Tag: ಶ್ವಾಸಕೋಶ

  • ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್‌

    ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್‌

    ಬರ್ನ್: 20 ವರ್ಷದ ಯುವಕನೊಬ್ಬ ತೀವ್ರವಾಗಿ ಹಸ್ತಮೈಥುನ ಮಾಡಿ ಶ್ವಾಸಕೋಶ ತೊಂದರೆಗೆ ಸಿಲುಕಿಕೊಂಡಿದ್ದಾನೆ.

    ಸ್ವಿಟ್ಜರ್ಲ್ಯಾಂಡ್ ನಿವಾಸಿ 20 ವರ್ಷದ ಯುವಕ ಹಸ್ತಮೈಥುನವನ್ನು ಹೆಚ್ಚು ಮಾಡಿಕೊಂಡ ಪರಿಣಾಮ ಆತನಿಗೆ ಮಲಗುವಾಗ ಉಸಿರಾಟ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೇ ಹಠಾತ್ ಆಗಿ ಯುವಕನಿಗೆ ತೀಕ್ಷ್ಣವಾದ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗಿದ್ದಾನೆ. ಈ ಹಿನ್ನೆಲೆ ಎಕ್ಸ್‌ರೇ ಮಾಡಿಸಿಕೊಂಡಾಗ ವೈದ್ಯರೇ ಶಾಕ್ ಆಗಿದ್ದಾರೆ. ಎಕ್ಸ್‌ರೇಯಲ್ಲಿ ಯುವಕನ ಶ್ವಾಸಕೋಶದಲ್ಲಿ ಗಾಯವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    20-year-old Swiss man hospitalised after tearing his lung from masturbating | Viral News: ಲೈಂಗಿಕ ತೃಪ್ತಿ ಪಡೆಯಲು ಹೋಗಿ 20ರ ಯುವಕನ ಶ್ವಾಸಕೋಶವೇ ಹರಿಯಿತು– News18 Kannada

    ಪರೀಕ್ಷೆಯ ನಂತರ, ರೋಗಿಯ ಮುಖ ಊದಿಕೊಂಡಿದೆ ಎಂದು ವೈದ್ಯರು ಗಮನಿಸಿದ್ದಾರೆ. ಈ ವೇಳೆ ಅವನು ಉಸಿರಾಡುವಾಗ ಮತ್ತು ಹೊರಗೆ ಬಿಡುವಾಗ ಶಬ್ದಗಳ ಏರಿಪೇರು ಆಗುತ್ತಿರುವುದನ್ನು ಗಮನಿಸಿದ್ದಾರೆ.

    ಎಲ್ಲ ಪರೀಕ್ಷಗಳ ನಂತರ ಯುವಕನಿಗೆ ಎದೆಯ ಕ್ಷ-ಕಿರಣವು ನ್ಯುಮೋಮೆಡಿಯಾಸ್ಟಿನಮ್(pneumomediastinum) ಎಂಬ ಅಪರೂಪದ ಕಾಯಿಲೆಯನ್ನು ಹೊಂದಿದ್ದಾನೆ ಎಂದು ಬಹಿರಂಗಪಡಿಸಿದರು. ಇದರಿಂದ ಮನುಷ್ಯನ ಗಾಳಿಯ ಚೀಲಗಳು ಹಾನಿಗೊಳಗಾಗಿದ್ದು, ಅವನಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕದ ಅಗತ್ಯವಿದೆ ಎಂದು ವಿವರಿಸಿದರು. ಶ್ವಾಸಕೋಶಗಳು ಅಥವಾ ಅನ್ನನಾಳಕ್ಕೆ ದೈಹಿಕ ಆಘಾತದಿಂದ ನ್ಯುಮೋಮೆಡಿಯಾಸ್ಟಿನಮ್ ಉಂಟಾಗಬಹುದು ಎಂದು ವೈದ್ಯರು ವಿವರಿಸಿದರು. ಇದನ್ನೂ ಓದಿ: ದೇವಸ್ಥಾನದ ಮೇಲೆ ದಾಳಿ ಮಾಡಿದ್ದು ಖಂಡನೀಯ: ಮುತಾಲಿಕ್ 

    Looking into the Future of X-ray Technology

    ಈ ರೀತಿಯ ಗಾಯವು ಯುವಕರಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚು. ಇದರಿಂದ ತೀವ್ರವಾದ ಆಸ್ತಮಾ ದಾಳಿ, ಶ್ರಮದಾಯಕ ವ್ಯಾಯಾಮ ಅಥವಾ ವಾಂತಿ ಬರುತ್ತೆ. ಪ್ರಸ್ತುತ ಯುವಕನನ್ನು ಅಬ್ಸರ್‌ವೇಷನ್‌)ದಲ್ಲಿ ಇಡಲಾಗಿದೆ. ಅದೃಷ್ಟವಶಾತ್ ಯುವಕ ಶೀಘ್ರವೇ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದರು.

  • ಮೂರೂವರೆ ತಿಂಗಳ ಬಳಿಕ ಕೊರೊನಾ ಗೆದ್ದ ವೈದ್ಯ- ಡಾಕ್ಟರ್ ಕಣ್ಣೀರ ಕಥೆ ಓದಿ

    ಮೂರೂವರೆ ತಿಂಗಳ ಬಳಿಕ ಕೊರೊನಾ ಗೆದ್ದ ವೈದ್ಯ- ಡಾಕ್ಟರ್ ಕಣ್ಣೀರ ಕಥೆ ಓದಿ

    ಬೆಂಗಳೂರು: ಸಾಮಾನ್ಯವಾಗಿ ಕೊರೊನಾ ಬಂದರೆ 20 ರಿಂದ 25 ದಿನದಲ್ಲಿ ರೋಗಿಗಳು ಗುಣಮುಖರಾಗುತ್ತಾರೆ. ಆದರೆ ಬೆಂಗಳೂರಿನ ವೈದ್ಯರೊಬ್ಬರು ಕೊರೊನಾ ಗೆದ್ದ ಕಥೆ ಕೇಳಿದರೆ ಕಣ್ಣೀರು ಬರುತ್ತೆ. ಕೊರೊನಾವನ್ನು ಗೆಲ್ಲಲು ಅಥವಾ ಕೊರೊನಾದಿಂದ ಗುಣಮುಖರಾಗಲು ಸತತ ಮೂರೂವರೆ ತಿಂಗಳು ಬೇಕಾಗಿದೆ.

