Tag: ಶ್ರೀ ಕ್ಷೇತ್ರ ಧರ್ಮಸ್ಥಳ

  • ಸರ್ವಧರ್ಮೀಯರು ಸಂದರ್ಶಿಸುವ ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳ: ಗೆಹ್ಲೋಟ್

    ಸರ್ವಧರ್ಮೀಯರು ಸಂದರ್ಶಿಸುವ ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳ: ಗೆಹ್ಲೋಟ್

    -ಶ್ರೀ ಕ್ಷೇತ್ರ ಧರ್ಮಸ್ಥಳದ 89ನೇ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ

    ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಅಂಗವಾಗಿ ನಡೆಯುತ್ತಿರುವ 89ನೇ ಸರ್ವಧರ್ಮ ಸಮ್ಮೇಳನಕ್ಕೆ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಚಾಲನೆ ನೀಡಿ, ಸರ್ವಧರ್ಮೀಯರು ಸಂದರ್ಶಿಸುವ ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳ ಎಂದು ಸಂತಸ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವದ ಅಂಗವಾಗಿ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಕ್ಕೆ ಸಂತಸವಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ದಕ್ಷಿಣ ಭಾರತದ ಪ್ರಸಿದ್ಧವಾದ ಸರ್ವಧರ್ಮೀಯರು ಸಂದರ್ಶಿಸುವ ಕ್ಷೇತ್ರವಾಗಿದೆ. ಅನ್ನದಾನ, ವಿದ್ಯಾದಾನ, ಅರೋಗ್ಯಸೇವೆ, ಆಯುರ್ವೇದ, ಯೋಗ, ಧಾರ್ಮಿಕ, ಸಂಸ್ಕೃತಿಗಳ ಒಂದು ಸಂಗಮ ಕ್ಷೇತ್ರ ಇದಾಗಿದೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ನಾಲ್ವರಿಗೆ ಕೊರೊನಾ ಪಾಸಿಟಿವ್: ಸುಧಾಕರ್

    ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಸ್-ವ್ಯಾಸ ಯುನಿವರ್ಸಿಟಿಯ ನಿವೃತ ಕುಲಪತಿ ಪ್ರೊ.ರಾಮಚಂದ್ರ ಜಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಡಾ.ಸಾರ್ಫಾಜ್ ಚಂದ್ರಗುತ್ತಿ, ಡಾ.ಎಂ.ಎಸ್ ಪದ್ಮ, ಫಾ.ವೀರೇಶ್ ಮೊರಸ್ ಸೇರಿದಂತೆ ವಿವಿಧ ಧರ್ಮಗಳ ಪ್ರತಿನಿಧಿಗಳು, ವಿಧ್ವಾಂಸರು ಹಾಗೂ ಗಣ್ಯರು ವೇದಿಕೆಯಲ್ಲಿದ್ದರು. ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟ ಡೆಡ್ಲಿ ವೈರಸ್‌- ಬೆಂಗಳೂರಿನ ಇಬ್ಬರಲ್ಲಿ ಓಮಿಕ್ರಾನ್‌ ಪತ್ತೆ!

  • ಚಿನ್ನಿ ಬಾಂಬ್ ಜೊತೆ ಶುಭಾ ಪೂಂಜಾ ಧರ್ಮಸ್ಥಳಕ್ಕೆ ಭೇಟಿ

    ಚಿನ್ನಿ ಬಾಂಬ್ ಜೊತೆ ಶುಭಾ ಪೂಂಜಾ ಧರ್ಮಸ್ಥಳಕ್ಕೆ ಭೇಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ಬಿಗ್‍ಬಾಸ್ ಖ್ಯಾತಿಯ ಶುಭಾ ಪೂಂಜಾ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದಾರೆ.

