Tag: ಶ್ರೀಶಾಂತ್

  • ದಿನೇಶ್ ಕಾರ್ತಿಕ್ ಬದಲು ಮಾರ್ಗನ್ ಕೆಕೆಆರ್ ನಾಯಕನಾಗಬೇಕು: ಶ್ರೀಶಾಂತ್

    ದಿನೇಶ್ ಕಾರ್ತಿಕ್ ಬದಲು ಮಾರ್ಗನ್ ಕೆಕೆಆರ್ ನಾಯಕನಾಗಬೇಕು: ಶ್ರೀಶಾಂತ್

    – ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಐಪಿಎಲ್ ಲೀಡ್ ಮಾಡಬೇಕು

    ನವದೆಹಲಿ: ದಿನೇಶ್ ಕಾರ್ತಿಕ್ ಬದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಇಯಾನ್ ಮಾರ್ಗನ್ ಅವರು ಮುನ್ನೆಡಸಬೇಕು ಎಂದು ಭಾರತ ಕ್ರಿಕೆಟ್ ಆಟಗಾರ ಶ್ರೀಶಾಂತ್ ಅವರು ಹೇಳಿದ್ದಾರೆ.

    ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಎದುರಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಮೊದಲು ಬ್ಯಾಟ್ ಮಾಡಿ ಭರ್ಜರಿ 228 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡ ಆರಂಭದಲ್ಲಿ ಒಳ್ಳೆಯ ಆರಂಭ ಕಂಡರೂ ಪಂದ್ಯದ ಮಧ್ಯೆಯಲ್ಲಿ ಕುಸಿದಿತು. ಕೊನೆಯಲ್ಲಿ ಮಾರ್ಗನ್ ತ್ರಿಪಾಠಿಯವರು ಉತ್ತಮವಾಗಿ ಆಡಿದರು. ಪಂದ್ಯವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದರು.

    ಈ ಪಂದ್ಯದ ಬಳಿಕ ಟ್ವೀಟ್ ಮಾಡಿರುವ ಶ್ರೀಶಾಂತ್ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಯಾನ್ ಮಾರ್ಗನ್ ಅವರು ಕೆಕೆಆರ್ ತಂಡವನ್ನು ಮುನ್ನೆಡಸಬೇಕು. ದಿನೇಶ್ ಕಾರ್ತಿಕ್ ಅಲ್ಲ. ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಐಪಿಎಲ್‍ನಲ್ಲಿ ತಂಡವನ್ನು ಮುನ್ನಡೆಸಬೇಕು. ಕೆಕೆಆರ್ ತಂಡ ಇದರ ಬಗ್ಗೆ ಯೋಚಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ, ಧೋನಿ ಮತ್ತು ರೋಹಿತ್ ರೀತಿಯಲ್ಲಿ ಮುಂದೆ ನಿಂತು ತಂಡವನ್ನು ನಡೆಸುವವರು ಕ್ಯಾಪ್ಟನ್ ಆಗಬೇಕು ಎಂದು ತಿಳಿಸಿದ್ದಾರೆ.

    ಐಪಿಎಲ್-2020ಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಿರುವ 4 ಪಂದ್ಯದಲ್ಲಿ ಎರಡರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ. ಇದರ ಜೊತೆಗೆ ನಾಯಕ ದಿನೇಶ್ ಕಾರ್ತಿಕ್ ಅವರು ಉತ್ತಮ ಫಾರ್ಮ್‍ನಲ್ಲಿ ಇಲ್ಲ. ತಂಡಕ್ಕೆ ಬೇಕಾದಾಗ ರನ್ ಸಿಡಿಸುವಲ್ಲಿ ಕಾರ್ತಿಕ್ ವಿಫಲವಾಗಿದ್ದಾರೆ. ನಿನ್ನೆಯ ಪಂದ್ಯದಲ್ಲೂ ಕೂಡ ತಂಡ ಸಂಕಷ್ಟದಲ್ಲಿ ಇದ್ದಾಗ ಕ್ರೀಸಿಗೆ ಬಂದ ಕಾರ್ತಿಕ್ 8 ಬಾಲ್ ಆಡಿ ಕೇವಲ 6 ರನ್ ಸಿಡಿಸಿ ಔಟ್ ಆಗಿದ್ದರು. ಇದು ಕೆಕೆಆರ್ ಅಭಿಮಾನಿಗಳಿಗೂ ಬೇಸರ ತರಿಸಿತ್ತು.

    ಆದರೆ ಶನಿವಾರ ನಡೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಮಾರ್ಗನ್ ಅವರು, ತಂಡಕ್ಕೆ ಅಗತ್ಯವಿದ್ದಾಗ ಬಂದು ಚಾಂಪಿಯನ್ ಇನ್ನಿಂಗ್ಸ್ ಆಡಿದ್ದರು. ಕೊನೆಯಲ್ಲಿ ಸಿಕ್ಸ್‍ಗಳ ಸುರಿಮಳೆಗೈದ ಮಾರ್ಗನ್ ಅವರು, ಭರ್ಜರಿ ಐದು ಸಿಕ್ಸ್ ಮತ್ತು ಒಂದು ಫೋರ್ ಸಮೇತ ಕೇವಲ 18 ಬಾಲಿನಲ್ಲೇ ಸ್ಫೋಟಕ 44 ರನ್ ಸಿಡಿಸಿದರು. ಈ ಮೂಲಕ ಭಾರಿ ರನ್ ಅಂತರದಿಂದ ಸೋಲುತ್ತಿದ್ದ ತಂಡವನ್ನು ಕೇವಲ 18 ರನ್ ಅಂತರದಲ್ಲಿ ಸೋಲುವಂತೆ ಮಾಡಿದ್ದರು.

  • ಸಚಿನ್‍ರಂತೆ ಎಂಎಸ್‍ಡಿಯನ್ನು ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು: ಶ್ರೀಶಾಂತ್

    ಸಚಿನ್‍ರಂತೆ ಎಂಎಸ್‍ಡಿಯನ್ನು ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು: ಶ್ರೀಶಾಂತ್

    – ಧೋನಿ ಟಿ-20 ವಿಶ್ವಕಪ್ ಆಡಬೇಕು

    ನವದೆಹಲಿ: ಭಾರತ ಮಾಜಿ ನಾಯಕ ಎಂಎಸ್ ಧೋನಿ ಅವರು ಈ ಬಾರಿಯ ಟಿ-20 ವಿಶ್ವಕಪ್ ಆಡಬೇಕು ಮತ್ತು ಅವರನ್ನು ಕೂಡ ಸಚಿನ್ ಅವರಂತೆ ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು ಎಂದು ಭಾರತದ ವೇಗದ ಬೌಲರ್ ಶ್ರೀಶಾಂತ್ ಹೇಳಿದ್ದಾರೆ.

