Tag: ಶ್ರೀ ಸಿದ್ದಲಿಂಗಾ ಸ್ವಾಮೀಜಿ

  • ವಿಶ್ವಪರಿಸರ ದಿನ- ಸಾವಿರ ಸಸಿಗಳನ್ನು ನೆಟ್ಟು ಶತಾಯುಷಿಯ ಸ್ಮರಣೆ

    ವಿಶ್ವಪರಿಸರ ದಿನ- ಸಾವಿರ ಸಸಿಗಳನ್ನು ನೆಟ್ಟು ಶತಾಯುಷಿಯ ಸ್ಮರಣೆ

    ತುಮಕೂರು: ಇಂದು ವಿಶ್ವಪರಿಸರ ದಿನಾಚರಣೆ, ಈ ವಿಶೇಷ ದಿನದಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ 1 ಸಾವಿರ ಸಸಿಗಳನ್ನು ನೆಡುವುದರ ಮೂಲಕ ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ಸ್ಮರಣೆ ಮಾಡಲಾಗುತ್ತಿದೆ.

    ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯುತ್ತಿದೆ. ರೀಚ್ ಫಾರ್ ಕಾಸ್ ಸಂಸ್ಥೆ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

    ಈ ಕಾರ್ಯಕ್ರಮಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಸಿ ನೆಟ್ಟು ಅದಕ್ಕೆ ನೀರೆರಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಮಠದ ಸುತ್ತಲೂ ಸುಮಾರು 1 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಶಿವಕುಮಾರ ಶ್ರೀಗಳನ್ನು ಎಲ್ಲರೂ ಸ್ಮರಿಸುತ್ತಿದ್ದಾರೆ.

    ಈಗಾಗಲೇ ಮಠದ ಸುತ್ತಮುತ್ತ ಸಸಿಗಳ ನೆಡುವ ಕಾರ್ಯ ಆರಂಭಗೊಂಡಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸ್‍ಪಿ ಕೋನ ವಂಶಿ ಕೃಷ್ಣ, ಜಿಲ್ಲಾ ಪಂಚಾಯ್ತಿ ಸಿಇಓ ಶುಭಕಲ್ಯಾಣ್ ಹಾಗೂ ಇತರರು ಭಾಗಿಯಾಗಿದ್ದಾರೆ. ಹಾಗೆಯೇ ಮಠದ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಸಸಿ ನೆಡುವ ಕಾರ್ಯದಲ್ಲಿ ತೊಡಗಿದ್ದಾರೆ.