Tag: ಶ್ವೇತಾ ಚಂಗಪ್ಪ

  • ಶ್ವೇತಾ ಚಂಗಪ್ಪ ಮಗನನ್ನು ನೋಡಲು ಮನೆಗೆ ಬಂದ ಕ್ರೇಜಿಸ್ಟಾರ್

    ಶ್ವೇತಾ ಚಂಗಪ್ಪ ಮಗನನ್ನು ನೋಡಲು ಮನೆಗೆ ಬಂದ ಕ್ರೇಜಿಸ್ಟಾರ್

    ಬೆಂಗಳೂರು: ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚಂಗಪ್ಪ ಅವರು ತಮ್ಮ ಪುತ್ರ ಜಿಯಾನ್, ಸ್ಯಾಂಡಲ್‍ವುಡ್ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಕಳೆದ ಮುದ್ದಾದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಜಿಯಾನ್ ಸಾಮಾನ್ಯವಾಗಿ ಜನರ ಬಳಿಗೆ ಹೋಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾನೆ. ಆದರೆ ರವಿ ಸರ್ ಜೊತೆ ತುಂಬಾ ಆರಾಮವಾಗಿದ್ದನು. ಅವರನ್ನು ರವಿ ಮಾಮ ಎಂದು ಕರೆದಿದ್ದಾನೆ. ಜಿಯಾನ್ ಹುಟ್ಟಿದ ದಿನ ರವಿ ಸರ್ ಬಂದಿದ್ದರು, ಈಗ 2 ವರ್ಷಗಳ ನಂತರ ಭೇಟಿಯಾಗಿದ್ದೇವೆ. ಜಿಯಾನ್‍ಗಾಗಿ ಚಾಕ್ಲೇಟ್‍ಗಳನ್ನು ತಂದಿದ್ದರು ಈ ವಿಶೇಷ ವೀಡಿಯೊವನ್ನು ಪೋಸ್ಟ್ ಮಾಡದೆ ಇರಲು ನನಗೆ ಸಾಧ್ಯವಾಗಲಿಲ್ಲ. ಸಮಯ ತೆಗೆದುಕೊಂಡು ಮನೆಗೆ ಬಂದು ಕೆಲವು ಸಮಯ ಕಳೆದಿದ್ದೀರಾ ರವಿ ಸರ್ ನಮ್ಮೆಲ್ಲರ ಪ್ರೀತಿ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಬರೆದುಕೊಂಡು ಮುದ್ದಾದ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Swetha Changappa (@swethachangappa)

    ವೀಡಿಯೋದಲ್ಲಿ ರವಿಚಂದ್ರನ್ ಅವರು ಜಿಯಾನ್‍ಗೆ ಚಾಕ್ಲೇಟ್ ನೀಡುತ್ತಿದ್ದಾರೆ. ಜಿಯಾನ್ ಮುದ್ದಾಗಿ ನಗುತ್ತಾ ಚಾಕ್ಲೇಟ್ ಅನ್ನು ರವಿಚಂದ್ರನ್ ಅವರಿಂದ ತೆಗೆದುಕೊಂಡು ತಾನು ತಿಂದು ರವಿಚಂದ್ರನ್ ಅವರ ಬಾಯಿಗೂ ಹಾಕಿ ಜೋರಾಗಿ ನಗುತ್ತಾ ಇರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:  ಭಾರವಾದ ಹೃದಯದಿಂದ ಸೊಸೆ ಕುರಿತಾಗಿ ಬರೆದ ನಾಗರ್ಜುನ್

     

    View this post on Instagram

     

    A post shared by Swetha Changappa (@swethachangappa)

    ಶ್ವೇತಾ ಚಂಗಪ್ಪ ಕೆಲವು ದಿನಗಳ ಹಿಂದೆ ತಮ್ಮ ಮಗನ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದರು. ಮಗನ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. ಈಗಾಗಲೇ ಜಿಯಾನ್ ಸೆಲೆಬ್ರಿಟಿ ಕಿಡ್ ಆಗಿದ್ದು, ಸಾವಿರಾರು ಮಂದಿ ಫಾಲೋವರ್ಸ್ ಹೊಂದಿದ್ದಾನೆ.

  • ನಟಿ ಶ್ವೇತಾ ಚಂಗಪ್ಪಗೆ ಕೊರೊನಾ ಪಾಸಿಟಿವ್

    ನಟಿ ಶ್ವೇತಾ ಚಂಗಪ್ಪಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಮಾಹಾಮಾರಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಸ್ಯಾಂಡಲ್‍ವುಡ್ ನಟಿ ಶ್ವೇತಾ ಚಂಗಪ್ಪ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.