    ಕೊನೆಯ ಬಾರಿಗೆ 2019ರ ವಿಶ್ವಕಪ್‍ನಲ್ಲಿ ಬ್ಯಾಟ್ ಬೀಸಿದ್ದ ಧೋನಿ, ಆ ನಂತರ ಕ್ರಿಕೆಟ್‍ಯಿಂದ ದೂರ ಉಳಿದಿದ್ದರು. ಈ ನಡುವೆ ಐಪಿಎಲ್ ಆಡಲು ಧೋನಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಅದೂ ಸಾಧ್ಯವಾಗಿಲ್ಲ. ಈ ಎಲ್ಲದರ ನಡುವೆ ಧೋನಿ ಮತ್ತೆ ಕಮ್‍ಬ್ಯಾಕ್ ಮಾಡ್ತಾರಾ? ಇಲ್ಲ ನಿವೃತ್ತಿ ಪಡೆಯುತ್ತಾರಾ ಎಂಬ ಚರ್ಚೆಗಳು ಜೋರಾಗಿ ನಡೆದಿವೆ. ಈಗ ಶ್ರೀಶಾಂತ್ ಅವರು ಧೋನಿ ಮತ್ತೆ ಕ್ರಿಕೆಟ್ ಆಡಬೇಕು ಎಂದು ಹೇಳಿದ್ದಾರೆ.

    ಖಾಸಗಿ ಕ್ರಿಕೆಟ್ ವಾಹಿನಿಯೊಂದರ ಜೊತೆ ಮಾತನಾಡಿರುವ ಶ್ರೀಶಾಂತ್ ಅವರು, ಭಾರತೀಯ ಕ್ರಿಕೆಟ್ ಕ್ಷೇತ್ರಕ್ಕೆ ಧೋನಿ ಅವರ ಕೊಡುಗೆ ಅಪಾರ. ನಾಯಕನಾಗಿ ಅವರು ಮಾಡಿರುವ ಸಾಧನೆಗೆ ಸಾಟಿಯೇ ಇಲ್ಲ. ಈಗ ಧೋನಿ ಅವರನ್ನು ಟೀಕೆ ಮಾಡುತ್ತಿರುವವರಿಗೆ ಅವರು ಮುಂದೆ ಬ್ಯಾಟ್ ಮೂಲಕ ಉತ್ತರ ಕೊಡಲಿದ್ದಾರೆ. ಅವರು ಖಂಡಿತವಾಗಿಯೂ ಈ ಬಾರಿಯ ಟಿ-20 ವಿಶ್ವಕಪ್ ಆಡಬೇಕು ಎಂದು ತಿಳಿಸಿದ್ದಾರೆ.

    ನನಗೆ ವಿಶ್ವಪಕ್ ಮುಂಚೆಯೇ ಐಪಿಎಲ್ ನಡೆಯುತ್ತದೆ ಎಂದು ಭರವಸೆ ಇದೆ. ಈ ಐಪಿಎಲ್‍ನಲ್ಲಿ ಧೋನಿ ಭಾಯ್, ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರೆ. ಅವರು ಈಗ ಮೌನವಾಗಿ ಇರಬಹುದು. ಆದರೆ ಅವರಿಗೆ ಗೊತ್ತು ಏನೂ ಮಾಡಬೇಕು ಎಂದು. ಅವರು ದೇಶಕ್ಕಾಗಿ ಆಡಿದ್ದಾರೆ. ದೇಶಕ್ಕಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೆಲ್ಲ ಅವರು ದೇಶಕ್ಕಾಗಿ ಮಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ಕೆಲವರು ಯೋಚಿಸಬೇಕು ಎಂದು ಶ್ರೀಶಾಂತ್ ಹೇಳಿದ್ದಾರೆ.

    ಅವರ ನಿವೃತ್ತಿಯನ್ನು ಧೋನಿ ಅವರೇ ನಿರ್ಧಾರ ಮಾಡಲಿ. ಅವರು ಅಭಿಮಾನಿಗಳಿಗಾಗಿ ಅವರು ಮುಂದಿನ ಟಿ-20 ವಿಶ್ವಕಪ್ ಆಡಲಿ. 2011ರ ವಿಶ್ವಕಪ್‍ನಲ್ಲಿ ಸಚಿನ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಹಾಗೇ ಯಾರದಾರೂ ಮೈದಾನದಲ್ಲಿ ಧೋನಿ ಅವರನ್ನು ಹೊತ್ತು ಓಡಾಡಬೇಕು ಎಂಬುದು ನನ್ನ ಆಸೆ. ಅವರು ಅದಕ್ಕೆ ಅರ್ಹರಾಗಿದ್ದಾರೆ ಎಂದು ಶ್ರೀಶಾಂತ್ ಅಭಿಪ್ರಾಯ ಪಟ್ಟಿದ್ದಾರೆ.

    ಐಪಿಎಲ್ ಮ್ಯಾಚ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿದ್ದಾರೆ ಎಂದು ಬಿಸಿಸಿಐ ಶ್ರೀಶಾಂತ್ ಅವರನ್ನು ಕ್ರಿಕೆಟ್‍ನಿಂದ ನಿಷೇಧ ಮಾಡಿತ್ತು. ಈ ಅವಧಿ ಇದೇ ವರ್ಷದ ಸೆಪ್ಟಂಬರ್ ಗೆ ಮುಗಿಯಲಿದೆ. ಈಗಾಗಲೇ ಶ್ರೀಶಾಂತ್ ಕೇರಳದ ಪರವಾಗಿ ರಣಜಿ ಪಂದ್ಯವಾಡಲು ಸಿದ್ಧವಾಗಿದ್ದಾರೆ. ಜೊತೆಗೆ 2023ರಲ್ಲಿ ನಡೆಯುವ ವಿಶ್ವಕಪ್ ಆಡುವುದೇ ನನ್ನ ಗುರಿ ಎಂದು ಕೂಡ ಹೇಳಿಕೊಂಡಿದ್ದಾರೆ.

  • ಕೇರಳ ರಣಜಿ ಕ್ರಿಕೆಟ್ ತಂಡದಲ್ಲಿ ಶ್ರೀಶಾಂತ್‍ಗೆ ಸ್ಥಾನ!

    ಕೇರಳ ರಣಜಿ ಕ್ರಿಕೆಟ್ ತಂಡದಲ್ಲಿ ಶ್ರೀಶಾಂತ್‍ಗೆ ಸ್ಥಾನ!

    ತಿರುವನಂತಪುರಂ: ಟೀಂ ಇಂಡಿಯಾ ವಿಶ್ವಕಪ್ ಗೆದ್ದ ತಂಡದ ಬೌಲರ್ ಎಸ್.ಶ್ರೀಶಾಂತ್ ಕ್ರಿಕೆಟ್‍ಗೆ ಮತ್ತೆ ಕಮ್‍ಬ್ಯಾಕ್ ಮಾಡುವ ಮಾರ್ಗ ತೆರೆದುಕೊಂಡಿದೆ. ಫಿಕ್ಸಿಂಗ್ ಆರೋಪದ ಕಾರಣ 37 ವರ್ಷದ ಕ್ರಿಕೆಟಿಗ ಶ್ರೀಶಾಂತ್ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ಸದ್ಯ ಬಿಸಿಸಿಐ ವಿಧಿಸಿದ್ದ ನಿಷೇಧದ ಶಿಕ್ಷೆ ಸೆಪ್ಟೆಂಬರ್ ಗೆ ಅಂತ್ಯವಾಗಲಿದೆ. ಇತ್ತ ನಿಷೇಧದ ಅವಧಿ ಮುಕ್ತಾಯವಾಗುತ್ತಿದಂತೆ ಮತ್ತೆ ಶ್ರೀಶಾಂತ್ ಅವರನ್ನು ತಂಡಕ್ಕೆ ಪರಿಗಣಿಸಲು ಕೇರಳ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.

    ರಣಜಿ ಟ್ರೋಪಿಗಾಗಿ ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಪ್ರಕಟಿಸಿರುವ ಸಂಭವನೀಯ ರಣಜಿ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್ ಹೆಸರನ್ನು ಸೇರಿಸಿದೆ. ಆದರೆ ಶ್ರೀಶಾಂತ್ ಕಮ್‍ಬ್ಯಾಕ್ ಆತನ ಫಿಟ್ನೆಸ್ ಮೇಲೆ ನಿರ್ಧಾರವಾಗಲಿದೆ. ಸಂಸ್ಥೆ ನಿರ್ವಹಿಸುವ ಫಿಟ್ನೆಸ್ ಪರೀಕ್ಷೆಯಲ್ಲಿ ಶ್ರೀಶಾಂತ್ ಉರ್ತೀರ್ಣರಾದರೆ ಮತ್ತೆ ಕ್ರೀಡಾಂಗಣದಲ್ಲಿ ಮಿಂಚುವ ಅವಕಾಶ ಲಭಿಸಲಿದೆ.

    ಇತ್ತ ಕೆಸಿಎ ನಿರ್ಣಯದ ಕುರಿತು ಸಂತಸ ವ್ಯಕ್ತಪಡಿಸಿರುವ ಶ್ರೀಶಾಂತ್, ಕೆಸಿಎಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ದೊರೆತಿರುವ ಅವಕಾಶದಿಂದ ನನ್ನ ಉತ್ಸಾಹ ಹೆಚ್ಚಾಗಿದೆ. ರಣಜಿ ಆಡುವ ಅವಕಾಶ ಕೊಟ್ಟ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಫಿಟ್ನೆಸ್ ಸಾಬೀತು ಪಡಿಸಿ ಮತ್ತೆ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡುತ್ತೇನೆ. ಎಲ್ಲಾ ವಿವಾದಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಕೆಸಿಎ ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಾಜಿ ಬೌಲರ್ ಟಿನು ಯೊಹಾನನ್ ಅವರನ್ನು ತಂಡದ ಕೋಚ್ ಆಗಿ ನೇಮಿಸಿತ್ತು. ಈ ವೇಳೆ ಶ್ರೀಶಾಂತ್ ಕಮ್ ಬ್ಯಾಕ್ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರು, ಶ್ರೀಶಾಂತ್ ಕಮ್‍ಬ್ಯಾಕ್ ತಂಡಕ್ಕೆ ಮತ್ತಷ್ಟು ಬಲವನ್ನು ನೀಡಲಿದೆ. ಆದರೆ ಆತನ ಫಿಟ್ನೆಸ್ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಶ್ರೀ ತಂಡಕ್ಕೆ ಬಂದರೇ ಆತನ ಅನುಭವ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.

     

    View this post on Instagram

     

    #nevergiveup #cricket #love #india #kerala #PRIDE “personal responsibility in delivering excellence “

    A post shared by Sree Santh (@sreesanthnair36) on

  • ‘ಕೆ.ಎಲ್.ರಾಹುಲ್ ಟೀಂ ಇಂಡಿಯಾದ ಮುಂದಿನ ನಾಯಕ’

    ‘ಕೆ.ಎಲ್.ರಾಹುಲ್ ಟೀಂ ಇಂಡಿಯಾದ ಮುಂದಿನ ನಾಯಕ’

    – ಮಿಸ್ಟರ್ 360 ಬಗ್ಗೆ ಶ್ರೀಶಾಂತ್ ಮೆಚ್ಚುಗೆ ಮಾತು

    ನವದೆಹಲಿ: ಕನ್ನಡಿಗ, ಟೀಂ ಇಂಡಿಯಾ ಯುವ ಆಟಗಾರ ಕೆ.ಎಲ್.ರಾಹುಲ್ ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕ ಎಂದು ಭಾರತದ ವೇಗದ ಬೌಲರ್ ಎಸ್.ಶ್ರೀಶಾಂತ್ ಭವಿಷ್ಯ ನುಡಿದಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಎಸ್.ಶ್ರೀಶಾಂತ್, ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ನಂತರ ಕೆ.ಎಲ್.ರಾಹುಲ್ ಟೀಂ ಇಂಡಿಯಾದ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ತಮ್ಮ ಭವಿಷ್ಯದ ಬಗ್ಗೆ ಸೂಕ್ತ ಕಾರಣವನ್ನು ನೀಡಿದ್ದಾರೆ. ಇದನ್ನೂ ಓದಿ: ‘ಮಿಸ್ಟರ್ 360’ ರಾಹುಲ್ ಈ ಯುಗದ ನನ್ನ ನೆಚ್ಚಿನ ಬ್ಯಾಟ್ಸ್‌ಮನ್: ಬ್ರಿಯಾನ್ ಲಾರಾ

    ಯಾವುದೇ ಆಟಗಾರ ನಾಯಕನಾಗಲು ಬೇಕಾದ ಎಲ್ಲಾ ಗುಣಗಳನ್ನು ರಾಹುಲ್ ಹೊಂದಿದ್ದಾರೆ. ಅವರು ಎಲ್ಲಾ ಮೂರು ಮಾದರಿಯಲ್ಲೂ ಉತ್ತಮವಾಗಿ ಆಡುತ್ತಾರೆ. ಅಷ್ಟೇ ಅಲ್ಲದೆ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡುತ್ತಾರೆ. ರಾಹುಲ್ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ತಂಡದ ಬಗ್ಗೆ ಯೋಚಿಸುತ್ತಾನೆ. ವಿರಾಟ್‍ರಂತೆಯೇ ಅವರು ತುಂಬಾ ಶ್ರದ್ಧೆಯಿಂದ ಆಡುತ್ತಾರೆ ಎಂದು ಶ್ರೀಶಾಂತ್ ತಿಳಿಸಿದ್ದಾರೆ. ಇದನ್ನೂ ಓದಿ: ಕೆಎಲ್ ಅಂದ್ರೆ ಖಡಕ್ ಲಡ್ಕಾ- ರಾಹುಲ್‍ರನ್ನ ಹೊಗಳಿದ ಸೆಹ್ವಾಗ್

    ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ವರ್ತನೆ ಉತ್ತಮವಾಗಿದೆ. ಆದಾಗ್ಯೂ ವಿರಾಟ್ ಅವರನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಇಬ್ಬರೂ ತಮ್ಮದೇ ಆದ ಆಟದ ಶೈಲಿಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ರಾಜನಾಗಿದ್ದರೆ, ಸಚಿನ್ ಕ್ರಿಕೆಟ್ ದೇವರು ಎಂದು ಹೇಳಿದರು. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ 

    ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಮತ್ತು ಜಸ್‍ಪ್ರೀತ್ ಬುಮ್ರಾ ಅವರನ್ನು ಹೊಗಳಿದ ಶ್ರೀಶಾಂತ್, ಇಬ್ಬರೂ ತುಂಬಾ ಅಪಾಯಕಾರಿ ಬೌಲಿಂಗ್ ಮಾಡುತ್ತಾರೆ. ತಂಡದಲ್ಲಿ ಸ್ಥಿರವಾಗಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

    ಟೀಂ ಇಂಡಿಯಾದ ಪರಿಸ್ಥಿತಿ ಈಗ ಬದಲಾಗಿದೆ. ಈಗ ಯುವ ಆಟಗಾರರು ತಮ್ಮ ಹಿರಿಯರನ್ನು ಹೆಚ್ಚು ಗೌರವಿಸುವುದಿಲ್ಲ ಎಂದು ಕೆಲವು ದಿನಗಳ ಹಿಂದೆ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಹೇಳಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀಶಾಂತ್, ಸಮಯ ಈಗ ಬದಲಾಗಿದೆ. ಹಿಂದಿನ ತಂಡಕ್ಕೂ ಮತ್ತು ಈಗಿನ ತಂಡಕ್ಕೂ ದೊಡ್ಡ ವ್ಯತ್ಯಾಸವಿದೆ. ಈಗ ಆಟಗಾರರಿಗೆ ಐಪಿಎಲ್ ನಂತಹ ಹೆಚ್ಚಿನ ಅವಕಾಶಗಳಿವೆ. ಇಂತಹ ಟೂರ್ನಿಗಳು ಈ ಮೊದಲು ಇರಲಿಲ್ಲ. ನಾನು ಪ್ರಸ್ತುತ ಆಟಗಾರರಂತೆ ಯೋಚಿಸಿದರೆ, ಅದು ಕೂಡ ಸರಿ ಅಂತ ತೋರುತ್ತದೆ. ನಾನು ಕೇರಳ ರಂಜಿ ತಂಡಕ್ಕಾಗಿ ಆಡುತ್ತಿದ್ದರೂ ಅಲ್ಲಿ ನನಗೆ ಸಾಕಷ್ಟು ಗೌರವ ಸಿಗುತ್ತದೆ ಎಂದು ತಿಳಿಸಿದರು.

  • ‘ನನ್ನ ಮಗುವಿನ ಮೇಲಾಣೆ ತಪ್ಪು ಮಾಡಿಲ್ಲ’: ಶ್ರೀಶಾಂತ್

    ‘ನನ್ನ ಮಗುವಿನ ಮೇಲಾಣೆ ತಪ್ಪು ಮಾಡಿಲ್ಲ’: ಶ್ರೀಶಾಂತ್

    ನವದೆಹಲಿ: ಕಳೆದ ತಿಂಗಳು ಭಾತದ ವೇಗಿ ಶ್ರೀಶಾಂತ್ ಮೇಲಿನ ನಿಷೇಧವನ್ನು ಕಡಿಮೆ ಮಾಡಿ ಬಿಸಿಸಿಐ ಸಮಿತಿ ನಿರ್ಣಯ ತೆಗೆದುಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಕುರಿತು ಇತ್ತೀಚೆಗೆ ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್, ‘ನನ್ನ ಮಗುವಿನ ಮೇಲಾಣೆ ನಾನು ಆ ತಪ್ಪು ಮಾಡಿಲ್ಲ’ ಎಂದು ಭಾವುಕರಾಗಿದ್ದಾರೆ.

    ನನ್ನ ತಂದೆ, ಮಗುವಿನ ಮೇಲಾಣೆ, ನಾನು ಯಾವುದೇ ರೀತಿಯ ಫಿಕ್ಸಿಂಗ್ ಮಾಡಿಲ್ಲ. ಅಂತಹ ಯೋಚನೆಯೇ ನನಗೆ ಬಂದಿಲ್ಲ. ಇಂದು ನನ್ನ ತಂದೆ, ತಾಯಿ ಅನಾರೋಗ್ಯದಿಂದ ಬಳುತ್ತಿದ್ದಾರೆ. ಕಳೆದ 5 ವರ್ಷಗಳಿಂದಲೂ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದು, ಇಂದು ನಾನು ಆಡುವ ಪಂದ್ಯವನ್ನು ಅವರು ನೋಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ. 100 ಕೋಟಿ ರೂ. ಕೊಟ್ಟರೂ ನಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಮುಂದಿನ ವರ್ಷದ ಆಗಸ್ಟ್ ವೇಳೆಗೆ ಶ್ರೀಶಾಂತ್ ಮೇಲಿನ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, 7 ವರ್ಷದ ನಿಷೇಧದ ಅವಧಿ ಅಂತ್ಯವಾಗಲಿದೆ. ನಿಷೇಧ ತೆರವಾದ ಬಳಿಕ ಮತ್ತೆ ತಾವು ಕ್ರಿಕೆಟ್ ಆಡಬೇಕು ಎಂದು ಶ್ರೀಶಾಂತ್ ಹೇಳಿದ್ದು, ವಿಶ್ವ ಕ್ರಿಕೆಟ್‍ನಲ್ಲಿ ಹಲವು ಲೀಗ್ ಆಡುತ್ತಿದ್ದಾರೆ. ನನ್ನ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಲು ನಾನು ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡಬೇಕಿದೆ ಎಂದು ಹೇಳಿದ್ದಾರೆ.

  • ಶ್ರೀಶಾಂತ್ ಮನೆಯಲ್ಲಿ ಅಗ್ನಿ ಅವಘಡ

    ಶ್ರೀಶಾಂತ್ ಮನೆಯಲ್ಲಿ ಅಗ್ನಿ ಅವಘಡ

    ತಿರುವನಂತಪುರಂ: ಭಾರತದ ತಂಡದ ಕ್ರಿಕೆಟಿಗ ಮತ್ತು ನಟ ಶ್ರೀಶಾಂತ್ ಮನೆಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ.

    ಶ್ರೀಶಾಂತ್ ಅವರ ಕೇರಳದ ಕೊಚ್ಚಿಯ ಎಡಪಲ್ಲಿ ಪ್ರದೇಶದಲ್ಲಿರುವ ಮನೆಗೆ ಇಂದು ಮುಂಜಾನೆ 2 ಗಂಟೆಯ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ಹೇಳಿದ್ದಾರೆ.

    ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚರಗೊಂಡ ಅಕ್ಕಪಕ್ಕದ ಮನೆಯವರು ಅಗ್ನಿಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಮತ್ತು ಮನೆಯ ಗಾಜಿನ ವೆಂಟಿಲೇಟರ್ ಒಡೆದು ಮನೆಯಲ್ಲಿ ಇದ್ದವರನ್ನು ಸ್ಥಳಾಂತರ ಮಾಡಿದ್ದಾರೆ.

    ಈ ಘಟನೆಯ ಬಗ್ಗೆ ಮಾತನಾಡಿರುವ ಶ್ರೀಶಾಂತ್, ನನ್ನ ಪತ್ನಿ ಮತ್ತು ಮಕ್ಕಳು ಮೊದಲನೇ ಮಹಡಿಯಲ್ಲಿ ಇದ್ದರು. ಅ ಸಮಯದಲ್ಲಿ ನೆಲಮಹಡಿಯಲ್ಲಿ ಇರುವ ಡ್ರಾಯಿಂಗ್ ರೂಮ್‍ನಲ್ಲಿ ಸೀಲಿಂಗ್ ಫ್ಯಾನ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ನಾನು ಅ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ಶೂಟಿಂಗ್ ಇದ್ದ ಕಾರಣ ಮುಂಬೈಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.

    ಭಾರತದ ಪರ ಶ್ರೀಶಾಂತ್ 27 ಟೆಸ್ಟ್ ಮತ್ತು 53 ಏಕದಿನ ಪಂದ್ಯಗಳನ್ನು ಆಡಿ ಟೆಸ್ಟ್ ನಲ್ಲಿ 87 ಹಾಗೂ ಏಕದಿನದಲ್ಲಿ 75 ವಿಕೆಟ್ ಪಡೆದಿದ್ದಾರೆ. ಎರಡು ವಿಶ್ವಕಪ್ ವಿಜೇತ ಭಾರತ ತಂಡಗಳ ಭಾಗವಾಗಿರುವ ಶ್ರೀಶಾಂತ್ ಅವರನ್ನು 2013 ರ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೀವಾವಧಿ ನಿಷೇಧ ಮಾಡಿತ್ತು.

    ಈ ವಾರದ ಆರಂಭದಲ್ಲಿ, ಬಿಸಿಸಿಐ ನ್ಯಾಯಮೂರ್ತಿ (ನಿವೃತ್ತ) ಡಿಕೆ ಜೈನ್ ಅವರು ಶ್ರೀಶಾಂತ್ ಅವರ ಜೀವಾವಧಿ ನಿಷೇಧವನ್ನು ಕಡಿಮೆ ಮಾಡಿ 7 ವರ್ಷಕ್ಕೆ ಇಳಿಸಿದರು. ಈ ಮೂಲಕ ಸೆಪ್ಟೆಂಬರ್ 12, 2020 ರಂದು ಶ್ರೀಶಾಂತ್ ಅವರ ಅಮಾನತು ಕೊನೆಗೊಳ್ಳಲಿದೆ.

  • ತಮ್ಮನ ಬಗ್ಗೆ ಹೆಮ್ಮೆಯ ಮಾತಾಡಿದರು ನವರಸ ನಾಯಕ!

    ತಮ್ಮನ ಬಗ್ಗೆ ಹೆಮ್ಮೆಯ ಮಾತಾಡಿದರು ನವರಸ ನಾಯಕ!

    ಬೆಂಗಳೂರು: ಪ್ರತಿಭಾವಂತ ನಟ ಕೋಮಲ್ ಎಲ್ಲಿ ಹೋದರು ಎಂಬ ಪ್ರಶ್ನೆಯೊಂದು ವರ್ಷಾಂತರಗಳಿಂದ ಅವರನ್ನು ಅಭಿಮಾನಿಸುವ, ಮೆಚ್ಚಿಕೊಳ್ಳುವವರನ್ನೆಲ್ಲ ಕಾಡುತ್ತಲೇ ಇದೆ. ಕೆಂಪೇಗೌಡ 2 ಚಿತ್ರದ ಮೂಲಕ ಭಿನ್ನ ಗೆಟಪ್ಪಿನಲ್ಲಿ ಕೋಮಲ್ ಮತ್ತೆ ಮರಳೋ ಸೂಚನೆ ನೀಡಿದಾಗ ಎಲ್ಲರೂ ಖುಷಿಗೊಂಡಿದ್ದರು. ಆದರೆ ಅದಾದ ನಂತರವೂ ಒಂದು ದೊಡ್ಡ ಗ್ಯಾಪಿನ ನಂತರ ಕೋಮಲ್ ಕೆಂಪೇಗೌಡನಾಗಿ ಅಬ್ಬರಿಸಿದ್ದಾರೆ. ಯೂಟ್ಯೂಬ್ ನಲ್ಲಿ ಈ ಸಿನಿಮಾ ಟ್ರೈಲರ್ ಈಗ ಮಿಲಿಯನ್ನುಗಟ್ಟಲೆ ವೀವ್ಸ್ ಪಡೆಯೋ ಮೂಲಕ ವಿರಾಟ್ ರೂಪ ಪ್ರದರ್ಶಿಸಿದೆ.

    ಕೆಂಪೇಗೌಡ2 ಚಿತ್ರದ ಟ್ರೈಲರ್ ಗೆ ಈ ಪಾಟಿ ಜನಬೆಂಬಲ ಸಿಕ್ಕಿರೋದರಿಂದ ಕೋಮಲ್ ಕೂಡಾ ಖುಷಿಗೊಂಡಿದ್ದಾರೆ. ಹೊಸಾ ಗೆಟಪ್ಪಿನಲ್ಲಿ ಮರಳಿದಾಗ ಈ ಥರದ ಸ್ವಾಗತ ಸಿಕ್ಕರೆ ಯಾವ ನಟನಿಗೇ ಆದರೂ ಅದಕ್ಕಿಂತಲೂ ಖುಷಿಯ ಸಂಗತಿ ಬೇರೊಂದಿರಲು ಸಾಧ್ಯವಿಲ್ಲ. ಹೀಗೆ ತಮ್ಮನ ಚಿತ್ರ ಗೆಲ್ಲುವ ಸ್ಪಷ್ಟ ಸೂಚನೆ ಸಿಕ್ಕಿರುವಾಗ ಅಣ್ಣ ಜಗ್ಗೇಶ್ ಅವರಿಗೆ ಖುಷಿಯಾಗದಿರಲು ಸಾಧ್ಯವೇ?

    ಆರಂಭದಿಂದ ಇಲ್ಲಿಯವರೆಗೂ ಸಹೋದರ ಕೋಮಲ್ ಅವರಿಗೆ ಬೆನ್ನೆಲುಬಾಗಿ ಸಾಥ್ ನೀಡುತ್ತಾ ಬಂದಿರುವವರು ಜಗ್ಗೇಶ್. ಅವರೀಗ ಕೆಂಪೇಗೌಡ 2 ಚಿತ್ರದ ಟ್ರೈಲರಿಗೆ ಸಿಕ್ಕಿರೋ ಅಭೂತಪೂರ್ವ ಬೆಂಬಲದಿಂದ ಥ್ರಿಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕವೇ ಇದಕ್ಕೆ ಕಾರಣರಾದ ಕನ್ನಡ ಕುಲಕೋಟಿಗೆ ಧನ್ಯವಾದ ಸಮರ್ಪಿಸಿದ್ದಾರೆ. `ಕೆಂಪೇಗೌಡ2 ಚಿತ್ರಕ್ಕೆ ಒಂದು ಮಿಲಿಯನ್ ವೀಕ್ಷಣೆ ಸಿಗುವಂತೆ ಮಾಡಿದ ಕನ್ನಡ ಕುಲಕೋಟಿಗೆ ಧನ್ಯವಾದಗಳು. ಇದೀಗ ಈ ಸಿನಿಮಾಗೆ ಡಿಐ ನಡೆಯುತ್ತಿದೆ. ಈ ರಾ ಸಿನಿಮಾ ನೋಡಿಯೇ ನನಗೆ ರೋಮಾಂಚನವಾಗಿದೆ. ಬೆಸ್ಟ್ ಕಮರ್ಶಿಯಲ್ ಮೂವಿಗಳ ಸಾಲಿಗೆ ಈ ಚಿತ್ರ ಸೇರಲಿದೆ ಎಂದು ಮನ ಹೇಳಿತು. ಅಣ್ಣನಾಗಿ ಹೆಮ್ಮೆಯಾಯಿತು’ ಅಂತ ಜಗ್ಗೇಶ್ ಬರೆದುಕೊಂಡಿದ್ದಾರೆ.

    ಶಂಕರ್ ಗೌಡ ನಿರ್ದೇಶನದ ಈ ಚಿತ್ರದಲ್ಲಿ ಕೋಮಲ್ ಈವರೆಗಿನ ಇಮೇಜನ್ನೇ ಬದಲಾಯಿಸಿಕೊಳ್ಳುವಂಥಾ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಕ್ರಿಕೆಟರ್ ಶ್ರೀಶಾಂತ್ ಖಳ ನಟನಾಗಿ ನಟಿಸಿದ್ದಾರೆ. ಲೂಸ್ ಮಾದ ಯೋಗಿ ಕೂಡಾ ಸ್ಪೆಷಲ್ ರೋಲ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕೋಮಲ್ ಪಾಲಿಗೆ ಮರುಹುಟ್ಟಿನಂಥಾ ರೀ ಎಂಟ್ರಿ. ಈ ಸಾಸದಲ್ಲಿ ದೊಡ್ಡ ಮಟ್ಟದಲ್ಲಿಯೇ ಗೆಲ್ಲುವ ಸೂಚನೆ ಟ್ರೈಲರಿಗೆ ಸಿಗುತ್ತಿರೋ ಬೆಂಬಲದ ಮೂಲಕವೇ ಸ್ಪಷ್ಟವಾಗುತ್ತದೆ.

  • ರಾಹುಲ್ ದ್ರಾವಿಡ್‍ರನ್ನ ಅವಾಚ್ಯ ಪದಗಳಿಂದ ನಿಂದಿಸಿದ್ದ ಶ್ರೀಶಾಂತ್: ಅಪ್ಟನ್

    ರಾಹುಲ್ ದ್ರಾವಿಡ್‍ರನ್ನ ಅವಾಚ್ಯ ಪದಗಳಿಂದ ನಿಂದಿಸಿದ್ದ ಶ್ರೀಶಾಂತ್: ಅಪ್ಟನ್

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಹಾಗೂ ತಮ್ಮನ್ನು ಸಾರ್ವಜನಿಕವಾಗಿ ಶ್ರೀಶಾಂತ್ ನಿಂದಿಸಿದ್ದರು ಎಂದು 2013ರಲ್ಲಿ ರಾಜಸ್ಥಾನ ರಾಯಲ್ಸ್ ಕೋಚ್ ಆಗಿದ್ದ ಪ್ಯಾಡಿ ಅಪ್ಟನ್ ಬಹಿರಂಗ ಪಡಿಸಿದ್ದಾರೆ.

    ಇತ್ತೀಚೆಗೆ ಕೋಚ್ ಪ್ಯಾಡಿ ಅಪ್ಟನ್ ಅವರ ‘ದ ಬೇರ್ ಫೋಟ್ ಕೋಚ್’ ಎಂಬ ಪುಸ್ತಕ ಬರೆದಿದ್ದು, ಈ ಪುಸ್ತಕದಲ್ಲಿ ಶ್ರೀಶಾಂತ್ ನಡವಳಿಕೆ ಕುರಿತು ಬರೆದುಕೊಂಡಿದ್ದಾರೆ.

    2013 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಹುಲ್ ದ್ರಾವಿಡ್ ನಾಯಕರಾಗಿ ಮುನ್ನಡೆಸುತ್ತಿದ್ದರು. ಪ್ಯಾಡಿ ಅಪ್ಟನ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಶ್ರೀತಾಂತ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಅವರ ಬಂಧನ ಆಗುವ ಮುನ್ನ ನಡೆದ ಪಂದ್ಯದಿಂದ ಅವರನ್ನು ಕೈಬಿಡಲಾಗಿತ್ತು. ಇದರಿಂದ ಕೋಪಗೊಂಡ ಶ್ರೀಶಾಂತ್ ತಂಡದ ನಾಯಕರಾಗಿದ್ದ ದ್ರಾವಿಡ್ ಹಾಗೂ ತಮ್ಮನ್ನು ನಿಂದಿಸಿದ್ದರು ಎಂದು ವಿವರಿಸಿದ್ದಾರೆ.

    ಸ್ಪಾಟ್ ಫಿಕ್ಸಿಂಗ್ ಆರೋಪದ ಅಡಿಯಲ್ಲಿ 2013ರ ಮೇ 16 ರಂದು ಶ್ರೀಶಾಂತ್ ಬಂಧನವಾಗಿತ್ತು. ಅದಕ್ಕೂ ಮುನ್ನ ಶ್ರೀಶಾಂತ್ ಅಸಭ್ಯ ವರ್ತನೆ ತೋರಿದ್ದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಪರಿಣಾಮ ಅವರಿಗೆ ತಂಡದಿಂದ ಕೈಬಿಟ್ಟಿರುವ ವಿಚಾರ ಶ್ರೀಶಾಂತ್‍ಗೆ ತಿಳಿಸಲಾಗಿತ್ತು. ಈ ವಿಚಾರಕ್ಕೆ ಅವರಿಗೆ ಕೋಪ ಬಂದಿತ್ತು. ತಂಡದ ಸಹ ಆಟಗಾರರ ಎದುರೇ ಅವಾಚ್ಯ ಪದ ಪ್ರಯೋಗ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಕೋಚ್ ಪ್ಯಾಡಿ ಅವರ ಬರಹದ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಪ್ಯಾಡಿ ಒಬ್ಬ ಸುಳ್ಳುಗಾರ, ನಾನು ಎಂದು ಸಹ ಆಟಗಾರರೊಂದಿಗೆ ಈ ರೀತಿ ವರ್ತಿಸಿಲ್ಲ ಎಂದು ಹೇಳಿದ್ದಾರೆ.

  • ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಶ್ರೀಶಾಂತ್‍ಗೆ  ಸುಪ್ರೀಂನಿಂದ ಬಿಗ್ ರಿಲೀಫ್

    ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಶ್ರೀಶಾಂತ್‍ಗೆ ಸುಪ್ರೀಂನಿಂದ ಬಿಗ್ ರಿಲೀಫ್

    ನವದೆಹಲಿ: 2013ರಲ್ಲಿ ಕ್ರಿಕೆಟಿಗ ಶ್ರೀಶಾಂತ್ ಮೇಲೆ ಬಿಸಿಸಿಐ ಶಿಸ್ತು ಸಮಿತಿ ವಿಧಿಸಿದ್ದ ಅಜೀವ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದು, ನಿಷೇಧದ ಮರುಪರಿಶೀಲನೆ ಮಾಡುವಂತೆ ಸೂಚನೆ ನೀಡಿದೆ.

    ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ. ಕೆಎಂ ಜೋಸೆಫ್ ದ್ವಿಸದಸ್ಯ ಪೀಠ ಶ್ರೀಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿತ್ತು. ಈ ವೇಳೆ ಬಿಸಿಸಿಐ ಶ್ರೀಶಾಂತ್ ಮೇಲೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸಿ ಮೂರು ತಿಂಗಳ ಒಳಗಾಗಿ ಮರುವಿಚಾರಣೆ ನಡೆಸಿ ಉತ್ತರಿಸುವಂತೆ ಸೂಚಿಸಿದೆ.

    ಶ್ರೀಶಾಂತ್ ಪರ ವಕೀಲರಾದ ಸಲ್ಮಾನ್ ಖುರ್ಷಿದ್ ಮಂಡಿಸಿದ ವಾದ ಆಲಿಸಿದ ನ್ಯಾಯಾಲಯ ಖಚಿತವಾದ ಆಧಾರಗಳಿಲ್ಲದೇ ಅಜೀವ ನಿಷೇಧ ಶಿಕ್ಷೆ ಬಹಳ ಕಠಿಣ ನಿರ್ಣಯ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ನಿರ್ಧಾರ ಶ್ರೀಶಾಂತ್ ವಿರುದ್ಧದ ಕ್ರಿಮಿನಲ್ ಪ್ರಕರಣ ಮೇಲೆ ಇದು ಪ್ರಭಾವ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    2013ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದ ಶ್ರೀಶಾಂತ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಈ ವೇಳೆ ಓವರಿನಲ್ಲಿ 14 ರನ್ ನೀಡಲು ಶ್ರೀಶಾಂತ್ ಫಿಕ್ಸಿಂಗ್ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಆ ಓವರಿನಲ್ಲಿ 13 ರನ್ ಮಾತ್ರ ಬಂದಿದೆ. ಶ್ರೀಶಾಂತ್ ಯಾವುದೇ ಫಿಕ್ಸಿಂಗ್ ಮಾಡಿಕೊಂಡಿರಲಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು. ಫಿಕ್ಸಿಂಗ್ ಆರೋಪದಲ್ಲಿ ಶ್ರೀಶಾಂತ್ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲ. ಕೇವಲ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ಕ್ರಮಕೈಗೊಳ್ಳಲಾಗಿತ್ತು ಎಂಬುದನ್ನು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಅಲ್ಲದೇ ಬಿಸಿಸಿಐ ನಿಷೇಧವನ್ನು ತೆರವುಗೊಳಿಸಿದರೆ ಮತ್ತೆ ಕ್ರಿಕೆಟ್ ಆಡಲು ಶ್ರೀಶಾಂತ್ ಸಿದ್ಧರಿದ್ದಾರೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

