Tag: ಶ್ರೀ ನಗರ

  • ಜಮ್ಮು ಕಾಶ್ಮೀರದಲ್ಲಿ ಹಿಮಪಾತ – ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರು

    ಜಮ್ಮು ಕಾಶ್ಮೀರದಲ್ಲಿ ಹಿಮಪಾತ – ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರು

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಹಿಮಪಾತ ಹೆಚ್ಚಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹಾಗೂ ಹೊಸಪೇಟೆ ಮೂಲದ 10 ಮಂದಿ ಪ್ರವಾಸಿಗರು ಹೋಟೆಲ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದಾರೆ.

    ಹೊಸಪೇಟೆ ಹಾಗೂ ಹುಬ್ಬಳ್ಳಿ ಎರಡು ಕುಟುಂಬದ ಒಟ್ಟು 10 ಮಂದಿ ಕನ್ನಡಿಗರು ಕಳೆದ 10 ದಿನಗಳ ಹಿಂದೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಕಳೆದ ಮೂರು ದಿನಗಳ ಹಿಂದೆ ಜಮ್ಮುವಿನ ಸೋನಮರ್ಗ್ ನ ಖಾಸಗಿ ಹೋಟೆಲ್ ನಲ್ಲಿ ವಾಸವಾಗಿದ್ದರು. ರಾತ್ರಿ ಹೋಟೆಲ್ ನಲ್ಲಿ ವಾಸವಿದ್ದ ಕನ್ನಡಿಗರ ತಂಡ ಬೆಳಗ್ಗೆ ತಮ್ಮ ಪ್ರಯಾಣ ಆರಂಭ ಮಾಡಬೇಕಿತ್ತು. ಆದರೆ ಬೆಳಗ್ಗೆ ಹೊರಡುವ ಮುನ್ನವೇ ರಾತ್ರೋರಾತ್ರಿ ಅಪಾರ ಪ್ರಮಾಣದ ಹಿಮ ಸುರಿದ ಹಿನ್ನೆಲೆಯಲ್ಲಿ ಹೋಟೆಲ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

    ಕನ್ನಡಿಗರು ವಾಸವಿದ್ದ ಹೋಟೆಲ್ ಬಳಿ ಭಾರೀ ಹಿಮಪಾತವಾಗುತ್ತಿದ್ದ ಕಾರಣ ಹೋಟೆಲ್ ಸಿಬ್ಬಂದಿ ಹೊರ ಹೋಗದಂತೆ ಎಚ್ಚರಿಸಿದ್ದಾರೆ. ಹೋಟೆಲ್ ಸಿಬ್ಬಂದಿಯ ಮಾಹಿತಿಯಂತೆ ಅಲ್ಲೇ ಉಳಿದುಕೊಂಡಿದ್ದಾರೆ. ಆದರೆ ಇತ್ತ ಹಿಮಪಾತ ಮಾತ್ರ ಕಡಿಮೆ ಆಗಲೇ ಇಲ್ಲ. ಹೀಗಾಗಿ ಕಳೆದ ಮೂರು ದಿನಗಳಿಂದ ಹೋಟೆಲ್ ನಲ್ಲಿಯೇ ಉಳಿದುಕೊಂಡು ಸಂಕಷ್ಟಕ್ಕೊಳಗಾಗಿದ್ದಾರೆ. ಅದಲ್ಲದೇ ತಾವು ಉಳಿದುಕೊಂಡಿರುವ ಹೋಟೆಲ್ ನಲ್ಲಿ ಡೀಸಲ್ ಸಹ ಮುಗಿಯುತ್ತಾ ಬಂದಿದ್ದು, ವಿದ್ಯುತ್ ಸಂಪರ್ಕ ಸಹ ಕಡಿತವಾಗಿದೆ. ಹೀಗಾಗಿ ಕೂಡಲೇ ರಕ್ಷಣೆ ಮಾಡುವಂತೆ ಸ್ಥಳೀಯಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

  • ಪೊಲೀಸ್ ಪೇದೆಯಿಂದ ಇಲಾಖೆಗೆ 5.43 ಲಕ್ಷ ರೂಪಾಯಿ ಪಂಗನಾಮ

    ಪೊಲೀಸ್ ಪೇದೆಯಿಂದ ಇಲಾಖೆಗೆ 5.43 ಲಕ್ಷ ರೂಪಾಯಿ ಪಂಗನಾಮ

    ಶ್ರೀನಗರ : ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆ ಮಾತಿನಂತೆ, ಪೊಲೀಸ್ ಪೇದೆಯೊರ್ವರು ತನ್ನ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಇಲಾಖೆಗೆ ನಕಲಿ ದಾಖಲೆ ನೀಡಿ ಸುಮಾರು 5.53 ಲಕ್ಷ ರೂಪಾಯಿ ಪಂಗನಾಮ ಹಾಕಿ ಇದೀಗ ಸಿಕ್ಕಿಬಿದ್ದಿದ್ದಾರೆ.

    ಜಮ್ಮು-ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ಪತ್ತೆಹಚ್ಚಿರುವ ಮಾಹಿತಿ ಪ್ರಕಾರ ಪೊಲೀಸ್ ಇಲಾಖೆಗೆ ಪಂಗನಾಮ ಹಾಕಿದ ಪೊಲೀಸ್ ಪೇದೆಯನ್ನು ರವಿ ಕುಮಾರ್ ಎಂದು ಗುರುತಿಸಲಾಗಿದೆ. ರವಿ ಕುಮಾರ್ ಇಲಾಖೆಗೆ ತನ್ನ ತಂದೆಗೆ ಆರೋಗ್ಯ ಸರಿಯಿಲ್ಲ ಎಂದು ನಕಲಿ ದಾಖಲೆ ನೀಡಿ 5.53 ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದರು. ಆದರೆ ಇವರ ತಂದೆ ಮೃತಪಟ್ಟು ಹಲವು ವರ್ಷಗಲೇ ಕಳೆದಿದೆ ಎಂಬ ಮಾಹಿತಿ ಸಿಕ್ಕಿದೆ.

    ರವಿ ಕುಮಾರ್ ಇಲಾಖೆಗೆ ಮಾಡಿರುವ ಮೋಸದ ಕುರಿತು ಮಾಹಿತಿ ಪಡದು ಈಗಾಗಲೇ ಮೀಸಲು ಶಸ್ತ್ರಾಸ್ರ ಪಡೆ ಕಾನೂನಿನ ಪ್ರಕಾರ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ ಎಂದು ಅಪರರಾಧ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ರವಿ ಕುಮಾರ್‍ನ್ನು ವಿಚಾರಿಸಿದಾಗ ತನ್ನ ತಂದೆ ಪ್ರೇಮ ದಾಸ್ ಅವರ ಆರೋಗ್ಯ ಸರಿಯಿಲ್ಲ ಎಂದು ಮೆಡಿಕಲ್ ಸರ್ಟಿಫಿಕೆಟ್ ನೀಡಿ ಇಲಾಖೆಯಿಂದ ರವಿ ಕುಮಾರ್ ಬ್ಯಾಂಕ್ ಖಾತೆಗೆ 1,92,553 ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಪೊಲೀಸರು ತನಿಖೆ ನಡೆಸಿದಾಗ 2016ರಲ್ಲೇ ರವಿ ಕುಮಾರ್ ಅವರ ತಂದೆ ಮೃತಪಟ್ಟಿರುವುದು ದೃಢಪಟ್ಟಿದೆ.

    ತಂದೆ ಮೃತಪಟ್ಟಿದ್ದರೂ ಕುಮಾರ್ ಮಾತ್ರ ನಕಲಿ ದಾಖಲೆಯನ್ನು ಇಲಾಖೆಗೆ ನೀಡಿ ಈವರೆಗೆ 5,53,695 ರೂಪಾಯಿಗಳನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಹಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಕತ್ತು ಸೀಳಿದ ಸ್ಥಿತಿಯಲ್ಲಿ ಬಿಜೆಪಿ ನಾಯಕನ ಶವ ಪತ್ತೆ

    ಕತ್ತು ಸೀಳಿದ ಸ್ಥಿತಿಯಲ್ಲಿ ಬಿಜೆಪಿ ನಾಯಕನ ಶವ ಪತ್ತೆ

    ಶ್ರೀನಗರ: ಜಮ್ಮು-ಕಾಶ್ಮೀರದ ಸೋಫಿಯಾಜ ಜಿಲ್ಲೆಯಲ್ಲಿ 30 ವರ್ಷದ ಬಿಜೆಪಿ ಯುವಮೋರ್ಚಾದ ನಾಯಕ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯವನ್ನು ಉಗ್ರರು ನಡೆಸಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಮೃತನನ್ನು ಗೌರ್ ಅಹ್ಮದ್ ಭಟ್ ಎನ್ನಲಾಗಿದೆ. ಇವರು ಶೋಫಿಯಾನಾದ ಬೊನಗಮ್ ಪ್ರದೇಶದ ನಿವಾಸಿ. ಕತ್ತು ಸೀಳಿದ ಸ್ಥಿತಿಯಲ್ಲಿ ಕಿಲೋರಾರಾದಲ್ಲಿನ ಆರ್ಚರ್ಡ್ ನಲ್ಲಿ ಗೌರ್ ಮೃತದೇಹ ಪತ್ತೆಯಾಗಿದೆ. ಭಟ್ ಭಾರತೀಯ ಜನತಾ ಯುವಮೋರ್ಚಾದ ಜಿಲ್ಲಾಧ್ಯಕ್ಷರಾಗಿದ್ದರು.

    ಗೌರ್ ಸಾವಿನ ಸುದ್ದಿ ಹಬ್ಬುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಅಂದಿದ್ದಾರೆ.

    ಭವಿಷ್ಯ ರೂಪಿಸುತ್ತಿರುವ ಯುವಕರನ್ನು ಉಗ್ರರು ಟಾರ್ಗೆಟ್ ಮಾಡುತ್ತಿರುವುದನ್ನು ನಿಲ್ಲಿಸಲ್ಲ. ಮೃತ ಗೌರ್ ಕುಟುಂಬದೊಂದಿಗೆ ಬಿಜೆಪಿ ಎಂದಿಗೂ ಇರುತ್ತದೆ ಅಂತಾ ಟ್ವಟ್ಟರ್ ನಲ್ಲಿ ಬರೆದಿದ್ದಾರೆ.