    ಈ ಸಂಬಂಧ ಸ್ವತಃ ನಟಿಯೇ ತಮ್ಮ ಇನ್ ಸ್ಟಾ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾ ಬಂದಿರುವುದರಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ಅಲ್ಲದೆ ನನ್ನ ವೈದ್ಯರು ಹೇಳುವಂತೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ನಟಿ ತಿಳಿಸಿದ್ದಾರೆ.

     

    View this post on Instagram

     

    A post shared by Swetha Changappa (@swethachangappa)

    ಅಂತೆಯೇ ನನ್ನ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ರೋ ಅವರೆಲ್ಲರೂ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಮನವಿ ಕೂಡ ಮಾಡಿದ್ದಾರೆ.

    ನಿನ್ನೆಯಷ್ಟೇ ನಟಿಯ ಅಪ್ಪ ಹಾಗೂ ಅಮ್ಮ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಈ ಕುರಿತು ಕೂಡ ನಟಿ ಅಮ್ಮನ ಫೋಟೋದೊಂದಿಗೆ ಬರೆದುಕೊಂಡಿದ್ದರು. ಅಪ್ಪ ಹಾಗೂ ಅಮ್ಮ ಇಬ್ಬರೂ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಅಮ್ಮ ಬೆಂಗಳೂರಿನಲ್ಲಿ ಲಸಿಕೆ ಪಡೆದುಕೊಂಡರೆ, ಅಪ್ಪ ಕೊಡಗಿನಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಹಾಗೆಯೇ ನಿಮ್ಮ ಮನೆಯಲ್ಲಿ ಅಪ್ಪ, ಅಮ್ಮ, ಅಜ್ಜಿ, ತಾತ, ಅತ್ತೆ ಹಾಗೂ ಮಾವ ಎಲ್ಲರೂ ಒರೊನಾ ಲಸಿಕೆ ಪಡೆದುಕೊಂಡಿದ್ದಾರಾ..? ಇಲ್ಲದಿದ್ದರೆ ಶೀಘ್ರವೇ ಲಸಿಕೆ ಪಡೆದುಕೊಳ್ಳುವಂತೆ ನಟಿ ಕೋರಿದ್ದರು.

     

    View this post on Instagram

     

    A post shared by Swetha Changappa (@swethachangappa)

  • ಮಾಸ್ಕ್ ಧರಿಸೋದು ಹೇಗೆ- ಕ್ಯೂಟ್ ಆಗಿ ತೋರಿಸಿದ ಶ್ವೇತಾ ಚಂಗಪ್ಪ ಮುದ್ದು ಮಗ

    ಮಾಸ್ಕ್ ಧರಿಸೋದು ಹೇಗೆ- ಕ್ಯೂಟ್ ಆಗಿ ತೋರಿಸಿದ ಶ್ವೇತಾ ಚಂಗಪ್ಪ ಮುದ್ದು ಮಗ

    ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಕ್ಟಿವ್ ಆಗಿರುವುದು ತಿಳಿದೇ ಇದೆ. ಅವರ ಮುದ್ದು ಮಗನ ತುಂಟಾಟದ ವೀಡಿಯೋಗಳನ್ನು ಸಹ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಒಂದೊಳ್ಳೆ ವೀಡಿಯೋ ಹಂಚಿಕೊಳ್ಳುವ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

     

    View this post on Instagram

     

    A post shared by Swetha Changappa (@swethachangappa)

    ಶ್ವೇತಾ ಚಂಗಪ್ಪ ತಮ್ಮ ಮುದ್ದು ಮಗ ಜಿಯಾನ್ ಅಯ್ಯಪ್ಪ ಮಾಸ್ಕ್ ಧರಿಸುವ ವೀಡಿಯೋವನ್ನು ಹಂಚಿಕೊಂಡಿದ್ದು, ಈ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ. ಜಿಯಾನ್ ಮಾಸ್ಕ್ ಹಾಕುವ ಬಗೆಯನ್ನು ಸಖತ್ ಕ್ಯೂಟ್ ಆಗಿ ತೋರಿಸಿದ್ದು, ಅವರ ಅಭಿಮಾನಿಗಳ ಗಮನ ಸೆಳೆದಿದೆ.

     

    View this post on Instagram

     

    A post shared by Swetha Changappa (@swethachangappa)

    ಮಾಸ್ಕ್ ಹೇಗೆ ಹಾಕ್ಕೋಬೇಕು ಜಿಯಾನ್ ಎಂದು ಶ್ವೇತಾ ಕೇಳುತ್ತಾರೆ, ಆಗ ಮೂಗು ಮುಚ್ಚುವಂತೆ ಮಾಸ್ಕ್ ಹಾಕಿಕೊಂಡು ತೋರಿಸಿದ್ದಾನೆ. ಆಗ ಶ್ವೇತ ವೇರಿ ಗುಡ್ ಜಿಯಾನ್ ಎಂದು ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಜಿಯಾನ್ ಕೆಕೆ ಹಾಕಲು ಶುರು ಮಾಡುತ್ತಾನೆ.

     

    View this post on Instagram

     

    A post shared by Swetha Changappa (@swethachangappa)

    ಈ ಪೋಸ್ಟ್ ಗೆ ಕನ್ನಡದಲ್ಲೇ ಸಾಲುಗಳನ್ನು ಬರೆದಿರುವ ಶ್ವೇತಾ ಚಂಗಪ್ಪ, ಮಕ್ಕಳು ನಾವು ಏನು ಹೇಳಿ ಕೊಡ್ತೀವಿ ಅದನ್ನು ಕಲಿಯೋದಿಲ್ಲ, ನಾವು ಏನು ಮಾಡ್ತೀವಿ ಅದನ್ನು ನೋಡಿ ಕಲಿಯುತ್ತಾರೆ, ಎಷ್ಟು ನಿಜ ಅಲ್ವಾ ಈ ಮಾತು ಎಂದು ಪ್ರಶ್ನಿಸಿದ್ದಾರೆ. ಶ್ವೇತಾ ಅವರ ಇನ್‍ಸ್ಟಾಗ್ರಾಂನಲ್ಲಿ ಬಹುತೇಕ ಜಿಯಾನ್ ವೀಡಿಯೋಗಳೇ ತುಂಬಿದ್ದು, ತುಂಟಾಟವಾಡುತ್ತಿರುವ ಕ್ಷಣಗಳನ್ನು ಪೋಸ್ಟ್ ಮಾಡಲಾಗಿದೆ.

     

    View this post on Instagram

     

    A post shared by Swetha Changappa (@swethachangappa)

    ಮಗು ಜನಸಿದ ಬಳಿಕ ಶ್ವೇತಾ ಚಂಗಪ್ಪ ಇತ್ತೀಚೆಗೆ ಮಜಾ ಟಾಕೀಸ್‍ಗೆ ಮರಳಿದ್ದು, ಸೆಟ್‍ಗೆ ರಾಣಿ ಎಂಟ್ರಿಯಿಂದಾಗಿ ಸಖತ್ ಕಳೆ ಬಂದಿದೆ. ಈ ಬಗ್ಗೆ ಮಾತನಾಡಿರುವ ಶ್ವೇತಾ ಚಂಗಪ್ಪ, ಮಜಾ ಟಾಕೀಸ್‍ನ ಇತ್ತೀಚಿನ ಎಪಿಸೋಡ್ ನೋಡುತ್ತಿದ್ದಾಗ ನನ್ನ ಮಗ ಟಿವಿಯಲ್ಲಿ ಗುರುತಿಸಿ ಚೆಪ್ಪಾಳೆ ತಟ್ಟಿದ. ಇದು ನನಗೆ ತುಂಬಾ ವಿಶೇಷ, ಸಂತೋಷದ ಹಾಗೂ ಭಾವನಾತ್ಮಕ ಕ್ಷಣವಾಗಿತ್ತು. ತೆರೆಯ ಮೇಲಿನ ಪಾತ್ರವನ್ನು ನನ್ನ ಮಗ ಗುರುತಿಸಬಲ್ಲ, ಅದ್ಭುತವೆನಿಸಿ, ತುಂಬಾ ಮೆಚ್ಚುಗೆಯಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  • ನಾವು ಪಾತ್ರಧಾರಿಗಳಷ್ಟೇ, ನಿಜವಾದ ಹೀರೋಗಳು ನೀವು: ಸೈನಿಕರಿಗೆ ಶ್ವೇತಾ ನಮನ

    ನಾವು ಪಾತ್ರಧಾರಿಗಳಷ್ಟೇ, ನಿಜವಾದ ಹೀರೋಗಳು ನೀವು: ಸೈನಿಕರಿಗೆ ಶ್ವೇತಾ ನಮನ

    ಬೆಂಗಳೂರು: ಪ್ರಾಣಕ್ಕೆ ಅಂಜದೇ ನಮ್ಮೆಲ್ಲರಿಗೋಸ್ಕರ ಹೋರಾಡುತ್ತಿರುವ ಯೋಧರೇ ನಿಜವಾದ ಹೀರೋಗಳು ಎಂದು ನಟಿ ಮತ್ತು ನಿರೂಪಕಿ ಶ್ವೇತಾ ಚಂಗಪ್ಪ ಅವರು ಹೇಳಿದ್ದಾರೆ.

    ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಕುತಂತ್ರಿ ಚೀನಾ ತನ್ನ ನರಿ ಬುದ್ಧಿಯನ್ನು ತೋರುತ್ತಿದೆ. ಕಳೆದ ಸೋಮವಾರ ರಾತ್ರಿ ಚೀನಾ ಹಾಗೂ ಭಾರತೀಯ ಸೈನಿಕರ ನಡುವೆ ಸಂಘರ್ಷ ನಡೆದಿದೆ. ಚೀನಾದ ಸೈನಿಕರ ಜೊತೆ ಕೆಚ್ಚೆದೆಯಿಂದ ಹೋರಾಡಿದ ನಮ್ಮ ಭಾರತೀಯ ಸೇನೆಯ 20 ಜನರ ಯೋಧರು ಹುತಾತ್ಮರಾಗಿದ್ದಾರೆ. ಯೋಧರು ಹುತಾತ್ಮರಾಗಿದ್ದಕ್ಕೆ ಇಡೀ ದೇಶವವೇ ಕಂಬನಿ ಮಿಡಿದಿದೆ.

    https://www.instagram.com/p/CBkRRKEjoUU/

    ಈಗ ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಶ್ವೇತಾ ಚಂಗಪ್ಪ. ದೇಶ ಕಾಯುವ ಯೋಧರೇ, ನೀವು ನಮ್ಮೆಲ್ಲರ ಜೀವನದ ನಿಜವಾದ ಹೀರೋಗಳು. ನಿಮ್ಮನ್ನು ಬಣ್ಣಿಸಲು ಪದಗಳು ಸಿಗುವುದಿಲ್ಲ. ಪರದೆಯ ಮೇಲೆ ಪಾತ್ರ ಮಾಡುವ ನಾವು ನಟ ನಟಿಯರು ಹಾಗೂ ಕೇವಲ ಪಾತ್ರಧಾರಿಗಳು ಅಷ್ಟೇ. ಆದರೆ ನೀವು ನಿಜವಾದ ಹೀರೋಗಳು ಎಂದು ಯೋಧರನ್ನು ಹಾಡಿಹೊಗಳಿದ್ದಾರೆ.

    ಜೊತೆಗೆ ನಿಮ್ಮ ಪ್ರಾಣಕ್ಕೆ ಅಂಜದೆ ನಮ್ಮ ದೇಶಕ್ಕಾಗಿ, ನಮ್ಮೆಲ್ಲರಿಗೋಸ್ಕರ ಹೋರಾಟ ಮಾಡುತ್ತೀರಿ. ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಪ್ರತಿಯೊಬ್ಬ ಭಾರತೀಯ ಸೈನಿಕನಿಗೂ ನನ್ನ ಕೋಟಿ ಕೋಟಿ ನಮನ. ನಿಮ್ಮ ಬಲಿದಾನಕ್ಕೆ ನಾನು ಚಿರಋಣಿ. ಯುದ್ಧದಲ್ಲಿ ಅಮರರಾಗಿರುವ ಎಲ್ಲಾ ಯೋಧರ ಕುಟುಬದವರಿಗೆ ಆ ಭಗವಂತ ಹೆಚ್ಚಿನ ಶಕ್ತಿಯನ್ನೂ ಕೊಡಲಿ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಡಿರುವ ಶ್ವೇತಾ ಭಾರತೀಯ ಸೇನೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

    ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 40ಕ್ಕೂ ಹೆಚ್ಚು ಮಂದಿ ಯೋಧರನ್ನು ಸೆದೆಬಡಿದಿದೆ. ಇದರಲ್ಲಿ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿತ್ತು.

  • ಮಗನ ಫೋಟೋ, ಹೆಸರು ರಿವೀಲ್ ಮಾಡಿದ ‘ಮಜಾ’ ರಾಣಿ

    ಮಗನ ಫೋಟೋ, ಹೆಸರು ರಿವೀಲ್ ಮಾಡಿದ ‘ಮಜಾ’ ರಾಣಿ

    ಬೆಂಗಳೂರು: ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಮೊದಲ ಬಾರಿಗೆ ತಮ್ಮ ಮಗನ ಫೋಟೋ ಮತ್ತು ಹೆಸರನ್ನು ರಿವೀಲ್ ಮಾಡಿದ್ದಾರೆ.

    ಶ್ವೇತಾ ಅವರು ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಇದುವರೆಗೂ ತಮ್ಮ ಮಗನ ಫೋಟೋವನ್ನು ಮಾತ್ರ ಎಲ್ಲೂ ರಿವೀಲ್ ಮಾಡಿರಲಿಲ್ಲ. ಇದೀಗ ಭಾನುವಾರ 26ರಂದು ವಿಶೇಷ ದಿನದ ಪ್ರಯುಕ್ತ ತಮ್ಮ ಪುತ್ರನ ಫೋಟೋ ಮತ್ತು ಹೆಸರನ್ನು ಬಹಿರಂಗಪಡಿಸಿದ್ದಾರೆ.

    ಮಗನಿಗೆ ಕೊಡಗಿನ ಉಡುಪನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲಿ ಒಂದು ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ತಮ್ಮ ಮಗನ ಹೆಸರನ್ನು ತಿಳಿಸಿದ್ದಾರೆ. ಜೊತೆಗೆ ದಿನಾಂಕ 26ರಂದೇ ಫೋಟೋ ರಿವೀಲ್ ಮಾಡಿದ್ದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ.

    “ಇದೇ ದಿನ ಜನವರಿ 26ರಂದು ಒಂದೂವರೆ ದಶಕದ ಹಿಂದೆ ನಾನು ಮೊದಲ ಬಾರಿಗೆ ಕ್ಯಾಮೆರಾವನ್ನು ಎದುರಿಸಿದ್ದೆ. ಜೊತೆಗೆ ನಾನು ನಿಮ್ಮೆಲ್ಲರಿಗೂ ಪರಿಚಯವಾದೆ. ಈ ಸ್ಮರಣೀಯ ದಿನದಂದು ನಾನು ನನ್ನ ಮಗನನ್ನು ಎಲ್ಲರಿಗೂ ಪರಿಚಯಿಸಲು ಬಯಸುತ್ತೇನೆ. ನಮ್ಮ ಪುಟ್ಟ ಹೃದಯ, ನಮ್ಮ ಜೀವನಕ್ಕೆ ಅನಂತ ಸಂತೋಷವನ್ನು ತಂದಿದೆ. ನಮ್ಮ ಕೊಡವ ಯೋಧ ಜಿಯಾನ್ ಅಯ್ಯಪ್ಪ ” ಎಂದು ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.

    https://www.instagram.com/p/B7yS-CdDXTg/

    ಈ ಜಗತ್ತಿಗೆ ನಮ್ಮ ಮಗುವಿನ ಮೊದಲ ಫೋಟೋ ಇದಾಗಿದೆ. ನನ್ನ ಮಗನಿಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಬೇಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮಗನ ಫೋಟೋ ಕ್ಲಿಕ್ಕಿಸಿದ್ದಕ್ಕೆ ಫೋಟ್ರೋಗ್ರಾಫರ್ ಗೆ ಧನ್ಯವಾದ ತಿಳಿಸಿದ್ದಾರೆ.

    ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದರು.

  • ಅಮ್ಮನಾದ ಸಂತಸದಲ್ಲಿ ‘ಮಜಾ ಟಾಕೀಸ್’ರಾಣಿ

    ಅಮ್ಮನಾದ ಸಂತಸದಲ್ಲಿ ‘ಮಜಾ ಟಾಕೀಸ್’ರಾಣಿ

    ಬೆಂಗಳೂರು: ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.

    ನಟಿ ಶ್ವೇತಾ ಚೆಂಗಪ್ಪ ಅವರು ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಮಗೆ ಮಗುವಾಗಿರುವ ಸಂತಸವನ್ನು ಶ್ವೇತಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    “ನಾವು ಈಗ ಮೂವರಾಗಿದ್ದೇವೆ. ನಮ್ಮ ತಾಯಿ, ತಂದೆ, ಕುಟುಂಬ, ಸ್ನೇಹಿತರು ಮತ್ತು ನಿಮ್ಮೆಲ್ಲರ ಶುಭಾಶಯ ಮತ್ತು ಪ್ರೀತಿಯಿಂದ ನಾನು ಹಾಗೂ ಕಿರಣ್ ನಮ್ಮ ಸಂತೋಷವನ್ನು ಸ್ವಾಗತಿಸಿದ್ದೇವೆ. ನಮಗೆ ಗಂಡು ಮಗುವಾಗಿದೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಶ್ವೇತಾ ಮತ್ತು ಕಿರಣ್ ಇಬ್ಬರೂ ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    https://www.instagram.com/p/B2Mrt-yDyLg/

    ಶ್ವೇತಾ ಚಂಗಪ್ಪ ಅವರ ಪತಿಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದರು. ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ `ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.

  • ನಿನ್ನನ್ನು ನೋಡಲು ಉತ್ಸುಕಳಾಗಿದ್ದೇನೆ- ಶ್ವೇತಾ ಚಂಗಪ್ಪ

    ನಿನ್ನನ್ನು ನೋಡಲು ಉತ್ಸುಕಳಾಗಿದ್ದೇನೆ- ಶ್ವೇತಾ ಚಂಗಪ್ಪ

    ಬೆಂಗಳೂರು: ನಿನ್ನನ್ನು ನೋಡಲು ನನಗೆ ಕಾಯಲು ಸಾಧ್ಯವಾಗುತ್ತಿಲ್ಲ ಎಂದು ಕಿರುತೆರೆ ನಟಿ ಶ್ವೇತಾ ಚಂಗಪ್ಪ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಶ್ವೇತಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬೇಬಿ ಬಂಪ್‍ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ನಿನ್ನನ್ನು ನೋಡಲು ನನಗೆ ಕಾಯಲು ಆಗುತ್ತಿಲ್ಲ. ನಾನು ನಿನ್ನ ತಾಯಿ ಆಗುವುದ್ದಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ. ನಿನ್ನ ತಂದೆ ನಿನ್ನನ್ನು ಹಿಡಿದುಕೊಂಡು ಇರುವುದನ್ನು ನೋಡಲು ನನಗೆ ಕಾಯಲು ಆಗುತ್ತಿಲ್ಲ. ದೊಡ್ಡ ಕುಟುಂಬದ ಜೊತೆ ನಿನ್ನನ್ನು ನೋಡಲು ನನಗೆ ಕಾಯಲು ಆಗುತ್ತಿಲ್ಲ. ನಿನ್ನನ್ನು ಈ ಪ್ರಪಂಚಕ್ಕೆ ಪರಿಚಯ ಮಾಡಿಸಿ ‘ಅಮ್ಮ’ ಎಂದು ಕರೆಸಿಕೊಳ್ಳಲು ಕಾಯುವುದ್ದಕ್ಕೆ ಆಗುತ್ತಿಲ್ಲ. ನಾನು ಹಾಗೂ ನಿನ್ನ ತಂದೆ ನಿನಗೆ ಜಗತ್ತಿನ ಎಲ್ಲ ಪ್ರೀತಿಯನ್ನು ತೋರಿಸಲು ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಅಸಭ್ಯ ಕಮೆಂಟ್ – ಅಭಿಮಾನಿಗೆ ಶ್ವೇತಾ ಚಂಗಪ್ಪ ಫುಲ್ ಕ್ಲಾಸ್

    ಶ್ವೇತಾ ಚಂಗಪ್ಪ ಅವರು ತಮ್ಮ ಪತಿಯ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದರು. ಇದೇ ಸಂದರ್ಭದಲ್ಲಿ ಅಮ್ಮನಾಗುತ್ತಿರುವ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ಮಾಡಿಸಿದ್ದರು.

    ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ `ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, `ಯಾರಿಗುಂಟು ಯಾರಿಗಿಲ್ಲ’ ಎಂಬ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ಆದರೆ ಇವರು ಮಜಾ ಟಾಕೀಸ್‍ನಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ರಾಣಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.

  • ಅಸಭ್ಯ ಕಮೆಂಟ್ – ಅಭಿಮಾನಿಗೆ ಶ್ವೇತಾ ಚಂಗಪ್ಪ ಫುಲ್ ಕ್ಲಾಸ್

    ಅಸಭ್ಯ ಕಮೆಂಟ್ – ಅಭಿಮಾನಿಗೆ ಶ್ವೇತಾ ಚಂಗಪ್ಪ ಫುಲ್ ಕ್ಲಾಸ್

    ಬೆಂಗಳೂರು: ‘ಮಜಾ ಟಾಕೀಸ್’ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ತಾವೂ ಗರ್ಭಿಣಿಯಾದಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿದ್ದಾರೆ. ಆದರೆ ಇದೀಗ ಅವರ ಫೋಟೋಗೆ ಕಮೆಂಟ್ ಮಾಡಿದ್ದ ಅಭಿಮಾನಿಯನ್ನು ಮಜಾ ರಾಣಿ ತರಾಟೆಗೆ ತೆಗೆದುಕೊಂಡಿದ್ದರು.

    ಇತ್ತೀಚೆಗಷ್ಟೆ ಶ್ವೇತಾ ಅವರು ಕೊಡಗು ಶೈಲಿಯ ಉಡುಪು ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಫೋಟೋಗೆ ‘ಕಿಂಗ್ ಆಫ್ ಶೆಟ್ಟಿ’ ಎಂಬ ಇನ್‍ಸ್ಟಾಗ್ರಾಂ ಖಾತೆಯ ಹೆಸರಿನ ಹುಡುಗ “ಕೊನೆಗೂ ಸೃಜನ್ ಲೋಕೇಶ್ ತಂದೆಯಾಗಿದ್ದೀರಾ ಅಭಿನಂದನೆಗಳು, ಮಜಾ ಟಾಕೀಸ್‍ಗೆ ಹೊಸ ಎಂಟ್ರಿ” ಎಂದು ಕಮೆಂಟ್ ಮಾಡಿದ್ದನು.

    ಇದನ್ನು ನೋಡಿ ಶ್ವೇತಾ ಅವರು, “ನೀವು ಸೃಜನ್ ಲೋಕೇಶ್ ಅವರಿಗೆ ಅಭಿನಂದನೆಯನ್ನು ಯಾಕೆ ಹೇಳುತ್ತೀರಿ. ನಾನು ನನ್ನ ವೈಯಕ್ತಿಕ ಫೋಟೋವನ್ನು ಪೋಸ್ಟ್ ಮಾಡಿದ್ದೀನಿ. ನೀವು ತಮಾಷೆ ಎಂದುಕೊಂಡಿದ್ದೀರಾ, ಅದಲ್ಲ. ಮೊದಲಿಗೆ ವೈಯಕ್ತಿಕ ಮತ್ತು ವೃತ್ತಿಪರ ವಿಚಾರಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ನೀವು ಸೂಕ್ಷ್ಮತೆಯನ್ನು ಹೊಂದಬೇಕು.” ಎಂದು ಪ್ರತಿಕ್ರಿಯಿಸುವ ಮೂಲಕ ಅಭಿಮಾನಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.

    ನಟ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಖಾಸಗಿ ವಾಹಿನಿಯಲ್ಲಿ ‘ಮಜಾ ಟಾಕೀಸ್’ ಕಾರ್ಯಕ್ರಮ ಪ್ರಸಾರವಾಗುತ್ತದೆ. ಈ ಕಾರ್ಯಕ್ರಮದಲ್ಲಿ ಶ್ವೇತಾ ಅವರು ರಾಣಿ ಪಾತ್ರದಲ್ಲಿ ಸೃಜನ್ ಲೋಕೇಶ್ ಅವರ ಪತ್ನಿಯಾಗಿ ಅಭಿನಯಿಸುತ್ತಾರೆ.

  • ಮನದಾಸೆ ಬಿಚ್ಚಿಟ್ಟ ಕೊಡಗಿನ ರಾಣಿ

    ಮನದಾಸೆ ಬಿಚ್ಚಿಟ್ಟ ಕೊಡಗಿನ ರಾಣಿ

    ಬೆಂಗಳೂರು: ‘ಮಜಾ ಟಾಕೀಸ್’ ಖ್ಯಾತಿಯ ಶ್ವೇತಾ ಚಂಗಪ್ಪ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಾವೂ ಗರ್ಭಿಣಿಯಾಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದು, ಇದೀಗ ತಮ್ಮ ಮನದಾಸೆಯೊಂದನ್ನು ಹೇಳಿಕೊಂಡಿದ್ದಾರೆ.

    ನಟಿ ಶ್ವೇತಾ ಚಂಗಪ್ಪ ಅವರು ಮೂಲತಃ ಕೊಡಗಿನವರಾಗಿದ್ದಾರೆ. ಹೀಗಾಗಿ ಅವರು ಕೊಡಗಿನ ಶೈಲಿಯಲ್ಲಿ ಉಡುಪು ಧರಿಸಿಕೊಂಡು ತಮ್ಮ ಪತಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಶ್ವೇತಾ ಅವರು ಹಸಿರು ಮತ್ತು ಮೆರೂನ್ ಬಣ್ಣದ ಸೀರೆಯಲ್ಲಿ ಸಖತ್ ಮಿಂಚಿದ್ದು, ಪಕ್ಕದಲ್ಲಿ ಅವರ ಪತಿ ಕೊಡಗಿನ ಉಡುಪನ್ನು ಧರಿಸಿದ್ದಾರೆ. ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಬಯಕೆಯೊಂದನ್ನು ಹೇಳಿಕೊಂಡಿದ್ದಾರೆ.

    “ಒಂದು ಅರ್ಥಪೂರ್ಣ ಮಾತಿದೆ. ಕೊಡವರ ಹೆಣ್ಣು ಹೆತ್ತರೆ ಸ್ವರ್ಗ. ಹೀಗಾಗಿ ವೀರನಾಡು ಕೊಡಗಿನ ಹೆಣ್ಣಾಗಿ, ಆ ಒಂದು ಸುದಿನಕ್ಕೆ ಕಾಯುತ್ತಿರುವೆ” ಎಂದು ಶ್ವೇತಾ ಅವರು ತಮ್ಮ ಮನೆದಾಸೆಯನ್ನು ಹೇಳಿಕೊಂಡಿದ್ದಾರೆ.

    ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ `ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ‘ಯಾರಿಗುಂಟು ಯಾರಿಗಿಲ್ಲ’ ಎಂಬ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ಆದರೆ ಇವರು ಮಜಾ ಟಾಕೀಸ್‍ನಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ರಾಣಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.

    https://www.instagram.com/p/B1Qv6Foj2nO/

  • ಅಮ್ಮನಾಗುತ್ತಿರುವ ಸಂತಸ ರಿವೀಲ್ ಮಾಡಿದ ಶ್ವೇತಾ ಚಂಗಪ್ಪ

    ಅಮ್ಮನಾಗುತ್ತಿರುವ ಸಂತಸ ರಿವೀಲ್ ಮಾಡಿದ ಶ್ವೇತಾ ಚಂಗಪ್ಪ

    ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಅಮ್ಮ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಪತಿಯೊಂದಿಗೆ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿರುವ ಅವರು ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

    ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಸದ್ಯ ಶೋದಿಂದ ಬ್ರೇಕ್ ಪಡೆದಿರುವ ಶ್ವೇತಾ ಅಮ್ಮನಾಗುತ್ತಿರುವ ಹರ್ಷದಲ್ಲಿದ್ದಾರೆ. ಇಂದು ಶ್ವೇತಾ ಚಂಗಪ್ಪ ಅವರ ಪತಿಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಮ್ಮನಾಗುತ್ತಿರುವ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ನಡೆಸಿದ್ದಾರೆ.

    ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ ‘ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ಯಾರಿಗುಂಟು ಯಾರಿಗಿಲ್ಲ ಎಂಬ ಕಾರ್ಯಕ್ರಮದ ನಿರೂಪನೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ವರ್ಷ, ತಂಗಿಗಾಗಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರಿಗೆ 2013ರ ಕರ್ನಾಟಕ ಸರ್ಕಾರ ನೀಡುವ ಮಾಧ್ಯಮ ಸನ್ಮಾನ ಪ್ರಶಸ್ತಿಯೂ ಲಭಿಸಿದೆ.

     

    View this post on Instagram

     

    Hi my dear friends ❣️I’m very greatful to all your LOVE and BLESSINGS showered on me all these years, for the work I have been doing and the PERSON I am♥️….. U all have known me for more than a decade????. U guys have LIKED ME, LOVED ME,n BLESSED ME for the kind of roles I have been doing in the television & cinemas???????? on this SPECIAL DAY being my HUSBAND’S @kiranappachu BIRTHDAY I want to tell you all a very SPECIAL NEWS. Happy to Announce that in my REAL life I will be portraying a Role of A “MOTHER”???? With the BLESSINGS of GOD, Me and My Hubby are gonna welcome our BUNDLE OF JOY very soon???? Need all your BEST WISHES and BLESSINGS to us and our family???? like u guys have always shown????????. LOVE YOU All????????. Photography-@aashish__photography ography. thank u soo much aashish for the beautiful pics.im happy that my first ever maternity shoot is done by u???? Makeup and hair- @karishmauthappa_makeup p. Karishma u rock girl…. amazing job. Love u???? Outfit- @paramparika_vastra . U guys are too good. And made my outfit look really cute and beautiful on pics ???? Tiyara- @sscreations719 ons719 thank u guys for the lovely tiyara which is adding it’s magic for these pics????. Love u all guys????. #happy #goodnews @bangalore_times #maternity #journey #godsgift #blessed????. #lovemylife #loveuzindagi,????

    A post shared by Swetha Changappa (@swethachangappa) on