Tag: ಶ್ರೀ ಗುರು ರಾಘವೇಂದ್ರ ಸ್ವಾಮಿ

  • ಮಂತ್ರಾಲಯ ಶ್ರೀಗಳ 54ನೇ ವರ್ಧಂತಿ ಉತ್ಸವ – ಭಕ್ತರಿಂದ ಶ್ರೀಗಳ ತುಲಾಭಾರ

    ಮಂತ್ರಾಲಯ ಶ್ರೀಗಳ 54ನೇ ವರ್ಧಂತಿ ಉತ್ಸವ – ಭಕ್ತರಿಂದ ಶ್ರೀಗಳ ತುಲಾಭಾರ

    ರಾಯಚೂರು: ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರ 54ನೇ ಜನ್ಮದಿನವನ್ನು ವರ್ಧಂತಿ ಉತ್ಸವವಾಗಿ ಭಕ್ತರು ಮಠದಲ್ಲಿ ಅದ್ದೂರಿಯಾಗಿ ಆಚರಿಸಿದರು.ಇದನ್ನೂ ಓದಿ: ಹೆಂಡತಿಯನ್ನು ಮನೆಗೆ ಕರೆದ ಗಂಡನಿಗೆ ಚಾಕು ಇರಿದ ಭಾಮೈದ!

    ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳೊಂದಿಗೆ ವರ್ಧಂತಿ ಉತ್ಸವ ಆಚರಿಸಿ, ತುಳಸಿ ವನದಲ್ಲಿ ಸಸಿ ನೆಡಲಾಯಿತು. ಸ್ವಾಮೀಜಿಗಳು ಭಕ್ತರಿಗೆ ವೃಕ್ಷ ಪ್ರಸಾದ ನೀಡುವ ಮೂಲಕ ಆಶೀರ್ವದಿಸಿದರು. ಬಳಿಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.

    ಉಂಜಾಲ ಮಂಟಪದಲ್ಲಿ ಭಕ್ತರು ಶ್ರೀಗಳ ತುಲಾಭಾರ ಕಾರ್ಯಕ್ರಮ ನೆರವೇರಿಸಿ, ಆಶೀರ್ವಾದ ಪಡೆದರು. ಇದೇ ವೇಳೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಇದನ್ನೂ ಓದಿ: ಬಿಹಾರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ- ಗುರುವಾರ ಒಂದೇ ದಿನ 58 ಬಲಿ

  • ಮಂತ್ರಾಕ್ಷತೆಯಾಯ್ತು ನಿರ್ಮಾಲ್ಯ ಸಾಲಿಗ್ರಾಮ!- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪವಾಡ

    ಮಂತ್ರಾಕ್ಷತೆಯಾಯ್ತು ನಿರ್ಮಾಲ್ಯ ಸಾಲಿಗ್ರಾಮ!- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪವಾಡ

    ಬಾಗಲಕೋಟೆ: ನಗರದ ವಿದ್ಯಾಗಿರಿಯ ಮನೆಯೊಂದರಲ್ಲಿ ಮಂತ್ರಾಲಯದಿಂದ ತಂದಿದ್ದ ಮಂತ್ರಾಕ್ಷತೆ ನಿರ್ಮಾಲ್ಯ ಸಾಲಿಗ್ರಾಮವಾಗಿ ಪರಿವರ್ತನೆಯಾರುವ ಪವಾಡ ಬುಧವಾರದಂದು ನಡೆದಿದೆ.

    ಬಾಗಲಕೋಟೆಯ ವಿದ್ಯಾಗಿರಿಯ ನಿವಾಸಿ ಪ್ರಹ್ಲಾದ್ ಸೀಮಿಕೇರಿ ಎಂಬವರ ಮನೆಯಲ್ಲಿ ಈ ಪವಾಡ ಜರುಗಿದೆ. ಪ್ರಹ್ಲಾದ್ ಅವರು ಮಂತ್ರಾಲಯ ಶ್ರೀ ಗುರು ರಾಘವೇಂದ್ರರಾಯರ ಪರಮ ಭಕ್ತರು. ಪ್ರಹ್ಲಾದ್ ಹಾಗೂ ಅವರ ಕುಟುಂಬ 6 ತಿಂಗಳ ಹಿಂದೆ ಮಂತ್ರಾಲಯದಿಂದ ಮಂತ್ರಾಕ್ಷತೆಯನ್ನು ಮನೆಗೆ ತಂದಿದ್ದರು. 15 ದಿನಗಳ ಹಿಂದೆ ದೇವರಿಗೆ ಪೂಜೆ ಮಾಡುವ ವೇಳೆ ಮಂತ್ರಾಕ್ಷತೆಯು ನಿರ್ಮಾಲ್ಯ ಸಾಲಿಗ್ರಾಮವಾಗಿ ಬದಲಾಗಿದೆ. ತಕ್ಷಣ ಈ ಪವಾಡವನ್ನು ಮಂತ್ರಾಲಯ ಶ್ರೀಗಳಿಗೆ ಕೆರೆ ಮಾಡಿ ಪ್ರಹ್ಲಾದ್ ತಿಳಿಸಿದ್ದಾರೆ.

    ನಂತರ ಈ ಪವಾಡ ಸತ್ಯವೆಂದು ಮಂತ್ರಾಲಯದ ಶ್ರೀ ಸುಬುಧೆಂದ್ರತೀರ್ಥರು ಖಚಿತ ಪಡಿಸುವವರೆಗೂ ಸಾಲಿಗ್ರಾಮ ವಿಚಾರವನ್ನು ಪ್ರಹ್ಲಾದ್ ಗುಟ್ಟಾಗಿಟ್ಟಿದ್ದರು. ಆದರೆ ಶ್ರೀಗಳು ನಡೆದಿರುವ ಸಾಲಿಗ್ರಾಮ ಪವಾಡ ಸತ್ಯವೆಂದು ತಿಳಿಸಿದ ಮೇಲೆ ಪವಾಡವನ್ನು ಬಹಿರಂಗ ಮಾಡಲಾಗಿದೆ. ಇಂದು ಶುಭದಿನ ರಾಘವೇಂದ್ರರ ವಾರ ಎಂದು ಪವಾಡವನ್ನು ಪ್ರಹ್ಲಾದ್ ಹಾಗೂ ಅವರ ಕುಟುಂಬಸ್ಥರು ಬಹಿರಂಗಪಡಿಸಿದ್ದಾರೆ.

    ಮಂತ್ರಾಕ್ಷತೆಯು ಸುಮಾರು ಹತ್ತು ನಿರ್ಮಾಲ್ಯ ಸಾಲಿಗ್ರಾಮವಾಗಿ ಬದಲಾಗಿತ್ತು. ಅದರಲ್ಲಿ ನಿತ್ಯನಿರಂತರ ಪೂಜೆಗಾಗಿ ಐದು ಸಾಲಿಗ್ರಾಮಗಳನ್ನು ಮಂತ್ರಾಲಯ ಮಠಕ್ಕೆ ನೀಡಲಾಗಿದೆ. ಈ ಪವಾಡ ರಾಘವೇಂದ್ರ ರಾಯರ ಅನುಗ್ರಹದಿಂದ ನಡೆದಿದೆ. ಬ್ರಾಹ್ಮಣ ಸಂಪ್ರದಾದಲ್ಲಿ ಪವಿತ್ರವಾದ ಸ್ಥಾನ ಪಡೆದ ಸಾಲಿಗ್ರಾಮ ದೇವರ ಸ್ವರೂಪ ಎಂದು ಪ್ರಹ್ಲಾದ್ ಹೇಳಿದ್ದಾರೆ.

    https://www.youtube.com/watch?v=AOCiD1p5AGc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv