Tag: ಶ್ರೀ ರಾಮಸೇನೆ

  • ಶ್ರೀರಾಮ ಸೇನೆಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಕುಖ್ಯಾತರಾಗಬೇಡಿ: ಕಟೀಲ್ ವಿರುದ್ಧ ಮುತಾಲಿಕ್ ಕಿಡಿ

    ಶ್ರೀರಾಮ ಸೇನೆಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಕುಖ್ಯಾತರಾಗಬೇಡಿ: ಕಟೀಲ್ ವಿರುದ್ಧ ಮುತಾಲಿಕ್ ಕಿಡಿ

    ಚಿಕ್ಕೋಡಿ: ಶ್ರೀರಾಮ ಸೇನೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಕುಖ್ಯಾತ (ಬದನಾಮ್) ಆಗಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿರುಗೇಟು ನೀಡಿದ್ದಾರೆ.

    nalin kumar kateel

    ಪಬ್ಲಿಕ್ ಟಿವಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹೇಳಿಕೆ ನೀಡಿರುವ ಅವರು, ಕಟೀಲ್ ಅವರ ಈ ಹೇಳಿಕೆ ಸರಿಯಲ್ಲ. ಈಗಾಗಲೇ ಬಿಜೆಪಿ ಪಕ್ಷ ಕಾಂಗ್ರೆಸ್ ಹತ್ತಿರ ಬಂದು ಹಿಂದೂ ಹಿಂದೂತ್ವದ ದೃಷ್ಟಿಯಿಂದ ಉಳಿದಿಲ್ಲ. ಇಂಥ ಹೇಳಿಕೆ ಕೊಟ್ಟು ಕುಖ್ಯಾತರಾಗಬೇಡಿ. ನೀವು ಹಿಂದೂ ಪಕ್ಷ ಅಂತ ಹೇಳಲು ನಮ್ಮಂಥ ಸಂಘಟನೆಗಳೇ ಆಧಾರ. ಶ್ರೀರಾಮ ಸೇನಾ ದೂರ ಮಾಡಿದ್ದಕ್ಕೆ ಮುಂದಿನ ಚುನಾವಣೆಯಲ್ಲಿ ನಿಮಗೆ ಉತ್ತರ ಸಿಗಲಿದೆ. ಇಂಥ ಹೇಳಿಕೆ ಕೊಡದೇ ಮೌನವಾಗಿರಬೇಕು. ಮುಂದಿನ ಚುನಾವಣೆಯಲ್ಲಿ ಶ್ರೀರಾಮ ಸೇನೆ ಸ್ಪರ್ಧೆ ಮಾಡುವ ಯಾವುದೇ ಚಿಂತನೆಯಿಲ್ಲ. ನನ್ನನ್ನು ಸೇರಿ ಯಾರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಕೊಟ್ಟರೆ ಬೇಡ ಅನ್ನಲ್ಲ: ಎನ್.ಮಹೇಶ್

    ಇದೇ ವೇಳೆ ಹುಬ್ಬಳ್ಳಿ ಗಲಭೆಕೋರರ ಮೇಲೆ ಜಾಮೀನು ಸಿಗದಂತೆ ಕೋಕಾ ಪ್ರಕರಣ ದಾಖಲಿಸಬೇಕು. ಹುಬ್ಬಳ್ಳಿ ಗಲಭೆ ವ್ಯವಸ್ಥಿತ ಪೂರ್ವ ನಿಯೋಜಿತ ಸಂಚು. ಸ್ಟೇಟಸ್ ಹಾಕದೇ ಇದ್ದರೂ ಗಲಾಟೆ ಮಾಡುತ್ತಿದ್ದರು. ಗುರಿಯಿರುವುದು ಪೊಲೀಸ್ ಠಾಣೆ ಹಾಗೂ ಹಿಂದೂ ಮನೆಗಳು, ಅಂಗಡಿಗಳು ಮಾತ್ರ. ದಂಗೆ ಮಾಡಿ ಗಲಭೆ ಮಾಡಿ ಭಯ ಹುಟ್ಟಿಸುವುದಾಗಿದೆ. ಗಲಾಟೆ, ಗಲಭೆ ಮಾಡಿ ಯಶಸ್ವಿಯಾಗಿದ್ದಾರೆ. ಹಿಂದೂ ಸಮಾಜವನ್ನು ಭಯದ ಮೂಲಕ ಓಡಿಸುತ್ತಿದ್ದಾರೆ. ಸರ್ಕಾರ ಗಲಾಟೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್

  • 9 ದಿನ ಗಣೇಶೋತ್ಸವ ಆಚರಿಸುತ್ತೇವೆ ತಾಖತ್ ಇದ್ರೆ ಸರ್ಕಾರ ತಡೆಯಲಿ: ಶ್ರೀರಾಮಸೇನೆ

    9 ದಿನ ಗಣೇಶೋತ್ಸವ ಆಚರಿಸುತ್ತೇವೆ ತಾಖತ್ ಇದ್ರೆ ಸರ್ಕಾರ ತಡೆಯಲಿ: ಶ್ರೀರಾಮಸೇನೆ

    ಗದಗ: ಗಣೇಶೋತ್ಸವ ಆಚರಣೆಗೆ ಅಡೆತಡೆ ಮಾಡಿ ನಿಮ್ಮ ಲಾಠಿ ಏಟು ಹಾಗೂ ಬಂದೂಕಿನ ಗುಂಡಿಗೂ ಹೆದರುವುದಿಲ್ಲ. ನಿಮ್ಮ ಗುಂಡಿಗೆ ನಮ್ಮ ಎದೆ ಗುಂಡಿಗೆ ಒಡ್ಡಲು ಸಿದ್ದರಿದ್ದೇವೆ. ಯಾವುದಕ್ಕೂ ಬಗ್ಗುವ ಜಗ್ಗುವ ಮಾತೇ ಇಲ್ಲ. ತಾಖತ್ ಇದರೆ ಆಚರಣೆ ತಡೆಯಲಿ ಎಂದು ಶ್ರೀ ರಾಮಸೇನೆ ಸಂಘಟಿಕರು ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

     sri rama sene

    9 ದಿನದ ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡುವಂತೆ ಆಗ್ರಹಿಸಿ ಶ್ರೀರಾಮಸೇನೆ ಕಾರ್ಯಕರ್ತರು ಡಿಸಿ ಆಫೀಸ್ ಬಳಿ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರದ ನಿಯಮಾವಳಿಗಳನ್ನು ಖಂಡಿಸಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿ, ಕೂಡಲೇ ಗಣೇಶ ಹಬ್ಬದ ಮಾರ್ಗಸೂಚಿಗಳ ಪರಿಷ್ಕರಣೆ ಆಗಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ

     sri rama sene

    ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ 5 ದಿನದ ಬದಲು ಜಿಲ್ಲೆಯಾದ್ಯಂತ 9 ದಿನ ಆಚರಿಸಲು ಶ್ರೀರಾಮಸೇನೆ ನಿರ್ಧಾರ ಮಾಡಲಾಗಿದೆ. ಇದಕ್ಕೆ ಸರ್ಕಾರ ಸಹಕಾರ ನೀಡಬೇಕು. ಜೊತೆಗೆ ಶಾಲಾ-ಕಾಲೇಜುಗಳಲ್ಲೂ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಉಗ್ರವಾದ ಹೋರಾಟ ಮಾಡುವುದಾಗಿ ಸಂಘಟಿಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ದೋಚಲು ಹಣವಿಲ್ಲದಾಗ ಹಲ್ಲೆಗೈದು ರೇಪ್ ಮಾಡಿದೆವು – ಸತ್ಯ ಬಿಚ್ಚಿಟ್ಟ 7ನೇ ಆರೋಪಿ

     sri rama sene

    ಶ್ರೀರಾಮಸೇನೆ ಧಾರವಾಡ ವಿಭಾಗದ ಸಂಚಾಲಕ ರಾಜು ಖಾನಪ್ಪನವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಅನೇಕ ಕಾರ್ಯಕರ್ತರು ಈ ಧರಣಿಯಲ್ಲಿ ಭಾಗವಹಿಸಿದ್ದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

  • ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದರೆ ಚುನಾವಣೆ ಬಹಿಷ್ಕಾರ: ಶ್ರೀರಾಮ ಸೇನೆ

    ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದರೆ ಚುನಾವಣೆ ಬಹಿಷ್ಕಾರ: ಶ್ರೀರಾಮ ಸೇನೆ

    ಧಾರವಾಡ: ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡದಿದ್ದರೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಬಹಿಷ್ಕಾರ ಮಾಡುತ್ತೇವೆ ಎಂದು ಶ್ರೀ ರಾಮಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದರು.

    ಶ್ರೀ ರಾಮಸೇನೆ ನೇತೃತ್ವದಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹಾಗೂ ಗ್ರಾಮೀಣ ಶಾಸಕ ಅಮೃತ ದೇಸಾಯಿ ಮನೆಗೆ ಹೋಗಿ ಈ ಬಗ್ಗೆ ಮನವಿ ಸಲ್ಲಿಸಿದ ನಂತರ ಧಾರವಾಡ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಬಿಜೆಪಿ ನೇತೃತ್ವದ ಸರ್ಕಾರ ಹಿಂದೂಗಳ ಆರಾಧ್ಯ ವಿಘ್ನ ವಿನಾಶಕ ಗಣಪತಿ ತಂಟೆಗೆ ಬಂದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದರು.ಇದನ್ನೂ ಓದಿ:ಕೊಡಲಿಯಿಂದ ತಲೆಗೆ ಹೊಡೆದು ಯುವಕನ ಕೊಲೆ

    ಇದೇ ವೇಳೆ ಗಣೇಶೋತ್ಸವ ಆಚರಣೆ ನಿಷೇಧ ಮಾಡಿದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಶ್ರೀ ರಾಮಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ:ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