಂದು ಚಿಟಿಕೆ ಲವಂಗದ ಪುಡಿಯನ್ನು ಸೇರಿಸಬಹುದು)

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಸ್ಟ್ಲೀ ಆದ ಸಂಕ್ರಾಂತಿ – ಮಾರುಕಟ್ಟೆಗೆ ಹೋದ್ರೆ ಶಾಕ್ ಗ್ಯಾರಂಟಿ

    ಕಾಸ್ಟ್ಲೀ ಆದ ಸಂಕ್ರಾಂತಿ – ಮಾರುಕಟ್ಟೆಗೆ ಹೋದ್ರೆ ಶಾಕ್ ಗ್ಯಾರಂಟಿ

    ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಭರ್ಜರಿಯಾಗಿ ಸಜ್ಜುಗೊಂಡಿದೆ. ನೀವೇನಾದರೂ ಹಬ್ಬವನ್ನು ಇನ್ನಷ್ಟು ಜೋಶ್ ಆಗಿ ಆಚರಿಸಬೇಕು ಅನ್ಕೊಂಡಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದಂತೂ ಗ್ಯಾರಂಟಿ.

    ಹಬ್ಬ ಜೋರಾಗಿ ಮಾಡೋಣವೆಂದು ಸಾಮಾನು ಖರೀದಿಸಲು ಮಾರುಕಟ್ಟೆಗೆ ಹೋದರೆ ನಿಮಗೆ ಶಾಕ್ ಆಗುತ್ತದೆ. ಯಾಕಂದ್ರೆ ಕಳೆದ ವರ್ಷಕ್ಕಿಂತ ಈ ವರ್ಷ ಮಾರುಕಟ್ಟೆಯಲ್ಲಿ ಸಂಕ್ರಾತಿ ಹಬ್ಬಕ್ಕೆ ಬೇಕಾದ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ಮಧ್ಯೆಯೇ ಗಾಂಧಿಬಜಾರ್, ಮಲ್ಲೇಶ್ವರಂ, ಯಶವಂತಪುರ ಹಾಗೂ ಕೆ.ಆರ್.ಮಾರ್ಕೆಟ್‍ನಲ್ಲಿ ಸಂಕ್ರಾಂತಿ ಹಬ್ಬದ ವ್ಯಾಪಾರ ಜೋರಾಗಿದೆ.

    ಹಬ್ಬದ ವಸ್ತುಗಳ ದರ:
    ಕೊಬ್ಬರಿ ಕೆ.ಜಿಗೆ ಬರೋಬ್ಬರಿ 500 ರೂ. ಆಗಿದೆ. ಇತ್ತ ಸಕ್ಕರೆ ಅಚ್ಚು ಕೂಡ 200 ರೂ. ಆಗಿದೆ. ಹಬ್ಬ ಅಂದರೆ ಎಳ್ಳು-ಬೆಲ್ಲ ಮಾಡಬೇಕು. ಆದರೆ ಮಿಕ್ಸೆಡ್ ಎಳ್ಳು ಕೆ.ಜಿಗೆ 240 ರೂ. ಏರಿಕೆ ಆಗಿದೆ. ಬರಿ ಎಳ್ಳುಗೆ 360 ರೂ., ಬೆಲ್ಲ ನೋಡುವುದಾದರೆ 140 ರೂ. ಹಾಗೂ ಜೋಡಿ ಕಬ್ಬು 150 ರಿಂದ 200 ರೂ. ದುಬಾರಿಯಾಗಿದೆ.

    ಹೂವುಗಳ ದರ:
    ಪ್ರತಿ ಹಬ್ಬಕ್ಕೂ ಮೆರುಗು ಕೊಡುವುದೇ ಹೂ, ಆದರೆ ಮಾರುಕಟ್ಟೆಯಲ್ಲಿ ಹೂಗಳ ದರ ಆಕಾಶದಷ್ಟು ಏರಿಕೆ ಆಗಿದೆ. ಒಂದು ಕೆ.ಜಿ ಗುಲಾಬಿಗೆ 350 ರೂ., ಮಲ್ಲಿಗೆ 320 ರೂ., ಸೇವಂತಿ 330 ರೂ. ಹಾಗೂ ಸುಗಂಧರಾಜ 300 ರೂ. ಆಗಿದೆ.

    ಹಣ್ಣುಗಳ ರೇಟ್:
    ಹಬ್ಬಕ್ಕೆ ಹಣ್ಣುಗಳು ಬೇಕೆಬೇಕು. ಆದರೆ ಕೆ.ಜಿ ಬಾಳೆಹಣ್ಣಿಗೆ 100 ರೂ., ದ್ರಾಕ್ಷಿ 250 ರೂ., ದಾಳಿಂಬೆ 220 ರೂ. ಮತ್ತು ಸೇಬು 200 ರೂ. ದುಬಾರಿ ಆಗಿದೆ.

