Tag: ಶ್ರುತಿ

  • ಪಾರ್ಟಿ, ಪಬ್‌ಗೆ ಹೋಗಿ ಸಮಯವಲ್ಲದ ಸಮಯಕ್ಕೆ ಮನೆಗೆ ಬರ್ತಿದ್ಳು: ಕಿರುತೆರೆ ನಟಿ ಶ್ರುತಿ ಪತಿಯ ಆರೋಪ

    ಪಾರ್ಟಿ, ಪಬ್‌ಗೆ ಹೋಗಿ ಸಮಯವಲ್ಲದ ಸಮಯಕ್ಕೆ ಮನೆಗೆ ಬರ್ತಿದ್ಳು: ಕಿರುತೆರೆ ನಟಿ ಶ್ರುತಿ ಪತಿಯ ಆರೋಪ

    ಬೆಂಗಳೂರು: ಪಾರ್ಟಿ, ಪಬ್ ಅಂತಾ ಹೋಗಿ ಸಮಯವಲ್ಲದ ಸಮಯಕ್ಕೆ ಮನೆ ಬರ್ತಿದ್ಳು ಎಂದು ಕಿರುತೆರೆ ನಟಿ ಶ್ರುತಿ (Actress Shruti) ವಿರುದ್ಧ ಪತಿ (Husband) ಅಂಬರೀಶ್ ಪೊಲೀಸ್ ವಿಚಾರಣೆ ವೇಳೆ ಸಾಲು ಸಾಲು ಆರೋಪ ಮಾಡಿದ್ದಾರೆ.

    ಮಂಜುಳಾ ಅಲಿಯಾಸ್ ಶ್ರುತಿಗೆ ಜು. 4ರಂದು ಚಾಕು ಇರಿದಿದ್ದ ಪತಿ ಅಂಬರೀಶ್‌ನನ್ನು ಬಂಧಿಸಿದ್ದ ಹನುಮಂತ ನಗರ ಪೊಲೀಸರು (Hanumantha nagara Police) ವಿಚಾರಣೆ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಪತಿ, ಪತ್ನಿಯ ಮೇಲೆ ಸಾಲು ಸಾಲು ಆರೋಪಗಳನ್ನ ಮಾಡಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

    ನನ್ನ ಪತ್ನಿ ಮಂಜುಳಾಗೆ ಕುಟುಂಬದ ಜವಾಬ್ದಾರಿ ಇರಲಿಲ್ಲ. ಇಬ್ಬರು ಹೆಣ್ಣುಮಕ್ಕಳಿಗೆ ತಾಯಿ ಪ್ರೀತಿ ಅನ್ನೋದು ತೋರಿಸಿಲ್ಲ. ಪಾರ್ಟಿ ಪಬ್ ಅಂತ ಹೋಗಿ ಸಮಯವಲ್ಲದ ಸಮಯಕ್ಕೆ ಮನೆಗೆ ಬರುತ್ತಿದ್ದಳು. ಹೊರಗಡೆ ಹೋದರೆ ವಾರ, 15 ದಿನ ಮನೆಗೆ ಬರುತ್ತಿರಲಿಲ್ಲ. ಇತ್ತೀಚೆಗೆ ಕುಂಭಮೇಳಕ್ಕೆ ಅಂತ ಹೋಗಿ 15 ದಿನ ಮನೆಗೆ ಬಂದಿರಲಿಲ್ಲ. ಈ ವಿಚಾರವಾಗಿ ಗಲಾಟೆ ಆಗಿತ್ತು ಎಂದು ದೂರಿದ್ದಾರೆ. ಇದನ್ನೂ ಓದಿ: ಮಂಗಳವಾರ ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಶುಭಾಂಶು ಶುಕ್ಲಾ

    ನನ್ನ ಮೇಲೆ ಒಮ್ಮೆ ಶ್ರುತಿ ದೂರು ಕೂಡ ನೀಡಿದ್ದಳು. 25 ಲಕ್ಷ ರೂ. ಹಣ ಕೊಟ್ಟು ಅಪಾರ್ಟ್ಮೆಂಟ್‌ನಲ್ಲಿ ಮನೆ ಭೋಗ್ಯಕ್ಕೆ ಹಾಕಿಕೊಂಡಿದ್ದೆ. ಭೋಗ್ಯ ಕ್ಯಾನ್ಸಲ್ ಮಾಡಿ ಆ ದುಡ್ಡಿನೊಂದಿಗೆ ಮನೆ ಬಿಟ್ಟು ಹೋಗಲು ಶ್ರುತಿ ಪ್ಲಾನ್ ಕೂಡ ಮಾಡಿದ್ದಳು. ಹಾಗಾಗಿ ಮನೆಯಲ್ಲಿ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ಮೊನ್ನೆ ಕೂಡ ಗಲಾಟೆ ಆದಾಗ ರೂಡಾಗಿ ನಡೆದುಕೊಂಡಿದ್ದಕ್ಕೆ ದುಡುಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾಗಿ ಆರೋಪಿ ಪತಿ ಪೊಲೀಸರ ತನಿಖೆಯ ವೇಳೆ ಹೇಳಿಕೊಂಡಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

  • ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

    ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

    ಬೆಂಗಳೂರು: ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಗೆ ಪತಿಯೇ (Husband) ಚಾಕು ಇರಿದ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್‌ನಲ್ಲಿ ನಡೆದಿದೆ.

    ಮಂಜುಳ @ಶ್ರುತಿ ಚಾಕು ಇರಿತಕ್ಕೊಳಗಾದ ಕಿರುತೆರೆ ನಟಿ. ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ (Serials) ಶ್ರುತಿ ನಟಿಸಿದ್ದಾರೆ. ಜುಲೈ 4 ರಂದು ಚೂರಿ ಇರಿದಿದ್ದು ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುತಿ (Actress Shruti) ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅಕಾಡೆಮಿ ಮುಚ್ಚಲು ನಿರಾಕರಿಸಿದ ಟೆನ್ನಿಸ್ ಆಟಗಾರ್ತಿಯನ್ನ ಗುಂಡಿಕ್ಕಿ ಕೊಂದ ತಂದೆ

    ಏನಿದು ಘಟನೆ?
    20 ವರ್ಷದ ಹಿಂದೆ ಅಂಬರೀಶ್ ಎಂಬಾತನ ಪ್ರೀತಿಸಿ ಶ್ರುತಿ ಮದುವೆಯಾಗಿದ್ದರು. ಮದುವೆಯಾಗಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹನುಮಂತ ನಗರದಲ್ಲಿ ಲೀಸ್‌ಗೆ ಮನೆ ಪಡೆದು ದಂಪತಿ ವಾಸವಾಗಿದ್ದರು. ಕೆಲ ತಿಂಗಳಿನಿಂದ ಶ್ರುತಿ ನಡವಳಿಕೆ ಗಂಡ ಅಂಬರೀಶ್‌ಗೆ ಇಷ್ಟವಾಗುತ್ತಿರಲಿಲ್ಲ. ಶೀಲ ಶಂಕಿಸಿ ಜಗಳ ಮಾಡುತ್ತಿದ್ದ.

    ಇಬ್ಬರ ಮಧ್ಯೆ ಲೀಸ್‌ ಹಣಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಿತ್ತು. ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಹಿಂದೆ ಶ್ರುತಿ ದೂರು ನೀಡಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಸರಿ ಇಲ್ಲದ ಕಾರಣ ಕಳೆದ ಏಪ್ರಿಲ್‌ನಲ್ಲಿ ಪತಿಯಿಂದ ದೂರವಾಗಿ ಅಣ್ಣನ ಮನೆಯಲ್ಲಿ ಶ್ರುತಿ ನೆಲೆಸಿದ್ದರು.

    ಜುಲೈ 3 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಪತಿ, ಪತ್ನಿ ರಾಜಿಯಾಗಿ ಒಂದಾಗಿದ್ದರು. ಆದರೆ ಜುಲೈ 4 ರಂದು ಮಕ್ಕಳು ಕಾಲೇಜಿಗೆ ಹೋಗಿದ್ದಾಗ ಪೆಪ್ಪರ್ ಸ್ಪ್ರೇ ಮಾಡಿ ಪತ್ನಿಯ ಕೊಲೆಗೆ ಅಂಬರೀಶ್‌ ಯತ್ನಿಸಿದ್ದಾನೆ.

    ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಸಿನಿಮಾ ಸ್ಟೈಲ್ ನಲ್ಲಿ ತಲೆ ಕೂದಲು ಹಿಡಿದು ಗೋಡೆ ತಲೆ ಗುದ್ದಿಸಿ ಕೊಲೆಗೆ ಅಂಬರೀಶ್‌ ಯತ್ನಿಸಿದ್ದಾನೆ.

    ಸಂಸಾರ ಮತ್ತು ಹಣಕಾಸು ವಿಚಾರಕ್ಕೆ ಕೊಲೆ ಯತ್ನ ಮಾಡಿರುವುದಾಗಿ ಶ್ರುತಿ ದೂರು ನೀಡಿದ್ದು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕೊಲೆಯತ್ನ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಅಂಬರೀಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

  • ನಟಿ ಶ್ರುತಿಗೆ ಮಹಿಳಾ ಆಯೋಗದಿಂದ ನೋಟಿಸ್

    ನಟಿ ಶ್ರುತಿಗೆ ಮಹಿಳಾ ಆಯೋಗದಿಂದ ನೋಟಿಸ್

    ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಯಿಂದ ಹಾಗೂ ಫ್ರೀ ಬಸ್ ಯೋಜನೆಯಿಂದ ತೀರ್ಥಯಾತ್ರೆಗೆಂದು ಹೋಗುತ್ತೇವೆ ಎಂದು ಹೇಳಿ ಹೆಣ್ಣು ಮಕ್ಕಳು ಎಲ್ಲೆಲ್ಲೂ ಹೋಗುತ್ತಿರುತ್ತಾರೆ ಅಂತಾ ನಟಿ ಶ್ರುತಿ (Shruti)  ಮಾತನಾಡಿರೋದು ಮಾಧ್ಯಮದಲ್ಲಿ ವರದಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ರಾಜ್ಯ ಮಹಿಳಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದೆ.

    ಶ್ರುತಿಗೆ ಕೊಟ್ಟಿ ನೋಟಿಸ್ (Notice) ನಲ್ಲಿ ಈ ರೀತಿ ಬಹಿರಂಗವಾಗಿ ಹೆಣ್ಣು ಮಕ್ಕಳನ್ನು ಅವಮಾನಿಸಿರೋದು ಖಂಡನೀಯ. ರಾಜ್ಯ ಮಹಿಳಾ ಆಯೋಗದ (Commission for Women) ಅಧಿನಿಯಮ 1995 ಪರಿಚಯ 10(ಎ)ಮೇರೆಗೆ ನೋಟಿಸ್ ಜಾರಿ ಮಾಡಿದೆ. ಏಳು‌ ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ.

    ಉಡುಪಿ ಜಿಲ್ಲೆಯ ಬಂದೂರಿನಲ್ಲಿ ನಡೆದ ಚುನಾವಣಾ ಭಾಷಣದ ಅಬ್ಬರದಲ್ಲಿ ಮಹಿಳೆಯರನ್ನು ಶ್ರುತಿ ಟೀಕಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೆದಿತ್ತು. ಅವರು ಮಾಡಿದ ಭಾಷಣದ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗಿತ್ತು. ನಂತರ ಮಹಿಳಾ ಆಯೋಗ ನೋಟಿಸ್ ನೀಡಿ, ಸ್ಪಷ್ಟೀಕರಣ ಕೇಳಿದೆ.

  • ‘ಬಿಗ್ ಬಾಸ್’ ಮನೆ ಪ್ರವೇಶ ಮಾಡಲಿದ್ದಾರೆ ವಿಜಯ್ ರಾಘವೇಂದ್ರ

    ‘ಬಿಗ್ ಬಾಸ್’ ಮನೆ ಪ್ರವೇಶ ಮಾಡಲಿದ್ದಾರೆ ವಿಜಯ್ ರಾಘವೇಂದ್ರ

    ಇಂದು ಸಂಜೆ ಪ್ರಸಾರವಾಗಬೇಕಿದ್ದ ವಾರದ ಕಥೆ ಕಿಚ್ಚನ ಜೊತೆ ಮತ್ತು ಕಿಚ್ಚನ ಪಂಚಾಯಿತಿ ಪ್ರಸಾರವಾಗುವುದಿಲ್ಲ. ಕಾರಣ ಸುದೀಪ್ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಸುದೀಪ್ ನೇತೃತ್ವದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಇಂದು ಮತ್ತು ನಾಳೆ ನಡೆಯುತ್ತಿದೆ. ಇಂದು ಅದ್ಧೂರಿಯಾಗಿ ಪಂದ್ಯಕ್ಕೆ ಚಾಲನೆ ಸಿಗಲಿದೆ. ಹೀಗಾಗಿ ಸುದೀಪ್ (sudeep) ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ.

