Tag: ಶ್ರೀಹರಿಕೋಟಾ

  • ಶ್ರೀಹರಿಕೋಟಾದಲ್ಲಿ 3ನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಸಂಪುಟ ಅಸ್ತು

    ಶ್ರೀಹರಿಕೋಟಾದಲ್ಲಿ 3ನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಸಂಪುಟ ಅಸ್ತು

    ಅಮರಾವತಿ: ಆಂಧ್ರಪ್ರಧೇಶದ (Andhra Pradesh) ಸತೀಶ್ ಧವನ್ (Satish Dhawan Space Centre) ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರದ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

    ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರದ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದೆ. ಈ ಉಡಾವಣಾ ಕೇಂದ್ರ ಇಸ್ರೋದ ಎನ್‌ಜಿಎಲ್‌ವಿ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.ಇದನ್ನೂ ಓದಿ: Chhattisgarh| ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ- 12 ಮಾವೋವಾದಿಗಳು ಬಲಿ

    ಈ ಮೂಲಕ ಮೂರನೇ ಉಡಾವಣಾ ಕೇಂದ್ರವು ಭಾರತೀಯ ಅಂತರಿಕ್ಷ ನಿಲ್ದಾಣ ಸ್ಥಾಪನೆಗೆ ಹಾಗೂ 2024ರ ವೇಳೆಗೆ ಮಾನವನನ್ನು ಚಂದ್ರನ ಬಳಿ ಕಳುಹಿಸುವ ಯೋಜನೆಗೆ ಇದು ಸಹಕಾರಿಯಾಗಲಿದೆ. ಉಡಾವಣಾ ಕೇಂದ್ರವನ್ನು 4 ವರ್ಷಗಳ ಅವಧಿಯಲ್ಲಿ 3,984.86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ನಿರೀಕ್ಷೆಯಿದ್ದು, ಇದು ಉಡಾವಣಾ ಕೇಂದ್ರದ ಸ್ಥಾಪನೆ ಮತ್ತು ವಾಹನ ಜೋಡಣೆ, ಉಪಗ್ರಹ ತಯಾರಿಕೆ ಮತ್ತು ಇಂಧನ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

    ಸದ್ಯ ಬಾಹ್ಯಾಕಾಶ ಕೇಂದ್ರದಲ್ಲಿ ಎರಡು ಉಡಾವಣಾ ಕೇಂದ್ರಗಳಿದ್ದು, ಪಿಎಸ್‌ಎಲ್‌ವಿ, ಎಸ್‌ಎಸ್‌ಎಲ್‌ವಿ ರಾಕೆಟ್‌ಗಳ ಉಡಾವಣೆಗಾಗಿ 30 ವರ್ಷಗಳ ಹಿಂದೆ ಮೊದಲ ಉಡಾವಣಾ ಕೇಂದ್ರವನ್ನು ಸ್ಥಾಪಿಸಲಾಯಿತು. ಅದಾದ 20 ವರ್ಷಗಳ ಬಳಿಕ ಎರಡನೇ ಉಡಾವಣಾ ಕೇಂದ್ರವನ್ನು ಸ್ಥಾಪಿಸಲಾಯಿತು. ಇದು ಜಿಎಸ್‌ಎಲ್‌ವಿ ಹಾಗೂ ಎಲ್‌ವಿಎಮ್3 ರಾಕೆಟ್‌ಗಳ ಉಡಾವಣೆಗಾಗಿ ಬಳಸಲಾಗುತ್ತದೆ.

    ಇದೀಗ ಹೊಸ ಉಡಾವಣಾ ಕೇಂದ್ರವು, 2ನೇ ಉಡಾವಣಾ ಕೇಂದ್ರದ ಬ್ಯಾಕಪ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರವಾದ ರಾಕೆಟ್ ಉಡಾವಣೆಗಾಗಿ ಬಳಸಬಹುದಾಗಿದೆ.ಇದನ್ನೂ ಓದಿ:ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು- ಉಪರಾಷ್ಟ್ರಪತಿ ಜಗದೀಪ್ ಧನಕರ್

     

  • Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    – ಮೋದಿ, ಇಸ್ರೋ ಟೀಂಗೆ ಸಚಿವ ಧನ್ಯವಾದ

    ಶ್ರೀಹರಿಕೋಟಾ: ಇಂದು ಬೆಳಗ್ಗೆ 11.50ಕ್ಕೆ ಆಂಧ್ರಪ್ರದೇಶದ (Andhrapradesh) ಶ್ರೀಹರಿಕೋಟಾದಿಂದ (Sriharikota) ಸೂರ್ಯ ಶಿಕಾರಿಗೆ ಹೊರಟ ಆದಿತ್ಯ ಎಲ್ 1 (Aditya L1) ಮಿಷನ್ ಯಶಸ್ವಿಯಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.

    ಮಿಷನ್ ಯಶಸ್ವಿ ಬಗ್ಗೆ ಘೋಷಣೆ ಮಾಡಿದ ಅವರು, ಯಶಸ್ವಿಯಾಗಿ ಆದಿತ್ಯ ಎಲ್1 ಆರ್ಬಿಟ್ ಗೆ ಇನ್ ಸರ್ಟ್ ಮಾಡಲಾಗಿದೆ ಎಂದರು. ಇದೇ ವೇಳೆ ಆದಿತ್ಯ ಐ1 ಟೀಂಗೆ ಸೋಮನಾಥ್ (S Somanath) ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    ಈ ಸಂದರ್ಭದಲ್ಲಿ ಚಂದ್ರಯಾನದ (Chandrayaan-3) ಬಗ್ಗೆ ಮಾಹಿತಿ ನೀಡಿದ ಸೋಮನಾಥ್, ಚಂದ್ರಯಾನದ ಲ್ಯಾಂಡರ್, ರೋವರ್ ಇನ್ನೂ ಯಶಸ್ವಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿವೆ. ಗುಡ್ ನ್ಯೂಸ್ ಅಂದ್ರೆ ರೋವರ್ 100 ಮೀಟರ್ ವರೆಗೂ ಸಂಚಾರ ಮಾಡಿದೆ. ಚಂದ್ರಯಾನದ ಅಧ್ಯಯನ ಯಶಸ್ವಿಯಾಗಿ ಮುಂದುವರಿದಿದೆ ಎಂದರು.

    ಇತ್ತ ಸಚಿವ ಜೀತೇಂದ್ರ ಸಿಂಗ್ ಅವರು ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಧಾನಿ ಮೋದಿ ಹಾಗೂ ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದ ಹೇಳ್ತೀನಿ. ಇಸ್ರೋ ವಿಜ್ಞಾನಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಚಂದ್ರಯಾನ ಯಶಸ್ವಿ ಬಳಿಕ ಆದಿತ್ಯ ಎಲ್‌ 1 ಯಶಸ್ವಿಯಾಗಿದೆ. ಈ ಸಾಧನೆ ವಿಶ್ವದ ಗಮನ ಸೆಳೆದಿದೆ. ಆದಿತ್ಯ ಎಲ್‌ 1ಗೆ ಉಪಕರಣ ಸಿದ್ಧ ಮಾಡಿಕೊಂಡ ವಿವಿಧ ಸಂಸ್ಥೆಗಳಿಗೆ ಧನ್ಯವಾದಗಳು ಎಂದು ಅವರು ಹೇಳಿದರು.