    ಹೌದು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಾ ಇದ್ದ ಡಾ. ಸನತ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಇವರು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ನಲ್ಲಿ ಕೆಲಸ ಮಾಡುತ್ತಾ ಇದ್ದರು. ಈ ವೇಳೆ ಡಾ. ಸನತ್ ಅವರಿಗೆ ರೋಗ ಲಕ್ಷಣ ಕಂಡು ಬಂದು ಟೆಸ್ಟ್ ವೇಳೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಸಾವಿರಾರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡಿದ ವೈದ್ಯನಿಗೆ ಕೊರೊನಾ ಕಾಡಿದೆ. ಕೋವಿಡ್ ವಾರ್ಡ್ ನಲ್ಲಿ ಕೆಲಸ ಮಾಡ್ತಿದ್ದ ವೈದ್ಯನಿಗೆ ಬೆಂಬಿಡದೇ ಕೊರೊನಾ ಕಾಡಿದ್ದು, ಮಹಾಮಾರಿಯ ಜೊತೆ ಜೀವನ್ಮರಣ ಹೋರಾಟ ಮಾಡಿ ಇದೀಗ ಬದುಕುಳಿದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸುತ್ತೇನೆಂದ ವಿರಾಟ್ ಕೊಹ್ಲಿ

    ಡಾ. ಸನತ್ ಅವರಿಗೆ ಕೋವಿಡ್ ಅಟ್ಯಾಕ್ ಆಗಿ ಎರಡೂ ಶ್ವಾಸಕೋಶಗಳಿಗೆ ಹಾನಿಯಾಗಿತ್ತು. ಹೀಗಾಗಿ ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾ ಇದ್ದರು. ಸತತ ಮೂರೂವರೆ ತಿಂಗಳಿಂದ ಚಿಕಿತ್ಸೆ ಪಡೆಯುತ್ತಾ ಇದ್ದ ಕೊರೊನಾ ಯೋಧನಿಗೆ ಅಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರ ತಂಡ ಎರಡು ಶ್ವಾಸಕೋಶಗಳ ಕಸಿ ಮಾಡಿ ಜೀವನ್ಮರಣ ಹೋರಾಟ ಮಾಡುತ್ತಿದ್ದ ಡಾ. ಸನತ್ ರನ್ನು ಬದುಕಿಸಿದ್ದಾರೆ. ಇದನ್ನೂ ಓದಿ: ಪರಿಷತ್‍ನಲ್ಲಿ ನಿದ್ರೆ ಮಾಡೋರಿಗೆ ಹಾಡು ಹೇಳಿ ಎಬ್ಬಿಸಿದ ಜೆಡಿಎಸ್ ಸದಸ್ಯ ಭೋಜೇಗೌಡ

    ಅಸ್ಟರ್ ಸಿಎಂಐ ಆಸ್ಪತ್ರೆಯ ಡಾ. ಸಂದೀಪ್ ಅತ್ತಾವರ, ಡಾ.ವಿ ವರುಣ್, ಡಾ. ಶ್ರೀವತ್ಸವ್ ಲೋಕೇಶ್ವರನ್, ಡಾ.ಸುನೀಲ್ ಕುಮಾರ್ ಮತ್ತು ಡಾ.ಪ್ರಕಾಶ್ ವೈದ್ಯರ ತಂಡದಿಂದ ಚಿಕಿತ್ಸೆ ನೀಡಿದ್ದು, ಎರಡು ಶ್ವಾಸಕೋಶಗಳ ಕಸಿ ನಡೆಸಿ ಯಶಸ್ವಿಯಾಗಿದ್ದಾರೆ. ಡಾ. ಸನತ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಸ್ತೇಷಿಯಾ ವಿಶೇಷ ತಜ್ಞರಾಗಿ ಕೆಲಸ ಮಾಡ್ತಾ ಇದ್ದರು. ಎರಡನೇ ಅಲೆ ವೇಳೆ ಕೋವಿಡ್ ಐಸಿಯು ವಾರ್ಡ್ ನಲ್ಲಿ ಕೆಲಸ ಮಾಡ್ತಾ ಇದ್ದರು.  ಇದನ್ನೂ ಓದಿ: ವಿಮಾನದ ಟಿಕೆಟ್‍ಗಿಂತ ಬಸ್‍ಗಳ ಟಿಕೆಟ್ ದರ ಜಾಸ್ತಿ ಇದೆ: ರಮೇಶ್ ಕುಮಾರ್

    ಸಾವಿರಾರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖರಾಗಿ ಮಾಡಿದ್ದ ಡಾ. ಸನತ್ ಅವರಿಗೆ ಕೊರೊನಾ ವಕ್ಕರಿಸಿದೆ. ಕೋವಿಡ್ ಸೋಂಕು ತಗುಲಿದ ಬಳಿಕ ಆರೋಗ್ಯ ಹದಗೆಟ್ಟು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಾ ಇದ್ದರು. ಕ್ರಮೇಣ ಅವರ ಆರೋಗ್ಯ ಹದಗೆಟ್ಟು ಎರಡು ಶ್ವಾಸಕೋಶ ಸಂಪೂರ್ಣ ಹಾನಿಗೊಳಗಾಗಿತ್ತು. ಎರಡು ಶ್ವಾಸಕೋಶಗಳಿಗೆ ಹಾನಿಯಾದ ಹಿನ್ನೆಲೆ ಹೆಬ್ಬಾಳದ ಅಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶೇ.100 ಆಮ್ಲಜನಕದೊಂದಿಗೆ ಐಸಿಯುನಲ್ಲಿ ಜೀವನ್ಮರಣ ಹೋರಾಟ ಮಾಡ್ತಿದ್ದ ಡಾ. ಸನತ್ ಸದ್ಯ ಕೊರೊನಾವನ್ನು ಗೆದ್ದಿದ್ದಾರೆ.

