Tag: ಷರತ್ತುಗಳು

  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೇಗುಲ ಆರಂಭ- ಷರತ್ತುಗಳು ಅನ್ವಯ

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೇಗುಲ ಆರಂಭ- ಷರತ್ತುಗಳು ಅನ್ವಯ

    ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ನಾಳೆ ಜೂನ್ 8 ರಿಂದ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ‘ಎ’, ‘ಬಿ’ ಮತ್ತು ‘ಸಿ’ ದೇವಾಲಯಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ ಅಂತ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಆರ್.ಲತಾ ಅವರು ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಹಲವು ಷರತ್ತುಗಳನ್ನ ವಿಧಿಸಿದ್ದಾರೆ.
    * ಜನಸಂದಣಿ ಸೇರುವ ಉತ್ಸವಗಳಾದ ಬ್ರಹ್ಮ ರಥೋತ್ಸವ/ಜಾತ್ರೆ ಮುಂತಾದ ವಿಶೇಷ ಪೂಜೆಗಳು ಸೇರಿದಂತೆ ಇತರೆ ಎಲ್ಲಾ ರೀತಿಯ ಉತ್ಸವಗಳನ್ನು ಹಾಗೂ ದೇವಾಲಯದಲ್ಲಿ ನಡೆಯುವ ಸೇವೆಗಳನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
    * ದೇವಾಲಯದ ಪ್ರವೇಶ ದ್ವಾರ ಮತ್ತು ಆವರಣಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡುವುದು. ದೇವಾಲಯಕ್ಕೆ ಬರುವ ಭಕ್ತಾಧಿಗಳ ದೇಹದ ಉಷ್ಣತೆಯನ್ನು ಥರ್ಮೋಮೀಟರ್ ನಿಂದ ತಪಾಸಣೆ ಮಾಡಲಾಗುವುದು. ಜೊತೆಗೆ ಕೈಗಳಿಗೆ ಸ್ಯಾನಿಟೈಸರ್ ಬಳಸಬೇಕಿದೆ.

    * ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ (6 ಅಡಿ) ಕಾಪಾಡುವುದು. ಭಕ್ತಾಧಿಗಳ ಸರದಿ ಸಾಲಿನಲ್ಲಿ ಮಾರ್ಕ್ ಗಳನ್ನು ಗುರುತಿಸುವುದು. ಆಯಾಯ ದೇವಾಲಯಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕ ಸರದಿ ಸಾಲುಗಳನ್ನು ನಿರ್ಮಿಸಿಕೊಂಡಿದ್ದು, ಬಾಕ್ಸ್ ಗಳಲ್ಲಿ ಭಕ್ತರು ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕು.
    * ಬಾಯಿ ಮತ್ತು ಮೂಗನ್ನು ಮುಚ್ಚುವಂತೆ ಮಾಸ್ಕ್ ಅಥವಾ ಮುಖವಸ್ತ್ರಗಳನ್ನು ಕಡ್ಡಾಯವಾಗಿ ಧರಿಸಿದವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶವಿರುತ್ತದೆ.
    * ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಪಾದರಕ್ಷೆಗಳನ್ನು ಅವರವರ ವಾಹನಗಳಲ್ಲಿಯೇ ಅಥವಾ ಪ್ರತ್ಯೇಕ ಸ್ಥಳಗಳಲ್ಲಿ ಬಿಡುವುದು. ಪಾದರಕ್ಷೆಗಳನ್ನು ಧರಿಸಿ ದೇವಾಲಯದ ಆವರಣಕ್ಕೆ ಬರುವಂತಿಲ್ಲ.

    * ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ದೇವಾಲಯದ ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕಿ, ಧಾರ್ಮಿಕ ಗ್ರಂಥ, ಪುಸ್ತಕ ಮುಂತಾದವುಗಳನ್ನು ಮುಟ್ಟುವಂತಿಲ್ಲ.
    * ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು, ದೇವಾಲಯದ ಒಳಾಂಗಣ, ಹೊರಾಂಗಣ ಹಾಗೂ ಇತರೆ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅನ್ನು ಅವರವರ ಮೊಬೈಲ್‍ಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

    ಇನ್ನೂ ದೇವಾಲಯದ ದರ್ಶನಕ್ಕೆ ಮುಂದಿನ ಆದೇಶದವರೆಗೆ 65 ವಯಸ್ಸಿನ ವೃದ್ಧರು, 10 ವರ್ಷದ ಒಳಗಿನ ಮಕ್ಕಳು ಮತ್ತು ಗರ್ಭಿಣಿಯರು ಆದಷ್ಟು ಮನೆಯಲ್ಲಿದ್ದು ಸಹಕರಿಸಬೇಕು. ಜೊತೆಗೆ ಅಸ್ವಸ್ಥರು ದೇವಾಲಯದ ಒಳಗೆ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.

     

  • ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ಶಿವಮೊಗ್ಗ: ನಾಳೆಯಿಂದ ಕಂಟೈನ್‍ಮೆಂಟ್ ಜೋನ್‍ಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಮದ್ಯದಂಗಡಿಗಳು ತೆರೆಯಲಿವೆ. ಆದರೆ ಮದ್ಯ ಖರೀದಿಗೆ ಸರ್ಕಾರ ಕೆಲ ಷರತ್ತುಗಳು ಮತ್ತು ಮಿತಿಯನ್ನು ಹೇರಿದೆ.

    ಕೊರೊನಾ ಲಾಕ್‍ಡೌನ್ ನಿಂದ ಹಲವಾರು ದಿನಗಳಿಂದ ಮುಚ್ಚಿದ್ದ ಮದ್ಯದಂಗಡಿಗಳು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರವೂ ಕೆಲ ನಿಮಗಳು ಮತ್ತು ಷರತ್ತುಗಳನ್ನು ವಿಧಿಸಿದೆ. ಜೊತೆಗೆ ಒಂದು ದಿನಕ್ಕೆ ಒಬ್ಬರಿಗೆ ಇಂತಿಷ್ಟೇ ಮದ್ಯ ನೀಡಬೇಕು ಎಂದು ನಿಗದಿ ಮಾಡಿದೆ.

    ಪ್ರತಿಯೊಬ್ಬ ಗ್ರಾಹಕನಿಗೆ 2.3 ಲೀ. ಮದ್ಯ ಅಥವಾ 6 ಕ್ವಾಟರ್, 4 ಬಾಟಲ್ ಬೀರ್ ಅಥವಾ 6 ಪಿಂಟ್ ಬಾಟಲಿಗಳನ್ನು ಮಾತ್ರ ಮಾರಾಟ ಮಾಡಬೇಕು ಅದಕ್ಕಿಂತ ಹೆಚ್ಚಿನ ಮದ್ಯವನ್ನು ಒಬ್ಬನೇ ಗ್ರಾಹಕನಿಗೆ ಮಾರಾಟ ಮಾಡುವಂತಿಲ್ಲ. ಅಲ್ಲದೇ ಗ್ರಾಹಕನಿಗೆ ಕೇವಲ ಪಾರ್ಸಲ್ ಮಾತ್ರ ನೀಡಬೇಕು ಕೌಂಟರ್ ನಲ್ಲಿ ಕುಡಿಯುವುದಕ್ಕೆ ಅವಕಾಶ ನೀಡಬಾರದು. ಜೊತೆಗೆ ಮದ್ಯದ ಅಂಗಡಿಯಲ್ಲಿ ಕೇವಲ 5 ಮಂದಿ ಮಾತ್ರ ಇರಬೇಕು. ಇವರು ಮಾಸ್ಕ್, ಕೈಗವಸು, ಸ್ಯಾನಿಟೈಜರ್ ಬಳಕೆ ಮಾಡಬೇಕು ಎಂದು ಸೂಚಿಸಿದೆ.

    ಇದರ ಜೊತೆಗೆ ಮದ್ಯದಂಗಡಿಗೆ ಬಂದು ಮದ್ಯಕೊಳ್ಳುವವರು ಗುಂಪಿನಲ್ಲಿ ಬರಬಾರದು. ಸುಮಾರು ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಂಗಡಿ ಮುಂಭಾಗದಲ್ಲಿ ಜನಜಂಗುಳಿ ಸೇರದಂತೆ ನೋಡಿಕೊಳ್ಳಬೇಕು. ಬ್ಯಾರಿಕೇಡ್ ಅಳವಡಿಸಬೇಕು. ಸಿಸಿ ಕ್ಯಾಮರಾ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಅಂಗಡಿ ಮಾಲೀಕರೆ ನೇಮಿಸಿಕೊಳ್ಳುವ ಮೂಲಕ ಯಾವುದೇ ಗೊಂದಲ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

    ಷರತ್ತುಗಳು ಏನು?
    1. ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆ ಮದ್ಯ ಮಾರಾಟ
    2. ವೈನ್‍ಶಾಪ್, ಎಂಆರ್‍ಪಿ, ಎಂಎಸ್‍ಐಎಲ್‍ಗಳಲ್ಲಿ ಮದ್ಯ ಮಾರಾಟ
    3. ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೂ ವೈನ್‍ಶಾಪ್ ಓಪನ್
    4. ವೈನ್ ಶಾಪ್‍ನಲ್ಲಿ ಮದ್ಯಪಾನ ಇಲ್ಲ, ಪಾರ್ಸಲ್‍ಗಷ್ಟೇ ಅವಕಾಶ
    5. ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟ ಇರಲ್ಲ
    6. ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತೆ ಇಲ್ಲ
    7. ಮದ್ಯಕೊಂಡು ಕೊಳ್ಳುವವರಿಗೆ ಮಾಸ್ಕ್ ಕಡ್ಡಾಯ
    8. ಮದ್ಯದಂಗಡಿಯಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ
    9. 5 ಜನ ಮಾತ್ರ ಇರುವಂತೆ ನೋಡಿಕೊಳ್ಳಬೇಕು
    10. 6 ಅಡಿ ಸಾಮಾಜಿಕ ಅಂತರ ಇರಬೇಕು

  • ಗ್ರಾಮ ವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿ ಷರತ್ತು

    ಗ್ರಾಮ ವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿ ಷರತ್ತು

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಇದೇ ತಿಂಗಳು ಉತ್ತರ ಕರ್ನಾಟಕ ಭಾಗದಿಂದ ಚಾಲನೆ ಸಿಗಲಿದೆ. ಆದರೆ ಈ ಬಾರಿಯ ಗ್ರಾಮ ವಾಸ್ತವ್ಯ ಹಿಂದಿನ ಗ್ರಾಮ ವಾಸ್ತವ್ಯಕ್ಕಿಂತ ಸಾಕಷ್ಟು ವಿಶೇಷವಾಗಿರಲಿದೆ. ಜೊತೆಗೆ ಗ್ರಾಮ ವಾಸ್ತವ್ಯಕ್ಕೆ ಷರತ್ತುಗಳನ್ನು ಹಾಕಿದ್ದಾರೆ.

    ಪಂಚಾಯ್ತಿ ಅಥವಾ ಹೋಬಳಿ ಮಟ್ಟದ ಸರ್ಕಾರಿ ಶಾಲೆಯಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಆ ಹೋಬಳಿ ಅಥವಾ ಪಂಚಾಯ್ತಿ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನ ಬಿಟ್ಟು ಬೇರೆ ಹೋಬಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಲ್ಲಿಗೆ ಬರುವಂತಿಲ್ಲ. ಅದೇ ಹೋಬಳಿ ಅಥವಾ ಗ್ರಾಮ ಪಂಚಾಯ್ತಿ ಮಟ್ಟದ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಮುಂದಿಡುವಂತಿಲ್ಲ. ಸಂಪೂರ್ಣವಾಗಿ ಗ್ರಾಮದ ಹಿತಕ್ಕಾಗಿ ಬೇಡಿಕೆ ಮಾತ್ರ ಇರಬೇಕು ಎಂದು ತಿಳಿದು ಬಂದಿದೆ.

    ಒಂದು ವೇಳೆ ಕಾರ್ಯಕರ್ತರ ಬೇಡಿಕೆ ಇದ್ದರೆ ಪ್ರತ್ಯೇಕವಾಗಿ ಮಾತನಾಡಿ ಮನವಿ ಸಲ್ಲಿಸಬಹುದು. ಸಿಎಂ ಉಳಿದುಕೊಳ್ಳುವ ಶಾಲೆ ಹೊಸದಾಗಿ ಸುಣ್ಣ ಬಣ್ಣ ಬಳಿದು ಸಿದ್ಧಪಡಿಸಿ ಆಡಂಬರ ಮಾಡುವಂತಿಲ್ಲ. ಶೌಚಾಲಯ ಮುಂತಾದ ವ್ಯವಸ್ಥೆಗಳು ಮೊದಲು ಹೇಗಿತ್ತೋ ಹಾಗೆ ಇರಬೇಕು. ಮುಖ್ಯಮಂತ್ರಿ ಬರುತ್ತಾರೆ ಅನ್ನೋ ಕಾರಣಕ್ಕೆ ಶಾಲೆಗೆ ಏಕಾಏಕಿ ಸೌಲಭ್ಯ ಕಲ್ಪಿಸುವಂತಿಲ್ಲ. ಸಿಎಂ ಕುಮಾರಸ್ವಾಮಿಗಾಗಿ ಹೊಸದಾಗಿ ವ್ಯವಸ್ಥೆ ಕಲ್ಪಿಸಿ ಸಿಎಂ ಹೋದ ನಂತರ ಅದನ್ನ ಅಲ್ಲಿಂದ ಕೊಂಡೊಯ್ಯುವ ಬೂಟಾಟಿಕೆ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದ್ದಾರೆ.

    2006ರಲ್ಲಿ ಗ್ರಾಮ ವಾಸ್ತವ್ಯ ವೇಳೆ ಅಧಿಕಾರಿಗಳ ಇಂತಹ ವರ್ತನೆಯಿಂದ ಸಿಎಂ ಕುಮಾರಸ್ವಾಮಿಗೆ ಮುಜುಗರ ಆಗಿತ್ತು. ಅದಕ್ಕೆ ಈ ಬಾರಿ ಅಂತದ್ದಕ್ಕೆ ಅವಕಾಶ ಆಗದ ರೀತಿ ಪೂರ್ಣ ಪ್ರಮಾಣದ ಗ್ರಾಮ ವಾಸ್ತವ್ಯ ಆಗುವಂತೆ ನೋಡಿಕೊಳ್ಳಿ ಎಂದು ಸಿಎಂ ಸೂಚಿಸಿದ್ದಾರೆ. ಸಿಎಂ ಕಚೇರಿಯಿಂದ ಇದೇ ಮಾಹಿತಿ ಜಿಲ್ಲಾಡಳಿತಕ್ಕೆ ರವಾನೆಯಾಗಲಿದೆ. ಹೀಗೆ ಈ ಬಾರಿಯ ಗ್ರಾಮ ವಾಸ್ತವ್ಯವನ್ನ ಯಶಸ್ವಿಗೊಳಿಸಲು ಸಿಎಂ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ.

  • ಜಿಯೋ 4ಜಿ ಮೊಬೈಲ್ ಬುಕ್ ಮಾಡಿದ್ದೀರಾ-ಹಾಗಾದ್ರೆ ಈ ಷರತ್ತುಗಳನ್ನು ಓದಿ

    ಜಿಯೋ 4ಜಿ ಮೊಬೈಲ್ ಬುಕ್ ಮಾಡಿದ್ದೀರಾ-ಹಾಗಾದ್ರೆ ಈ ಷರತ್ತುಗಳನ್ನು ಓದಿ

    ಮುಂಬೈ: ವಿಶ್ವ ಅತ್ಯಂತ ಅಗ್ಗದ 4ಜಿ ಮೊಬೈಲ್ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಜಿಯೋ ತನ್ನ ಗ್ರಾಹಕರಿಗೆ ಮೊಬೈಲ್ ಫೋನ್‍ಗಳನ್ನು ಕೆಲವು ಷರತ್ತುಗಳನ್ನು ವಿಧಿಸಿ ವಿತರಣೆ ಮಾಡುತ್ತಿದೆ.

    ಹೌದು, ಜಿಯೋ ಫೋನ್ ಬಿಡುಗಡೆಯಾಗುವ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದು ಉಚಿತ ಫೋನ್ ಆಗಿದ್ದು, 1500 ರೂ. ಪಾವತಿಸಿದರೆ ಮೂರು ವರ್ಷದ ಬಳಿಕ ಸಂಪೂರ್ಣ ಹಣವನ್ನು ಮರುಪಾವತಿಸಲಾಗುವುದು ಎಂದು ಘೋಷಿಸಿದ್ದರು. ಆದರೆ ಈಗ ಈ ಉಚಿತ ಫೋನ್ ಗಳನ್ನ ಪಡೆಯಲು ಜಿಯೋ ಮತ್ತಷ್ಟು ಷರತ್ತುಗಳನ್ನು ವಿಧಿಸಿದ್ದು ಆ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಜಿಯೋ ಷರತ್ತುಗಳು:
    1) ಜಿಯೋ 4ಜಿ ಸೇವೆಯನ್ನು ಪಡೆಯಲು ಪ್ರತಿ ವರ್ಷ ಕನಿಷ್ಟ 1500 ರೂ.ಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಬೇಕು.

    2) ಜಿಯೋ ಫೋನ್ ಸಿಮ್‍ಲಾಕ್ ಆಗಿರುತ್ತದೆ. ಅಂದರೆ ಗ್ರಾಹಕರು ಜಿಯೋ ಫೋನ್‍ನಲ್ಲಿ ಬೇರಾವುದೇ ಸಂಸ್ಥೆಯ ಸಿಮ್‍ಗಳನ್ನು ಬಳಸಲು ಸಾಧ್ಯವಿಲ್ಲ.

    3) ಗ್ರಾಹಕರು ತಮ್ಮ ಜಿಯೋ ಫೋನ್‍ನ್ನು ಮರು ಮಾರಾಟ, ಗುತ್ತಿಗೆ, ನಿಯೋಜಿಸಲು ಮತ್ತು ವರ್ಗಾವಣೆ ಮಾಡಲು ಅವಕಾಶವನ್ನು ನೀಡಿಲ್ಲ. ಫೋನ್‍ನ ಎಲ್ಲಾ ಹಕ್ಕುಗಳು ಸಂಸ್ಥೆಗೆ ಸೇರಿರುತ್ತದೆ.

    4) 12 ತಿಂಗಳ ಒಳಗಡೆ ಫೋನ್ ಹಿಂದಿರುಗಿಸಲು ಇಚ್ಚಿಸಿದರೆ 1550 ರೂ. ಹಾಗೂ ಜಿಎಸ್‍ಟಿ ಅಥವಾ ಇತರ ತೆರಿಗೆಯನ್ನು ಪಾವತಿಸಬೇಕು.

    5) 12 ತಿಂಗಳ ನಂತರ 24 ತಿಂಗಳ ಒಳಗಡೆ ಮೊಬೈಲ್ ಹಿಂದಿರುಗಿಸಿದ್ದರೆ, 1000ರೂ. ಹಾಗೂ ಜಿಎಸ್‍ಟಿ ಇತರ ತೆರಿಗೆಯನ್ನು ಪಾವತಿಸಬೇಕು.

    6) 24 ತಿಂಗಳ ನಂತರ 36 ತಿಂಗಳ ಒಳಗಡೆ ಮೊಬೈಲ್ ಹಿಂದಿರುಗಿಸಿದ ಸಂದರ್ಭದಲ್ಲಿ ಗ್ರಾಹಕರು ಜಿಎಸ್‍ಟಿ ತೆರಿಗೆ ಮತ್ತು 500ರೂ ಗಳನ್ನು ಪಾವತಿಸಬೇಕಿದೆ. ಪ್ರಸ್ತುತ ಮೊಬೈಲ್ ಬುಕ್ಕಿಂಗ್ ವೇಳೆಯೇ 1000 ರೂ. ಹಾಗೂ ಜಿಎಸ್‍ಟಿ ತೆರಿಗೆಯನ್ನು ಪಾವತಿಸಲಾಗುತ್ತದೆ.

    7) ವರ್ಷಕ್ಕೆ ಕನಿಷ್ಟ 1500 ರೂ. ರಿಚಾರ್ಜ್ ಮಾಡದೇ ಇದ್ದಲ್ಲಿ ಅಥವಾ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಜಿಯೋ ಗ್ರಾಹಕರಿಂದ ಮೊಬೈಲ್ ಹಿಂಪಡೆಯುವ ಹಕ್ಕನ್ನು ಹೊಂದಿರುತ್ತದೆ. ಹೀಗಾಗಿ ಗ್ರಾಹಕರು ಆರಂಭಿಕ ರಿಟರ್ನ್ ಶುಲ್ಕವನ್ನು ಪಾವತಿಸಿದರೆ ಕಂಪೆನಿ ಭದ್ರತಾ ಠೇವಣಿಯನ್ನು ಹಿಂದಿರುಗಿಸುತ್ತದೆ.

    8) ಗ್ರಾಹಕರು ತಮ್ಮ ಮೊಬೈಲ್‍ನ್ನು ಪಡೆದ 36 ತಿಂಗಳ ನಂತರ ಹಿಂದಿರುಗಿಸಿ ತಮ್ಮ ಭದ್ರತಾ ಠೇವಣಿಯನ್ನು ವಾಪಸ್ ಪಡೆಯಬಹುದು. 39 ತಿಂಗಳ ವರೆಗೂ ಈ ಸೇವೆ ಲಭ್ಯವಿರಲಿದೆ. ನಂತರ ಅವಧಿಯಲ್ಲಿ ಫೋನ್ ಹಿಂಪಡೆಯಲಾಗುವುದಿಲ್ಲ.

    https://publictv.in/9-ways-reliance-jio-has-changed-indias-telecom-landscape/