    ಪ್ರತಿ ವರ್ಷವೂ ನಾವು ಹಬ್ಬವನ್ನು ಅದ್ಧೂರಿಯಾಗಿ ಮಾಡುತ್ತೇವೆ. ಹಬ್ಬಕ್ಕಾಗಿ ಬೇಕಾದ ಹಣ್ಣು, ಹೂ, ವಸ್ತುಗಳು ಎಲ್ಲವನ್ನು ಖರೀದಿಸಬೇಕು. ಇದ್ಯಾವುದೂ ಇಲ್ಲದೆ ಹಬ್ಬ ಮಾಡುವುದೇ ಕಷ್ಟವಾಗುತ್ತದೆ. ಇದು ವರ್ಷದಲ್ಲಿ ಮೊದಲ ಹಬ್ಬವಾಗಿದ್ದು, ಈ ಹಬ್ಬವನ್ನು ಸಂತೋಷದಿಂದ ಬರ ಮಾಡಿಕೊಳ್ಳೋಣ ಎಂದರೆ ಹಬ್ಬದ ವಸ್ತುಗಳೇ ಇಷ್ಟು ದುಬಾರಿಯಾದರೆ ನಾವು ಹಬ್ಬ ಮಾಡುವುದು ಹೇಗೆ ಎಂದು ಕಂಗಾಲಾಗಿರುವುದಾಗಿ ಗೃಹಿಣಿಯರು ಹೇಳುತ್ತಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ‘ಎಳ್ಳು ಬೆಲ್ಲ ತಿಂದು, ಒಳ್ಳೆಯ ಮಾತನಾಡಿ’ ಎಂಬ ಗಾದೆ ಇದೆ. ಅದರಂತೆಯೇ ಸಂಕ್ರಾಂತಿ ಹಬ್ಬದಂದು ಎಲ್ಲರೂ ಎಳ್ಳು ಬೆಲ್ಲ ತಿಂದು ಹೊಸ ವರ್ಷದ ಮೊದಲ ಹಬ್ಬವನ್ನು ಸಿಹಿಯಾಗಿ ಬರಮಾಡಿಕೊಳ್ಳುತ್ತಾರೆ. ಆದ್ದರಿಂದ ಹಬ್ಬಕ್ಕಾಗಿ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಿ. ನಿಮಗಾಗಿ ಎಳ್ಳು-ಬೆಲ್ಲ ತಯಾರು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಬಿಳಿ ಎಳ್ಳು – 200 ಗ್ರಾಂ
    2. ಅಚ್ಚು ಬೆಲ್ಲ – 2
    3. ಕೊಬ್ಬರಿ – 2 ಓಳು
    4. ಹುರಿಗಡಲೆ – 1 ಕಪ್
    5. ಕಡ್ಲೆಕಾಯಿಬೀಜ – 1 ಕಪ್
    6. ಜೀರಿಗೆ ಪೆಪ್ಪರ್ ಮೆಂಟ್ – 100 ಗ್ರಾಂ
    7. ಬಿಳಿ ಬತಾಸು – 100 ಗ್ರಾಂ

    ಮಾಡುವ ವಿಧಾನ
    * ಕಡ್ಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ.
    * ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ.
    * ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿ.
    * ಕೊಬ್ಬರಿ ಕಪ್ಪು ಭಾಗವನ್ನು ತೆಗೆದು ಚಿಕ್ಕದಾಗಿ ಕಟ್ ಮಾಡಿ.
    * ಹುರಿಗಡಲೆಯನ್ನು ಬೆಚ್ಚಗಾಗುವಷ್ಟು ಹುರಿದುಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಎಳ್ಳು, ಕಡ್ಲೆಕಾಯಿಬೀಜ, ಹುರಿಗಡಲೆ, ಸಣ್ಣಗೆ ತುಂಡರಿಸಿದ ಬೆಲ್ಲ, ಕೊಬ್ಬರಿ, ಜೀರಿಗೆ ಪೆಪ್ಪರ್ ಮೆಂಟ್, ಬಿಳಿ ಬತಾಸು ಸೇರಿಸಿ ಮಿಕ್ಸ್ ಮಾಡಿ.
    * ಒಂದು ಏರ್ ಟೈಟ್ ಜಾರ್ ಗೆ  ಶೇಖರಿಸಿಟ್ಟರೆ ತಿಂಗಳುಗಳ ಕಾಲ ತಿನ್ನಲು ಯೋಗ್ಯವಾಗಿರುತ್ತದೆ.
    * ಅಂಗಡಿಯಲ್ಲಿ ಸಿಗುವ ರೆಡಿ ಮಿಕ್ಸ್ ಗಿಂತ ಮನೆಯಲ್ಲೇ ಮಾಡಿ ಪ್ರೆಶ್ ಆಗಿ ತಿನ್ನಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಾನಪದ ಗೀತೆಗಳ ಮಾಧುರ್ಯದೊಂದಿಗೆ ಸಂಕ್ರಾಂತಿ ಆಚರಣೆ

    ಜಾನಪದ ಗೀತೆಗಳ ಮಾಧುರ್ಯದೊಂದಿಗೆ ಸಂಕ್ರಾಂತಿ ಆಚರಣೆ

    ಧಾರವಾಡ: ನಮ್ಮಲ್ಲಿನ ಬಹುತೇಕ ಹಬ್ಬಗಳಿಗೆ ಒಂದೊಂದು ಪ್ರಾಕೃತಿಕ ಹಿನ್ನೆಲೆಯನ್ನು ಹೊಂದಿವೆ. ಆಯಾ ಸಮಯದಲ್ಲಿನ ವಿಶೇಷತೆಗೆ ಅನುಗುಣವಾಗಿ ಹಬ್ಬಗಳನ್ನ ಆಚರಿಸಲಾಗುತ್ತೆ. ಧಾರವಾಡದಲ್ಲಿ ಸಂಕ್ರಮಣ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

    ಈ ಹಬ್ಬವನ್ನ ಧಾರವಾಡದಲ್ಲಿ ಅತ್ಯಂತ ವಿಷೇಶವಾಗಿ ಆಚರಣೆ ಮಾಡಲಾಗಿದೆ. ಮೈತುಂಬಾ ಚಿನ್ನದ ಆಭರಣ ಧರಿಸಿರುವ ಮಹಿಳೆಯರು, ತಲೆ ಮೇಲೆ ಬುತ್ತಿ ಗಂಟು ಹೊತ್ತುಕೊಂಡು ಬರುತ್ತಿರುವ ವನಿತೆಯರು. ಇದೆಲ್ಲಾ ಕಂಡು ಬಂದಿದ್ದು, ನಗರದ ಮೈಲಾರ ಗುಡ್ಡದ ಮೇಲೆ.

    ಜಾನಪದ ಸಂಶೋಧನಾ ಕೇಂದ್ರವು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮರೆತು ಹೋದ ನಮ್ಮ ಜಾನಪದ ಸಂಸ್ಕೃತಿಯನ್ನು ನೆನಪಿಸೊ ಪ್ರಯತ್ನವನ್ನು ಈ ತಂಡ ಮಾಡಿದೆ. ಒಂದು ಕಡೆ ಜಾನಪದ ಗೀತೆಗಳ ಮಾಧುರ್ಯ ಇನ್ನೊಂದು ಕಡೆ ಮಹಿಳೆಯರ ಸಂಭ್ರಮ. ರಂಗಭೂಮಿ ಹಾಗೂ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಕಾರ್ಯಕ್ರಮದ ಮುಖ್ಯ ರುವಾರಿಗಳಾಗಿದ್ದರು.

    ಇನ್ನೊಂದೆಡೆ ಜಾಲಿ ಕಿಡ್ಸ ಶಾಲೆಯಲ್ಲಿ ಚಿಕ್ಕ ಮಕ್ಕಳ ಜೊತೆ ಅವರ ಪಾಲಕರು ಹಬ್ಬವನ್ನ ಆಚರಣೆ ಮಾಡಿದರು. ತಾಯಂದಿರು ತಮ್ಮ ಮಕ್ಕಳ ಜೊತೆ ಸಂಕ್ರಮಣ ಆಚರಣೆ ಮಾಡುವುದಕ್ಕೆ ಗಡಿಗೆಯಲ್ಲಿ ಕಡಲೆ ಕಾಳು, ಕಬ್ಬು, ಕಲ್ಲು ಸಕ್ಕರೆ, ಬೆಲ್ಲದ ಹೋಳು ಹಾಗೂ ಎಳ್ಳು ಹಾಕಿ ತಂದಿದ್ದರು. ಈ ಸಂಭ್ರಮಕ್ಕಾಗಿ ಅವರೆಲ್ಲ ಬಗೆಬಗೆಯ ಅಡುಗೆ ಮಾಡಿ ತಂದಿದ್ದು, ಅದನ್ನ ನೋಡುತ್ತಲೇ ಹೊಟ್ಟೆ ತುಂಬುವಂತಿತ್ತು.