Tag: ಶ್ರುತಿ ಮರಾಠೆ

  • Devara: ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಮರಾಠಿ ನಟಿ ಎಂಟ್ರಿ

    Devara: ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಮರಾಠಿ ನಟಿ ಎಂಟ್ರಿ

    ಟಾಲಿವುಡ್ ಹೀರೋ ಜ್ಯೂ.ಎನ್‌ಟಿಆರ್ (Jr.Ntr) ಸದ್ಯ ‘ದೇವರ’ (Devara) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಒಂದಲ್ಲಾ ಒಂದು ವಿಚಾರವಾಗಿ ಹೈಪ್ ಕ್ರಿಯೇಟ್ ಮಾಡ್ತಿರೋ ದೇವರ ಚಿತ್ರತಂಡದಿಂದ ಈಗ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ತಾರಕ್ ಸಿನಿಮಾಗೆ ಜಾನ್ವಿ ಕಪೂರ್ (Janhvi Kapoor) ನಂತರ ಖ್ಯಾತ ನಟಿಯ ಎಂಟ್ರಿಯಾಗಿದೆ.

    ಕೊರಟಾಲ ಶಿವ ನಿರ್ದೇಶನದ ‘ದೇವರ’ (Devara) ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಡಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ತಂದೆ ಮತ್ತು ಮಗನಾಗಿ ತಾರಕ್ ಕಾಣಿಸಿಕೊಳ್ತಿದ್ದಾರೆ. ‘ಆರ್‌ಆರ್‌ಆರ್'(RRR) ಚಿತ್ರದ ಸಕ್ಸಸ್ ನಂತರ ತಾರಕ್ ಭಿನ್ನ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

    ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಹೀಗಿರುವಾಗ ಸಿನಿಮಾಗೆ ಮತ್ತೊಬ್ಬ ಖ್ಯಾತ ನಟಿಯ ಆಗಮನವಾಗಿದೆ. ‘ದೇವರ’ ಸಿನಿಮಾದಲ್ಲಿ ಮರಾಠಿ ಸಿನಿಮಾರಂಗದ ನಟಿ ಶ್ರುತಿ ಮರಾಠೆ ಅವರು ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

     

    View this post on Instagram

     

    A post shared by Shashank Sane (@saneshashank)

    ಈ ಮೂಲಕ ಟಾಲಿವುಡ್‌ಗೆ ಮರಾಠಿ ನಟಿ ಎಂಟ್ರಿ ಕೊಡುತ್ತಿದ್ದಾರೆ. ತಾರಕ್ ಮುಂದೆ ಸೈಫ್ ಅಲಿ ಖಾನ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ. ಕನ್ನಡದ ನಟಿ ಚೈತ್ರಾ ರೈ ಅವರು ಸೈಫ್ ಪತ್ನಿಯಾಗಿ ನಟಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ‘ದೇವರ’ ಸಿನಿಮಾ ತೆಲುಗು, ತಮಿಳು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.