Tag: ಶ್ರೀಶಾಂತ್

  • ಗಂಭೀರ್ ವಿರುದ್ಧ ಆರೋಪ – ಶ್ರೀಶಾಂತ್‍ಗೆ ಲೀಗಲ್ ನೋಟಿಸ್ ಜಾರಿ

    ಗಂಭೀರ್ ವಿರುದ್ಧ ಆರೋಪ – ಶ್ರೀಶಾಂತ್‍ಗೆ ಲೀಗಲ್ ನೋಟಿಸ್ ಜಾರಿ

    ಸೂರತ್: ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವೇಳೆ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಹಾಗೂ ವೇಗದ ಬೌಲರ್ ಶ್ರೀಶಾಂತ್ (Sreesanth) ನಡುವಿನ ಗಲಾಟೆ ವಿಚಾರವಾಗಿ ಶ್ರೀಶಾಂತ್‍ಗೆ ನೋಟಿಸ್‍ನ ಬಿಸಿ ತಟ್ಟಿದೆ.

    ಗೌತಮ್ ಗಂಭೀರ್ ಫಿಕ್ಸರ್ ಎಂದು ಕರೆದಿದ್ದಾರೆ ಎಂದು ಶ್ರೀಶಾಂತ್ ಆರೋಪಿಸಿದ್ದರು. ಈಗ ಅವರಿಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ (Legends League Cricket) ಕಮಿಷನರ್ ಲೀಗಲ್ ನೋಟಿಸ್ ನೀಡಿದ್ದಾರೆ. ಟಿ20 ಟೂರ್ನಿಯಲ್ಲಿ ಆಡುವ ವೇಳೆ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಶ್ರೀಶಾಂತ್ ತಪ್ಪಿತಸ್ಥರು ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ. ಆಟಗಾರನನ್ನು ಟೀಕಿಸುವ ವೀಡಿಯೊಗಳನ್ನು ತೆಗೆದುಹಾಕಿದರೆ ಮಾತ್ರ ಅವರೊಂದಿಗೆ ಮಾತುಕತೆ ಮಾಡಲಾಗುವುದು ಎಂದು ಹೇಳಲಾಗಿದೆ. ಇದನ್ನೂ ಓದಿ: KSCA ಟೂರ್ನಿಗಳಲ್ಲಿ 1,400 ರನ್‌ – ಟೀಂ ಇಂಡಿಯಾ ಸೇರಲು ಕನಸು ಕಾಣುತ್ತಿದ್ದಾನೆ ಬೆಂಗಳೂರಿನ ಬಾಲಕ

    ಇಬ್ಬರ ಗಲಾಟೆ ವಿಚಾರವಾಗಿ ಅಂಪೈರ್‌ಗಳು ತಮ್ಮ ವರದಿಯನ್ನು ಕಳಿಸಿದ್ದು, ಶ್ರೀಶಾಂತ್ ಅವರನ್ನು ಫಿಕ್ಸರ್ ಎಂದು ಕರೆದ ಬಗ್ಗೆ ಅದರಲ್ಲಿ ಮಾಹಿತಿ ಇಲ್ಲ. ಶ್ರೀಶಾಂತ್ ಅವರು ಒಂದೆರಡು ವೀಡಿಯೋಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗಂಭೀರ್ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಈ ಇಬ್ಬರ ಜಗಳ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಇಬ್ಬರು ಆಟಗಾರರ ಗಲಾಟೆ ವಿಚಾರವಾಗಿ ಶ್ರೀಶಾಂತ್ ಅವರ ಪತ್ನಿ ಸಹ ಸಾಮಾಜಿಕ ಜಾಲತಾಣದಲ್ಲಿ ಗಂಭೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಟಿ20ಯಲ್ಲಿ ರವಿ ಬಿಷ್ಣೋಯ್‌ಗೆ ಅಗ್ರ ಸ್ಥಾನ – ಐಸಿಸಿ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಕಮಾಲ್‌

  • 18.70 ಲಕ್ಷ ವಂಚನೆ- ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ದೂರು ದಾಖಲು

    18.70 ಲಕ್ಷ ವಂಚನೆ- ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ದೂರು ದಾಖಲು

    ತಿರುವನಂತಪುರಂ: ಕ್ರಿಕೆಟಿಗ (Cricket) ಶ್ರೀಶಾಂತ್ ವಿರುದ್ಧ 18.70 ಲಕ್ಷ ರೂ. ಪಡೆದು ವಂಚಿಸಿರುವ ಆರೋಪ (Cheating Case) ಕೇಳಿ ಬಂದಿದೆ. ಕೇರಳದ (Kerala) ವ್ಯಕ್ತಿಯೊಬ್ಬರಿಂದ ಶ್ರೀಶಾಂತ್  (S. Sreesanth) ಸೇರಿ ಇಬ್ಬರು ವ್ಯಕ್ತಿಗಳು ಹಣ ಪಡೆದು ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.

    ವಂಚನೆ ಪ್ರಕರಣದ ಆರೋಪಿಗಳಾದ ಶ್ರೀಶಾಂತ್, ರಾಜೀವ್ ಕುಮಾರ್ ಮತ್ತು ವೆಂಕಟೇಶ್ ಕಿಣಿ ಎಂಬವರು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡೆಮಿಯನ್ನು ನಿರ್ಮಿಸುವುದಾಗಿ ಹೇಳಿ 2019 ರಿಂದ ವಿವಿಧ ದಿನಾಂಕಗಳಲ್ಲಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 18.70 ಲಕ್ಷ ರೂ. ಹಣ ಪಡೆದಿದ್ದಾರೆ ಎಂದು ಚೂಂಡಾ ಮೂಲದ ದೂರುದಾರರ ಸರೀಶ್ ಗೋಪಾಲನ್ ಆರೋಪಿಸಿದ್ದಾರೆ. ಅಕಾಡೆಮಿಯಲ್ಲಿ ಪಾಲುದಾರರಾಗಲು ಅವಕಾಶ ನೀಡಿದ ನಂತರ ಹಣವನ್ನು ಹೂಡಿಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ದೇಶದಲ್ಲಿ ‘ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌’ ಆಯೋಜನೆ: ಅನುರಾಗ್‌ ಠಾಕೂರ್‌

    ಶ್ರೀಶಾಂತ್ ಮತ್ತು ಇತರ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಶ್ರೀಶಾಂತ್ ಅವರನ್ನು ಮೂರನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪಾಕ್‌ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲಾಗುತ್ತಿಲ್ಲ – ಶಮಿ ತಿರುಗೇಟು

  • IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    ಮುಂಬೈ: 16ನೇ ಐಪಿಎಲ್ (IPL 2023) ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ದೇಶದ ವಿವಿಧೆಡೆ 12 ಕ್ರೀಡಾಂಗಣಗಳಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ.

    ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದಿರುವ ದಿಗ್ಗಜರು ಈ ಐಪಿಎಲ್‌ನೊಂದಿಗೆ ವಿದಾಯ ಹೇಳುವ ಸಾಧ್ಯತೆಗಳೂ ಇವೆ. ಈ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ (S. Sreesanth) ಖಾಸಗಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) 2023ರ ಐಪಿಎಲ್ ಟ್ರೋಫಿ ಗೆಲ್ಲುತ್ತೆ ಅನ್ನಿಸಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸೋಫಿ ಬೆಂಕಿ ಬ್ಯಾಟಿಂಗ್‌ – RCBಗೆ 8 ವಿಕೆಟ್‌ಗಳ ಭರ್ಜರಿ ಜಯ

    ಹೊಸ ತಂಡಗಳು ಟ್ರೋಫಿ ಗೆದ್ದರೆ ಖುಷಿಯಾಗುತ್ತೆ. ಅದರಲ್ಲೂ ಆರ್‌ಸಿಬಿ (RCB) ತಂಡ 2023ರ ಟ್ರೋಫಿ ಗೆದ್ದರೆ ನಾನು ತುಂಬಾನೇ ಖುಷಿಪಡುತ್ತೇನೆ. ಏಕೆಂದರೆ ಭಾರತೀಯ ಕ್ರಿಕೆಟ್ ಜಗತ್ತಿಗೆ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ಕೊಹ್ಲಿ (Virat Kohli) ಸಾಕಷ್ಟು ಕೊಡುಗೆ ನೀಡಿದ್ದಾರೆ. ಆರ್‌ಸಿಬಿ ಈವರೆಗೆ ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆ. ಆದರೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಈ ಬಾರಿ ಕಪ್ ಗೆದ್ದರೆ ಖುಷಿಪಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್‌ ಜಾಕ್ಸ್‌ ಬದಲಿಗೆ ಕಿವೀಸ್‌ ಸ್ಟಾರ್‌ ಆಲ್‌ರೌಂಡರ್‌ ಸೇರ್ಪಡೆ

    ಮುಂಬೈ ಇಂಡಿಯನ್ಸ್ (Mumbai Indians) 5 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 2021ರ ಆವೃತ್ತಿ ಸೇರಿ 4 ಬಾರಿ ಚಾಂಪಿಯನ್ ಆಗಿದೆ. ಕೋಲ್ಕತ್ತಾ ನೈಟ್‌ರೈಡರ್ಸ್ 2 ಬಾರಿ ಪ್ರಶಸ್ತಿ ಬಾಚಿಕೊಂಡಿದ್ದು, 3ನೇ ಸ್ಥಾನದಲ್ಲಿದೆ. 2022ರ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿರುವ ಗುಜರಾತ್ ಟೈಟಾನ್ಸ್ (Gujarat Titans) ತಂಡ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ.

  • ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಮುಂಬೈ: ಐಪಿಎಲ್ 2008ರ ಆವೃತ್ತಿಯ ಪಂದ್ಯವೊಂದರಲ್ಲಿ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ತಂಡದ ಮಾಜಿ ಬೌಲರ್ ಶ್ರೀಶಾಂತ್‍ಗೆ 14 ವರ್ಷಗಳ ನಂತರ ಕ್ಷಮೆಯಾಚಿಸಿದ್ದಾರೆ.

