Tag: ಷಡಕ್ಷರಿ

  • 7ನೇ ವೇತನ ಆಯೋಗದ ವರದಿ ಸ್ವೀಕಾರ – ಸರ್ಕಾರಿ ನೌಕರರ ಸಂಘ ಸ್ವಾಗತ

    7ನೇ ವೇತನ ಆಯೋಗದ ವರದಿ ಸ್ವೀಕಾರ – ಸರ್ಕಾರಿ ನೌಕರರ ಸಂಘ ಸ್ವಾಗತ

    ಬೆಂಗಳೂರು: ರಾಜ್ಯ ಏಳನೇ ಆಯೋಗದ (7th Pay Commission) ವರದಿ ಸ್ವೀಕಾರ ಆಗಿದೆ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅಂತಾ ಕಾದು ನೋಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ (Shadakshari C S) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಈ ಸರ್ಕಾರದಿಂದ ಒಳ್ಳೆಯ ಸೂಚನೆ ಸಿಗುತ್ತದೆ ಎನ್ನುವ ಭರವಸೆ ಇದೆ.ನಾವು ಕೂಡ ಕಾತುರದಿಂದ ಕಾಯುತ್ತಿದ್ದೇವೆ. ಈಗ 27.5% ವೇತನ ಹೆಚ್ಚಳಕ್ಕೆ ಆಯೋಗ ಶಿಫಾರಸ್ಸು ಮಾಡಿದೆ ಎಂದರು. ಇದನ್ನೂ ಓದಿ: Lok Sabha Election 2024: ಕರ್ನಾಟಕದಲ್ಲಿ ಏ.26, ಮೇ 7ಕ್ಕೆ ಮತದಾನ

    ಅಲ್ಲದೆ ಈ ಹಿಂದೆ ಸಿದ್ದರಾಮಯ್ಯ (Siddaramaiah) ಸರ್ಕಾರ ಇದ್ದಾಗ 30% ವೇತನ ಹೆಚ್ಚಳ ಮಾಡಿತ್ತು. ಈಗ ವರದಿ ಸ್ವೀಕಾರ ಮಾಡಿದ್ದಕ್ಕೆ ಸಂತೋಷ ಇದೆ ಎಂದು ಹೇಳಿದರು.  ಇದನ್ನೂ ಓದಿ: Lok Sabha Election 2024 – 7 ಹಂತದಲ್ಲಿ ಚುನಾವಣೆ, ಜೂನ್‌ 4 ರಂದು ಮತ ಎಣಿಕೆ

  • ವೇತನ ಹೆಚ್ಚಳ- ಮುಷ್ಕರ ವಾಪಸ್ ಪಡೆದ ಸರ್ಕಾರಿ ನೌಕರರು

    ವೇತನ ಹೆಚ್ಚಳ- ಮುಷ್ಕರ ವಾಪಸ್ ಪಡೆದ ಸರ್ಕಾರಿ ನೌಕರರು

    ಬೆಂಗಳೂರು: ಸರ್ಕಾರದ ಅಧಿಕೃತ ಆದೇಶದ ಬೆನ್ನಲ್ಲೇ ಅನಿರ್ದಿಷ್ಟ ಮುಷ್ಕರವನ್ನು ವಾಪಸ್ ತೆಗೆದುಕೊಂಡಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ (Shadakshari) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 1ರಿಂದ ಶೇ.17ರಷ್ಟು ವೇತನ ಹೆಚ್ಚಿಸಿ ಎಂದು ಸರ್ಕಾರ ಆದೇಶ ನೀಡಿದೆ. ಈ ಸರ್ಕಾರದ ಆದೇಶವನ್ನು ಸಾಮೂಹಿಕವಾಗಿ ಒಪ್ಪಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭರವಸೆಗಳು ಸಿಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಅವಧಿಯ ಮುಷ್ಕರವನ್ನು ವಾಪಸ್ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪ್ರಧಾನಿ ಮೋದಿಯವರ ಆರೋಗ್ಯ ಚೆನ್ನಾಗಿರಲಿ: ಸಿದ್ದರಾಮಯ್ಯ

    ಸರ್ಕಾರಿ ನೌಕರರಿಗೆ 17 ಪರ್ಸೆಂಟ್ ವೇತನ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದ್ದರು. ಸರ್ಕಾರಿ ನೌಕರರ (Government Employees) ಮುಷ್ಕರ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ನೌಕರರ ಜೊತೆ ಚರ್ಚೆ ಆದ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಮಾತಾಡಿದೆ, ಈ ವೇಳೆ ಒಂದು ಒಪ್ಪಂದಕ್ಕೆ ಬಂದಿದ್ದೇವೆ. 17% ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಇದು ಮಧ್ಯಂತರ ಪರಿಹಾರ ರೂಪದಲ್ಲಿ ಇರಲಿದೆ. ಆಯೋಗದ ವರದಿ ಬಳಿಕ ಶೇಕಡವಾರು ಪ್ರಮಾಣದಲ್ಲಿ ಬದಲಾವಣೆ ಆಗಬಹುದು. ಸರ್ಕಾರಿ ನೌಕಕರು ಮುಷ್ಕರ ಕೈಬಿಡ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ರಾಜೀನಾಮೆ – ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಮಂತ್ರಿ ಸ್ಥಾನ?

  • ಕೆಲಸದಿಂದ ವಜಾ ಮಾಡಲಿ, ನಾವು ಹೆದರುವುದಿಲ್ಲ, ಮುಷ್ಕರ ನಡೆಯುತ್ತೆ: ಷಡಕ್ಷರಿ

    ಕೆಲಸದಿಂದ ವಜಾ ಮಾಡಲಿ, ನಾವು ಹೆದರುವುದಿಲ್ಲ, ಮುಷ್ಕರ ನಡೆಯುತ್ತೆ: ಷಡಕ್ಷರಿ

    ಬೆಂಗಳೂರು: ನಮ್ಮನ್ನು ಅಮಾನತು ಮಾಡಲಿ, ಕೆಲಸದಿಂದ ವಜಾ ಮಾಡಲಿ, ಎಸ್ಮಾ ಜಾರಿಗೆ ತರಲಿ, ಆದರೆ ನಾವು ಯಾವುದಕ್ಕೂ ಹೆದರುವುದಿಲ್ಲ, ಮುಷ್ಕರ ನಡೆಯುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ (Shadakshari) ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರ (Government Employees) ಹೋರಾಟಕ್ಕೆ 40 ಸಂಘಟನೆಗಳ ಬೆಂಬಲ ನೀಡಿದೆ. ಬುಧವಾರದಿಂದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ ಯಾವುದೇ ಭರವಸೆಗಳಿಗೆ ಬಗ್ಗಲ್ಲ. ಅಧಿಕೃತ ಆದೇಶದೊಂದಿಗೆ ಬರದ ಹೊರತು ಪ್ರತಿಭಟನೆ ಕೈ ಬಿಡಲ್ಲ. ಸಿಎಂ ನಮ್ಮ ಜೊತೆ ಈಗ ಮಾತನಾಡಿಲ್ಲ. ಆದರೆ ಬಜೆಟ್ ವೇಳೆ ಪದಾಧಿಕಾರಿಗಳು ಹೋದಾಗ ಜಾರಿ ಮಾಡುತ್ತೇವೆ ಎಂದು ಹೇಳಿದ್ದರು ಅಷ್ಟೇ. ಆ ಬಳಿಕ ಅವರು ನಮಗೆ ಮನವರಿಕೆ ಮಾಡಿಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಮುಷ್ಕರ ಮಾಡುತ್ತೇವೆ ಎಂದು ತಿಳಿಸಿದರು.

    ಸಂಬಳದಲ್ಲಿ ರಾಜ್ಯ 30ನೇ ಸ್ಥಾನ: 2022ರಿಂದ ನೋಡುತ್ತಿದ್ದೇವೆ, ಯಾವುದೇ ಸಮಸ್ಯೆ ಬಗೆಹರಿಸಿಲ್ಲ. ಸಿಎಂ ಗಮನಕ್ಕೂ ತಂದೇ ಹೋರಾಟಕ್ಕೆ ಇಳಿಯುತ್ತಿದ್ದೇವೆ. ಸಮಿತಿ ರಚನೆ ಮಾಡಿ 4 ತಿಂಗಳಾಗಿದೆ. ವೇತನ ಆಯೋಗ ರಚನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ಆಗಿಲ್ಲ. ಎಲ್ಲಾ ರೀತಿ ಯೋಚನೆ ಮಾಡಿ ನಿರ್ಧಾರ ಕೈಗೊಂಡಿದ್ದೇವೆ. ಪಾಠ ಮಾಡಿದವರು ಪರೀಕ್ಷೆ ಮಾಡಲ್ವಾ? ಎಲ್ಲಾ ರೀತಿಯ ಕೆಲಸ ಆಗುತ್ತಿದೆ. ವೈದ್ಯರು ಕೂಡ ಜೊತೆಯಲ್ಲಿದ್ದಾರೆ. ಟ್ಯಾಕ್ಸ್ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೆ ಸಂಬಳದಲ್ಲಿ 30ನೇ ಸ್ಥಾನದಲ್ಲಿದ್ದೇವೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಯಾವುದೇ ಇತರೆ ಕೆಲಸ ಇರುವುದಿಲ್ಲ. ಸರ್ಕಾರದ ಬಗ್ಗೆ ನನಗೆ ಗೌರವ ಇದೆ. ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ. ಅವರು 7ನೇ ವೇತನ ಜಾರಿಗೆ ಸರ್ಕಾರವನ್ನು ಒತ್ತಾಯಿಸಿದ್ದರು ಎಂದು ಹೇಳಿದರು.

    ರಾಜ್ಯದಲ್ಲಿ 10 ಲಕ್ಷ ನೌಕರರು ಒಟ್ಟಾಗಿದ್ದೇವೆ. ಎಲ್ಲರೂ ನನಗೆ ಜವಾಬ್ದಾರಿ ನೀಡಿದ್ದಾರೆ. ಮುಷ್ಕರ ಮಾಡುವುದು ನಿಶ್ಚಿತವಾಗಿದ್ದು, ಎಲ್ಲಾ ಇಲಾಖೆಯ ಸಂಘಟನೆಯೂ ಒಟ್ಟಿಗೆ ಸೇರಿದ್ದೇವೆ. 27 ವರ್ಷದ ಬಳಿಕ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುತ್ತಿದ್ದೇವೆ. ಎಸ್ಮಾ ಮಾಡಿದರೆ ಸ್ವಾಗತ ಮಾಡುತ್ತೇವೆ. ಶಿಕ್ಷಕರು, ಬಿಬಿಎಂಪಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಆದರೆ ನೌಕರರ ಮನಸ್ಥಿತಿ ವಿರುದ್ಧವಾಗಿ ನಾವು ಹೋಗಲ್ಲ. ಕಡಿಮೆ ವೇತನ ತೆಗೆದುಕೊಳ್ಳುತ್ತಿದ್ದೇವೆ. ಇದರಿಂದಾಗಿ ಯಾವ ತ್ಯಾಗಕ್ಕೂ ಕೂಡ ಸಿದ್ಧರಿದ್ದೇವೆ. ಅಮಾನತು, ವಜಾ ಸೇರಿದಂತೆ ಯಾವುದೇ ಕ್ರಮ ತೆಗೆದುಕೊಂಡರೂ ನಾವು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.

    ಉಪರಾಷ್ಟ್ರಪತಿ ಕಾರ್ಯಕ್ರಮಕ್ಕಷ್ಟೇ ಅವಕಾಶ: 12 ಸಾವಿರ ಕೋಟಿ ಹೆಚ್ಚುವರಿ ಹಣ ಬೇಕಾಗಲಿದೆ. ವೇತನ ಹೆಚ್ಚಳ ಉಳಿತಾಯದ ಹಣದ ಮೂಲಕ ಭರ್ತಿ ಮಾಡಬಹುದು. ನಾಗರಿಕರು ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದ ಅವರು, ನಾಳೆ ಉಪರಾಷ್ಟ್ರಪತಿ ಕಾರ್ಯಕ್ರಮಕ್ಕೆ ಮಾತ್ರ ಚಾಲಕರನ್ನು ನೀಡುತ್ತೇವೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಯಾವ ನೌಕರರು ಹೋಗಲ್ಲ. ಲಿಖಿತ ಭರವಸೆಗೆ ನಾವು ರಾಜಿಯಾಗುವುದಿಲ್ಲ. ಸರ್ಕಾರಿ ಆದೇಶ ಆದರೆ ಮಾತ್ರ ನಾವು ಕೆಲಸಕ್ಕೆ ಹಾಜರಾಗುತ್ತೇವೆ ಎಂದರು.

    40% ವೇತನ ಹೆಚ್ಚಳಕ್ಕೆ ಒತ್ತಾಯ: ಇತ್ತೀಚಿನ ಸರ್ಕಾರಿ ನೌಕರರ ಸಂಘದ ಸಮಸ್ಯೆ ನಾಗರಿಕರಿಗೆ ಗೊತ್ತಾಗಿದೆ. ಶೇ. 40ರಷ್ಟು ವೇತನ ಹೆಚ್ಚಳ ಆಗಬೇಕು. ಎನ್‍ಪಿಎಸ್, ಒಪಿಎಸ್ ಆಗಬೇಕು. ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯಲ್ಲ ಅಂತ ಹೇಳಿದ್ದೇವೆ. 5 ರಾಜ್ಯಗಳ ಮಾದರಿಯಂತೆ ಎನ್‍ಪಿಎಸ್ ರದ್ದು ಮಾಡಿ, ಒಪಿಎಸ್ ಮಾಡಿ ಅಂತಾ ಆ ಬಗ್ಗೆ ಸಿಎಂ ಮಾತೇ ಆಡುತ್ತಿಲ್ಲ. ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಪಾನ್‌ಕಾರ್ಡ್ ಅಪ್ಡೇಟ್ ಮಾಡ್ಬೇಕು ಅಂತಾ ಕರೆ – ಲಿಂಕ್ ಒತ್ತಿದ ಪೊಲೀಸಪ್ಪನ 73 ಸಾವಿರ ಗುಳುಂ!

    ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತು ಬಳಕೆ ಬೆಲೆ ಹೆಚ್ಚಳ ಆಗಿದೆ. ಸರ್ಕಾರಿ ನೌಕರರ ಬಗ್ಗೆ ಮೃದು ಧೋರಣೆ ಇದೆಯಾ ಗೊತ್ತಿಲ್ಲ. ರಾಜ್ಯದ ಸರ್ಕಾರಿ ನೌಕರರಿಗೆ 12 ಸಾವಿರ ಕೋಟಿ ಖರ್ಚಾಗಲಿದೆ. ನಮಗೆ ಹೆಚ್ಚುವರಿ 16% ಪರ್ಸೆಂಟ್ ಮಾತ್ರ ವೆಚ್ಚ ಹೆಚ್ಚಾಗಲಿದೆ. ನಮಗೆ ಹೆಚ್ಚುವರಿ ಟ್ಯಾಕ್ಸ್ ಕಲೆಕ್ಟ್ ಮಾಡುವ ಜವಾಬ್ದಾರಿ ನೀಡಲಿ. ದುಡಿಯುವ ಸಮಯ ಹೆಚ್ಚಳ ಮಾಡಲಿ. ಎಲ್ಲದಕ್ಕೂ ನಾವು ಸಿದ್ಧರಾಗಿದ್ದೇವೆ ಎಂದು ಖಡಕ್ಕಾಗಿ ತಿಳಿಸಿದರು. ಇದನ್ನೂ ಓದಿ: ಹೆಚ್ಚುತ್ತಿರುವ ತಾಪಮಾನ, ಮಾರ್ಚ್‌ನಿಂದ ಮೇವರೆಗೂ ಹೈ ಅಲರ್ಟ್ 

  • ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿಗೆ ಬಿಗ್ ಶಾಕ್

    ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿಗೆ ಬಿಗ್ ಶಾಕ್

    ತುಮಕೂರು: ತಿಪಟೂರು ಕ್ಷೇತ್ರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆ ನಡೆಯಲು ವೇದಿಕೆ ಸಜ್ಜಾಗ್ತಿದೆ. ಮೂರನೇ ಬಾರಿ ಆಯ್ಕೆ ಬಯಸಿ ಕಣಕ್ಕಿಳಿಯಲಿರುವ ಕಾಂಗ್ರೆಸ್ ಶಾಸಕ ಷಡಕ್ಷರಿ ಅವರಿಗೆ ಶಾಕ್ ಕೊಡಲೆಂದು ಅವರ ಎರಡನೇ ಪತ್ನಿ ಎನ್ನಲಾದ ಮಹಿಳೆಯೋರ್ವರು ಸನ್ನದ್ಧರಾಗಿದ್ದಾರೆ.

    ಮಧುಕುಮಾರಿ ಕೆ ಎಂಬವರು ಶಾಸಕ ಷಡಕ್ಷರಿ ವಿರುದ್ಧ ಈ ಬಾರಿ ಬಿಜೆಪಿ, ಜೆಡಿಎಸ್ ಗಿಂತ ಪ್ರಬಲ ಸ್ಪರ್ಧೆ ನೀಡಲು ಸಿದ್ಧರಾಗಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಮಧುಕುಮಾರಿಯನ್ನು ರಹಸ್ಯವಾಗಿ ಷಡಕ್ಷರಿ ಮದುವೆಯಾಗಿ ಈಗ ನನಗೂ ಅವಳಿಗೂ ಸಂಬಂಧ ಇಲ್ಲ ಅನ್ನುತಿದ್ದಾರೆ. ಆದ್ರೆ ಇತ್ತ ಷಡಕ್ಷರಿ ಅವರಿಂದ ತನಗೂ ತನ್ನ ಮಗನಿಗೂ ಆಗಿರುವ ಭಾರೀ ದೊಡ್ಡ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲೆಂದೇ ಪತ್ನಿ ಮಧು ಸನ್ನದ್ಧವಾಗಿದ್ದಾರೆ. ಇದಕ್ಕಾಗಿ ಅವರು ಇನ್ನೇನು ಕೆಲ ದಿನಗಳಲ್ಲೇ ತಿಪಟೂರಿಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.

    ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿರೋ ಮಧು ಅವರ ಸ್ಪರ್ಧೆಯಿಂದಾಗಿ ಷಡಕ್ಷರಿಗೆ ತೀವ್ರ ತಲೆನೋವು ಸೃಷ್ಟಿಯಾಗಿದೆ. ಇದರ ಲಾಭ ಸಹಜವಾಗೇ ಷಡಕ್ಷರಿ ಅವರ ರಾಜಕೀಯ ವಿರೋಧಿಗಳಿಗೆ ಆಗಲಿದೆ ಎಂಬುದಾಗಿ ರಾಜಕೀಯವಲಯದಲ್ಲಿ ಚರ್ಚೆಯಾಗುತ್ತಿದೆ.

  • ನದಿ ತುಂಬಿದ್ರೂ ಮತ ಹಾಕದ ಗ್ರಾಮಗಳ ಕೆರೆಗಳಿಗಿಲ್ಲ ನೀರು- ತಿಪಟೂರು ಶಾಸಕ ಷಡಕ್ಷರಿಯಿಂದ ಸೇಡಿನ ರಾಜಕೀಯ

    ನದಿ ತುಂಬಿದ್ರೂ ಮತ ಹಾಕದ ಗ್ರಾಮಗಳ ಕೆರೆಗಳಿಗಿಲ್ಲ ನೀರು- ತಿಪಟೂರು ಶಾಸಕ ಷಡಕ್ಷರಿಯಿಂದ ಸೇಡಿನ ರಾಜಕೀಯ

    ತುಮಕೂರು: ಉತ್ತಮ ಮಳೆಯಿಂದ ಹೇಮಾವತಿ ತುಂಬಿ ಹರಿಯುತ್ತಿದ್ದು, ತುಮಕೂರು ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿ ಜನರ ಮೊಗದಲ್ಲಿ ಸಂತಸ ಮೂಡಿದೆ. ಆದ್ರೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಸುಮಾರು 20ಕ್ಕೂ ಹೆಚ್ಚು ಗ್ರಾಮದ ಜನರು ಮಾತ್ರ ಶಾಸಕ ಷಡಕ್ಷರಿ ಸೇಡಿನ ರಾಜಕಾರಣಕ್ಕೆ ಬಲಿಯಾಗಿ ಬರದ ಪರಿಸ್ಥಿತಿ ಎದುರಿಸಬೇಕಾಗಿದೆ.

    ಕಳೆದ ಚುನಾವಣೆಯಲ್ಲಿ ಕೆಲವು ಗ್ರಾಮಗಳಿಂದ ಶಾಸಕ ಷಡಕ್ಷರಿ ಅವರಿಗೆ ಕಡಿಮೆ ಪ್ರಮಾಣದಲ್ಲಿ ಮತಗಳು ಬಂದಿದ್ದವು. ಇದೇ ಕಾರಣಕ್ಕೆ ಸನ್ಮಾನ್ಯ ಶಾಸಕರು ಅಧಿಕಾರಕ್ಕೆ ಬಂದ ಬಳಿಕ ಸಾರ್ತುವಳ್ಳಿ, ಹುರುಳೇಹಳ್ಳಿ, ಚೌಲಿಹಳ್ಳಿ, ಆಲೂರು, ಹಾಲ್ಕುರಿಕೆ, ಬೊಮ್ಮಾಲಾಪುರ, ಭೈರನಾಯಕನಹಳ್ಳಿ ಸೇರಿದಂತೆ 18 ಕೆರೆಗಳಿಗೆ ಹೇಮಾವತಿ ನೀರು ಹರಿಸದಂತೆ ತಡೆದಿದ್ದಾರೆ.

    ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಯೋಜನೆ ಪ್ರಾರಂಭಿಸಲಾಗಿತ್ತು. ಅಲ್ಲದೆ 83 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಪ್‍ಲೈನ್ ಕೂಡಾ ಅಳವಡಿಸಲಾಗಿತ್ತು. ಆದ್ರೆ ಪೈಪ್‍ಲೈನ್ ಅಳವಡಿಸಿದ ಬಳಿಕ ಕೇವಲ 2 ವರ್ಷ ಕೆರೆಗಳಿಗೆ ನೀರು ಹರಿದಿದ್ದು, ಷಡಕ್ಷರಿ ಶಾಸಕರಾದ ಬಳಿಕ ನೀರು ಹರಿಸುವುದನ್ನು ಬಂದ್ ಮಾಡಲಾಗಿದೆ.

  • ಸಂಪುಟ ವಿಸ್ತರಣೆಗೆ ಹೈಕಮಾಂಡ್  ಗ್ರೀನ್ ಸಿಗ್ನಲ್: ಯಾರಿಗೆ ಯಾವ ಖಾತೆ?

    ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್: ಯಾರಿಗೆ ಯಾವ ಖಾತೆ?

    ಬೆಂಗಳೂರು: ಕೊನೆಗೂ ಸಂಪುಟ ವಿಸ್ತರಣೆಯ ಭಾಗ್ಯ ಕೂಡಿ ಬಂದಿದ್ದು, ಮುಂದಿನ ವಾರವೇ ಸಿಎಂ ಕ್ಯಾಬಿನೆಟ್ ವಿಸ್ತರಣೆ ಮಾಡುವ ಸಾಧ್ಯತೆಯಿದೆ.

    ಆಗಸ್ಟ್ 21 ರಂದು ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದ್ದು, ಹೆಚ್ ವೈ ಮೇಟಿ, ಮಹಾದೇವಪ್ರಸಾದ್, ಪರಮೇಶ್ವರ್‍ರಿಂದ ತೆರವಾಗಿರುವ ಸ್ಥಾನಗಳ ಭರ್ತಿಗೆ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ನೀಡಿದೆ.

    ಎಚ್.ಎಂ ರೇವಣ್ಣ, ಆರ್.ಬಿ ತಿಮ್ಮಾಪುರ ಹಾಗೂ ಷಡಕ್ಷರಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಹಿಂದುಳಿದ ವರ್ಗ ಕೋಟಾದಡಿ ಹೆಚ್.ಎಂ. ರೇವಣ್ಣ, ಎಸ್‍ಸಿ ಲೆಫ್ಟ್ ಕೋಟಾದಡಿ ಆರ್.ಬಿ. ತಿಮ್ಮಾಪುರ್, ಲಿಂಗಾಯತ ಕೋಟಾದಡಿ ಷಡಕ್ಷರಿ ಅವರಿಗೆ ಸ್ಥಾನ ಸಿಗಲಿದೆ ಎಂದು ಸಿಎಂ ಆಪ್ತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಹೆಚ್‍ಎಂ ರೇವಣ್ಣ ಅವರಿಗೆ ಅರಣ್ಯ ಖಾತೆ, ಆರ್‍ಬಿ ತಿಮ್ಮಾಪುರ ಅವರಿಗೆ ಅಬಕಾರಿ ಖಾತೆ, ಕೆ ಷಡಕ್ಷರಿ ಅವರಿಗೆ ಸಹಕಾರ ಖಾತೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಕನ್ನಡ ಉಸ್ತುವಾರಿ ಹಾಗೂ ಅರಣ್ಯ ಸಚಿವರಾಗಿರುವ ರಾಮನಾಥ ರೈ ಅವರಿಗೆ ಗೃಹ ಖಾತೆ ಸಿಗುವ ಸಾಧ್ಯತೆಯಿದೆ.

    ತಮ್ಮ ಆಪ್ತರಾಗಿರುವ ಸಿಎಂ ಇಬ್ರಾಹಿಂ ಅವರನ್ನು ಪರಿಷತ್‍ಗೆ ನಾಮ ನಿರ್ದೇಶನ ಮಾಡಲು ಸಿಎಂ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.