    ಧರ್ಮಸ್ಥಳ ದರ್ಶನ ಎಂದು ಬರೆದುಕೊಂಡು ಶುಭಾ ಪೂಂಜಾ ಮತ್ತು ಅವರ ಪ್ರಿಯಕರ ಸುಮಂತ್ ಬಿಲ್ಲವ ಜೊತೆಯಾಗಿ ದೇವಸ್ಥಾನದ ಮುಂದೆ ನಿಂತು ತೆಗೆಸಿರುವ ಫೋಟೋವನ್ನು ಇನ್ನಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಬಿಗ್‍ಬಾಸ್ ನಂತರ ನಟಿ ಶುಭಾಪೂಂಜಾ ತಮ್ಮ ಊರಿನಲ್ಲಿ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದು, ಪವಿತ್ರ ಧಾರ್ಮಿಕ ಸ್ಥಳವಾದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತನ್ನ ಭಾವಿ ಪತಿ ಜತೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಹಾಗೂ ಶ್ರೀ ಕ್ಷೇತ್ರದಲ್ಲಿ ಇರುವ ಆನೆ ಲಕ್ಷಿಯನ್ನು ನೋಡಿ ಸಂತೋಷ ಪಟ್ಟಿದ್ದಾರೆ. ಇದನ್ನೂ ಓದಿ:  ಭಾವಿ ಪತಿ ಜೊತೆಗೆ ತವರೂರಲ್ಲಿ ಶುಭಾ

     

    View this post on Instagram

     

    A post shared by shubha Poonja . (@shubhapoonja)

    ಶುಭಾ ಪೂಂಜಾ ಬಿಗ್‍ಬಾಸ್ ಮುಗಿದ ನಂತರ ಜಾಲಿಮೂಡ್‍ನಲ್ಲಿ ಇದ್ದಾರೆ. ತಮ್ಮ ಭಾವಿ ಪತಿ ಜೊತೆಗೆ ಗೋವಾಕ್ಕೆ ಹೋಗಿ ಬಂದಿದ್ದರು. ಆದರೆ ಇದೀಗ ಅವರು ತಮ್ಮ ಊರಿಗೆ ಭಾವಿ ಪತಿ ಸುಮಂತ್ ಬಿಲ್ಲವ ಜೊತೆಗೆ ಹೋಗಿದ್ದಾರೆ. ಹಾಗೇ ಧರ್ಮಸ್ಥಳಕ್ಕೆ ಹೋಗಿ ಅಲ್ಲಿ ಮಂಜುನಾಥ ಸ್ವಾಮಿ ದರ್ಶನವನ್ನು ಪಡೆದಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ಲಂಕೆ ಅಡ್ಡಾದಲ್ಲಿ ಕರಾವಳಿ ಬೆಡಗಿ ಕಾವ್ಯಾ ಶೆಟ್ಟಿ ಸಖತ್ ಬೋಲ್ಡ್

     

    View this post on Instagram

     

    A post shared by shubha Poonja . (@shubhapoonja)

    ನಿಮ್ಮ ಜೋಡಿ ಚೆನ್ನಾಗಿದೆ, ನಂಬರ್ ಕೊಡಿ, ಪಾಸಿಟಿವ್ ವೈಬ್ಸ್, ನೀವು ತುಂಬಾ ಸಣ್ಣಾ ಆಗಿದ್ದೀರಾ. ಇವರೇ ನಾ ನಿಮ್ಮ ಚಿನ್ನಿ ಬಾಂಬ್. ದೇವರು ನಿಮಗೆ ಒಳ್ಳೆದು ಮಾಡಲಿ ಎಂದು ಅಭಿಮಾನಿಗಳು ಶುಭಾ ಅವರ ಫೋಟೋಗೆ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    shubha

    ಶೂಭಾ ಪೂಂಜಾ ಬಿಗ್‍ಬಾಸ್ ಮನೆಯಿಂದ ಬರುತ್ತಿದ್ದಂತೆ ಭಾವಿ ಪತಿಯ ಜೊತೆಗೆ ಗೋವಾ ಎಂದು ಟ್ರಿಪ್ ಮಾಡಿದ್ದರು, ಇದೀಗ ಅವರ ಊರಿಗೆ ಹೋಗಿದ್ದಾರೆ. ಮಳೆಯನ್ನು ಹೆಚ್ಚಾಗಿ ಇಷ್ಟ ಪಡುವ ಶುಭಾ ತಮ್ಮ ಊರಲ್ಲಿ ಜಿಟಿ ಜಿಟಿ ಮಳೆಯ ಸಮಯದಲ್ಲಿಯೆ ಎಂಟ್ರಿಕೊಟ್ಟಿದ್ದಾರೆ. ಮಳೆಯನ್ನು ನೆನೆಯುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹಾಗೆ ಅಲ್ಲೆ ಸುತ್ತ ಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸುವ ಅವಕಾಶ ಶುಭಾ ಅವರಿಗೆ ಬಂದಿವೆ.

  • ಧರ್ಮಸ್ಥಳಕ್ಕೆ ಭೇಟಿಕೊಟ್ಟ BB ವಿನ್ನರ್ ಮಂಜು

    ಧರ್ಮಸ್ಥಳಕ್ಕೆ ಭೇಟಿಕೊಟ್ಟ BB ವಿನ್ನರ್ ಮಂಜು

    ಬೆಂಗಳೂರು: ಬಿಗ್‍ಬಾಸ್ ವಿನ್ನರ್ ಮಂಜು ಪಾವಗಡ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನವನ್ನು ಪಡೆದಿದ್ದಾರೆ.

    ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಗ, ನನಗೆ ಜೀವನ ಕೊಟ್ಟಿದ್ದು ಮಂಜುನಾಥ ಸ್ವಾಮಿ ಎಂದು ಒಂದು ಘಟನೆಯನ್ನು ಮಂಜು ಬಿಗ್‍ಬಾಸ್ ಮನೆಯಲ್ಲಿ ನೆನೆದು ಭಾವುಕರಾಗಿದ್ದರು. ಈ ಹಿನ್ನೆಲೆ ಮಂಜು ಪಾವಗಡ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಧರ್ಮಸ್ಥಳ ಭೇಟಿಗೆ ಕಾರಣವೇನು ಗೊತ್ತಾ?

    ಮಂಜು ಪಾವಗಡ ಕಡು ಬಡತನದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ತಂದೆ ಹನುಮಂತರಾಯಪ್ಪ, ತಾಯಿ ಲಕ್ಷ್ಮಮ್ಮ. ಕೂಲಿನಾಲಿ ಮಾಡಿಕೊಂಡು ಜೀವನ ಮಾಡುವಂತಹ ಕುಟುಂಬ. ಹೀಗೆ ಬದುಕು ಸಾಗುತ್ತಿರುವಾಗ ಮಂಜು ತೀರಾ ಚಿಕ್ಕವನಾಗಿದ್ದರು. ಆಗಿನ್ನೂ ಹೆಸರಿಟ್ಟಿರಲಿಲ್ಲ. ಅವರ ನಾಮಕರಣಕ್ಕೆ ಪೋಷಕರು ಸಕಲ ಸಿದ್ಧತೆ ಮಾಡಿದ್ದರು ಆದರೆ ಅಂದು ನಡೆದಿರುವ ಘಟನೆ ವಿಚಿತ್ರವಾದ ಒಂದು ಪವಾಡಕ್ಕೆ ಸಾಕ್ಷಿಯಾಗಿತ್ತು.

    ಮಂಜು ಅವರ ತಂದೆ ರೇಷ್ಮೆಗೂಡನ್ನು ಹಾಕಿಕೊಂಡು ರಾಮನಗರಕ್ಕೆ ಹೋಗಿದ್ದರು. ಅಲ್ಲಿಂದ ಅವರು ಬರುವಷ್ಟರಲ್ಲಿ ಮಂಜು ಅವರ ಆರೋಗ್ಯ ಹದಗೆಟ್ಟಿತ್ತು ತೀರಾ ಸೀರಿಯಸ್ಸ್ ಆಗಿಬಿಟ್ಟಿತ್ತು. ಉಸಿರಾಟಕ್ಕೆ ತೊಂದರೆಯಾಗಿ ಬಾಲ್ಯದಲ್ಲೇ ಮಂಜು ಕೋಮಾಗೆ ಹೋಗಿ ಬಿಟ್ಟಿದ್ದರು. ಆಸ್ಪತ್ರೆಗೆ ತೋರಿಸಿದರಾದರೂ ಕೂಡ ಮಂಜು ಆರೋಗ್ಯ ಸ್ಥಿತಿ ಸುಧಾರಿಸಿರಲಿಲ್ಲ.

    ಮಂಜು ಅವರ ತಂದೆ ಧರ್ಮಸ್ಥಳಕ್ಕೆ ಹೋಗಿ ಶ್ರೀಮಂಜುನಾಥನ ಸನ್ನಿಧಿಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ನನ್ನ ಕುಡಿಯನ್ನು ಉಳಿಸಿಕೊಡು ಭಗವಂತ ಅಂತ ಶಿರಸಾಷ್ಟಾಂಗ ನಮಸ್ಕಾರ ಹಾಕಿ ಬೇಡಿಕೊಂಡರು. ವಿಶೇಷ ಪೂಜೆ ಮಾಡಿಸಿಕೊಂಡು ತೀರ್ಥ-ಪ್ರಸಾದ ತೆಗೆದುಕೊಂಡು ಬಂದು ಮಂಜುಗೆ ತೀರ್ಥ ಸೇವನೆ ಮಾಡಿಸಿದರು. ಇದಾಗಿ ಸ್ವಲ್ಪ ಹೊತ್ತಲ್ಲೇ ಮಂಜಣ್ಣ ನಿಟ್ಟುಸಿರು ಬಿಟ್ಟಿದ್ದರು ಅವರ ಆರೋಗ್ಯವು ಸುಧಾರಿಸಿತ್ತು. ಅಂದಿನಿಂದ ಇಂದಿನಿವರೆಗೂ ಮಂಜು ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿಗೆ ನಡೆದುಕೊಳ್ತಾರೆ. ಕಷ್ಟ-ಸುಖ-ಸಂತೋಷ ಯಾವುದೇ ಇರಲಿ ಅಲ್ಲಿಗೆ ಹೋಗಿ ಆಶೀರ್ವಾದ ಬೇಡಿಕೊಂಡು ಬರುತ್ತಾರಂತೆ. ಅವರು ಅಂದುಕೊಂಡತೆ ಅಭಿಮಾನಿಗಳ ಆಶಿರ್ವಾದ, ನಂಬಿರುವ ದೇವರ ಕೃಪೆಯಿಂದ ಬಿಗ್‍ಬಾಸ್ ವಿನ್ನರ್ ಪಟ್ಟವನ್ನು ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಮಂಜುನಾಥ ಸ್ವಾಮಿಯ ಕ್ಷೇತ್ರಕ್ಕೆ ಹೋಗಿ ದೇವರ ಆಶೀರ್ವಾದವನ್ನು ಪಡೆದು ಬಂದಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ

  • ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ : ಇಂದು ಸರ್ವಧರ್ಮ, ನಾಳೆ ಸಾಹಿತ್ಯ ಸಮ್ಮೇಳನ

    ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ : ಇಂದು ಸರ್ವಧರ್ಮ, ನಾಳೆ ಸಾಹಿತ್ಯ ಸಮ್ಮೇಳನ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷ ನಡೆಯುವ ಲಕ್ಷ ದೀಪೋತ್ಸವವು ಈ ಬಾರಿಯೂ ಅದ್ಧೂರಿಯಾಗಿ ನಡೆಯುತ್ತಿದೆ.

    ಶ್ರೀ ಮಂಜುನಾಥ ಸ್ವಾಮಿಗೆ ದೀಪೋತ್ಸವ ಅತ್ಯಂತ ಪ್ರಿಯವಾದದ್ದು. ಆದರಿಂದ ಹಿಂದಿನ ಕಾಲದಿಂದಲೂ ಮಂಜುನಾಥನ ಸನ್ನಿಧಿಯ ಸುತ್ತಲೂ ಒಂದು ಲಕ್ಷ ದೀಪಗಳನ್ನು (ಹಣತೆಗಳನ್ನು) ಬೆಳಗುವ ಮೂಲಕ ಲಕ್ಷದೀಪೋತ್ಸವವನ್ನು ಆಚರಿಸುವುದು ಇಲ್ಲಿನ ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದೀಪಗಳಿಂದಲೇ ದೇವಾಲಯವನ್ನು ಶೃಂಗರಿಸಲಾಗುತ್ತದೆ. ಹೀಗಾಗಿ ಧರ್ಮಸ್ಥಳ ಮಂಜುನಾಥನ ಸನ್ನಿಧಿ ವಿದ್ಯುತ್ ದೀಪಾಲಂಕಾರದಿಂದ ವೈಭವದಿಂದ ಕಂಗೊಳಿಸುತ್ತಿತ್ತು.

