Tag: ಶ್ರೀ ಕೃಷ್ಣ ಜನ್ಮಾಷ್ಟಮಿ

  • ಕೃಷ್ಣನ ವೇಷದಲ್ಲಿ ಜ್ಯೂನಿಯರ್ ಚಿರು – ನನ್ನ ಬೆಣ್ಣೆ, ಮುದ್ದು, ಬಂಗಾರ ಅಂದ ಮೇಘನಾ

    ಕೃಷ್ಣನ ವೇಷದಲ್ಲಿ ಜ್ಯೂನಿಯರ್ ಚಿರು – ನನ್ನ ಬೆಣ್ಣೆ, ಮುದ್ದು, ಬಂಗಾರ ಅಂದ ಮೇಘನಾ

    ಬೆಂಗಳೂರು: ದೇಶಾದ್ಯಂತ ಇಂದು ಜನರು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಡಗರದಿಂದ ಆಚರಿಸುತ್ತಿದ್ದಾರೆ. ಈ ನಡುವೆ ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರ ಜ್ಯೂನಿಯರ್ ಚಿರು ಕೃಷ್ಣನ ವೇಷದಲ್ಲಿ ಮಿಂಚಿದ್ದಾನೆ. ಸದ್ಯ ಈ ಫೋಟೋವನ್ನು ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಾಮಾನ್ಯವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ ಫೋಟೋ ಹಿಡಿಸುತ್ತಾರೆ. ಜೊತೆಗೆ ಮನೆಯ ತುಂಬಾ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಿಡಿಸಿ ಸಂಭ್ರಮಿಸುತ್ತಾರೆ. ಈ ವಿಶೇಷ ದಿನದಂದು ಜ್ಯೂನಿಯರ್ ಚಿರು ಕೂಡ ಕೃಷ್ಣನ ವೇಷ ಧರಿಸಿ ಮುದ್ದು-ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ವಿಶೇಷವೆಂದರೆ ಜ್ಯೂನಿಯರ್ ಚಿರುಗೆ ನಟ ಪನ್ನಗಭರಣ ಮಗ ವೇದ ಭರಣ ಕೂಡ ಸಾಥ್ ನೀಡಿದ್ದು, ಇಬ್ಬರು ಸೋಫಾ ಮೇಲೆ ಕುಳಿತು ನವಿಲು ಗರಿ ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಚಿರು ಯಾವಾಗಲೂ ನೀನೇ ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್

    Junior Chiru

    ಇದೀಗ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮಗನ ಕ್ಯೂಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ನನ್ನ ಬೆಣ್ಣೆ, ಮುದ್ದು, ಬಂಗಾರ ಎನ್ನುತ್ತಾ, ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಇತ್ತೀಚೆಗಷ್ಟೇ ಜ್ಯೂನಿಯರ್ ಚಿರುಗೆ 10 ತಿಂಗಳು ತುಂಬಿದ್ದು, ಅದೇ ಖುಷಿಯಲ್ಲಿ ಮೇಘನಾ ರಾಜ್ ಮಗ ಜೊತೆ ಒಂದೇ ರೀತಿಯ ಮ್ಯಾಚಿಂಗ್ ಡ್ರೆಸ್ ಧರಿಸಿ ಅಮ್ಮ ಮಗ ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ:ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್

  • ಉಡುಪಿಯಲ್ಲಿ ಸರಳ ಕೃಷ್ಣ ಜನ್ಮಾಷ್ಟಮಿ- ಕೊಡಗಿಗೆ ದೇವರ ಪ್ರಸಾದ: ಪಲಿಮಾರು ಶ್ರೀ

    ಉಡುಪಿಯಲ್ಲಿ ಸರಳ ಕೃಷ್ಣ ಜನ್ಮಾಷ್ಟಮಿ- ಕೊಡಗಿಗೆ ದೇವರ ಪ್ರಸಾದ: ಪಲಿಮಾರು ಶ್ರೀ

    ಉಡುಪಿ: ಜಲಪ್ರಳಯವಾಗಿರುವ ಕೊಡಗು ಸಂಕಷ್ಟದಲ್ಲಿ ಇರುವಾಗ ನಾವು ವಿಜ್ರಂಭಣೆಯಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಸರಿಯಲ್ಲ. ಈ ಬಾರಿ ಸರಳವಾಗಿ, ಭಕ್ತಿಯಿಂದ ಅಷ್ಟಮಿ ಆಚರಿಸೋಣ ಅಂತ ಉಡುಪಿಯ ಕೃಷ್ಣ ಮಠದ ಪರ್ಯಾಯ ಪಲಿಮಾರು ಸ್ವಾಮೀಜಿ ಕರೆ ನೀಡಿದ್ದಾರೆ.

    ನಗರದಲ್ಲಿ ಅಷ್ಟಮಿ ಸಂದೇಶ ನೀಡಿದ ವಿದ್ಯಾಧೀಶ ಸ್ವಾಮೀಜಿ ನಾವು ಕೊಡಗಿಗಾಗಿ ಭಕ್ತಿಯ ಪ್ರಾರ್ಥನೆ ಮಾಡುತ್ತೇವೆ. ನಷ್ಟವನ್ನೆಲ್ಲ ತುಂಬಿಸು ದೇವಾ ಅಂತ ಪೂಜೆ ಸಲ್ಲಿಸುತ್ತೇವೆ. ಧಾರ್ಮಿಕ ವಿಧಿ ವಿಧಾನಗಳು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಈ ಬಾರಿ ಸರಳವಾಗಿ ಅಷ್ಟಮಿ ಆಚರಿಸುತ್ತೇವೆ ಎಂದು ಹೇಳಿದರು.

