Tag: ಶ್ವೇತಭವನ

  • ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

    ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

    ವಾಷಿಂಗ್ಟನ್‌: ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಜು.7ರಂದು (ಸೋಮವಾರ) ಶ್ವೇತಭವನದಲ್ಲಿ ನೆತನ್ಯಾಹು ಟ್ರಂಪ್‌ ಅವರನ್ನು ಭೇಟಿ ಮಾಡಲಿದ್ದಾರೆ.

    ಭೇಟಿ ವೇಳೆ ಗಾಜಾ ಪಟ್ಟಿಯಲ್ಲಿ (Gaza Strip) ಕದನ ವಿರಾಮ, ಇರಾನ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದು ತಜ್ಞರು ಅಂದಾಜಿಸಿರುವುದಾಗಿ ವರದಿಗಳು ತಿಳಿಸಿವೆ.

    ಇಸ್ರೇಲ್‌-ಇರಾನ್‌ ನಡುವಿನ ಕದನ ವಿರಾಮದ ಬಳಿಕ ಟ್ರಂಪ್‌ ಗಾಜಾ ಪಟ್ಟಿಯಲ್ಲಿ ಕದನ ವಿರಾಮಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಶ್ವೇತಭವನದ (White House) ಸಭೆಯಲ್ಲಿ ಉಭಯ ನಾಯಕರ ನಡುವಿನ ಪ್ರಮುಖ ಚರ್ಚಾ ವಿಷಯ ಇದೇ ಆಗಿರಲಿದೆ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ (CSIS) ನ ಹಿರಿಯ ಸಲಹೆಗಾರ್ತಿ ಮೋನಾ ಯಾಕೌಬಿಯನ್ ಹೇಳಿದ್ದಾರೆ.

    ಅಲ್ಲದೇ ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ಹಮಾಸ್‌ ಕೂಡ ಸಹಮತ ಸೂಚಿಸಿದೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧವಿರುವುದಾಗಿ ಹಮಾಸ್‌ ಹೇಳಿದೆ ಎಂದು ತಿಳಿಸಿದ್ದಾರೆ.

    ಇರಾನ್‌ ಬಗ್ಗೆಯೂ ಮಹತ್ವದ ಚರ್ಚೆ
    ಮುಂದುವರಿದು ಮಾತನಾಡಿರುವ ಯಾಕೌಬಿಯನ್, ಟ್ರಂಪ್‌ ಮತ್ತು ನೆತನ್ಯಾಹು ಇರಾನ್‌ ಬಗೆಗೆ ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಇತ್ತೀಚೆಗೆ ಇರಾನ್‌ ಮೇಲಿನ ಜಂಟಿ ಮಿಲಿಟರಿ ಕಾರ್ಯಾಚರಣೆ ಇದಕ್ಕೆ ನಿದರ್ಶನವಾಗಿದೆ. ಹೀಗಾಗಿ ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಉಭಯ ನಾಯಕರು ಒಗ್ಗಟಿನ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

  • ವೈಟ್ ಹೌಸ್ AI ವಿಭಾಗದ ನೀತಿ ಸಲಹೆಗಾರನಾಗಿ ಭಾರತ ಮೂಲದ ಶ್ರೀರಾಮ್‌ ಕೃಷ್ಣನ್ ನೇಮಕ

    ವೈಟ್ ಹೌಸ್ AI ವಿಭಾಗದ ನೀತಿ ಸಲಹೆಗಾರನಾಗಿ ಭಾರತ ಮೂಲದ ಶ್ರೀರಾಮ್‌ ಕೃಷ್ಣನ್ ನೇಮಕ

    ವಾಷಿಂಗ್ಟನ್‌: ಭಾರತ ಮೂಲದ ಉದ್ಯಮಿ ಹಾಗೂ ಲೇಖಕರೂ ಆಗಿರುವ ಶ್ರೀರಾಮ್‌ ಕೃಷ್ಣನ್ (Sriram Krishnan) ಅವರನ್ನು ಶ್ವೇತಭವನದ ಕೃತಕ ಬುದ್ಧಿಮತ್ತೆ ವಿಭಾಗದ ನೀತಿ ಸಲಹೆಗಾರರನ್ನಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ. ಈ ಮೂಲಕ ಟ್ರಂಪ್‌ (Donald Trump) ಬಳಗ ಸೇರಿದ 3ನೇ ಭಾರತೀಯ ಶ್ರೀರಾಮ್‌ ಕೃಷ್ಣನ್ ಆಗಿದ್ದಾರೆ.

