Tag: ಶ್ರೇಯಾಘೋಷಲ್

  • ಮೆಲೋಡಿ ಕ್ವೀನ್‍ನನ್ನು ಭೇಟಿಯಾದ ಶರ್ಮಿಳಾ

    ಮೆಲೋಡಿ ಕ್ವೀನ್‍ನನ್ನು ಭೇಟಿಯಾದ ಶರ್ಮಿಳಾ

    ಚಂದನವನದ ನಟಿ ಶರ್ಮಿಳಾ ಮಾಂಡ್ರೆ ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದು, ತಮ್ಮದೇ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಶರ್ಮಿಳಾ ನಿರ್ಮಾಪಕಿಯಾಗಿದ್ದಾರೆ. ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಈ ನಟಿ ಮೆಲೋಡಿ ಕ್ವೀನ್ ಶ್ರೇಯಾಘೋಷಲ್ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಶರ್ಮಿಳಾ ಟ್ವಿಟ್ಟರ್‌ನಲ್ಲಿ, ಶ್ರೇಯಾಘೋಷಲ್ ಅವರನ್ನು ಭೇಟಿಯಾಗಿದ್ದು ಸಂತೋಷವಾಗುತ್ತಿದೆ. ಲಂಡನ್‍ನಲ್ಲಿ ಅವರು ಲೈವ್ ಪ್ರದರ್ಶನವಾಗಬೇಕಿತ್ತು. ಇದಕ್ಕೂ ಮುನ್ನ ನಾನು ಅವರನ್ನು ಭೇಟಿ ಮಾಡಿದ್ದೇನೆ. ಅತ್ಯಂತ ಸುಂದರವಾದ ಧ್ವನಿಯ ವಿನಮ್ರ ವ್ಯಕ್ತಿ ಎಂದು ಹೊಗಳಿದ್ದಾರೆ. ಅಲ್ಲದೇ ನನ್ನ ಮೊದಲ ಚಿತ್ರ ‘ಸಜನಿ’ ಸಿನಿಮಾದಲ್ಲಿ ಅವರು ಹಾಡೊಂದನ್ನು ಆಡಿರುವುದು ನನಗೆ ನೆನಪಾಯಿತು ಎಂದು ಬರೆದು ಲಿಂಕ್ ಹಾಕಿದ್ದಾರೆ. ಇದನ್ನೂ ಓದಿ: ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಪ್ರಸ್ತುತ ಶರ್ಮಿಳಾ ಮಾಂಡ್ರೆ ಕನ್ನಡದ ‘ದಸರಾ’ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದೇ ಟೈಟಲ್ ತೆಲುಗು ಸಿನಿಮಾಗೂ ಇಡಲಾಗಿತ್ತು. ಇದರಿಂದ ನಮ್ಮ ಸಿನಿಮಾಗೆ ತೊಂದರೆಯಾಗುವುದೆಂದು ಬೇಸರಗೊಂಡ ಶರ್ಮಿಳಾ ನ್ಯಾಯಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿ ಸುದ್ದಿಯಾಗಿದ್ದರು. ಈಗ ಮೆಲೋಡಿ ಕ್ವೀನ್ ಭೇಟಿಯಾಗುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಶರ್ಮಿಳಾ ಸಿನಿಮಾಗಿಂತ ಹೆಚ್ಚು ಪ್ರೊಡಕ್ಷನ್ ಕಡೆ ಹೆಚ್ಚು ಗಮನಕೊಡುತ್ತಿದ್ದಾರೆ. ಆದರೆ ಇವರ ಮೊದಲ ನಿರ್ಮಾಣದಲ್ಲಿ ಕೆಲವು ಗೊಂದಲಗಳು ನಿರ್ಮಾಣವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿದ್ದಾರೆ.

    ಶ್ರೇಯಾ ಘೋಷಲ್ ಚಂದನವನ ಸೇರಿದಂತೆ ಉತ್ತರ ಮತ್ತು ದಕ್ಷಿಣ ಸಿನಿಮಾಗಳಲ್ಲಿ ನಮ್ಮ ಮಧುರ ಧ್ವನಿಯ ಮೂಲಕ ಎಲ್ಲರನ್ನು ಮೋಡಿ ಮಾಡಿದ್ದಾರೆ. ಶ್ರೇಯಾಘೋಷಲ್ ಧ್ವನಿಗೆ ಲಕ್ಷಾಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲ ಸಿನಿರಂಗದಲ್ಲಿಯೂ ಶ್ರೇಯಾಘೋಷಲ್ ಬಹುಬೇಡಿಕೆಯ ಸಿಂಗರ್ ಆಗಿದ್ದಾರೆ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