    ಹಾಗಂತ ಇಂದಿನ ಕಾರ್ಯಕ್ರಮವನ್ನು ನೆನಪಿಸುವಂತಹ ಮತ್ತೊಂದು ಏರ್ಪಾಟನ್ನು ಮಾಡಿಕೊಂಡಿದೆ ಬಿಗ್ ಬಾಸ್ (Bigg Boss Kannada) ಟೀಮ್. ಇಂದು ಮನೆಯೊಳಗೆ ಹಿರಿಯ ನಟಿ, ಬಿಗ್ ಬಾಸ್ ವಿನ್ನರ್ ಶ್ರುತಿ ಅವರನ್ನು ಕಳುಹಿಸಿದೆ. ಬೆಳಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಅದರಿಂದ ಶ್ರುತಿ ಅವರು ಮನೆಯೊಳಗೆ ಪ್ರವೇಶಿಸಿದ್ದಾರೆ. ಎಲ್ಲರೂ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಹಾಗೆಯೇ ಕಟಕಟೆಯಲ್ಲಿ ನಿಲ್ಲುವ ಗಳಿಗೆ ಎದುರಾಗಿದೆ. ಶ್ರುತಿ ನ್ಯಾಯಾಧೀಶರ ಕುರ್ಚಿಯಲ್ಲಿ ಕೂತಿದ್ದಾರೆ.

    ಈ ನಡುವೆ ಮತ್ತೋರ್ವ ಅತಿಥಿ ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಶ್ರುತಿ ಅವರು ಮನೆಯಿಂದ ಆಚೆ ಬರುತ್ತಿದ್ದಂತೆಯೇ ನಟ, ಮಾಜಿ ಬಿಗ್ ಬಾಸ್ ಸ್ಪರ್ಧಿ ವಿಜಯ್ ರಾಘವೇಂದ್ರ (Vijaya Raghavendra) ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ವಾಹಿನಿಯು ಏನೂ ಹೇಳದಿದ್ದರೂ, ಇದು ಪಕ್ಕಾ ಎಂದೇ ಹೇಳಲಾಗುತ್ತಿದೆ.

     

    ವಿಜಯ್ ಕೂಡ ಹತ್ತಾರು ರಿಯಾಲಿಟಿ ಶೋನಲ್ಲಿ ಭಾಗಿಯಾದವರು. ಈ ಹಿಂದೆ ಬಿಗ್ ಬಾಸ್ ಮನೆಯಲ್ಲೂ ಇದ್ದವರು. ಹಾಗಾಗಿ ವಿಜಯ್ ರಾಘವೇಂದ್ರ ಅವರನ್ನು ಎರಡನೇ ದಿನಕ್ಕೆ ಅತಿಥಿಯಾಗಿ ದೊಡ್ಮನೆ ಒಳಗೆ ಕಳುಹಿಸಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಈ ವಿಷಯವನ್ನು ವಾಹಿನಿಯೇ ಸ್ಪಷ್ಟಪಡಿಸಬೇಕಿದೆ.

  • ಲೀಲಾವತಿ ಅಂತಿಮ ದರ್ಶನ ಪಡೆದ ಸ್ಯಾಂಡಲ್‌ವುಡ್‌ ನಟ, ನಟಿಯರು

    ಲೀಲಾವತಿ ಅಂತಿಮ ದರ್ಶನ ಪಡೆದ ಸ್ಯಾಂಡಲ್‌ವುಡ್‌ ನಟ, ನಟಿಯರು

    ಲೀಲಾವತಿ (Leelavathi) ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ನಟಿ ತಾರಾ (Tara), ಸುಧಾರಾಣಿ, ಶ್ರುತಿ (Shruthi), ಮಾಳವಿಕಾ, ಭವ್ಯ (Bhavya) ಅವರು ಲೀಲಾವತಿ ಅಂತಿಮ ದರ್ಶನ ಪಡೆದಿದ್ದಾರೆ. ಲೀಲಾವತಿ ಜೊತೆಗಿನ ಬಾಂಧವ್ಯದ ಬಗ್ಗೆ ನಟಿಯರು ಮಾತನಾಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಿಂದ ಹೊರಟ ಲೀಲಾವತಿ ಪಾರ್ಥೀವ ಶರೀರ

    ಲೀಲಾವತಿಯವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ನಾನು ಹೆಚ್ಚು ಒಡನಾಟ ಇಲ್ಲ. ಅವರ ಜೊತೆ ಹೆಚ್ಚು ಆಕ್ಟ್ ಮಾಡೋದಕ್ಕೆ ನನಗೆ ಸನ್ನಿವೇಶ ಇರಲಿಲ್ಲ. ಆದರೆ ವಿನೋದ್ ರಾಜ್ ಜೊತೆ ನಾನು ಆಕ್ಟ್ ಮಾಡಿದ್ದೇನೆ ಎಂದು ತಾರಾ ಮಾತನಾಡಿದ್ದಾರೆ. ವಿನೋದ್ ರಾಜ್ ಮಾತ್ರ ತಾಯಿ ಬಿಟ್ಟು ಬಂದಿರೋದನ್ನು ಎಲ್ಲೂ ನೋಡಿಲ್ಲ. ಹೀಗಾಗಿ ಅವರ ಬಗ್ಗೆ ನನಗೆ ನೋವು ಆಗುತ್ತಿದೆ. ಲೀಲಾವತಿ ಅವರು ಆದರ್ಶ ಜೀವನ ನಡೆಸಿದ್ದಾರೆ. ಅವರ ಕುಟುಂಬಕ್ಕೆ ಮುಖ್ಯವಾಗಿ ವಿನೋದ್ ರಾಜ್‌ಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಾರಾ (Tara) ಮಾತನಾಡಿದ್ದಾರೆ.

    ನಾನು ನಟಿಸಿದ ಮೊದಲ ಚಿತ್ರದಲ್ಲೇ ಲೀಲಾವತಿ ಅವರ ಜೊತೆ ನಟಿಸುವ ಚಾನ್ಸ್ ಸಿಕ್ಕಿತ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಅವರನ್ನ ಭೇಟಿಯಾಗಿದ್ದೆ, ಇದೀಗ ನಾನು ನಟಿಸುತ್ತಿರೋ ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನನಗೆ ವೈಯಕ್ತಿಕವಾಗಿ ಲೀಲಾವತಿ ಅವರು ರೋಲ್ ಮಾಡೆಲ್ ಆಗಿದ್ದರು. ನಟಿ, ತಾಯಿಯಾಗಿ ಮಾತ್ರವಲ್ಲ ಪರಿಸರ ಪ್ರೇಮಿಯಾಗಿ, ಸಮಾಜಮುಖಿ ಕಾರ್ಯಗಳ ಮೂಲಕ ಲೀಲಾವತಿ ಆದರ್ಶ ವ್ಯಕ್ತಿಯಾಗಿದ್ದರು. ಲೀಲಾವತಿ ನಿಧನದಿಂದ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಆಗಿದೆ ಎಂದು ಸುಧಾರಾಣಿ (Sudharani) ಮಾತನಾಡಿದ್ದಾರೆ.

    ಅಭಿನಯ, ಹಲವು ದಶಕಗಳ ಪಯಣ ಎಲ್ಲವೂ ನಮಗೆ ಪ್ರೇರಣೆ. ಕಲಾವಿದೆಯಾಗಿ ಅವರಿಗೆ ಅವರೇ ಸಾಟಿ ಎಂದು ಲೀಲಾವತಿ ಅವರನ್ನ ಬಣ್ಣಿಸಿದ್ದಾರೆ ನಟಿ ಮಾಳವಿಕಾ. ಹಿರಿಯ ಕಲಾವಿದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಸಾರ್ಥಕ ಬದುಕನ್ನು ಲೀಲಾವತಿ ಅಮ್ಮ ಕಟ್ಟಿಕೊಂಡಿದ್ದಾರೆ. ಎಲ್ಲರಿಗೂ ಕಷ್ಟ ಬರುತ್ತೆ, ಆದರೆ ತುಂಬಾ ಧೈರ್ಯದಿಂದ ದಿಟ್ಟ ಮಹಿಳೆಯಾಗಿ ನಿಭಾಯಿಸಿದ್ದಾರೆ. ಅಮ್ಮ ಸಿಂಗಲ್ ಪೇರೆಂಟ್ ಆಗಿ ಒಳ್ಳೆಯ ವ್ಯಕ್ತಿಯನ್ನಾಗಿ ಮಗನನ್ನು ಬೆಳೆಸಿದ್ದರು. ಭಗವಂತ ಕೊಟ್ಟ ಆಯಸ್ಸಿನಲ್ಲಿ ಆದರ್ಶವಾಗಿ ಬೆಳೆದಿದ್ದರು. ನಮ್ಮಂತಹ ಅನೇಕ ಕಲಾವಿದರಿಗೆ ಆದರ್ಶರಾಗಿದ್ದಾರೆ. ಅಮ್ಮ, ಮಗ ಬೆಳೆದ ರೀತಿ ಆಶ್ಚರ್ಯ ಆಗುತ್ತಿದೆ. ತಾಯಿಯನ್ನು ಕಳೆದುಕೊಂಡು ವಿನೋದ್ ರಾಜ್ ಹೇಗಿರ್ತಾರೋ ಅನಿಸುತ್ತಿದೆ. ಎಲ್ಲರ ಆಶೀರ್ವಾದದಿಂದ ವಿನೋದ್ ರಾಜ್ ಚೆನ್ನಾಗಿರಲಿ ಎಂದು ನಟಿ ಶ್ರುತಿ (Shruthi) ಮಾತನಾಡಿದ್ದಾರೆ.

    ಚಿತ್ರರಂಗದಲ್ಲಿ ಲೀಲಾವತಿ ಅಮ್ಮನ ಸಾಧನೆ ಅಪಾರವಾದದ್ದು, ಪ್ರೀತಿಯ ಅಮ್ಮ ನಮ್ಮನ್ನೆಲ್ಲ ಅಗಲಿದ್ದಾರೆ. ಲೀಲಾವತಿ ಅವರ ತಾಳ್ಮೆಯ ಮೂರ್ತಿಯಾಗಿದ್ದರು. ನಿಸರ್ಗಕ್ಕೆ ಹತ್ತಿರವಾಗಿ ಜೀವನ ಮಾಡುತ್ತಿದ್ದರು. ವಿನೋದ್, ಲೀಲಾವತಿ ಬಾಂಧವ್ಯ ಅಪರೂಪದ್ದು ಎಂದು ಹಿರಿಯ ನಟಿ ಭವ್ಯ ಹೇಳಿದ್ದಾರೆ. ‘ಹೊಸಬಾಳು’ ಸಿನಿಮಾದಲ್ಲಿ ಲೀಲಾವತಿ ಜೊತೆ ತೆರೆಹಂಚಿಕೊಂಡಿದ್ದರ ಬಗ್ಗೆ ಭವ್ಯ ಸ್ಮರಿಸಿದ್ದಾರೆ.

    ದಶಕಗಳ ಕಾಲ ಕನ್ನಡ ಸಿನಿಮಾದಲ್ಲಿ ನಟಿಸಿ ಕೋಟಿ ಕೋಟಿ ಅಭಿಮಾನಿಗಳಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ. ಲೀಲಕ್ಕ ಮಾತೃ ಸ್ಥಾನದಲ್ಲಿದ್ದಾರೆ. ಕನ್ನಡ ಚಿತ್ರರಂಗ ಪ್ರಖ್ಯಾತಿ ಹೊಂದಲು ಅವರ ಕೊಡುಗೆ ಅಪಾರ. ನಮ್ಮ ಕುಟುಂಬದಲ್ಲಿ ಹಿರಿಯರನ್ನ ಕಳೆದುಕೊಳ್ಳುತ್ತಲೇ ಇದ್ದೇವೆ. ಅದಕ್ಕಿಂತಲೂ ಹೆಚ್ಚಾಗಿ ತಾಯಿಗೆ ಮಗ – ಮಗನಿಗೆ ತಾಯಿ ಹೀಗೆ ಅವರಿಬ್ಬರ ಬಾಂಧವ್ಯ ಬಹಳ ವಿಶೇಷ. ಕಷ್ಟಕೋಟಲೆಗಳ ಮಧ್ಯೆ ದೃತಿಗೆಡದೆ ಎದ್ದು ನಿಂತ ಮಹಿಳೆ. ಬಡವರಿಗೆ ಸಹಾಯ ಮಾಡುತ್ತಿದ್ದರು. ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಹೀಗೆ ಸಾರ್ಥಕ ಜೀವನ ನಡೆಸಿದ್ದಾರೆ. ಅವರ ಮಗನಿಗೆ ದುಃಖ ಬರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಹಿರಿಯ ನಟ ರಮೇಶ್‌ ಭಟ್‌ ಕಂಬನಿ ಮಿಡಿದಿದ್ದಾರೆ.

    ಅವರ ಜೊತೆಗೆ ಕಾಲ ಕಳೆಯುವ ಅದ್ಭುತ ಅವಕಾಶ ಸಿಕ್ಕಿತು. ಅವರು ಕೊಟ್ಟ ಊಟ ಮಾಡಿದ್ದೆ. ನಾನು ಸಹ ನಿರ್ದೇಶಕನಿದ್ದಾಗಿನಿಂದಲೂ ಲೀಲಾವತಿ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೇನೆ. ಅವರ ಸಂಸ್ಥೆಯ 2 ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ವಿನೋದ್‌ ರಾಜ್‌ ಅವರ 4 ಚಿತ್ರಗಳಿಗೆ ನಿರ್ದೇಶನ ಮಾಡಿದ್ದೇನೆ. ನಮ್ಮ ಒಡನಾಟ ಹೇಳಿಕೊಳ್ಳಲಾಗದು. ಬಹಳ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದಾರೆ. ನನ್ನ ತಾಯಿ ಕಳೆದುಕೊಂಡಷ್ಟೇ ದುಃಖವಾಗುತ್ತಿದೆ. ಇನ್ನೂ ವಿಶೇಷವಾಗಿ ನಮಗೆ ಕಾಣುವುದು ತಾಯಿ-ಮಗನ ಬಾಂಧವ್ಯ. ಮಗನನ್ನು ಬೆಳೆಸಿದ ರೀತಿ, ಕಲಿಸಿದ ಸಂಸ್ಕೃತಿಯಲ್ಲಿ ತಾಯಿ ಮಾರ್ಗದರ್ಶಕರಾದರೆ, ಕೆಲವೊಂದು ಸಂದರ್ಭದಲ್ಲಿ ಮಗನೇ ತಾಯಿಗೇ ಗುರುವಾಗಿದ್ದರು. ವಿನೋದ್‌ ರಾಜ್‌ ಅವರಂತಹ ಮಗನಿಗೆ ಜನ್ಮ ಕೊಡದೇ ಇದ್ದಿದ್ದರೆ 30 ವರ್ಷಗಳ ಮುಂಚೆಯೇ ನಮ್ಮನ್ನು ಬಿಟ್ಟು ಹೋಗಿಬಿಡುತ್ತಿದ್ದರು. ಏಕೆಂದರೆ ವಿನೋದ್‌ ತಾಯಿಗೆ ಆಕ್ಸಿಜನ್‌ ಆಗಿದ್ದರು. ಒಬ್ಬರಿಗೊಬ್ಬರು ಗುರುವಾಗಿ ಬದುಕಿದ್ದಾರೆ. ಈಗ ತಾಯಿ ಇಲ್ಲದ ಪ್ರಪಂಚವನ್ನು ವಿನೋದ್‌ ರಾಜ್‌ ಹೇಗೆ ನೋಡುತ್ತಾರೆ ಅನ್ನೋದು ಚಿಂತೆಯಾಗಿದೆ ಎಂದು ಎಸ್‌. ನಾರಾಯಣ್‌ ಭಾವುಕ ನುಡಿಗಳನ್ನಾಡಿದ್ದಾರೆ.

    ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.

  • Bigg Boss Kannada10 : ಬಿಗ್ ಬಾಸ್ ಶುರುವಾಗುವ ಮುನ್ನವೇ ಶಾಕ್ ಕೊಟ್ಟ ಕಿಚ್ಚ ಸುದೀಪ್

    Bigg Boss Kannada10 : ಬಿಗ್ ಬಾಸ್ ಶುರುವಾಗುವ ಮುನ್ನವೇ ಶಾಕ್ ಕೊಟ್ಟ ಕಿಚ್ಚ ಸುದೀಪ್

    ಇಂದಿನಿಂದ ಬಿಗ್ ಬಾಸ್ ಸೀಸನ್ 10 (Bigg Boss Kannada) ಶುರುವಾಗಿದೆ. ಬಿಗ್ ಬಾಸ್ ಮನೆಯನ್ನು ಪರಿಚಯಿಸುವ ಮೂಲಕ ಸುದೀಪ್ (Sudeep) ಈ ಸೀಸನ್ ಅನ್ನು ಶುರು ಮಾಡಿದರು. ಈ ಮನೆಯಲ್ಲಿ ಚಂದನ್ ಶೆಟ್ಟಿ ಅವರು ನೃತ್ಯ ಮಾಡಿ, ಈ ಬಾರಿ ಸ್ಪರ್ಧೆಗಳು ಯಾರೆಲ್ಲ ಇರಲಿದ್ದಾರೆ ಎಂದು ಪ್ರಶ್ನೆ ಮಾಡಿದರು. ಆದರೆ, ಸುದೀಪ್ ಅಸಲಿ ಆಟ ಬೇರೆನೇ ಇದೆ ಎಂದು ಹೇಳುವ ಮೂಲಕ ಕಲರ್ ಫುಲ್ ವೇದಿಕೆಗೆ ಬಂದರು. ಆದರೆ, ಈ ಬಾರಿ ಸ್ಪರ್ಧಿಗಳಿಗೆ ಮೊದಲ ಬಾರಿಗೆ ಶಾಕ್ ನೀಡಿದರು.

    ಪ್ರತಿ ಬಾರಿಯೂ ವಾಹಿನಿಯು ಆಯ್ಕೆ ಮಾಡಿದ ಸ್ಪರ್ಧಿಗಳನ್ನು ವೇದಿಕೆಯ ಮೇಲೆ ಕರೆಯಿಸಿಕೊಂಡು ಅವರೊಂದಿಗೆ ಮಾತುಕತೆಯಾಡಿ, ಆನಂತರ ದೊಡ್ಮನೆ ಒಳಗೆ ಕಳುಹಿಸಿ ಕೊಡುವುದು ವಾಡಿಕೆಯಾಗಿತ್ತು. ಆದರೆ, ಈ ಬಾರಿ ವಿಭಿನ್ನ ರೀತಿಯಲ್ಲಿ ಸ್ಪರ್ಧಿಗಳನ್ನು ಕಳುಹಿಸಿಕೊಡುವ ಕುರಿತು ಮಾತನಾಡಿದರು ಸುದೀಪ್. ಈ ಮೂಲಕ ಸ್ಪರ್ಧಿಗಳಿಗೆ ಶಾಕ್ ನೀಡಿದರು ಕಿಚ್ಚ ಸುದೀಪ್. ಇದನ್ನೂ ಓದಿ:‘ಜವಾನ್’ ಕಲೆಕ್ಷನ್ 1103.27 ಕೋಟಿ ರೂಪಾಯಿ: ಅಧಿಕೃತ ಘೋಷಣೆ

    ಹಿಂದಿನ ಸೀಸನ್ ಗಳಲ್ಲಿ ವಿನ್ ಆದಂತಹ ನಟಿ ಶ್ರುತಿ (Shruti), ಪ್ರಥಮ್ (Pratham) , ಚಂದನ್ ಶೆಟ್ಟಿ (Chandan Shetty) ಮತ್ತು ಮಂಜು ಪಾವಡ (Manju Pavagad)ಈ ನಾಲ್ವರನ್ನು ವೇದಿಕೆಯ ಮೇಲೆ ಕರೆದು, ವೇದಿಕೆಗೆ ಬರುವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಬೇಕೋ ಅಥವಾ ಬೇಡವೋ ಎಂದು ವೋಟು ಮಾಡಲು ತಿಳಿಸಿದರು. ಈ ನಾಲ್ವರು ವೋಟ್ ಮಾಡಿದ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದು ಸುದೀಪ್ ಪ್ರಕಟಿಸಿ ಶಾಕ್ ನೀಡಿದ್ದಾರೆ.

     

    ಸದ್ಯ ಈ ನಾಲ್ವರು ನಿರ್ಣಾಕರ ಸ್ಥಾನದಲ್ಲಿ ಕುಳಿತುಕೊಂಡು ಸ್ಪರ್ಧಿಗಳನ್ನು ಎದುರು ನೋಡುತ್ತಿದ್ದಾರೆ. ಯಾರು ಆಯ್ಕೆ ಆಗುತ್ತಾರೆ, ಯಾರು ಮನೆ ಹೊರಗೆ ಹೋಗುತ್ತಾರೆ ಎನ್ನುವುದು ಸದ್ಯಕ್ಕೆ ಸಸ್ಪನ್ಸ್. ಆದರೂ, ಕೆಲವರ ಹೆಸರನ್ನು ಪ್ರೋಮೋ ಮೂಲಕ ಬಿಗ್ ಬಾಸ್ ಹೊರಗೆ ಹಾಕಿದೆ. ಈ ಬಾರಿ JioCinema 24hr ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಶ್ರುತಿ ಮಗಳು ಗೌರಿ

    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಶ್ರುತಿ ಮಗಳು ಗೌರಿ

    ಚಂದನವನದ ಚೆಂದದ ನಟಿ ಶ್ರುತಿ ಕೃಷ್ಣ (Shruthi Krishna) ತಮ್ಮ ಜನ್ಮದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಣ್ಣದ ಲೋಕಕ್ಕೆ ಶ್ರುತಿ ಮಗಳು ಗೌರಿ (Gowri) ಎಂಟ್ರಿ ಕೊಡ್ತಿದ್ದಾರೆ. ಈ ಬಗ್ಗೆ ನಟಿ ಶ್ರುತಿ ಮಾಹಿತಿ ನೀಡಿದ್ದಾರೆ.

    90ರ ದಶಕದಿಂದ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ಶ್ರುತಿ ಅವರಿಗೆ ಈಗಲೂ ಚಿತ್ರರಂಗದಲ್ಲಿ ಬೇಡಿಕೆಯಿದೆ. ನಟಿಯಾಗಿ, ರಿಯಾಲಿಟಿ ಶೋಗಳ ಜಡ್ಜ್ ಆಗಿ ಹೈಲೆಟ್ ಆಗುತ್ತಿದ್ದಾರೆ. ಅವರ ಮಗಳು ಗೌರಿ (Gowri) ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ರೀಲ್ಸ್, ಹಾಡುಗಾರಿಕೆ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:‘ಜವಾನ್ 2’ ಜೊತೆ ಮತ್ತೊಂದು ಸರ್ ಪ್ರೈಸ್ ನೀಡಿದ ನಿರ್ದೇಶಕ ಅಟ್ಲಿ

    ಶ್ರುತಿಗೆ, ಪ್ರತಿ ಸಲ ಮಗಳು ಚಿತ್ರರಂಗಕ್ಕೆ (Films) ಬರುತ್ತಾರಾ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಇದೀಗ ಈ ಪ್ರಶ್ನೆಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಶ್ರುತಿ ಅವರ ಜನ್ಮದಂದು, ತಮ್ಮ ಮಗಳು ಇಂಡಸ್ಟ್ರಿಗೆ ನಟಿಯಾಗಿ ಬರುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ ನನ್ನ ಮಗಳು ನಟಿಸೋದಾಗಿ ಹೇಳಿದ್ದಾಳೆ. ನಾನು ಒಪ್ಪಿಗೆ ನೀಡಿದ್ದೇನೆ ಎಂದು ತಿಳಿಸಿದ್ದರು.

    ನಟನೆಗೆ ಬೇಕಾಗಿರುವ ತಯಾರಿ ಮಾಡಿಕೊಂಡೇ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾಳೆ ಎಂದು ನಟಿ ಮಾಹಿತಿ ನೀಡಿದ್ದಾರೆ. ಗೌರಿಗೆ ಒಳ್ಳೆಯ ಕಥೆಗಳು ಅರಸಿ ಬರುತ್ತಿವೆ. ಬೇರೆಯವರ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಾಳೆ ಎಂದು ನಟಿ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಅಕ್ಕನ ಮಗಳು ಬಣ್ಣದ ಲೋಕಕ್ಕೆ ಬರುವ ಬಗ್ಗೆ ಸಿಹಿಸುದ್ದಿ ನೀಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾ‍ಘವೇಂದ್ರ ರಾಜ್ ಕುಮಾರ್ ಚಿತ್ರಕ್ಕೆ ಸೆನ್ಸಾರ್ ಅಸ್ತು

    ರಾ‍ಘವೇಂದ್ರ ರಾಜ್ ಕುಮಾರ್ ಚಿತ್ರಕ್ಕೆ ಸೆನ್ಸಾರ್ ಅಸ್ತು

    ಲ್ಲಕ್ಕಿ ಖ್ಯಾತಿಯ ಕೆ.ನರೇಂದ್ರಬಾಬು (K. Naredrababu) ನಿರ್ದೇಶನದ, ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar), ಶ್ರುತಿ, ಪ್ರಮೋದ್ ಶೆಟ್ಟಿ ಪ್ರಮುಖ  ಪಾತ್ರಗಳಲ್ಲಿ ಅಭಿನಯಿಸಿರುವ  ‘13’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.  ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ (Censor) ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ.

    ಯುವಿ ಪ್ರೊಡಕ್ಷನ್ ಅಡಿಯಲ್ಲಿ ಕೆ. ಸಂಪತ್‌ ಕುಮಾರ್‌, ಹೆಚ್.ಎಸ್. ಮಂಜುನಾಥ್‌, ಮಂಜುನಾಥ ಗೌಡ ಹಾಗೂ ಸಿ.ಕೇಶವಮೂರ್ತಿ ಹೀಗೆ  4 ಜನ ಸೇರಿ ಈ ಚಿತ್ರವನ್ನು  ನಿರ್ಮಿಸಿದ್ದಾರೆ. ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವರೀತಿ ಕಷ್ಟಪಡುತ್ತಾರೆ ಎಂಬುದನ್ನು  ಥ್ರಿಲ್ಲರ್ ಕಥೆಯ ಮೂಲಕ  ಹೇಳುವ ಚಿತ್ರ ಇದಾಗಿದೆ. ಇದನ್ನೂ ಓದಿ:Jailer ಸಿನಿಮಾ ಸಕ್ಸಸ್- ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ

    ರಾಘವೇಂದ್ರ ರಾಜ್‌ಕುಮಾರ್‌ ನಿವೃತ್ತ ಸೈನಿಕ ಹಾಗೂ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಮತ್ತು  ಟೀ ಅಂಗಡಿ ನಡೆಸುವ ಸಾಯಿರಾಬಾನು  ಎಂಬ ಮುಸ್ಲಿಂ  ಮಹಿಳೆಯ ಪಾತ್ರದಲ್ಲಿ ಶ್ರುತಿ (Shruti) ಅವರು ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕರು ಈ  ಚಿತ್ರಕಥೆಯನ್ನು ಹೆಣೆದಿದ್ದಾರೆ.

     

    ಪ್ರಮೋದ್ ಶೆಟ್ಟಿ ಅವರು  ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಮಂಜುನಾಥ್‌ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್‌ ಬಾಬು ಅವರ  ಸಂಗೀತ ಈ ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಂಗಲ್ ಸೇವಂತಿ ಐಟಂ ಸಾಂಗ್ ರಿಲೀಸ್

    ಸಿಂಗಲ್ ಸೇವಂತಿ ಐಟಂ ಸಾಂಗ್ ರಿಲೀಸ್

    ಕೆ.ನರೇಂದ್ರ ಬಾಬು (K. Narendra Babu) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ರಾಘವೇಂದ್ರ ರಾಜ್ ಕುಮಾರ್, ಶ್ರುತಿ (Shruti) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ‘13’  ಚಿತ್ರವೀಗ ಬಿಡುಗಡೆಯ ಹಂತ  ತಲುಪಿದೆ. ಓ ಗುಲಾಬಿ, ಪಲ್ಲಕ್ಕಿಯಂಥ ಪ್ರೇಮ ಕಥೆಗಳನ್ನೇ ಮಾಡಿಕೊಂಡು ಬಂದಿದ್ದ ನರೇಂದ್ರ ಬಾಬು ಅವರು 13 ಚಿತ್ರದಲ್ಲಿ ಭಾವೈಕ್ಯತೆಯ ಸಾಮಾಜಿಕ ಸಂದೇಶವಿರುವ  ಕಥೆಯೊಂದನ್ನು ನಿರೂಪಣೆ  ಮಾಡಿದ್ದಾರೆ.  ಮನರಂಜನೆಯ ಜೊತೆ ಸಸ್ಪೆನ್ಸ್, ಥ್ರಿಲ್ಲರ್ ಕಂಟೆಂಟ್ ಕೂಡ  ಸಿನಿಮಾದಲ್ಲಿದೆ.

    ಈ ಚಿತ್ರದ ‘ಸಿಂಗಲ್ ಸೇವಂತಿ’ ಎಂಬ ಐಟಂ ಸಾಂಗ್ (Item Song) ಬಿಡುಗಡೆ ಕಾರ್ಯಕ್ರಮ ನಡೆಯಿತು. ಲಕ್ಷ್ಮಿ ದಿನೇಶ್ ಸಾಹಿತ್ಯವಿರುವ ಈ ಹಾಡಿಗೆ ಇಂದೂ ನಾಗರಾಜ್ ದನಿಯಾಗಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್, ವಿನಯ್ ರಾಜಕುಮಾರ್, ಮುಖ್ಯ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭ ಕೋರಿದರು. ಇದನ್ನೂ ಓದಿ:‘ರಂಗಬಲಿ’ ಸಕ್ಸಸ್ ಮೀಟ್‌ನಿಂದ ನಾಗ ಶೌರ್ಯ ವಾಕ್ ಔಟ್

    ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಬಾಬು,  ನಾನು  ಈ ಕಥೆ ಬರೆದಾಗ ಮೋಹನ್ ಪಾತ್ರಕ್ಕೆ ರಾಘಣ್ಣ (Raghavendra Rajkumar) ಒಬ್ಬರೇ ಕಣ್ಣುಮುಂದೆ ಬಂದರು‌. ನಂತರ ಶ್ರುತಿ ಅವರು ಮುಸ್ಲಿಂ ಮಹಿಳೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ, ಇಬ್ಬರೂ ನಮ್ಮ ಚಿತ್ರಕ್ಕೆ ಎರಡು ಕಣ್ಣಿನ ಥರ, ಚಿತ್ರ ಮಾಡುವಾಗ ನಾನಾ ಅಡೆ ತಡೆಗಳನ್ನು ದಾಟಿ ಬಂದಿದ್ದು ಮೊದಲ ಪ್ರತಿ ನೋಡಿದಾಗ ಎಲ್ಕಾ ಮರೆತು, ತುಂಬಾ ಖುಷಿಯಾಯ್ತು. ಇದು ತಂಡದ ಸಿನಿಮಾ. ಬಾಂಬೆ ಮೂಲದ ಪ್ರೀತಿ ಗೋಸ್ವಾಮಿ  ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸ್ಲೋಗನ್ ಬಾಬು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು.