    2018 ರಲ್ಲಿ ಕೇರಳ ಹೈಕೋರ್ಟ್ ಏಕ ಸದಸ್ಯ ಪೀಠ ಬಿಸಿಸಿಐ ಆದೇಶವನ್ನು ರದ್ದುಗೊಳಿಸಿತ್ತು. ಬಿಸಿಸಿಐ ಈ ತೀರ್ಪಿನ ಬಗ್ಗೆ ಮರುಪರಿಶೀಲನೆ ನಡೆಸಲು ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನಿಷೇಧವನ್ನು ತೆರವುಗೊಳಿಸಲು ತಡೆ ನೀಡಿತ್ತು. ಪರಿಣಾಮ ಶ್ರೀಶಾಂತ್ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

    ಶ್ರೀಶಾಂತ್ ಮಾತ್ರವಲ್ಲದೇ ಮತ್ತಿಬ್ಬರು ಆಟಗಾರರ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮೂವರನ್ನು ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೋಬ್ಬರಿ 10 ವರ್ಷಗಳ ಬಳಿಕ ಶ್ರೀಶಾಂತ್ ಜೊತೆ ಕ್ಷಮೆ ಕೇಳಿದ ಹರ್ಭಜನ್

    ಬರೋಬ್ಬರಿ 10 ವರ್ಷಗಳ ಬಳಿಕ ಶ್ರೀಶಾಂತ್ ಜೊತೆ ಕ್ಷಮೆ ಕೇಳಿದ ಹರ್ಭಜನ್

    ಮುಂಬೈ: ಇಂಡಿಯನ್ ಪ್ರೀಯರ್ ಲೀಗ್ (ಐಪಿಎಲ್) ನಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ‘ಕಪಾಳ ಮೋಕ್ಷ’ ಮಾಡಿದ ಘಟನೆ ಬಗ್ಗೆ ಟೀಂ ಇಂಡಿಯಾ ಬೌಲರ್ ಹರ್ಭಜನ್ ಸಿಂಗ್ ಕ್ಷಮೆ ಕೋರಿದ್ದಾರೆ.

    ಘಟನೆ ನಡೆದ ಬರೋಬ್ಬರಿ 10 ವರ್ಷಗಳ ಬಳಿಕ ಹರ್ಭಜನ್ ಈ ಕುರಿತು ಮಾತನಾಡಿದ್ದು, ನಾನು ಶ್ರೀಶಾಂತ್ ಮೇಲೆ ಕೈ ಮಾಡಬಾರದಿತ್ತು. ಅದರಲ್ಲೂ ರಾಷ್ಟ್ರೀಯ ತಂಡದಲ್ಲಿ ಜೊತೆಗೆ ಆಡಿದ್ದ ಶ್ರೀಶಾಂತ್ ಒಬ್ಬ ಉತ್ತಮ ಆಟಗಾರನಾಗಿದ್ದು, ಅವರಿಗೆ ಹಾಗೂ ಅವರ ಕುಟುಂಬಕ್ಕೆ ನಾನು ಶುಭಕೋರುತ್ತೇನೆ. ಜನರು ಈ ಬಗ್ಗೆ ಎಷ್ಟೇ ಮಾತನಾಡಿದ್ರು, ಇಂದಿಗೂ ಶ್ರೀಶಾಂತ್ ನನ್ನ ಸಹೋದರ ಎಂದು ಹೇಳಿದ್ದಾರೆ.

    2008ರ ಐಪಿಎಲ್ ಆವೃತ್ತಿ ವೇಳೆ ಮುಂಬೈ ತಂಡ ಹಾಗೂ ಪಂಜಾಬ್ ತಂಡದಲ್ಲಿ ಇದ್ದ ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ನಡುವೆ ಕಪಾಳ ಮೋಕ್ಷ ಘಟನೆ ನಡೆದಿತ್ತು. ಪಂದ್ಯದಲ್ಲಿ ಪಂಜಾಬ್ ತಂಡ ಗೆಲುವು ಪಡೆದ ವೇಳೆ ಘಟನೆ ನಡೆದಿತ್ತು. ಈ ಘಟನೆ ಕ್ರಿಕೆಟ್ ಅಭಿಮಾನಿಗಳನ್ನು ಶಾಕ್‍ಗೆ ಗುರಿ ಮಾಡಿತ್ತು. ಶ್ರೀಶಾಂತ್ ಪಂದ್ಯದಲ್ಲಿ ಗೆದ್ದ ವೇಳೆ ಅನುಚಿತವಾಗಿ ಸಂಭ್ರಮಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಹರ್ಭಜನ್ ಸಿಂಗ್ ಕೋಪದಿಂದ ಶ್ರೀಶಾಂತ್ ಮೇಲೆ ಕೈ ಮಾಡಿದ್ದರು. ಈ ಘಟನೆಯನ್ನು ನೆನಪಿಸಿಕೊಂಡಿರುವ ಹರ್ಭಜನ್ ಮತ್ತೊಮ್ಮೆ ಕ್ಷಮೆ ಕೋರಿದ್ದಾರೆ.

    ಈ ಹಿಂದೆಯೂ ಕೂಡ ಹರ್ಭಜನ್ ಘಟನೆ ಬಗ್ಗೆ ಮಾತನಾಡಿ ತಮ್ಮ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಬಿಗ್ ಬಾಸ್‍ನಲ್ಲಿ ಭಾಗವಹಿಸಿರುವ ಶ್ರೀಶಾಂತ್ ಗೆ ಕ್ಷಮೆ ಕೋರಿದ್ದಾರೆ. ಘಟನೆ ಬಗ್ಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ರೀಶಾಂತ್, ಅಂದು ಹರ್ಭಜನ್ ಕೇವಲ ನನಗೆ ಕಪಾಳ ಮೋಕ್ಷ ಮಾತ್ರವಷ್ಟೇ ಮಾಡಿರಲಿಲ್ಲ, ಬಲವಾಗಿ ಹೊಡೆದಿದ್ದರು ಎಂದು ನೆನಪಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv