Tag: ಶ್ವಾಸಕೋಶ ಸೋಂಕು

  • ಹಾಸನ | ಶ್ವಾಸಕೋಶ ಸೋಂಕಿನಿಂದ 30 ವರ್ಷದ ಬಾಡಿಬಿಲ್ಡರ್ ಸಾವು

    ಹಾಸನ | ಶ್ವಾಸಕೋಶ ಸೋಂಕಿನಿಂದ 30 ವರ್ಷದ ಬಾಡಿಬಿಲ್ಡರ್ ಸಾವು

    – 110 ಕೆಜಿ ತೂಕವಿದ್ದ ಜಿಮ್ ಸೋಮ‌

    ಹಾಸನ: ಶ್ವಾಸಕೋಶದ ಸೋಂಕಿನಿಂದ ದೇಹದಾರ್ಢ್ಯ ಪಟು (Bodybuilder) ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬೆಳಗೋಡು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸೋಮಶೇಖರ್ (30) ಮೃತಪಟ್ಟ ದುರ್ದೈವಿ. ಜಿಮ್ ಸೋಮ‌ (Gym Soma) ಎಂದೇ ಖ್ಯಾತಿಯಾಗಿದ್ದ ಯುವಕ ಸೋಮಶೇಖರ್ ಆರೂವರೆ ಅಡಿ ಎತ್ತರ, 110‌ ಕೆಜಿ ತೂಕವಿದ್ದರು. ಇದನ್ನೂ ಓದಿ: ಚಿತ್ರದುರ್ಗ | ಬಸ್‍ಗಳ ನಡುವೆ ಸಿಲುಕಿ ಅಪ್ಪಚ್ಚಿಯಾದ ಆಟೋ – ಐವರಿಗೆ ಗಂಭೀರ ಗಾಯ

    ಬಾಡಿಬಿಲ್ಡಿಂಗ್‌ನಲ್ಲಿ ಹಲವಾರು ಟೈಟಲ್ ಜಯಿಸಿದ್ದ ಸೋಮ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರು. ಒಂದು ವಾರದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು,‌ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

    ಜಿಮ್ ಸೋಮ ನಿಧನಕ್ಕೆ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ ಕೆಎಸ್‍ಆರ್‌ಟಿಸಿ ಬಸ್‍ಗೆ ಕಲ್ಲು ತೂರಾಟ

  • ನಡೆದಾಡುವ ದೇವರ ಶ್ವಾಸಕೋಶದಲ್ಲಿ ಸೋಂಕು ಪತ್ತೆ – ಶ್ರೀಗಳ ಆಪ್ತ ವೈದ್ಯರು ಸ್ಪಷ್ಟನೆ

    ನಡೆದಾಡುವ ದೇವರ ಶ್ವಾಸಕೋಶದಲ್ಲಿ ಸೋಂಕು ಪತ್ತೆ – ಶ್ರೀಗಳ ಆಪ್ತ ವೈದ್ಯರು ಸ್ಪಷ್ಟನೆ

    ತುಮಕೂರು: ಸಿದ್ದಗಂಗಾ ಶ್ರೀಗಳ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ ಐದಾರು ದಿನದಿಂದ ಶ್ವಾಸಕೋಶದಲ್ಲಿ ಕಫ ಕಾಣಿಸಿಕೊಂಡಿದ್ದರ ಪರಿಣಾಮ ಇಂದು ಸೋಂಕು ಪತ್ತೆಯಾಗಿದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಹೇಳಿದ್ದಾರೆ.

    ಶ್ರೀಗಳ ಆರೋಗ್ಯದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ವೈದ್ಯರು, ಶನಿವಾರ ಸಂಜೆ ಸೋಂಕು ತಗಲಿರುವುದು ರಕ್ತಪರೀಕ್ಷೆ ಮೂಲಕ ದೃಢಪಟ್ಟಿದೆ. ಸದ್ಯಕ್ಕೆ ಇಂದು ಬೆಳಗ್ಗೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಶ್ವಾಸಕೋಶ ಸೋಂಕಿಗೆ 5-10 ದಿನ ಚಿಕಿತ್ಸೆ ಮುಂದುವರಿಸಬೇಕಾಗುತ್ತದೆ. ಅಲ್ಲದೆ ಈ ಹಿಂದೆ ಪಿತ್ತಕೋಶದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಸ್ಟಂಟ್ ತೆರವುಗೊಳಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹಾಗಾಗಿ ಇದೀಗ ಪಿತ್ತಕೋಶಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಇಲ್ಲ. ಬದಲಾಗಿ ಶ್ವಾಸಕೋಶಕ್ಕೆ ಸೋಂಕು ಕಾಣಿಸಿಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಶ್ರೀಗಳನ್ನು ರೇಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ಬಳಿಕ ಯಾವುದೇ ರೀತಿಯ ಸೋಂಕು ತಗುಲದಂತೆ ಎಷ್ಟೇ ನಿಗಾವಹಿಸಿದ್ರೂ ಕಳೆದ ಮೂರು ದಿನಗಳಿಂದ ಕಫ ಹೆಚ್ಚಾಗಿ ಇಂದು ಮತ್ತೆ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ನಿಶ್ಯಕ್ತಿಯೂ ಕಾಣಿಸಿಕೊಂಡಿದೆ. ಎಲ್ಲದಕ್ಕೂ ಶ್ರೀಮಠದಲ್ಲೇ ಚಿಕಿತ್ಸೆ ನಡೆಸಲು ಎಲ್ಲ ವ್ಯವಸ್ಥೆಯನ್ನು ನೀಡಲಾಗುತ್ತಿದೆ. ಬೇರೆ ಯಾವುದೇ ಆಸ್ಪತ್ರೆಗೆ ಶಿಫ್ಟ್ ಮಾಡುವ ಮಾತೇ ಇಲ್ಲ ಎಂದು ಕಿರಿಯ ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv