Tag: ಷರತ್ತು

  • ಡಿವಿಎಸ್‍ಗೆ ಆಶೀರ್ವಾದ ಮಾಡಿ ಷರತ್ತು ವಿಧಿಸಿದ ಬಿಎಸ್‍ವೈ

    ಡಿವಿಎಸ್‍ಗೆ ಆಶೀರ್ವಾದ ಮಾಡಿ ಷರತ್ತು ವಿಧಿಸಿದ ಬಿಎಸ್‍ವೈ

    ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ಎರಡನೇ ಬಾರಿ ಸಚಿವರಾಗುತ್ತಿರುವ ಹಿನ್ನೆಲೆಯಲ್ಲಿ ಡಿವಿ ಸದಾನಂದ ಗೌಡರಿಗೆ ಬಿಎಸ್ ಯಡಿಯೂರಪ್ಪ ಷರತ್ತು ವಿಧಿಸಿ ಆಶೀರ್ವಾದಿಸಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಂಸದರಾದ ಸದಾನಂದ ಗೌಡ ಅವರಿಗೆ ಕರೆ ಮಾಡಿ ಸಂಜೆ 5 ಗಂಟೆಗೆ ಮಾನ್ಯ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ 7 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸದಾನಂದಗೌಡರು ಆರ್ಶೀವಾದ ಪಡೆದರು.

    2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಮೋದಿ ಸಂಪುಟದಲ್ಲಿ ಸಚಿವರಾಗುತ್ತಿರುವುದು ಖಚಿತವಾಗುತ್ತಿದಂತೆ ಸದಾನಂದ ಗೌಡರು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಬಿಎಸ್‍ವೈರನ್ನ ಭೇಟಿ ಮಾಡಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಇತ್ತ ಬಿಎಸ್‍ವೈ, ಸದಾನಂದಗೌಡರಿಗೆ ಸಿಹಿ ತಿನಿಸಿ ಶುಭಕೋರಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‍ವೈ, ಸದಾನಂದಗೌಡರೇ ನಿಮಗೆ ಸಿಹಿ ತಿನಿಸುವ ಮೊದಲು ಒಂದು ಷರತ್ತು ಇದೆ. ನೀವು ದೆಹಲಿಯಲ್ಲಿ ದಿವಂಗತ ಅನಂತಕುಮಾರ್ ಅವರ ಸ್ಥಾನವನ್ನು ತುಂಬಬೇಕು. ಅನಂತಕುಮಾರ್ ಅವರ ರೀತಿಯಲ್ಲೇ ಕೆಲಸ ಮಾಡಬೇಕು. ರಾಜ್ಯದ ಜನರಿಗೆ ದೆಹಲಿಯಲ್ಲಿ ಸ್ಪಂದಿಸಬೇಕು ಎಂದು ಷರತ್ತುಗಳನ್ನು ವಿಧಿಸಿದರು. ಬಿಎಸ್‍ವೈರ ಷರತ್ತುಗಳಿಗೆ ಒಪ್ಪಿಕೊಂಡ ಸದಾನಂದ ಗೌಡರು ಬಳಿಕ ಸಿಹಿ ತಿನ್ನಿಸಿದರು.

  • ‘ರಾಬರ್ಟ್’ ಸಿನಿಮಾ ಸೆಟ್‍ನಲ್ಲಿ ಷರತ್ತುಗಳು ಅನ್ವಯ!

    ‘ರಾಬರ್ಟ್’ ಸಿನಿಮಾ ಸೆಟ್‍ನಲ್ಲಿ ಷರತ್ತುಗಳು ಅನ್ವಯ!

    ಬೆಂಗಳೂರು: ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಈ ಸಿನಿಮಾವನ್ನು ‘ಚೌಕ’ ಸಿನಿಮಾ ಖ್ಯಾತಿಯ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಶೂಟಿಂಗ್ ಸೆಟ್ ನಲ್ಲಿ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

    ಸಿನಿಮಾ ಸೆಟ್‍ನಲ್ಲಿ ಮೊಬೈಲ್ ಬಳಸಬಾರದು ಎಂಬ ಷರತ್ತು ಹಾಕಿದ್ದಾರೆ. ಚಿತ್ರೀಕರಣದಿಂದ ಸುಮಾರು 50 ಮೀಟರ್ ನಷ್ಟು ದೂರದವರೆಗೂ ಮೊಬೈಲ್ ಬಳಸಬಾರದು. ಈ ನಿಯಮವು ಕಲಾವಿದರು ಮತ್ತು ತಂತ್ರಜ್ಞರಿಗೆ ಇಬ್ಬರಿಗೂ ಅನ್ವಯಿಸುತ್ತದೆ ಎಂದು ನಿರ್ದೇಶಕರು ಕಟ್ಟುನಿಟ್ಟಿನ ಆದೇಶವನ್ನು ಜಾರಿ ಮಾಡಿದ್ದಾರೆ.

    ಸೆಟ್‍ನಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದರೆ ಕಲಾವಿದರು, ತಂತ್ರಜ್ಞರು ಎಲ್ಲರು ಸಿನಿಮಾ ಕಡೆ ಗಮನಹರಿಸುತ್ತಾರೆ. ಜೊತೆ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ನಿರ್ದೇಶಕರ ಆಶಯವಾಗಿದೆ. ಇನ್ನೊಂದು ಅನಗತ್ಯ ಫೋಟೋಗಳು ಅಥವಾ ವಿಡಿಯೋಗಳನ್ನು ಸೆರೆಹಿಡಿಯಬಾರದು. ಜೊತೆಗೆ ಅದನ್ನು ಪಬ್ಲಿಕ್ ಮಾಡಬಾರದು. ಈ ಮೂಲಕ ನಮ್ಮ ಶೂಟಿಂಗ್ ಸೆಟ್ ಅನ್ನು ವೃತ್ತಿಪರವಾದ ಸೆಟ್ ಆಗಿ ಮಾಡುವ ಉದ್ದೇಶದಿಂದ ಈ ಷರತ್ತು ವಿಧಿಸಲಾಗಿದೆ ಎಂದು ಹೇಳಿದ್ದಾರೆ.

    ಶೂಟಿಂಗ್ ಸೆಟ್‍ಗೆ ಅಭಿಮಾನಿಗಳು ಬರಬಹುದು. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಬಹುದು ಮತ್ತು ಚಿತ್ರೀಕರಣವನ್ನು ವೀಕ್ಷಿಸಬಹುದು. ಆದರೆ ಯಾವುದೇ ರೀತಿಯ ಫೋಟೋಗಳನ್ನು ತೆಗೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಸುಧೀರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ತಯಾರಕರು ಈ ನಿಯಯದ ಒಪ್ಪಂದಕ್ಕೆ ತಂತ್ರಜ್ಞರೊಂದಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಜೊತೆಗೆ ಚಿತ್ರೀಕರಣದ ಸಮಯದಲ್ಲಿ ಯಾವುದೇ ರೀತಿಯ ವಿಷಯವನ್ನು ಲೀಕ್ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

  • ಮದ್ವೆಗೂ ಮುನ್ನ ವಧುವಿನಿಂದ ಷರತ್ತು – ಕಂಡಿಷನ್ ಕೇಳಿ ನಾಚಿ ನೀರಾದ ವರ

    ಮದ್ವೆಗೂ ಮುನ್ನ ವಧುವಿನಿಂದ ಷರತ್ತು – ಕಂಡಿಷನ್ ಕೇಳಿ ನಾಚಿ ನೀರಾದ ವರ

    ಪಾಟ್ನಾ: ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುಂಚೆ ವಧು ಷರತ್ತು ಹಾಕುವುದು ಸಾಮಾನ್ಯವಾಗಿದೆ. ಅದೇ ರೀತಿ ವಧುವೊಬ್ಬಳು ತಾನು ಮದುವೆಯಾಗುವ ವರನಿಗೆ ಎರಡು ಷರತ್ತುಗಳನ್ನು ವಿಧಿಸಿ ಸುದ್ದಿಯಾಗಿದ್ದಾಳೆ.

    ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ ನವೆಂಬರ್ 19 ರಂದು ಅಂದರೆ ನಾಳೆ ವರ ಕೈಸರ್ ಹಾಗೂ ವಧು ಸೋನಿ ಜೋಡಿಯ ಮದುವೆ ನಿಶ್ಚಯವಾಗಿದೆ. ಆದರೆ ವಧು ಮದುವೆಗೂ ಮುನ್ನ ವರನಿಗೆ ಎರಡು ಷರತ್ತುಗಳನ್ನು ಹಾಕಿದ್ದಾಳೆ.

    ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಬೇಕು. ಇದು ಆಕೆಯ ಮೊದಲನೇಯ ಷರತ್ತು. ಮದುವೆಯ ಪತ್ರಿಕೆಯಲ್ಲಿ ಕುಟುಂಬ ಯೋಜನೆ (ಫ್ಯಾಮಿಲಿ ಪ್ಲ್ಯಾನಿಂಗ್) ಬಗ್ಗೆ ಸಂದೇಶ ನೀಡಬೇಕು ಎರಡನೇ ಷರತ್ತು ಹಾಕಿದ್ದಾಳೆ. ಎರಡನೇ ಕಂಡೀಷನ್ ಕೇಳಿ ವರ ನಾಚಿಕೊಂಡು ನಕ್ಕಿದ್ದಾನೆ.

    ವಧು ಸೋನುವಿನ ಎರಡು ಷರತ್ತಿಗೂ ವರ ಒಪ್ಪಿಗೆ ಸೂಚಿಸಿದ್ದಾನೆ. ಅಷ್ಟೇ ಅಲ್ಲದೇ ವಧು ಮದುವೆ ಕಾರ್ಡ್ ನಲ್ಲಿ ಕುಟುಂಬ ಯೋಜನೆ ಸ್ಲೋಗನ್ ಜೊತೆ ಸ್ವಚ್ಛತೆ ಬಗ್ಗೆ ಜಾಗೃತಿ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಬಗ್ಗೆ ಸಂದೇಶ ಹಾಕಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.

    ವರ ಕೈಸರ್ ಭಾವಿ ಪತ್ನಿಯ ಎಲ್ಲ ಮನವಿ ಹಾಗೂ ಷರತ್ತಿಗೂ ಖುಷಿಯಾಗಿ ಒಪ್ಪಿಕೊಂಡಿದ್ದಾನೆ. ವಧು ಸೋನು ಈ ರೀತಿಯ ಜಾಗೃತಿಯ ಸಂದೇಶವನ್ನು ಸಾರಲು ಮುಂದಾಗಿದ್ದಕ್ಕೆ ವರ ಕೈಸರ್ ತುಂಬಾ ಸಂತಸವನ್ನು ವ್ಯಕ್ತಪಡಿಸಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಜಾರಕಿಹೊಳಿ ಸಹೋದರರಿಂದ ಸರ್ಕಾರಕ್ಕೆ 4 ಷರತ್ತು!

    ಜಾರಕಿಹೊಳಿ ಸಹೋದರರಿಂದ ಸರ್ಕಾರಕ್ಕೆ 4 ಷರತ್ತು!

    ಬೆಂಗಳೂರು: ಬೆಳಗಾವಿ ವಿಚಾರವಾಗಿ ಮುನಿಸಿಕೊಂಡಿರುವ ಜಾರಕಿಹೊಳಿ ಸಹೋದರರು ಪಕ್ಷ ಬಿಟ್ಟು ಹೋಗದಂತೆ ಮಾಡಲು ತಮ್ಮದೇ ಆದ ನಾಲ್ಕು ಷರತ್ತುಗಳನ್ನು ಸಮ್ಮಿಶ್ರ ಸರ್ಕಾರದ ಮುಂದೆ ಇಟ್ಟಿದ್ದಾರಂತೆ.

    ಹೌದು, ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆ ನಡೆಯಿಂದ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಬಿಡುವ ಯೋಚನೆಗೆ ಕೈ ಹಾಕಿರುವುದಾಗಿ ಮಾಹಿತಿ ಲಭಿಸಿದೆ. ಒಂದು ವೇಳೆ ಸಹೋದರರು ಪಕ್ಷದಲ್ಲಿಯೇ ಉಳಿಯಬೇಕಾದರೆ ಅವರ 4 ಷರತ್ತುಗಳನ್ನು ಪೂರೈಸುವಂತೆ ಕೆಪಿಸಿಸಿ ಹಾಗೂ ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

    ಅಲ್ಲದೇ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗಲೂ ಸಹೋದರರು ಈ ನಾಲ್ಕು ಷರತ್ತುಗಳನ್ನು ಮುಂದಿಟ್ಟಿರುವುದಾಗಿ ತಿಳಿದು ಬಂದಿದೆ.

    ಷರತ್ತುಗಳು ಏನು?
    1. ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ಯಾರೇ ಆದರೂ ಬೆಳಗಾವಿ ಜಿಲ್ಲೆಯ ಆಂತರಿಕ ರಾಜಕೀಯ ವಿಷಯಕ್ಕೆ ತಲೆ ಹಾಕದಂತೆ ನೋಡಿಕೊಳ್ಳಬೇಕು.
    2. ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ನಿರ್ಣಯವೇ ಅಂತಿಮ. ಪಕ್ಷ ಹಾಗೂ ಸರ್ಕಾರ ಎರಡರ ಹಿತ ಕಾಯುವುದು ನಮ್ಮ ಜವಾಬ್ದಾರಿ. ಆದರೆ ಅದಕ್ಕೆ ಧಕ್ಕೆ ಬರಬಾರದು ಅಂದರೆ ನಾವು ಹೇಳಿದ ಮಾತಿಗೆ ಆದ್ಯತೆ ನೀಡಬೇಕು.
    3. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಸೇರಿದ ಶಾಸಕರೊಬ್ಬರಿಗೆ ಸಚಿವ ಸ್ಥಾನ ಕಲ್ಪಿಸಿಕೊಡಬೇಕು.
    4. ನಮ್ಮ ಬೆಂಬಲಿತ ಮೂರರಿಂದ ನಾಲ್ಕು ಜನ ಶಾಸಕರಿಗೆ ಒಳ್ಳೆಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು.

    ಈ ಮೇಲ್ಕಂಡ ಒಟ್ಟು 4 ಷರತ್ತುಗಳನ್ನು ಜಾರಕಿಹೊಳಿ ಸಹೋದರರು ಪ್ರಮುಖವಾಗಿ ಎಐಸಿಸಿ ಹಾಗೂ ಕೆಪಿಸಿಸಿ ನಾಯಕರ ಮುಂದಿಟ್ಟಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಮೊದಲೆರಡು ಷರತ್ತುಗಳಿಗೆ ಅಸ್ತು ಎಂದು, ಬೆಳಗಾವಿ ವಿಷಯದಲ್ಲಿ ಯಾರು ಕೂಡ ಹಸ್ತಕ್ಷೇಪ ಮಾಡಲ್ಲ. ಬೆಳಗಾವಿಯಲ್ಲಿನ ಪಕ್ಷ ಹಾಗೂ ಸರ್ಕಾರದ ಜವಾಬ್ದಾರಿ ನಿಮ್ಮದೆ ಎಂದಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕಿದೆ. ಹೀಗಾಗಿ ಜಾತಿವಾರು ಹಾಗೂ ಪ್ರದೇಶವಾರು ಲೆಕ್ಕಾಚಾರದಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಅನ್ಯಾಯವಾಗಿದ್ದರೆ, ಅದನ್ನು ಪರಿಶೀಲಿಸಿ ನ್ಯಾಯ ಒದಗಿಸಲಾಗುವುದು. ಇನ್ನು ನಿಗಮ ಮಂಡಳಿ ವಿಚಾರದಲ್ಲಿ ಅರ್ಹರಿಗೆ 2-3 ಬಾರಿ ಗೆದ್ದವರಿಗೆ ಆದ್ಯತೆ ನೀಡಬೇಕಿದೆ. ಅದರಲ್ಲಿ ನಿಮ್ಮ ಬೆಂಬಲಿಗರು ಇದ್ದರೆ ಕಂಡಿತ ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರಂತೆ.

    ಎಐಸಿಸಿ ಹಾಗೂ ಕೆಪಿಸಿಸಿ ಪ್ರಮುಖ ನಾಯಕರು ಜಾರಕಿಹೊಳಿ ಸಹೋದರರು ಮುಂದಿಟ್ಟಿದ್ದ ನಾಲ್ಕು ಷರತ್ತುಗಳ ಪೈಕಿ ಎರಡಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನುಳಿದ ಷರತ್ತುಗಳಿಗೆ ಸ್ವಲ್ಪ ಸಮಯ ಕಾಯುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರ್ಮಾಪಕರಿಗೆ ಷರತ್ತು ಹಾಕಿ ಸಿನಿಮಾ ಒಪ್ಪಿಕೊಂಡ ದಚ್ಚು

    ನಿರ್ಮಾಪಕರಿಗೆ ಷರತ್ತು ಹಾಕಿ ಸಿನಿಮಾ ಒಪ್ಪಿಕೊಂಡ ದಚ್ಚು

    ಬೆಂಗಳೂರು: ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಮಾಪಕರೊಬ್ಬರಿಗೆ ಷರತ್ತು ಹಾಕಿ ಅವರ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

    ದರ್ಶನ್ ಮತ್ತು ಹೆಬ್ಬುಲಿ ನಿರ್ಮಾಪಕ ಉಮಾಪತಿ ಕಾಂಬಿನೇಷನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಅವರೇ ಸ್ಪಷ್ಟಪಡಿಸಿದ್ದರು. ನಿರ್ಮಾಪಕ ಉಮಾಪತಿ ನಟ ದರ್ಶನ್ ಗೆ ಕಥೆ ಹೇಳಿದ್ದಾರೆ. ಕಥೆ ಕೇಳಿ ಒಪ್ಪಿಕೊಂಡ ದರ್ಶನ್ ನಿರ್ಮಾಪಕ ಉಮಾಪತಿ ಅವರ ಜೊತೆ ಸಿನಿಮಾ ಮಾಡಲು ಕಾಲ್ ಶೀಟ್ ಕೊಟ್ಟಿದ್ದಾರೆ. ಆದರೆ ಈ ವೇಳೆ ದರ್ಶನ್ ನಿರ್ಮಾಪಕರಿಗೆ ಒಂದು ಷರತ್ತು ಹಾಕಿದ್ದಾರೆ.

    ಉಮಾಪತಿ ಅವರ ಚಿತ್ರದಲ್ಲಿ 96% ರಷ್ಟು ಸಾಧ್ಯವಾದರೆ 100% ರಷ್ಟು ಕನ್ನಡದವರನ್ನೇ ಹಾಕಿಕೊಂಡು ಕೆಲಸ ಮಾಡಬೇಕು. ಜೊತೆಗೆ ಕಲಾವಿದರು ಮತ್ತು ತಂತ್ರಜ್ಞರು ಎಲ್ಲರೂ ಕನ್ನಡದವರಿಗೆ ಅವಕಾಶ ಕೊಡಬೇಕು ಎಂದು ದರ್ಶನ್ ನಿರ್ದೇಶಕರಿಗೆ ಹೇಳಿದ್ದಾರಂತೆ.

    ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾಕ್ಕೆ ಈಗಾಗಲೇ `ಕಾಟೇರ’ ಮತ್ತು `ರಾಬರ್ಟ್’ ಎರಡು ಟೈಟಲ್ ಅಂತಿಮವಾಗಿದೆ. ಈ ಹಿಂದೆ ದರ್ಶನ್ `ಚೌಕಾ’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ದರ್ಶನ್ ಹೆಸರು ರಾಬರ್ಟ್ ಆಗಿತ್ತು. ಆದ್ದರಿಂದ ಈ ಹೆಸರನ್ನು ನಿರ್ಮಾಪಕರು ಅಂತಿಮ ಮಾಡಿ ನೊಂದಣಿ ಕೂಡ ಮಾಡಿಸಿದ್ದಾರೆ.

    ಈ ಸಿನಿಮಾಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಗಾಗಿ ತರುಣ್ ಅವರ ಬಳಿ ಎರಡು ಕಥೆಗಳು ರೆಡಿ ಇದೆ. ಇಬ್ಬರು ಸೇರಿ ಯಾವುದನ್ನು ಆಯ್ಕೆ ಮಾಡುತ್ತಾರೂ ಆ ಸಿನಿಮಾವನ್ನು ಮಾಡುತ್ತೀವಿ ಎಂದು ನಿರ್ಮಾಪಕ ತಿಳಿಸಿದ್ದಾರೆ. ಸಿನಿಮಾ ಮಾಡುವುದು ಅಂತಿಮಾವಾದರೆ ಸೆಪ್ಟಂಬರ್ ಅಥವಾ ಅಕ್ಟೋಬರ್ ನಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು, ನವೆಂಬರ್  ಗೆ ಶೂಟಿಂಗ್ ಶುರುಮಾಡುವ ಯೋಜನೆ ಚಿತ್ರತಂಡ ಹಾಕಿಕೊಂಡಿದೆ ಎಂದು ತಿಳಿದು ಬಂದಿದೆ.

  • ಅಭಿಮಾನಿಗಳಿಗೆ ಷರತ್ತು ವಿಧಿಸಿದ ಚಾಲೆಂಜಿಂಗ್ ಸ್ಟಾರ್!

    ಅಭಿಮಾನಿಗಳಿಗೆ ಷರತ್ತು ವಿಧಿಸಿದ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಶನಿವಾರ ಸಂಜೆ ಆರ್ ಆರ್ ನಗರದ ತಮ್ಮ ನಿವಾಸಕ್ಕೆ ಫಾನ್ಸ್ ಗಳನ್ನು ಕರೆದು ಸಭೆ ನಡೆಸಿ, ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಷರತ್ತು ಹಾಕಿದ್ದಾರೆ.

    ಅಭಿಮಾನಿಗಳೊಂದಿಗೆ ನೇರವಾಗಿ ಮಾತನಾಡಿದ ದರ್ಶನ್, ಯಾವುದೇ ಬೇರೆ ನಟರ ವಿರುದ್ಧ ಕಮೆಂಟ್ ಮಾಡೋದು, ಟ್ರೋಲ್ ಮಾಡೋದು ಅಥವಾ ನೆಗೆಟೀವ್ ಹೇಳಿಕೆಗಳನ್ನು ನೀಡಬಾರದು ಎಂದು ಬುದ್ಧಿ ಮಾತು ಹೇಳಿದ್ದಾರಂತೆ.

    ಸ್ಯಾಂಡಲ್‍ವುಡ್ ‘ಬಾಸ್` ಯಾರು ಎಂಬುದರ ಬಗ್ಗೆ ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ನಟರ ಅಭಿಮಾನಿಗಳು ಬೇರೆ ಕಲಾವಿದರ ಬಗ್ಗೆ ಕೆಟ್ಟದಾಗಿ ಕಮೆಂಟ್, ಟ್ರೋಲ್ ಮಾಡತೊಡಗಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ತಮ್ಮ ಅಭಿಮಾನಿಗಳು ಶಿಸ್ತಿನಿಂದ ನಡೆದುಕೊಳ್ಳುವಂತೆ ಹೇಳಿದ್ದಾರೆ.

    ಸಭೆಯಲ್ಲಿ ಭಾಗವಹಿಸಿದ್ದ 40ಕ್ಕೂ ಹೆಚ್ಚು ಅಭಿಮಾನಿಗಳು ದರ್ಶನ್ ಹೇಳಿದಂತೆ ನಡೆದುಕೊಳ್ಳುವುದಾಗಿ ಅಂತಾ ಮಾತು ನೀಡಿ ಹಿಂದಿರುಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

  • ಸಿದ್ದರಾಮಯ್ಯ ವಿರುದ್ಧ ದೂರು ನೀಡಿ ಕಾಂಗ್ರೆಸ್ಸಿಗೆ 3 ಷರತ್ತು ವಿಧಿಸಿದ ದೇವೇಗೌಡರು!

    ಸಿದ್ದರಾಮಯ್ಯ ವಿರುದ್ಧ ದೂರು ನೀಡಿ ಕಾಂಗ್ರೆಸ್ಸಿಗೆ 3 ಷರತ್ತು ವಿಧಿಸಿದ ದೇವೇಗೌಡರು!

    ಬೆಂಗಳೂರು: ಜೆಡಿಎಸ್ ನ ವರಿಷ್ಠ ಅಧಿಕಾರಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ ಗೆ ಮೂರು ಷರತ್ತು ವಿಧಿಸಿದ್ದಾರೆ.

    ತಮ್ಮ ಮಗ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಹೈಕಮಾಂಡ್‍ಗೆ ದೂರು ನೀಡಿ ಮೂರು ಷರತ್ತುಗಳನ್ನು ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇವೇಗೌಡ ಕಂಡೀಷನ್ ಲೆಕ್ಕಚಾರಕ್ಕೆ ಕೈ ಹೈಕಮಾಂಡ್  ಗೆ ತಲೆ ಬಿಸಿಯಾಗಿದೆ. ಇದನ್ನೂ ಓದಿ: ಒಂದು ಕಾಲ್, ಒಂದು ಡೋಸ್, ಒಂದು ಒಪ್ಪಂದ- ಚೆಕ್ ಕೊಟ್ಟು ಗೆದ್ದ ಎಚ್‍ಡಿಡಿ

    ದೇವೇಗೌಡರ ಷರತ್ತು:
    ಷರತ್ತು 1
    ಸಿದ್ದರಾಮಯ್ಯ ಬೇಕೋ? ಲೋಕಸಭೆ ಚುನಾವಣೆ ಬೇಕೋ? ಈ ಆಯ್ಕೆ ಕಾಂಗ್ರೆಸ್ ಹೈಕಮಾಂಡಿಗೆ.

    ಷರತ್ತು 2:
    ಸಮನ್ವಯ ಸಮಿತಿ ಎಲ್ಲದಕ್ಕೂ ಅನ್ವಯವಾಗಲ್ಲ. ಪ್ರಮುಖ ವಿಚಾರಗಳು ಮಾತ್ರ ಇಲ್ಲಿ ಚರ್ಚೆಯಾಗಲಿ. ಉಳಿದ ವಿಚಾರಗಳನ್ನು ಸಿಎಂ, ಡಿಸಿಎಂ ನಿರ್ಧರಿಸಬೇಕು.

    ಷರತ್ತು 3:
    ನಿಮ್ಮ ನಾಯಕರಿಗೂ ನಮಗೂ ಸಂಬಂಧವಿಲ್ಲ. ನಿಮ್ಮವರನ್ನ ನೀವೇ ನಿಯಂತ್ರಿಸಬೇಕು. ಹೈಕಮಾಂಡ್ ಮಟ್ಟದಲ್ಲಿ ಮಾತ್ರ ಒಪ್ಪಂದ, ಜಾರಿ ನಿಮ್ಮ ಕರ್ತವ್ಯ

    https://www.youtube.com/watch?v=Q32J9Q7ZATk

  • ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

    ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

    ಮುಂಬೈ: ಬಾಲಿವುಡ್ ಬೆಡಗಿ ಸೋನಂ ಕಪೂರ್ ತನ್ನ ಗೆಳೆಯ ಆನಂದ್ ಅಹುಜಾ ಜೊತೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಂ ಬಾಂದ್ರಾದಲ್ಲಿರುವ ತನ್ನ ಆಂಟಿಯ ಬಂಗಲೆಯಲ್ಲಿ ಸಿಖ್ ಸಂಪ್ರದಾಯದಂತೆ ಆನಂದ್ ಅಹುಜಾ ಅವರನ್ನು ಮಂಗಳವಾರ ಬೆಳಗ್ಗೆ ಮದುವೆಯಾಗಿದ್ದಾರೆ.

    ಮಂಗಳವಾರ ಇಬ್ಬರ ಮದುವೆ ನಡೆದಿದ್ದರೂ ಭಾವಿ ಪತ್ನಿಗೆ ಮದುವೆಗೂ ಮೊದಲೇ ಆನಂದ್ ಷರತ್ತು ವಿಧಿಸಿದ್ದಾರೆ.

    ಹೌದು, ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡಿದ ಸೋನಂ, ಆನಂದ್ ಬೆಡ್ ರೂಮ್‍ಗೆ ಹೋಗುವ ಮೊದಲು ಒಂದು ಷರತ್ತು ಹಾಕಿದ್ದಾರೆ. ಏನೇ ಆದರೂ ಆ ಷರತ್ತು ಪಾಲಿಸಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದ್ದರು.

    ಬೆಡ್ ರೂಮ್‍ಗೆ ಹೋಗುವ ಮೊದಲು ಎಂದರೆ ಮಲಗಲು ಹೋಗುವಾಗ ನಾವಿಬ್ಬರು ಮೊಬೈಲ್ ಬಳಸಬಾರದು ಎಂದು ಷರತ್ತು ಹಾಕಿದ್ದಾರೆ. ರೂಮಿನಲ್ಲಿ ಮಲಗಲು ಹೋಗುವಾಗ ಆನಂದ್‍ಗೆ ನಾವಿಬ್ಬರೇ ಇರುವುದು ಇಷ್ಟ. ನಮ್ಮ ಮಧ್ಯೆ ಮೊಬೈಲ್ ಇರುವುದು ಅವರಿಗೆ ಇಷ್ಟವಿಲ್ಲ ಎಂದು ಸೋನಂ ಹೇಳಿದ್ದಾರೆ.

    ನಾನು ಪ್ರತಿ ದಿನವೂ ತಮ್ಮ ಸ್ಟೇಟಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತೇನೆ. ಈಗ ಪತಿ ಹೇಳಿದ ಷರತ್ತನ್ನು ಪಾಲಿಸುವುದು ನನಗೆ ಸ್ವಲ್ಪ ಕಷ್ಟವಾದರೂ ಪಾಲಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಎಲ್ಲ ದಂಪತಿಗಳು ನಾವು ಅಳವಡಿಸಿಕೊಂಡಿರುವ ಈ ನಿಯಮ ಪಾಲಿಸಿ ಎಂದು ಸೋನಂ ಸಲಹೆ ಕೂಡ ನೀಡಿದ್ದಾರೆ.

    ಮದುವೆಯಾಗಿರುವ ಸೋನಂ ಕ್ಯಾನೆ ಫಿಲ್ಮ್ ಫೆಸ್ಟಿವಲ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಅಕ್ಟೋಬರ್ ವರೆಗೂ ಸೋನಂ ಹಾಗೂ ಆನಂದ್ ಅವರಿಗೆ ಹನಿಮೂನ್‍ಗೆ ಹೋಗಲು ಸಮಯವಲ್ಲ ಎಂದು ವರದಿಯಾಗಿದೆ.

    ಆನಂದ್ ತನ್ನ ಪತ್ನಿ ಸೋನಂ ಜೊತೆ ಕ್ಯಾನೆ ಫಿಲ್ಮಂ ಫೆಸ್ಟಿವಲ್‍ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಸೋನಂ ಅಕ್ಟೋಬರ್‍ವರೆಗೂ ಬ್ಯುಸಿಯಿದ್ದು, ಈ ಜೋಡಿ ತಮ್ಮ ಹನಿಮೂನ್‍ಗೆ ನವೆಂಬರ್ ನಲ್ಲಿ ಹೋಗುತ್ತಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಸೋನಮ್ ಕಪೂರ್