Tag: ಸಂಕ್ರಾಂತಿ ಹಬ್ಬ

  • ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಕರ ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ವರ್ಷದ ಮೊದಲ ಹಬ್ಬ ಇದಾಗಿದ್ದು, ಎಲ್ಲೆಡೆ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದೀಗ ಸ್ಯಾಂಡಲ್‌ವುಲ್‌ನಲ್ಲೂ (Sandalwood) ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಸೆಲೆಬ್ರಿಟಿಗಳು ಸಂಕ್ರಾಂತಿ ಹಬ್ಬವನ್ನು ಸಡಗರಿದಿಂದ ಆಚರಿಸಿದ್ದಾರೆ.

     

    View this post on Instagram

     

    A post shared by Rishab Shetty (@rishabshettyofficial)

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಮನೆಯಲ್ಲಿ ಸಂಕ್ರಾಂತಿ ಹಬ್ಬ ಜೋರಾಗಿದೆ. ಕುಂದಾಪುರದಲ್ಲಿ ಕುಟುಂಬದೊಂದಿಗೆ ಅದ್ಧೂರಿಯಾಗಿ ರಿಷಬ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಹಬ್ಬದ ಆಚರಣೆಯ ಫೋಟೋವನ್ನು ನಟ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Shwetha Srivatsav (@shwethasrivatsav)

    ನಟಿ ಶ್ವೇತಾ ಶ್ರೀವಾಸ್ತವ್ ಅವರು ಮಗಳೊಂದಿಗೆ ಕಾರ್ಕಳದಲ್ಲಿ ಹಬ್ಬ ಆಚರಿಸಿದ್ದಾರೆ. ನನ್ನ ಅಜ್ಜನ ಊರು ಕಾರ್ಕಳ. ಸುಗ್ಗಿ ಸಂಭ್ರಮ ಶುರುವಾಗಿದೆ. ನಿಮ್ಮ ಪ್ರಯತ್ನಗಳೆಲ್ಲವೂ ಫಲ ಕೊಡಲಿ. ಯಶಸ್ಸು ಹಾಗೂ ಸಂತೋಷ ನಿಮ್ಮ ಜೀವನದಲ್ಲಿ ತುಂಬಿರಲಿ ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by DU✨ (@divya_uruduga)

    ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ (Divya Uruduga) ಅವರು ‘ನಿನಗಾಗಿ’ ಸೀರಿಯಲ್ ಸೆಟ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.

    ಇನ್ನೂ ಧ್ರುವ ಸರ್ಜಾ ಫಾರಂ ಹೌಸ್‌ನಲ್ಲಿ ‘ಕೆಡಿ’ ಚಿತ್ರತಂಡ ಜೊತೆ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಡೈರೆಕ್ಟರ್ ಪ್ರೇಮ್, ರೀಷ್ಮಾ ನಾಣಯ್ಯ (Reeshma Nanaiah) ಜೊತೆ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಗೋವಿಗೆ ಪೂಜೆ ಮಾಡಿಸಿದ್ದಾರೆ.

  • ಬೇರೆ ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ ಹೇಗೆ?

    ಬೇರೆ ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ ಹೇಗೆ?

    ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಈ ಹಬ್ಬವನ್ನು ದೇಶಾದ್ಯಂತ ಉತ್ಸಹಭರಿತವಾಗಿ ಆಚರಿಸಲಾಗುತ್ತದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಪ್ರವೇಶಿಸುವ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ.

    ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ, ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ.

    ಸಂಕ್ರಾಂತಿ ಹಬ್ಬವನ್ನು ದಕ್ಷಿಣ ಭಾರತ ಸೇರಿದಂತೆ ಉತ್ತರ ಭಾರತದಲ್ಲಿ ಕೂಡಾ ಈ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಂದು ರಾಜ್ಯದಲ್ಲೂ ಒಂದೊಂದು ಹೆಸರಿನಿಂದ ಉದಾಹರಣೆಗೆ ಪಂಜಾಬ್‌ನಲ್ಲಿ ಲೋಹ್ರಿ, ದಕ್ಷಿಣ ಭಾರತದಲ್ಲಿ ಪೊಂಗಲ್ ಎಂದು ಆಚರಿಸಲಾಗುತ್ತದೆ.

    ಸಂಕ್ರಾಂತಿ ಹಬ್ಬದಲ್ಲಿ ಮಾಡಲಾಗುವ ಇನ್ನಿತರ ಆಚರಣೆಗಳು:
    ಪಾಪ ಶುದ್ಧಿಗಾಗಿ ಗಂಗಾ ಅಥವಾ ಇತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡಲಾಗುತ್ತದೆ. ಪಂಜಾಬ್‌ನಲ್ಲಿ ಸಂಕ್ರಾಂತಿಯಂದು ದೀಪೋತ್ಸವ ಆಚರಣೆ ಮಾಡುತ್ತಾರೆ. ಇನ್ನೂ ಗುಜರಾತ್‌ನಲ್ಲಿ ಗಾಳಿಪಟ ಹಾರಿಸುವುದೇ ಒಂದು ಸಂಭ್ರಮ. ತಮಿಳುನಾಡು ಹಾಗೂ ದಕ್ಷಿಣ ಭಾರತದಲ್ಲಿ ಸುಗ್ಗಿಯ ಸಂಭ್ರಮದೊಂದಿಗೆ ಗ್ರಾಮದ ದೇವರನ್ನು ಪೂಜಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಸೂರ್ಯ ದೇವರಿಗೆ ಪೂಜೆ ಹಾಗೂ ನದಿಯಲ್ಲಿ ಸ್ನಾನ ಮಾಡುವುದು ರೂಢಿಯಲ್ಲಿದೆ.

    ಕರ್ನಾಟಕ, ಆಂಧ್ರ, ತೆಲಂಗಾಣಗಳಲ್ಲಿ ಸಂಕ್ರಾಂತಿ ಎಂಬ ಹೆಸರಿನಿಂದ ಹಬ್ಬ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಒಂದು ದಿನ ಈ ಹಬ್ಬ ಆಚರಿಸಿದರೆ ಆಂಧ್ರ ಹಾಗೂ ತೆಲಂಗಾಣಗಳಲ್ಲಿ 3 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಎಳ್ಳು ಬೆಲ್ಲವನ್ನು ಆತ್ಮೀಯರೊಂದಿಗೆ ಹಂಚಿಕೊಂಡು ಸಂಭ್ರಮಿಸುತ್ತಾರೆ.

    ಮಹಾರಾಷ್ಟ್ರದಲ್ಲಿ ಹಡಗ
    ಸಂಕ್ರಾಂತಿಯನ್ನು ಮಹಾರಾಷ್ಟ್ರದಲ್ಲಿ ಹಡಗ ಎಂದು ಆಚರಿಸುತ್ತಾರೆ. ಇದನ್ನು ತಿಲ್ಗುಲ್ ಹಬ್ಬ ಎಂದೂ ಕರೆಯುತ್ತಾರೆ. ಉತ್ತಮ ಮುಂಗಾರು ಮತ್ತು ಫಸಲು ಬರಲಿ ಎಂದು ಜನರು ದೇವರನ್ನು ಪ್ರಾರ್ಥಿಸುತ್ತಾರೆ. ಇಂದ್ರನು ಮಳೆಯ ದೇವರು ಆಗಿರುವುದರಿಂದ ಜನರು ಇಂದ್ರನಿಗೆ ಹಾಡುಗಳನ್ನು ಹಾಡುವ ಮೂಲಕ ಪೂಜಿಸುವುದು ಇಲ್ಲಿನ ವಿಶೇಷವಾಗಿದೆ

    ಭೋಗಿ
    ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಸಂಕ್ರಾಂತಿ ಹೆಸರಿನಿಂದಲೇ ಈ ಹಬ್ಬವನ್ನು ಆಚರಿಸಿದರೂ, ಅದರ ಹಿಂದಿನ ದಿನ ಭೋಗಿ ಹೆಸರಿನ ಆಚರಣೆ ಮಾಡಲಾಗುತ್ತದೆ. ಈ ದಿನ ಮಳೆಯ ದೇವತೆ ದೇವೇಂದ್ರನನ್ನು ಪೂಜಿಸಲಾಗುತ್ತದೆ. ಇದು ಧನುರ್ಮಾಸದ ಕಡೆಯ ದಿನವಾಗಿದೆ. ಭೂಮಿ ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಎಣ್ಣೆ ಸ್ನಾನ ಮಾಡಿ ಮನೆಯಲ್ಲಿ ದೀಪ ಬೆಳಗಿಸಲಾಗುತ್ತದೆ. ಮೂರನೇ ದಿನ ಕನುಮ ಎಂಬ ಆಚರಣೆ ಇದೆ.

    ಪಂಜಾಬ್‌ನಲ್ಲಿ ಲೋಹ್ರಿ
    ಪಂಜಾಬ್‌ನಲ್ಲಿ ಸಂಕ್ರಾಂತಿಯನ್ನು ಲೋಹ್ರಿ ಎಂದು ಕರೆಯುತ್ತಾರೆ. ಇಲ್ಲಿನ ಜನರು ಲೋಹ್ರಿಯನ್ನು ವರ್ಷದ ಅತ್ಯಂತ ಶೀತ ದಿನವೆಂದು ನಂಬುತ್ತಾರೆ. ತಣ್ಣನೆಯ ಗಾಳಿಯಲ್ಲಿ ಬೆಂಕಿಯ ಸುತ್ತಲೂ ಭಾಂಗ್ರಾ ನೃತ್ಯ ಮಾಡುವ ಮೂಲಕ ಆಚರಿಸುತ್ತಾರೆ. ಎಳ್ಳು ಉಂಡೆ ಜೊತೆ ಇತರ ಸಿಹಿಗಳನ್ನು ಮಾಡಿ ಆತ್ಮೀಯರೊಂದಿಗೆ ಒಟ್ಟಿಗೆ ಊಟ ಮಾಡುತ್ತಾರೆ.

    ಆಸ್ಸಾಂ ನಲ್ಲಿ ಬಿಹು
    ಆಸ್ಸಾಂನಲ್ಲಿ ಸಂಕ್ರಾಂತಿಯನ್ನು ಬಿಹು ಹೆಸರಿನಿಂದ ಆಚರಿಸುತ್ತಾರೆ. ಅಸ್ಸಾಮಿ ಜನರಿಗೆ ಇದು ಬಹಳ ಪ್ರಮುಖವಾದ ಹಬ್ಬವಾಗಿದೆ. ವರ್ಷದಲ್ಲಿ 3 ಬಾರಿ ಬಿಹು ಆಚರಿಸಲಾಗುತ್ತದೆ. ಜನವರಿಯಲ್ಲಿ ಮಾಗ್ ಬಿಹು, ಏಪ್ರಿಲ್ ತಿಂಗಳಲ್ಲಿ ರೊಂಗಾಲಿ ಬಿಹು ಹಾಗೂ ಅಕ್ಟೋಬರ್‌ನಲ್ಲಿ ಕೊಂಗಲಿ ಬಿಹು ಎಂದು ಆಚರಿಸಲಾಗುತ್ತದೆ.

    ಬಿಹಾರ ಸಖ್ರತ್/ಕಿಚಡಿ
    ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಈ ಹಬ್ಬವನ್ನು ಸಖ್ರತ್, ಕಿಚಡಿ ಎಂಬ ಹೆಸರಿನಿಂದ ಆಚರಿಸುತ್ತಾರೆ. ಈ ದಿನ ಜನರು ಮುಂಜಾನೆ ನದಿ ಸ್ನಾನ ಮಾಡಿ ದೀಪೋತ್ಸವ ಮಾಡುತ್ತಾರೆ. ದೀಪಕ್ಕೆ ಎಳ್ಳು ಅರ್ಪಿಸುತ್ತಾರೆ. ಎಳ್ಳು ಬೆಲ್ಲ ಬಳಸಿ ತಿಂಡಿಗಳನ್ನು ತಯಾರಿಸುತ್ತಾರೆ. ಗ್ರಾಮಗಳಲ್ಲಿ ಜನರೆಲ್ಲಾ ಒಟ್ಟಿಗೆ ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ. ದೆಹಲಿ ಹಾಗೂ ಹರಿಯಾಣಗಳಲ್ಲಿ ಕೂಡಾ ಸಖ್ರತ್ ಹೆಸರಿನಿಂದ ಹಬ್ಬ ಆಚರಿಸಲಾಗುತ್ತದೆ.

    ಹಿಮಾಚಲಪ್ರದೇಶಲ್ಲಿ ಮಾಘ ಸಾಜಿ
    ಹಿಮಾಚಲಪ್ರದೇಶದಲ್ಲಿ ಈ ಹಬ್ಬವನು ಮಾಘ ಸಾಜಿ ಎಂದು ಕರೆಯುತ್ತಾರೆ. ಮಾಘ ಎಂಬುದು ತಿಂಗಳ ಹೆಸರು. ಈ ದಿನವು ಋತುಗಳ ಬದಲಾವಣೆಯನ್ನು ಸೂಚಿಸುತ್ತದೆ. ಜನರು ನದಿಗಳಲ್ಲಿ ಸ್ನಾನ ಮಾಡುವ ಮೂಲಕ ವಸಂತವನ್ನು ಸ್ವಾಗತಿಸುತ್ತಾರೆ. ಬೆಲ್ಲ, ಎಳ್ಳಿನಿಂದ ಮಾಡಿದ ಸಿಹಿ ತಿಂಡಿಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ದೇವಾಲಯಗಳಿಗೆ ಭೇಟಿ ಮಾಡಿ, ದಾನ-ಧರ್ಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಂಜೆ ಜಾನಪದ ಹಾಡುಗಳು ಮತ್ತು ನೃತ್ಯಗಳೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ.

  • Sankranti 2025: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸುವುದೇಕೆ? – ಈ ಕೌತುಕ ನೀವು ತಿಳಿಯಲೇಬೇಕು

    Sankranti 2025: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸುವುದೇಕೆ? – ಈ ಕೌತುಕ ನೀವು ತಿಳಿಯಲೇಬೇಕು

    ಭೂಮಿಯ ಮೇಲೆ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಪ್ರವೇಶಿಸುವ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಕಾಲ ಎಂದು ಕರೆಯಲಾಗುತ್ತದೆ. ಮಾನವ ಚೈತನ್ಯ ಮತ್ತು ಜೀವನದ ಸಂತೋಷದ ಸಂಕೇತವಾದ ಈ ಹಬ್ಬವನ್ನು ಕುಟುಂಬ ಮತ್ತು ಸ್ನೇಹಿತರು ಒಟ್ಟಾಗಿ ಸಂಭ್ರಮಿಸುತ್ತಾರೆ. ಈ ಹಬ್ಬದ ಸಮಯದಲ್ಲಿ, ಜನರು ಗಂಗಾ, ಯಮುನಾ, ಗೋದಾವರಿ, ಕೃಷ್ಣ ಮುಂತಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ವಿಶೇಷವೆಂದರೆ ಈ ಸಂಕ್ರಾಂತಿ ಸಂಭ್ರಮದ ದಿನ ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯವಾಗಿದೆ. ಆದ್ರೆ ಎಷ್ಟೋ ಜನಕ್ಕೆ ಸಂಕ್ರಾಂತಿ ಹಬ್ಬದಂದು ಗಾಳಿಪಟ ಯಾಕೆ ಹಾರಿಸುತ್ತಾರೆ ಅನ್ನೋದರ ಬಗ್ಗೆ ಗೊತ್ತಿರುವುದಿಲ್ಲ. ಸಂಕ್ರಾಂತಿಯಂದು ಗಾಳಿಪಟ ಯಾಕೆ ಹಾರಿಸುತ್ತಾರೆ? ಏನಿದರ ವಿಶೇಷತೆ ಎನ್ನುವ ಕೌತುಕದ ಬಗ್ಗೆ ತಿಳಿಯಬೇಕಿದ್ದರೆ ಮುಂದೆ ಓದಿ…

    ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲ ಎಂಬುದು ಭಕ್ತರ ನಂಬಿಕೆ.

    Colourful kites attract the people during a Kite Festival organised by Bagalakote Geleyara Balaga in Bagalakote on Sunday, May 31, 2015. – KPN ### Bagalakote: Kite Festival

    ಮೊದಲು ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ, ಸಂಕ್ರಮಣ ದಿನದಿಂದ ಉತ್ತರ ದಿಕ್ಕಿಗೆ ತಿರುಗಿ ಚಲಿಸುತ್ತಾನೆ. ಆಯನ ಎಂದರೆ ಚಲಿಸುವುದು, ಆದರಿಂದ ಉತ್ತರಾಯಣ, ದಕ್ಷಿಣಾಯನ ಎಂದು ಹೆಸರು ಸೃಷ್ಟಿಯಾಗಿದ್ದು. ಹೀಗೆ ಸೂರ್ಯ ಪಥ ಬದಲಾಗುವುದರಿಂದ ನಮ್ಮ ದೇಶದಲ್ಲಿ ಈ ಸಮಯಕ್ಕೆ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ.

    ಗಾಳಿಪಟವನ್ನು ಏಕೆ ಹಾರಿಸುತ್ತಾರೆ?
    ಸಂಕ್ರಾಂತಿಯ ಹಬ್ಬದ ದಿನ ವರ್ಣ ರಂಜಿತ ಗಾಳಿಪಟಗಳನ್ನು ಆಗಸದಲ್ಲಿ ಹಾರಿಸಿ ಜನರು ಖುಷಿಪಡುತ್ತಾರೆ. ಈ ಸಂಭ್ರಮ ಉತ್ತರಾಯಣದಾದ್ಯಂತ ಮುಂದುವರಿಯುತ್ತದೆ. ಸಂಕ್ರಾಂತಿ ಒಂದೆಡೆ ಸುಗ್ಗಿಯ ಋತುವಿನ ಆಗಮನ ಸೂಚಿಸುವ ಹಬ್ಬವಾದರೆ, ಇನ್ನೊಂದೆಡೆ ಚಳಿಗಾಲದ ಅಂತ್ಯವನ್ನು ಸಾಂಕೇತಿಕವಾಗಿ ತೋರುವ ದಿನ ಎನ್ನಲಾಗುತ್ತೆ.

    ಚಳಿಗಾಲದಲ್ಲಿ ಸಾಕಷ್ಟು ಸೂಕ್ಷ್ಮಾಣುಗಳು ಉತ್ಪತ್ತಿಯಾಗುವ ಕಾರಣಕ್ಕೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮಕರ ಸಂಕ್ರಾಂತಿಯ ಸಮಯದಲ್ಲಿ ಮುಂಜಾನೆ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದರಿಂದ ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿ ನಾಶವಾಗುತ್ತವೆ. ಜೊತೆಗೆ ದೇಹಕ್ಕೆ ವಿಟಮಿನ್ ಡಿ ದೊರಕುತ್ತದೆ. ಇದು ಚರ್ಮದ ಸಮಸ್ಯೆ ನಿವಾರಣೆಗೆ ಉತ್ತಮ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಸಂಕ್ರಾಂತಿಯ ದಿನ ಹಾಗೂ ಉತ್ತರಾಯಣ ಋತುವಿನ ಕಾಲದಲ್ಲಿ ಹೆಚ್ಚಾಗಿ ಗಾಳಿಪಟವನ್ನು ಹಾರಿಸಲಾಗುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ, ಸಂಕ್ರಾಂತಿ ಮತ್ತು ಉತ್ತರಾಯಣದ ಸಂದರ್ಭದಲ್ಲಿ ಗಾಳಿಪಟ ಹಾರಿಸಿದರೆ ಅವುಗಳು ಸ್ವರ್ಗಕ್ಕೆ ಹಾರಿಹೋಗುತ್ತವೆ ಎನ್ನುವ ನಂಬಿಕೆಯಿದೆ. ಉತ್ತಮ ಪೈರು ಹಾಗೂ ಜೀವನದಲ್ಲಿ ಖುಷಿ ನೀಡಿದ್ದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಸಂಕ್ರಾಂತಿಯಂದು ಗಾಳಿಪಟವನ್ನು ಹಾರಿಸುತ್ತಾರೆ ಎನ್ನುವ ಮಾತಿದೆ.

    State level kite festival organized by Kanmuchale Makkala Gumpu attracted people in Tumakuru on Sunday . –KPN ### Tumakuru State level kite festival

    ಅಲ್ಲದೆ ಉತ್ತರಾಯಣದ ಸಮಯದಲ್ಲಿ ನೀಲಿ ಬಾನಂಗಳ ಗಾಳಿಪಟ ಹಾರಿಸಲು ಸಜ್ಜಾದಂತೆ ಇರುತ್ತದೆ. ಅದು ಗಾಳಿಪಟಗಳನ್ನು ಹಾರಿಸಲು ಸೂಕ್ತ ಸಮಯವಾಗಿರುತ್ತದೆ. ಜೊತೆಗೆ ಬಾನಂಗಳದಲ್ಲಿ ಗಾಳಿಪಟದ ಬಣ್ಣದ ಚಿತ್ತಾರದ ಸುಂದರ ನೋಟ ಕಣ್ಣಿಗೆ ಆನಂದ ನೀಡುತ್ತದೆ. ಆದ್ದರಿಂದ ಗಾಳಿಪಟ ಹಾರಿಸಲಾಗುತ್ತದೆ ಎನ್ನಲಾಗುತ್ತೆ.

    ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು!

  • Happy Makar Sankranti 2025: ವರ್ಷದ ಮೊದಲ ಹಬ್ಬಕ್ಕೆ ನೀವು ವಿಶ್‌ ಮಾಡ್ಬೇಕಾ? ವಾಟ್ಸಪ್‌ ಸ್ಟೇಟಸ್‌ಗೆ ಇಲ್ಲಿದೆ ಟಿಪ್ಸ್‌

    Happy Makar Sankranti 2025: ವರ್ಷದ ಮೊದಲ ಹಬ್ಬಕ್ಕೆ ನೀವು ವಿಶ್‌ ಮಾಡ್ಬೇಕಾ? ವಾಟ್ಸಪ್‌ ಸ್ಟೇಟಸ್‌ಗೆ ಇಲ್ಲಿದೆ ಟಿಪ್ಸ್‌

    ಮಕರ ಸಂಕ್ರಾಂತಿ ಹಬ್ಬವು ಮಾನವ ಚೈತನ್ಯ ಮತ್ತು ಜೀವನದ ಸಂತೋಷದ ಆಚರಣೆಯಾಗಿದೆ. ಕುಟುಂಬ ಮತ್ತು ಸ್ನೇಹಿತರು ಒಟ್ಟಾಗಿ ಸೇರಿ ಸಂಭ್ರಮಿಸುವ ಸಮಯವಿದು. ಈ ಹಬ್ಬದ ಸಮಯದಲ್ಲಿ, ಜನರು ಗಂಗಾ, ಯಮುನಾ, ಗೋದಾವರಿ, ಕೃಷ್ಣ ಮುಂತಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಏಕೆಂದರೆ ಅದು ಮಾನವ ಪಾಪಗಳನ್ನು ತೊಳೆಯುತ್ತದೆ ಎಂಬ ನಂಬಿಕೆ ಜನರದ್ದು. ಅಲ್ಲದೇ, ರುಚಿಕರ ಊಟ ತಯಾರಿಸುತ್ತಾರೆ ಮತ್ತು ಮನೆಯ ಅಂಗಳದಲ್ಲಿ ನಿಂತು ಬಣ್ಣಬಣ್ಣ ಚಿತ್ತಾರದ ಗಾಳಿಪಟಗಳನ್ನು ಹಾರಿಸುವ ಮೂಲಕ ಒಟ್ಟಿಗೆ ಹಬ್ಬವನ್ನು ಆನಂದಿಸುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ, ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ನೀವು ಶುಭ ಸಂದೇಶ ಕಳುಹಿಸಬೇಕೇ? ವಾಟ್ಸಪ್‌ನಲ್ಲಿ ವಿಶ್‌ ಮಾಡ್ಬೇಕಾ? ಇಲ್ಲಿದೆ ಹಾಗಾದ್ರೆ ಮುಂದೆ ನೋಡಿ….