    ಒಟ್ಟಿನಲ್ಲಿ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೂರ್ಯಯಾನ ಯಶಸ್ವಿಯಾಗುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದ್ದು, ಭಾರತೀಯರ ಕನಸು ನನಸಾಗಿದೆ. ಇನ್ನು ಮುಂದೆ ಆದಿತ್ಯ ಎಲ್‌ 1 125 ದಿನ ತನ್ನ ಜರ್ನಿ ನಡೆಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರನ ಮೇಲೆ ಭಾರತ – 14 ದಿನಗಳ ನಂತ್ರ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ ಕಥೆ ಏನು?

    ಚಂದ್ರನ ಮೇಲೆ ಭಾರತ – 14 ದಿನಗಳ ನಂತ್ರ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ ಕಥೆ ಏನು?

    ಬೆಂಗಳೂರು: ಚಂದ್ರಯಾನ- 3 (Chandrayaan-3) ಮಿಷನ್‌ ಸಕ್ಸಸ್‌ ಆಗಿದ್ದು ವಿಕ್ರಮ್‌ ಲ್ಯಾಂಡರ್‌ (Vikram Lander) ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಯಶಸ್ವಿಯಾಗಿ ಕಾಲಿಟ್ಟಿದೆ. 6 ವೈಜ್ಞಾನಿಕ ಪೇಲೋಡ್‌ಗಳನ್ನು (Scientific Payloads) ಹೊತ್ತು ತಂದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಚಂದ್ರನ ಅಂಗಳದಲ್ಲಿ ನಡೆದಾಡಲು ಶುರು ಮಾಡಿದೆ.

    ಲ್ಯಾಂಡರ್‌ ಹಾಗೂ ರೋವರ್‌ ಜೀವಿತಾವಧಿ ಕೇವಲ 1 ಚಂದ್ರನ ದಿನ (ಭೂಮಿಯ 14 ದಿನಗಳು) ಮಾತ್ರ. ವಿಕ್ರಮ್ ಮತ್ತು ಪ್ರಗ್ಯಾನ್‌ಗೆ (Pragyan Rover) ಅಲ್ಲಿ ಅಧ್ಯಯನ ನಡೆಸಲು ಇರುವ ಸಮಯವಿದು. ಅಷ್ಟರ ಒಳಗೆ ಈ ಎರಡೂ ತಂತ್ರಜ್ಞಾನಗಳು ವಿಜ್ಞಾನಿಗಳ ಕುತೂಹಲ ತಣಿಸುವ ಮಹತ್ವದ ಅಂಶಗಳನ್ನ ಭೂಮಿಗೆ ರವಾನಿಸಬೇಕಿದೆ. ಏಕೆಂದರೆ 14 ದಿನಗಳು ಕಳೆದ ಬಳಿಕ ಕಾರ್ಯಾಚರಣೆ ನಡೆಸಲು ಅಲ್ಲಿ ಬೇಕಾದ ಸೌರಶಕ್ತಿ ಸಿಗುವುದಿಲ್ಲ. ಹಾಗಾದರೆ 14 ದಿನಗಳ ನಂತರ ಇವೆರಡ ಕಥೆ ಏನು ಎಂಬುದೇ ಪ್ರಶ್ನೆ.

    ಚಂದ್ರನಲ್ಲಿ 14 ದಿನಗಳು ಹಗಲು, 14 ದಿನಗಳು ಇರುಳು ಕವಿದಿರುತ್ತದೆ. ಇರುಳಿನ ಸಂದರ್ಭದಲ್ಲಿ ಸೌರ ಶಕ್ತಿ ಇಲ್ಲದ ಕಾರಣ ಅವು (ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಗ್ಯಾನ್‌ ರೋವರ್‌) ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಮುಖ್ಯವಾಗಿ ಕತ್ತಲಿನಲ್ಲಿ ಚಂದ್ರನ ಮೇಲ್ಮೈ ತಾಪಮಾನ -208 ಡಿಗ್ರಿ ಫ್ಯಾರನ್‌ ಹೀಟ್ ಅಥವಾ -133 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ಇಷ್ಟು ಚಳಿಯ ವಾತಾವರಣದಲ್ಲಿ ಕಾರ್ಯಾಚರಣೆ ನಡೆಸುವಷ್ಟು ಸಾಮರ್ಥ್ಯ ಲ್ಯಾಂಡರ್, ರೋವರ್ ಹಾಗೂ ಅವುಗಳಲ್ಲಿನ ಪೇಲೋಡ್‌ಗಳಲ್ಲಿ ಇರುವುದಿಲ್ಲ. ಹೀಗಾಗಿ ಕಾರ್ಯಾಚರಣೆ ವೇಳೆ ಅವು ಸಾಕಷ್ಟು ಸಮಸ್ಯೆ ಎದುರಿಸಬಹುದು. ಈ ಅವಧಿಯಲ್ಲಿ ಕೂಡ ಚಂದ್ರನ ಮೇಲಿನ ಲ್ಯಾಂಡರ್ ಜೊತೆ ರೋವರ್ ಸಂಪರ್ಕದಲ್ಲಿ ಇರುತ್ತದೆ. ಅದರ ಮೂಲಕ ಬೆಂಗಳೂರಿನಲ್ಲಿರುವ ಇಸ್ರೋದ ಮಿಷನ್ ಕಮಾಂಡ್ ಕೇಂದ್ರಕ್ಕೆ ಮಾಹಿತಿಗಳು ರವಾನೆಯಾಗುತ್ತದೆ. ಈ ವೇಳೆಯಲ್ಲಿ ರೋವರ್ ಜೊತೆಗೆ ಇಸ್ರೋ ನೇರ ಸಂಪರ್ಕ ಹೊಂದಿರುವುದಿಲ್ಲ.

    14 ದಿನಗಳ ನಂತರ ಮುಂದೇನು?
    ಚಂದ್ರನ ಕತ್ತಲೆಯ ಅವಧಿ ಮುಗಿದ ಬಳಿಕ ಅಥವಾ ಅಮಾವಾಸ್ಯೆ ಅವಧಿ ಕಳೆದ ಮೇಲೆ ಮತ್ತೆ ದಕ್ಷಿಣ ಧ್ರುವದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ. ಆಗ ರೋವರ್ ಹಾಗೂ ಲ್ಯಾಂಡರ್ ಪುನಃ ಸಕ್ರಿಯವಾಗುತ್ತವೆಯೇ? ಅದರ ಸಾಧ್ಯತೆ ತೀರಾ ಕಡಿಮೆಯಾದರೂ ಅಲ್ಲಗಳೆಯಲಾಗದು. ಹಾಗೊಮ್ಮೆ ರೋವರ್ ಮತ್ತು ಲ್ಯಾಂಡರ್ ಸಕ್ರಿಯವಾಗಿದ್ದರೆ ಅದು ವಿಜ್ಞಾನದ ಅದೃಷ್ಟವಾಗಿರಲಿದೆ. ಅದರ ಯಂತ್ರಗಳು 14 ದಿನಗಳ ವಿಪರೀತ ಚಳಿ ಸಹಿಸಿಕೊಂಡು, ಬಿಸಿಲು ಬಿದ್ದಾಗ ಕಾರ್ಯಾಚರಣೆ ನಡೆಸಿದರೆ, ಮತ್ತೆ 14 ದಿನಗಳ ಅಧ್ಯಯನಕ್ಕೆ ಅವಕಾಶ ಸಿಗಲಿದೆ. ಇದನ್ನೂ ಓದಿ: ನಮ್ಗೆ ಚಂದ್ರನ ಬಳಿಗೆ ಹೋಗುವ ಅಗತ್ಯವಿಲ್ಲ, ಚಂದ್ರನ ಮೇಲೆಯೇ ಬದುಕುತ್ತಿದ್ದೇವೆ: ಪಾಕ್‌ ಪ್ರಜೆ ವ್ಯಂಗ್ಯ

    ಯೋಜನೆ ಮುಗಿದ ಬಳಿಕ ಏನು?
    ಚಂದ್ರನಲ್ಲಿನ ತಮ್ಮ ಹೊಣೆಗಾರಿಕೆ ಪೂರ್ಣಗೊಳಿಸಿದ ನಂತರ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ವಾಪಸ್ ಭೂಮಿಗೆ ಬರುವುದಿಲ್ಲ. ಚಂದ್ರಲೋಕಕ್ಕೆ ತೆರಳಿದ ಅವುಗಳ ಜೀವನ ಅಲ್ಲಿಯೇ ಅಂತ್ಯಗೊಳ್ಳಲಿವೆ. ತಮ್ಮ ಪ್ರಯೋಗಗಳನ್ನು ಮುಗಿಸಿದ ರೋವರ್ ಹಾಗೂ ಲ್ಯಾಂಡರ್ ಚಂದಮಾಮನಲ್ಲಿ ಪಳೆಯುಳಿಕೆಗಳಾಗಿ ಉಳಿಯಲಿವೆ. ಮುಂದೊಂದು ದಿನ ಚಂದ್ರನ ಅಂಗಳಕ್ಕೆ ಮಾನವ ಕಾಲಿಟ್ಟಾಗ ಚಂದ್ರನ ಮೇಲೆ ಆಟಿಕೆಗಳಂತೆ ಕಾಣುವ ಈ ಲ್ಯಾಂಡರ್ ಮತ್ತು ರೋವರ್ ಸಿಗಬಹುದು. ಚಂದ್ರಯಾನ-2ರ ಪುಡಿಯಾದ ಲ್ಯಾಂಡರ್‌ನ ಅವಶೇಷಗಳೂ ಕಾಣಿಸಬಹುದು ಎನ್ನಲಾಗಿದೆ. ಇದನ್ನೂ ಓದಿ: ಚಂದ್ರನ ಮೇಲೆ ನಡೆದಾಡಿದ ಪ್ರಗ್ಯಾನ್‌ ರೋವರ್‌ – ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬರಲು ತಡವಾಗಿದ್ಯಾಕೆ?

    ದಕ್ಷಿಣ ಧ್ರುವ ಆಯ್ಕೆ ಮಾಡಿಕೊಂಡಿದ್ದೇಕೆ?
    ಭಾರತ ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್‌ ಲ್ಯಾಂಡಿಗ್‌ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಗೆ ಸಾಧಿಸಿದೆ. ದಕ್ಷಿಣ ಧ್ರುವ ಪ್ರದೇಶವು ನಾಸಾದ ಸಿಬ್ಬಂದಿ ಅಪೊಲೊ ಲ್ಯಾಂಡಿಂಗ್‌ಗಳು ಸೇರಿದಂತೆ ಇತರ ಕಾರ್ಯಾಚರಣೆಗಳಿಂದ ಗುರಿಯಾಗಿರುವ ಸಮಭಾಜಕ ಪ್ರದೇಶದಿಂದ ದೂರವಿದೆ. ಇಲ್ಲಿನ ಪ್ರದೇಶ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ಕೂಡಿರುತ್ತದೆ. ಚಂದ್ರಯಾನ-3 ಮಿಷನ್‌ನ ಸಂಶೋಧನೆಗಳು ಚಂದ್ರನ ನೀರಿನ ಮಂಜುಗಡ್ಡೆಯ ಅಧ್ಯಯನವನ್ನ ಮುಂದುವರಿಸಬಹುದು. ಜೊತೆಗೆ ಚಂದ್ರನ ಮೇಲ್ಮೈನಲ್ಲಿರುವ ಇತರೇ ಅತ್ಯಮೂಲ್ಯ ಸಂಪನ್ಮೂಲಗಳ ಅಧ್ಯಯನ ಗುರಿ ಹೊಂದಿದೆ. ಅದಕ್ಕಾಗಿ ಭಾರತ ದಕ್ಷಿಣ ಧ್ರುವವನ್ನ ಆಯ್ಕೆ ಮಾಡಿಕೊಂಡಿದೆ.

    ಜುಲೈ 14 ರಂದು ಚಂದ್ರಯಾನ-3 ನೌಕೆಯನ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. 41 ದಿನಗಳ ಸುದೀರ್ಘ ಪ್ರಯಾಣದ ನಂತರ ವಿಕ್ರಮ್‌ ಲ್ಯಾಂಡರ್‌ ಚಂದ್ರಯನ ಮೇಲೆ ಯಶಸ್ವಿಯಾಗಿ ಕಾಲಿಟ್ಟಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಓಷನ್‍ಸ್ಯಾಟ್, 8 ಇತರೆ ಉಪಗ್ರಹಗಳನ್ನು ಹೊತ್ತ PSLV-C54 ರಾಕೆಟ್ ಉಡಾಯಿಸಿದ ಇಸ್ರೋ

    ಓಷನ್‍ಸ್ಯಾಟ್, 8 ಇತರೆ ಉಪಗ್ರಹಗಳನ್ನು ಹೊತ್ತ PSLV-C54 ರಾಕೆಟ್ ಉಡಾಯಿಸಿದ ಇಸ್ರೋ

    ಶ್ರೀಹರಿಕೋಟಾ: ಓಷನ್‍ಸ್ಯಾಟ್ 3 (Oceansat), ಆನಂದ್ ಉಪಗ್ರಹಗಳು ಸೇರಿದಂತೆ ಇತರ 8 ನ್ಯಾನೊ ಉಪಗ್ರಹಗಳನ್ನು (Satellite) ಹೊತ್ತ ಪಿಎಸ್‍ಎಲ್‍ವಿ-ಸಿ 54 ರಾಕೆಟ್ (PSLV-C54 Rocket) ಅನ್ನು ಇಸ್ರೋ (Indian Space Research Organisation) (ISRO) ಯಶಸ್ವಿಯಾಗಿ ಉಡಾಯಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಿದ್ದು, ಉಪಗ್ರಹಗಳನ್ನು ಸನ್-ಸಿಂಕ್ರೋನಸ್ ಧ್ರುವೀಯ ಕಕ್ಷೆಗೆ ಸೇರಿಸಲಾಗುತ್ತದೆ.

    ಎಲ್‍ವಿ-ಸಿ 54 ರಾಕೆಟ್‍ನಲ್ಲಿ ಓಷನ್‍ಸ್ಯಾಟ್ 3, ಆನಂದ್ ಉಪಗ್ರಹಗಳು ಸೇರಿದಂತೆ ಇತರ 8 ನ್ಯಾನೊ ಉಪಗ್ರಹಗಳಿವೆ. ಇವುಗಳ ಪೈಕಿ ಪಿಕ್ಸ್‍ಕ್ಷೆಲ್‍ನ ಭೂತಾನ್‍ಸ್ಯಾಟ್, ಅಮೆರಿಕದ ಸ್ಪೇಸ್‍ಫ್ಲೈಟ್‍ನ ನಾಲ್ಕು ಆ್ಯಸ್ಟ್ರೋಕಾಸ್ಟ್ ಉಪಗ್ರಹಗಳು ಕೂಡ ಸೇರಿವೆ. ಸಾಗರ ವೀಕ್ಷಣೆ, ಭೂ ವೀಕ್ಷಣೆಗಾಗಿ ಇಂಡೊ-ಫ್ರೆಂಚ್ ಸಹಭಾಗಿತ್ವ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಉಪಗ್ರಹಗಳೂ ಇದರಲ್ಲಿ ಸೇರಿವೆ. ಇದನ್ನೂ ಓದಿ: ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದ ದೂರುದಾರನ ತಂದೆ ಹೃದಯಾಘಾತದಿಂದ ಸಾವು

    ಆನಂದ್ ನ್ಯಾನೊ ಉಪಗ್ರಹ ಭೂಮಿಯ ಕೆಳ ಕಕ್ಷೆಯಲ್ಲಿ ಮೈಕ್ರೋಸ್ಯಾಟಲೈಟ್ ಬಳಸಿಕೊಂಡು ಭೂಮಿಯ ವೀಕ್ಷಣೆ ನಡೆಸಲಿದೆ. ಥೈಬೋಲ್ಟ್ ಉಪಗ್ರಹವು ಸಂವಹನಕ್ಕೆ ಸಂಬಂಧಿಸಿದ್ದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ಇದನ್ನೂ ಓದಿ: ಎರಡರ ಮಗ್ಗಿ ಹೇಳದ್ದಕ್ಕೆ ವಿದ್ಯಾರ್ಥಿ ಕೈಗೆ ಡ್ರಿಲ್ ಮಷಿನ್ ಇಟ್ಟ ಶಿಕ್ಷಕ

    Live Tv
    [brid partner=56869869 player=32851 video=960834 autoplay=true]

  • ಬಾಹ್ಯಾಕಾಶಕ್ಕೆ ಮೋದಿ ಭಾವಚಿತ್ರ, ಭಗವದ್ಗೀತೆ – ಇಸ್ರೋದ ಉಪಗ್ರಹ ಉಡಾವಣೆ ಯಶಸ್ವಿ

    ಬಾಹ್ಯಾಕಾಶಕ್ಕೆ ಮೋದಿ ಭಾವಚಿತ್ರ, ಭಗವದ್ಗೀತೆ – ಇಸ್ರೋದ ಉಪಗ್ರಹ ಉಡಾವಣೆ ಯಶಸ್ವಿ

    ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷದ ಮೊದಲ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಕಕ್ಷೆಗೆ ಸೇರಿಸಿದೆ.

    ತನ್ನ ಪಿಎಸ್‌ಎಲ್‌ವಿ 51 ರಾಕೆಟ್‌ ಮೂಲಕ ಬ್ರೆಜಿಲ್‌ ನ ಅಮೆಜೋನಿಯಾ -1 ಉಪಗ್ರಹದೊಂದಿಗೆ ಇತರ 18 ಉಪಗ್ರಹಗಳನ್ನು ಶ್ರೀಹರಿಕೋಟದಲ್ಲಿರುವ ಡಾ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 10:30ಕ್ಕೆ ಉಡಾವಣೆ ಮಾಡಲಾಯಿತು.

    ಒಟ್ಟು 20 ಉಪಗ್ರಹಗಳನ್ನು ಇಂದು ಉಡಾವಣೆ ಮಾಡಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ 2 ಉಪಗ್ರಹಗಳ ಉಡಾವಣೆಯನ್ನು ಕಳೆದ ವಾರ ರದ್ದು ಮಾಡಲಾಗಿತ್ತು.

    ಭಾರತದ ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ‘ಆನಂದ್’, ‘ಸತೀಶ್ ಧವನ್’ ಹಾಗೂ ‘ಯೂನಿಟಿಶಾಟ್’ ಉಪಗ್ರಹಗಳ ಜೊತೆ ಬ್ರೆಜಿಲ್ ದೇಶಕ್ಕೆ ಸೇರಿದ ಅಮೆಜೋನಿಯಾ-1 ಉಪಗ್ರಹವನ್ನು ಇಸ್ರೋ ರಾಕೆಟ್‌ ಕಕ್ಷೆಗೆ ಸೇರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ, ಪವಿತ್ರ ಗ್ರಂಥ ಭಗವದ್ಗೀತೆಯ ಎಲೆಕ್ಟ್ರಾನಿಕ್‌ ಪ್ರತಿ ಹಾಗೂ 25 ಸಾವಿರ ನಾಗರಿಕರ ಹೆಸರು ಇರುವ ಉಪಗ್ರಹವನ್ನು ಇಂದು ಕಳುಹಿಸಲಾಯಿತು.

    ಬ್ರೆಜಿಲ್‌ ನ ಅಮೆಜೋನಿಯಾ -1 ಉಪಗ್ರಹ 637 ಕೆಜಿ ತೂಕವನ್ನು ಹೊಂದಿದ್ದು, ಇದು ಬ್ರೆಜಿಲ್‌ ವ್ಯಾಪ್ತಿಯಲ್ಲಿರುವ ಅಮೆಜಾನ್‌ ಪ್ರದೇಶದ ಅರಣ್ಯ ನಾಶದ ಬಗ್ಗೆ ಮಾಹಿತಿ ನೀಡಲಿದೆ.

    ಭಾರತೀಯ ಉಪಗ್ರಹಗಳಾದ ‘ಆನಂದ್’ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥೆ ‘ಪಿಕ್ಸೆಲ್’ ಅಭಿವೃದ್ದಿಪಡಿಸಿದೆ. ‘ಸತೀಶ್ ಧವನ್’ ಅನ್ನು ಚೆನ್ನೈ ಮೂಲದ ‘ಸ್ಪೇಸ್ ಕಿಡ್ಜ್‌ ಇಂಡಿಯಾ ಅನ್ನು ಜಿಟ್ ಶಾಟ್ (ಶ್ರೀಪೆರಂಬುದೂರ್), ಜಿಹೆಚ್ಆರ್ ಸಿ ಈ ಶಾಟ್ (ನಾಗ್ಪುರ), ಶ್ರೀ ಶಕ್ತಿ ಶಾಟ್ (ಕೊಯಮತ್ತೂರು) ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

    ಸ್ಪೇಸ್‌ಕಿಡ್ಜ್ ಇಂಡಿಯಾ ಭಾರತದ ಪ್ರಸಿದ್ಧ ಬಾಹ್ಯಕಾಶ ವಿಜ್ಞಾನಿ ಸತೀಶ್ ಧವನ್ ಅವರ ಹೆಸರಿನಲ್ಲಿ ʼಸತೀಶ್ ಧವನ್ʼ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದೆ. ತನ್ನ ಮೊದಲ ಉಪಗ್ರಹ ಇದಾಗಿರುವ ಕಾರಣ ಇದರಲ್ಲಿ ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಉಪಗ್ರಹದಲ್ಲಿ ಕಳುಹಿಸುವುದಾಗಿ ಸಂಸ್ಥೆಯ ಸಿಇಓ ಡಾ.ಶ್ರೀಮತಿ ಕೇಸನ್  ಉಡಾವಣೆಗೂ ಮೊದಲು ತಿಳಿಸಿದ್ದರು.  ಉಪಗ್ರಹದ ಪ್ಯಾನೆಲ್‌ಗೆ ಮೋದಿಯವರ ಫೋಟೋ ಇರಲಿದೆ. ಜೊತೆಗೆ ‘ಆತ್ಮನಿರ್ಭರ್ ಮಿಷನ್’ ವಾಕ್ಯಗಳ ಜೊತೆಗೆ ಧರ್ಮಗ್ರಂಥ ಭಗವದ್ಗೀತೆಯ ಎಲೆಕ್ಟ್ರಾನಿಕ್‌ ಪ್ರತಿ, 25 ಸಾವಿರ ದಿಯ ಹೆಸರುಗಳನ್ನು ಕೊಂಡೊಯ್ಯಲಿದೆ ಎಂದು ಅವರು ವಿವರಿಸಿದ್ದಾರೆ.

    ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾವು ಮನವಿ ಮಾಡಿದ್ದೆವು. ಒಂದು ವಾರದಲ್ಲಿ 25 ಸಾವಿರ ಹೆಸರುಗಳು ನೋಂದಣಿಯಾದವು. ಈ ಪೈಕಿ 1 ಸಾವಿರ ವಿದೇಶಿಯರು ನೊಂದಣಿ ಮಾಡಿದ್ದಾರೆ. ಚೆನ್ನೈನ ಒಂದು ಶಾಲೆಯ ತನ್ನ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಕಳುಹಿಸಿದೆ. ಈ ಹೆಸರುಗಳೊಂದಿಗೆ ನಾವು ಮೋದಿಯವರ ಫೋಟೋವನ್ನು ಕಳುಹಿಸುತ್ತಿದ್ದೇವೆ. ಕೆಲ ವಿದೇಶಿ ಪ್ರಯೋಗಗಳಲ್ಲಿ ಆಯಾ ದೇಶಗಳು ಬೈಬಲ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದವು. ಹಾಗಾಗಿ ನಮ್ಮ ದೇಶದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಭಕ್ಕೆ ಕಳುಹಿಸಲು ನಾವು ಮುಂದಾಗಿದ್ದೇವೆ ಎಂದು ಡಾ. ಶ್ರೀಮತಿ ಮಾಹಿತಿ ನೀಡಿದ್ದಾರೆ.

    ಪ್ಯಾನೆಲ್‌ ಕೆಳಗಡೆ ಇಸ್ರೋ ಅಧ್ಯಕ್ಷ ಶಿವನ್‌ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರು ಇರಲಿದೆ. ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಸರ್ಕ್ಯೂಟ್‌ ಸೇರಿದಂತೆ ಸೇರಿದಂತೆ ಎಲ್ಲವನ್ನೂ ಭಾರತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

  • ಬಾಹ್ಯಾಕಾಶಕ್ಕೆ ಮೋದಿ ಫೋಟೋ, ಭಗವದ್ಗೀತೆ – ಇಸ್ರೋ ರಾಕೆಟ್‌ ಮೂಲಕ ಉಪಗ್ರಹ ಉಡಾವಣೆ

    ಬಾಹ್ಯಾಕಾಶಕ್ಕೆ ಮೋದಿ ಫೋಟೋ, ಭಗವದ್ಗೀತೆ – ಇಸ್ರೋ ರಾಕೆಟ್‌ ಮೂಲಕ ಉಪಗ್ರಹ ಉಡಾವಣೆ

    – ಸ್ಪೇಸ್‌ ಕಿಡ್ಜ್‌ ಇಂಡಿಯಾ ಅಭಿವೃದ್ಧಿ ಪಡಿಸಿದ ಉಪಗ್ರಹ
    – 25 ಸಾವಿರ ಜನರ ಹೆಸರು ಬಾಹ್ಯಾಕಾಶಕ್ಕೆ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷ ತನ್ನ ಮೊದಲ ಉಡಾವಣೆಯನ್ನು ಫೆ.28ರಂದು ನಡೆಸಲಿದೆ.

    ಪಿಎಸ್‌ಎಲ್‌ವಿ -51 ರಾಕೆಟ್‌ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದ್ದು, ಈ ಪೈಕಿ ಒಂದು ಖಾಸಗಿ ಉಪಗ್ರಹದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ, ಪವಿತ್ರ ಗ್ರಂಥ ಭಗವದ್ಗೀತೆಯ ಪ್ರತಿ ಹಾಗೂ 25 ಸಾವಿರ ನಾಗರಿಕರ ಹೆಸರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.

    ಭಾರತದ ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ‘ಆನಂದ್’, ‘ಸತೀಶ್ ಧವನ್’ ಹಾಗೂ ‘ಯೂನಿಟಿಶಾಟ್’ ಉಪಗ್ರಹಗಳ ಜೊತೆ ಬ್ರೆಜಿಲ್ ದೇಶಕ್ಕೆ ಸೇರಿದ ಅಮೆಜೋನಿಯಾ-1 ಉಪಗ್ರಹವನ್ನು ಇಸ್ರೋ ರಾಕೆಟ್‌ ಕಕ್ಷೆಗೆ ಸೇರಿಸಲಿದೆ.

    ಭಾರತೀಯ ಉಪಗ್ರಹಗಳಾದ ‘ಆನಂದ್’ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥೆ ‘ಪಿಕ್ಸೆಲ್’ ಅಭಿವೃದ್ದಿಪಡಿಸಿದೆ. ‘ಸತೀಶ್ ಧವನ್’ ಅನ್ನು ಚೆನ್ನೈ ಮೂಲದ ‘ಸ್ಪೇಸ್ ಕಿಡ್ಜ್‌ ಇಂಡಿಯಾ ಅನ್ನು ಜಿಟ್ ಶಾಟ್ (ಶ್ರೀಪೆರಂಬುದೂರ್), ಜಿಹೆಚ್ಆರ್ ಸಿ ಈ ಶಾಟ್ (ನಾಗ್ಪುರ), ಶ್ರೀ ಶಕ್ತಿ ಶಾಟ್ (ಕೊಯಮತ್ತೂರು) ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

    ಸ್ಪೇಸ್‌ಕಿಡ್ಜ್ ಇಂಡಿಯಾ ಭಾರತದ ಪ್ರಸಿದ್ಧ ಬಾಹ್ಯಕಾಶ ವಿಜ್ಞಾನಿ ಸತೀಶ್ ಧವನ್ ಅವರ ಹೆಸರಿನಲ್ಲಿ ʼಸತೀಶ್ ಧವನ್ʼ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದೆ. ತನ್ನ ಮೊದಲ ಉಪಗ್ರಹ ಇದಾಗಿರುವ ಕಾರಣ ಇದರಲ್ಲಿ ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಉಪಗ್ರಹದಲ್ಲಿ ಕಳುಹಿಸುವುದಾಗಿ ಸಂಸ್ಥೆಯ ಸಿಇಓ ಡಾ.ಶ್ರೀಮತಿ ಕೇಸನ್ ಹೇಳಿದ್ದಾರೆ. ಉಪಗ್ರಹದ ಪ್ಯಾನೆಲ್‌ಗೆ ಮೋದಿಯವರ ಫೋಟೋ ಇರಲಿದೆ. ಜೊತೆಗೆ ‘ಆತ್ಮನಿರ್ಭರ್ ಮಿಷನ್’ ವಾಕ್ಯಗಳ ಜೊತೆಗೆ ಧರ್ಮಗ್ರಂಥ ಭಗವದ್ಗೀತೆಯ ಪ್ರತಿ, 25000 ಮಂದಿಯ ಹೆಸರುಗಳನ್ನು ಕೊಂಡೊಯ್ಯಲಿದೆ ಎಂದು ಅವರು ವಿವರಿಸಿದ್ದಾರೆ.

    ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾವು ಮನವಿ ಮಾಡಿದ್ದೆವು. ಒಂದು ವಾರದಲ್ಲಿ 25 ಸಾವಿರ ಹೆಸರುಗಳು ನೋಂದಣಿಯಾದವು. ಈ ಪೈಕಿ 1 ಸಾವಿರ ವಿದೇಶಿಯರು ನೊಂದಣಿ ಮಾಡಿದ್ದಾರೆ. ಚೆನ್ನೈನ ಒಂದು ಶಾಲೆಯ ತನ್ನ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಕಳುಹಿಸಿದೆ. ಈ ಹೆಸರುಗಳೊಂದಿಗೆ ನಾವು ಮೋದಿಯವರ ಫೋಟೋವನ್ನು ಕಳುಹಿಸುತ್ತಿದ್ದೇವೆ. ಕೆಲ ವಿದೇಶಿ ಪ್ರಯೋಗಗಳಲ್ಲಿ ಆಯಾ ದೇಶಗಳು ಬೈಬಲ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದವು. ಹಾಗಾಗಿ ನಮ್ಮ ದೇಶದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಭಕ್ಕೆ ಕಳುಹಿಸಲು ನಾವು ಮುಂದಾಗಿದ್ದೇವೆ ಎಂದು ಡಾ. ಶ್ರೀಮತಿ ಮಾಹಿತಿ ನೀಡಿದ್ದಾರೆ.

    ಪ್ಯಾನೆಲ್‌ ಕೆಳಗಡೆ ಇಸ್ರೋ ಅಧ್ಯಕ್ಷ ಶಿವನ್‌ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರು ಇರಲಿದೆ. ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಸರ್ಕ್ಯೂಟ್‌ ಸೇರಿದಂತೆ ಸೇರಿದಂತೆ ಎಲ್ಲವನ್ನೂ ಭಾರತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

  • ಕೋವಿಡ್ ಬಳಿಕ ಉಪಗ್ರಹ ಉಡಾವಣೆ ಯಶಸ್ವಿ- ಇಸ್ರೋಗೆ ಮೋದಿ ಅಭಿನಂದನೆ

    ಕೋವಿಡ್ ಬಳಿಕ ಉಪಗ್ರಹ ಉಡಾವಣೆ ಯಶಸ್ವಿ- ಇಸ್ರೋಗೆ ಮೋದಿ ಅಭಿನಂದನೆ

    ಶ್ರೀಹರಿಕೋಟಾ: ಸರಿ ಸುಮಾರು ಒಂದು ವರ್ಷದ ಬಳಿಕ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಪಗ್ರಹ ಉಡಾವಣಾ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪಿಎಸ್‍ಎಲ್‍ವಿ ಸಿ49 ರಾಕೆಟ್ ಮೂಲಕ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

    ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿನ ಮೊದಲ ಲಾಂಚ್ ಪ್ಯಾಂಡ್‍ನಿಂದ ಉಪಗ್ರಹಗಳನ್ನು ಶನಿವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಭೂಮಿಯ ಹವಾಮಾನ ಚಿತ್ರಣ ಇಒಎಸ್-1 ಉಪ್ರಗಹ ಸೇರಿದಂತೆ ವಿದೇಶದ 9 ಉಪಗ್ರಹಗಳನ್ನು ಹೊತ್ತ ಪಿಎಸ್‍ಎಲ್‍ವಿ ಸಿ49 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಜಿಗಿಯಿತು. ಮಾರ್ಚ್ 23ರ ಲಾಕ್‍ಡೌನ್ ಬಳಿಕ ಇಸ್ರೋ ಮಾಡಿದ ಮೊದಲ ಉಡಾವಣೆ ಇದಾಗಿದೆ.

    ಮಧ್ಯಾಹ್ನ 3.02ಕ್ಕೆ ನಿಗದಿಯಾಗಿದ್ದ ಉಡಾವಣೆಯನ್ನು, 10 ನಿಮಿಷಗಳ ಕಾಲ ತಡವಾಗಿ ಅಂದರೆ 3.12ಕ್ಕೆ ಮಾಡಲಾಯಿತು. ಮಿಂಚಿನಿಂದ ರಾಕೆಟ್‍ನಲ್ಲಿ ಅಳವಡಿಸಲಾಗಿದ್ದ ಎಲೆಕ್ಟ್ರಾನಿಕ್ಸ್ ಆನ್‍ಬೊರ್ಡ್ ನಲ್ಲಿ ಹಾನಿಯಾಗಬಹುದಾದ ಸಾಧ್ಯತೆ ಇದ್ದ ಕಾರಣದಿಂದ 10 ನಿಮಿಷ ಉಡಾವಣೆಯನ್ನ ಮುಂದೂಡಲಾಗಿತ್ತು.

    ಈ ಕುರಿತು ಟ್ವೀಟ್ ಮಾಡಿ ಇಸ್ರೋಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪಿಎಸ್‍ಎಲ್‍ವಿ ಸಿ49 ಮಿಷನ್ ಯಶಸ್ವಿಯಾಗಿದ್ದು, ಕೋವಿಡ್ ಸಮಯದಲ್ಲಿ ನಮ್ಮ ವಿಜ್ಞಾನಿಗಳು ಹಲವು ನಿರ್ಬಂಧಗಳನ್ನು ನಿವಾರಿಸಿಕೊಂಡು ಸಾಧನೆ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಈ ಮಿಷನ್ ಇಸ್ರೋಗೆ ಬಹಳ ವಿಶೇಷವಾಗಿತ್ತು. ಬಾಹ್ಯಾಕಾಶ ಚಟುವಟಿಕೆಯನು ವರ್ಕ್ ಫ್ರಂ ಹೋಮ್ ಕೆಲಸದಿಂದ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಎಂಜಿನಿಯರ್ ಲ್ಯಾಬ್‍ನಲ್ಲಿ ಹಾಜರಿರಬೇಕು. ಪ್ರತಿಯೊಬ್ಬ ತಂತ್ರಜ್ಞ ಹಾಗೂ ಉದ್ಯೋಗಿ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

    ಇಂದು ನಡೆದ ಉಡಾವಣೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ವರ್ಕ್‍ಹಾರ್ಸ್ ಎಂದು ಕರೆಯುವ ಪಿಎಸ್‍ಎಲ್‍ವಿಯ 51ನೇ ಉಡಾವಣೆ ಇದಾಗಿದ್ದು, ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ 77ನೇ ಉಡಾವಣಾ ಕಾರ್ಯಾಚರಣೆಯಾಗಿದೆ. ಇದುವರೆಗೂ 33 ರಾಷ್ಟ್ರಗಳ 328ಕ್ಕೂ ಹೆಚ್ಚು ಉಪಗ್ರಹಗಳನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ.

  • ಚಂದ್ರಯಾನ-2 ಉಡಾವಣೆಗೆ ಸಾಕ್ಷಿಯಾಗಬೇಕೆ? ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಿ

    ಚಂದ್ರಯಾನ-2 ಉಡಾವಣೆಗೆ ಸಾಕ್ಷಿಯಾಗಬೇಕೆ? ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಿ

    ಶ್ರೀಹರಿಕೋಟಾ: ತಾಂತ್ರಿಕ ಕಾರಣದಿಂದ ಜು.15ರಂದು ರದ್ದಾಗಿದ್ದ ಭಾರತ ಮಹತ್ವಾಕಾಂಕ್ಷಿಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-2 ಉಡಾವಣೆಯ ದಿನಾಂಕವನ್ನು ಜು.22(ಸೋಮವಾರ)ಕ್ಕೆ ನಿಗದಿಪಡಿಸಲಾಗಿದ್ದು, ಉಡಾವಣೆಯ ವೀಕ್ಷಣೆಗಾಗಿ ಆನ್‍ಲೈನ್ ಟಿಕೆಟ್ ಬುಕಿಂಗ್‍ನ್ನು ಇಸ್ರೋ ಪ್ರಾರಂಭಿಸಿದೆ.

    ಈ ತಿಂಗಳ ಕೊನೆಯಲ್ಲಿ ಉಡಾವಣೆಗೆ ಚಂದ್ರಯಾನ-2ನ್ನು ನಿಗದಿ ಪಡಿಸಿದ್ದು, ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಚಂದ್ರಯಾನ-2 ಉಡಾವಣೆಯನ್ನು ನೋಡಲು ಬರುವವರಿಗೆ ಜು.19ರಿಂದ ಆನ್‍ಲೈನ್‍ನಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.

    ಟ್ವಿಟ್ಟರ್ ಮೂಲಕ ಈ ಮಾಹಿತಿ ಖಚಿತಪಡಿಸಿರುವ ಇಸ್ರೋ, ಸತೀಶ್ ಧವನ್ ಸ್ಪೇಸ್ ಸೆಂಟರ್‍ನಿಂದ ಉಡಾವಣೆಗೊಳ್ಳುತ್ತಿರುವ #GSLVMkIII-M1/#Chandrayaan2 ಉಡಾವಣೆಗೆ ನೀವು ಸಾಕ್ಷಿಯಾಗಬೇಕಾದಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಜು.19 ರಂದು ಸಂಜೆ 6ಕ್ಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಈ ಹಿಂದೆ ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಜುಲೈ 15ರಂದು ನಸುಕಿನ ಜಾವ 2.51 ಗಂಟೆಗೆ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ ರಾಕೆಟ್‍ನಲ್ಲಿ ಉಡಾವಣೆಗೆ ನಿಗದಿಪಡಿಸಿದ ಕಾಲಮಾನಕ್ಕಿಂತ 1 ಗಂಟೆ ಮುನ್ನ ತಾಂತ್ರಿಕ ದೋಷ ಕಂಡು ಬಂದು ಉಡಾವಣೆ ರದ್ದುಪಡಿಸಲಾಗಿತ್ತು.

  • 31 ಉಪಗ್ರಹ ಹೊತ್ತ ಪಿಎಸ್‍ಎಲ್‍ವಿ-ಸಿ43 ರಾಕೆಟ್ ಯಶಸ್ವಿ ಉಡಾವಣೆ

    31 ಉಪಗ್ರಹ ಹೊತ್ತ ಪಿಎಸ್‍ಎಲ್‍ವಿ-ಸಿ43 ರಾಕೆಟ್ ಯಶಸ್ವಿ ಉಡಾವಣೆ

    ಹೈದರಾಬಾದ್: ವಿದೇಶಿ ಸೇರಿದಂತೆ ಒಟ್ಟು 31 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಿಎಸ್‍ಎಲ್‍ವಿ-ಸಿ43 ಮೂಲಕ ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

    ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಬೆಳಿಗ್ಗೆ 9.58ಕ್ಕೆ ನಭಕ್ಕೆ ಚಿಮ್ಮಿತು. ಇದರಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಉಪಗ್ರಹವು ಉಡ್ಡಯನದ ಪ್ರಧಾನ ಉಪಗ್ರಹವಾಗಿದೆ.

    ಉಪಯೋಗವೇನು?:
    ಭೂಮಿಯ ಮೇಲ್ಮೈನ ಅಧ್ಯಯನ, ಸಂವಹನ ಸೇವೆ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ವೈಜ್ಞಾನಿಕ ಸಂಶೋಧನೆ ಸೇರಿ ಮಾಹಿತಿ ಕ್ರಾಂತಿಯನ್ನು ಸೃಷ್ಟಿಸಬಲ್ಲ ಉಪಗ್ರಹಗಳು ಇವಾಗಿವೆ.

    ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಉಪಗ್ರಹವು 380 ಕೆ.ಜಿ. ತೂಕ ಹೊಂದಿದೆ. ಇದು ಭೂಮಿಯಿಂದ 636 ಕಿ.ಮೀ. ಅಂತರದ ಕಕ್ಷೆಯನ್ನು ಸೇರಲಿದೆ. ಒಟ್ಟು 5 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಉಳಿದ 30 ಉಪಗ್ರಹಗಳು 504 ಕಿ.ಮೀ. ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಇಸ್ರೋ ತಿಳಿಸಿದೆ.

