Tag: ಶ್ರೀವಲ್ಲಿ

  • ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ

    ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ

    ನ್ನಡದ ನಟಿ ರಶ್ಮಿಕಾ ಮಂದಣ್ಣಗೆ ‘ಫರ್ಹಾನ್’ (Farhan) ಚಿತ್ರ ಖ್ಯಾತಿಯ ಟಾಲಿವುಡ್ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಕಾಲೆಳೆಯುವಂತೆ ಮಾತನಾಡಿದ್ದರು ಎನ್ನಲಾದ ವಿಡಿಯೋ ಭಾರೀ ವೈರಲ್ ಆಗಿತ್ತು. ಪುಷ್ಪ (Pushpa) ಸಿನಿಮಾದ ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾಗಿಂತಲೂ ತಾವು ಅದ್ಭುತವಾಗಿ ನಟಿಸುತ್ತಿದ್ದೆ ಎಂದು ಹೇಳಲಾದ ವಿಡಿಯೋ ಅದಾಗಿತ್ತು. ಈ ವಿಷಯವಾಗಿ ರಶ್ಮಿಕಾ ಸುಮ್ಮನಿದ್ದರೂ, ಅವರ ಫ್ಯಾನ್ಸ್ ಮಾತ್ರ ಐಶ್ವರ್ಯಾ ರಾಜೇಶ್ ಮೇಲೆ ಮುಗಿಬಿದ್ದಿದ್ದರು. ಹಾಗಾಗಿ ಐಶ್ವರ್ಯಾ ತಾವು ಹಾಗೆ ಹೇಳಿಲ್ಲ ತಮ್ಮ ಮಾತುಗಳನ್ನು ತಿರುಚಲಾಗಿದೆ ಎಂದು ಪತ್ರ ಬರೆದಿದ್ದರು.

    ಈ ವಿಷಯವನ್ನು ಗಮನಿಸಿದ ರಶ್ಮಿಕಾ ಮಂದಣ್ಣ (Rashmika Mandanna), ಕಾಲೆಳೆದ ನಟಿಗೆ ಸ್ನೇಹದ ಹಸ್ತ ಚಾಚಿ, ಫರ್ಹಾನ್ ಸಿನಿಮಾ ದಾಖಲೆ ರೀತಿಯಲ್ಲಿ ಯಶಸ್ವಿ ಆಗಲಿ ಎಂದು ಹಾರೈಸಿದ್ದಾರೆ. ‘ಹಾಯ್ ಲವ್ ಎಂದು ಶುರು ಮಾಡಿ, ನಾವಿಬ್ಬರೂ ಏನು ಎನ್ನುವುದು ನಮಗೆ ಗೊತ್ತಿದೆ. ನಿಮ್ಮ ಬಗ್ಗೆ ನನಗೆ ಪ್ರೀತಿ ಹಾಗೂ ಗೌರವವಿದೆ. ನೀವು ಏನು ಹೇಳಿದ್ದೀರಿ ಎನ್ನುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಫರ್ಹಾನ್ ಚಿತ್ರಕ್ಕೆ ಶುಭವಾಗಲಿ’ ಎಂದು ಎದ್ದಿದ್ದ ವಿವಾದಕ್ಕೆ ರಶ್ಮಿಕಾ ತೆರೆ ಎಳೆದಿದ್ದಾರೆ.

    ನಿನ್ನೆಯಷ್ಟೇ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದರು ಐಶ್ವರ್ಯಾ. ತಾವು ಆ ರೀತಿ ಮಾತೇ ಆಡಿಲ್ಲ. ಎಲ್ಲವೂ ಕಪೋಕಲ್ಪಿತ ಎಂದು ಅವರು ವಿವರಣೆ ನೀಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ‘ಪುಷ್ಪ ಸಿನಿಮಾದ ಶ್ರೀವಲ್ಲಿ (Srivalli) ಪಾತ್ರವನ್ನು ರಶ್ಮಿಕಾ ಮಂದಣ್ಣಕ್ಕಿಂತಲೂ ಚೆನ್ನಾಗಿ ಮಾಡುತ್ತಿದ್ದೆ’ ಎಂದು ಹೇಳಿದ್ದಾರೆ ಎನ್ನಲಾಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ಇದನ್ನೂ ಓದಿ:‘ಆದಿಪುರುಷ್‌’ ಪೋಸ್ಟರ್‌ನಲ್ಲಿ ಮತ್ತೆ ಎಡವಟ್ಟು- ಚಿತ್ರತಂಡ ವಿರುದ್ಧ ಫ್ಯಾನ್ಸ್ ಗರಂ

    ಈ ಕುರಿತು ಐಶ್ವರ್ಯಾ ರಾಜೇಶ್ ಅವರ ಪಿ.ಆರ್ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿ, ‘ಇದೊಂದು ತಪ್ಪು ಕಲ್ಪನೆಯಿಂದ ಆದ ಪ್ರಮಾದ. ಯಾವುದೇ ಕಾರಣಕ್ಕೂ ಐಶ್ವರ್ಯಾ ಅವರು ಆ ರೀತಿ ಮಾತುಗಳನ್ನು ಆಡಿಲ್ಲ. ‘ನಿಮ್ಮ ನೆಚ್ಚಿನ ಪಾತ್ರ ಯಾವುದು? ಯಾವ ರೀತಿಯ ಪಾತ್ರದಲ್ಲಿ ಕಾಣಲು ಬಯಸುತ್ತೀರಿ’ ಎಂದು ಕೇಳಲಾದ ಪ್ರಶ್ನೆಗೆ ‘ಪುಷ್ಪ ಸಿನಿಮಾದ ಶ್ರೀವಲ್ಲಿ ರೀತಿಯ ಪಾತ್ರಗಳು ಎಂದರೆ ನನಗೆ ಇಷ್ಟೆ. ಆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ’ ಎಂದಿದ್ದರು.

    ಐಶ್ವರ್ಯಾ ರಾಜೇಶ್ ಆಡಿದ್ದಾರೆ ಎನ್ನಲಾದ ಮಾತುಗಳು ಸಖತ್ ಟ್ರೋಲ್ ಆಗಿದ್ದವು. ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕೂಡ ಐಶ್ವರ್ಯಾ ಮೇಲೆ ಮುಗಿ ಬಿದ್ದದ್ದರು. ಕೆಟ್ಟ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರು. ಇದೆಲ್ಲವನ್ನೂ ಗಮನಿಸಿದ ಐಶ್ವರ್ಯಾ ಅದನ್ನು ತಿಳಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಾವು ಆ ರೀತಿಯಲ್ಲಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

  • ರಶ್ಮಿಕಾ ಮಂದಣ್ಣ ನಟನೆ ಬಗ್ಗೆ ನಾನು ಮಾತೇ ಆಡಿಲ್ಲ : ಸ್ಪಷ್ಟನೆ ಕೊಟ್ಟ ಐಶ್ವರ್ಯಾ

    ರಶ್ಮಿಕಾ ಮಂದಣ್ಣ ನಟನೆ ಬಗ್ಗೆ ನಾನು ಮಾತೇ ಆಡಿಲ್ಲ : ಸ್ಪಷ್ಟನೆ ಕೊಟ್ಟ ಐಶ್ವರ್ಯಾ

    ಟಾಲಿವುಡ್ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಆಡಿದ್ದಾರೆ ಎನ್ನಲಾದ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ತಾವು ಆ ರೀತಿ ಮಾತೇ ಆಡಿಲ್ಲ. ಎಲ್ಲವೂ ಕಪೋಕಲ್ಪಿತ ಎಂದು ಅವರು ವಿವರಣೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ‘ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಮಂದಣ್ಣಕ್ಕಿಂತಲೂ (Rashmika Mandanna) ಚೆನ್ನಾಗಿ ಮಾಡುತ್ತಿದ್ದೆ’ ಎಂದು ಹೇಳಿದ್ದಾರೆ ಎನ್ನಲಾಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು.

    ಈ ಕುರಿತು ಐಶ್ವರ್ಯಾ ರಾಜೇಶ್ ಅವರ ಪಿ.ಆರ್ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿ, ‘ಇದೊಂದು ತಪ್ಪು ಕಲ್ಪನೆಯಿಂದ ಆದ ಪ್ರಮಾದ. ಯಾವುದೇ ಕಾರಣಕ್ಕೂ ಐಶ್ವರ್ಯಾ ಅವರು ಆ ರೀತಿ ಮಾತುಗಳನ್ನು ಆಡಿಲ್ಲ. ‘ನಿಮ್ಮ ನೆಚ್ಚಿನ ಪಾತ್ರ ಯಾವುದು? ಯಾವ ರೀತಿಯ ಪಾತ್ರದಲ್ಲಿ ಕಾಣಲು ಬಯಸುತ್ತೀರಿ’ ಎಂದು ಕೇಳಲಾದ ಪ್ರಶ್ನೆಗೆ ‘ಪುಷ್ಪ (Pushpa) ಸಿನಿಮಾದ ಶ್ರೀವಲ್ಲಿ (Srivalli) ರೀತಿಯ ಪಾತ್ರಗಳು ಎಂದರೆ ನನಗೆ ಇಷ್ಟ. ಆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ’ ಎಂದಿದ್ದಾರೆ. ಇದನ್ನೂ ಓದಿ:ಸಹೋದರ ವರುಣ್ ತೇಜ್- ಲಾವಣ್ಯ ಮದುವೆ ಬಗ್ಗೆ ನಿಹಾರಿಕಾ ಪ್ರತಿಕ್ರಿಯೆ

    ಐಶ್ವರ್ಯಾ ರಾಜೇಶ್ ಆಡಿದ್ದಾರೆ ಎನ್ನಲಾದ ಮಾತುಗಳು ಸಖತ್ ಟ್ರೋಲ್ ಆಗಿದ್ದವು. ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕೂಡ ಐಶ್ವರ್ಯಾ ಮೇಲೆ ಮುಗಿ ಬಿದ್ದಿದ್ದರು. ಕೆಟ್ಟ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರು. ಇದೆಲ್ಲವನ್ನೂ ಗಮನಿಸಿದ ಐಶ್ವರ್ಯಾ ಅದನ್ನು ತಿಳಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಾವು ಆ ರೀತಿಯಲ್ಲಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾಗಿಂತ ನಾನೇ ಸೂಕ್ತ ಎಂದು ಕ್ಯಾತೆ ತೆಗೆದ ಐಶ್ವರ್ಯಾ ರಾಜೇಶ್

    ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾಗಿಂತ ನಾನೇ ಸೂಕ್ತ ಎಂದು ಕ್ಯಾತೆ ತೆಗೆದ ಐಶ್ವರ್ಯಾ ರಾಜೇಶ್

    ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿರುವ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಪುಷ್ಪ 2’ ಸಿನಿಮಾ ಜೊತೆ ರೈನ್‌ಬೋ (Rainbow) ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಶ್ರೀವಲ್ಲಿ ಪಾತ್ರಕ್ಕೆ ಜೀವತುಂಬಿದ್ದರು. ‘ಪುಷ್ಪ’ ಬಳಿಕ ಶ್ರೀವಲ್ಲಿ ಪಾತ್ರಕ್ಕೆ ಬಹುದೊಡ್ಡ ಫ್ಯಾನ್ ಬೇಸ್ ಸೃಷ್ಟಿಯಾಗಿತ್ತು. ಇದೀಗ ಶ್ರೀವಲ್ಲಿ ರೋಲ್ ಬಗ್ಗೆ ತಮಿಳಿನ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಕೊಂಕು ತೆಗೆದಿದ್ದಾರೆ.

    2021ರಲ್ಲಿ ‘ಪುಷ್ಪ’ (PUSHPA) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿತ್ತು. ರಶ್ಮಿಕಾ ಕೆರಿಯರ್‌ಗೂ ದೊಡ್ಡ ತಿರುವನ್ನ ಕೊಟ್ಟಿತ್ತು. ಈ ಚಿತ್ರದ ಬಳಿಕ ಶ್ರೀವಲ್ಲಿ (Srivalli)  ಕ್ರೇಜ್ ಅದೆಷ್ಟರ ಮಟ್ಟಿಗೆ ಸೃಷ್ಟಿಯಾಗಿತ್ತು ಅಂದರೆ ಶ್ರೀವಲ್ಲಿ ಸೀರೆ ಅಂತಾ ಸೇಲ್ ಆಗುತ್ತಿತ್ತು. ರಶ್ಮಿಕಾ ನಟನೆಯ ಶ್ರೀವಲ್ಲಿ ಸ್ಟೈಲ್‌ನ ಫಿಮೇಲ್ ಫ್ಯಾನ್ಸ್ ಕಾಪಿ ಮಾಡ್ತಿದ್ದರು. ಹಾಗಾಗಿ ಇದೀಗ ಪುಷ್ಪ 2ಗೆ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

    ಐಶ್ವರ್ಯಾ ರಾಜೇಶ್ ನಟನೆಯ ‘ಫರ್ಹಾನಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ತಮಿಳಿನ ಈ ಸಿನಿಮಾ ಪ್ರಚಾರದಲ್ಲಿ ಐಶ್ವರ್ಯಾ ರಾಜೇಶ್ ಬ್ಯುಸಿ ಆಗಿದ್ದಾರೆ. ಅವರಿಗೆ ತೆಲುಗು ಸಿನಿಮಾ ಬಗ್ಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಪುಷ್ಪ’ ಸಿನಿಮಾದ ಶ್ರೀವಲ್ಲಿ ಪಾತ್ರವನ್ನು ನಾನು ಇಷ್ಟಪಟ್ಟಿದ್ದೆ. ರಶ್ಮಿಕಾ ಉತ್ತಮವಾಗಿ ನಟಿಸಿದ್ದಾರೆ. ಆದರೆ, ಅವರಿಗಿಂತ ಉತ್ತಮವಾಗಿ ನಾನು ನಟಿಸುತ್ತಿದ್ದೆ ಎಂದು ಐಶ್ವರ್ಯಾ ರಾಜೇಶ್ ಹೇಳಿದ್ದಾರೆ. ರಶ್ಮಿಕಾಗಿಂತ ಶ್ರೀವಲ್ಲಿ ಪಾತ್ರಕ್ಕೆ ತಾನೇ ಸೂಕ್ತ ಎಂಬರ್ಥದಲ್ಲಿ ಐಶ್ವರ್ಯಾ ಮಾತನಾಡಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್‌ರನ್ನ ಮಗುವಿನ ಮುಗ್ಧತೆಗೆ ಹೋಲಿಸಿದ ಸುಧಾ ಮೂರ್ತಿ

    ಐಶ್ವರ್ಯಾ ಹೇಳಿಕೆ ಇದೀಗ ಅಭಿಮಾನಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾನೇ ಸೂಕ್ತ ಅಂತಾ ಫ್ಯಾನ್ಸ್ ಐಶ್ವರ್ಯಾ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನೂ ಐಶ್ವರ್ಯಾ ರಾಜೇಶ್ ಅವರು 8 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ನಟಿ ಅಭಿನಯಿಸುತ್ತಿದ್ದಾರೆ.

  • ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬಕ್ಕೆ ‘ಪುಷ್ಪಾ 2’ ಫಸ್ಟ್ ಲುಕ್ ರಿಲೀಸ್

    ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬಕ್ಕೆ ‘ಪುಷ್ಪಾ 2’ ಫಸ್ಟ್ ಲುಕ್ ರಿಲೀಸ್

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ಕಾಮನ್ ಡಿಪಿಯನ್ನು ರಿಲೀಸ್ ಮಾಡಿ ಶುಭ ಹಾರೈಸಿದ್ದರು ನಟಿ ಕೀರ್ತಿ ಸುರೇಶ್. ಇಂದು ಪುಷ್ಪಾ 2 ಚಿತ್ರತಂಡದಿಂದ ಉಡುಗೊರೆಯೊಂದು ಸಿಕ್ಕಿದೆ. ಈ ಹುಟ್ಟು ಹಬ್ಬಕ್ಕಾಗಿ ಪುಷ್ಪಾ 2 ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ವಿಶ್ ಮಾಡಿದೆ.

    ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ಯಾವ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲವಿತ್ತು.  ಅದಕ್ಕೀಗ ತೆರೆ ಬಿದ್ದಿದೆ. ಅಭಿಮಾನಿಗಳು ಈ ಲುಕ್ ಗೆ ಫಿದಾ ಆಗಿದ್ದು, ಶುಭಾಶಯಗಳ ಸುರಿಮಳೆಗೈದಿದ್ದಾರೆ. ರಶ್ಮಿಕಾ ಕೂಡ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಲ್ಲದೇ, ಪುಷ್ಪಾ 2 ತಂಡಕ್ಕೆ ವಿಶೇಷವಾದ ಕೃತಜ್ಞತೆಯನ್ನೂ ಅವರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್

    ಪರಭಾಷೆಗಳಲ್ಲಿ ನಾನಾ ತರಹದ ಪಾತ್ರಗಳ ಮೂಲಕ ಮನಗೆದ್ದಿರುವ ನಟಿ ರಶ್ಮಿಕಾ, ಇದೀಗ ಮೊದಲ ಬಾರಿಗೆ Female Lead  ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ಸಿನಿ ಕೆರಿಯರ್ ಶುರು ಮಾಡಿದ ನಟಿ ರಶ್ಮಿಕಾ, ಸೌತ್- ಬಾಲಿವುಡ್‌ನಲ್ಲಿ ಸೆಟಲ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಶೈನ್ ಆಗ್ತಿದ್ದಾರೆ. ಈವರೆಗೂ 18 ಸಿನಿಮಾಗಳಲ್ಲಿ ನಟಿಸಿರುವ ಪುಷ್ಪ ನಟಿ, ಇದೀಗ ಹೊಸ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

    ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಪ್ರತಿ ನಟಿಯ ಕನಸಾಗಿರುತ್ತದೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿ ಗೆದ್ದವರು ತೀರಾ ಕಡಿಮೆ ನಾಯಕಿಯರು. ನಯನತಾರಾ, ಅನುಷ್ಕಾ ಶೆಟ್ಟಿ, ಸಮಂತಾ (Samantha), ಇವರೆಲ್ಲರೂ ಫೀಮೇಲ್ ಓರಿಯೆಂಟೆಡ್ ಚಿತ್ರಗಳಲ್ಲಿ ನಟಿಸಿ ಜಯ ಸಾಧಿಸಿದ್ದಾರೆ. ಇದೀಗ ಈ ಹಾದಿಯಲ್ಲಿ ರಶ್ಮಿಕಾ ಮಂದಣ್ಣ ಹೆಜ್ಜೆ ಇಟ್ಟಿದ್ದಾರೆ.

    ಈಗಾಗಲೇ ಮಹಿಳಾ ಪ್ರಧಾನ ಚಿತ್ರದ ಕಥೆ ಕೇಳಿ ರಶ್ಮಿಕಾ ಓಕೆ ಎಂದಿದ್ದಾರೆ. ಮೊದಲ ಬಾರಿಗೆ ಸ್ತ್ರೀ ಪ್ರಧಾನ ಚಿತ್ರದಲ್ಲಿ ನಟಿಸುತ್ತಿರುವ ಕಾರಣ, ಅದಕ್ಕಾಗಿ ನಟಿ ಸಕಲ ತಯಾರಿ ಮಾಡ್ತಿದ್ದಾರೆ. ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ರಶ್ಮಿಕಾ, ಹೊಸ ಸಿನಿಮಾವನ್ನ ನಿರ್ಮಾಣ ಮಾಡ್ತಿದೆ.

  • ರಶ್ಮಿಕಾ ಧರಿಸಿದ್ದ ಸೀರೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

    ರಶ್ಮಿಕಾ ಧರಿಸಿದ್ದ ಸೀರೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

    ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೆಟ್ ಮಾಡಿದ ಸಿನಿಮಾ ಅಂದ್ರೆ `ಪುಷ್ಪ'(Pushpa) ಸಿನಿಮಾ. ಈ ಚಿತ್ರ ಗ್ರ್ಯಾಂಡ್‌ ಸಕ್ಸಸ್ ಆದ್ಮೇಲೆ ನಟ, ನಟಿಯರನ್ನ ಸಾಕಷ್ಟು  ಅಭಿಮಾನಿಗಳು ಅವರ ಸ್ಟೈಲ್, ಡ್ರೆಸ್ ಅನುಕರಣೆ ಮಾಡಿದ್ದಾರೆ. ಇನ್ನೂ `ಪುಷ್ಪ’ ಶ್ರೀವಲ್ಲಿ(Srivalli) ಪಾತ್ರದಲ್ಲಿ ನಟಿಸಿದ್ದ ರಶ್ಮಿಕಾ(Rashmika Mandanna) ಡ್ರೆಸ್ ಮೇಲೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಈಗ ಮಾರ್ಕೆಟ್‌ನಲ್ಲಿ ಶ್ರೀವಲ್ಲಿ ಸೀರೆ ಅಂತಲೇ ಸಖತ್ ಫೇಮಸ್ ಆಗಿದೆ.

    ದಕ್ಷಿಣದ ಸಿನಿಮಾರಂಗದಲ್ಲಿ ಪುಷ್ಪ ಚಿತ್ರದ ಕೋಟಿ ಕೋಟಿ ಕಲೆಕ್ಷನ್ ಮಾಡಿ ಸಕ್ಸಸ್ ಕಂಡಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಪಾತ್ರಕ್ಕೆ ಬಹುದೊಡ್ಡ ಫ್ಯಾನ್ ಬೇಸ್ ಸೃಷ್ಟಿಯಾಗಿದೆ. ಇದೀಗ ರಶ್ಮಿಕಾ ಮಂದಣ್ಣ ನಟಿಸಿರುವ ಶ್ರೀವಲ್ಲಿ ಪಾತ್ರದ ಲುಕ್ ಟ್ರೆಂಡ್ ಸೃಷ್ಟಿಸಿದೆ. ನಟಿ ಧರಿಸಿದ್ದ ಸೀರೆ ಟ್ರೆಂಡ್ ಆಗಿ ಹೆಂಗೆಳೆಯರಿಗೆ ಮೋಡಿ ಮಾಡುತ್ತಿದೆ. ಇದನ್ನೂ ಓದಿ:ತಮಿಳು ಸಿನಿಮಾ ನಿರ್ಮಾಪಕಿಯಾದ `ಗಾಳಿಪಟ 2′ ನಟಿ ಶರ್ಮಿಳಾ ಮಾಂಡ್ರೆ

    ನವರಾತ್ರಿ ಹಬ್ಬ ಹತ್ತಿರ ಬರುತ್ತಿದ್ದಂತೆ ಶ್ರೀವಲ್ಲಿ ಸೀರೆಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆಯಂತೆ. ರಶ್ಮಿಕಾ ಧರಿಸಿದ್ದ ಕೆಂಪು ಬಣ್ಣದ ಗೋಲ್ಡನ್ ಜರಿಯ ಸೀರೆಯನ್ನ ರಾಜಸ್ತಾನದ ಜೈಪುರದಲ್ಲಿ ಮುಗಿಬಿದ್ದು ಈ ಸೀರೆಯನ್ನ ಖರೀದಿಸುತ್ತಿದ್ದಾರೆ. ಈ ವರ್ಷದ ನವರಾತ್ರಿ ಹಬ್ಬಕ್ಕೆ ಶ್ರೀವಲ್ಲಿ ಸೀರೆ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೆಟ್ ಮಾಡಿರೋದಂತೂ ಗ್ಯಾರೆಂಟಿ.

    ಇನ್ನು ʻಪುಷ್ಪ 2ʼ ಚಿತ್ರದ ಶೂಟಿಂಗ್ ಶುರುವಾಗಿದ್ದರೂ, ಪುಷ್ಪ ಶ್ರೀವಲ್ಲಿ ಮೇಲಿರುವ ಕ್ರೇಜ್ ಇನ್ನು ಕಮ್ಮಿಯಾಗಿಲ್ಲ. ಅಲ್ಲು ಅರ್ಜುನ್, ರಶ್ಮಿಕಾ ನಟನೆಯ `ಪುಷ್ಪ’ ಪಾರ್ಟ್ ಒನ್ ದೊಡ್ಡ ಮಟ್ಟದಲ್ಲಿ ಮೋಡಿ ಮಾಡಿದೆ. ಪಾರ್ಟ್ 2 ಯಾವ ಮಟ್ಟಕ್ಕೆ ಸಂಚಲನ ಮೂಡಿಸಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]