     

  • ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ – ಕನ್ನಡದಲ್ಲೇ ಪ್ರಧಾನಿ ಮೋದಿ ವಿಶ್‌

    ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ – ಕನ್ನಡದಲ್ಲೇ ಪ್ರಧಾನಿ ಮೋದಿ ವಿಶ್‌

    ಬೆಂಗಳೂರು: ನಾಡಿನಾದ್ಯಂತ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಂಭ್ರಮ ಜೋರಾಗಿದೆ.  ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಅಗತ್ಯ ವಸ್ತುಗಳ ಖರೀದಿಗೆ ಜನ ಮಾರುಕಟ್ಟೆಗೆ ದಾಂಗುಡಿ ಇಡುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ರಾಸುಗಳಿಂದ ಕಿಚ್ಚು ಹಾಯಿಸಲು ಭರ್ಜರಿ ತಯಾರಿ ನಡೆಸಿದ್ದಾರೆ

    ಇನ್ನೂ ಸ್ನೇಹಿತರು, ಬಂಧು-ಬಾಂಧವರು ಪರಸ್ಪರ ಶುಭಕೋರುತ್ತಿದ್ದಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಬ್ಬದ ಶುಭ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ದೇಶದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಪವಿತ್ರ ಸಂಕ್ರಾಂತಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತಸ ಮತ್ತು ಅಮೃದ್ಧಿಯನ್ನು ತರಲಿ. ಸುಗ್ಗಿಯ ಕಾಲವು ಸಮೃದ್ಧಿ ಮತ್ತು ಸಂತೋಷದಿಂದ ತುಂಬಲಿ ಎಂದು ಹಾರೈಸುತ್ತೇನೆ. ಮುಂಬರುವ ದಿನಗಳಲ್ಲಿ ನಿಮ್ಮ ಎಲ್ಲಾ ಆಕಾಂಕ್ಷೆಗಳು ಈಡೇರಲಿ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ರಾಜ್ಯದ ಗಣ್ಯಮಾನ್ಯರೂ ಹಬ್ಬಕ್ಕೆ ಶುಭಹಾರೈಸಿದ್ದಾರೆ.

    ಡಿ.ಕೆ ಶಿವಕುಮಾರ್‌:
    ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬಾರಿಯ ಸುಗ್ಗಿ ಹಬ್ಬವು ನಮ್ಮ ನಾಡಿಗೆ ಹಾಗೂ ರೈತರ ಬದುಕಲ್ಲಿ ಸುಖ, ಶಾಂತಿ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ.

    ಹೆಚ್‌.ಡಿ ಕುಮಾರಸ್ವಾಮಿ
    ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ತೇಜೋಮಯನಾದ ಸೂರ್ಯ ದೇವನು ಪಥ ಬದಲಿಸುವ ಈ ಉತ್ತರಾಯಣ ಪುಣ್ಯಕಾಲವು ಎಲ್ಲರ ಬದುಕಿನಲ್ಲೂ ಸುಖ-ಶಾಂತಿ, ನೆಮ್ಮದಿ-ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ. ಇದನ್ನೂ ಓದಿ: ಕಲಬುರಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮನೆಗೆಲಸ, ಟಾಯ್ಲೆಟ್ ಕ್ಲಿನಿಂಗ್ – ಮುಖ್ಯಶಿಕ್ಷಕಿ ವಿರುದ್ಧ FIR

    ಬಸವರಾಜ ಬೊಮ್ಮಾಯಿ:
    ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ, ಎಲ್ಲರಿಗೂ ಶುಭವಾಗಲಿ.

    ಬಿ.ಎಸ್‌ ಯಡಿಯೂರಪ್ಪ:
    ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಉತ್ತರಾಯಣ ಪರ್ವಕಾಲವು ಎಲ್ಲರ ಬದುಕಿನಲ್ಲೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಗಳ ಹೊಂಬೆಳಕನ್ನು ಹರಡಲಿ ಎಂದು ಹಾರೈಸುತ್ತೇನೆ.

    ಬಿ.ವೈ ವಿಜಯೇಂದ್ರ:
    ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ರೈತ ಕಾಯಕದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಸುಗ್ಗಿಯ ಹಬ್ಬವು ನಾಡಿನೆಲ್ಲೆಡೆ ನೆಮ್ಮದಿ ನೆಲೆಸಿ, ಎಲ್ಲರ ಬದುಕಿನಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಹೊತ್ತು ತರಲೆಂದು ಶುಭ ಹಾರೈಸುತ್ತೇನೆ.

  • ಸಂಕ್ರಾಂತಿ ಸಂಭ್ರಮಕ್ಕಾಗಿ ಮತ್ತೆ ಜೊತೆಯಾದ ಬಿಗ್ ಬಾಸ್ ಸ್ಪರ್ಧಿಗಳು

    ಸಂಕ್ರಾಂತಿ ಸಂಭ್ರಮಕ್ಕಾಗಿ ಮತ್ತೆ ಜೊತೆಯಾದ ಬಿಗ್ ಬಾಸ್ ಸ್ಪರ್ಧಿಗಳು

    ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಆಟಕ್ಕೆ ತೆರೆ ಬಿದ್ದಿದೆ. ಈ ಸೀಸನ್ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿರೋದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಸಂಕ್ರಾಂತಿ ಹಬ್ಬದ (Sankranti Festival) ಆಚರಣೆಗಾಗಿ ಬಿಗ್ ಬಾಸ್ ಸ್ಪರ್ಧಿಗಳು ಮತ್ತೆ ಜೊತೆಯಾಗಿದ್ದಾರೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಈ ಬಾರಿ ಪ್ರವೀಣರು ಮತ್ತು ನವೀನರು ಎಂಬ ಭಿನ್ನವಾಗಿರುವ ಥೀಮ್ ಜೊತೆ ಬಿಗ್ ಬಾಸ್ ಶೋ ಮಾಡಲಾಗಿತ್ತು. ಸಾಕಷ್ಟು ಟ್ವಿಸ್ಟ್‌ಗಳ ಮಧ್ಯೆ ಆಟಕ್ಕೆ ತೆರೆ ಬಿದ್ದಿದೆ. ರೂಪೇಶ್ (Roopesh Shetty) ವಿನ್ನರ್ ಆದರೆ, ರಾಕೇಶ್ ಅಡಿಗ (Rakesh Adiga)  ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಸಂಕ್ರಾಂತಿ ಹಬ್ಬಕ್ಕಾಗಿ ಬಿಗ್ ಬಾಸ್‌ನ ಕೆಲ ಸ್ಪರ್ಧಿಗಳು ಒಟ್ಟಿಗೆ ಸೇರಿದ್ದಾರೆ.

    ಖಾಸಗಿ ವಾಹಿನಿ ಸ್ಪೆಷಲ್ ಸಂದರ್ಶನಕ್ಕಾಗಿ ಸಂಕ್ರಾಂತಿ ಹಬ್ಬದಲ್ಲಿ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಕಾವ್ಯಶ್ರೀ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಹೀಗೆ ಎಲ್ಲರೂ ಒಟ್ಟಾಗಿದ್ದಾರೆ. ಜೊತೆಯಾಗಿ ಸಂಕ್ರಾಂತಿ ಹಬ್ಬವನ್ನ ಆಚರಣೆ ಮಾಡಿದ್ದಾರೆ. ಆದರೆ ಸಾನ್ಯ ಅಯ್ಯರ್ (Sanya Iyer) ಈ ಸಂಭ್ರಮದಲ್ಲಿ ಮಿಸ್ ಆಗಿದ್ದಾರೆ. ಇದನ್ನೂ ಓದಿ: ತೆರಿಗೆ ಇಲಾಖೆ ವಿರುದ್ದ ಹೈಕೋರ್ಟ್ ಮೆಟ್ಟಿಲು ಏರಿದ ನಟಿ ಅನುಷ್ಕಾ ಶರ್ಮಾ

     

    View this post on Instagram

     

    A post shared by Deepika Das (@deepika__das)

    ಬಿಗ್ ಬಾಸ್ (Bigg Boss) ನೆಚ್ಚಿನ ಸ್ಪರ್ಧಿಗಳು ಮತ್ತೆ ಜೊತೆಯಾಗಿರುವುದು ಅಭಿಮಾನಿಗಳು ಖುಷಿಕೊಟ್ಟಿದೆ. ಸದ್ಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹೈಪ್ ಕ್ರಿಯೆಟ್ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!

    ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!

    ಬೆಂಗಳೂರು: `ಬೆಳಗ್ಗೆ ಎದ್ದರೆ ಸಾಕು ಹೊರಗೆ ಕಾಲಿಡೋಕೆ ಆಗಲ್ಲ, ಚಳಿಯಪ್ಪಾ ಚಳಿ’ ಇದು ಸದ್ಯ ಬೆಂಗಳೂರಿನ (Bengaluru) ಪರಸ್ಥಿತಿ. ಹಾಗಾಗಿ ಚಳಿ ಇನ್ನೂ ಎಷ್ಟು ದಿನ ಇರುತ್ತೆ? ಇದ್ರಿಂದ ಜನರ ಆರೋಗ್ಯದಲ್ಲಾದ ಏರುಪೇರುಗಳೇನು? ಅನ್ನೋ ಚಿಂತೆ ಜನರಲ್ಲಿ ಮನೆ ಮಾಡಿದ್ದು, ಹವಾಮಾನ ಇಲಾಖೆ (Meteorological Department) ಆರೋಗ್ಯ (Health) ಸಲಹೆ ನೀಡಿದೆ.

    ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಚಳಿಯಿದೆ. ಬೆಂಗಳೂರಿಗೂ ಸಹ ಕೊರವ ಚಳಿಯ ಎಫೆಕ್ಟ್ ತಟ್ಟಿದ್ದು, ಸಿಲಿಕಾನ್ ಸಿಟಿ ಜನ ಥಂಡಾ ಹೊಡೆದಿದ್ದಾರೆ. ಈ ಚಳಿ ಕಾಟ ಈ ತಿಂಗಳ ಕೊನೆಯವರೆಗೂ ಇರಲಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ. ಆದ್ರೆ ಸಂಕ್ರಾಂತಿವರೆಗೆ (Sankranti Festival) ಹೆಚ್ಚು ಶೀತ, ಚಳಿಗಾಳಿ ಇರಲಿದೆ. ಮುಂದಿನ ವಾರದಲ್ಲಿ ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ. ಇದನ್ನೂ ಓದಿ: ಪಿಲ್ಲರ್ ದುರಂತ ಬಳಿಕ ಮತ್ತೊಂದು ಎಡವಟ್ಟು – ಬ್ರಿಗೇಡ್ ರಸ್ತೆಯಲ್ಲಿ 30 ಅಡಿ ಆಳಕ್ಕೆ ಕುಸಿದ ರಸ್ತೆ

    ಕಳೆದ ಕೆಲ ದಿನಗಳಿಂದ ಹೆಚ್ಚಾಗಿದ್ದು, ಬಹುತೇಕ ಕಡೆ ಕನಿಷ್ಠ ಉಷ್ಣಾಂಶ ಕೂಡ ಗಮನಾರ್ಹವಾಗಿ ಇಳಿಕೆ ಕಂಡಿದೆ. ನಿನ್ನೆ ಅತೀ ಕಡಿಮೆ ಕನಿಷ್ಠ ಉಷ್ಣಾಂಶ ಬಾಗಲಕೋಟೆಯಲ್ಲಿ 8.4 ದಾಖಲಾಗಿದೆ. ಇಂದು ಬೀದರ್, ವಿಜಯಪುರ, ಬಾಗಲಕೋಟೆ, ಬಳ್ಳಾರಿ ಹಾಗೂ ಮಂಡ್ಯ (Mandya) ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ರುಚಿಯಾದ ಅನಾನಸ್ ಕೇಸರಿಬಾತ್ ಮಾಡಿ ಮಕ್ಕಳಿಗೆ ನೀಡಿ

    ಇನ್ನೂ ಶೀತ ಅಲೆಯ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಈ ಚಳಿಯಿಂದ ಮೂಗಿನಿಂದ ರಕ್ತ ಬರಬಹುದು, ಚರ್ಮದಲ್ಲಿ ಡ್ರೈನೆಸ್‌ (ಚರ್ಮ ಒಣಗುವಿಕೆ) ಉಂಟಾಗಬಹುದು, ಚರ್ಮ ತುರಿಕೆಯ ಸಾಧ್ಯತೆ ಹಾಗೂ ವೃದ್ಧರು ಮಕ್ಕಳಿಗೆ ನಡುಕ ಉಂಟಾಗಬಹುದು ಎಚ್ಚರಿಕೆ ನೀಡಿದ್ದಾರೆ.

    ಆದ್ದರಿಂದ ತಲೆ, ಕೈ, ಕಾಲಿಗೆ ಸಾಕ್ಸ್ ಹಾಕಬೇಕು, ಕಿವಿಗೆ ಹತ್ತಿ ಇಟ್ಟುಕೊಳ್ಳಬೇಕು, ಸೂರ್ಯನ ಬೆಳಕಿಗೆ ಮೈ ಒಡ್ಡಿ ನಿಲ್ಲಬೇಕು ಎಂದು ಹವಾಮಾನ ತಜ್ಞ ಪ್ರಸಾದ್ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರತಿ ತಿಂಗಳು 6 ಸಾವಿರ ಪಿಂಚಣಿ ಕೊಡಿ – ಸರ್ಕಾರಕ್ಕೆ ಬೋಳುತಲೆ ಪುರುಷರ ಸಂಘ ಮನವಿ

    ಪ್ರತಿ ತಿಂಗಳು 6 ಸಾವಿರ ಪಿಂಚಣಿ ಕೊಡಿ – ಸರ್ಕಾರಕ್ಕೆ ಬೋಳುತಲೆ ಪುರುಷರ ಸಂಘ ಮನವಿ

    ಹೈದರಾಬಾದ್: ಇತ್ತೀಚೆಗಷ್ಟೇ ವಿಮೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮದ್ಯಪಾನಪ್ರಿಯರ ಸಂಘ ಸರ್ಕಾರಕ್ಕೆ ಮನವಿ ಮಾಡಿದ್ದು, ಕರ್ನಾಟಕದಾದ್ಯಂತ ಸುದ್ದಿಯಾಗಿತ್ತು. ಇದೀಗ ಬೋಳುತಲೆ ಪುರುಷರ ಸಂಘವೊಂದು (Bald Mens Group), ಪ್ರತಿ ತಿಂಗಳು 6 ಸಾವಿರ ಪಿಂಚಣಿ ನೀಡಬೇಕೆಂದು ಸರ್ಕಾರಕ್ಕೆ (Government) ಒತ್ತಾಯಿಸಿರೋದು ಸುದ್ದಿಯಾಗಿದೆ.

    ಹೌದು. ತಮಗೆ ತಿಂಗಳಿಗೆ 6 ಸಾವಿರ ಪಿಂಚಣಿ (Pension) ನೀಡುವಂತೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ತಂಗಲ್ಲಪಲ್ಲಿ ಗ್ರಾಮದ ಬೋಳುತಲೆಯ ಪುರುಷರ ಸಂಘ ಸರ್ಕಾರವನ್ನು ಒತ್ತಾಯಿಸಿದೆ. ಬೋಳು ತಲೆಯ ಪುರುಷರಿಗೆ ಸಂಕ್ರಾಂತಿ (Sankranti Festival) ಉಡುಗೊರೆಯಾಗಿ ಪಿಂಚಣಿ ಘೋಷಿಸಬೇಕು. ಸರ್ಕಾರ ವೃದ್ಧರು, ವಿಧವೆಯರು, ದೈಹಿಕ ವಿಕಲಚೇತನರು ಮತ್ತು ಇತರರಿಗೆ ಪಿಂಚಣಿ ನೀಡುತ್ತಿದೆ. ಅದರಂತೆ ನಮ್ಮ ಮನವಿಯನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಬೋಳುತಲೆ ಪುರುಷರ ಸಂಘ ತೆಲಂಗಾಣ ಸರ್ಕಾರಕ್ಕೆ (Telangana Government) ಆಗ್ರಹಿಸಿದೆ.

    ನಾವು ತಲೆಯಲ್ಲಿ ಕೂದಲು ಇಲ್ಲದೇ ಸಾಕಷ್ಟು ಮುಜುಗರ ಅನುಭವಿಸುತ್ತಿದ್ದೇವೆ. ಕೆಲವರು ನಮ್ಮನ್ನ ನೋಡಿ ಅಪಹಾಸ್ಯ ಮಾಡ್ತಾರೆ. ಇದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಸರ್ಕಾರ ನಮ್ಮ ಬಗ್ಗೆ ವಿಶೇಷವಾಗಿ ಗಮನಹರಿಸಬೇಕು ಎಂದು ಕೋರಿದೆ. ಇದನ್ನೂ ಓದಿ: ಗಂಭೀರ್‌ಗೆ ಯಾಕೆ ಧೋನಿ, ಕೊಹ್ಲಿ ಮೇಲೆ ಅಷ್ಟೊಂದು ಸಿಟ್ಟು?

    ಇದೇ ತಿಂಗಳ ಜನವರಿ 5ರಂದೇ ಬೋಳುತಲೆ ಪುರುಷರ ಸಂಘ ಅನೌಪಚಾರಿಕ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದೆ. ಸಂಕ್ರಾಂತಿ ನಂತರ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದೆ. ಇದರಲ್ಲಿ ಕೂದಲು ಕಳೆದುಕೊಂಡಿರುವ 30ಕ್ಕೂ ಹೆಚ್ಚು ಪುರುಷರು ಭಾಗವಹಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ನಾಳೆ ಅಧಿಕೃತವಾಗಿ ಘೋಷಣೆ ಮಾಡ್ತಾರಾ ಸಿದ್ದರಾಮಯ್ಯ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈಕುಂಠ ಏಕಾದಶಿ, ಸಂಕ್ರಾಂತಿಗೂ ಕೊರೊನಾ ಕರಿನೆರಳು – ದೇವಾಲಯಗಳಿಗೆ ಟಫ್ ರೂಲ್ಸ್?