    ನೆರೆ, ಭೂ ಕುಸಿತದಿಂದಾಗಿ ತೊಂದರೆಗೀಡಾದವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಮಡಿಕೇರಿಯಲ್ಲಿ ಜನ ಬಹಳ ಸಂಕಷ್ಟದಲ್ಲಿದ್ದಾರೆ. ನಿರಾಶ್ರಿತರಿಗೆ ಕೃಷ್ಣ ಪ್ರಸಾದ ಕಳುಹಿಸಿ ಕೊಡಲಾಗುವುದು. ಕೃಷ್ಣ ಪ್ರಸಾದದ ರೂಪದಲ್ಲಿ ಉಂಡೆ, ಚಕ್ಕುಲಿ, ಹೊಸ ಬಟ್ಟೆ ತಲುಪಿಸುತ್ತೇವೆ ಅಂತ ತಿಳಿಸಿದ್ರು.

    ಕಷ್ಟ ಬಂದಲ್ಲಿ ಶ್ರೀ ಕೃಷ್ಣ ಇರುತ್ತಾನಂತೆ. ಪ್ರಕೃತಿ ವಿಕೋಪ ಆದಾಗಲೂ ಕೃಷ್ಣ ರಕ್ಷಣೆ ನೀಡಿದ್ದಾನೆ. ನಮ್ಮ ಕೊಡಗು ಜಿಲ್ಲೆಗೆ ನೋವಾಗಿದೆ. ಹಾನಿಗೊಳಗಾಗಿದೆ. ಅಲ್ಲಿನ ಜನ ಶೀಘ್ರ ಪುನರ್ ಶಕ್ತಿ ಪಡೆದುಕೊಳ್ಳುತ್ತಾರೆ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸದ್ದಿಲ್ಲದೇ ಉಡುಪಿಗೆ ಬಂದು ಹೋದ್ರು ಪ್ರಧಾನಿ ಮೋದಿ!

    ಸದ್ದಿಲ್ಲದೇ ಉಡುಪಿಗೆ ಬಂದು ಹೋದ್ರು ಪ್ರಧಾನಿ ಮೋದಿ!

    ಉಡುಪಿ: ಇಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮುಗಿದು ಎರಡು ದಿನ ಕಳೆದಿದೆ. ಆದರೆ ಇದೀಗ ಅಷ್ಟಮಿ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋಗಿದ್ದರು ಅನ್ನೋ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ರಥಬೀದಿಯಲ್ಲಿ ಮೋದಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಯಾವುದೇ ಸೆಕ್ಯೂರಿಟಿ ಇಲ್ಲದೆ, ಸುದ್ದಿಯೇ ಇಲ್ಲದೆ ಮೋದಿ ಬಂದು ಹೋದ್ರಾ ಅಂತ ಟೆನ್ಶನ್ ಮಾಡಿಕೊಳ್ಳಬೇಡಿ. ಉಡುಪಿಗೆ ಬಂದಿರೋದು ಪ್ರಧಾನಿ ಮೋದಿಯಲ್ಲ. ಬದಲಾಗಿ ಥೇಟ್ ಮೋದಿಯನ್ನೇ ಹೋಲುವ ಒಬ್ಬ ವ್ಯಕ್ತಿ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿರುವುದನ್ನು ಕಾರ್ಯಕ್ರಮಕ್ಕೆ ಬಂದವರು ಸೆರೆ ಹಿಡಿದಿದ್ದಾರೆ.

    ಹಿರಿಯಡ್ಕದ ಸದಾನಂದ ನಾಯಕ್ ಪ್ರಧಾನಿ ಮೋದಿ ಅವರನ್ನು ಹೋಲುತ್ತಾರೆ. ಮುಖ, ಗಡ್ಡ ಮತ್ತು ವಾಕಿಂಗ್ ಸ್ಟೈಲ್ ಎಲ್ಲವೂ ಥೇಟ್ ಮೋದಿ ಅವರಂತೆಯೇ. ನೀವು ಮೋದಿಯಂತೆಯೇ ಕಾಣುತ್ತಿರಾ ಜುಬ್ಬ ಹಾಕ್ಕೊಳ್ಳಿ ಅಂತ ಎಲ್ಲರೂ ಸಜೇಶನ್ ಮಾಡಿದ್ದರು. ಹೀಗಾಗಿ ಸದಾನಂದ ಕಾಮತ್ ಅದೇ ಸ್ಟೈಲಲ್ಲಿ ಉಡುಪಿ ಕೃಷ್ಣಜನ್ಮಾಷ್ಟಮಿಗೆ ಹೋಗಿದ್ದರು. ಇದೀಗ ಆ ವೀಡಿಯೋ ಫೇಸ್ ಬುಕ್ ಮತ್ತು ವಾಟ್ಸಾಪ್‍ನಲ್ಲಿ ಹರಿದಾಡುತ್ತಿದೆ.

    ಹಿರಿಯಡ್ಕದ ಸದಾನಂದ ನಾಯಕ್ ಅಡುಗೆ ಕೆಲಸಕ್ಕೆ ಹೋಗುತ್ತಾರೆ. ಅಡುಗೆ ಕಾರ್ಯಕ್ರಮಗಳಿಗೆ ಹೋದಲ್ಲಿ ಜನ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಾರೆ. ಇಂದು ಪ್ರಧಾನಿ ಮೋದಿ ಬರ್ತ್‍ಡೇ ಆಗಿರೋದ್ರಿಂದ ಈ ವೀಡಿಯೋ ಎಲ್ಲರ ಮೊಬೈಲ್‍ನಲ್ಲಿ ಹರಿದಾಡುತ್ತಿದೆ.

    https://www.youtube.com/watch?v=Fs____nayD0&feature=youtu.be