    ಹರ್ಭಜನ್ ಸಿಂಗ್ ಅವರು ಲೈವ್ ವೀಡಿಯೋ ಚಾಟ್‍ನಲ್ಲಿ ಶ್ರೀಶಾಂತ್ ಜೊತೆ ಮಾತನಾಡಿ, 2008ರಲ್ಲಿ ನಡೆದ ಘಟನೆಯ ಬಗ್ಗೆ ಅವರು ಅನುಭವಿಸಿದ ಮುಜುಗರವನ್ನು ಬಹಿರಂಗಪಡಿಸಿದರು. ಅಂದು ನಡೆದದ್ದು ತಪ್ಪು. ನಾನು ತಪ್ಪು ಮಾಡಿದ್ದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೂ ಮುಜುಗರವಾಯಿತು. ಒಂದು ತಪ್ಪನ್ನು ತಿದ್ದಲೆಂದು ಮೈದಾನದಲ್ಲಿ ಶ್ರೀಶಾಂತ್ ಜೊತೆಗೆ ನಾನು ನಡೆದುಕೊಂಡ ರೀತಿ ಇದೆಯಲ್ಲ ಅದು ಆಗಬಾರದಿತ್ತು. ನಾನು ಅದರ ಬಗ್ಗೆ ಯೋಚಿಸಿದಾಗಲೆಲ್ಲ ಅದು ಆಗಬಾರದಿತ್ತು ಅಂತಾ ಅಂದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ನಾಯಕ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಹರ್ಭಜನ್ ಸಿಂಗ್ ಅವರು, ಪಂಜಾಬ್ ತಂಡದ ಬೌಲರ್ ಶ್ರೀಶಾಂತ್ ಅವರ ಆಕ್ರಮಣಕಾರಿ ನಡುವಳಿಕೆಯಿಂದ ಆಕ್ರೋಶಗೊಂಡಿದ್ದರು. ಪಂದ್ಯದ ಫಲಿತಾಂಶದ ನಂತರ, ತಮ್ಮ ಬಳಿಗೆ ಬಂದ ಶ್ರೀಶಾಂತ್ ಅವರ ಕೆನ್ನೆಗೆ ಹರ್ಭಜನ್ ಹೊಡೆದಿದ್ದರು. ಮೊಹಾಲಿಯಲ್ಲಿ ನಡೆದ ಆ ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ವಿರುದ್ಧ 66 ರನ್‍ಗಳ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: ಅತೀ ಎತ್ತರದಲ್ಲಿ ಯೋಗ ಮಾಡಿ ದಾಖಲೆ ಬರೆದ ಐಟಿಬಿಪಿ ತಂಡ

    ಘಟನೆ ನಂತರ ಕಣ್ಣೀರು ಹಾಕಿದ್ದ ಶ್ರೀಶಾಂತ್ ಅವರನ್ನು ನೋಡಿ ಹಲವರು ಮರುಗಿದ್ದರು. ಹರ್ಭಜನ್ ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಆಗ ಪ್ರಶ್ನೆಗಳು ಎದ್ದಿದ್ದವು. ಆ ಬಳಿಕ ಇವರಿಬ್ಬರ ನಡುವೆ ಮತ್ತೆ ಸ್ನೇಹ ಬೆಳೆದಿತ್ತು. ಟೀಂ ಇಂಡಿಯಾ ಪರ ಒಟ್ಟಾಗಿ ಆಡಿದ್ದರು.

  • ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶ್ರೀಶಾಂತ್‌ ವಿದಾಯ

    ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶ್ರೀಶಾಂತ್‌ ವಿದಾಯ

    ನವದೆಹಲಿ: ಭಾರತ ಕ್ರಿಕೆಟ್‌ ತಂಡದ ವೇಗಿ ಎಸ್‌.ಶ್ರೀಶಾಂತ್‌ (s.sreesanth) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ.

    ಮುಂದಿನ ಪೀಳಿಗೆಯ ಕ್ರಿಕೆಟಿಗರಿಗಾಗಿ ನನ್ನ ಪ್ರಥಮ ದರ್ಜೆ ಕ್ರಿಕೆಟ್‌ ವೃತ್ತಿ ಜೀವನವನ್ನು ಕೊನೆಗೊಳಿಸಲು ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಈ ನಿರ್ಧಾರ ನನ್ನದು. ಇದು ನನಗೆ ಸಂತೋಷ ತರುವುದಿಲ್ಲ ಎಂದು ನನಗೆ ತಿಳಿದಿದ್ದರೂ, ನನ್ನ ಜೀವನದಲ್ಲಿ ತೆಗೆದುಕೊಳ್ಳುವ ಸರಿಯಾದ ಮತ್ತು ಗೌರವಾನ್ವಿತ ನಿರ್ಧಾರ ಇದಾಗಿದೆ. ನಾನು ಪ್ರತಿ ಕ್ಷಣವನ್ನೂ ಪ್ರೀತಿಸುತ್ತೇನೆ ಎಂದು ಶ್ರೀಶಾಂತ್‌ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್‍ನ ಸಿಕ್ಸರ್ ಕಿಂಗ್ಸ್

    ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL) ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಶ್ರೀಶಾಂತ್‌ ಅವರನ್ನು ಆಗಸ್ಟ್‌ 2013ರಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ನಿಷೇಧಿಸಿತ್ತು. ಆದರೂ ಅವರ ಜೀವಿತಾವಧಿ ನಿಷೇಧವನ್ನು 2019ರಲ್ಲಿ ಏಳು ವರ್ಷಗಳಿಗೆ ಇಳಿಸಲಾಯಿತು. ಅದು ಸೆಪ್ಟೆಂಬರ್‌ 2020ರಲ್ಲಿ ಪೂರ್ಣಗೊಂಡಿತ್ತು.

    2021 ಮತ್ತು 2022ರಲ್ಲಿ ಶ್ರೀಶಾಂತ್‌ ಅವರು ಐಪಿಎಲ್‌ ಹರಾಜಿಗೆ ಶಾರ್ಟ್‌ಲಿಸ್ಟ್‌ ಆದರು. ಆದರೆ ಎರಡೂ ಸಂದರ್ಭದಲ್ಲಿ ಅವರನ್ನು ಖರೀದಿಸಲಿಲ್ಲ. ಇದನ್ನೂ ಓದಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ – ರವೀಂದ್ರ ಜಡೇಜಾ ವಿಶ್ವ ನಂಬರ್ 1 ಆಲ್‍ರೌಂಡರ್

    ಮಾರ್ಚ್ 2006ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಶ್ರೀಶಾಂತ್ 27 ಪಂದ್ಯಗಳನ್ನು ಆಡಿದ್ದು, 87 ವಿಕೆಟ್ ಗಳಿಸಿದ್ದಾರೆ. ಅವರು 53 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದು, 75 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟು 10 ಟಿ20 ಪಂದ್ಯಗಳನ್ನಾಡಿದ್ದು, 7 ವಿಕೆಟ್‌ ಪಡೆದಿದ್ದಾರೆ. ಇದನ್ನೂ ಓದಿ: ರಾವಲ್ಪಿಂಡಿ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿದ ಡೇವಿಡ್ ವಾರ್ನರ್

  • ವಿಕೆಟ್ ಪಡೆದ ಬಳಿಕ ಪಿಚ್‌ಗೆ ದೀರ್ಘದಂಡ ನಮಸ್ಕಾರ ಮಾಡಿದ ಶ್ರೀಶಾಂತ್

    ವಿಕೆಟ್ ಪಡೆದ ಬಳಿಕ ಪಿಚ್‌ಗೆ ದೀರ್ಘದಂಡ ನಮಸ್ಕಾರ ಮಾಡಿದ ಶ್ರೀಶಾಂತ್

    ತಿರುವನಂತಪುರ: 9 ವರ್ಷಗಳ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ವಿಕೆಟ್ ಪಡೆದ ಕೇರಳ ತಂಡದ ವೇಗದ ಬೌಲರ್ ಎಸ್.ಶ್ರೀಶಾಂತ್ ಪಿಚ್‌ಗೆ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.

    ಮೇಘಾಲಯ ಮತ್ತು ಕೇರಳ ನಡುವಿನ ರಣಜಿ ಪಂದ್ಯದಲ್ಲಿ 9 ವರ್ಷಗಳ ಬಳಿಕ ಶ್ರೀಶಾಂತ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ವಿಕೆಟ್ ಪಡೆಯಲು ಸಫಲರಾದರು. ಈ ಸಂಭ್ರಮವನ್ನು ಶ್ರೀಶಾಂತ್ ಶಾಂತವಾಗಿ ಪಿಚ್‍ಗೆ ನಮಸ್ಕಾರ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ. ಈ ವೀಡಿಯೋವನ್ನು ಸ್ವತಃ ಶ್ರೀಶಾಂತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡ ಶ್ರೀಶಾಂತ್ – ಮೂಲಬೆಲೆ ಎಷ್ಟು ಗೊತ್ತಾ?

    ಶ್ರೀಶಾಂತ್ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಒಟ್ಟು 11.5 ಓವರ್ ಎಸೆದು 40 ರನ್‌ ನೀಡಿ 2 ವಿಕೆಟ್ ಪಡೆದಿದ್ದರು. 2013ರ ಸ್ಪಾಟ್‌ ಫಿಕ್ಸಿಂಗ್  ಆರೋಪದಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಶ್ರೀಶಾಂತ್ ಆ ಬಳಿಕ ಇದೀಗ ಕೇರಳ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: 7 ವರ್ಷದ ಬಳಿಕ ವಿಕೆಟ್‌- ಕೈ ಮುಗಿದು ನಮಸ್ಕರಿಸಿದ ಶ್ರೀಶಾಂತ್‌

    38 ವರ್ಷದ ಶ್ರೀಶಾಂತ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಈಗಾಗಲೇ 213 ವಿಕೆಟ್ ಪಡೆದಿದ್ದು, 6 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಭಾರತದ ಪರ 27 ಟೆಸ್ಟ್, 53 ಏಕದಿನ ಪಂದ್ಯ ಆಡಿರುವ ಶ್ರೀಶಾಂತ್ ಕ್ರಮವಾಗಿ 87, 75 ವಿಕೆಟ್ ಪಡೆದಿದ್ದು, 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಶ್ರೀಶಾಂತ್ ಸದಸ್ಯರಾಗಿದ್ದರು. 2011 ಆಗಸ್ಟ್‌ನಲ್ಲಿ ಶ್ರೀಶಾಂತ್ ಕೊನೆಯ ಬಾರಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು.

  • ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡ ಶ್ರೀಶಾಂತ್ – ಮೂಲಬೆಲೆ ಎಷ್ಟು ಗೊತ್ತಾ?

    ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡ ಶ್ರೀಶಾಂತ್ – ಮೂಲಬೆಲೆ ಎಷ್ಟು ಗೊತ್ತಾ?

    ತಿರುವನಂತಪುರಂ: ತಿರುವನಂತಪುರಂ ಎಕ್ಸ್‌ಪ್ರೆಸ್ ಖ್ಯಾತಿಯ ಕೇರಳದ ವೇಗಿ ಎಸ್.ಶ್ರೀಶಾಂತ್ 2022ರ ಐಪಿಎಲ್ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಣಿ ಮಾಡಿಕೊಂಡಿದ್ದಾರೆ.

    2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ 7 ವರ್ಷಗಳ ನಿಷೇಧದ ಬಳಿಕ ಕಳೆದ ವರ್ಷ ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ಶ್ರೀಶಾಂತ್ ನೋಂದಾಣಿ ಮಾಡಿಕೊಂಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಶ್ರೀಶಾಂತ್ ಅವರ ಹೆಸರು ಇರಲಿಲ್ಲ. ಇದೀಗ ಈ ಬಾರಿ ಮತ್ತೆ 50 ಲಕ್ಷ ರೂ. ಮೂಲಬೆಲೆಗೆ ಶ್ರೀಶಾಂತ್ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಅವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್‌ ಪ್ರಿಯರು

    ನಿಷೇಧದ ಬಳಿಕ ಕ್ರಿಕೆಟ್‍ಗೆ ವಾಪಾಸಾದ ಶ್ರೀ, ಕೇರಳ ಪರ ವಿಜಯ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಶ್ರೀಶಾಂತ್ ನಿಷೇಧ ಶಿಕ್ಷೆಗೆ ಗುರಿಯಾಗುವ ಮೊದಲು ರಾಜಸ್ಥಾನ ರಾಯಲ್, ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಕಿಂಗ್ಸ್ 11 ಪಂಜಾಬ್ ಪರ ಆಡಿದ್ದರು. ಐಪಿಎಲ್‍ನಲ್ಲಿ ಒಟ್ಟು 44 ಪಂದ್ಯವಾಡಿರುವ ಶ್ರೀ 44 ವಿಕೆಟ್ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್

    15ನೇ ಆವೃತ್ತಿ ಐಪಿಎಲ್‍ನ ಮೆಗಾ ಹರಾಜಿನಲ್ಲಿ 1,214 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ಕೊಟ್ಟಿದ್ದಾರೆ. ಈ ಬಾರಿ 5 ಕ್ಯಾಟಗರಿಯಲ್ಲಿ ಆಟಗಾರರಿಗೆ ಬೆಲೆ ನಿಗದಿಪಡಿಸಲಾಗಿದೆ. 2 ಕೋಟಿ, 1.5 ಕೋಟಿ, 1 ಕೋಟಿ, 50 ಲಕ್ಷ ಮತ್ತು 20 ಲಕ್ಷ ರೂಪಾಯಿಯ ಮೂಲ ಬೆಲೆ ಕ್ಯಾಟಗರಿಯಲ್ಲಿ ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ.

    ಅಚ್ಚರಿ ಎಂಬಂತೆ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದ, ಕ್ರಿಸ್ ಗೇಲ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಸ್ಯಾಮ್ ಕರ್ರನ್, ಮಿಚೆಲ್ ಸ್ಟಾರ್ಕ್ ಐಪಿಎಲ್‍ನಿಂದ ಹಿಂದೆ ಸರಿದಿದ್ದಾರೆ. ಈ ನಡುವೆ ಈ ಹಿಂದಿನ ಐಪಿಎಲ್ ಮತ್ತು ದೇಶಿ ಟೂರ್ನಿಗಳಲ್ಲಿ ಮಿಂಚುಹರಿಸಿದ ಆಟಗಾರಾದ ಶಾರೂಖ್ ಖಾನ್ ಮತ್ತು ಆವೇಶ್ ಖಾನ್ ಮೂಲಬೆಲೆಯನ್ನು 20 ಲಕ್ಷ ಫಿಕ್ಸ್ ಮಾಡಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.‌ ಇದನ್ನೂ ಓದಿ: ಒತ್ತಾಯಕ್ಕೆ ಮಣಿದು ಕೊಹ್ಲಿ ನಾಯಕತ್ವ ತೊರೆದರು: ಶೋಯೆಬ್‌ ಅಖ್ತರ್‌

  • ಐಪಿಎಲ್ ಹರಾಜು ಪಟ್ಟಿಯಿಂದ ಶ್ರೀಶಾಂತ್ ಔಟ್

    ಐಪಿಎಲ್ ಹರಾಜು ಪಟ್ಟಿಯಿಂದ ಶ್ರೀಶಾಂತ್ ಔಟ್

    ಚೆನ್ನೈ: 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಅಡುವ ಕನಸು ಕಂಡಿದ್ದ ಶ್ರೀಶಾಂತ್‍ಗೆ ನಿರಾಸೆಯಾಗಿದ್ದು, ಐಪಿಎಲ್ ಹರಾಜು ಪಟ್ಟಿಯಿಂದ ಔಟ್ ಆಗಿದ್ದಾರೆ.

    ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯುವ ಹರಾಜು ಪ್ರಕ್ರಿಯೆಗೆ 292 ಕ್ರಿಕೆಟಿಗರ ಹೆಸರು ಅಂತಿಮವಾಗಿ ಆಯ್ಕೆಗೊಂಡಿದೆ. ಈ ಪಟ್ಟಿಯಲ್ಲಿ 164 ಭಾರತೀಯ ಆಟಗಾರರಿದ್ದರೆ ಇನ್ನೂಳಿದ 128 ಜನ ವಿದೇಶಿ ಕ್ರಿಕೆಟಿಗರಿದ್ದಾರೆ. ಆದರೆ 164 ಭಾರತೀಯ ಪಟ್ಟಿಯಲ್ಲಿ ಶ್ರೀ ಶಾಂತ್ ಹೆಸರು ಕಾಣಿಸುತ್ತಿಲ್ಲ ಇದರೊಂದಿಗೆ 14ನೇ ಆವೃತ್ತಿ ಐಪಿಎಲ್ ಕನಸು ಭಗ್ನಗೊಂಡಿದೆ.

    2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್ ಮೂಲಕ ಮತ್ತೆ ಟೀಮ್ ಇಂಡಿಯಾಗೆ ಮರಳುವ ಹುಮ್ಮಸ್ಸಿನಲ್ಲಿದ್ದ ಶ್ರೀಗೆ ಶಾಕ್ ಎಂಬಂತೆ ಹರಾಜಿನ ಅಂತಿಮ ಪಟ್ಟಿಯಿಂದ ಹೊರಬಿಳುವ ಮೂಲಕ ನಿರಾಸೆ ಆಗಿದೆ. ಶ್ರೀ 75 ಲಕ್ಷ ರೂ. ಮೂಲಬೆಲೆಗೆ ತಮ್ಮ ಹೆಸರನ್ನು ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಆದರೆ ಫ್ರಾಂಚೈಸಿ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳಬೇಕೆಂಬ ಇರಾದೆ ತೋರದೆ ಇದ್ದ ಹಿನ್ನಲೆ ಅಂತಿಮ ಪಟ್ಟಿಯಿಂದ ಅವರನ್ನು ಕೈ ಬಿಡಲಾಗಿದೆ.

    ಈ ಮೊದಲು ಒಟ್ಟು 1,114 ಆಟಗಾರರ ಪಟ್ಟಿ ಸಿದ್ಧವಾಗಿತ್ತು ಈ ಪಟ್ಟಿಯಿಂದ 8 ಫ್ರಾಂಚೈಸಿಗಳ ಆಸಕ್ತಿಯ ಆಟಗಾರರನ್ನು ಗಮನಿಸಿ ಉಳಿದ ಆಟಗಾರರನ್ನು ಕೈ ಬಿಡಲಾಗಿದೆ. ಈ ಪಟ್ಟಿಯಲ್ಲಿ ಒಟ್ಟು 10 ಆಟಗಾರರಿಗೆ 2 ಕೋಟಿ ರೂ. ಮೂಲಬೆಲೆ ನಿಗದಿಯಾಗಿದ್ದು, ಈ ಪಟ್ಟಿಯಲ್ಲಿ ಭಾರತೀಯ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ಕೇದಾರ್ ಜಾಧವ್ ಕಾಣಿಸಿಕೊಂಡರೆ ಇನ್ನೂಳಿದ ಆಟಗಾರರಾದ ಸ್ವೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‍ವೆಲ್, ಇಂಗ್ಲೆಂಡ್‍ನ ಜೇಸನ್ ರಾಯ್, ಲಿಯಾಮ್ ಪ್ಲಂಕೆಟ್, ಮಾರ್ಕ್ ವುಡ್, ಸ್ಯಾಮ್ ಬಿಲ್ಲಿಂಗ್ಸ್, ಮೊಯಿನ್ ಅಲಿ, ಶಕೀಬ್ ಅಲ್ ಹಸನ್ ವಿದೇಶಿ ಆಟಗಾರರಾಗಿದ್ದಾರೆ.

    ಶ್ರೀಶಾಂತ್‍ರಂತೆ ಅಂತಿಮ ಪಟ್ಟಿಯಲ್ಲಿ ಹೊರಬಿದ್ದ ಇನ್ನೊಬ್ಬ ಆಟಗಾರರಾಗಿ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಕಾಣಿಸಿಕೊಂಡಿದ್ದಾರೆ. ಪೂಜಾರ 50 ಲಕ್ಷ ಮುಖಬೆಲೆ ಹೊಂದಿದ್ದರು. 12 ಆಟಗಾರರೂ 1.5 ಕೋಟಿ ರೂ ಮೂಲಬೆಲೆ ಪಟ್ಟಿಯಲ್ಲಿ ಕಾಣಿಸಿಕೊಂಡರೆ 11 ಜನ ತಲಾ 1 ಕೋಟಿ ರೂ ಮೂಲಬೆಲೆಯೊಂದಿಗೆ ಅಂತಿಮ ಪಟ್ಟಿಯಲ್ಲಿದ್ದಾರೆ. ಫೆಬ್ರವರಿ 18 ನಡೆಯುವ ಹರಾಜಿನಲ್ಲಿ 8 ತಂಡಗಳು 22 ವಿದೇಶಿ ಆಟಗಾರರು ಸಹಿತ ಗರಿಷ್ಠ 61 ಆಟಗಾರರನ್ನು ಖರೀದಿಸಲು ಅವಕಾಶವಿದ್ದು ಯಾರು ಯಾವ ತಂಡದ ಪಾಲಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

  • 7 ವರ್ಷದ ಬಳಿಕ ವಿಕೆಟ್‌- ಕೈ ಮುಗಿದು ನಮಸ್ಕರಿಸಿದ ಶ್ರೀಶಾಂತ್‌

    7 ವರ್ಷದ ಬಳಿಕ ವಿಕೆಟ್‌- ಕೈ ಮುಗಿದು ನಮಸ್ಕರಿಸಿದ ಶ್ರೀಶಾಂತ್‌

    ಮುಂಬೈ: 7 ವರ್ಷದ ಬಳಿಕ ಕ್ರಿಕೆಟ್‌ಗೆ ಮರಳಿದ ಬೌಲರ್‌ ಶ್ರೀಶಾಂತ್‌ ತಾನು ಆಡಿದ ಮೊದಲ ಪಂದ್ಯದಲ್ಲಿ ವಿಕೆಟ್‌ ಕಿತ್ತಿದ್ದಾರೆ. ಎದುರಾಳಿ ತಂಡದ ಆಟಗಾರನನ್ನು ಶ್ರೀಶಾಂತ್‌ ಬೌಲ್ಡ್‌ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಸೈಯ್ಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌ ಟೂರ್ನಿಯಲ್ಲಿ ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಕೇರಳ ಪರ ಆಡಿದ ಶ್ರೀಶಾಂತ್‌ 4 ಓವರ್‌ ಎಸೆದು 29 ರನ್‌ ನೀಡಿ 1 ವಿಕೆಟ್‌ ಪಡೆದಿದ್ದಾರೆ. ವಿಕೆಟ್‌ ಪಡೆದ ಶ್ರೀಶಾಂತ್‌ ಪಿಚ್‌ಗೆ ಕೈ ಮುಗಿದು ನಮಸ್ಕಾರ ಸಲ್ಲಿಸಿದ್ದಾರೆ.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಪುದುಚೇರಿ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿತು. ಕೇರಳ 18.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು.

    2013ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಶಾಂತ್ ಮೇಲೆ ಬಿಸಿಸಿಐ ವಿಧಿಸಿದ್ದ ನಿಷೇಧ ಸೆಪ್ಟೆಂಬರ್‌ಗೆ ಅಂತ್ಯವಾಗಿತ್ತು. ನಿಷೇಧ ಮುಗಿದ ಬಳಿಕ ಕೇರಳ ಪರ ಈಗ ಶ್ರೀಶಾಂತ್‌ ಆಡುತ್ತಿದ್ದಾರೆ.

    ರಣಜಿ ಕ್ರಿಕೆಟ್ ಆವೃತ್ತಿಯಲ್ಲಿ ಶ್ರೀಶಾಂತ್ ಸ್ಥಿರ ಪ್ರದರ್ಶನ ನೀಡಿದರೆ ಟೀಂ ಇಂಡಿಯಾ ‘ಎ’ ತಂಡಕ್ಕೆ, ಆ ಬಳಿಕ ಭಾರತ ತಂಡಕ್ಕೆ ಆಡುವ ಅವಕಾಶ ಲಭಿಸಲಿದೆ. ಶ್ರೀಶಾಂತ್ ಕಳೆದ 7 ವರ್ಷಗಳಿಂದ ಕ್ರಿಕೆಟ್‍ನಿಂದಲೇ ದೂರ ಉಳಿದಿದ್ದು, 37 ವರ್ಷದ ಆಟಗಾರ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.