    ವೈಕುಂಠ ಏಕಾದಶಿ, ಸಂಕ್ರಾಂತಿಗೂ ಕೊರೊನಾ ಕರಿನೆರಳು – ದೇವಾಲಯಗಳಿಗೆ ಟಫ್ ರೂಲ್ಸ್?

    ಬೆಂಗಳೂರು: ಚೀನಾದಲ್ಲಿ ಡೆಡ್ಲಿ ಕೊರೊನಾ (Corona Virus) ರೂಪಾಂತರಿಯ ಅಬ್ಬರ ಜೋರಾಗಿದ್ದು ಚೀನಾ ಅಕ್ಷರಶಃ ನಲುಗಿ ಹೋಗಿದೆ. ಈಗಾಗಲೇ ಭಾರತದಲ್ಲೂ (India) ಚೀನಾದ ಬಿಎಫ್.7 ಉಪತಳಿ (BF7 Variant) ಪತ್ತೆಯಾಗಿದ್ದು, ರಾಜ್ಯದಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ (Government Of Karnataka) ಹಲವು ಕ್ರಮಗಳನ್ನ ಜಾರಿಗೊಳಿಸಿದೆ.

    ಮುಂದಿನ 3 ತಿಂಗಳು ಅಲರ್ಟ್ ಆಗಿರಲು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳನ್ನ ಎಚ್ಚರಿಸಿದ್ದು, ನಮ್ಮ ರಾಜ್ಯವೂ ಸಕಲ ಸಿದ್ಧತೆ ಮಾಡಿಕೊಳ್ತಿದೆ. ಈ ಬಾರಿ ಹೊಸ ವರ್ಷಕ್ಕೆ ಮಾತ್ರವಲ್ಲದೇ ವೈಕುಂಠ ಏಕಾದಶಿ ಸಂಕ್ರಾಂತಿ ಸಂಭ್ರಮದ ಮೇಲೂ ಕೊರೊನಾ ಕರಿನೆರಳು ಆವರಿಸಿದೆ. ಪ್ರತಿ ವಾರವೂ ಕೊರೊನಾ ಮಾರ್ಗಸೂಚಿಗಳ (Covid Guidelines) ಅವಲೋಕನ ಮಾಡಿಕೊಳ್ಳಲಾಗುತ್ತಿದ್ದು, ಕೊಂಚ ಕೇಸ್ ಏರಿಕೆಯಾದ್ರೂ ಮುಂದಿನ 90 ದಿನಗಳಿಗೆ ನಿಯಮಗಳು ನಿರ್ಣಾಯಕವಾಗಲಿದೆ. ಹೀಗಾಗಿ ಆರೋಗ್ಯ ಇಲಾಖೆ (Health Department) ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ‘ಆಪರೇಷನ್ ಡಿ’ ಸಿನಿಮಾ

    ಧಾರ್ಮಿಕ ಕಾರ್ಯಕ್ರಮಗಳ ಮೇಲೂ ನಿಗಾ: ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಮಾತ್ರವಲ್ಲದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಜನ ಸೇರುವುದನ್ನು ಕಡಿವಾಣ ಹಾಕಲು ದೇವಸ್ಥಾನಗಳಿಗೂ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ. ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ಕ್ರಮಗಳು ಏನೇನು ಬರಲಿವೆ?: ವೈಕುಂಠ ಏಕಾದಶಿ ದಿನ ಭಕ್ತರು ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ ನೀಡುವುದು, ದೇವಸ್ಥಾನದ ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸರ್ ಅಳವಡಿಸುವುದು, ಜನಜಂಗುಳಿ ತಡೆಯಲು ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಹಾಗೂ ಸಂಕ್ರಾಂತಿ ಹಬ್ಬಕ್ಕೆ (Sankranti Festival) ಜನಜಂಗುಳಿ ತಡೆಯಲು ಈಗಿನಿಂದಲೇ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.

    Live Tv
    [brid partner=56869869 player=32851 video=960834 autoplay=true]

  • ಹಬ್ಬದಂದು ಹಸುವಿನ ಮೈ ತೊಳೆಯಲು ಹೋದ ಪೇದೆ ನೀರುಪಾಲು

    ಹಬ್ಬದಂದು ಹಸುವಿನ ಮೈ ತೊಳೆಯಲು ಹೋದ ಪೇದೆ ನೀರುಪಾಲು

    ರಾಮನಗರ: ಹೊಸ ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ತೆರಳಿದ್ದ ಪೊಲೀಸ್ ಪೇದೆಯೊಬ್ಬ ಹಸುಗಳ ಮೈ ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಹುಣಸನಹಳ್ಳಿಯಲ್ಲಿ ನಡೆದಿದೆ.

    ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿ ಗ್ರಾಮದ ಚಿಕ್ಕವೆಂಕಟಯ್ಯ ಪುತ್ರ ಚಿಕ್ಕಯ್ಯ (30) ಮೃತ ಪೊಲೀಸ್ ಪೇದೆ. ರಾಮನಗರ ಜಿಲ್ಲಾ ಪೊಲೀಸ್ ಭವನದಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಚಿಕ್ಕಯ್ಯ ಸಂಕ್ರಾಂತಿ ಹಬ್ಬ ಆಚರಿಸಲು ನಿನ್ನೆ ಸ್ವಗ್ರಾಮಕ್ಕೆ ತೆರಳಿದ್ದರು. ಮನೆಯಲ್ಲಿನ ರಾಸುಗಳ ಮೈ ತೊಳೆದು ಸಿಂಗಾರ ಮಾಡಲು ಕೆರೆಗೆ ಹೋಗಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ.

    ಹಸುಗಳ ಮೈ ತೊಳೆಯಲು ಹೋಗಿದ್ದ ಚಿಕ್ಕಯ್ಯ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕೆರೆಯ ಬಳಿ ಹೋಗಿ ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ರಾತ್ರಿಯಾಗಿದ್ದ ಕಾರಣ ಶವ ಸಿಕ್ಕಿರಲಿಲ್ಲ. ಇಂದು ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆಯಲಾಗಿದೆ.

    ಮೃತ ಪೇದೆ ಚಿಕ್ಕಯ್ಯ ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯ ಟಪ್ಪಾಲು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನೆ ಸಂಬಂಧ ಕೋಡಿಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.