    ವಿದೇಶಿ ಉಪಗ್ರಹ ಎಷ್ಟು?:
    ಅಮೆರಿಕದ 23 ಉಪಗ್ರಹ ಸೇರಿದಂತೆ ಸ್ಪೇನ್, ಕೆನಡಾ, ಫಿನ್‍ಲ್ಯಾಂಡ್, ಮಲೇಷ್ಯಾ, ಆಸ್ಟ್ರೇಲಿಯಾ, ಕೊಲಂಬಿಯಾ, ನೆದರ್ಲೆಂಡ್ ದೇಶಗಳ ತಲಾ ಒಂದು ಉಪಗ್ರಹ ಇದರಲ್ಲಿ ಸೇರಿವೆ. ಇವುಗಳಲ್ಲಿ ಒಂದು ಮೈಕ್ರೊ ಹಾಗೂ 29 ನ್ಯಾನೋ ಉಪಗ್ರಹಗಳಿವೆ. ಇದೇ ತಿಂಗಳಲ್ಲಿ ಇಸ್ರೋ ನಡೆಸುತ್ತಿರುವ ಎರಡನೇ ಉಡ್ಡಯನ ಇದಾಗಿದೆ. ನವೆಂಬರ್ 14ರಂದು ಜಿಸ್ಯಾಟ್-29 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಾಹ್ಯಾಕಾಶದಲ್ಲಿ ಮುಂದುವರಿದ ಇಸ್ರೋ ಪರಾಕ್ರಮ: ಜಿಸ್ಯಾಟ್-17 ಉಪಗ್ರಹ ಉಡಾವಣೆ ಯಶಸ್ವಿ

    ಬಾಹ್ಯಾಕಾಶದಲ್ಲಿ ಮುಂದುವರಿದ ಇಸ್ರೋ ಪರಾಕ್ರಮ: ಜಿಸ್ಯಾಟ್-17 ಉಪಗ್ರಹ ಉಡಾವಣೆ ಯಶಸ್ವಿ

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪರಾಕ್ರಮ ಮುಂದುವರಿದಿದ್ದು, ಹವಾಮಾನ ದತ್ತಾಂಶ, ಉಪಗ್ರಹ ಆಧರಿತ ಶೋಧ ಸೇವೆಗೆ ಬಳಕೆಯಾಗುವ ಜಿಸ್ಯಾಟ್-17 ಉಡಾವಣೆ ಯಶಸ್ವಿಯಾಗಿದೆ.

    ಫ್ರೆಂಚ್ ಗಯಾನದ ಕೌರೌ ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನ ನಸುಕಿನ ಜಾವ 2.30ರ ವೇಳೆಗೆ 3,477 ಕೆ.ಜಿ ತೂಕದ ಜಿಸ್ಯಾಟ್-17 ಉಪಗ್ರಹವನ್ನು ಹೊತ್ತಕೊಂಡು ಏರಿಯಾನ್ 5 ರಾಕೆಟ್ ನಭಕ್ಕೆ ಹಾರಿತ್ತು.

    ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ.

    ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋ ಉಡಾವಣೆ ಮಾಡಿದ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜೂನ್ 5ರಂದು ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಮೂಲಕ ಜಿಸ್ಯಾಟ್ -19 ಉಪಗ್ರಹಗಳು ಕಕ್ಷೆಗೆ ಸೇರಿದ್ದರೆ, ಜೂನ್ 23 ರಂದು ಪಿಎಸ್‍ಎಲ್‍ವಿ ಸಿ38 ರಾಕೆಟ್ ಮೂಲಕ ಕಾರ್ಟೋಸ್ಯಾಟ್ 2 ಉಪಗ್ರಹ ಕಕ್ಷೆ ಸೇರಿತ್ತು.

    ವಿದೇಶದಿಂದ ಉಪಗ್ರಹ ಉಡಾವಣೆ ಮಾಡಿದ್ದು ಯಾಕೆ?
    ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಉಡಾವಣೆ ಯಶಸ್ವಿಯಾಗುವುದಕ್ಕೂ ಮೊದಲು ಇಸ್ರೋ ತೂಕದ ಉಪಗ್ರಹಗಳ ಉಡಾವಣೆಗಾಗಿ ವಿದೇಶಿ ಸಂಸ್ಥೆಗಳನ್ನು ಅವಲಂಬಿಸಿತ್ತು. ಈ ಕಾರಣಕ್ಕೆ ಮೊದಲೇ ಒಪ್ಪಂದವಾಗಿದ್ದ ಹಿನ್ನೆಲೆಯಲ್ಲಿ ಇಸ್ರೋ 3,477 ಕೆ.ಜಿ ತೂಕದ ಉಪಗ್ರಹವನ್ನು ಫ್ರೆಂಚ್ ಗಯಾನ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಿದೆ.

    ಇನ್ನು ಮುಂದೆ ಅವಲಂಬನೆ ಅಗತ್ಯವಿಲ್ಲ:
    ಇಸ್ರೋ ಹೆಚ್ಚಾಗಿ ತನ್ನ ಉಪಗ್ರಹಗಳನ್ನು ಉಡಾವಣೆ ಮಾಡಲು ಪಿಎಸ್‍ಎಲ್‍ವಿ(ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್), ಮತ್ತು ಜಿಎಸ್‍ಎಲ್‍ವಿ(ಜಿಯೋಸಿಂಕ್ರೋನಾಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಬಳಕೆ ಮಾಡುತ್ತದೆ. ಪಿಎಸ್‍ಎಲ್‍ವಿ 1500 ಕೆಜಿ ತೂಕ ಸಾಮರ್ಥ್ಯದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ 4 ಸಾವಿರ ಕೆಜಿ ತೂಕದ ಉಪಗ್ರಹವನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. 640 ಟನ್ ತೂಕದ ಈ ರಾಕೆಟ್ ಪ್ರಯಾಣಿಕರಿಂದ ತುಂಬಿರುವ 5 ಜಂಬೋ ವಿಮಾನಗಳ ತೂಕಕ್ಕೆ ಸಮವಾಗಿದ್ದು, ಜೂನ್ 5ರಂದು ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಮೂಲಕ 3136 ಕೆಜಿ ತೂಕದ ಜಿಸ್ಯಾಟ್ -19 ಉಪಗ್ರಹಗಳು ಕಕ್ಷೆಗೆ ಸೇರಿತ್ತು.

    ಮೇ 5 ರಂದು ಜಿಎಸ್‍ಎಲ್‍ವಿ ಮಾರ್ಕ್ 2 ರಾಕೆಟ್‍ನೊಂದಿಗೆ 2,230 ಕೆಜಿ ತೂಕದ ದಕ್ಷಿಣ ಏಷ್ಯಾ ಉಪಗ್ರಹ ಜಿಸ್ಯಾಟ್ 9 ಉಡಾವಣೆಯನ್ನು ಇಸ್ರೋ ಮಾಡಿತ್ತು.

    ಇದನ್ನೂ ಓದಿ: ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!