Tag: ಷೇರು ಮಾರುಕಟ್ಟೆ

  • ಭಾರತದ ಷೇರು ಮಾರುಕಟ್ಟೆಯನ್ನು ನೋಡಿ ನಾವು ಕಲಿಯಬೇಕು: ಚೀನಾ

    ಭಾರತದ ಷೇರು ಮಾರುಕಟ್ಟೆಯನ್ನು ನೋಡಿ ನಾವು ಕಲಿಯಬೇಕು: ಚೀನಾ

    ಬೀಜಿಂಗ್: ಭಾರತದ ಷೇರು ಮಾರುಕಟ್ಟೆಯನ್ನು ನೋಡಿ ನಾವು ಕಲಿಯಬೇಕು ಎಂದು ಚೀನಾದ ಮಾರುಕಟ್ಟೆ ತಜ್ಞೆ ಹೇಳಿದ್ದಾರೆ ಎಂಬುದಾಗಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

    ಚೀನಾದ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಸಂಶೋಧಕಿ ಲಿಯು ಕ್ಸಿಯಾಕ್ಸ್ಯೂ ಚೀನಾದ ಕಮ್ಯೂನಿಸ್ಟ್ ಸರ್ಕಾರದ ಮುಖವಾಣಿ ಎಂದೇ ಬಿಂಬಿತವಾಗಿರುವ ಗ್ಲೋಬಲ್ ಟೈಮ್ಸ್ ಗೆ ಈ ಹೇಳಿಕೆ ನೀಡಿದ್ದಾರೆ.

    ಚೀನಾದ ಮಾರುಕಟ್ಟೆಗೆ ಹೋಲಿಸಿದರೆ ಭಾರತದ ಮಾರುಕಟ್ಟೆ ಹೆಚ್ಚು ಪ್ರೌಢವಾಗಿದೆ. ವಿದೇಶಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಚೀನಾದ ಷೇರು ಮಾರುಕಟ್ಟೆ ಸೂಕ್ಷ್ಮವಾಗಿದ್ದು ಹಣಕಾಸಿನ ಅಪಾಯ ಹೆಚ್ಚಿದೆ ಎಂದಿದ್ದಾರೆ.

    ದಶಕಗಳ ಹಿಂದೆ ಭಾರತದಲ್ಲಿ ವ್ಯಾಪಾರದ ಕೊರತೆ ಇತ್ತು. ಈ ಕೊರತೆ ನೀಗಿಸಲು ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಬಹಳ ಹೋಮ್‍ವರ್ಕ್ ಮಾಡತೊಡಗಿತು. ಹೂಡಿಕೆದಾರರ ಆಸಕ್ತಿಯನ್ನು ರಕ್ಷಿಸಲು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಷೇರು ಮಾರುಕಟ್ಟೆಯನ್ನು ಭಾರತ ರೂಪಿಸಿತು ಎಂದು ವರದಿ ಮಾಡಿದೆ.

    ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಸಮರ ಪರೋಕ್ಷವಾಗಿ ಭಾರತಕ್ಕೆ ನೆರವಾಗಲಿದೆ. ಏಷ್ಯಾದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಹೂಡಿಕೆದಾರರು ಚೀನಾವನ್ನು ಬಿಟ್ಟು ಭಾರತದ ಕಡೆ ಹೋಗುತ್ತಾರೆ ಎಂದು ಕ್ಸಿಯಾಕ್ಸ್ಯೂ ಅಭಿಪ್ರಾಯಪಟ್ಟಿದ್ದಾರೆ.

    ಭಾರತ ಆರ್ಥಿಕ ಬೆಳವಣಿಗೆಯ ಕುರಿತ ವಿಶ್ವಾಸ ವೃದ್ಧಿ, ದೇಶೀಯ ಮತ್ತು ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾದ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಮೊಟ್ಟ ಮೊದಲ ಬಾರಿಗೆ ಈ ವಾರ 38,000 ಅಂಕಗಳನ್ನು ಗಳಿಸಿತ್ತು.

  • ಟಿಸಿಎಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್!

    ಟಿಸಿಎಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್!

    ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಕಂಪೆನಿಯನ್ನು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾಗಿ ಹೊರಹೊಮ್ಮಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ತನ್ನ ಷೇರಿನ ಬೆಲೆ 2.4% ಏರಿಕೆಯಾದ ಹಿನ್ನೆಲೆಯಲ್ಲಿ ರಿಲಯನ್ಸ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ರಿಲಯನ್ಸ್ ಷೇರಿನ ಬೆಲೆ 2.4% ಏರಿಕೆಯಾದ ಪರಿಣಾಮ ಮಂಗಳವಾರ  ಒಂದು ಷೇರಿನ ಬೆಲೆ 1,177 ರೂ. ಇದ್ದರೆ, ಟಿಸಿಎಸ್ ಒಂದು ಷೇರಿನ ಬೆಲೆ 1,930 ರೂ. ಇತ್ತು. ಟಿಸಿಎಸ್ 7.39 ಲಕ್ಷ ಕೋಟಿ ರೂ. ಮೌಲ್ಯದ ಕಂಪೆನಿಯಾಗಿದ್ದರೆ ರಿಲಯನ್ಸ್ ಈಗ 7.46 ಲಕ್ಷ ಕೋಟಿ ರೂ. ಮೌಲ್ಯದ ಕಂಪೆನಿಯಾಗಿ ಹೊರಹೊಮ್ಮಿದೆ.

    ಕಳೆದ ಎರಡು ತಿಂಗಳಿನಿಂದ ರಿಲಯನ್ಸ್ ಷೇರು ಏರಿಕೆ ಕಾಣುತ್ತಿದ್ದು, ವಿಶೇಷವಾಗಿ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಜಿಯೋದಿಂದಾಗಿ ಏರಿಕೆಯಾಗುತ್ತಿದೆ.

    ಶುಕ್ರವಾರ ರಿಲಯನ್ಸ್ ಕಂಪೆನಿ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಏಪ್ರಿಲ್-ಜೂನ್ ಅವಧಿಯಲ್ಲಿ 9,459 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ಸಂಸ್ಥೆ ಕಳೆದ ವರ್ಷ ಇದೇ ಅವಧಿಯಲ್ಲಿ 8,021 ಕೋಟಿ ರೂ. ಲಾಭ ದಾಖಲಿಸಿತ್ತು. ಇದನ್ನೂ ಓದಿ: ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!