Tag: ಶ್ರುತಿ ಕೃಷ್ಣ

  • ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಶ್ರುತಿ ಕುಟುಂಬದ ಮನೆ ಮಗಳು

    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಶ್ರುತಿ ಕುಟುಂಬದ ಮನೆ ಮಗಳು

    ನಿರ್ದೇಶಕ ಸಿಂಪಲ್ ಸುನಿ (Simple Suni) ಹೊಸ ಸಿನಿಮಾ ದೇವರು ರುಜು ಮಾಡಿದನು. ಇಂದು ಈ ಚಿತ್ರ ಅದ್ಧೂರಿಯಾಗಿ ಸೆಟ್ಟೇರಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ದೇವರು ರುಜು ಮಾಡಿದನು ಸಿನಿಮಾದ ಮುಹೂರ್ತ ನೆರವೇರಿದೆ. ಗ್ರೀನ್ ಹೌಸ್ ಮಾಲೀಕರಾದ ವಾಸು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ನಾಯಕ ವಿರಾಜ್ ಅವರ ಅಜ್ಜಿ ಕ್ಯಾಮೆರಾಗೆ ಕ್ಲ್ಯಾಪ್‌ ಮಾಡಿ ಚಾಲನೆ ನೀಡಿದರು. ಈ ಚಿತ್ರದ ಮೂಲಕ ಯುವ ನಟ ವಿರಾಜ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಹಿರಿಯ ನಟಿ ಶ್ರುತಿ (Shruti Krishna) ಮತ್ತು ಶರಣ್ (Sharan) ಅವರ ಕೊನೆಯ ಸಹೋದರಿ ಉಷಾ ಅವರ ಪುತ್ರಿ ಕೀರ್ತಿ (Keerthi Krishna) ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿ ಆಸ್ಪತ್ರೆಗೆ ಬಂದಿದ್ದೆ, ಕೊನೆಯ ಬಾರಿಗೆ ಪ್ರಜ್ಞೆಯಲ್ಲಿದ್ದಾಗ ನೋಡಲಾಗಲಿಲ್ಲ: ತಾಯಿಯ ಅಗಲಿಕೆಗೆ ಕಿಚ್ಚ ಭಾವುಕ

     

    View this post on Instagram

     

    A post shared by Su Ni (@simplesuni)

    ‘ದೇವರು ರುಜು ಮಾಡಿದನು’ ಎಂಬ ಕ್ಯಾಚಿ ಟೈಟಲ್ ಮೂಲಕ ಕಿಕ್ ಕೊಟ್ಟಿದ್ದ ಸುನಿ ಟೈಟಲ್ ಟೀಸರ್ ಬಿಟ್ಟು ನಿರೀಕ್ಷೆಯನ್ನು ಇಮ್ಮಡಿಗೊಳಿಸಿದ್ದಾರೆ. ಸಂಗೀತವೇ ಉಸಿರು ಎಂದು ಜೀವಿಸುವ ಇಬ್ಬರು ನಾಯಕಿಯರು ಹಾಗೂ ಸಂಗೀತ ಇಷ್ಟವಿಲ್ಲದಿದ್ದರೂ ಅದನ್ನು ಪ್ರೀತಿಸುವ ನಾಯಕ. ಒಂದೇ ಮಾತಿನಲ್ಲಿ ಹೇಳುವುದಾದರೆ ಸೊಗಸಾದ ಸಂಗೀತದ ಕಥೆ ಜೊತೆಗೆ ರಕ್ತ ಚರಿತ್ರೆಯನ್ನು ಸುನಿ ಹೇಳೋದಿಕ್ಕೆ ಹೊರಟಿದ್ದಾರೆ. ‘ದೇವರು ರುಜು ಮಾಡಿದನು’ ಟೀಸರ್ ಬಹಳ ಇಂಪ್ರೆಸಿವ್ ಆಗಿದೆ. ಕ್ಯಾಮೆರಾ ವರ್ಕ್, ಅದ್ಭುತ ಸಂಗೀತ, ನಾಯಕ ವಿರಾಜ್, ನಾಯಕಿಯರಾದ ಕೀರ್ತಿ ಕೃಷ್ಣ ಹಾಗೂ ದಿವಿತಾ ರೈ ಅಭಿನಯಕ್ಕೆ ಟೀಸರ್ ತೂಕ ಹೆಚ್ಚಿಸಿದೆ.

    ಮುಹೂರ್ತದ ಬಳಿಕ ಮಾತನಾಡಿದ ನಾಯಕ ವಿರಾಜ್, ತುಂಬಾ ಖುಷಿಯಾಗುತ್ತಿದೆ. ಈ ಮುಹೂರ್ತ ಸಮಾರಂಭ ನನ್ನ ಜೀವನದ ಒಂದಲ್ಲ, ಎರಡಲ್ಲ ಎಷ್ಟೋ ವರ್ಷದ ಕನಸು. ಚಿಕ್ಕವನಿದ್ದಾಗಿನಿಂದಲೂ ನಟನಾಗಬೇಕು ಎಂಬ ಆಸೆ ನನ್ನಲ್ಲಿತ್ತು. ಸ್ಕೂಲ್ ಟೀಚರ್ಸ್ ಡ್ಯಾನ್ಸ್, ನಟನೆ ಮಾಡು ಎಂದು ಹೇಳುತ್ತಿದ್ದರು. ನಾನು ಆಗ ಮಾಡುತ್ತಿದ್ದೆ. ಆಗ ನನ್ನ ಫ್ರೆಂಡ್ಸ್ ಚಪ್ಪಾಳೆ ತಟ್ಟುತ್ತಿದ್ದರು. ಆಗ ಇದೇನೂ ಕಿಕ್ ಇದೆಯಲ್ಲಾ, ಸಖತ್ ಇದೆ ಎನಿಸುವುದು. ಕಲಾವಿದರಿಗೆ ಇದೆ ಬೇಕಿರುವುದು. ಜನ ಕೊಡುವ ರೆಸ್ಪಾನ್ಸ್ ಅದು ವಂಡರ್ ಫುಲ್. ಅಂದಿನಿಂದ ನನ್ನ ಪಯಣ ಶುರುವಾಯ್ತು. ಜನರಿಗೆ ಏನಾದರೂ ಮಾಡಬೇಕು. ನನಗೆ ಇಷ್ಟವಾಗಿದ್ದನ್ನು ಮಾಡಬೇಕು ಅಂತಾ ಅನಿಸಿತು. ಸ್ಕೂಲ್, ಕಾಲೇಜ್, ಡ್ಯಾನ್ಸ್, ಆಕ್ಟಿಂಗ್ ಮಾಡುತ್ತಾ ಬಂದೆ. ನಂತರ ನಟನೆ ತರಬೇತಿ ಪಡೆದೆ. ನಾಟಕ ಮಾಡಿಕೊಂಡು ಬಂದಿದ್ದೇನೆ. ನಾನು ಹೊಸಬ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದೇನೆ ಎಂದರು.

    ವಿರಾಜ್ ರಂಗಭೂಮಿ ಕಲಾವಿದ. ರಂಗಭೂಮಿಯಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿರುವ ಈ ವಿರಾಜ್ ‌ಈಗ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹೊಸ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯ ಮಾಡುವಾಗ ಸಾಕಷ್ಟು ತಯಾರಿಯನ್ನು ಮಾಡಿಕೊಂಡೇ ಎಂಟ್ರಿ ಕೊಟ್ಟಿರುತ್ತಾರೆ. ಅದರಂತೆ ವಿರಾಜ್ ಇಂಟ್ರುಡ್ಯೂಸ್ ಮಾಡುವಾಗಲೂ ಅಷ್ಟೇ ಪೂರ್ವ ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಇನ್ನು ಗ್ರೀನ್ ಹೌಸ್ ಮೂವೀಸ್ ಅಡಿಯಲ್ಲಿ ಸಿನಿಮಾವನ್ನು ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ.

  • ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಅರೆಸ್ಟ್ ಆಗಿರೋದು ನೋವುಂಟು ಮಾಡಿದೆ- ಶ್ರುತಿ

    ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಅರೆಸ್ಟ್ ಆಗಿರೋದು ನೋವುಂಟು ಮಾಡಿದೆ- ಶ್ರುತಿ

    ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ (Renukaswamy Murder Case) ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ, ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಅರೆಸ್ಟ್ ಆಗಿರೋದು ನೋವುಂಟು ಮಾಡಿದೆ ಎಂದು ಹಿರಿಯ ನಟಿ ಶ್ರುತಿ (Actress Shruthi) ಮಾತನಾಡಿದ್ದಾರೆ. ಇದನ್ನೂ ಓದಿ:‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್- ಮೊದಲ ಶೋಗೆ ಉತ್ತಮ ರೆಸ್ಪಾನ್ಸ್

    ದರ್ಶನ್ ಅರೆಸ್ಟ್ ವಿಷ್ಯವಾಗಿ ನಟಿ ಶ್ರುತಿ ಪ್ರತಿಕ್ರಿಯಿಸಿ, ಇದನ್ನು ಯಾರು ಕೂಡ ಊಹೆ ಮಾಡಿರಲಿಲ್ಲ. ಈ ಪ್ರಕರಣ ಎರಡು ಫ್ಯಾಮಿಲಿ ಸಂಬಂಧಿಸಿದ್ದು ಮಾತ್ರವಲ್ಲ. ಇದರಿಂದ ಇಡೀ ಫ್ಯಾಮಿಲಿ ಮಂಕಾಗಿದೆ ಎಂದರು. ‘ಕಾಟೇರ’ (Kaatera) ಸಿನಿಮಾದಲ್ಲಿ ದರ್ಶನ್ ಜೊತೆಗೆ ಕೆಲಸ ಮಾಡೋ ಅವಕಾಶ ಸಿಗುವ ಮುನ್ನ ‘ಎಲ್ಲರ ಮನೆ ದೋಸೆ ತೂತು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವೆ ಎಂದರು. ನನ್ನ ಕೊನೆಯ ತಮ್ಮನ ಪಾತ್ರದಲ್ಲಿ ದರ್ಶನ್ ನಟಿಸಿದ್ದರು. ದರ್ಶನ್ ಸರಳ ವ್ಯಕ್ತಿತ್ವ ಹೊಂದಿರುವವರು ಎಂದು ನಟಿ ಮಾತನಾಡಿದ್ದಾರೆ.

    ದರ್ಶನ್ ಕಷ್ಟದಿಂದ ಬಂದು ಚಿತ್ರರಂಗದಲ್ಲಿ ಬೆಳೆದವರು. ಪ್ರತಿ ಸಿನಿಮಾಗೂ ದರ್ಶನ್ ಹಾರ್ಡ್ ವರ್ಕ್ ಮಾಡುತ್ತಾರೆ. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರದು ಎನ್ನುವ ಅರಿವಿದೆ. ಫಿಟ್‌ನೆಸ್ ಕಡೆ ಹೆಚ್ಚು ಗಮನ ಕೊಡುತ್ತಿದ್ದರು. ಇಂತಹ ಪ್ರಕರಣದಲ್ಲಿ ದರ್ಶನ್ ಸಿಲುಕಿದ ವಿಚಾರ ಕೇಳಿ ಶಾಕ್ ಆಯ್ತು. ಇದಕ್ಕೆಲ್ಲಾ ತಾರ್ಕಿಕ ಅಂತ್ಯ ಸಿಗಬೇಕು ಎಂದು ಶ್ರುತಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡ್ತಾರೆ. ಇದರಿಂದ ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ನನಗೂ ಕೂಡ ಕೆಲ ಕಾಮೆಂಟ್ ಬಂದಿದೆ. ಅದರಿಂದ ಆಚೆ ಬರೋಕೆ ತುಂಬಾ ಕಷ್ಟ ಆಗುತ್ತೆ ಎಂದು ನಟಿ ಮಾತನಾಡಿದ್ದಾರೆ.

    ರೇಣುಕಾಸ್ವಾಮಿ ಪ್ರಕರಣದ ಹಾದಿಯನ್ನು ನೋಡಿದರೆ ದರ್ಶನ್ ದುಡುಕಿದ್ರು ಅನಿಸುತ್ತದೆ. ಸದ್ಯ ವಿಚಾರಣೆ ನಡೆಯುತ್ತದೆ. ಏನಾಗಲಿದೆ ಎಂದು ಕಾದುನೋಡೋಣ. ನೊಂದ ಕುಟುಂಬಕ್ಕೂ ನ್ಯಾಯ ಸಿಗಬೇಕು ಎಂದು ಕಾಟೇರ ನಟಿ ಶ್ರುತಿ ಮಾತನಾಡಿದ್ದಾರೆ.

  • ಎಲೆಕ್ಷನ್ ಬಳಿಕ ರಿಲೀಸ್ ಆಗಲಿದೆ ಮೇಘನಾ ರಾಜ್ ಸಿನಿಮಾ

    ಎಲೆಕ್ಷನ್ ಬಳಿಕ ರಿಲೀಸ್ ಆಗಲಿದೆ ಮೇಘನಾ ರಾಜ್ ಸಿನಿಮಾ

    ಮೇಘನಾ ರಾಜ್ (Meghanaraj) ಅವರ ಸಿನಿಮಾಗಾಗಿ ಎದುರು ನೋಡ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ತತ್ಸಮ ತದ್ಭವ’ ಸಿನಿಮಾ ಮೂಲಕ ಮತ್ತೆ ಮೇಘನಾ ರಾಜ್ ಸ್ಯಾಂಡಲ್‌ವುಡ್‌ಗೆ (Sandalwood ಕಂಬ್ಯಾಕ್ ಆಗಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.

    ಜೀವನದಲ್ಲಿ ಸಾಕಷ್ಟು ಸಂಕಷ್ಟದ ದಿನಗಳನ್ನ ಎದುರಿಸಿದ್ದರು. ಬಳಿಕ ಮಗ ರಾಯನ್ ಪಾಲನೆಯಲ್ಲಿ ಬ್ಯುಸಿಯಾಗಿದ್ದ ನಟಿ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಮಹಿಳಾ ಪ್ರಧಾನ ಚಿತ್ರದ ಮೂಲಕ ಮೇಘನಾ ಬರುತ್ತಿದ್ದಾರೆ.

    ಪನ್ನಗ ಭರಣ, ಸ್ಪೂರ್ತಿ ಅನಿಲ್ ನಿರ್ಮಾಣದ ‘ತತ್ಸಮ ತದ್ಭವ’ (Tatsama Tadbhava Film) ಸಸ್ಪೆನ್ಸ್ ಕ್ರೈಂ ಜಾನರ್ ಚಿತ್ರವಾಗಿದೆ. ಮೇಘನಾ ರಾಜ್ ಅವರು ಡಿಫರೆಂಟ್ ರೋಲ್‌ನಲ್ಲಿ ನಟಿಸಿದ್ದಾರೆ. ಶ್ರುತಿ ಕೃಷ್ಣ ಅವರು ಮನೋವೈದ್ಯ ಪಾತ್ರಕ್ಕೆ ಜೀವತುಂಬಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಖಡಕ್ ಪೊಲೀಸ್‌ ಆಧಿಕಾರಿಯಾಗಿ ನಟಿಸಿದ್ದಾರೆ. ಸದ್ಯ ಮೇಘನಾ ಏ.12ರಂದು ಕುಂಬಳಕಾಯಿ ಒಡೆಯುವ ಮೂಲಕ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಇದನ್ನೂ ಓದಿ:ಪರಿಣಿತಿ ಜೊತೆಗಿನ ಎಂಗೇಜ್ ಮೆಂಟ್ ವಿಚಾರ: ಹೇಳ್ತೀನಿ ಎಂದು ತಪ್ಪಿಸಿಕೊಂಡ ಎಎಪಿ ಮುಖಂಡ

     

    ಚಿತ್ರಕ್ಕೆ ವಿಶಾಲ್ ಅತ್ರೇಯ ನಿರ್ದೇಶನ ಮಾಡಿದ್ದರೆ, ವಾಸುಕಿ ವೈಭವ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಎಲೆಕ್ಷನ್ ಮುಗಿದ ಮೇಲೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ ಚಿತ್ರತಂಡ. ಚುನಾವಣೆಯ ಬಳಿಕ ಮೇಘನಾ ನಟನೆಯ ಈ ಚಿತ್ರವನ್ನ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ.

  • ಮೇಘನಾ ರಾಜ್ ಸಿನಿಮಾದಲ್ಲಿ ನಟಿ ಶ್ರುತಿ ಕೃಷ್ಣ

    ಮೇಘನಾ ರಾಜ್ ಸಿನಿಮಾದಲ್ಲಿ ನಟಿ ಶ್ರುತಿ ಕೃಷ್ಣ

    ಸ್ಯಾಂಡಲ್‌ವುಡ್‌ಗೆ (Sandalwood) ಕಮ್‌ಬ್ಯಾಕ್ ಆಗಿರುವ ಮೇಘನಾ ರಾಜ್ ಅವರು ಸದ್ಯ `ತತ್ಸಮ ತದ್ಭವ’ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ದಿನದಿಂದ ದಿನಕ್ಕೆ ಚಿತ್ರದ ತಾರಾಗಣ ಹಿರಿದಾಗುತ್ತಿದೆ. ಮೇಘನಾಗೆ (Meghana Raj) ಸಾಥ್ ನೀಡಲು ಹಿರಿಯ ನಟಿ ಶ್ರುತಿ ಕೃಷ್ಣ ಸುಮನಳಾಗಿ ಈ ಚಿತ್ರದ ಭಾಗವಾಗಿದ್ದಾರೆ.

    ಪತಿ ಚಿರು ಸರ್ಜಾ ನಿಧನದ ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ಮೇಘನಾ ಈಗ ನಟನೆ ಅಂತಾ ಬ್ಯುಸಿಯಾಗಿದ್ದಾರೆ. ಮಹಿಳಾ ಪ್ರಧಾನ ಚಿತ್ರದ ಮೂಲಕ ಭಿನ್ನ ಕಥೆಯನ್ನ ತೆರೆಯ ಮೇಲೆ ಹೇಳಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ತೆಲುಗಿನ ಹೆಮ್ಮೆ ಎಂದ ಐಕಾನ್ ಸ್ಟಾರ್‌ ವಿರುದ್ಧ ಚರಣ್ ಫ್ಯಾನ್ಸ್ ಕಿಡಿ

     

    View this post on Instagram

     

    A post shared by Meghana Raj Sarja (@megsraj)

    ಪನ್ನಗ ಭರಣ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ `ತತ್ಸಮ ತದ್ಭವ’ (Tatsama Tadbhava) ಚಿತ್ರಕ್ಕೆ ವಿಶಾಲ್ ಅಥ್ರೇಯಾ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಶೋಷಣೆಗೆ ಒಳಗಾದ ಯುವತಿಯ ಕಥೆ ಈ ಚಿತ್ರದಲ್ಲಿದೆ.

     

    View this post on Instagram

     

    A post shared by Meghana Raj Sarja (@megsraj)

    ಮೇಘನಾ ರಾಜ್ ಜೊತೆ ಇದೀಗ ಕನ್ನಡದ ಹಿರಿಯ ನಟಿ ಶ್ರುತಿ ಕೃಷ್ಣ, ಗಿರಿಜಾ ಲೋಕೇಶ್, ನಾಗಾಭರಣ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಶ್ರುತಿ ಸುಮನಳಾಗಿ ಕಾಣಿಸಿಕೊಳ್ತಿದ್ದಾರೆ.