Tag: ಶ್ರೇಯಾಂಕ ಪಟ್ಟಿ

  • ಐಸಿಸಿ ರ‍್ಯಾಂಕಿಂಗ್‌- ಸ್ಮೃತಿ ಮಂದಾನಗೆ ನಂ.1 ಪಟ್ಟ

    ಐಸಿಸಿ ರ‍್ಯಾಂಕಿಂಗ್‌- ಸ್ಮೃತಿ ಮಂದಾನಗೆ ನಂ.1 ಪಟ್ಟ

    ದುಬೈ: ಏಕದಿನ ಕ್ರಿಕೆಟ್ ರನ್ ಗಳಿಕೆಯಲ್ಲಿ ಅಮೋಘ ಸಾಧನೆ ಮಾಡಿದ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ 751 ಅಂಕಗಳೊಂದಿಗೆ ನಂ.1 ಸ್ಥಾನ ಪಡೆದಿದ್ದಾರೆ.

    ಐಸಿಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮೂರು ಸ್ಥಾನಗಳಲ್ಲಿ ಉನ್ನತಿ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ತಂಡದ ವಿರುದ್ದ ಶತಕ ಹಾಗೂ ಅಜೇಯ 90 ರನ್ ಸಿಡಿಸಿ ಮಂದಾನ ಮಿಂಚಿದ್ದರು. ಉಳಿದಂತೆ ಟೀಂ ಇಂಡಿಯಾದ ಆಟಗಾರ್ತಿ ಮಿಥಾಲಿ ರಾಜ್ 669 ಅಂಕಗಳೊಂದಿಗೆ 5 ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಟಾಪ್ 5 ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ.

    2018 ಬಳಿಕ 15 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಮಂದಾನ 2 ಶತಕ ಹಾಗೂ 8 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಐಸಿಸಿ ಘೋಷಣೆ ಮಾಡಿದ್ದ 2018ರ ರ ವಾರ್ಷಿಕ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಯನ್ನು ಪಡೆದಿದ್ದರು. 22 ವರ್ಷದ ಮಂದಾನ 47 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 1,798 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 14 ಅರ್ಧ ಶತಕಗಳು ಸೇರಿದೆ. ಉಳಿದಂತೆ 52, ಟಿ20 ಪಂದ್ಯಗಳನ್ನು ಆಡಿದ್ದು, 6 ಅರ್ಧ ಶತಕಗಳೊಂದಿಗೆ 1,046 ರನ್ ಸಿಡಿಸಿದ್ದಾರೆ. 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 10 ಅಂಕ ಕಳೆದುಕೊಂಡರೂ ಭಾರತ ನಂ.1 -7 ಅಂಕ ಪಡೆದು ನ್ಯೂಜಿಲೆಂಡ್ ಹಿಂದಿಕ್ಕಿದ ಇಂಗ್ಲೆಂಡ್

    10 ಅಂಕ ಕಳೆದುಕೊಂಡರೂ ಭಾರತ ನಂ.1 -7 ಅಂಕ ಪಡೆದು ನ್ಯೂಜಿಲೆಂಡ್ ಹಿಂದಿಕ್ಕಿದ ಇಂಗ್ಲೆಂಡ್

    ದುಬೈ: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-4 ರ ಅಂತದ ಮೂಲಕ ಮುಗ್ಗರಿಸಿದ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲೇ ಮುಂದುವರಿದಿದೆ.

    ಸರಣಿಯ ಅಂತಿಮ ಓವೆಲ್ ಟೆಸ್ಟ್ ಹೋರಾಟದಲ್ಲಿ ಕೆಎಲ್ ರಾಹುಲ್, ರಿಷಬ್ ಪಂತ್ ಹೋರಾಟದ ಬಳಿಕವೂ ಟೀಂ ಇಂಡಿಯಾ ಪಂದ್ಯದಲ್ಲಿ ಸೋಲುಂಡಿತು. ಆದರೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 115 ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಆದರೆ ಸರಣಿ ಸೋಲಿನ ಹಿನ್ನೆಲೆಯಲ್ಲಿ ಬರೋಬ್ಬರಿ 10 ಅಂಕಗಳನ್ನು ಕಳೆದುಕೊಂಡಿದೆ.

    ಇತ್ತ ಸರಣಿ ಗೆದ್ದ ಇಂಗ್ಲೆಂಡ್ 105 ಅಂಕಗಳನ್ನು ಪಡೆದು 4ನೇ ಸ್ಥಾನಕ್ಕೆ ಏರಿದೆ. 4ನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ 102 ಅಂಕ ಗಳಿಸಿದ್ದು 5ನೇ ಸ್ಥಾನಕ್ಕೆ ಕುಸಿದಿದೆ. ಟೀಂ ಇಂಡಿಯಾ ವಿರುದ್ಧದ ಟೂರ್ನಿಗೂ ಮುನ್ನ ಇಂಗ್ಲೆಂಡ್ 97 ಅಂಕಗಳನ್ನು ಹೊಂದಿತ್ತು.

    ಇಂಗ್ಲೆಂಡ್ ಪರ ವಿದಾಯ ಪಂದ್ಯವಾಡಿದ ಕುಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ವೃತ್ತಿ ಜೀವನದಲ್ಲಿ 33ನೇ ಶತಕ ಸಿಡಿದ ಕುಕ್‍ಗೆ ಇಂಗ್ಲೆಂಡ್ ತಂಡದ ಆಟಗಾರಾರರು 33 ಬೀಯರ್ ಬಟಲ್ ಗಿಫ್ಟ್ ನೀಡಿದ್ದಾರೆ.

    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ತಲಾ 106 ಅಂಕಗಳಿಂದ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಮುಂದುವರಿದಿದೆ. ಅಕ್ಟೋಬರ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆಡಲಿದ್ದು, ಅಕ್ಟೋಬರ್ 4ರಿಂದ ರಾಜಕೋಟ್ ನಲ್ಲಿ ಪ್ರಥಮ ಟೆಸ್ಟ್ ಪಂದ್ಯ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಎಲ್ಲಾ ಆಟಗಾರರಿಗೂ ನಂ.1  ಬ್ಯಾಟ್ಸ್‌ಮನ್ ಪಟ್ಟ ನೀಡಿದ ಐಸಿಸಿ!

    ಎಲ್ಲಾ ಆಟಗಾರರಿಗೂ ನಂ.1 ಬ್ಯಾಟ್ಸ್‌ಮನ್ ಪಟ್ಟ ನೀಡಿದ ಐಸಿಸಿ!

    ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತನ್ನ ಶ್ರೇಯಾಂಕ ಪಟ್ಟಿಯಲ್ಲಿ ಎಲ್ಲಾ ಆಟಗಾರರಿಗೂ ನಂ.1 ಬ್ಯಾಟ್ಸ್ ಮನ್ ಸ್ಥಾನ ನೀಡಿ ಟ್ವೀಟ್ ಮಾಡಿ ಹಾಸ್ಯ ಮಾಡಿದೆ.

    ಅಮೆರಿಕ ಖ್ಯಾತ ಹಾಡುಗಾರ ಕ್ಯಾನೇ ವೆಸ್ಟ್ ಟ್ವೀಟ್ ಬಳಿಕ ಐಸಿಸಿ ಟ್ವೀಟ್ ಮಾಡಿದೆ. ಅಂದಹಾಗೇ ಕ್ಯಾನೇ ತಮ್ಮ ಟ್ವೀಟ್ ನಲ್ಲಿ ಯಾರು ಮತ್ತೊಬ್ಬರಿಗಿಂತ ದೊಡ್ಡವರಲ್ಲ ಎಂದು ಬರೆದುಕೊಂಡಿದ್ದರು. ಐಸಿಸಿ ಈ ಟ್ವೀಟ್ ಫೋಟೋ ಶೇರ್ ಮಾಡಿ ನೀವು ಹೇಳಿದ ಹಾಗೇ ಎಲ್ಲರಿಗೂ ಸ್ಥಾನವನ್ನು ನೀಡಲಾಗಿದೆ ಎಂದು ಹಾಸ್ಯ ಮಾಡಿ ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿದೆ.

    ಐಸಿಸಿ ಟಾಪ್ 10 ಆಟಗಾರರ ಹೆಸರನ್ನು ಹೊಂದಿರುವ ಫೋಟೋಶಾಪ್ ಮಾಡಲಾದ ಫೋಟೋವನ್ನು ಐಸಿಸಿ ಶೇರ್ ಮಾಡಿದೆ.

    ಕಳೆದ ಎರಡು ದಿನಗಳ ಹಿಂದೆ ಬಿಡುಗಡೆಯಾದ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 919 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದು ನಂ.1 ಸ್ಥಾನ ಕಳೆದುಕೊಂಡಿದ್ದರು. ನಿಷೇಧಕ್ಕೆ ಒಳಗಾಗಿರುವ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ 929 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.

    ಈ ಹಿಂದೆಯೂ ಹಲವು ಬಾರಿ ಐಸಿಸಿ ವಿಶಿಷ್ಟವಾಗಿ ಟ್ವೀಟ್ ಮಾಡಿದ್ದ ಫೋಟೋ ಪ್ರಕಟಿಸಿತ್ತು. ಮುಖ್ಯವಾಗಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಏಕದಿನ ಪಂದ್ಯದಲ್ಲಿ ಸೋಲುಂಡ ವೇಳೆಯೂ ಕೊಹ್ಲಿ, ಜೋ ರೂಟ್ ನಡುವೆ ಮೈಕ್ ಬೀಳುತ್ತಿರುವ ಟ್ವೀಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/Nikolash14/status/1025758173989195778?