    ಶ್ರೀರಾಮ್‌ ಕೃಷ್ಣನ್ ಅವರು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ (ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿ) ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಟ್ರಂಪ್‌ ಭಾನುವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Brazil | ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ – ಎಲ್ಲಾ 10 ಮಂದಿ ಪ್ರಯಾಣಿಕರು ದುರ್ಮರಣ

    ಶ್ರೀರಾಮ್‌ ಕೃಷ್ಣನ್ ಈ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ, ಫೇಸ್‌ಬುಕ್ ಮತ್ತು ಸ್ಕ್ಯಾಪ್‌ನಲ್ಲಿ ಉತ್ಪನ್ನ (Product) ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇದೀಗ ವೈಟ್ ಹೌಸ್ AI ಮತ್ತು ಕ್ರಿಸ್ಟೋ ಮುಖ್ಯಸ್ಥರಾಗಿರುವ ಡೇವಿಡ್ ಒ. ಸ್ಯಾಕ್ಸ್ ಜೊತೆಗೆ ಕೆಲಸ ಮಾಡಲಿದ್ದಾರೆ. ಇದನ್ನೂ ಓದಿ: ಬ್ರೆಜಿಲ್ | ಬಸ್ ಟೈರ್ ಸ್ಫೋಟಗೊಂಡು ಟ್ರಕ್‌ಗೆ ಡಿಕ್ಕಿ – 37 ಮಂದಿ ಬಲಿ

    ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಎಐನಲ್ಲಿ ಅಮೆರಿಕದ ನಾಯಕತ್ವವನ್ನು ಖಚಿತಪಡಿಸಿಕೊಳ್ಳಲು ಡೇವಿಡ್ ಸ್ಯಾಕ್ಸ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಲಭಿಸಿದ್ದು ನನಗೆ ಸಿಕ್ಕಿ ಗೌರವ ಎಂದು ಕೃಷ್ಣನ್ ಹೇಳಿದ್ದಾರೆ.

    ಶ್ರೀರಾಮ್‌ ಅವರ ನೇಮಕವನ್ನು ಅಮೆರಿಕದ ಭಾರತೀಯ ಸಮುದಾಯ ಸ್ವಾಗತಿಸಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ದೇವಾಲಗಳ ಮೇಲಿನ ದಾಳಿ – 2 ದಿನಗಳಲ್ಲಿ 8 ವಿಗ್ರಹ ಧ್ವಂಸ

  • ಶ್ವೇತಭವನದಲ್ಲಿ ಕೊಕೇನ್ ಪತ್ತೆ – ತೀವ್ರ ತನಿಖೆ

    ಶ್ವೇತಭವನದಲ್ಲಿ ಕೊಕೇನ್ ಪತ್ತೆ – ತೀವ್ರ ತನಿಖೆ

    ವಾಷಿಂಗ್ಟನ್: ಅಮೆರಿಕದ ಶ್ವೇತಭವನದಲ್ಲಿ (White House) ಅನುಮಾನಾಸ್ಪದ ಬಿಳಿ ಬಣ್ಣದ ವಸ್ತು ಪತ್ತೆಯಾಗಿದ್ದು, ಆ ವಸ್ತುವನ್ನು ಕೊಕೇನ್ (Cocaine) ಎಂದು ಗುರುತಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.

    ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ವಾರಾಂತ್ಯದ ಹಿನ್ನೆಲೆ ಕ್ಯಾಂಪ್ ಡೇವಿನ್‌ಗೆ ತೆರಳಿದ್ದು, ಈ ವೇಳೆ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ವೆಸ್ಟ್ ವಿಂಗ್‌ನ ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಪ್ರದೇಶದಲ್ಲಿ ರಹಸ್ಯ ಸೇವಾ ಏಜೆಂಟ್‌ಗಳು ಬಿಳಿ ಬಣ್ಣದ ಪುಡಿಯನ್ನು ಗಮನಿಸಿದ್ದಾರೆ. ಬಳಿಕ ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ವಸ್ತುವನ್ನು ಪರೀಕ್ಷಿಸಿದ್ದು, ಪ್ರಾಥಮಿಕ ಪರೀಕ್ಷೆಯಲ್ಲಿ ಅದು ಕೊಕೇನ್ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಕಲ್ಲು ಹೊಡೆತ – ಮಕ್ಕಳಿಬ್ಬರು ಪೊಲೀಸರ ವಶಕ್ಕೆ

    ಅಜ್ಞಾತ ವಸ್ತು ಪತ್ತೆಯಾದ ಹಿನ್ನೆಲೆ ಶ್ವೇತಭವನದ ಸಂಕೀರ್ಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಬಿಳಿ ಬಣ್ಣದ ವಸ್ತುವನ್ನು ಕೊಕೇನ್ ಎಂದು ಗುರುತಿಸಿದ್ದರೂ ರಹಸ್ಯ ಸೇವೆ ಈ ವಸ್ತು ಯಾವುದು ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಅದನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಶ್ವೇತಭವನಕ್ಕೆ ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ನಿಜವಾಗ್ಲೂ ಪಠಾಣ್‌ ಸ್ಟಾರ್‌ಗೆ ಆಕ್ಸಿಡೆಂಟ್‌ ಆಗಿತ್ತಾ- ಶಾರುಖ್ ಹೆಲ್ತ್ ಅಪ್‌ಡೇಟ್‌ನಲ್ಲೇನಿದೆ?

    ವೆಸ್ಟ್ ವಿಂಗ್ ಶ್ವೇತಭವನದ ಒಂದು ಭಾಗವಾಗಿದ್ದು, ಅದು ಅಧ್ಯಕ್ಷರ ಸಿಬ್ಬಂದಿಗಾಗಿ ಓವಲ್ ಆಫೀಸ್, ಕ್ಯಾಬಿನ್ ರೂಮ್, ಪ್ರೆಸ್ ರೂಮ್, ಎಲ್ಲವೂ ಇವೆ. ಈ ಪ್ರದೇಶದಲ್ಲಿ ಕೆಲಸ ಮಾಡುವವರು ಹಾಗೂ ಆಗಾಗ ಭೇಟಿ ನೀಡುವವರು ನೂರಾರು ಜನರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈಟ್‍ಹೌಸ್ ಮುಂದೆ ಉಗ್ರ ಪ್ರತಿಭಟನೆ:  ಭೂಗತ  ಬಂಕರ್‌ನಲ್ಲಿ ಅಡಗಿದ ಟ್ರಂಪ್

    ವೈಟ್‍ಹೌಸ್ ಮುಂದೆ ಉಗ್ರ ಪ್ರತಿಭಟನೆ: ಭೂಗತ ಬಂಕರ್‌ನಲ್ಲಿ ಅಡಗಿದ ಟ್ರಂಪ್

    ವಾಷಿಂಗ್ಟನ್: ಅಮೆರಿಕದಲ್ಲಿ ಜನರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಅವರನ್ನು ಟ್ರಂಪ್ ಶ್ವೇತ ಭವನದ ನೆಲಮಹಡಿಯಲ್ಲಿರುವ ಭೂಗತ ಬಂಕರ್ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ.

    ಶುಕ್ರವಾರ ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಶ್ವೇತಭವನದ ಮುಂಭಾಗದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಭದ್ರತಾ ಅಧಿಕಾರಿಗಳ ಸಲಹೆ ಹಿನ್ನೆಲೆಯಲ್ಲಿ ಟ್ರಂಪ್ ನೆಲಮಹಡಿ ಬಂಕರ್‌ಗೆ ತೆರಳಿದ್ದರು ಎಂದು ವರದಿಯಾಗಿದೆ.

    ಎಲ್ಲಿದೆ?
    ಶ್ವೇತಭವನದ ಪೂರ್ವ ಭಾಗದ ನೆಲಮಹಡಿಯಲ್ಲಿ ಈ ಬಂಕರ್ ನಿರ್ಮಾಣಗೊಂಡಿದೆ. ಇದನ್ನು ಅಧ್ಯಕ್ಷೀಯ ತುರ್ತು ಕಾರ್ಯಾಚರಣೆ ಕೇಂದ್ರ(Presidential Emergency Operations Center -PEOC) ಎಂದು ಕರೆಯಲಾಗುತ್ತದೆ. ತುರ್ತು ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರನ್ನು ರಕ್ಷಿಸಲೆಂದೇ ಈ ಬಂಕರ್ ನಿರ್ಮಾಣ ಮಾಡಲಾಗಿದೆ. ಎಲ್ಲ ಆಧುನಿಕ ಸಂವಹನ ಸಾಧನಗಳು ಬಂಕರ್ ನಲ್ಲಿದೆ.

    ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ವಾಷಿಂಗ್ಟನ್ ಮೇಲೆ ವಾಯುದಾಳಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಅಧ್ಯಕ್ಷ ಫ್ರಾಂಕ್ಲಿನ್ ರೂಸ್‍ವೆಲ್ಟ್ ಈ ಬಂಕರ್ ನಲ್ಲಿ ಆಶ್ರಯ ಪಡೆದಿದ್ದರು. 2001ರ ಸೆಪ್ಟೆಂಬರ್ 11 ರಂದು ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಅಲ್‍ಖೈದಾ ಉಗ್ರರಿಂದ ದಾಳಿ ನಡೆದ ಬಳಿಕ ಅಮೆರಿಕದ ಹಲವು ಕಚೇರಿಗಳು ಈ ಬಂಕರ್ ಗೆ ಶಿಫ್ಟ್ ಆಗಿತ್ತು.

    ಪ್ರತಿಭಟನೆ ಯಾಕೆ?
    ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬ ನಕಲಿ ನೋಟು ಚಲಾವಣೆಯ ಆರೋಪಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದ. ಕುತ್ತಿಗೆ ಮೇಲೆ ಮೊಣಕಾಲನ್ನು ಇರಿಸಿ ಹತ್ಯೆ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ. ಕ್ರೂರತ್ವಕ್ಕೆ ಆಫ್ರಿಕನ್ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಬಲಿಯಾಗಿದ್ದನ್ನು ಖಂಡಿಸಿ ಅಲ್ಲಿನ ಜನ ದಂಗೆ ಎದ್ದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅಮೆರಿಕದ ವಿವಿಧ ನಗರಗಳಲ್ಲಿ ಜಸ್ಟೀಸ್ ಫಾರ್ ಫ್ಲಾಯ್ಡ್, ಐ ಕಾಂಟ್ ಬ್ರೀತ್ ಹೆಸರಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ.

    https://twitter.com/kishkindha/status/1267360169773748224

    ಅನೇಕ ಕಡೆ ಪೊಲೀಸ್ ವಾಹನಗಳು, ರೆಸ್ಟೋರೆಂಟ್‍ಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಆಶ್ರುವಾಯು, ರಬ್ಬರ್ ಬುಲೆಟ್ ಪ್ರಯೋಗಿಸಿದ್ದಾರೆ. ಆದರೆ ಇದನ್ನು ಜನ ಲೆಕ್ಕಿಸುತ್ತಿಲ್ಲ. ಅಮೆರಿಕ ಸರ್ಕಾರ, ಫ್ಲಾಯ್ಡ್ ಹತ್ಯೆ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಿದೆ.

    ಮುಂಜಾಗ್ರತಾ ಕ್ರಮವಾಗಿ ಲಾಸ್ ಏಂಜಲೀಸ್, ಡೆನ್ವೆರ್, ಮಿಯಾಮಿ, ಅಟ್ಲಾಂಟಾ, ಚಿಕಾಗೋ, ಲೂಯಿಸ್‍ವಿಲ್ಲೆ, ಮಿನಿಯಾಪೊಲೀಸ್, ಸೈಂಟ್ ಪೌಲ್, ಕೊಲಂಬಸ್, ಫಿಲಿಡೆಲ್ಫಿಯಾ, ಸಿಯಾಟೆಲ್ ಸೇರಿ ಹಲವು ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ನ್ಯಾಷನಲ್ ಗಾರ್ಡ್ಸ್ ಗಳನ್ನು  ಬಳಸಲಾಗುತ್ತಿದೆ.