    ನಂತರ ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ ಈ ಚಿತ್ರದ ಕಥೆ, ಟೈಟಲ್ ಕಥೆ  ನನಗೆ ತುಂಬಾ ಖುಷಿ ಕೊಡ್ತು. ಸಸ್ಪೆನ್ಸ್ ಇದೆ. ಚಿತ್ರ ಒಳ್ಳೆಯ ಅನುಭವ ಕೊಟ್ಟಿತು. 25 ವರ್ಷ ಆದಮೇಲೆ ಶ್ರುತಿ ಅವರ ಜೊತೆ ನಟಿಸಿದ್ದೇನೆ ಎಂದರು. ನಾಯಕಿ ಪಾತ್ರ ಮಾಡಿರುವ ಶ್ರುತಿ ಮಾತನಾಡುತ್ತ ಮೊದಲಬಾರಿಗೆ ಮುಸ್ಲಿಂ ಮಹಿಳೆಯ ಪಾತ್ರ ಮಾಡಿದ್ದೇನೆ. ನನ್ನ ಪಾತ್ರದ ಹೆಸರು  ಸಾಹಿರಾಬಾನು, ಸಿನಿಮಾ ತುಂಬಾ ಚೆನ್ನಾಗಿದೆ ಎಂದರು. ವಾಣಿಜ್ಯ ಮಂಡಳಿ ಅಧ್ಯಕ್ಷರಾದ  ಭಾಮಾ ಹರೀಶ್ ಅವರು  ಹಾಡನ್ನು ಬಿಡುಗಡೆ ಮಾಡಿದರು.  ಈ ಚಿತ್ರವನ್ನು ಅರ್ಪಿಸುತ್ತಿರುವ  ಅನಿಲ್ ಕುಮಾರ್ ಮಾತನಾಡಿ ಒಂದೊಳ್ಳೆಯ ಸಂದೇಶವಿರುವ ಸಿನಿಮಾ. ಇಡೀ ತಂಡ ಶ್ರಮಪಟ್ಟು ಒಳ್ಳೆಯ ಸಿನಿಮಾ ಮಾಡಿದ್ದಾರೆ ಎಂದರು.

     

    ನಿರ್ಮಾಪಕರಲ್ಕೊಬ್ಬರಾದ ಸಂಪತ್ ಕುಮಾರ್ ಮಾತನಾಡಿ ಸಿನಿಮಾ ಮೇಲಿನ  ಶ್ರದ್ಧೆ, ಭಕ್ತಿಯಿಂದ ಒಳ್ಳೆಯಚಿತ್ರ ನಿರ್ಮಿಸಿದ್ದೇವೆ,  ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕರ ಜೊತೆ ಈ ಹಿಂದೆ ಅಮೃತವಾಹಿನಿ ಎಂಬ ಸಿನಿಮಾ ಮಾಡಿದ್ದೆ ಎಂದರು. ಉಳಿದ  ನಿರ್ಮಾಪಕರುಗಳಾದ ಮಂಜುನಾಥ್ ಗೌಡ, ಹೆಚ್. ಎಸ್. ಮಂಜುನಾಥ್ ಹಾಗೂ ಕೇಶವ ಮೂರ್ತಿ ಮಾತನಾಡಿ ನಾವೆಲ್ಲ ಸೇರಿ ಬಹಳ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದೇವೆ; ಕುತೂಹಲ ಮೂಡಿಸುವ ಕಥೆಯಿದೆ.ಪ್ರೇಕ್ಷಕರು ಚಿತ್ರದ  ಪ್ರತಿ ದೃಶ್ಯವನ್ನು ಎಂಜಾಯ್ ಮಾಡುತ್ತಾರೆ ಎಂದರು. ನಟ ವಿನಯ್ ರಾಜಕುಮಾರ್ ಮಾತನಾಡಿ  ಟೀಸರ್ ನೋಡಿದಾಗಲೇ ತುಂಬಾ ಖುಷಿ ಆಗಿತ್ತು, ಗೆಲುವಿನ ಸರ್ದಾರ ಆದ ಮೇಲೆ ಶ್ರುತಿ ಹಾಗೂ ಅಪ್ಪಾಜಿ ಒಟ್ಟಿಗೆ  ನಟಿಸಿದ್ದಾರೆ ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೇಘನಾ ರಾಜ್ ನಟನೆಯ ‘ತತ್ಸಮ ತದ್ಭವ’ ಚಿತ್ರೀಕರಣ ಮುಕ್ತಾಯ

    ಮೇಘನಾ ರಾಜ್ ನಟನೆಯ ‘ತತ್ಸಮ ತದ್ಭವ’ ಚಿತ್ರೀಕರಣ ಮುಕ್ತಾಯ

    ಕೆಲವು ವರ್ಷಗಳಿಂದ ಖ್ಯಾತ ನಟಿ ಮೇಘನರಾಜ್ ಯಾವುದೇ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ಈಗ ‘ತತ್ಸಮ ತದ್ಭವ’ (Tatsama Tadbhava) ಚಿತ್ರದ ಮೂಲಕ ಮೇಘನರಾಜ್ (Meghana Raj) ರೀ ಎಂಟ್ರಿ ಕೊಟ್ಟಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ‘ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂತಹ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದೇನೆ. ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಒಳ್ಳೆಯ ಕಥೆ ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈವರೆಗೂ ನಾನು ಇಂತಹ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೀನೊ, ಇಲ್ಲವೊ? ಗೊತ್ತಿಲ್ಲ ಎಂದರು ಮೇಘನರಾಜ್. ಇದನ್ನೂ ಓದಿ: ನಟ ಚೇತನ್‌ ಭಾರತದ ವೀಸಾ ರದ್ದು

    ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ  ಒಂದು ಮುಖ್ಯಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಅವರು ನೀವೆ ಮಾಡುತ್ತಿದ್ದೀರ ಎಂದರು. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿಯಿದೆ  ಎಂದು ಪ್ರಜ್ವಲ್ ದೇವರಾಜ್ (Prajwal Devaraj) ತಿಳಿಸಿದರು.

    ಇದೊಂದು ಇನ್ವೆಸ್ಟಿಕೇಶನ್ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದೆಂಬ ನಂಬಿಕೆಯಿದೆ ಎಂದರು ನಿರ್ದೇಶಕ ವಿಶಾಲ್ ಆತ್ರೇಯ. ಇಂದು ಚಿತ್ರೀಕರಣ ಮುಕ್ತಾಯವಾಗಿದೆ. ರೀರೆಕಾರ್ಡಿಂಗ್ ನಡೆಯುತ್ತಿದೆ. ಚುನಾವಣೆ ಮುಗಿದ ನಂತರ ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕ ಪನ್ನಗ ಭರಣ ತಿಳಿಸಿದರು.

    ನಟಿ ಶ್ರುತಿ ಮಾತನಾಡಿ, ‘ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ಕೊಡುವುದು ಮುಖ್ಯ. ಮೇಘನಾ ರಾಜ್ ವಿಷಯದಲ್ಲಿ, ಅವರ ಸ್ನೇಹಿತರೆಲ್ಲರೂ ಸೇರಿ ಅವರ ರೀ ಎಂಟ್ರಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿ, ನಾನು ಈ ಚಿತ್ರದಲ್ಲಿ ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ ಎಂದರು. ಚಿತ್ರದಲ್ಲಿ ಒಂದು ಹಾಡಿದೆ. ರೀರೆರ್ಡಿಂಗ್ ಕೆಲಸ ನಡೆಯುತ್ತಿದೆ ಎಂದು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಹೇಳಿದರು.