Tag: ಸಂಕೇತ್ ಏಣಗಿ

  • ನೂತನ ಸರ್ಕಾರದಲ್ಲಿ ಸುಪ್ರೀಂಕೋರ್ಟ್ ವಕೀಲ ಸಂಕೇತ್ ಏಣಗಿಗೆ ಒಲಿಯಲಿದ್ಯಾ ಅಡ್ವೊಕೇಟ್ ಜನರಲ್ ಹುದ್ದೆ?

    ನೂತನ ಸರ್ಕಾರದಲ್ಲಿ ಸುಪ್ರೀಂಕೋರ್ಟ್ ವಕೀಲ ಸಂಕೇತ್ ಏಣಗಿಗೆ ಒಲಿಯಲಿದ್ಯಾ ಅಡ್ವೊಕೇಟ್ ಜನರಲ್ ಹುದ್ದೆ?

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಯಾರಾಗ್ತಾರೆ ಅಡ್ವೊಕೇಟ್ ಜನರಲ್ ಅನ್ನೋ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ. ಪ್ರಮುಖವಾಗಿ ನಾಲ್ವರ ಹೆಸರುಗಳು ಮುನ್ನೆಲೆಗೆ ಬಂದಿದ್ದು, ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್, ಸುಪ್ರೀಂ ಕೋರ್ಟ್ (Supreme Court) ವಕೀಲ ಸಂಕೇತ್ ಏಣಗಿ, ಮಧುಸೂಧನ್ ನಾಯಕ್ ಹಾಗೂ ಕಾಂತರಾಜು ಹೆಸರುಗಳು ಚಾಲ್ತಿಯಲ್ಲಿವೆ.

    ಕಾಂಗ್ರೆಸ್ (Congress) ಪಕ್ಷವನ್ನ ನ್ಯಾಯಾಲಯಗಳಲ್ಲಿ ಬಲವಾಗಿ ಸಮರ್ಥಿಸಿಕೊಂಡು ಹಲವಾರು ಗೆಲುವುಗಳನ್ನ ತಂದುಕೊಟ್ಟ ಕೀರ್ತಿ ಸಂಕೇತ್ ಏಣಗಿಯವರಿಗೆ ಸಲ್ಲುತ್ತೆ. ಸಂಕೇತ್ ಏಣಗಿಯವರು ಪ್ರಬಲ ಲಿಂಗಾಯತ ಜಾತಿಗೆ ಸೇರಿದವರಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಲಿಂಗಾಯತ (Lingayat) ಅಸ್ತ್ರ ಬಳಸಿ ಇವರ ಕಾನೂನು ಹೋರಾಟವನ್ನ ತಪ್ಪಿಸಿ, ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡಿದರಾದರೂ, ಪಕ್ಷ ನಿಷ್ಠೆಯಿಂದ ಕಾಂಗ್ರೆಸ್ ತೊರೆಯದೆ ಕೋರ್ಟ್ ಗಳಲ್ಲಿ ಸಮರ್ಥ ವಾದ ಮಂಡಿಸಿ, ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ರು. ಇದನ್ನೂ ಓದಿ: Exclusive- ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಹಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಹೇಗೆ?

    ಲಿಂಗಾಯತ ಕಮ್ಯುನಿಟಿಗೆ ಸಿಎಂ, ಡಿಸಿಎಂ ಪೋಸ್ಟ್ ಸಿಗದ ಹಿನ್ನೆಲೆಯಲ್ಲಿ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ವೋಟ್ ಹಾಕಿಸಿಕೊಳ್ಳಲು ಲಿಂಗಾಯತ ಕಮ್ಯುನಿಟಿ ಬೇಕು, ಹುದ್ದೆಗೆ ಮಾತ್ರ ಯಾಕಿಲ್ಲ ಅಂತಾ ಸರ್ಕಾರವನ್ನ ಟೀಕಿಸ್ತಿದ್ದಾರೆ. ಹೀಗಾಗಿ ಈ ಬಾರಿ ಅಡ್ವೊಕೇಟ್ ಜನರಲ್ ಹುದ್ದೆ ಸಂಕೇತ್ ಏಣಗಿ (Sanket Yenagi) ಯವರಿಗೆ ಕೊಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗ್ತಿದೆ. ತಾನೂ ಪ್ರಬಲ ಆಕಾಂಕ್ಷಿ ಅಂತಾ ಟ್ವೀಟ್ ಮೂಲಕ ಸಿಎಂ ಹಾಗೂ ಡಿಸಿಎಂಗೆ ಒತ್ತಾಯಿಸುವ ಕೆಲಸ ಮಾಡಿದ್ದಾರೆ ಸಂಕೇತ್ ಏಣಗಿ.

    ಬಿಜೆಪಿಯ ಸಾಕಷ್ಟು ಪ್ರಬಲ ವಿರೋಧದ ನಡುವೆಯೂ, ಈವರೆಗೂ ಅತ್ಯಂತ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸಂವಿಧಾನದ ಆಶಯ ಮತ್ತು ತತ್ವವನ್ನೂ ಹಾಗೂ ಕಾಂಗ್ರೆಸ್ ಪಕ್ಷ ಮತ್ತು ಅದರ ತತ್ವ ಸಿದ್ಧಾಂತಗಳನ್ನು ಎಲ್ಲ ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯದಲ್ಲಿ ಎಲ್ಲ ಹಂತದಲ್ಲೂ ಶಕ್ತಿಮೀರಿ ಸಮರ್ಥ ಹಾಗೂ ಸಮರ್ಪಕವಾಗಿ ರಕ್ಷಿಸಿದ್ದೇನೆ. ಇದಕ್ಕಾಗಿ ಬಿಜೆಪಿಯಿಂದ ಸಾಕಷ್ಟು ವೈಯಕ್ತಿಕ ಹಾಗೂ ವೃತ್ತಿಪರ ಹಾನಿ, ತೊಂದರೆ, ಕೀಳಮಟ್ಟದ ಟೀಕೆ, ಮಾನಸಿಕ ಹಾಗೂ ಚಿತ್ರಹಿಂಸೆ ಅನುಭವಿಸಿದ್ದರೂ, ಎಂದೂ ಎದೆಗುಂದದೇ ನನ್ನ ಕರ್ತವ್ಯ ನಾನು ಮಾಡಿದ್ದೇನೆ. ನನ್ನ ಕಾಂಗ್ರೆಸ್ ಪಕ್ಷ ನನಗೆ ಎಂದೂ ಅನ್ಯಾಯ ಮಾಡದು ಎಂಬ ಗಾಢ ನಂಬಿಕೆ ನನಗಿದೆ ಎಂದು ಸಂಕೇತ ಏಣಗಿ ತಿಳಿಸಿದ್ದಾರೆ.

    ಅಡ್ವೊಕೇಟ್ ಜನರಲ್ ಹುದ್ದೆ ಸಂಕೇತ್ ಏಣಗಿಯವರಿಗೆ ದೊರಕಿದ್ದೇ ಆದಲ್ಲಿ ದೇಶದ ಇತಿಹಾಸದಲ್ಲಿ 43 ವರ್ಷಕ್ಕೆ ಈ ಹುದ್ದೆಗೇರಿದ ಅತಿ ಕಿರಿಯ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ 49 ವರ್ಷಕ್ಕೆ ಸಂತೋಷ್ ಹೆಗ್ಡೆಯವರು ಅಡ್ವೊಕೇಟ್ ಜನರಲ್ ಹುದ್ದೆಗೇರಿದ್ರು.

  • ಹೈಕೋರ್ಟ್ ನೋಟಿಸ್ ಪಡೆಯದ ರಮೇಶ್ ಜಾರಕಿಹೊಳಿ – ವಿಚಾರಣೆ ಬಳಿಕ ನೋಟಿಸ್ ರಿಸೀವ್

    ಹೈಕೋರ್ಟ್ ನೋಟಿಸ್ ಪಡೆಯದ ರಮೇಶ್ ಜಾರಕಿಹೊಳಿ – ವಿಚಾರಣೆ ಬಳಿಕ ನೋಟಿಸ್ ರಿಸೀವ್

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯುವತಿ ಎಸ್‍ಐಟಿ ಬದ್ಧತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾಯಮೂರ್ತಿ ಶ್ರೀ ಶ್ರೀನಿವಾಸ್ ಹರೀಶ್ ಕುಮಾರ್ ರವರ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.

    ಹೈಕೋರ್ಟ್ ನಿಂದ ನೋಟಿಸ್ ಪಡೆದು ಎಸ್‍ಐಟಿ ಪರ ನ್ಯಾಯವಾದಿ ಪ್ರಸನ್ನಕುಮಾರ್ ಹಾಜರಾಗಿದ್ದರು. ಆದ್ರೆ ಹೈಕೋರ್ಟ್ ನೋಟಿಸ್ ಈವರೆಗೂ ರಮೇಶ್ ಜಾರಕಿಹೊಳಿ ಪಡೆದಿಲ್ಲ. ಹೈಕೋರ್ಟ್ ಜಾರಿ ಮಾಡಿದ ಹ್ಯಾಂಡ್ ಸಮನ್ಸ್ ಪಡೆಯಲು ರಮೇಶ್ ಜಾರಕಿಹೊಳಿ ನಿರಾಕರಿಸಿದ ವಿಷಯದೆಡೆ ನ್ಯಾಯಾಲಯದ ಗಮನ ಸೆಳೆದ ಸಂತ್ರಸ್ತೆ ಪರ ವಕೀಲ ಸಂಕೇತ್ ಏಣಗಿ, ರಮೇಶ್ ಜಾರಕಿಹೊಳಿ ಅವರ ಪರವಾಗಿ ಕಾಲಾವಕಾಶ ಕೇಳಿದ ಎಸ್‍ಐಟಿ ಪರ ನ್ಯಾಯವಾದಿ ಪ್ರಸನ್ನಕುಮಾರ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಎಸ್‍ಐಟಿ ಪರ ನ್ಯಾಯವಾದಿಗಳು ರಮೇಶ್ ಜಾರಕಿಹೊಳಿ ಪರವಲ್ಲ ಎಂದು ಪ್ರಸನ್ನಕುಮಾರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತೆ ಪರ ವಕೀಲ ಸಂಕೇತ್ ಏಣಗಿ, ಜನಪ್ರತಿನಿಧಿಗಳ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ರಚಿತವಾದ ವಿಶೇಷ ಪೀಠಕ್ಕೆ ಈ ಪ್ರಕರಣವನ್ನು ವರ್ಗಾವಣೆ ಮಾಡಲು ಮನವಿ ಮಾಡಿದ್ರು.

    ಸಂತ್ರಸ್ತೆ ಪರ ವಕೀಲ ಸಂಕೇತ ಏಣಗಿ ಮನವಿ ಪುರಸ್ಕರಿಸಿ, ಪ್ರಕರಣವನ್ನು ವಿಶೇಷ ಪೀಠಕ್ಕೆ ವರ್ಗಾವಣೆ ಮಾಡಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ರವರ ಏಕ ಸದಸ್ಯ ಪೀಠ, ಪ್ರಕರಣ ವಿಚಾರಣೆಯನ್ನು ಇದೇ ತಿಂಗಳು 23ನೇ ದಿನಾಂಕದಂದು ನಿಗದಿ ಮಾಡಿ ವಿಚಾರಣೆ ಮುಂದೂಡಿದರು.

    ಏಕಸದಸ್ಯ ಪೀಠದಲ್ಲಿ ವಿಚಾರಣೆ ಮುಗಿದ ನಂತರ ಧಿಡೀರ್ ಆಗಿ ರಮೇಶ್ ಜಾರಕಿಹೊಳಿ ಕುಟುಂಬ ನೋಟಿಸ್ ಸ್ವೀಕರಿಸಿದೆ. ಜೂನ್ 23ಕ್ಕೆ ಸಂತ್ರಸ್ತೆಯ ಮದ್ಯಂತರ ಅರ್ಜಿ ವಿಚಾರಣೆ ಹೈಕೋರ್ಟ್ ಮುಖ್ಯಪೀಠದಲ್ಲಿ ನಡೆಯಲಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸ್‍ಗೆ ಸಿಕ್ಕಿಲ್ಲ ಮುಕ್ತಿ

  • ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು: ಕೆಪಿಸಿಸಿ ವಕ್ತಾರ ಏಣಗಿ

    ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು: ಕೆಪಿಸಿಸಿ ವಕ್ತಾರ ಏಣಗಿ

    – ರಾಜ್ಯ ರಾಜಕಾರಣದಲ್ಲಿ ರಸ ಮಂಜರಿ ಕಾರ್ಯಕ್ರಮ
    – ಒಬ್ಬ ಸಚಿವ ವೈಚಾರಿಕವಾಗಿ ಶುದ್ಧವಾಗಿರಬೇಕು

    ಬೆಂಗಳೂರು: ಮಾಜಿ ಮಂತ್ರಿ ಅವರದ್ದು ಎನ್ನಲಾದ ವೀಡಿಯೋ ಬಯಲಾಗ್ತಿದ್ದಂತೆ ಸಂಪುಟದ ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿರೋದು ವಿಪಕ್ಷಗಳಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಕೆಪಿಸಿಸಿ ವಕ್ತಾರ ಸಂಕೇತ್ ಏಣಗಿ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ರಸ ಮಂಜರಿ ಕಾರ್ಯಕ್ರಮ ಆರಂಭವಾಗಿದೆ. ಪದೇ ಪದೇ ರಂಜಿಸತೊಡಗಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ.. ಇವರ ಸಿಡಿನೂ ಇದ್ಯಾ ಎಂಬ ಅನುಮಾನ ಮೂಡುತ್ತಿದೆ. ನಿಮಗೆ ಆಗದಿದ್ದರೆ ರಾಜೀನಾಮೆ ಕೊಟ್ಟು ಹೊರಗೋಗಿ ಅಂತಾ ಆಗ್ರಹಿಸಿದರು.

    8 ತಿಂಗಳ ಹಿಂದೆ ಯತ್ನಾಳ್ ಈ ಬಗ್ಗೆ ಮಾತನಾಡುತ್ತಿದ್ದರು. ಆನಂತರ ಸಂತೋಷ್ ಆತ್ಮಹತ್ಯೆ ಪ್ರಯತ್ನ ಮಾಡಿದರು. ಆನಂತರ ಉಮೇಶ್ ಕತ್ತಿ, ಲಕ್ಷ್ಮಣ ಸವದಿ ಎಲ್ಲರು ಸಿಡಿ ಸಿಡಿ ಅನ್ನತೊಡಗಿದರು. ಯತ್ನಾಳ್ ಸ್ಪಷ್ಟವಾಗಿ ಯಡಿಯೂರಪ್ಪ, ವಿಜಯೇಂದ್ರ, ಬಿಜೆಪಿ ಸಿಡಿಯಿಂದ ಮುಜುಗರಕ್ಕೆ ಒಳಗಾಗ್ತಾರೆ ಅಂತ. ನಾಳೆ ಒಂದು ಸುದ್ದಿ ರಾಜ್ಯ ಸರ್ಕಾರವನ್ನ ತಲ್ಲಣಗೊಳಿಸುತ್ತೆ ಅಂತ ಯತ್ನಾಳ್ ಹೇಳಿದರು. ಮರು ದಿನ ಸಿಡಿ ಬಂತು. ಸಚಿವರು ಹಾಗೂ ಶಾಸಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಎಲ್ಲಿ ಸಿಡಿ ಬಹಿರಂಗವಾಗುತ್ತೋ ಎಂಬ ಭಯ ಕಾಡ್ತಿದೆ ಅನ್ನಿಸುತ್ತೆ. ಏನು ತಪ್ಪು ಮಾಡದಿದ್ದರೆ ಕೋರ್ಟ್ ಗೆ ಹೋಗುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದರು.

    ಆರು ಸಚಿವರು ರಕ್ಷಣೆ ಕೊಡಿ ಅಂತ ಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮನ್ನೇ ರಕ್ಷಣೆ ಮಾಡಿಕೊಳ್ಳೋಕೆ ಆಗದವರು ಇವರು ಜನರಿಗೆ ಇನ್ನೇನು ರಕ್ಷಣೆ ಕೊಡ್ತಾರೆ? ಇವರಿಗೆ ತಪ್ಪು ಮಾಡಿರುವ ಗಿಲ್ಟ್ ಕಾಡುತ್ತಿರಬಹುದು. ಏನೂ ತಪ್ಪು ಮಾಡದಿದ್ದರೆ ಯಾಕೆ ಹೋಗಬೇಕಿತ್ತು. ಒಬ್ಬ ಸಚಿವ ವೈಚಾರಿಕವಾಗಿ ಶುದ್ಧವಾಗಿರಬೇಕು. ಬ್ಲಾಕ್ ಮೇಲ್ ಮಾಡ್ತಿದ್ರೆ ಗಮನಕ್ಕೆ ತರಬೇಕು. ಸುಮ್ಮನೆ ಭಯವಿತ್ತು ಅಂತ ಯಾಕೆ ಹೋಗಬೇಕು. ಹರಿಶ್ಚಂದ್ರರಾಗಿದ್ದರೆ ಮಿಡಿಯಾ ಯಾಕೆ ಬಿತ್ತರಿಸುತ್ತೆ. ಅಸತ್ಯ ಇದ್ದರೆ ಕೋರ್ಟ್ ಕಟಕಟೆ ಹತ್ತಬಹುದು. ಸುಮ್ಮನೆ ಮಿಡಿಯಾ ಮೇಲೆ ಯಾಕೆ ಆರೋಪ ಮಾಡ್ತೀರಿ ಎಂದು ವಾಗ್ದಾಳಿ ನಡೆಸಿದರು.

    ಸಂತ್ರಸ್ಥರೇ ದೂರು ಕೊಡಬೇಕೆಂದಿಲ್ಲ. ಅವರ ಪರವಾಗಿ ಯಾರು ಬೇಕಾದರೂ ದೂರು ಕೊಡಬಹುದು. ಅವರು ಠಾಣೆ ಮೆಟ್ಟಿಲೇರಿದಾಗ ದೂರು ದಾಖಲಿಸಬೇಕು. ಪುರಾವೆಗಳು ಇದ್ದರೆ ತಕ್ಷಣವೇ ಎಫ್ ಐಆರ್ ಮಾಡಬೇಕು. ಆದ್ರೆ ಇಲ್ಲಿ ಆಡಿಯೋ, ವೀಡಿಯೋ ಇರುವ ಸಿಡಿ ಇದೆ. ಇದೆಲ್ಲವೂ ಎಫ್ ಐಆರ್ ಹಾಕಲು ಮುಖ್ಯವಾಗಿರುತ್ತದೆ. ಇಲ್ಲಿಯವರೆಗೆ ಎಫ್ ಐಆರ್ ದಾಖಲಿಸಿಲ್ಲ. ಇವತ್ತು ಕಮೀಷನರ್ ಗೂ ಎಫ್ ಐಆರ್ ಹಾಕಲು ಸಾಧ್ಯವಾಗ್ತಿಲ್ಲ. ಇದು ಕಂಟೆಂಫ್ಟ್ ಆಫ್ ಕೋರ್ಟ್ ಆಗಲಿದೆ, ಪೊಲೀಸ್ ಆಯುಕ್ತರಿಗೂ ಇದು ಅನ್ವಯವಾಗಲಿದೆ. ಎಫ್ ಐಆರ್ ದಾಖಲಿಸದೆ ತನಿಖೆ ಮಾಡುತ್ತಿದ್ದಾರೆ. ಇನ್ನೂ ವಿಚಾರಣಾ ಹಂತದಲ್ಲೇ ಪೊಲೀಸರಿದ್ದಾರೆ. ಇಲ್ಲಿಯವರೆಗೆ ಯಾಕೆ ಎಫ್ ಐಆರ್ ದಾಖಲಿಸಿಲ್ಲ ಎಂದರು.

    ಒಂದು ಹೆಜ್ಜೆ ಮುಂದೆ ಹೋದ ಮಾಜಿ ಸಚಿವ ಸಾರಾ ಮಹೇಶ್, ಅಂಗೈ ಹುಣ್ಣಿಗೆ ಕನ್ನಡಿ ಬೇಕೇನ್ರಿ ಅರ್ಜಿ ಹಾಕಿರೋದೇ ನಾವೆಲ್ಲಾ ತಲೆ ತಗ್ಗಿಸೋ ವಿಚಾರ. ಯಾರು ಕೋರ್ಟಿಗೆ ಹೋಗಿದ್ದಾರೋ.. ಅವರನ್ನೆಲ್ಲಾ ಸಂಪುಟದಿಂದ ವಜಾ ಮಾಡಿ ಅಂತಾ ಆಗ್ರಹಿಸಿದ್ದಾರೆ. ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ವಿ ಅಂದ್ರು. ಬಾಂಬೆನಲ್ಲಿ ಏನ್ ಮಾಡ್ತಿದ್ರು ಅಂತ ಈಗ ಹೇಳಲಿ. ಅದರ ಬಗ್ಗೆ ಮಾತನಾಡೋಕು ಅಸಹ್ಯ ಆಗುತ್ತೆ ಅಂತಾ ಹೇಳಿದ್ರು. ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೀತಿನಿ ಅಂದವ್ರು ಎಲ್ಲಿ ಹೋದ್ರು ಎಂದು ವಿಶ್ವನಾಥ್‍ರನ್ನು ಕೆಣಕಿದರು.