Tag: ಷೇರು ಮಾರುಕಟ್ಟೆ

  • ಅದಾನಿ – ಹಿಂಡನ್‌ಬರ್ಗ್‌ : ಸುಪ್ರೀಂಗೆ ತನಿಖಾ ವರದಿ ಸಲ್ಲಿಕೆ

    ಅದಾನಿ – ಹಿಂಡನ್‌ಬರ್ಗ್‌ : ಸುಪ್ರೀಂಗೆ ತನಿಖಾ ವರದಿ ಸಲ್ಲಿಕೆ

    ನವದೆಹಲಿ: ಅದಾನಿ ಸಮೂಹದ ಕಂಪನಿಗಳ ವಿರುದ್ಧ ಹಿಂಡೆನ್‌ಬರ್ಗ್ (Hindenburg) ಸಂಶೋಧನಾ ವರದಿಯಲ್ಲಿನ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ (Supreme Court) ನೇಮಕ ಮಾಡಿದ ಸಮಿತಿ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ.

    ನಿವೃತ್ತ ನ್ಯಾಯಾಧೀಶ ಎ.ಎಂ ಸಪ್ರೆ ನೇತೃತ್ವದಲ್ಲಿ ಒ.ಪಿ. ಭಟ್, ನ್ಯಾಯಮೂರ್ತಿ ಜೆ.ಪಿ. ದೇವಧರ್, ಕೆ.ವಿ. ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರ್ ಸುಂದರೇಶನ್ ಅವರನ್ನು ಒಳಗೊಂಡ ಸಮಿತಿಯನ್ನು ಸಿಜೆಐ ಡಿ.ವೈ. ಚಂದ್ರಚೂಡ್ (DY Chandrachud) ನೇತೃತ್ವದ ತ್ರಿ ಸದಸ್ಯ ಪೀಠ ಮಾರ್ಚ್‌ನಲ್ಲಿ ನೇಮಿಸಿತ್ತು. ಇಂದು ಸಮಿತಿ ವರದಿಯನ್ನು ಸಲ್ಲಿಸಿದ್ದು ಮೆ 12 ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ.

    ಅದಾನಿ ಕಂಪನಿಗಳಲ್ಲಿ ಅಕ್ರಮ ನಡೆದಿದೆಯೇ? ಷೇರುಗಳ ಮೌಲ್ಯ ಹೆಚ್ಚಿಸಲು ಕೃತಕ ಪ್ರಯತ್ನಗಳು ನಡೆದಿವೆಯೇ? ಸೆಬಿ ನಿಯಮಗಳ ಸೆಕ್ಷನ್ 19ರ ಉಲ್ಲಂಘನೆಯಾಗಿದೆಯೇ? ಹೂಡಿಕೆದಾರರ ರಕ್ಷಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಕೋರ್ಟ್ ಸಮಿತಿಗೆ ಸೂಚಿಸಿತ್ತು. ತನಿಖೆಯನ್ನು ನಡೆಸಿ ಎರಡು ತಿಂಗಳೊಳಗೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡಬೇಕು ಎಂದು ಕೋರ್ಟ್ ಆದೇಶಿಸಿತ್ತು. ಇದನ್ನೂ ಓದಿ: Karnataka Election 2023 Live – ರಾಜ್ಯದಲ್ಲಿ 1 ಗಂಟೆವರೆಗೆ 37.25% ಮತದಾನ

    ಸೆಬಿ ಅಧ್ಯಕ್ಷರು ಎಲ್ಲಾ ಅಗತ್ಯ ಮಾಹಿತಿಯನ್ನು ತಜ್ಞರ ಸಮಿತಿಗೆ ಒದಗಿಸಬೇಕು. ಸಂಬಂಧಪಟ್ಟ ಕೇಂದ್ರ ಸರ್ಕಾರದ ಏಜೆನ್ಸಿಗಳು ಸಮಿತಿಯೊಂದಿಗೆ ಸಹಕರಿಸಬೇಕು ಕೋರ್ಟ್‌ ಸೂಚಿಸಿತ್ತು.

    ಅದಾನಿ ಕಂಪನಿಗಳ ತನಿಖೆಗೆ ಸುಪ್ರೀಂ ಕೋರ್ಟ್ ಸಮಿತಿ ರಚಿಸಿದ್ದನ್ನು ಗೌತಮ್ ಅದಾನಿ (Gautam Adani) ಸ್ವಾಗತಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, ಸಮಯ ಕಳೆದಂತೆ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆ. ಸತ್ಯ ಮೇಲುಗೈ ಸಾಧಿಸಲಿದೆ ಎಂದು ಹೇಳಿದ್ದರು.

    6 ತಿಂಗಳು ಬೇಕು:
    ತನಿಖೆ ಪೂರ್ಣಗೊಳಿಸಲು ಕಾಲವಕಾಶದ ಅಗತ್ಯವಿದೆ. ಇನ್ನೂ ಆರು ತಿಂಗಳು ಅವಕಾಶ ವಿಸ್ತರಣೆಗೆ ಸೆಬಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದೆ. ಇದುವರೆಗೂ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಹಾಗೂ ಇದುವರೆಗೂ ತಿಳಿದು ಬಂದ ಅಂಶಗಳನ್ನು ತಜ್ಞರ ಸಮಿತಿಯ ಗಮನಕ್ಕೆ ತರಲಾಗಿದೆ. ಅಲ್ಲದೆ ಹಿಂಡೆನ್‍ಬರ್ಗ್ ವರದಿಯಲ್ಲಿ ತಿಳಿಸಿರುವ 12 ಶಂಕಾಸ್ಪದ ವರ್ಗಾವಣೆಗಳ ಕುರಿತು ಆಳವಾದ ತನಿಖೆ ನಡೆಸಬೇಕಿದೆ. ಆ ವರ್ಗಾವಣೆಗಳ ಮಾಹಿತಿಗಳು ಜಟಿಲವಾಗಿವೆ ಎಂದು ಸೆಬಿ ತನ್ನ ಮನವಿಯಲ್ಲಿ ತಿಳಿಸಿತ್ತು.

  • ಅದಾನಿ ಬಳಿಕ ಹೊಸ ವರದಿ ಬಿಡುಗಡೆಯ ಸೂಚನೆ ಕೊಟ್ಟ ಹಿಂಡೆನ್‍ಬರ್ಗ್

    ಅದಾನಿ ಬಳಿಕ ಹೊಸ ವರದಿ ಬಿಡುಗಡೆಯ ಸೂಚನೆ ಕೊಟ್ಟ ಹಿಂಡೆನ್‍ಬರ್ಗ್

    ನವದೆಹಲಿ: ಅದಾನಿ ಗ್ರೂಪ್‍ನ (Adani group) ವರದಿಯ ನಂತರ ಅಮೆರಿಕ (America) ಮೂಲದ ಹಿಂಡೆನ್‍ಬರ್ಗ್ ರಿಸರ್ಚ್ ಸಂಸ್ಥೆ  (Hindenburg) ಗುರುವಾರ ಮತ್ತೊಂದು ಹೊಸ ವರದಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ತನ್ನ ಟ್ವೀಟ್‍ನಲ್ಲಿ ಶೀಘ್ರದಲ್ಲೇ ಹೊಸ ವರದಿ ಬಿಡುಗಡೆ ಮಾಡುವುದಾಗಿ ಸಂಸ್ಥೆ ಪ್ರಕಟಿಸಿದೆ.

    ಜನವರಿಯಲ್ಲಿ ಹಿಂಡೆನ್‍ಬರ್ಗ್ ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದೆ. ಅಕ್ರಮದ ಮೂಲಕ ತನ್ನ ಸಮೂಹದ ಕಂಪನಿಯ ಷೇರು ಬೆಲೆಯನ್ನು ಏರಿಕೆ ಮಾಡಿದ ಎಂದು ಆರೋಪಿಸಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಷೇರಿನ ಮೌಲ್ಯ ಹೆಚ್ಚಿಸಲು ಹಲವಾರು ಶೆಲ್ ಕಂಪನಿಗಳನ್ನು (shell companies) ಬಳಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಇದನ್ನೂ ಓದಿ: ಮಹಿಳೆಯರ ಅಶ್ಲೀಲ ವೀಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ – ಅಮೃತ್‌ಪಾಲ್ ಕರಾಳ ಮುಖ ಬಯಲು

    ವರದಿಯ ಬೆನ್ನಲ್ಲೆ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದ್ದವು. ಈ ಬಗ್ಗೆ ಅದಾನಿ ಸಮೂಹ ಸಂಸ್ಥೆಗಳು ವರದಿಯ ಅಂಶಗಳನ್ನು ದುರುದ್ದೇಶಪೂರಿತ ಮತ್ತು ಆಧಾರರಹಿತ ಎಂದಿತ್ತು. ಅಲ್ಲದೇ ಭಾರತದ (India) ಮೇಲಿನ ದಾಳಿ ಇದಾಗಿದೆ ಎಂದು ತಿರುಗೇಟು ನೀಡಿತ್ತು. ಇದನ್ನೂ ಓದಿ: ಮನೆ ಬಿಟ್ಟು ನಾಪತ್ತೆಯಾದ ದಂಪತಿ – ಬೆಂಗಳೂರು ಪೊಲೀಸರಿಗೆ ಪೀಕಲಾಟ

  • ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಕುಸಿದ ಅದಾನಿ

    ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಕುಸಿದ ಅದಾನಿ

    ನವದೆಹಲಿ: ಹಿಂಡೆನ್‌ಬರ್ಗ್ (Hindenburg) ವರದಿ ಬಳಿಕ ಅದಾನಿ ಸಾಮ್ರಾಜ್ಯ ಪತನದತ್ತ ಮುಖ ಮಾಡಿದ್ದು, ಫೋರ್ಬ್ಸ್ (Forbes) ಶ್ರೀಮಂತರ ಪಟ್ಟಿಯಲ್ಲಿ ಗೌತಮ್‌ ಅದಾನಿ (Gautam Adani) 3ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಕುಸಿದಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಗಳ ನಿರಂತರ ಕುಸಿತದ ಪರಿಣಾಮದಿಂದಾಗಿ ಅವರು ದೊಡ್ಡ ಸಂಕಷ್ಟ ಎದುರಿಸುತ್ತಿದ್ದಾರೆ.

    ಜನವರಿ 24 ರಂದು ಹಿಂಡೆನ್‌ಬರ್ಗ್ ವರದಿ ಪ್ರಕಟಿಸುವ ಮುನ್ನ ಗೌತಮ್ ಅದಾನಿ ಒಟ್ಟು ಮೌಲ್ಯ 119 ಶತಕೋಟಿ ಡಾಲರ್ ಆಗಿತ್ತು. ವರದಿ ಬಂದು ಒಂದು ತಿಂಗಳ ಬಳಿಕ 85 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದು ಸದ್ಯ ಅವರ ನಿವ್ವಳ ಮೌಲ್ಯ 33 ಶತಕೋಟಿ ಡಾಲರ್‌ಗೆ ಕುಸಿದಿದೆ. ಇದನ್ನೂ ಓದಿ: `ಕೈಲಾಸ’ ಹಿಂದೂ ಧರ್ಮದ ಮೊದಲ ಸಾರ್ವಭೌಮ ರಾಜ್ಯ- UN ಮಹಾಸಭೆಯಲ್ಲಿ ನಿತ್ಯಾನಂದ ಶಿಷ್ಯೆ ಪ್ರತಿಪಾದನೆ

    ಅದಾಗ್ಯೂ ಬ್ಲೂಮ್ ಬರ್ಗ್ ಬಿಲಿನೆಯರ್ಸ್ ಸೂಚ್ಯಂಕ (Bloomberg BillionairesIndex) ಪಟ್ಟಿಯಲ್ಲಿ ಗೌತಮ್ ಅದಾನಿ 30ನೇ ಸ್ಥಾನದಲ್ಲಿದ್ದಾರೆ. ಅವರು 40 ಶತಕೋಟಿ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ ಎಂದು ಅದು ವರದಿ ಮಾಡಿದೆ. ಹಿಂಡೆನ್‌ಬರ್ಗ್ ವರದಿ ಬಳಿಕ ಅದಾನಿ 150 ಶತಕೋಟಿ ಡಾಲರ್ ಮೌಲ್ಯವನ್ನು ಕಳೆದುಕೊಂಡಿದ್ದಾರೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: Exit Polls: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಅಧಿಕಾರ – ಮೇಘಾಲಯದಲ್ಲಿ 3ನೇ ಸ್ಥಾನ

    84.3 ಶತಕೋಟಿ ಡಾಲರ್ ನಿವ್ವಳ ಮೌಲ್ಯ ಹೊಂದಿರುವ ಮುಕೇಶ್ ಅಂಬಾನಿ (Mukesh Ambani) ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ರಿಲಯನ್ಸ್‌ ಹೂಡಿಕೆ ಮಾಡಿದೆ.

  • ಅದಾನಿ ಎಂಟರ್‌ಪ್ರೈಸಸ್‌ಗೆ 820 ಕೋಟಿ ನಿವ್ವಳ ಲಾಭ – ಷೇರು ಬೆಲೆ ಜಿಗಿತ

    ಅದಾನಿ ಎಂಟರ್‌ಪ್ರೈಸಸ್‌ಗೆ 820 ಕೋಟಿ ನಿವ್ವಳ ಲಾಭ – ಷೇರು ಬೆಲೆ ಜಿಗಿತ

    ಮುಂಬೈ: ಅಕ್ಟೋಬರ್‌-ಡಿಸೆಂಬರ್‌ ಮೂರನೇ ತ್ರೈಮಾಸಿಕದಲ್ಲಿ ಅದಾನಿ ಎಂಟರ್‌ಪ್ರೈಸಸ್‌ (Adani Enterprises Ltd) 820 ಕೋಟಿ ರೂ. ನಿವ್ವಳ (Profit) ಲಾಭಗಳಿಸಿದೆ.

    2021ರ ಈ ಅವಧಿಯಲ್ಲಿ11.63 ಕೋಟಿ ರೂ. ನಷ್ಟ ಅನುಭವಿಸಿತ್ತು. ಹಿಂದಿನ ಈ ಅವಧಿಯಲ್ಲಿ 18,757.9 ಕೋಟಿ ರೂ. ಆದಾಯವಿದ್ದರೆ ಈ ಬಾರಿ ಇದು ಶೇ.42ರಷ್ಟು ಏರಿಕೆಯಾಗಿದ್ದು 26,612.2 ಕೋಟಿ ರೂ.ಗೆ ಜಿಗಿದಿದೆ.

    2022-23ರ ಹಣಕಾಸು ವರ್ಷದಲ್ಲಿ (Financial Year) ಅದಾನಿ ಎಂಟರ್‌ಪ್ರೈಸಸ್‌ 29,245 ಕೋಟಿ ರೂ. ಆದಾಯ ಮತ್ತು 582.80 ಕೋಟಿ ನಿವ್ವಳ ಲಾಭವನ್ನು ಗಳಿಸಬಹುದು ಬ್ಲೂಮ್‌ಬರ್ಗ್ ಅಂದಾಜಿಸಿದೆ. ಇದನ್ನೂ ಓದಿ: ಇಸ್ರೇಲಿನ ಹೈಫಾ ಬಂದರು ಅದಾನಿ ತೆಕ್ಕೆಗೆ

    ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ (Hindenburg Research) ಬಳಿಕ ಅದಾನಿ ಎಂಟರ್‌ಪ್ರೈಸಸ್‌ ಷೇರಿನ ಮೌಲ್ಯ ಶೇ.50ರಷ್ಟು ಕುಸಿತಕಂಡಿತ್ತು. ಆದರೆ ಮೂರನೇ ತ್ರೈಮಾಸಿಕದ ವರದಿ ಪ್ರಕಟಗೊಂಡ ಬೆನ್ನಲ್ಲೇ ಅದಾನಿ ಎಂಟರ್‌ಪ್ರೈಸಸ್‌ ಷೇರಿನ ಬೆಲೆ ಶೇ.1.91 ರಷ್ಟು ಏರಿಕೆ ಮಂಗಳವಾರ 1,750.30 ರೂ.ಗೆ(+32.75 ರೂ.) ವಹಿವಾಟು ಮುಗಿಸಿತು.

    ಕಳೆದ ಮೂರು ದಶಕಗಳಲ್ಲಿ, ಹಾಗೆಯೇ ತ್ರೈಮಾಸಿಕದಿಂದ ತ್ರೈಮಾಸಿಕ ಮತ್ತು ವರ್ಷದಿಂದ ವರ್ಷಕ್ಕೆ, ಅದಾನಿ ಎಂಟರ್‌ಪ್ರೈಸಸ್ ಭಾರತದ ಅತ್ಯಂತ ಯಶಸ್ವಿ ಮೂಲಸೌಕರ್ಯ ಕಂಪನಿಯನ್ನಾಗಿ ಹೊರಹೊಮ್ಮುತ್ತಿದೆ. ಪ್ರಸ್ತುತ ಮಾರುಕಟ್ಟೆಯ ಚಂಚಲತೆಯು ತಾತ್ಕಾಲಿಕವಾಗಿದೆ. ನಮ್ಮ ಯಶಸ್ಸಿಗೆ ನಮ್ಮ ಬಲವಾದ ಆಡಳಿತ, ಕಟ್ಟುನಿಟ್ಟಾದ ನಿಯಂತ್ರಕ ಅನುಸರಣೆ, ನಿರಂತರ ಕಾರ್ಯಕ್ಷಮತೆ ಮತ್ತು ಘನ ನಗದು ಹರಿವು ಕಾರಣ ಎಂದು ಕಂಪನಿಯ ಮುಖ್ಯಸ್ಥ ಗೌತಮ್‌ ಅದಾನಿ (Gautam Adani) ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 72 ಗಂಟೆಯ ಒಳಗಡೆ ಅದಾನಿ ಗ್ರೂಪ್‌ ಬಗ್ಗೆ ಸೆಬಿ ಸ್ಪಷ್ಟನೆ ನೀಡಬೇಕು: ಹರೀಶ್‌ ಸಾಳ್ವೆ

    72 ಗಂಟೆಯ ಒಳಗಡೆ ಅದಾನಿ ಗ್ರೂಪ್‌ ಬಗ್ಗೆ ಸೆಬಿ ಸ್ಪಷ್ಟನೆ ನೀಡಬೇಕು: ಹರೀಶ್‌ ಸಾಳ್ವೆ

    ನವದೆಹಲಿ: ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) 72 ಗಂಟೆಯ ಒಳಗಡೆ ಅದಾನಿ ಸಮೂಹದ ಬಗ್ಗೆ ಹಿಂಡೆನ್‌ಬರ್ಗ್ ಪ್ರಕಟಿಸಿದ ಆರೋಪಕ್ಕೆ ವರದಿ ನೀಡಬೇಕೆಂದು ಅದಾನಿ ಕಂಪನಿಯ ಮಾಜಿ ವಕೀಲ, ಭಾರತ ಮಾಜಿ ಸಾಲಿಸಿಟರ್‌ ಜನರಲ್‌ ಹರೀಶ್‌ ಸಾಳ್ವೆ (Harish Salve) ಹೇಳಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಅವರು, ಗೌತಮ್‌ ಆದಾನಿ (Gautam Adani) ಅವರನ್ನು ಕರೆದು ಪ್ರತಿಕ್ರಿಯೆ ಪಡೆಯಬೇಕು. ಬಳಿಕ ಕೆಲ ಕ್ಷೇತ್ರಗಳಲ್ಲಿ ಕಾಳಜಿ ಇದೆ ಅಥವಾ ಈ ವರದಿ ಅಸಂಬದ್ಧ ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

    ಭಾರತದ ಉದ್ಯಮಿಗಳು (Indian Entrepreneurs) ಈಗ ಜಗತ್ತಿನಲ್ಲಿ ಅಸ್ತಿತ್ವ ಹೊಂದಿದ್ದಾರೆ. ಇದನ್ನು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಭಾರತದಲ್ಲಿ (India) ಹೂಡಿಕೆ ಮಾಡಲು ನಾವು ಬ್ರಿಟಿಷ್ ಉದ್ಯಮಿಗಳನ್ನು ಓಲೈಸುವ ಸಮಯವಿತ್ತು. ಈಗ ಬ್ರಿಟಿಷ್ ಸರ್ಕಾರವು ಯುಕೆಯಲ್ಲಿ ಹೂಡಿಕೆ ಮಾಡಲು ಭಾರತೀಯರನ್ನು ಓಲೈಸುವುದನ್ನು ನಾವು ನೋಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಹೂಡಿಕೆದಾರರ ಹಿತಾಸಕ್ತಿಯೇ ನನಗೆ ಮುಖ್ಯ – 20,000 ಕೋಟಿ ಮೌಲ್ಯದ FPO ಹಿಂಪಡೆದ ಬಳಿಕ ಅದಾನಿ ಮೊದಲ ಪ್ರತಿಕ್ರಿಯೆ

    ಗೌತಮ್ ಅದಾನಿ ವಿರುದ್ಧ ಹೊರಿಸಲಾದ ಆರೋಪವು ಭಾರತ ಮತ್ತು ಭಾರತೀಯರ ಮೇಲೆ ನಡೆದ ದಾಳಿ. ಅದಾನಿ ಗ್ರೂಪ್ ಕಂಪನಿಗಳಲ್ಲಿ ಹೆಚ್ಚಿನವು ಪಟ್ಟಿಮಾಡಲ್ಪಟ್ಟಿವೆ, ಅವರ ಎಲ್ಲಾ ದಾಖಲೆಗಳು ಸಾರ್ವಜನಿಕ ಡೊಮೇನ್‌ನಲ್ಲಿವೆ ಎಂದು ಹೇಳಿದರು.

    ಇಂದು ಶೆಲ್‌ ಕಂಪನಿಗಳು ಇರಲು ಸಾಧ್ಯವೇ ಇಲ್ಲ. ಲಿಸ್ಟ್‌ ಮಾಡಿದ ಕಂಪನಿ ವಿದೇಶದಲ್ಲಿ ಅಂಗಸಂಸ್ಥೆ ಹೊಂದಿದ್ದರೆ, ಅವೆಲ್ಲವನ್ನೂ ತೋರಿಸಲಾಗುತ್ತದೆ. ಬ್ಯಾಲೆನ್ಸ್‌ ಶೀಟ್‌ ತೋರಿಸಿದಾಗ ಅದು ಶೆಲ್‌ ಕಂಪನಿಯಾಗಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

    ಹಿಂಡೆನ್‌ಬರ್ಗ್ ರಿಸರ್ಚ್‌ ಬಗ್ಗೆ ವ್ಯಂಗ್ಯವಾಡಿದ ಅವರು, ಅದೊಂದು ಶಾರ್ಟ್‌ ಸೆಲ್ಲರ್‌ ಕಂಪನಿಯಾಗಿದ್ದು, ಈ ರೀತಿಯ ಆರೋಪ ಮಾಡಿ ಹಣವನ್ನು ಗಳಿಸಲು ಮುಂದಾಗಿದೆ ಎಂದು ಅವರು ಆರೋಪಿಸಿದರು.

    ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ, ಈ ರೀತಿ ಕಂಪನಿ ವಿರುದ್ಧ ಕೇಸ್‌ ದಾಖಲಿಸಲು ಭಾರತದಲ್ಲಿ ಕಾನೂನು ಚೌಕಟ್ಟಿನ ಕೊರತೆಯಿದೆ. ಅವರ ವಿರುದ್ಧ ಹಾನಿ ಮಾಡಿದ್ದಕ್ಕೆ ಕೇಸ್‌ ಹಾಕಿದರೆ ಗೌತಮ್ ಅದಾನಿ ಅವರ ಮೊಮ್ಮಕ್ಕಳು ಪ್ರಕರಣದಲ್ಲಿ ಹೋರಾಡಬೇಕಾಗಬಹುದು ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 1 ವರದಿಗೆ ಕರಗಿತು 4 ಲಕ್ಷ ಕೋಟಿ ಸಂಪತ್ತು – 7ನೇ ಸ್ಥಾನಕ್ಕೆ ಜಾರಿದ ಅದಾನಿ: ಯಾವುದು ಎಷ್ಟು ಇಳಿಕೆ?

    1 ವರದಿಗೆ ಕರಗಿತು 4 ಲಕ್ಷ ಕೋಟಿ ಸಂಪತ್ತು – 7ನೇ ಸ್ಥಾನಕ್ಕೆ ಜಾರಿದ ಅದಾನಿ: ಯಾವುದು ಎಷ್ಟು ಇಳಿಕೆ?

    ಮುಂಬೈ: ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಿ ಕಳೆದ ವರ್ಷ ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆದಾರರಿಗೆ ಬಂಪರ್‌ ಫಸಲು ನೀಡಿದ್ದ ಅದಾನಿ ಸಮೂಹದ (Adani Group) ಷೇರುಗಳು ಭಾರೀ ಇಳಿಕೆ ಕಂಡಿದೆ.

    ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿದ್ದು ಎರಡೇ ದಿನದಲ್ಲಿ 4 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ.

    ವರದಿ ಪ್ರಕಟವಾದ ದಿನವೇ 46 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ್ದ ಅದಾನಿ ಗ್ರೂಪ್ ಇಂದು ಮತ್ತಷ್ಟು ನಷ್ಟ ಅನುಭವಿಸಿದೆ. 2020 ಮಾರ್ಚ್ ಬಳಿಕ ಅದಾನಿ ಸಮೂಹವು ಎದುರಿಸಿರುವ ಅತಿ ದೊಡ್ಡ ದೈನಂದಿನ ಕುಸಿತ ಇದಾಗಿದೆ. ಕಂಪನಿಗಳ ಮೌಲ್ಯ ಕುಸಿತವಾದ ಬೆನ್ನಲ್ಲೇ ಗೌತಮ್ ಆದಾನಿ (Gautam Adani) ಅವರ ಸಂಪತ್ತು ಭಾರೀ ಇಳಿಕೆಯಾಗಿದೆ. ಫೋರ್ಬ್ಸ್‌ ರಿಯಲ್‌ ಟೈಂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಅದಾನಿ ಈಗ 7ನೇ ಸ್ಥಾನಕ್ಕೆ ಜಾರಿದ್ದಾರೆ.

    ಇಂದು ಅದಾನಿ ಎಂಟರ್‌ಪ್ರೈಸಸ್‌ (Adani Enterprises) ಮುಂದುವರಿದ ಸಾರ್ವಜನಿಕ ಕೊಡುಗೆ(FPO) ಅಥವಾ ಹೊಸ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ. ಇಂದು ಒಟ್ಟು 3.63 ಲಕ್ಷ ಕೋಟಿ ಷೇರು ಖರೀದಿಗೆ ಬಿಡ್‌ ಬಂದಿದೆ. ಅದಾನಿ ಕಂಪನಿ ಆರಂಭದಲ್ಲಿ ಒಟ್ಟು 6.47 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲು ಮುಂದಾಗಿತ್ತು. ಆದರೆ ಕೊನೆಯಲ್ಲಿ ಬದಲಾವಣೆ ಮಾಡಿ ಪ್ರಸ್ತುತ ಮಾರುಕಟ್ಟೆಗೆ 4.55 ಕೋಟಿ ಷೇರುಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ

    ಎಷ್ಟು ಇಳಿಕೆ?
    ಅದಾನಿ ಪೋರ್ಟ್‌ ಒಂದು ಷೇರಿನ ಬೆಲೆ 699 ರೂ. ನಿಂದ 604 ರೂ.ಗೆ (-108 ರೂ.) ಇಳಿದರೆ ಅದಾನಿ ಎಂಟರ್‌ಪ್ರೈಸ್‌ 3,335 ರೂ. ನಿಂದ 2,768.50 (-620 ರೂ.) ಇಳಿದಿದೆ. ಅದಾನಿ ಟೋಟಲ್‌ ಗ್ಯಾಸ್‌ 3,477 ರೂ. ನಿಂದ 2,928 ರೂ.(-732 ರೂ.), ಅದಾನಿ ಟ್ರಾನ್ಸ್‌ಮಿಷನ್‌ ಲಿಮಿಟೆಡ್‌ 2,406 ರೂ. ನಿಂದ 2,014 ರೂ.(503.20 ರೂ.) ಇಳಿಕೆಯಾಗಿದೆ.

    ಅದಾನಿ ಗ್ರೀನ್‌ ಎನರ್ಜಿ 1,780 ರೂ. ನಿಂದ 1,486 ರೂ.(-371 ರೂ.), ಎಸಿಸಿ ಸಿಮೆಂಟ್ಸ್‌ 2,176 ರೂ. ನಿಂದ 1,899 ರೂ.(-265 ರೂ.), ಅಂಬುಜಾ ಸಿಮೆಂಟ್‌ 457 ರೂ. ನಿಂದ 383 ರೂ.(-76 ರೂ.) ಇಳಿದಿದೆ.

    ಒಟ್ಟು ಮೌಲ್ಯದಲ್ಲಿ ಎಷ್ಟು ಇಳಿಕೆ?
    ಅದಾನಿ ಎಂಟರ್‌ಪ್ರೈಸ್‌ 63 ಸಾವಿರ ಕೋಟಿ ರೂ., ಅದಾನಿ ಪೋರ್ಟ್‌ 41 ಸಾವಿರ ಕೋಟಿ ರೂ., ಅದಾನಿ ವಿಲ್ಮರ್‌ 7 ಸಾವಿರ ಕೋಟಿ, ಅದಾನಿ ಪವರ್‌ 10,300 ಕೋಟಿ ರೂ., ಅಂಬುಜಾ ಸಿಮೆಂಟ್‌ 31 ಸಾವಿರ ರೂ., ಎಸಿಸಿ 11,200 ಕೋಟಿ ರೂ., ಅದಾನಿ ಟ್ರಾನ್ಸ್‌ಮಿಷನ್‌ 83 ಸಾವಿರ ಕೋಟಿ ರೂ., ಅದಾನಿ ಟೋಟಲ್‌ 1.06 ಲಕ್ಷ ಕೋಟಿ ರೂ., ಅದಾನಿ ಗ್ರೀನ್‌ 68 ಸಾವಿರ ರೂ., ಎನ್‌ಡಿಟಿವಿ ಕಂಪನಿ 1,800 ಕೋಟಿ ರೂ.  ಮಾರುಕಟ್ಟೆ ಮೌಲ್ಯ ಇಳಿದಿದೆ..

    ಹಿಂಡೆನ್‍ಬರ್ಗ್ ವರದಿಯಲ್ಲಿ ಏನಿತ್ತು?
    ಎರಡು ವರ್ಷಗಳ ತನಿಖೆಯ ನಂತರ ಹಿಂಡೆನ್‍ಬರ್ಗ್ (Hindenburg Research) ವರದಿ ಪ್ರಕಟವಾಗಿದೆ. ದಶಕಗಳ ಅವಧಿಯ ವ್ಯವಹಾರದಲ್ಲಿ ಅದಾನಿ ಸಮೂಹ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಆರೋಪಿಸಿದೆ.

    ಅದಾನಿ ಗ್ರೂಪ್‍ನ ಮಾಜಿ ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಹಲವಾರು ಜನರನ್ನು ಸಂಶೋಧನೆಗಾಗಿ ಸಂದರ್ಶಿಸಲಾಗಿದೆ. ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹನ್ನೆರಡು ವಿವಿಧ ರಾಷ್ಟ್ರಗಳಲ್ಲಿ ಅದಾನಿ ಕಂಪನಿಗಳನ್ನು ವೀಕ್ಷಿಸಲಾಗಿದೆ ಎಂದು ಹೇಳಿದೆ. ಅದಾನಿ ಗ್ರೂಪ್ ಭಾರೀ ಸಾಲ ಮಾಡಿದೆ. ತಮ್ಮ ಸಾಲಗಳಿಗೆ ಷೇರುಗಳನ್ನೇ ಒತ್ತೆ ಇಡುತ್ತಿದೆ. ಇದರಿಂದಾಗಿ ಸಮೂಹದ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅದಾನಿ ಲೀಗಲ್ ಗ್ರೂಪ್ ಮುಖಸ್ಥ ಜತಿನ್ ಜಲುಂಧ್ವಾಲಾ, ನಾವು ಪರಿಹಾರಕ್ಕಾಗಿ ಹಿಂಡೆನ್ ಬರ್ಗ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ. ಅಮೆರಿಕ ಹಾಗೂ ಭಾರತೀಯ ಕಾನೂನುಗಳ ಅಡಿ ಸಂಬಂಧಿತ ನಿಬಂಧನೆಗಳನ್ನ ಮೌಲ್ಯಮಾಪನ ಮಾಡುತ್ತಿದ್ದೇವೆ. ಮುಂದುವರಿದ ಸಾರ್ವಜನಿಕ ಕೊಡುಗೆ(FPO) ಪ್ರಕ್ರಿಯೆಯನ್ನು ಹಾಳು ಮಾಡುವ ದುರುದ್ದೇಶಪೂರಿತ ಪ್ರಯತ್ನ. ವರದಿಯನ್ನು ಪ್ರಕಟಿಸುವ ಮೊದಲು ಹಿಂಡೆನ್‌ಬರ್ಗ್ ರಿಸರ್ಚ್ ನಮ್ಮನ್ನು ಸಂಪರ್ಕಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ನಮ್ಮ ಸಮೂಹ ಎಲ್ಲಾ ಕಾನೂನುಗಳನ್ನು ಪಾಲಿಸುತ್ತದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಂದೇ ದಿನ ಕರಗಿತು 46 ಸಾವಿರ ಕೋಟಿ – ಇದೊಂದು ಆಧಾರ ರಹಿತ ವರದಿ ಎಂದ ಅದಾನಿ ಗ್ರೂಪ್‌

    ಒಂದೇ ದಿನ ಕರಗಿತು 46 ಸಾವಿರ ಕೋಟಿ – ಇದೊಂದು ಆಧಾರ ರಹಿತ ವರದಿ ಎಂದ ಅದಾನಿ ಗ್ರೂಪ್‌

    ಮುಂಬೈ: ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದೆ ಎಂಬ ವಿದೇಶಿ ಸಂಸ್ಥೆಯ ವರದಿ ಪ್ರಕಟವಾದ ಬೆನ್ನಲ್ಲೇ ಅದಾನಿ ಸಮೂಹದ (Adani Groups) ಕಂಪನಿಗಳ ಷೇರುಗಳ (Share) ಬೆಲೆ ಭಾರೀ ಇಳಿಕೆ ಕಂಡಿದೆ.

    ಅಮೆರಿಕದ ಹಿಂಡೆನ್‌ಬರ್ಗ್ (Hindenburg) ರಿಸರ್ಚ್‌ನ ವರದಿಯ ನಂತರ ಇಂದು ಒಂದೇ ದಿನ ಅದಾನಿ ಸಮೂಹ ಕಂಪನಿಯ ಮೌಲ್ಯ 46 ಸಾವಿರ ಕೋಟಿ ರೂ. ಕರಗಿದೆ. ಈ ವರದಿ ಆಧಾರ ರಹಿತ ವರದಿಯಾಗಿದೆ ಎಂದು ಅದಾನಿ ಗ್ರೂಪ್‌ ಪ್ರತಿಕ್ರಿಯಿಸಿದೆ.

    ವರದಿಯಲ್ಲಿ ಏನಿದೆ?
    ಎರಡು ವರ್ಷಗಳ ತನಿಖೆಯ ನಂತರ ಹಿಂಡೆನ್‌ಬರ್ಗ್ ವರದಿ ಪ್ರಕಟವಾಗಿದೆ. ದಶಕಗಳ ಅವಧಿಯ ವ್ಯವಹಾರದಲ್ಲಿ ಅದಾನಿ ಸಮೂಹ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಆರೋಪಿಸಿದೆ.

    ಅದಾನಿ ಗ್ರೂಪ್‌ನ ಮಾಜಿ ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಹಲವಾರು ಜನರನ್ನು ಸಂಶೋಧನೆಗಾಗಿ ಸಂದರ್ಶಿಸಲಾಗಿದೆ. ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹನ್ನೆರಡು ವಿವಿಧ ರಾಷ್ಟ್ರಗಳಲ್ಲಿ ಅದಾನಿ ಕಂಪನಿಗಳನ್ನು ವೀಕ್ಷಿಸಲಾಗಿದೆ ಎಂದು ಹೇಳಿದೆ.

    ಅದಾನಿ ಗ್ರೂಪ್‌ ಭಾರೀ ಸಾಲ ಮಾಡಿದೆ. ತಮ್ಮ ಸಾಲಗಳಿಗೆ ಷೇರುಗಳನ್ನೇ ಒತ್ತೆ ಇಡುತ್ತಿದೆ. ಇದರಿಂದಾಗಿ ಸಮೂಹದ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಷೇರು ಬೆಲೆ ಕುಸಿತ:
    ಬುಧವಾರದ ವಹಿವಾಟಿನಲ್ಲಿ ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಪವರ್ ಮತ್ತು ಅದಾನಿ ವಿಲ್ಮಾರ್ ಶೇರುಗಳು ಮೌಲ್ಯ ಶೇ.1-4ರಷ್ಟು ಕುಸಿತ ಕಂಡಿವೆ. ಇದನ್ನೂ ಓದಿ: Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

    ಅದಾನಿ ಗ್ರೂಪ್‌ ಪ್ರತಿಕ್ರಿಯೆ ಏನು?
    ನಮ್ಮ ಸಂಸ್ಥೆಯ ವಿರುದ್ಧ ಪ್ರಕಟಿಸಿದ ವರದಿ ನಮಗೆ ಆಘಾತ ತಂದಿದೆ. ಭಾರತದ ಅತ್ಯುನ್ನತ ನ್ಯಾಯಾಲಯಗಳಿಂದ ಪರೀಕ್ಷಿಸಲ್ಪಟ್ಟ ಮತ್ತು ತಿರಸ್ಕರಿಸಲ್ಪಟ್ಟ ಹಳೆಯ, ಆಧಾರರಹಿತ ಆರೋಪಗಳುನ್ನು ಆಧಾರಿಸಿ ವರದಿ ಮಾಡಲಾಗಿದೆ.

    ಹಣಕಾಸು ತಜ್ಞರು ಮತ್ತು ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಸಿದ್ಧಪಡಿಸಿದ ವಿವರವಾದ ವಿಶ್ಲೇಷಣೆ ಮತ್ತು ವರದಿಗಳ ಆಧಾರದ ಮೇಲೆ ಹೂಡಿಕೆದಾರ ಸಮುದಾಯವು ಯಾವಾಗಲೂ ಅದಾನಿ ಗ್ರೂಪ್‌ನಲ್ಲಿ ನಂಬಿಕೆಯನ್ನು ಇರಿಸಿದೆ. ನಮ್ಮ ತಿಳುವಳಿಕೆಯುಳ್ಳ ಮತ್ತು ಜ್ಞಾನವುಳ್ಳ ಹೂಡಿಕೆದಾರರು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಏಕಪಕ್ಷೀಯ ಆಧಾರರಹಿತ ವರದಿಗಳಿಂದ ಪ್ರಭಾವಿತರಾಗುವುದಿಲ್ಲ.

    ಮುಂದುವರಿದ ಸಾರ್ವಜನಿಕ ಕೊಡುಗೆ(FPO) ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ ಪ್ರಕ್ರಿಯೆಯನ್ನು ಹಾಳು ಮಾಡುವ ದುರುದ್ದೇಶಪೂರಿತ ಪ್ರಯತ್ನ. ವರದಿಯನ್ನು ಪ್ರಕಟಿಸುವ ಮೊದಲು ಹಿಂಡೆನ್‌ಬರ್ಗ್ ರಿಸರ್ಚ್ ನಮ್ಮನ್ನು ಸಂಪರ್ಕಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ನಮ್ಮ ಸಮೂಹ ಎಲ್ಲಾ ಕಾನೂನುಗಳನ್ನು ಪಾಲಿಸುತ್ತದೆ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಷೇರು ಮಾರ್ಕೆಟ್ ಭಾಷೆಯಲ್ಲಿ ಆಮಂತ್ರಣ ಕಾರ್ಡ್ ಮಾಡಿಸಿದ ಜೋಡಿಗಳು – ಸ್ನೇಹಿತರನ್ನು ಚಿಲ್ಲರೆ ಹೂಡಿಕೆದಾರರು ಎಂದ್ರು

    ಷೇರು ಮಾರ್ಕೆಟ್ ಭಾಷೆಯಲ್ಲಿ ಆಮಂತ್ರಣ ಕಾರ್ಡ್ ಮಾಡಿಸಿದ ಜೋಡಿಗಳು – ಸ್ನೇಹಿತರನ್ನು ಚಿಲ್ಲರೆ ಹೂಡಿಕೆದಾರರು ಎಂದ್ರು

    ಮುಂಬೈ: ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯು ತಮ್ಮ ಮದುವೆಯ ಪ್ರತಿಯೊಂದು ಸಿದ್ಧತೆಯ ಬಗ್ಗೆ ಅನೇಕ ಕನಸನ್ನು ಕಟ್ಟಿಕೊಂಡಿರುತ್ತಾರೆ. ಅದಕ್ಕೆ ಆಮಂತ್ರಣ ಪತ್ರಿಕೆಯೂ ಹೊರತಲ್ಲ. ಆಮಂತ್ರಣ ಪತ್ರಿಕೆಯನ್ನು (Wedding Card) ಕೆಲವರು ಗ್ರ್ಯಾಂಡ್ ಆಗಿ ಮಾಡಿಸುವುದು ಇತ್ತೀಚಿನ ದಿನಗಳಲ್ಲಿ ಕಾಮನ್. ಆದರೆ ಮಹಾರಾಷ್ಟ್ರದ ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ಟಾಕ್ ಮಾರ್ಕೆಟ್ (Stock Market) ಪರಿಭಾಷೆಯಲ್ಲಿ ಮಾಡಿಸಿದ್ದಾರೆ.

    ಮಹಾರಾಷ್ಟ್ರದ (Maharashtra) ನಾಂದೇಡ್‍ನ ಜೋಡಿಗಳು ಉದ್ಯೋಗದಲ್ಲಿ ವೈದ್ಯರಾಗಿದ್ದರು(Doctor), ಷೇರು ಮಾರುಕಟ್ಟೆಯಿಂದ ಪ್ರೇರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯ ಪರಿಭಾಷೆಯಲ್ಲೇ ತಮ್ಮ ಮದುವೆ ಕಾರ್ಡ್‍ನ್ನು ಮಾಡಿಸಿದ್ದಾರೆ. ಈ ಕಾರ್ಡಿನ ವಿಶೇಷವೆಂದರೆ ಆಮಂತ್ರಣದಲ್ಲಿ ಬರುವ ಪ್ರತಿ ಶಬ್ದವನ್ನು ಷೇರು ಮಾರುಕಟ್ಟೆಗೆ ಸಂಬಂಧಿಸಿ ತಯಾರಿಸಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

    ಆಮಂತ್ರಣ ಕಾರ್ಡ್‍ನಲ್ಲಿ ಏನಿದೆ?: ವರನನ್ನು ಡಾ. ಸಂದೇಶ್ ಮೆಡಿಸಿನ್ ಲಿಮಿಟೆಡ್ ಎಂದು ಪರಿಚಯಿಸಿದ್ದರೆ ಮತ್ತು ಡಾ. ದಿವ್ಯಾ ಅನೆಸ್ತೇಶಿಯಾ ಲಿಮಿಟೆಡ್ ತಿಳಿಸಿದ್ದಾರೆ. ಇದು 2 ಘಟಕಗಳ ವಿಲೀನದ ಕಾರ್ಡ್ ಆಗಿದೆ ಎಂದು ತಿಳಿಸಿದ್ದಾರೆ. ಕಾರ್ಡ್‍ನ ಆರಂಭದಲ್ಲಿ ಅತ್ಯಮೂಲ್ಯ ಕಾರ್ಯಕ್ರಮದ ಆಹ್ವಾನಕ್ಕಾಗಿ ಎಂದು ತಿಳಿಸಿದೆ. ವಿಲೀನಗೊಂಡ ಘಟಕಗಳನ್ನು ನಿಯಂತ್ರಕ ಮಾನದಂಡಗಳಿಗೆ (ಹಿಂದೂ ಸಂಪ್ರದಾಯ) ಅನುಸಾರವಾಗಿ ಪಟ್ಟಿ ಮಾಡಲಾಗುತ್ತದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು

    ವಿವಾಹ ಸಮಾರಂಭವನ್ನು ಪಟ್ಟಿ ಸಮಾರಂಭ ಎಂದು ತಿಳಿಸಿರುವ ಅವರು, ಸ್ನೇಹಿತರನ್ನು ಹಾಗೂ ಕುಟುಂಬದವರನ್ನು ಚಿಲ್ಲರೆ ಹೂಡಿಕೆದಾರರು ಎಂದಿದ್ದಾರೆ. ಸಮಾರಂಭಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳಿಗೆ ಸ್ಟಾಕ್ ಮಾರ್ಕೆಟ್‍ಗೆ ಸಂಬಂಧಿಸಿದ ಹೆಸರನ್ನೇ ನೀಡಿದ್ದಾರೆ. ಸಂಗೀತವನ್ನು ರಿಂಗಿಂಗ್ ಬೆಲ್, ಸ್ವಾಗತವನ್ನು ಮಧ್ಯಂತರ ಡಿವಿಡೆಂಡ್ ಪಾವತಿ ಎಂದು ತಿಳಿಸಿದ್ದಾರೆ. ಡಿಸೆಂಬರ್ 6 ಮತ್ತು 7 ಬಿಡ್ಡಿಂಗ್ ದಿನಾಂಕವಾಗಿದ್ದು, ಗುಲ್ಬರ್ಗದ ಹುನ್ನಾಬಾದ್ ರಸ್ತೆಯಲ್ಲಿರುವ ಸಾಕಾಸರ್ ಗಾರ್ಡನ್ಸ್‍ನಲ್ಲಿ ಸ್ಟಾಕ್ ಎಕ್ಸ್‍ಚೇಂಜ್ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಬೋನಸ್ ರೂಪದಲ್ಲಿ ಸ್ಥಳೀಯದಲ್ಲವರಿಗೆ ಇರಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲೇಡಿ PSI ಕಿರುಕುಳ ಆರೋಪ- ಡೆತ್‌ನೋಟ್ ಬರೆದಿಟ್ಟು ಯುವಕ ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

    ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

    ಮುಂಬೈ: ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಷೇರು ಮಾರುಕಟ್ಟೆಯಲ್ಲಿ(Share Market) ರಕ್ತಪಾತವಾಗಿದೆ.

    ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌(Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty) ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 7 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.

    ಶುಕ್ರವಾರ 58,098 ಅಂಕದಲ್ಲಿ  ಕೊನೆಯಾಗಿದ್ದ ಸೆನ್ಸೆಕ್ಸ್‌ ಇಂದು ಆರಂಭದ ಎರಡು ಗಂಟೆಯಲ್ಲಿ 1 ಸಾವಿರ ಅಂಕ ಇಳಿಕೆಯಾಗಿತ್ತು. ಬಳಿಕ ನಿಧನವಾಗಿ ಚೇತರಿಕೆ ಕಂಡಿತು. ಅಂತಿಮವಾಗಿ 953 ಅಂಕ ಇಳಿಕೆಯಾಗಿ ದಿನದ ಕೊನೆಯಲ್ಲಿ 57,145 ಅಂಕಗಳಿಗೆ ವ್ಯವಹಾರವನ್ನು ಕೊನೆಗೊಳಿಸಿತು.

    ಶುಕ್ರವಾರ 17,327 ಅಂಕದಲ್ಲಿ ಕೊನೆಯಾಗಿದ್ದ ನಿಫ್ಟಿ ಇಂದು 311ಅಂಕ ಇಳಿಕೆಯಾಗಿ 17,016 ಅಂಕಗಳಿಗೆ ಕೊನೆಯಾಯಿತು. ಇದನ್ನೂ ಓದಿ: ಯುಪಿಎ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತ – ಇನ್ಫಿ ನಾರಾಯಣ ಮೂರ್ತಿ

    ರಕ್ತಪಾತಕ್ಕೆ ಕಾರಣ ಏನು?
    ಅಮೆರಿಕದ ಫೆಡರಲ್‌ ರಿಸರ್ವ್‌(Federal Reserve) ಬಡ್ಡಿ ದರವನ್ನು ಏರಿಸಿದ ಪರಿಣಾಮ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪರಿಣಾಮ ವಿಶ್ವಾದ್ಯಂತ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.