    ಈಗಾಗಲೇ ಟೀಂ ಇಂಡಿಯಾಗೆ ಆಯ್ಕೆಯಾಗಲು ತಂಡದಲ್ಲಿ ಆಟಗಾರರ ನಡುವೆ ಭಾರೀ ಪೈಪೋಟಿ ಇದೆ. ಆದರೆ ಶ್ರೀಶಾಂತ್ ಮಾತ್ರ 2023ರ ವಿಶ್ವಕಪ್ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಪರ 27 ಟೆಸ್ಟ್, 53 ಏಕದಿನ ಪಂದ್ಯ ಆಡಿರುವ ಶ್ರೀಶಾಂತ್ ಕ್ರಮವಾಗಿ 87, 75 ವಿಕೆಟ್ ಪಡೆದಿದ್ದು, 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಶ್ರೀಶಾಂತ್ ಸದಸ್ಯರಾಗಿದ್ದರು.

  • 7 ವರ್ಷದ ಬಳಿಕ ಕ್ರಿಕೆಟ್‍ಗೆ ಮರಳಿದ ಶ್ರೀಶಾಂತ್ 

    7 ವರ್ಷದ ಬಳಿಕ ಕ್ರಿಕೆಟ್‍ಗೆ ಮರಳಿದ ಶ್ರೀಶಾಂತ್ 

    ತಿರುವನಂತಪುರಂ: 7 ವರ್ಷದ ಬಳಿಕ ಕ್ರಿಕೆಟ್‍ಗೆ ಶ್ರೀಶಾಂತ್ ಮರಳಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ-20 ಪಂದ್ಯಾವಳಿಗಾಗಿ ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಿರುವನಂತಪುರ ಎಕ್ಸ್‌ಪ್ರೆಸ್‌ ಖ್ಯಾತಿಯ ಶ್ರೀಶಾಂತ್ ಸ್ಥಾನ ಪಡೆದುಕೊಂಡಿದ್ದಾರೆ.

    ಶ್ರೀಶಾಂತ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ  ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಏಳು ವರ್ಷಗಳ ನಿಷೇಧ ಮುಗಿಸಿ ಬಂದಿದ್ದರು. ಸ್ಥಾನ ಪಡೆದ ಬಳಿಕ ಕೇರಳ ರಾಜ್ಯ ತಂಡದ ಸಹ ಆಟಗಾರರು ಮತ್ತು ನಿರ್ವಾಹಕರೊಂದಿಗೆ ತಮ್ಮ ರಾಜ್ಯದ ಕ್ಯಾಪ್‍ನ್ನು ಸ್ವೀಕರಿಸುವ ವಿಡಿಯೋ ಒಂದನ್ನು ಶ್ರೀಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

    ವಿಡಿಯೋದ ಜೊತೆ ಒಂದು ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿರುವ ಶ್ರೀಶಾಂತ್ ಮುರಿದ ಬಿದ್ದ ಮನುಷ್ಯ ತನ್ನನ್ನು ತಾನೇ ಮರುನಿರ್ಮಾಣ ಮಾಡಿಕೊಳ್ಳುವ ಬಲದ ಮುಂದೆ ಉಳಿದೆಲ್ಲವು ಶೂನ್ಯ ಎಂದು ಟ್ವೀಟ್ ಮಾಡಿದ್ದಾರೆ.

    ಮುಂದಿನ ತಿಂಗಳಿನಿಂದ ಆರಂಭಗೊಳ್ಳಲಿರುವ ಪಂದ್ಯಾವಳಿಯಲ್ಲಿ ಕೇರಳ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್‍ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಟೂರ್ನಿಗಾಗಿ ಉತ್ತರ ಪ್ರದೇಶಕ್ಕೆ ತೆರಳಲಿರುವ ಶ್ರೀಶಾಂತ್ ಅವರಿಗೆ ಭಾರತದ ಮಾಜಿ ಆಟಗಾರ ಸುರೇಶ್ ರೈನಾ ಆಲ್ ದಿ ಬೆಸ್ಟ್ ಗೆಳೆಯ ಶೀಘ್ರದಲ್ಲೇ ಭೇಟಿಯಾಗೋಣ ಎಂದು ಶುಭಹಾರೈಸಿದ್ದಾರೆ.

    37ರ ಹರೆಯದ ಶ್ರೀಶಾಂತ್ ಕೊನೆಯ ಬಾರಿ 2011ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲೂ ಕಣಕ್ಕೆ ಇಳಿದಿದ್ದರು. ನಂತರ ಸ್ಪಾಟ್ ಫಿಕ್ಸಿಂಗ್‍ನಿಂದಾಗಿ ನಿಷೇಧಕ್ಕೆ ಗುರಿಯಾಗಿದ್ದ ಶ್ರೀಶಾಂತ್ ಮತ್ತೆ ಭಾರತ ತಂಡಕ್ಕೆ ಪುನಾರಾಗಮನದ ನಿರೀಕ್ಷೆಯಲ್ಲಿದ್ದಾರೆ. ಸಚಿನ್ ಬೇಬಿ, ಜಲಾಜ್ ಸಕ್ಸೇನಾ ಮತ್ತು ರಾಬಿನ್ ಉತ್ತಪ್ಪ ಕೂಡ ಕೇರಳ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.