    ಕ್ಷೇತ್ರದಲ್ಲಿ ಎಲ್ಲಾ ಧಾರ್ಮಿಕ ವಿಧಿವಿಧಾನಗಳೂ ಶಾಸ್ತ್ರಬದ್ದವಾಗಿ ನೆರೆವೇರಿದ್ದು ಹಿಂದಿನ ಕಾಲದಲ್ಲಿ ಲಕ್ಷದೀಪೋತ್ಸವವಾಗುತ್ತಿದ್ದರೆ ಇದೀಗ ಲಕ್ಷಾಂತರ ದೀಪೋತ್ಸವ ನಡೆಯುತ್ತಿದೆ.

    ಪ್ರತಿವರ್ಷ ಕಾರ್ತಿಕ ಮಾಸದಂದು ಈ ಲಕ್ಷ ದೀಪೋತ್ಸವ ನಡೆಯುತ್ತಿದ್ದು, ಕ್ಷೇತ್ರದ ದೇವರಾದ ಮಂಜುನಾಥ ಸ್ವಾಮಿಯ ಮೂರ್ತಿಯನ್ನು ಮೆರವಣಿಗೆ ಮಾಡಿ, ಪ್ರಮುಖ ಐದು ಕಟ್ಟೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ದೇವರನ್ನು ನೋಡಲು ಕ್ಷೇತ್ರಕ್ಕೆ ಹೋಗಲಾಗದವರಿಗೆ ದೇವರೇ ಅವರ ಊರಿಗೆ ಬರುತ್ತಾನೆ ಎನ್ನುವ ನಂಬಿಕೆ ಇದ್ದು ಅದು ಇಂದಿಗೂ ಮುಂದುವರಿದಿದೆ.

    ದೀಪೋತ್ಸವದ ಪ್ರಯುಕ್ತ ಬೆಳ್ಳಿಯ ಬ್ರಹ್ಮರಥೋತ್ಸವವೂ ಅದ್ದೂರಿಯಾಗಿ ನಡೆಯಿತು. ದೇಶ ವಿದೇಶದಿಂದ ಆಗಮಿಸಿದ ಲಕ್ಷಾಂತರ ಮಂದಿ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರಿತು.

    ಲಕ್ಷದೀಪೋತ್ಸವದ ಅಂಗವಾಗಿ ಬುಧವಾರ ಸರ್ವಧರ್ಮ ಸಮ್ಮೇಳನ ನಡೆಯಲಿದ್ದರೆ, ಗುರುವಾರ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನವೂ ನಡೆಯಲಿದೆ. ಇಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದ 86ನೇ ಅಧಿವೇಶನವನ್ನು ಗುಜರಾತ್‍ನ ದ್ವಾರಕದ ಜಗದ್ಗುರು ಸೂರಾರಯಚಾರ್ಯ ಶ್ರೀಕೃಷ್ಣ ದೇವನಂದಗಿರಿ ಮಹಾರಾಜ್ ಉದ್ಘಾಟಿಸಲಿದ್ದಾರೆ. ಶಿಕ್ಷ ಣ ತಜ್ಞ, ಸಮಾಜ ಸುಧಾರಕ ಬೆಂಗಳೂರಿನ ಎಂ.ಮಮ್ತಾಜ್ ಆಲಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

    ಗುರುವಾರ ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 86ನೇ ಅಧಿವೇಶನವನ್ನು ಉದ್ಯಮಿ ವಿಜಯ ಸಂಕೇಶ್ವರ ಉದ್ಘಾಟಿಸಲಿದ್ದಾರೆ. ಖ್ಯಾತ ವಿಮರ್ಶಕ ಸಾಗರದ ಪ್ರೊ. ಟಿ.ಪಿ. ಅಶೋಕ್ ಅಧ್ಯಕ್ಷತೆ ವಹಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇದು ಎಳನೀರಲ್ಲ ಅಮೃತ ಎಂದು ಕರಾವಳಿಯ ಎಳನೀರಿನ ಸವಿಗೆ ಮನಸೋತ ಮೋದಿ!

    ಇದು ಎಳನೀರಲ್ಲ ಅಮೃತ ಎಂದು ಕರಾವಳಿಯ ಎಳನೀರಿನ ಸವಿಗೆ ಮನಸೋತ ಮೋದಿ!

    ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಉಪವಾಸವಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಬೆಳಗ್ಗೆ ಎದ್ದವರು ಒಂದು ಹನಿ ನೀರೂ ಕುಡಿಯದೆ ಕರ್ನಾಟಕಕ್ಕೆ ಆಗಮಿಸಿದ್ದರು. 11 ಗಂಟೆ ಸುಮಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಬಂದಿಳಿದರು. ಬಿರು ಬೇಸಿಗೆಯಂತಿದ್ದ ವಾತಾವರಣ- ನೆತ್ತಿ ಸುಡುತ್ತಿದ್ದ ಸೂರ್ಯ ಎಲ್ಲರನ್ನೂ ಹೈರಾಣಾಗಿಸಿತ್ತು.

    ಆದ್ರೆ ಪ್ರಧಾನಿ ಮೋದಿ ಮಾತ್ರ ಗುಟುಕು ನೀರನ್ನೂ ಕುಡಿದಿರಲಿಲ್ಲ. ನರೇಂದ್ರ ಮೋದಿ ದೇವರ ದರ್ಶನ ಆಗುವವರೆಗೆ ಕೇವಲ ತೀರ್ಥವನ್ನು ಮಾತ್ರ ಸೇವನೆ ಮಾಡಿದ್ದರು. ಧ್ಯಾನ-ಪೂಜೆ ಮುಗಿಸಿ ಮಂಜುನಾಥನ ಕ್ಷೇತ್ರದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರು ಊರಿನ ಎಳನೀರನ್ನು ಕೊಟ್ಟರು. ಜೊತೆಗೆ ಒಣ ಹಣ್ಣುಗಳನ್ನು ಕೊಟ್ಟು ಸತ್ಕರಿಸಿದರು.

    ನಾನಿವತ್ತು ಸಂಪೂರ್ಣ ಉಪವಾಸ ಎಂದು ಹೇಳಿದ ನರೇಂದ್ರ ಮೋದಿ ಯಾವುದೂ ಬೇಡ ಎಂದರು. ಇದಕ್ಕುತ್ತರಿಸಿದ ಡಾ. ಹೆಗ್ಗಡೆ ಇದು ಎಳನೀರು ದೇವರ ಪ್ರಸಾದದಂತೆ ಸ್ವೀಕಾರ ಮಾಡಿ ಎಂದರು. ಒಪ್ಪಿದ ಪ್ರಧಾನಿ ನರೇಂದ್ರ ಮೋದಿ ಊರಿನ ಎಳನೀರನ್ನು ಸ್ವೀಕರಿಸಿದರು. ಎಳನೀರು ಕುಡಿದ ಮೋದಿ ಶಿವನ ಕ್ಷೇತ್ರದಲ್ಲಿ ಅಮೃತ ಕುಡಿದಂತಾಯ್ತು. ನಾನು ಧನ್ಯನಾದೆ ಎಂದು ಹೇಳಿದರು. ಡ್ರೈ ಫ್ರೂಟ್ಸ್‍ಗಳನ್ನು ವಿನಯದಿಂದಲೇ ತಿರಸ್ಕರಿಸಿದರು.

    ಸ್ಟ್ರಾ ಉಪಯೋಗಿಸದೆ ಪ್ರಧಾನಿ ಮೋದಿ ಎಳನೀರು ಕುಡಿದದ್ದು ದೇವಸ್ಥಾನದ ಒಳಗಿದ್ದ ಎಲ್ಲರಿಗೂ ಇಷ್ಟವಾಗಿದೆ. ಸಾಮಾನ್ಯ ಜನರಂತೆ ಸ್ಟ್ರಾ ಇಲ್ಲದೆ ಮೋದಿ ಎಳನೀರು ಕುಡಿದದ್ದನ್ನು ದೇವಳದ ಅರ್ಚಕರು, ಸಿಬ್ಬಂದಿ ಹಾಡಿ ಹೊಗಳುತ್ತಿದ್ದಾರೆ. ನಮ್ಮ ಪ್ರಧಾನಿ ಎಷ್ಟೊಂದು ಸಿಂಪಲ್ ಜನ ಮಾರ್ರೆ.., ಅಷ್ಟು ದೊಡ್ಡ ವ್ಯಕ್ತಿ ಇಷ್ಟೊಂದು ಸಿಂಪಲ್ಲಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.