Tag: ಶ್ವೇತಾ ಶ್ರೀವಾತ್ಸವ

  • ಸೆಲೆಬ್ರಿಟಿ ಅಮ್ಮ,ಮಗಳ ಫೋಟೋಶೂಟ್- ಅಭಿಮಾನಿಗಳು ಫಿದಾ

    ಸೆಲೆಬ್ರಿಟಿ ಅಮ್ಮ,ಮಗಳ ಫೋಟೋಶೂಟ್- ಅಭಿಮಾನಿಗಳು ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಫೋಟೋಶೂಟ್ ಮೂಲಕವಾಗಿ ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಲಿರುತ್ತಾರೆ. ಇದೀಗ ಮಗಳ ಜೊತೆಗೆ ತೆಗೆಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಮಗಳ ಜೊತೆ  ಒಂದೆ ತರ ಹೋಲುವ ಬಟ್ಟೆ ಟ್ವಿನ್ನಿಂಗ್ ಮಾಡುವ ಮೂಲಕವೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಈ ಸೆಲೆಬ್ರಿಟಿ ಅಮ್ಮ-ಮಗಳ ಟ್ವಿನ್ನಿಂಗ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕಾರವಾರದಲ್ಲಿ ಪ್ರವಾಹ ಹಾನಿ ವೀಕ್ಷಿಸಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕ್ಲಾಸ್

     

    View this post on Instagram

     

    A post shared by Shwetha Srivatsav (@shwethasrivatsav)

    ಸೆಲೆಬ್ರಿಟಿ ಅಮ್ಮ-ಮಗಳು ಒಂದೇ ತರನಾದ ವಿನ್ಯಾಸಿತ ಡ್ರೆಸ್ ತೊಟ್ಟು ಫೋಟೋಶೂಟ್‍ನಲ್ಲಿ ಮಿಂಚಿದ್ದಾರೆ. ಹಾಫ್ ಶೋಲ್ಡರ್ ಗೌನ್‍ನಲ್ಲಿ ಶ್ವೇತಾ ಶ್ರೀವಾತ್ಸವ್ ಹಾಗೂ ಅವರ ಮಗಳು ಅಶ್ಮಿತಾ ಮಿಂಚಿದ್ದಾರೆ. ಶ್ವೇತಾ ಶ್ರೀವಾತ್ಸವ್ ಮಗಳ ಜೊತೆ ಸ್ಟೈಲಿಶ್ ಫೋಟೋಶೂಟ್‍ಗೆ ಪೋಸ್ ಕೊಟ್ಟಿದ್ದಾರೆ. ಅಮ್ಮ-ಮಗಳ ಟ್ವಿನ್ನಿಂಗ್  ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

     

    View this post on Instagram

     

    A post shared by Shwetha Srivatsav (@shwethasrivatsav)

    ಈ ಹಿಂದೆ ಶ್ವೇತಾ ಶ್ರೀವಾತ್ಸವ್ ಅವರು ಬಕ್ರೀದ್ ಹಬ್ಬಕ್ಕೆಂದು ವಿಶೇಷವಾಗಿ ಈ ಫೋಟೋಶೂಟ್ ಮಾಡಿಸಿದ್ದು, ಹಬ್ಬದಂದು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಮಗಳ ಜೊತೆಗೆ ಸಖತ್ ಗ್ಲ್ಯಾಮರಸ್ ಆಗಿ ಫೋಟೋಶೂಟ್‍ಗೆ ಪೋಸ್ ಕೊಡುವ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.