  • ಕೊರೊನಾ ಸೋಂಕಿತರ ಮೇಲೆ ಈಗ ಬ್ಲ್ಯಾಕ್‌ ಫಂಗಸ್‌ ದಾಳಿ

    ಕೊರೊನಾ ಸೋಂಕಿತರ ಮೇಲೆ ಈಗ ಬ್ಲ್ಯಾಕ್‌ ಫಂಗಸ್‌ ದಾಳಿ

    – ಕೊರೊನಾದಂತೆ ಇದು ಸಾಂಕ್ರಾಮಿಕ ಸೋಂಕು ಅಲ್ಲ
    – 60ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು, 13 ಜನ ಸಾವು
    – ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯ

    ನವದೆಹಲಿ: ಜನವರಿ, ಫೆಬ್ರವರಿಯಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಬಹುದು ಎಂಬ ಎಚ್ಚರಿಕೆಯ ಬೆನ್ನಲ್ಲೇ ಈಗ ಕೋವಿಡ್‌ ಸೋಂಕಿತರಿಗೆ ಅಪರೂಪದ ಬ್ಲ್ಯಾಕ್‌ ಫಂಗಸ್‌ (ಶಿಲೀಂಧ್ರ) ಹೆಸರಿನ ಮತ್ತೊಂದು ಸೋಂಕು ದಾಳಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

    ತನ್ನಲ್ಲಿ ದಾಖಲಾದ ಕೆಲ ಕೋವಿಡ್‌ 19 ರೋಗಿಗಳು ಈ ಸೋಂಕಿಗೆ ತುತ್ತಾಗಿದ್ದಾರೆ ಎಂದು ದೆಹಲಿಯ ಶ್ರೀ ಗಂಗಾರಾಮ್‌ ಆಸ್ಪತ್ರೆಯಲ್ಲಿ ವರದಿ ಮಾಡಿದ ಬಳಿಕ ಇತರ ಹಲವಾರು ನಗರಗಳ ಆಸ್ಪತ್ರೆಗಳು ವರದಿ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ. ಮುಂಬೈ, ದೆಹಲಿ ಮತ್ತು ಅಹಮದಾಬಾದ್‌ನಲ್ಲಿ 60ಕ್ಕೂ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

    ಮ್ಯುಕೋರ್‌ಮೈಕೋಸಿಸ್‌ ಎಂದು ಕರೆಯಲಾಗುವ ಅಪರೂಪದ ಸೋಂಕು ಹೊಸದಲ್ಲ. ಆದರೆ ಕೋವಿಡ್‌ 19 ಸಂದರ್ಭದಲ್ಲೇ ಕಾಣಿಸಿಕೊಂಡಿರುವುದರ ಜೊತೆ ಕೊರೊನಾ ಸೋಂಕಿತರು ಮತ್ತು ಸೋಂಕಿನಿಂದ ಗುಣಮುಖರಾದವರ ಮೇಲೆ ಹೆಚ್ಚು ದಾಳಿ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಸಾಂಕ್ರಾಮಿಕ ರೋಗವಲ್ಲ:
    ಇದು ಸಾಂಕ್ರಾಮಿಕ ರೋಗವಲ್ಲ. ಇದು ಮಾನವರಿಂದ ಮಾನವರಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಸೋಂಕಿಗೆ ಅಹಮದಾಬಾದ್‌ನ ವಿವಿಧ ಆಸ್ಪತ್ರೆಗಳಲ್ಲಿ 9 ಮಂದಿ ಮತ್ತು ದೆಹಲಿಯ ಶ್ರೀ ಗಂಗಾರಾಮ್‌ ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.  ಈ ರೋಗಕ್ಕೆ ತುತ್ತಾದವರು ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಿರುವುದು ಖಚಿತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    ಹೇಗೆ ಬರುತ್ತದೆ?
    ಈ ಸೋಂಕು ಹೇಗೆ ಬೇಕಾದರೂ ದೇಹವನ್ನು ಪ್ರವೇಶಿಸಬಹುದು. ಗಾಯಗೊಂಡರೆ, ಸುಟ್ಟರೂ ಚರ್ಮದ ಮೂಲಕ ಸೋಂಕು ದೇಹವನ್ನು ಪ್ರವೇಶಿಸುತ್ತದೆ. ಮೂಗಿನ ಮೂಲಕ ಶ್ವಾಸಕೋಶ ಪ್ರವೇಶಿಸುವ ಸೋಂಕು, ಬಳಿಕ ಇಡೀ ದೇಹಕ್ಕೆ ಆವರಿಸಿಕೊಳ್ಳುತ್ತದೆ.

    ಇದು ಮೂಗಿನ ಮೂಲಕ ಪ್ರವೇಶಿಸಿ ನಂತರ ಕಣ್ಣುಗಳಿಗೆ ಹರಡುತ್ತದೆ. ಇದರಿಂದಾಗಿ ಕುರುಡುತನಕ್ಕೆ ಕಾರಣವಾಗಬಹುದು. ಇದು ಮೆದುಳಿಗೆ ಹರಡಿದರೆ ಮೆನಿಂಜೈಟಿಸ್‌ಗೆ ಕಾರಣವಾಗಬಹುದು. ಈ ಸೋಂಕು ಯಾರಿಗೆ ಬೇಕಾದರೂ ಹಬ್ಬುವ ಸಾಧ್ಯತೆ ಇದೆಯಾದರೂ, ರೋಗನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಇದರ ಪ್ರಭಾವ ಹೆಚ್ಚು ಎಂಬ ಅಂಶ ದೃಢಪಟ್ಟಿದೆ.

    ಲಕ್ಷಣ ಏನು?
    ವಿಪರೀತ ತಲೆನೋವು, ಜ್ವರ, ಕಫ, ಎದೆನೋವು, ಉಸಿರಾಟದ ತೊಂದರೆ, ಸಿಂಬಳ ಕಪ್ಪು ಬಣ್ಣಕ್ಕೆ ತಿರುಗುವುದು, ಮೂಗು ಕಟ್ಟಿಕೊಳ್ಳುವುದು, ಕಣ್ಣಿನ ಊತ, ಮುಖದ ಒಂದು ಭಾಗ ಊತ, ಮೂಗು ಕಟ್ಟಿಕೊಳ್ಳುವುದು ಈ ಸೋಂಕಿನ ಲಕ್ಷಣವಾಗಿದೆ.

    ಪಾರಾಗೋದು ಹೇಗೆ?
    ಸಾಮಾಜಿಕ ಅಂತರ ಕಾಪಾಡುವುದು, ಆಗಾಗ ಕೈತೊಳೆದುಕೊಳ್ಳುವುದು, ಮಾಸ್ಕ್‌ ಧರಿಸುವ ಮೂಲಕ ರಕ್ಷಣೆ ಪಡೆಯಬಹುದು. ವೈದ್ಯರ ಬಳಿಗೆ ತೆರಳಿ ಆ್ಯಂಟಿ ಫಂಗಲ್‌ ಚಿಕಿತ್ಸೆ ಪಡೆದುಕೊಂಡರೆ ಪಾರಾಗಬಹುದು.

    ಆರಂಭದಲ್ಲೇ ಸೋಂಕು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದರೆ ಕಾಯಿಲೆಯಿಂದ ಪಾರಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಸೋಂಕಿಗೆ ತುತ್ತಾದವರಲ್ಲಿ ಶೇ.54ರಷ್ಟುಜನರು ಸಾವನ್ನಪ್ಪುವ ಸಾಧ್ಯತೆ ಇದೆ  ಎಂದು 2005ರ ವರದಿ ಹೇಳಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಡಾ. ಬಾಲಾಜಿ ಚಿಕಿತ್ಸೆಗೆ ಸರ್ಕಾರದಿಂದ 25 ಲಕ್ಷ ಬಿಡುಗಡೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಡಾ. ಬಾಲಾಜಿ ಚಿಕಿತ್ಸೆಗೆ ಸರ್ಕಾರದಿಂದ 25 ಲಕ್ಷ ಬಿಡುಗಡೆ

    ಬೆಂಗಳೂರು: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿ ಕೊನೆಗೆ ತಾವೇ ಕೊರೊನಾಗೆ ಒಳಗಾಗಿ ಚಿಕಿತ್ಸೆಗೆ ಒದ್ದಾಡ್ತಿದ್ದ ಡಾ. ಬಾಲಾಜಿ ಪ್ರಸಾದ್‍ಗೆ ಪಬ್ಲಿಕ್ ಟಿವಿ ವರದಿ ಬಳಿಕ ರಾಜ್ಯ ಸರ್ಕಾರ ಸ್ಪಂದಿಸಿದೆ.

    ಶ್ವಾಸಕೋಸ ಸಮಸ್ಯೆಯಿಂದ ಬಳಲ್ತಿದ್ದ ಬಾಲಾಜಿ ಪ್ರಸಾದ್ ಚಿಕಿತ್ಸೆಗೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದು, ಅವರನ್ನು ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಶಿಫ್ಟ್ ಮಾಡಲಾಗಿದೆ. ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಚನೆ ನೀಡಿದ್ದಾರೆ.

    ಕೊರೊನಾ ಅಟ್ಟಹಾಸದ ಹೊತ್ತಲ್ಲಿ 100ಕ್ಕೂ ಅಧಿಕ ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ಮೂತ್ರಪಿಂಡ ತಜ್ಞರೂ ಆಗಿರುವ ಬಾಲಾಜಿ ಪ್ರಸಾದ್ ಚಿಕಿತ್ಸೆಗೆ 1 ಕೋಟಿ ರೂಪಾಯಿ 20 ಲಕ್ಷ ರೂಪಾಯಿಯ ಅಗತ್ಯ ಇತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಇದನ್ನೂ ಓದಿ: ಕೊರೊನಾ ಚಿಕಿತ್ಸೆ ನೀಡಿದ್ದ ಡಾಕ್ಟರ್​​ಗೆ ಸೋಂಕು – ಶ್ವಾಸಕೋಶ ಸಮಸ್ಯೆಯಿಂದ ನರಳಾಟ

  • ಎಸ್‌ಪಿಬಿಗೆ ಶ್ವಾಸಕೋಶದ ಕಸಿ ಮಾಡಲ್ಲ, ವದಂತಿ ನಂಬಬೇಡಿ- ಆಸ್ಪತ್ರೆ ವೈದ್ಯರು

    ಎಸ್‌ಪಿಬಿಗೆ ಶ್ವಾಸಕೋಶದ ಕಸಿ ಮಾಡಲ್ಲ, ವದಂತಿ ನಂಬಬೇಡಿ- ಆಸ್ಪತ್ರೆ ವೈದ್ಯರು

    ಚೆನ್ನೈ: ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಶ್ವಾಸಕೋಶದ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿಲ್ಲ ಎಂದು ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆ ತಿಳಿಸಿದೆ.

    ಕೋವಿಡ್‌ 19 ನಿಂದ ಎಸ್‌ಪಿಬಿ ಚೇತರಿಸಿಕೊಂಡ ಬಳಿಕ ಅವರಿಗೆ ಶ್ವಾಸಕೋಶದ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ವಂದತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಎಂಜಿಎಂ ಆಸ್ಪತ್ರೆ ಸ್ಪಷ್ಟನೆ ನೀಡಿದೆ.

    ಕೊರೊನಾದಿಂದ ಚೇತರಿಕೆ ಕಂಡರೂ ಅವರಿಗೆ ಶ್ವಾಸಕೋಶದ ಸಮಸ್ಯೆಯಿದೆ. ಹೀಗಾಗಿ ಶೀಘ್ರವೇ ವೈದ್ಯರು ಶ್ವಾಸಕೋಶದ ಕಸಿ ಚಿಕಿತ್ಸೆ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದು ಆಸ್ಪತ್ರೆಯನ್ನು ಸಂಪರ್ಕಿಸಿದೆ. ಈ ವೇಳೆ ಶ್ವಾಸಕೋಶದ ಕಸಿ ಮಾಡುವುದಿಲ್ಲ. ಇದೊಂದು ಸುಳ್ಳು ವದಂತಿ ಎಂದು ಹೇಳಿದ್ದಾರೆ. ಶೀಘ್ರವೇ ವೈದ್ಯರು ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಿರುವ ವೆಂಟಿಲೇಟರ್‌ ಅನ್ನು ತೆಗೆಯುವ ಸಾಧ್ಯತೆಯಿದೆ.

    ಭಾನುವಾರ ಪುತ್ರ ಚರಣ್‌ ತಮ್ಮ ವಿಡಿಯೋದಲ್ಲಿ, ತಂದೆಯ ಆರೋಗ್ಯ ಸುಧಾರಣೆಯಾಗುತ್ತಿದೆ. ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಸ್ಪತ್ರೆಯಲ್ಲಿ ಆಚರಿಸಿದ್ದಾರೆ. ಈಗ ಆಸ್ಪತ್ರೆಯಲ್ಲೇ ಎಸ್‌ಪಿಬಿ ಟೆನಿಸ್ ಮತ್ತು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ಎಂದು ತಿಳಿಸಿದ್ದರು. ಇದನ್ನೂ ಓದಿ: ತಂದೆ ಸಂಗೀತ ಕೇಳ್ತಾ, ತಾಳಕ್ಕೆ ತಕ್ಕಂತೆ ಕೈಯಾಡಿಸ್ತಿದ್ದಾರೆ: ಎಸ್‍ಪಿಬಿ ಪುತ್ರ

    ಇಷ್ಟು ದಿನ ಅಪ್‍ಡೇಟ್ ನೀಡದ್ದಕ್ಕೆ ದಯವಿಟ್ಟು ಕ್ಷಮಿಸಿ, ವೀಕೆಂಡ್ ಬಳಿಕ ನಮಗೆ ಗುಡ್ ನ್ಯೂಸ್ ಲಭ್ಯವಾಗಿದ್ದು, ಅವರ ಲಂಗ್ಸ್‍ನಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಆದರೆ ಇನ್ನೂ ಹೆಚ್ಚಿನ ಸುಧಾರಣೆಯಾಗಬೇಕಿರುವುದರಿಂದ ವೆಂಟಿಲೇಟರ್‍ನಲ್ಲಿಯೇ ಇಡಲಾಗಿದೆ. ಖುಷಿಯ ವಿಚಾರ ಎಂಬಂತೆ ಅವರ ಕೋವಿಡ್-19 ವರದಿ ನೆಗೆಟಿವ್ ಬಂದಿದೆ. ಆದರೆ ಕೋವಿಡ್ ವರದಿ ನೆಗೆಟಿವ್ ಪಾಸಿಟಿವ್ ಏನೇ ಇರಲಿ ನಮಗೀಗ ಶ್ವಾಸಕೋಶಗಳು ಬೇಗನೇ ಗುಣಮುಖವಾಗಬೇಕಿದೆ ಎಂದು ಹೇಳಿದ್ದರು.

    ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿದ್ದವು. ಕಳೆದ 19 ದಿನಗಳಿಂದ ಎಸ್‍ಪಿಬಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಕೊರೊನಾ ವೈರಸ್‍ನಿಂದ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ರಕ್ತಸ್ರಾವ ಹೆಚ್ಚಾಗಿದೆ. ಆದ್ದರಿಂದ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು. ಅಲ್ಲದೆ ಆಗಸ್ಟ್ 24ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು.

     

  • ಕೊರೊನಾದಿಂದ ಶ್ವಾಸಕೋಶಕ್ಕೆ ಮಾತ್ರ ಅಲ್ಲ – ಮೆದುಳು, ಮೂತ್ರ ಪಿಂಡಗಳಿಗೂ ಹಾನಿ

    ಕೊರೊನಾದಿಂದ ಶ್ವಾಸಕೋಶಕ್ಕೆ ಮಾತ್ರ ಅಲ್ಲ – ಮೆದುಳು, ಮೂತ್ರ ಪಿಂಡಗಳಿಗೂ ಹಾನಿ

    – ಚೇತರಿಕೆಯಾದ ನಂತರವೂ ಮನೆಯಲ್ಲಿ ಆಮ್ಲಜನಕದ ಅಗತ್ಯವಿದೆ
    – ಮುಂದೆ ಇಡೀ ದೇಹಕ್ಕೆ ಸಮಸ್ಯೆ ತರಬಹುದು

    ನವದೆಹಲಿ: ಕೋವಿಡ್‌ 19 ನಿಂದ ಕೇವಲ ಶ್ವಾಸಕೋಶಕ್ಕೆ ಮಾತ್ರ ಹಾನಿ ಅಲ್ಲ. ಮೆದುಳು ಮತ್ತು ಮೂತ್ರ ಪಿಂಡಗಳಿಗೂ ಹಾನಿಯಾಗುತ್ತದೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

    ಕೊರೊನಾ ವೈರಸ್‌ ನಿಯಂತ್ರಣ ಸಂಬಂಧ ಕೇಂದ್ರ ಸರ್ಕಾರ ರಚಿಸಿರುವ ಟಾಸ್ಕ್‌ ಫೋರ್ಸ್‌ ಸಮಿತಿಯ ಸದಸ್ಯ, ಏಮ್ಸ್‌ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ತೀವ್ರತರವಾದ ಅನಾರೋಗ್ಯದಿಂದ ಬಳಲಿ ಚೇತರಿಸಿಕೊಂಡ ಕೆಲ ತಿಂಗಳ ನಂತರವೂ ರೋಗಿಗಳ ಶ್ವಾಸಕೋಶವೂ ಕೆಟ್ಟ ಆಕಾರದಲ್ಲಿರುವುದು ದೃಢಪಟ್ಟಿದೆ. ಹೀಗಾಗಿ ಅವರಿಗೆ ಮನೆಯಲ್ಲೇ ಆಮ್ಲಜನಕ ನೀಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

    ಸೋಂಕು ಶ್ವಾಸಕೋಶದಿಂದ ಪ್ರಾರಂಭವಾಗುವ ಕಾರಣ ಇದನ್ನು ಶ್ವಾಸಕೋಶದ ಕಾಯಿಲೆ ಎಂದು ಕರೆಯಬಹುದು. ಆದರೆ ಮುಂದಿನ ದಿನಗಳಲ್ಲಿ ಈ ಸೋಂಕು ಇಡೀ ದೇಹಕ್ಕೆ ಸಮಸ್ಯೆ ತರಬಹುದು. ಇದರಿಂದ ಶ್ವಾಸಕೋಶಕ್ಕೆ ಮಾತ್ರ ಹಾನಿ ಅಲ್ಲ. ಮೆದುಳು ಮತ್ತು ಮೂತ್ರ ಪಿಂಡಗಳಿಗೂ ಹಾನಿಯಾಗುತ್ತದೆ. ಇಡೀ ದೇಹಕ್ಕೆ ಸಮಸ್ಯೆ ತರುವ ಕಾರಣ ಇದನ್ನು ʼವ್ಯವಸ್ಥಿತ ಕಾಯಿಲೆʼ ಎಂಬುದಾಗಿ ಕರೆಯಬಹುದು ಎಂದು ಅಭಿಪ್ರಾಯಪಟ್ಟರು.

    ಕೋವಿಡ್ -19 ರೋಗಿಗಳು ಈಗ ಪಾರ್ಶ್ವವಾಯು ಮತ್ತು ನರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈಗ ಇದು ಉಸಿರಾಟ ಸೋಂಕುಗಿಂತಲೂ ಈ ಸಮಸ್ಯೆ ಮತ್ತಷ್ಟು ಹದಗೆಡಿಸಿದೆ ಎಂಬ ಆತಂಕಕಾರಿ ವಿಚಾರವನ್ನು ಹೊರ ಹಾಕಿದರು.

    ಮೊದಲು ಇದು ಕೇವಲ ನ್ಯುಮೋನಿಯಾ ಎಂದೇ ನಾವು ಭಾವಿಸಿದ್ದೇವು. ಬಳಿಕ ಅಧ್ಯಯನವಾಗುತ್ತಿದ್ದಂತೆ ಹೈಪರ್ಕೋಗುಲೇಬಲ್ ಸ್ಥಿತಿಗೆ ಹೋದಾಗ ಶ್ವಾಸಕೋಶ ಮತ್ತು ಹೃದಯದಲ್ಲಿನ ರಕ್ತನಾಳಗಳನ್ನು ಹೆಪ್ಪುಗಟ್ಟುವಿಕೆಯಿಂದ ರೋಗಿಗಳು ಹಠಾತ್ತನೆ ಸಾಯುತ್ತಿರುವುದು ತಿಳಿಯಿತು. ಆದರೆ ಈಗ ಈ ಬೆಳವಣಿಗೆ ಮೆದುಳಿನಲ್ಲಿ ನಡೆಯುತ್ತಿರುವುದನ್ನು ತಿಳಿಯುತ್ತಿದ್ದೇವೆ. ಪಾರ್ಶ್ವವಾಯು ಮತ್ತು ನರ ಸಮಸ್ಯೆಯಿಂದ ಬಳಲುವ ರೋಗಿಗಳಲ್ಲಿ ಇದು ಹೆಚ್ಚಾಗಿ ಕಾಣಿಸುತ್ತಿದೆ. ಆರಂಭದಲ್ಲಿ ಇದು ದೊಡ್ಡ ಸಮಸ್ಯೆಯಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ಈಗ ನಾವು ಈ ರೀತಿಯ ಹೆಚ್ಚಿನ ಪ್ರಕರಣಗಳನ್ನು ನೋಡುತ್ತಿದ್ದು, ದೊಡ್ಡ ಸಮಸ್ಯೆಯಾಗಿದೆ ಎಂದು ಗುಲೇರಿಯಾ ತಿಳಿಸಿದರು.

    ತೀವ್ರವಾದ ನ್ಯುಮೋನಿಯಾ ಹೊಂದಿರುವ ಹಲವಾರು ರೋಗಿಗಳನ್ನು ನಾವು ನೋಡಿದ್ದೇವೆ. ಆರಂಭದಲ್ಲಿ ಸೋಂಕಿನಿಂದಾಗಿ ಶ್ವಾಸಕೋಶಕ್ಕೆ ಗಂಭೀರವಾದ ಗಾಯವಾಗುತ್ತದೆ. ರೋಗಿಗಳು ಗುಣಮುಖರಾದ ಮೂರು ತಿಂಗಳ ಬಳಿಕ ಸಿಟಿ ಸ್ಕ್ಯಾನ್‌ ಮಾಡಿದಾಗ ಅವರ ಶ್ವಾಸಕೋಶ ಕೆಟ್ಟ ಆಕಾರದಲ್ಲಿರುವುದು ಗೊತ್ತಾಗಿದೆ. ಹೀಗಾಗಿ ರೋಗಿಗಳು ಚೇತರಿಕೆಯಾದ ಬಳಿಕವೂ ಕೆಲವರಿಗೆ ಮನೆಯಲ್ಲಿ ಆಮ್ಲಜನಕದ ಅಗತ್ಯವಿದೆ. ಡಿಸ್ಚಾರ್ಜ್‌ ಆದ ರೋಗಿಗಳು ವಾರದ ಒಳಗಡೆ ಈ ಸಮಸ್ಯೆಯ ಬಗ್ಗೆ ದೂರು ನೀಡಿದ್ದಾರೆ. ಗುಣಮುಖರಾದರೂ ಕೆಲಸಕ್ಕೆ ಹೋಗಲು ಶಕ್ತಿ ಇಲ್ಲ ಎಂದಿದ್ದಾರೆ. ಕೆಲ ಸಂದರ್ಭಗಳಲ್ಲಿ, ಗಂಭೀರವಾದ ನರವೈಜ್ಞಾನಿಕ ಸಮಸ್ಯೆಗಳಿವೆ ಎಂದು ಹೇಳಿದರು.

    ವೈರಸ್‌ಗೆ ಪ್ರತಿಕ್ರಿಯೆಯಾಗಿ ದೇಹವು ಅಭಿವೃದ್ಧಿಪಡಿಸಿದ ಪ್ರತಿಕಾಯಗಳು ಶಾಶ್ವತ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆಯೇ ಎಂಬುದರ ಬಗ್ಗೆ ವಿಶ್ವಾದ್ಯಂತ ಸಂಶೋಧಕರು ಅಧ್ಯಯನ ಮಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಭಾರತದಲ್ಲೂ ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ದೇಹದ ರೋಗನಿರೋಧಕ ಪ್ರತಿಕ್ರಿಯೆಯ ಬಗ್ಗೆ ಕಲಿಯುತ್ತಿದ್ದೇವೆ. ಆದರೆ ಎಷ್ಟು ದಿನದವರೆಗೆ ದೇಹಕ್ಕೆ ಇದು ರಕ್ಷಣೆ ನೀಡುತ್ತದೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.

  • ಶ್ವಾಸಕೋಶದಲ್ಲಿ ಎದೆಹಾಲು ಸಿಲುಕಿ 10 ತಿಂಗ್ಳ ಮಗು ಸಾವು

    ಶ್ವಾಸಕೋಶದಲ್ಲಿ ಎದೆಹಾಲು ಸಿಲುಕಿ 10 ತಿಂಗ್ಳ ಮಗು ಸಾವು

    ಉಡುಪಿ: ಜಿಲ್ಲೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ 10 ತಿಂಗಳ ಮಗುವಿನ ವೈದ್ಯಕೀಯ ವರದಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕೈಸೇರಿದೆ.

    ಜ್ವರ ಮತ್ತು ಉಸಿರಾಟ ತೊಂದರೆಯಾಗಿ ಸಾವನ್ನಪ್ಪಲು ಎದೆಹಾಲು ಕಾರಣ ಅಂತ ವೈದ್ಯರು ಹೇಳಿದ್ದಾರೆ. ಕಾರ್ಕಳದ ಮಿಯಾರು ಗ್ರಾಮದಲ್ಲಿ ನೆಲೆಸಿರುವ ಮೂಲತಃ ವಿಜಯಪುರ ಜಿಲ್ಲೆಯ ದಂಪತಿಯ ಮಗು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಏಪ್ರಿಲ್ ತಿಂಗಳಲ್ಲಿ ವಿಜಯಪುರಕ್ಕೆ ಹೋದ ದಂಪತಿ 10 ದಿನಗಳ ಹಿಂದೆ ವಾಪಸ್ ಆಗಿದ್ದರು. ಜೂನ್ 28 ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ತಾಲೂಕು ಆಸ್ಪತ್ರೆಗೆ ಮಗುವನ್ನು ಕರೆ ತರುವಾಗ ಸಾವು ಸಂಭವಿಸಿದೆ.

    ಕೊರೊನಾ ಸಂದರ್ಭದಲ್ಲಿ ಮೃತಪಟ್ಟಿರುವ ಕಾರಣ ಮಗುವಿನ ಗಂಟಲ ದ್ರವ ಪರೀಕ್ಷೆಗಾಗಿ ರವಾನಿಸಲಾಗಿತ್ತು. ಕೆಎಂಸಿ ಲ್ಯಾಬ್‍ನ ವರದಿ ಜಿಲ್ಲಾಡಳಿತದ ಕೈಸೇರಿದೆ. ತಾಯಿ 10 ತಿಂಗಳ ಮಗುವಿಗೆ ಮಲಗಿದಲ್ಲಿಗೆ ಎದೆಹಾಲು ಕೊಟ್ಟಿದ್ದರು. ಹಾಲು ಮಗುವಿನ ಶ್ವಾಸಕೋಶದಲ್ಲಿ ಸಿಕ್ಕಿಹಾಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಪುಟ್ಟ ಮಕ್ಕಳಿಗೆ ಮಲಗಿದಲ್ಲಿಗೆ ಎದೆಹಾಲು ಕೊಡಬಾರದು ಎಂದು ಸಲಹೆ ನೀಡಿದ್ದಾರೆ.

  • ಪತ್ನಿಯ ವೈದ್ಯಕೀಯ ವೆಚ್ಚ ಭರಿಸಲಾಗದೆ ಅತಿಥಿ ಉಪನ್ಯಾಸಕ ಗೋಳಾಟ

    ಪತ್ನಿಯ ವೈದ್ಯಕೀಯ ವೆಚ್ಚ ಭರಿಸಲಾಗದೆ ಅತಿಥಿ ಉಪನ್ಯಾಸಕ ಗೋಳಾಟ

    ಕೊಪ್ಪಳ: ಪತ್ನಿಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕಂಗಾಲಾದ ಅತಿಥಿ ಉಪನ್ಯಾಸಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವನ್ನ ಹೇಳಿಕೊಂಡಿದ್ದಾರೆ.

    ಡಾ.ಮಂಜಣ್ಣ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರ್ ರಾವ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದಾರೆ. ಇದೀಗ ತನ್ನ ಪತ್ನಿಯ ವೈದ್ಯಕೀಯ ವೆಚ್ಚ ಭರಿಸಲು ಸಹಾಯ ಮಾಡುವಂತೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಬಳಿ ಸಾಮಾಜಿಕ ಜಾಲತಾಣದ ಮೂಲಕ ಬೇಡಿಕೊಂಡಿದ್ದಾರೆ.

    ಮಂಜಣ್ಣ ಅವರ ಪತ್ನಿ ಕಿಡ್ನಿ ಹಾಗೂ ಶ್ವಾಸಕೋಶ ವೈಫಲ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನದ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಬೇಕಾಗಿದೆ. ಆದರೆ ಆಕೆಯ ಚಿಕಿತ್ಸೆ ವೆಚ್ಚ ಭರಿಸಲಾಗದೆ ಕೈಚೆಲ್ಲಿ ಕುಳಿತಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣದ ಮೂಲಕ ಸಚಿವರಲ್ಲಿ ಬೇಡಿಕೊಂಡಿದ್ದು, ಯಾರಾದರೂ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

  • ಕೊರೊನಾ ಭಯದಿಂದ ನಿರಾಕರಣೆ- 10 ಆಸ್ಪತ್ರೆ ಅಲೆದಾಡಿ ಪ್ರಾಣ ಬಿಟ್ಟ ಮಹಿಳೆ

    ಕೊರೊನಾ ಭಯದಿಂದ ನಿರಾಕರಣೆ- 10 ಆಸ್ಪತ್ರೆ ಅಲೆದಾಡಿ ಪ್ರಾಣ ಬಿಟ್ಟ ಮಹಿಳೆ

    ಹೈದರಾಬಾದ್: ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು 10 ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ಪ್ರಾಣ ಬಿಟ್ಟ ಅಮಾನವೀಯ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

    ಹೌದು. ಮೃತ ಮಹಿಳೆಯನ್ನು ರಫೀಯಾ ಬೇಗಂ(22) ಎಂದು ಗುರುತಿಸಲಾಗಿದ್ದು, ಇವರು ಏಪ್ರಿಲ್ 2ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಅವರು ಶ್ವಾಸಕೋಶದ ತೊಂದರೆಯಿಂದ ಬಳಲಿದ್ದು, ಏಪ್ರಿಲ್ 8ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

    ಅನಾರೋಗ್ಯಕ್ಕೀಡಾದ ಬಳಿಕ ಮಹಿಳೆಯ ಪತಿ 10 ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಕೊರೊನಾ ಭಯದಿಂದ ಎಲ್ಲಾ ಆಸ್ಪತ್ರೆಯವರೂ ಮಹಿಳೆಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಕೊನೆಗೆ ಅಂದರೆ ಏಪ್ರಿಲ್ 8ರಂದು ಸಂಜೆ ಮಹಿಳೆ ಕೊನೆಯುಸಿರೆಳೆದಿದ್ದಾರೆ.

    ಮೃತರಾದ ನಂತರ ಕೋವಿಡ್ 19 ಟೆಸ್ಟ್ ಕೂಡ ಮಾಡಲಾಗಿದ್ದು, ಅದರಲ್ಲಿ ನೆಗೆಟಿವ್ ಅಂತ ವರದಿ ಬಂದಿದೆ. ಬಳಿಕ ಅಧಿಕಾರಿಗಳು 9 ದಿನದ ಮಗು, ಪತಿ ಹಾಗೂ ಆಕೆಯ ಕುಟುಂಬಸ್ಥರನ್ನು ರಾಜೇಂದ್ರ ನಗರದಲ್ಲಿರುವ ಕ್ವಾರಂಟೈನ್ ಸೆಂಟರ್ ನಲ್ಲಿ ಗೃಹಬಂಧನದಲ್ಲಿರಿಸಿದ್ದಾರೆ.

    ಮೃತರ ಪತಿ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಅಲ್ಲದೆ ಯಾವುದೇ ಕೋವಿಡ್ 19 ಪಾಸಿಟಿವ್ ವ್ಯಕ್ತಿಯ ಜೊತೆ ಸಂಪರ್ಕ ಕೂಡ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆದರೆ ಕೆಲ ಆಸ್ಪತ್ರೆಯ ವೈದ್ಯರು, ಮಹಿಳೆ ಕೊರೊನಾ ವೈರಸ್ ವ್ಯಕ್ತಿಯ ಸಂಪರ್ಕದಲ್ಲಿದ್ದರು. ಹೀಗಾಗಿ ಅವರಿಗೆ ಕಫ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

  • 65ರ ವ್ಯಕ್ತಿಯ ಹೃದಯ-ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆ ಹೊರತೆಗೆದ ವೈದ್ಯರು

    65ರ ವ್ಯಕ್ತಿಯ ಹೃದಯ-ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆ ಹೊರತೆಗೆದ ವೈದ್ಯರು

    ಆಲಿಘರ್: 65 ವರ್ಷದ ವ್ಯಕ್ತಿಯ ದೇಹದಲ್ಲಿ ಹೃದಯ ಹಾಗೂ ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆಯನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

    ಆಲಿಘರ್ ನಿವಾಸಿಯಾದ ಹೇಮಂದ್ರ ಗುಪ್ತಾ ಶಸ್ತ್ರಚಿಕಿತ್ಸೆಗೆ ಒಳಗದ ವ್ಯಕ್ತಿ. ಇಲ್ಲಿನ ಎಎಮ್‍ಯು ಮೆಡಿಕಲ್ ಕಾಲೇಜಿನಲ್ಲಿ ಗುರುವಾರದಂದು ವೈದ್ಯರು ಈ ಬಗ್ಗೆ ತಿಳಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣ. ವ್ಯಕ್ತಿಗೆ ಹುಟ್ಟಿನಿಂದಲೂ ದೇಹದೊಳಗೆ ಗೆಡ್ಡೆ ಇದ್ದು, ಬೆಳೆಯುತ್ತಲಿತ್ತು ಎಂದು ಪ್ರೊಫೆಸರ್ ಎಮ್‍ಹೆಚ್ ಬೇಗ್ ಹೇಳಿದ್ದಾರೆ.

    ಬೇಗ್ ಅವರ ನೇತೃತ್ವದಲ್ಲಿ ವೈದ್ಯರ ತಂಡ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಗೆಡ್ಡೆಯನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಹೇಮೇಂದ್ರ ಅವರು ತನ್ನ ದೇಹದಲ್ಲಿ ಗೆಡ್ಡೆ ಇಟ್ಟುಕೊಂಡೇ ಇಷ್ಟು ದಿನ ಬದುಕಿದ್ದರು. ಆದ್ರೆ ಇತ್ತೀಚೆಗೆ ತೀವ್ರ ನೋವು ಕಾಣಿಸಿಕೊಂಡಾಗ ಗೆಡ್ಡೆ ಇರುವ ಬಗ್ಗೆ ಗೊತ್ತಾಗಿದೆ ಎಂದು ಬೇಗ್ ಹೇಳಿದ್ದಾರೆ.

    ಹೇಮೇಂದ್ರ ಅವರ ವಯಸ್ಸು ಶಸ್ತ್ರಚಿಕಿತ್ಸೆಗೆ ಸವಾಲಾಗಿತ್ತು ಎಂದು ವೈದ್ಯರ ತಂಡದಲ್ಲಿದ್ದ ಮೊಹಮ್ಮದ್ ಅಜಾಮ್ ಹಸೀನ್ ಹೇಳಿದ್ದಾರೆ.