    ಡಾಲರ್‌ ಮುಂದೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತವಾಗಿದೆ. ಸೋಮವಾರ 81.55ಕ್ಕೆ ಇಳಿಕೆಯಾಗಿದೆ.

    ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಬಡ್ಡಿದರವನ್ನು ಮತ್ತಷ್ಟು ಏರಿಸುವ ಸಾಧ್ಯತೆಯಿದೆ. ಈ ಬಾರಿ 35 ಬೇಸಿಸ್‌ ಪಾಯಿಂಟ್‌ ಏರಿಸಬಹುದು ಎಂಬ ನಿರೀಕ್ಷೆಯಿದೆ.

    ಜಪಾನ್‌ನಲ್ಲಿ 20 ತಿಂಗಳಿನಲ್ಲೇ ಕಡಿಮೆ ಪ್ರಮಾಣದಲ್ಲಿ ಕೈಗಾರಿಕ ಪ್ರಗತಿ ದಾಖಲಾಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ವಿಶ್ವಾದ್ಯಂತ ಆರ್ಥಿಕ ಬೆಳವಣಿಗೆ ಕುಸಿದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗಳಲ್ಲಿ ರಕ್ತಪಾತ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಪತಂಜಲಿ – 5 ವರ್ಷದಲ್ಲಿ 4 IPO ಲಿಸ್ಟ್‌

    ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಪತಂಜಲಿ – 5 ವರ್ಷದಲ್ಲಿ 4 IPO ಲಿಸ್ಟ್‌

    ಮುಂಬೈ : ಪಂತಜಲಿ(Patanjali) ಸಂಸ್ಥೆಯೂ ಪತಂಜಲಿ ಸಮೂಹ ಸಂಸ್ಥೆಗಳನ್ನು ಆರಂಭಿಸಲು ಸನ್ನದ್ಧವಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ನಾಲ್ಕು ಹೊಸ ಆರಂಭಿಕ ಸಾರ್ವಜನಿಕ ಕೊಡುಗೆ(IPO) ಬಿಡುಗಡೆ ಮಾಡುವ ತಯಾರಿಯಲ್ಲಿದೆ ಎಂದು ಯೋಗ ಗುರು ಬಾಬಾ ರಾಮದೇವ್(Baba Ramdev) ಹೇಳಿದ್ದಾರೆ.

    ಮುಂಬರುವ ಐದು ವರ್ಷದಲ್ಲಿ ಪತಂಜಲಿ ಆಯುರ್ವೇದ್, ಪತಂಜಲಿ ವೆಲ್ನೆಸ್, ಪತಂಜಲಿ ಮೆಡಿಸಿನ್ ಮತ್ತು ಪತಂಜಲಿ ಲೈಫ್‌ಸೈಲ್ ಐಪಿಒಗಳನ್ನು ಕಂಪನಿ ಶೇರು ಮಾರುಕಟ್ಟೆಯಲ್ಲಿ(Share Market) ಪಟ್ಟಿ ಮಾಡಲಿದೆ. ಕನಿಷ್ಠ 5-7 ಕಂಪನಿಗಳನ್ನು ಹೊಂದುವ ಚಿಂತನೆ ಇದ್ದು ಸದ್ಯ ನಾಲ್ಕು ಪಟ್ಟಿ ಮಾಡಲು ತಯಾರಿ ಆರಂಭಗೊಂಡಿದೆ.

    ಪ್ರಸ್ತುತ ಪತಂಜಲಿಯ ಸಮೂಹದ ವಹಿವಾಟು 40,000 ಕೋಟಿ ರೂ ಇದ್ದು, ಮುಂದಿನ ಐದು ವರ್ಷಗಳಲ್ಲಿ ಇದು 1 ಲಕ್ಷ ಕೋಟಿ ಆಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ರಾಮದೇವ್ ಹೇಳಿದ್ದಾರೆ. ಅಲ್ಲದೇ ಈ ಐಪಿಒಗಳೊಂದಿಗೆ 5 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯ ತಲುಪುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಹೇಳಿದರು‌. ಇದನ್ನೂ ಓದಿ: ಪ್ರತಿಷ್ಠಿತ ಟೂರ್ನಿಗಳಲ್ಲಿ ಟೀಂ ಇಂಡಿಯಾಗೆ ನಿರಾಸೆ – ಕಾಡುತ್ತಿದೆ ಕೂಲ್ ಕ್ಯಾಪ್ಟನ್ ಕೊರತೆ

    BABA RAMDEV

    ಮುಂದಿನ ದಿನಗಳಲ್ಲಿ ಪತಂಜಲಿ 5 ಲಕ್ಷ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಕಂಪನಿಯು 1 ಲಕ್ಷ ಪತಂಜಲಿ ವೆಲ್ನೆಸ್ ಸ್ಟೋರ್‌ಗಳನ್ನು ತೆರೆಯಲು ಯೋಜಿಸಿದೆ. ಪ್ರಸ್ತುತ, ಪತಂಜಲಿ ಫುಡ್ಸ್ ಮಾತ್ರ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಏಕೈಕ ಸಮೂಹ ಕಂಪನಿಯಾಗಿದೆ. ರುಚಿ ಸೋಯಾ(Ruchi Soya) ಎಂದು ಪಟ್ಟಿ ಮಾಡಲಾದ ಈ ಕಂಪನಿಯನ್ನು ಪತಂಜಲಿ ಆಯುರ್ವೇದ್ 2019 ರಲ್ಲಿ ರೆಸಲ್ಯೂಶನ್ ಪ್ರಕ್ರಿಯೆಯ ಅಡಿಯಲ್ಲಿ 4,350 ಕೋಟಿ ರೂ.ಗೆ ಖರೀದಿಸಿತು. ಈ ಕಂಪನಿಯ ನಿವ್ವಳ ಮೌಲ್ಯ ಸುಮಾರು 50,000 ಕೋಟಿ ರೂ. ಆಗಿದ್ದು ಕಂಪನಿಯು ಈಗಾಗಲೇ ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ(BSE) ಮತ್ತು ಎನ್‌ಎಸ್‌ಇಯಲ್ಲಿ(NSE) ಪಟ್ಟಿಮಾಡಿದೆ.

    ಜೂನ್‌ನಲ್ಲಿ, ಖಾದ್ಯ ತೈಲ ಉತ್ಪಾದಕ ರುಚಿ ಸೋಯಾವನ್ನು ಪತಂಜಲಿ ಫುಡ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು‌. ಪತಂಜಲಿ ಫುಡ್ಸ್ ಷೇರು ಬೆಲೆ ಗುರುವಾರ ಬಿಎಸ್‌ಇಯಲ್ಲಿ ಶೇ.0.5 ಏರಿಕೆಯಾಗಿ 1,349 ರೂ. ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಈ ಸ್ಟಾಕ್ ಬೆಲೆಯು ಶೇ.20 ಮತ್ತು ಕಳೆದ ಆರು ತಿಂಗಳಲ್ಲಿ ಶೇ. 30 ರಷ್ಟು ಏರಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]