Tag: ಶ್ರೀಸೈನಿ

  • ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

    ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

    ಸುಂದರಿಯರ ಜಗತ್ತಿನ ಪ್ರತಿಷ್ಠಿತ ‘ಮಿಸ್ ವರ್ಲ್ಡ್ 2021’ರ ಕಿರೀಟ ಪೋಲೆಂಡ್ ನ ಕರೋಲಿನಾ ಬಿಲಾವ್ಸ್ಕಾ ಅವರ ಪಾಲಾಗಿದೆ. ಪೋರ್ಟೊರಿಕೊದ ಸ್ಯಾನ್ ಸುವಾನ್ ನಲ್ಲಿ ನಡೆದ 70ನೇ ಆವೃತ್ತಿಯ ಮಿಸ್ ವರ್ಲ್ಡ್ ಕಿರೀಟಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕರೋಲಿನಾ ಆಯ್ಕೆಯಾಗಿ 2021ರ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ.

    ಕರೋಲಿನಾ ಎದುರು ಉತ್ತರ ಐರ್ಲೆಂಡ್, ಯುಎಸ್‍ಎ, ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳ ಸುಂದರಿಯರು ಸ್ಪರ್ಧೆಯಲ್ಲಿದ್ದರು. ಇವರೆಲ್ಲರನ್ನೂ ಸೋಲಿಸಿ ವಿಶ್ವ ಸುಂದರಿಯ ಕಿರೀಟವನ್ನು ಧರಿಸಿದ್ದಾರೆ ಪೊಲೆಂಡ್ ಸುಂದರಿ ಕರೋಲಿನಾ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    2019ರ ವಿಶ್ವಸುಂದರಿ ಜುಮೈಕಾದ ಟೋನಿ ಆನ್ ಸಿಂಗ್ ಫೈನಲ್ ನಲ್ಲಿ ವಿಜೇತೆ ಕರೋಲಿನಾಗೆ ಕಿರೀಟ ತೊಡಿಸುವಾಗ ಇದು ಕನಸಾ ಅಥವಾ ನನಸಾ ಎನ್ನುವಂತೆ ನೋಡುತ್ತಿದ್ದರು ಕರೋಲಿನಾ. ಈ ಕಿರೀಟವನ್ನು ನಾನೇ ತೊಟ್ಟಿಕೊಂಡಿದ್ದೇನಾ ಎನ್ನುವಂತೆ ಹಲವು ಬಾರಿ ಅದನ್ನು ಸ್ಪರ್ಶಿಸಿ ಖಚಿತ ಪಡಿಸಿಕೊಂಡಿದ್ದು ವಿಶೇಷವಾಗಿತ್ತು.

    ಮೊದಲ ರನ್ನರ್ ಅಪ್ ಆಗಿ ಭಾರತೀಯ ಮೂಲದ ಶ್ರೀಸೈನಿ ಆಯ್ಕೆಯಾದರೆ, ಎರಡನೇ ರನ್ನರ್ ಅಪ್ ಆಗಿ ಕೋಟ್ ಡಿ ಐವೋರನ್ನ ಒಲಿವಿಯಾ ಯಾಸೆ ಸ್ಥಾನ ಪಡೆದಿದ್ದಾರೆ.

    View this post on Instagram

     

    A post shared by Miss World (@missworld)

     

    ಕರೋಲಿನಾ ಬಿಲಾವ್ಸ್ಕಾ?

    ಪೋಲೆಂಡ್ ನ ಈ ಚೆಲುವೆ ಮಾಡಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅನೇಕ ಉತ್ಪನ್ನಗಳಿಗೆ ರಾಯಭಾರಿ ಕೂಡ ಇವರಾಗಿದ್ದಾರೆ. ಮಾಡೆಲಿಂಗ್ ಜತೆ ಜತೆಗೆ ಮ್ಯಾನೇಜ್ ಮೆಂಟ್ ಕೋರ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸುತ್ತಿರುವ ಇವರಿಗೆ ಮಾಡೆಲಿಂಗ್ ಕ್ಷೇತ್ರದ ಮೇಲೆಯೇ ಸಂಶೋಧನೆ ಮಾಡುವ ಗುರಿಯನ್ನೂ ಹೊಂದಿದ್ದಾರೆ. ಇದನ್ನೂ ಓದಿ : ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

    ಯಾರೀಕೆ ಶ್ರೀಸೈನಿ ಸುಂದರಿ?

    2021ನೇ ಸಾಲಿನ ವಿಶ್ವಸುಂದರಿ ಸ್ಪರ್ಧೆಯಲ್ಲಿ ಕೂದಲೆಳೆ ಅಂತರದಲ್ಲಿ ವಿಶ್ವ ಸುಂದರಿ ಪಟ್ಟ ತಪ್ಪಿಸಿಕೊಂಡ ಶ್ರೀಸೈನಿ ಭಾರತೀಯ ಮೂಲದವರು. ಸದ್ಯ ಅಮೆರಿಕನ್ ಪ್ರಜೆ. ಈ ಸುಂದರಿಯು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾವನ್ನು ಪ್ರತಿನಿಧಿಸಿದ್ದರು.

    ಈ ಸ್ಪರ್ಧೆಯಲ್ಲಿ ಬ್ಯೂಟಿ ವಿತ್ ಎ ಪರ್ಪಸ್ ಸ್ಪರ್ಧೆಯಲ್ಲಿ ಗೆದ್ದಿರುವ ಶ್ರೈಸೈನಿ, ವಿಶ್ವ ಸುಂದರಿ ಪ್ರಶಸ್ತಿಗಾಗಿ ಟಾಪ್ ಆರರಲ್ಲಿ ಬಂದು, ನಂತರ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಅಮೆರಿಕನ್ ಕೂಡ ಇವರಾಗಿರುವುದು ವಿಶೇಷ.

    26ರ ಹರೆಯದ ಶ್ರೀಸೈನಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ತಮ್ಮ ತಂದೆಯ ಕಂಪೆನಿಯಲ್ಲಿಯೇ ಅವರು ಕೆಲಸ ಮಾಡುತ್ತಿದ್ದಾರೆ. ಓದಿನ ಜತೆ ಜತೆಗೆ ಸಂಗೀತ ಮತ್ತು ನೃತ್ಯದಲ್ಲಿಯೂ ಆಸಕ್ತಿ ಹೊಂದಿರುವ ಇವರು, ಕಾರು ಅಪಘಾತವೊಂದರಲ್ಲಿ ಬದುಕುಳಿದ ಪವಾಡ ಮಾಡಿದ್ದರು. ಇದನ್ನೂ ಓದಿ : ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

    ಭಾರತದ ಸುಂದರಿಗೆ 6ನೇ ಸ್ಥಾನ

    ಹೈದರಾಬಾದ್ ನಲ್ಲಿ ಜನಿಸಿರುವ, ವೃತ್ತಿಯಿಂದ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕರಾಗಿರುವ 23ರ ವಯಸ್ಸಿನ ಮಾನಸ ವಾರಣಾಸಿ ಈ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದಿಂದ ಸ್ಪರ್ಧಿಸಿದ್ದರು. ಇವರು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.